ಕತಾರ್ನಲ್ಲಿ ಭಾರತಕ್ಕೆ ಅನಿಲ ಸರಬರಾಜು ಮಾಡುವ ರಾಸ್ ಲಫಾನ್ ಘಟಕದ ಮೇಲೆ ಇರಾನ್ ಕ್ಷಿಪಣಿ ದಾಳಿ
ಕತಾರ್, ಮಾರ್ಚ್ 19: ಇರಾನ್(Iran) ನಡೆಸುತ್ತಿರುವ ದಾಳಿಯು ಭಾರತಕ್ಕೆ ನೇರವಾಗಿ ಪರಿಣಾಮ ಬೀರದಿದ್ದರೂ ಕೂಡ ಪರೋಕ್ಷವಾಗಿ ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯವು ಪೂರ್ಣ ಪ್ರಮಾಣದ ಯುದ್ಧಭೂಮಿಯಾಗಿದೆ. ಯುದ್ಧವು ಇರಾನ್ ಮತ್ತು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನೇರವಾಗಿ ನಡೆದರೂ, ಅದರ ಪರಿಣಾಮವು ಇಡೀ ವಿಶ್ವ ಅನುಭವಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಇರಾನ್ ಕೊಲ್ಲಿಯಲ್ಲಿರುವ ಯುಎಸ್ ವಾಯುನೆಲೆಗಳು ಮತ್ತು ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು. ಈಗ, ಇರಾನ್ ಒಂದು ಹೆಜ್ಜೆ ಮುಂದೆ ಹೋಗಿದೆ….