All posts by nagaraj11081993

‘ಕೆಡಿ’ ಸಿನಿಮಾ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ; ಲೋಕಸಭೆಯಲ್ಲಿ ಘೋಷಣೆ

‘ಕೆಡಿ’ ಸಿನಿಮಾ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ; ಲೋಕಸಭೆಯಲ್ಲಿ ಘೋಷಣೆ

ಸಂಜಯ್ ದತ್ ಮತ್ತು ನೋರಾ ಫತೇಹಿ ನಟಿಸಿದ ‘ಸರ್ಕೆ ಚುನರ್ ತೇರಿ’ (Sarke Chunar Teri Sarke) ಹಾಡಿನ ವಿರುದ್ಧ ದೇಶಾದ್ಯಂತ ವ್ಯಕ್ತವಾದ ತೀವ್ರ ಆಕ್ರೋಶದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ (KD) ಸಿನಿಮಾದ ಈ ಹಾಡಿನಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಮುಜುಗರ ಆದಂತಾಗಿದೆ.

ಸಮಾಜವಾದಿ ಪಕ್ಷದ ಸಂಸದ ಆನಂದ್ ಬಡೋರಿಯಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್, ‘ಈ ಹಾಡನ್ನು ಈಗಾಗಲೇ ನಿಷೇಧಿಸಲಾಗಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಪ್ರಶ್ನಾತೀತವಲ್ಲ. ಸಂವಿಧಾನದ ರಚನೆಕಾರರು ವಿಧಿಸಿರುವ ಸಮಂಜಸವಾದ ನಿರ್ಬಂಧಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ತಿಳಿಸಿದರು. ಸಂವಿಧಾನದ ವಿಧಿ 19(2) ಉಲ್ಲೇಖಿಸಿದ ಸಚಿವರು, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಗೆ ಧಕ್ಕೆ ಬಂದಾಗ ಇಂತಹ ನಿರ್ಬಂಧಗಳನ್ನು ಹೇರಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದರು.

ಡಿಜಿಟಲ್ ಮಾಧ್ಯಮಗಳ ಮೂಲಕ ವಿಷಯಗಳು ವೇಗವಾಗಿ ಹರಡುತ್ತಿರುವ ಇಂದಿನ ದಿನಗಳಲ್ಲಿ ಸಮಾಜದ ಹಿತದೃಷ್ಟಿಯಿಂದ ಇಂತಹ ಕ್ರಮಗಳು ಅನಿವಾರ್ಯ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ‘ಸಮಾಜದ ರಕ್ಷಣೆಗಾಗಿ, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವಂಚಿತ ವರ್ಗಗಳ ಗೌರವ ಕಾಪಾಡಲು ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆ’ ಎಂದು ವೈಷ್ಣವ್ ಅವರು ಲೋಕಸಭೆಯಲ್ಲಿ ತಿಳಿಸಿದರು.

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ತಕ್ಷಣವೇ ಅದರ ಸಾಹಿತ್ಯ ಮತ್ತು ದೃಶ್ಯಗಳು ಅಶ್ಲೀಲತೆಯಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿತ್ತು. ಇದು ಮಹಿಳೆಯರನ್ನು ಕೀಳಾಗಿ ಚಿತ್ರಿಸುತ್ತದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕರ್ನಾಟಕ ಮತ್ತು ಹರಿಯಾಣ ಮಹಿಳಾ ಆಯೋಗಗಳು ಈ ಹಾಡಿನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದವು.

ಇದನ್ನೂ ಓದಿ: ಪ್ರೇಮ್​​ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ನಟ ರವಿ ಕಿಶನ್, ನಟಿ ಕಂಗನಾ ರಣಾವತ್, ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ಹಾಡಿನ ಸಾಹಿತ್ಯ ಆಕ್ಷೇಪಾರ್ಹವಾಗಿದೆ ಎಂದು ಸಾರ್ವಜನಿಕವಾಗಿ ಖಂಡಿಸಿದ್ದರು. ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ನೋರಾ ಫತೇಹಿ ಅವರು ಚಿತ್ರತಂಡವೇ ಇದಕ್ಕೆಲ್ಲ ಹೊಣೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ‘ಕೆಡಿ’ ಸಿನಿಮಾಗೆ ಅಪಖ್ಯಾತಿ ತಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಅಭಿಷೇಕ್ ಶರ್ಮಾ ಅಲ್ಲ.. SRH ತಂಡಕ್ಕೆ ನೂತನ ನಾಯಕ ನೇಮಕ

2026 ರ ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಂಡಕ್ಕೆ ಹೊಸ ನಾಯಕನನ್ನು ನೇಮಿಸಿದೆ. ಕಳೆದ ಆವೃತ್ತಿಯಲ್ಲಿ ಈ ತಂಡದ ನಾಯಕತ್ವ ಹೊತ್ತಿದ್ದ ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಈ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ಚುಕ್ಕಾಣಿಯನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್​ಗೆ ವಹಿಸಲಾಗಿದೆ.

ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಬದಲಾಗುವುದು ಈ ಮೊದಲೇ ಖಚಿತವಾಗಿತ್ತು. ಅದರಂತೆ ತಂಡದ ಯುವ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾಗೆ ನಾಯಕತ್ವ ಸಿಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಅದೆಲ್ಲವನ್ನು ಸುಳ್ಳು ಮಾಡಿರುವ ಸನ್‌ರೈಸರ್ಸ್ ಆಡಳಿತ ಮಂಡಳಿ ಇಶಾನ್ ಕಿಶನ್​ಗೆ ನಾಯಕತ್ವದ ಪಟ್ಟ ಕಟ್ಟಿದೆ.

ಇಶಾನ್ ಕಿಶನ್​ಗೆ ತಂಡದ ನಾಯಕತ್ವವಹಿಸುವುದಕ್ಕೂ ಪ್ರಮುಖ ಕಾರಣವಿದೆ. ಅದೆನೆಂದರೆ, ಇತ್ತಿಚಿಗಷ್ಟೆ ಮುಗಿದ ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಅತಿ ಹೆಚ್ಚು ರನ್ ಬಾರಿಸಿದ ಭಾರತದ ಆಟಗಾರರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಹೀಗಾಗಿ ಅವರಿಗೆ ತಂಡದ ನಾಯಕತ್ವವಹಿಸಲಾಗಿದೆ.

ಐಪಿಎಲ್​ನಲ್ಲಿ ಆಡಿದ ಅಪಾರ ಅನುಭವ ಹೊಂದಿರುವ ಇಶಾನ್ ಕಿಶನ್​ ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಒಂದೆಡೆ ಕಿಶನ್​ಗೆ ತಂಡದ ನಾಯಕತ್ವವಹಿಸಿರುವ ಫ್ರಾಂಚೈಸಿ, ಅಭಿಷೇಕ್ ಶರ್ಮಾಗೆ ಉಪನಾಯಕನ ಜವಾಬ್ದಾರಿ ನೀಡಿದೆ. ಈ ಇಬ್ಬರು ಯುವ ಆಟಗಾರರ ಸಾರಥ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Source link

ಹಬ್ಬಕ್ಕೆ ಊರಿಗೆ ಹೋಗುವ ಧಾವಂತ: ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಕೆಳಗೆಬಿದ್ದ ಮಹಿಳೆ

ಬೆಂಗಳೂರು, ಮಾರ್ಚ್​ 18: ಯುಗಾದಿ ಮತ್ತು ರಂಜಾನ್ ಹಬ್ಬ ಹಿನ್ನೆಲೆ ಇಂದು ಮಧ್ಯಾಹ್ನದಿಂದಲೇ ಜನರು ತಮ್ಮ ಊರಿಗೆ ಹೊರಟ್ಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್​ನಲ್ಲಿ ಕಿಕ್ಕಿರಿದು ತುಂಬಿದ್ದಾರೆ. ಬಸ್​ಗಳು ಬರುತ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್ ಗಳನ್ನು ಹಾಕಿ ಸೀಟ್​ ಪ್ರಯಾಣಿಕರು ಮುಂದಾಗಿದ್ದಾರೆ. ಇದೇ ವೇಳೆ ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ಓರ್ವ ಮಹಿಳೆ ಕೆಳಗೆಬಿದಿದ್ದಾರೆ. ಸರ್ಕಾರಿ ಬಸ್ ಮುಂದೆ ಚಲಿಸುವಾಗ ಮಹಿಳೆ ಆಯತಪ್ಪಿಬಿದಿದ್ದಾರೆ. ಸಹ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾರ್ಗ ಬದಲಿಸಿ ಭಾರತಕ್ಕೆ ಧಾವಿಸಿದ ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್‌ಗಳು

ನವದೆಹಲಿ, ಮಾರ್ಚ್ 18: ಚೀನಾಕ್ಕೆ ಹೋಗುತ್ತಿದ್ದ ರಷ್ಯಾದ ತೈಲ (Oil Tanker) ತುಂಬಿದ ಟ್ಯಾಂಕರ್ ದಕ್ಷಿಣ ಚೀನಾದ ಸಮುದ್ರದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿದೆ. ಆ ಹಡಗು ಯು-ಟರ್ನ್ ಹೊಡೆದು ಈಗ ಭಾರತಕ್ಕೆ ಆಗಮಿಸುತ್ತಿದೆ. ಅಮೆರಿಕ, ಇಸ್ರೇಲ್-ಇರಾನ್ ಯುದ್ಧದ ಮಧ್ಯೆ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಡಗಿನ ಟ್ರ್ಯಾಕಿಂಗ್ ಡೇಟಾ ಅಫ್ರಾಮ್ಯಾಕ್ಸ್ ಟ್ಯಾಂಕರ್ ಅಕ್ವಾ ಟೈಟಾನ್ ಮಾರ್ಚ್ 21ರಂದು ರಷ್ಯಾದ ಯುರಲ್ಸ್ ಕಚ್ಚಾ ತೈಲದ ಸರಕುಗಳನ್ನು ಹೊತ್ತು ನವಮಂಗಳೂರು ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ತೋರಿಸಿದೆ. ಜನವರಿ ಅಂತ್ಯದಲ್ಲಿ ಈ ಹಡಗು ಬಾಲ್ಟಿಕ್ ಸಮುದ್ರದ ಬಂದರಿನಿಂದ ತೈಲವನ್ನು ಲೋಡ್ ಮಾಡಿತ್ತು. ಆರಂಭದಲ್ಲಿ ಆ ಹಡಗು ಚೀನಾದ ರಿಜಾವೊ ಬಂದರಿಗೆ ಹೋಗಬೇಕೆಂದು ಸೂಚಿಸಲಾಗಿತ್ತು. ಆದರೆ, ಇದೀಗ ಆ ಹಡಗು ಯು-ಟರ್ನ್ ತೆಗೆದುಕೊಂಡು ಭಾರತಕ್ಕೆ ಆಗಮಿಸುತ್ತಿದೆ.

ಅಮೆರಿಕ ರಷ್ಯಾದ ಖರೀದಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಭಾರತಕ್ಕೆ ಹಸಿರು ನಿಶಾನೆ ತೋರಿಸಿತ್ತು. ಇದಾದ ನಂತರ ಭಾರತೀಯ ಸಂಸ್ಕರಣಾಗಾರರು 30 ಮಿಲಿಯನ್ ಬ್ಯಾರೆಲ್‌ಗಳಷ್ಟು ರಷ್ಯಾದ ತೈಲವನ್ನು ಖರೀದಿಸಿದ್ದರು. ಇದು ಇರಾನ್‌ನಲ್ಲಿನ ಯುದ್ಧದಿಂದಾಗಿ ನಷ್ಟವಾದ ಮಧ್ಯಪ್ರಾಚ್ಯ ಪೂರೈಕೆಗಳನ್ನು ನಿಭಾಯಿಸಲು ಭಾರತಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಅಂದಿನಿಂದ, ಹೆಚ್ಚಿನ ದೇಶಗಳು ರಷ್ಯಾದಿಂದ ತೈಲ ಖರೀದಿಯನ್ನು ಪುನರಾರಂಭಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಇಂದು ಭಾರತಕ್ಕೆ ಬಂದು ಸೇರಲಿದೆ ಮತ್ತೆರಡು ತೈಲ ಹಡಗು: ಮಂಗಳೂರಿನಲ್ಲಿ 26 ಸಾವಿರ ಮೆಟ್ರಿಕ್‌ ಟನ್ LPG ಅನ್‌ಲೋಡ್‌

ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ, ರಷ್ಯಾದ ತೈಲವನ್ನು ಸಾಗಿಸುವ 7 ಟ್ಯಾಂಕರ್‌ಗಳು ಚೀನಾದ ಬದಲಾಗಿ ಭಾರತಕ್ಕೆ ಆಗಮಿಸುತ್ತಿವೆ. ತೈಲ ಟ್ಯಾಂಕರ್ ಮೊದಲು ರಷ್ಯಾದ ಕಪ್ಪು ಸಮುದ್ರದ ನೊವೊರೊಸಿಸ್ಕ್‌ನಿಂದ ಪಯಣಿಸಿತ್ತು. ಇದು ಆರಂಭದಲ್ಲಿ ಚೀನಾದ ರಿಝಾವೊ ಬಳಿಯ ನೀರಿನ ಕಡೆಗೆ ಸಾಗುತ್ತಿತ್ತು. ಇದೀಗ ಆ ಹಡಗನ್ನು ಭಾರತಕ್ಕೆ ತಿರುಗಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Source link

ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಶಾಕ್​​: ಬಸ್​​ಗಳ ಟಿಕೆಟ್​​ ದರ ದುಪ್ಟಟ್ಟು ಏರಿಕೆ

ಬೆಂಗಳೂರು, ಮಾರ್ಚ್​​ 18: ಯುಗಾದಿ ಮತ್ತು ರಂಜಾನ್​​ ಹಬ್ಬಗಳನ್ನು ಮನೆಯವರ ಜೊತೆ ಸೇರಿಕೊಂಡು ಆಚರಿಸಬೇಕು ಎಂಬ ಆಸೆಯಲ್ಲಿ ಬೆಂಗಳೂರಿನಿಂದ ಊರುಗಳತ್ತ ಮುಖ ಮಾಡುತ್ತಿರುವ ಪ್ರಯಾಣಿಕರಿಗೆ ಭರ್ಜರಿ ಶಾಕ್​​ ಎದುರಾಗಿದೆ. ಇದೇ ಸಮಯವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್​​ ಮಾಲಕರು ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ನಾಳೆ ಯುಗಾದಿ ಹಬ್ಬವಾದರೆ, ಶುಕ್ರವಾರ ಹೊಸ ತೊಡಕು ಆಚರಣೆ ಇದೆ. ಶನಿವಾರ ರಂಜಾನ್​​ ಬಂದಿದ್ದು, ಭಾನುವಾರ ಎಂದಿನಂತೆ ವಾರದ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಜನ ಊರುಗಳತ್ತ ಹೊರಟು ನಿಂತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ KSRTC 2,325 ಹೆಚ್ಚುವರಿ ಬಸ್​​ಗಳನ್ನು ಬಿಟ್ಟಿರುವ ನಡುವೆಯೂ ಪ್ರಯಾಣಿಕರ ಪರದಾಟ ಮುಂದುವರಿದಿದೆ.

ಖಾಸಗಿ ಬಸ್​​ಗಳ ಟಿಕೆಟ್​​ ದರ ಗಣನೀಯ ಏರಿಕೆ

ಬಸ್​​ಗಳ ಟಿಕೆಟ್​​ ದರ
ಎಲ್ಲಿಂದ ಎಲ್ಲಿಗೆ? ಹಿಂದನ ದರ (ರೂ.ಗಳಲ್ಲಿ) ಇಂದಿನ ದರ
(ರೂ.ಗಳಲ್ಲಿ)
ಬೆಂಗಳೂರು-ಚಿಕ್ಕಮಗಳೂರು 366-650 999-1498
ಬೆಂಗಳೂರು-ಮಂಗಳೂರು 600-900 1212-2999
ಬೆಂಗಳೂರು-ಧಾರವಾಡ 389-1300 1400-4500
ಬೆಂಗಳೂರು-ಹುಬ್ಬಳ್ಳಿ 409-1248 1000-4500
ಬೆಂಗಳೂರು- ಕಾರವಾರ 542-900 1500-4500
ಬೆಂಗಳೂರು-ಕಲಬುರಗಿ 599-1300 1398-2800
ಬೆಂಗಳೂರು-ಶಿವಮೊಗ್ಗ 416-999 1109-2799
ಬೆಂಗಳೂರು-ಧರ್ಮಸ್ಥಳ 495-801 1011-3600
ಬೆಂಗಳೂರು-ಕೊಡಗು 450-600 899-3000

ಇದನ್ನೂ ಓದಿ: ಯುಗಾದಿಯ ಆಚರಣೆ ಹೇಗೆ ಮಾಡಬೇಕು? ಈ ವರ್ಷ ಯಾವೆಲ್ಲ ಬದಲಾವಣೆಗಳು?

ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ಮೆಜೆಸ್ಟಿಕ್ ಬಸ್​​ ನಿಲ್ದಾಣ

ಇಂದು ಮಧ್ಯಾಹ್ನದಿಂದಲೇ ಊರಿನತ್ತ ಬೆಂಗಳೂರಿಗರು ಹೊರಟಿರುವ ಕಾರಣ ಮೆಜೆಸ್ಟಿಕ್ ಬಸ್​​ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ದೃಶ್ಯಗಳು ಕಂಡುಬಂದಿವೆ. ಸೀಟಿಗಾಗಿ ಪ್ರಯಾಣಿಕರ ನಡುವೆಯೇ ಪೈಪೋಟಿ ನಡೆಯುತ್ತಿದ್ದು, ಬಸ್ಸುಗಳು ಬರ್ತಿದ್ದಂತೆ ಕಿಟಕಿ ಮೂಲಕ ಬ್ಯಾಗ್​​ಗಳನ್ನು ಹಾಕಿ ಜನರು ಸೀಟ್ ಹಿಡಿಯಲು ಪ್ರಯತ್ನಿಸುತ್ತಿರೋದು ಸರ್ವೇ ಸಾಮಾನ್ಯ ಎಂಬಂತಿದೆ. ಸಂಜೆ ವೇಳೆಗೆ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಹಗ್ಗ ಎಳೆದ್ರೂ ಕದಲದೇ ನಿಂತಿದ್ದ ಎಮ್ಮೆ ಕರುವಿಗೆ ಸವಾಲು ಹಾಕಿದ ಪುಟಾಣಿ

ಈಗಿನ ಕಾಲದ ಮಕ್ಕಳು (children) ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆನೇ. ಏನೇ ಕೇಳಿದ್ರೂ ಪಟ ಪಟನೇ ಉತ್ತರ ಹೇಳ್ತಾರೆ. ಹೆತ್ತವರನ್ನು ಮಾತಿನಲ್ಲೇ ಕಟ್ಟಿ ಹಾಕ್ತಾರೆ, ಆದರೆ ಈ ಪುಟ್ಟ ಹುಡುಗಿಯೂ (little girl) ಎಮ್ಮೆ ಕರುವಿಗೆ ಓಪನ್ ಚಾಲೆಂಜ್ ಹಾಕಿದ್ದಾಳೆ. ಕುತ್ತಿಗೆಗೆ ಕಟ್ಟಿದ ಹಗ್ಗವನ್ನು ಎಷ್ಟೇ ಎಳೆದರೂ ಎಮ್ಮೆ ಕರುವು ಕದಲದೇ ಹಾಗೆಯೇ ನಿಂತುಕೊಂಡಿದ್ದು, ಇದರಿಂದ ಕೋಪಗೊಂಡ  ಈ ಪುಟ್ಟ ಹುಡುಗಿಯೂ ಸವಾಲು ಹಾಕಿರುವ ವಿಡಿಯೋ ವೈರಲ್‌ ಆಗಿದೆ. ಈ ಪುಟ್ಟ ಬಾಲಕಿಯ ಮಾತು ಕೇಳಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Ayub Khilji ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪುಟ್ಟ ಹುಡುಗಿಯೊಂದು ಎಮ್ಮೆ ಕರುವಿಗೆ ಕಟ್ಟಿದ ಹಗ್ಗವನ್ನು ಎಳೆಯುತ್ತಿರುವುದನ್ನು ಕಾಣಬಹುದು. ಎಮ್ಮೆ ಕರುವು ತಾನು ಬರಲ್ಲ ಎಂದು ಹಠ ಹಿಡಿದು ನಿಂತಿದೆ. ಇದೇ ವೇಳೆ ಈ ಪುಟ್ಟ ಬಾಲಕಿ ಈ ಕರುವಿಗೆ ಸವಾಲು ಹಾಕಿದ್ದು, ನಾನು ಕೂಡ ನಿಮ್ಮ ಅಮ್ಮನ ಹಾಲು ಕುಡಿದೇ ಬೆಳೆದಿದ್ದು ಎಂದು ಹೇಳಿರುವುದನ್ನು ಕಾಣಬಹುದು. ಮತ್ತೆ ತನ್ನ ಪ್ರಯತ್ನ ಬಿಡದೇ ಎಮ್ಮೆ ಕರುವಿನ ಕುತ್ತಿಗೆಗೆ ಕಟ್ಟಿದ ಹಗ್ಗವನ್ನು ಎಳೆಯುತ್ತಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಸುರಕ್ಷತೆಯ ಪಾಠ ಮಾಡಿದ ಪುಟ್ಟ ಹುಡುಗಿ

ಈ ವಿಡಿಯೋ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪುಟ್ಟ ಹುಡುಗಿಯ ಮಾತು ಕೇಳಿ ನಗು ಬಂದಿದೆ ಎಂದಿದ್ದಾರೆ. ಮತ್ತೊಬ್ಬರು, ಈ ಪುಟಾಣಿಯ ಸವಾಲು ಮಜಾವಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

21 ವರ್ಷ ಹಳೆಯ ಕ್ಯೂಟ್ ವಿಡಿಯೋ ಹಂಚಿಕೊಂಡ ನಟಿ ರಮ್ಯಾ

ಪುನೀತ್ ರಾಜ್​​ಕುಮಾರ್ (Puneeth Rajkumar) ನಟನೆಯ ‘ಆಕಾಶ್’ ಸಿನಿಮಾ 2005 ರಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಗಿತ್ತು. ಕೆಲ ದಿನಗಳ ಹಿಂದಷ್ಟೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರೇಕ್ಷಕರು, ಅಭಿಮಾನಿಗಳು ಬಲು ಅದ್ಧೂರಿಯಾಗಿ ‘ಆಕಾಶ್’ ಸಿನಿಮಾವನ್ನು ಮತ್ತೊಮ್ಮೆ ಸ್ವಾಗತ ಮಾಡಿದ್ದಾರೆ. ರಮ್ಯಾ ಸೇರಿದಂತೆ ದೊಡ್ಮನೆಯ ಹಲವು ಸದಸ್ಯರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ರಮ್ಯಾ ಅಂತೂ ಅಭಿಮಾನಿಗಳೊಟ್ಟಿಗೆ ಸೇರಿ ಚಿತ್ರಮಂದಿರದಲ್ಲಿಯೇ ‘ನೀನೆ ನೀನೆ’ ಹಾಡು ಸಹ ಹಾಡಿದರು.

ಸಿನಿಮಾ ಮರು ಬಿಡುಗಡೆ ಆದ ದಿನ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ರಮ್ಯಾ, ಪುನೀತ್ ಅವರೊಟ್ಟಿಗಿನ ಗೆಳೆತನವನ್ನು ನೆನಪು ಮಾಡಿಕೊಂಡಿದ್ದರು. ಮಾತ್ರವಲ್ಲದೆ ‘ಆಕಾಶ್’ ಸಿನಿಮಾ ಚಿತ್ರೀಕರಣ ಮಾಡುವಾಗಿನ ಘಟನೆಗಳನ್ನು ನೆನಪು ಮಾಡಿಕೊಂಡಿದ್ದರು. ಎಷ್ಟು ಖುಷಿಯಿಂದ ತಾವು ಚಿತ್ರೀಕರಣ ಮಾಡಿದ್ದಾಗಿ ಹೇಳಿಕೊಂಡಿದ್ದರು, ರಾಘವೇಂದ್ರ ರಾಜ್​​ಕುಮಾರ್ ಅವರು ‘ನೀನೇ, ನೀನೆ’ ಹಾಡನ್ನು ಮೊದಲ ಬಾರಿ ಕೇಳಿಸಿದ ಕ್ಷಣವನ್ನು ಸಹ ನೆನಪು ಮಾಡಿಕೊಂಡಿದ್ದರು. ಆದರೆ ಇದೀಗ ಬಹಳ ಅಪರೂಪವಾದ ಬಿಟಿಎಸ್ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ರಮ್ಯಾ ಅವರು ‘ಆಕಾಶ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 2005 ರಲ್ಲಿ ಸೋನಿಯ ಹ್ಯಾಂಡಿಕ್ಯಾಮ್​​ನಲ್ಲಿ ತೆಗೆದ ವಿಡಿಯೋ ಇದಾಗಿದ್ದು, ರಮ್ಯಾ, ಪುನೀತ್ ಅವರು ‘ನೀನೆ ನೀನೆ’ ಹಾಡಿನ ಚಿತ್ರೀಕರಣಕ್ಕೆ ಹೊರದೇಶಕ್ಕೆ ಹೋದಾಗಿನ ವಿಡಿಯೋ ಇದಾಗಿದೆ. ವಿಡಿಯೋನಲ್ಲಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಇದ್ದಾರೆ. ವಿನಯ್ ಮತ್ತು ಯುವರಾಜ್ ಕುಮಾರ್ ಅವರಿದ್ದಾರೆ. ಡಾ ರಾಜ್​ಕುಮಾರ್, ಪಾರ್ವತಮ್ಮ ರಾಜ್​​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ದೊಡ್ಮನೆಯ ಇನ್ನೂ ಹಲವರಿದ್ದಾರೆ.

ಇದನ್ನೂ ಓದಿ:ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್​​ಕುಮಾರ್

ವಿಡಿಯೋ ಹಂಚಿಕೊಂಡಿರುವ ನಟಿ ರಮ್ಯಾ, ‘2004/2005 ರಲ್ಲಿ ನಮ್ಮ ‘ಆಕಾಶ್’ ಚಿತ್ರೀಕರಣದ ಕೆಲವು ತುಣುಕುಗಳನ್ನು ರೆಕಾರ್ಡ್ ಮಾಡಿದ್ದೇನೆ, ಅವುಗಳನ್ನು ಸೋನಿ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದೆ, ಅದನ್ನು ಕನ್ವರ್ಟ್ ಮಾಡಿ ಇಲ್ಲಿ ನಿಮಗಾಗಿ ಹಂಚಿಕೊಳ್ಳುತ್ತಿದ್ದೇನೆ. ನಾನು ಆಡಿಯೊವನ್ನು ಹಾಗೆಯೇ ಇರಿಸಿದ್ದೇನೆ, ಆದರೆ ಅದು ಹಳೆಯ ಕ್ಯಾಮೆರಾ ಆಗಿರುವುದರಿಂದ ಕೆಲವು ಆಡಿಯೊ ಭಾಗಗಳು ಮಿಸ್ ಆಗಿವೆ. ಆದರೆ ನೀವು ಇನ್ನೂ ನಮ್ಮ ತಮಾಷೆಯನ್ನು ಕೇಳಬಹುದು. ಮಾತ್ರವಲ್ಲದೆ ನಮ್ಮ ತಂಡದಲ್ಲಿ ಇದ್ದ ಗೆಳೆತನ, ಆತ್ಮೀಯತೆಯನ್ನು ನೀವು ವಿಡಿಯೋನಲ್ಲಿ ನೋಡಬಹುದು. ಅಪ್ಪು ಜೊತೆಗೆ ಕಳೆದ ಆ ತಮಾಷೆಯ ಕ್ಷಣಗಳನ್ನು ನಾನು ಸದಾ ನೆನಪಿಡುತ್ತೇನೆ. ನಗು ಮತ್ತು ನಿಮ್ಮ ಸ್ನೇಹಕ್ಕಾಗಿ ಧನ್ಯವಾದಗಳು. ವಿಡಿಯೋನಲ್ಲಿ ನೀವು ಅಶ್ವಿನಿ ಪುನೀತ್ ರಾಜ್​ಕುಮಾರ್, ಯುವ ರಾಜ್​ಕುಮಾರ್, ವಿನಯ್ ರಾಜ್​​ಕುಮಾರ್, ರಾಜ್​​ಕುಮಾರ್, ಪಾರ್ವತಮ್ಮ ರಾಜ್​ಕುಮಾರ್, ರಾಘಣ್ಣ ಮತ್ತು ಅಪ್ಪು ಅವರ ಮಕ್ಕಳನ್ನು ನೋಡಬಹುದು’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಮಗಳೂರು BJP-ಹಿಂದೂ ಕಾರ್ಯಕರ್ತರು, ನಾಲ್ವರು ಮುಸ್ಲಿಮರು ಸೇರಿ 15 ಜನರಿಗೆ ಗಡಿಪಾರು ನೋಟಿಸ್

ಚಿಕ್ಕಮಗಳೂರು (ಮಾರ್ಚ್.18): ಜಿಲ್ಲೆಯಲ್ಲಿ ಬಿಜೆಪಿ (BJP) ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು, ಮುಸ್ಲಿಂ ಘಟನೆಯ ಸದಸ್ಯರು ಸೇರಿ ಒಟ್ಟು 15 ಜನರಿಗೆ ಗಡಿಪಾರು ನೋಟಿಸ್ (externment Notice) ನೀಡಲಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ , ಬಜರಂಗದಳ ಹಾಸನ ವಿಭಾಗದ ಸಹ ಸಂಯೋಜಕ ಶ್ಯಾಮ್ ವಿ ಗೌಡ‌, ಮುಸ್ಲಿಂ ಸಂಘಟನೆಯ ನಾಲ್ವರು ಸೇರಿದಂತೆ 15 ಜನರಿಗೆ ಪೊಲೀಸ್ ‌ಕಾಯ್ದೆ1963 ಕಲಂ 58ರ ಅಡಿಯಲ್ಲಿ ಜಿಲ್ಲಾಡಳಿತದಿಂದ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದ್ದು, ಈ ಸಂಬಂಧ ವಿಚಾರಣೆಗೆ ಬರುವಂತೆ ಹಾಜರಾಗುವಂತೆ ಸೂಚಿಸಲಾಗಿದೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತನ್ನ ಶಿಫಾರಸ್ಸು ಪತ್ರದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇವರನ್ನು ಜಿಲ್ಲೆಯಿಂದ ಹೊರಹಾಕುವಂತೆ  ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅದರಂತೆ ಇದೀಗ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡರ ಗಲಾಟೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಮೊರೆ ಹೋದ ಮಹಿಳಾ ಕಾರ್ಯದರ್ಶಿ

ಯಾರ್ಯಾರಿಗೆ ಗಡಿಪಾರು ಭೀತಿ?

ಪೊಲೀಸ್ ಇಲಾಖೆ ನೀಡಿರುವ ಪಟ್ಟಿಯಲ್ಲಿ ಪ್ರಮುಖವಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಭಜರಂಗದಳದ ಹಾಸನ ವಿಭಾಗದ ಸಂಯೋಜಕ ಶ್ಯಾಮ್ ವಿ ಗೌಡ ಅವರ ಹೆಸರುಗಳಿವೆ. ಇವರೊಂದಿಗೆ ವಿವಿಧ ಕೋಮು ಸಂಘರ್ಷ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ನಾಲ್ವರು ಮುಸ್ಲಿಂ ಮುಖಂಡರ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ. ಜೋಹರ್, ಚಾಂದ್, ಇಬ್ರಾಹಿಂ ಹಾಗೂ ಇಮ್ರಾನ್ ಎಂಬುವವರಿಗೂ ಗಡಿಪಾರು ಭೀತಿ ಎದುರಾಗಿದೆ.

ಪೊಲೀಸ್ ಇಲಾಖೆಯ ಶಿಫಾರಸ್ಸನ್ನು ಸ್ವೀಕರಿಸಿರುವ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳು (AC) ವಿಚಾರಣೆ ನಡೆಸಲಿದ್ದಾರೆ. ಈ ವಿಚಾರಣೆಯ ವೇಳೆ ಆರೋಪಿಗಳು ಅಥವಾ ಅವರ ಪರ ವಕೀಲರು ತಮ್ಮ ವಾದ ಮಂಡಿಸಲು ಅವಕಾಶವಿರುತ್ತದೆ. ವಿಚಾರಣೆಯ ನಂತರ, ಜಿಲ್ಲೆಯಲ್ಲಿ ಇವರಿಂದ ಶಾಂತಿಗೆ ಭಂಗ ಉಂಟಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ, ಎಸಿ ಅವರು ಗಡಿಪಾರು ಮಾಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸ್ ಹೊಡೆಯದ ಐವರು ಆಟಗಾರರಿವರು

Source link

ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್: 30 ಅರ್ಹ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

ಬೆಂಗಳೂರು, ಮಾರ್ಚ್​ 18: ಕೋಗಿಲು ನಿರಾಶ್ರಿತರಿಗೆ ಕೊನೆಗೂ ನಿವೇಶನ ಭಾಗ್ಯ ದೊರೆತಿದೆ. ಮೂರ್ನಾಲ್ಕು ತಿಂಗಳ ಬಳಿಕ 30 ಅರ್ಹ ನಿವಾಸಿಗಳಿಗೆ ಸಚಿವರಾದ ಕೃಷ್ಣಬೈರೇಗೌಡ ಮತ್ತು ಜಮೀರ್ ಅಹ್ಮದ್‌ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಆ ಮೂಲಕ ಕೋಗಿಲು ನಿರಾಶ್ರಿತರಿಗೆ ಸರ್ಕಾರದಿಂದ ಯುಗಾದಿ ಮತ್ತು ರಂಜಾನ್​​ ಹಬಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ರಾಜೀವ್ ಗಾಂಧಿ ವಸತಿ ನಿಗಮದ ಸಮುಚ್ಚಯದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಹಕ್ಕುಪತ್ರ ಪಡೆದವರಲ್ಲಿ ಸಾಮಾನ್ಯ ವರ್ಗದ 10 ಕುಟುಂಬಗಳಿಗೆ ಆದ್ಯತೆ ನೀಡಲಾಗಿದೆ. ಪರಿಶಿಷ್ಟ ಜಾತಿಯ 7 ಕುಟುಂಬ, ಪರಿಶಿಷ್ಟ ಪಂಗಡದ 2 ಕುಟುಂಬ, ಅಲ್ಪಸಂಖ್ಯಾತ ಸಮುದಾಯದ 10 ಕುಟುಂಬಗಳು ಸೇರಿದಂತೆ ಒಟ್ಟು 30 ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link