All posts by nagaraj11081993

ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ

ಮುಗಿಯಿತು ‘ಲವ್ ಸೀಸನ್ಸ್’ ಸಿನಿಮಾ ಶೂಟಿಂಗ್; ಇಲ್ಲಿದೆ ಮೇಕಿಂಗ್ ವಿಡಿಯೋ

‘ಲವ್ ಸೀಸನ್ಸ್’ (Love Seasons) ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಹೊಸ ಕಲಾವಿದರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಮಂಡ್ಯ ರಮೇಶ್ ಅವರ ‘ನಟನಾ’ ಸಂಸ್ಥೆಯಲ್ಲಿ ಅಭಿನಯದ ಪಾಠ ಕಲಿತಿರುವ ಮುಕುಂದ ರಾಮಸ್ವಾಮಿ ಹೀರೋ ಆಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ, ಶ್ವೇತಾ ಕೊಗ್ಲೂರ್ ಅವರು ನಾಯಕಿಯರಾಗಿ ಅಭಿನಯಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಜಯತೀರ್ಥ, ಸಂಗೀತಾ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ‘ಎನ್.ಆರ್. ಸ್ಟುಡಿಯೋಸ್’ ಬ್ಯಾನರ್‌ ಮೂಲಕ ಎನ್.ಆರ್. ಮಂಜುನಾಥ (ನೀಲೇರಿ) ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೀರ್ ಸಮರ್ಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರ ಕೊರಿಯಾ ಚುನಾವಣೆಯಲ್ಲಿ ಶೇ. 99.93 ಮತಗಳಿಂದ ಗೆದ್ದ ಕಿಮ್ ಜಾಂಗ್ ಉನ್; ಉಳಿದ 18 ಸಾವಿರ ಜನರ ಗತಿಯೇನು!

ನವದೆಹಲಿ, ಮಾರ್ಚ್ 18: ಉತ್ತರ ಕೊರಿಯಾದ (North Korea Elections) ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ (Kim Jong-Un) ಅಚ್ಚರಿಯೇನಲ್ಲದ ರೀತಿಯಲ್ಲಿ ಚುನಾವಣೆಯಲ್ಲಿ ಮತ್ತೊಂದು ಬಾರಿ ಭರ್ಜರಿ ಜಯ ಸಾಧಿಸಿದ್ದಾರೆ. ಅವರ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಅದರ ಮಿತ್ರಪಕ್ಷಗಳು ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಶೇ. 99.97ರಷ್ಟು ಮತಗಳನ್ನು ಪಡೆದಿವೆ. 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 15ರಂದು ಮತದಾನ ನಡೆಯಿತು.

ಪೀಪಲ್ಸ್ ಕೊರಿಯಾದ ವರದಿಯ ಪ್ರಕಾರ, ಉತ್ತರ ಕೊರಿಯಾದಲ್ಲಿ ಮತದಾನ ಕಡ್ಡಾಯವಾಗಿದೆ. ಈ ಹಿಂದೆ, ವಲಸಿಗ ನಾಗರಿಕರು ಮತದಾನ ಮಾಡಲು ಅರ್ಹರಾಗಿರಲಿಲ್ಲ. 2021ರಲ್ಲಿ ಚೀನಾ ಮತ್ತು ರಷ್ಯಾದಲ್ಲಿ ವಾಸಿಸುವ ಉತ್ತರ ಕೊರಿಯಾದ ನಾಗರಿಕರಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು. ಉತ್ತರ ಕೊರಿಯಾದ ಚುನಾವಣಾ ಸಮಿತಿಯು ಈ ಚುನಾವಣೆಯನ್ನು ನಿರ್ವಹಿಸುತ್ತದೆ.

ಉತ್ತರ ಕೊರಿಯಾದಲ್ಲಿ 17 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ ಚಲಾಯಿಸಲು ಅರ್ಹರು. ಉತ್ತರ ಕೊರಿಯಾದಲ್ಲಿ ಮತ ಚಲಾಯಿಸದಿರುವುದು ದೇಶದ್ರೋಹಕ್ಕೆ ಸಮಾನ. ಉತ್ತರ ಕೊರಿಯಾದಲ್ಲಿ ಮತದಾನವನ್ನು ಕಾಗದದ ಮತಪತ್ರಗಳನ್ನು ಬಳಸಿ ನಡೆಸಲಾಗುತ್ತದೆ. ಅಲ್ಲಿ ಅಭ್ಯರ್ಥಿಗಳನ್ನು ಅವರ ಹೆಸರಿನ ಮುಂದೆ ಗುರುತಿಸಬೇಕು. ಮತದಾರರು ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಲು ಬಯಸಿದರೆ ಅವರು ಅದನ್ನು ಸಾರ್ವಜನಿಕವಾಗಿ ಮಾಡಬೇಕು.

ಇದನ್ನೂ ಓದಿ: Viral: ಪ್ರವಾಹ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ 30 ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕಿಮ್ ಜಾಂಗ್ ಉನ್‌

ಉತ್ತರ ಕೊರಿಯಾದಲ್ಲಿ, ಪ್ರತಿ ಸ್ಥಾನದಲ್ಲಿ ಒಬ್ಬ ಅಭ್ಯರ್ಥಿ ಮಾತ್ರ ಸ್ಪರ್ಧಿಸುತ್ತಾರೆ. ಮತದಾರರು ಆ ಅಭ್ಯರ್ಥಿಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಬಹುದು. ಯಾರಾದರೂ ವಿರುದ್ಧವಾಗಿ ಮತ ಚಲಾಯಿಸಲು ಬಯಸಿದರೆ ಅವರು ಆ ಅಭ್ಯರ್ಥಿಯನ್ನು ಸಾರ್ವಜನಿಕವಾಗಿ ವಿರೋಧಿಸಬೇಕು.

1957ರ ನಂತರ ಉತ್ತರ ಕೊರಿಯಾದ ರಾಜ್ಯ ಮಾಧ್ಯಮವು ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಚುನಾವಣೆಯಲ್ಲಿ ಯಾವುದೇ ಮಟ್ಟದ ವಿರೋಧವನ್ನು ಒಪ್ಪಿಕೊಂಡಿರುವುದು ಇದೇ ಮೊದಲು. ಕಿಮ್- ಜಾಂಗ್ ಅವರಿಗೆ ಮತ ಹಾಕದವರ (ಶೇ. 0.07) ಸಂಖ್ಯೆ ಚಿಕ್ಕದಾಗಿದ್ದರೂ ಅವರು ಕಿಮ್ ಜಾಂಗ್​ ಅವರ ಕೆಂಗಣ್ಣಿಗೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಟ್ರೋಲ್ ಮಾಡುತ್ತಿರುವ ಜನರು “ಆ 0.07% ಮತದಾರರಿಗೆ ಸಂತಾಪಗಳು” ಎಂದು ಒಬ್ಬರು ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬರು, “ಆ 0.07% ಜನರು ಈಗ ಉತ್ತರ ಕೊರಿಯಾದ ಮೋಸ್ಟ್ ವಾಂಟೆಡ್ ಆಗಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

“ದೇವರು ಕಿಮ್-ಜಾಂಗ್-ಉನ್ ಅವರಿಗೆ ಮತ ಹಾಕದ 0.07% ಜನರನ್ನು ಸ್ವೀಕರಿಸಲು ಕಾಯುತ್ತಿದ್ದಾನೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Source link

Home Protection: ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಅಂತಾ ಅನಿಸುತ್ತಿದೆಯಾ? ಗುರುವಾರ ಈ ಸರಳ ಪರಿಹಾರ ಮಾಡಿ

ಕೆಲವೊಮ್ಮೆ ನಾವು ಎಷ್ಟೇ ಕಷ್ಟಪಟ್ಟರೂ ಅಂದುಕೊಂಡ ಕೆಲಸಗಳು ಕೈಗೂಡುವುದಿಲ್ಲ. ಕುಟುಂಬದ ಸುಖಕ್ಕಾಗಿ ಹಗಲಿರುಳು ದುಡಿದರೂ, ನಿರೀಕ್ಷಿತ ಫಲಿತಾಂಶ ಮಾತ್ರ ಮರೀಚಿಕೆಯಾಗುತ್ತದೆ. ಇಂತಹ ಸಮಯದಲ್ಲಿ ನಮ್ಮ ಅರಿವಿಗೆ ಬಾರದಂತೆ ಯಾವುದೋ ಒಂದು ಅದೃಶ್ಯ ಶಕ್ತಿ ನಮ್ಮ ಏಳಿಗೆಯನ್ನು ತಡೆಯುತ್ತಿದೆ ಎಂಬ ಭಾವನೆ ಮೂಡುವುದು ಸಹಜ. ಸಮಾಜದಲ್ಲಿ ಬೆಳೆಯುತ್ತಿರುವಾಗ ನಮ್ಮನ್ನು ಸುತ್ತುವರೆದಿರುವ ಎಲ್ಲರೂ ನಮ್ಮ ಪ್ರಗತಿಯನ್ನು ಕಂಡು ಸಂತೋಷಪಡುವುದಿಲ್ಲ ಎಂಬುದು ಕಹಿ ಸತ್ಯ.

ನಕಾರಾತ್ಮಕ ದೃಷ್ಟಿ ಮತ್ತು ಅದರ ಪರಿಣಾಮ:

ನಮ್ಮ ಮನೆಗೆ ಅನೇಕರು ಬರುತ್ತಾರೆ, ಹೋಗುತ್ತಾರೆ. ಅವರಲ್ಲಿ ಕೆಲವರು ಒಳ್ಳೆಯ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ಹೊರಗಿನಿಂದ ನಗುಮುಖ ಹೊತ್ತು ಬಂದರೂ ಒಳಗಿನಿಂದ ಅಸೂಯೆ ಪಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳ ಅಸೂಯೆ ಮತ್ತು ನಕಾರಾತ್ಮಕ ಆಲೋಚನೆಗಳೇ ‘ದೃಷ್ಟಿ ದೋಷ’ವಾಗಿ ಪರಿಣಮಿಸುತ್ತವೆ. ಈ ದೃಷ್ಟಿ ದೋಷವು ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ, ಇದು ವಾಸ್ತು ದೋಷಕ್ಕೂ ಕಾರಣವಾಗಬಲ್ಲದು.

ದೃಷ್ಟಿ ಬಿದ್ದಿರುವುದರ ಲಕ್ಷಣಗಳು:

ಯಾರೊಬ್ಬರ ಕೆಟ್ಟ ದೃಷ್ಟಿ ನಿಮ್ಮ ಮನೆಯ ಮೇಲೆ ಬಿದ್ದಾಗ, ಅಕಾರಣವಾಗಿ ಮನೆಯಲ್ಲಿ ಜಗಳಗಳು ಪ್ರಾರಂಭವಾಗುತ್ತವೆ. ಸದಾ ನೆಮ್ಮದಿಯಿಂದ ಇರಬೇಕಾದ ಮನೆಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಮನೆ ಅಸ್ತವ್ಯಸ್ತವಾಗಿರುವುದು, ಕುಟುಂಬದ ಸದಸ್ಯರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದು ಅಥವಾ ಹಠಾತ್ ಆರ್ಥಿಕ ಬಿಕ್ಕಟ್ಟು ಎದುರಾಗುವುದು ಇವೆಲ್ಲವೂ ನಿಮ್ಮ ಮನೆಯ ಶಕ್ತಿಯ ಸಮತೋಲನ ತಪ್ಪಿರುವುದರ ಸಂಕೇತಗಳಾಗಿವೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪವಿತ್ರ ಗೋಮೂತ್ರ ಮತ್ತು ಅರಿಶಿನದ ರಾಮಬಾಣ ಪರಿಹಾರ:

ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ಹೊರಹಾಕಲು ಒಂದು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಮಾರ್ಗವಿದೆ. ಪ್ರತಿ ಗುರುವಾರ ಸಂಜೆಯ ಸಮಯದಲ್ಲಿ ಸ್ವಲ್ಪ ಗೋಮೂತ್ರವನ್ನು ತೆಗೆದುಕೊಂಡು ಅದಕ್ಕೆ ಚಿಟಿಕೆ ಅರಿಶಿನವನ್ನು ಬೆರೆಸಬೇಕು. ಈ ಮಿಶ್ರಣದಿಂದ ನಿಮ್ಮ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಶುಚಿಯಾಗಿ ಒರೆಸಬೇಕು. ಗೋಮೂತ್ರವು ಪರಿಸರವನ್ನು ಪವಿತ್ರಗೊಳಿಸಿದರೆ, ಅರಿಶಿನವು ಕ್ರಿಮಿನಾಶಕದಂತೆ ಕೆಲಸ ಮಾಡಿ ನಕಾರಾತ್ಮಕ ಕಂಪನಗಳನ್ನು ತಡೆಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ಸಂಧಾನ ಯಶಸ್ವಿ: ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಫೈನಲ್

ಬೆಂಗಳೂರು/ಬಾಗಲಕೋಟೆ, (ಮಾರ್ಚ್ 18): ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Bagalkot By Election) ಘೋಷಣೆಯಾಗು ತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷಕ್ಕೆ ‘ಕುಟುಂಬ ರಾಜಕಾರಣ’ದ ಬಿಸಿ ತಟ್ಟಿದ್ದು, ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (Siddaramaiah) ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಹೌದು…ಮಾಜಿ ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದಲ್ಲಿ (HY Meti Family) ಟಿಕೆಟ್‌ಗಾಗಿ ಭಿನ್ನಮತ ಸ್ಪೋಟಗೊಂಡಿತ್ತು. ಇದರ ಬೆನ್ನಲ್ಲೇ ಮೇಟಿಯವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಬಾಯಕ್ಕ, ಮಹಾದೇವಿ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಇಂದು (ಮಾರ್ಚ್ 18) ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಫೈನಲ್ ಆಗಿದೆ.

ಮೇಟಿ ಕುಟುಂಬಕ್ಕೆ ಟಿಕೆಟ್ ಫಿಕ್ಸ್​

ಶಾಸಕ ಮೇಟಿಯವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಬಾಯಕ್ಕ ಹಾಗೂ ಮಹಾದೇವಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಮುಖ್ಯವಾಗಿ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಸ್ಪರ್ಧೆ ಮಾಡುವುದಾಗಿ ಮಹಾದೇವಿ ಬಹಿರಂಗ ಎಚ್ಚರಿಕೆ ನೀಡಿದ್ದರು. ಅಲ್ಲದೇ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ ರುವ ಮಹಾದೇವಿ ಅವರ ಅಭಿಮಾನಿಗಳು ‘ಮಾರ್ಚ್ 20 ರಂದು ಮಹಾದೇವಿ ಮೇಟಿ ಅವರು ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಪೋಸ್ಟ್ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಸಿಎಂ, ಎಲ್ಲರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಮಹತ್ವದ ಸಭೆ ಮಾಡಿದ್ದು, ತಮ್ಮ ಕುಟುಂಬಕ್ಕೆ ನೀಡುತ್ತೇವೆ. ಆದ್ರೆ, ನಾಲ್ವರಲ್ಲಿ ಒಬ್ಬರಿಗೆ ನೀಡಿದರೆ ಉಳಿದವರು ಪಕ್ಷಕ್ಕೆ ಕೆಲಸ ಮಾಡಬೇಕೆಂದು ಸಿದ್ದರಾಮಯ್ಯ ಸಭೆಯಲ್ಲಿ ಖಡಕ್ ಆಗಿ ಹೇಳಿದ್ದಾರೆ. ಇದಕ್ಕೆ ಮೇಟಿ ಮಕ್ಕಳು ಸಹ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಕ್ಕೆ ಎನ್ನುವುದು ಕನ್ಫರ್ಮ್ ಆದಂತಾಗಿದೆ.

ಇದನ್ನೂ ಓದಿ: ಬಾಗಲಕೋಟೆ ಬೈ ಎಲೆಕ್ಷನ್: ಕಾಂಗ್ರೆಸ್​​ ಟಿಕೆಟ್​​ಗಾಗಿ ಹೆಚ್​​.ವೈ. ಮೇಟಿ ಮಕ್ಕಳ ನಡುವೆಯೇ ಪೈಪೋಟಿ

ಸಭೆ ಬಳಿಕ ಸಿಎಂ ಹೇಳಿದ್ದೇನು?

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,  ಬಾಗಲಕೋಟೆಯಲ್ಲಿ ಮೇಟಿ ಕುಟುಂಬದವರು ಟಿಕೆಟ್ ಕೇಳುತ್ತಿದ್ದಾರೆ. ಮಲ್ಲಿಕಾರ್ಜುನ, ಉಮೇಶ್, ಮಹದೇವಿ ಟಿಕೆಟ್ ಕೇಳುತ್ತಿದ್ದಾರೆ. ಯಾರಿಗೆ ಟಿಕೆಟ್ ಕೊಟ್ರೂ ಒಟ್ಟಿಗೆ ಕೆಲಸ ಮಾಡಬೇಕು ಎಂದಿದ್ದೇನೆ. ಅದಕ್ಕೆ ಮಲ್ಲಿಕಾರ್ಜುನ, ಉಮೇಶ್, ಮಹದೇವಿ ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಕ್ಕೆ ಎನ್ನುವುದು ಖಚಿತವಾದಂತಾಯ್ತು.

ಏಪ್ರಿಲ್ 9ರಂದು ನಡೆಯಲಿರುವ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​ ಬಗ್ಗೆ ಹೈಕಮಾಂಡ್​ ತೀರ್ಮಾನ ಮಾಡುತ್ತೆ. ಶುಕ್ರವಾರ ರಣದೀಪ್​ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬರ್ತಾರೆ. ನಿನ್ನೆ (ಮಾರ್ಚ್ 17) ಒಂದು ಟೀಮ್ ದಾವಣಗೆರೆ, ಬಾಗಲಕೋಟೆಗೆ ಹೋಗಿತ್ತು. ಅವರ ವರದಿ ಆಧರಿಸಿ ನಾನು, ಡಿಸಿಎಂ ಚರ್ಚೆ ಮಾಡುತ್ತೇವೆ. ಡಿಸಿಎಂ, ನಾನು ಚರ್ಚೆ ಮಾಡಿ ಹೈಕಮಾಂಡ್​ಗೆ ವರದಿ ಕೊಡುತ್ತೇವೆ ಎಂದರು.

ಬೈ ಎಲೆಕ್ಷನ್ ಟಕೆಟ್ ಬಗ್ಗೆ-ಡಿಕೆಶಿ ಹೇಳಿದ್ದಿಷ್ಟು

ಇನ್ನೊಂದೆಡೆ ಬೈ ಎಲೆಕ್ಷನ್ ಟಿಕೆಟ್ ಬಗ್ಗೆ ಡಿಸಿಎಂ , ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಮಾತನಾಡಿದ್ದು, ನಾನು ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಇನ್ನೂ ವರದಿ ಬಂದಿಲ್ಲ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಗ್ಗೆಯೂ ಚರ್ಚೆ ಆಗಿದೆ. H.Y.ಮೇಟಿ ಕುಟುಂಬದ ಸದಸ್ಯರು ಸಿಎಂ ಭೇಟಿ ಮಾಡಿದ್ದಾರೆ. ನಾನು ಮಂತ್ರಿಗಳ ಬಳಿ ಚರ್ಚೆ ಮಾಡಿದ್ದೇನೆ. ನಾನು ವರದಿ ಕೊಡುತ್ತೇನೆ. ಬಳಿಕ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು.

ಯಾರು ಕೈಗೆ ಹಿತ ಈ ನಾಲ್ವರೊಳಗೆ?

ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಗಾಗಿ ಎಚ್​​​ವೈ ಮೇಟಿ ಮಕ್ಕಳ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಮೇಟಿ ಮಕ್ಕಳ ಜತೆ ಸಭೆ ಮಾಡಿದ್ದಾರೆ. ಅಲ್ಲದೇ ನಾಲ್ವರಲ್ಲಿ ಒಬ್ಬರಿಗೆ ಕೊಡುವುದಾಗಿ ಸಹ ಒಪ್ಪಿಕೊಂಡಿದ್ದಾರೆ. ಆದ್ರೆ, ಯಾರಿಗೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಇಟ್ಟಿದ್ದಾರೆ. ಹಿರಿಯ ಪುತ್ರಿ ಬಾಯಕ್ಕ, ಕಿರಿಯ ಸಹೋದರಿ ಮಹಾದೇವಿ, ಹಿರಿಯ ಪುತ್ರ ಮಲ್ಲಿಕಾರ್ಜುನ ಮೇಟಿ, ಕಿರಿಯ ಪುತ್ರ ಉಮೇಶ್ ಮೇಟಿ. ಈ ನಾಲ್ವರಲ್ಲಿ ಯಾರಿಗೆ ಟಿಕೆಟ್ ಒಲಿಯುತ್ತೆ ಎನ್ನುವುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಕ್ಕೆ ಖಚಿತವಾಗಿದ್ದು, ನಾಲ್ವರಲ್ಲಿ ಯಾರಿಗೆ ಎನ್ನುವುದೇ ಇನ್ನೂ ನಿಗೂಢವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

2035ಕ್ಕೆ 300 ಬಿಲಿಯನ್ ಡಾಲರ್ ದಾಟಲಿದೆ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಗಾತ್ರ

ನವದೆಹಲಿ, ಮಾರ್ಚ್ 18: ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ (Semiconductor Market) ಮುಂದಿನ ನಾಲ್ಕು ವರ್ಷದಲ್ಲಿ ಮೂರು ಪಟ್ಟು ಬೆಳೆಯುವ ನಿರೀಕ್ಷೆ ಇದೆ. 2030ರೊಳಗೆ ಈ ಚಿಪ್ ಉದ್ಯಮ 120 ಬಿಲಿಯನ್ ಡಾಲರ್​ನಷ್ಟಾಗಬಹುದು. 2035ರೊಳಗೆ ಇದು ಬರೋಬ್ಬರಿ 300 ಬಿಲಿಯನ್ ಡಾಲರ್ ಮಾರುಕಟ್ಟೆಯಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಟೊಮೋಟಿವ್ ಗ್ರೋತ್, ಡಾಟಾ ಸೆಂಟರ್ ವಿಸ್ತರಣೆ ಇತ್ಯಾದಿ ಬಳಕೆ ಹೆಚ್ಚುವುದರಿಂದ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆ ಗಣನೀಯವಾಗಿ ಹಿಗ್ಗಬಹುದು ಎಂದು ಡುಲಾಯ್ಟ್ (Deloitte) ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಭಾರತದಲ್ಲಿ ಸದ್ಯಕ್ಕೆ ಅದಕ್ಕೆ ಇರುವ ಸೆಮಿಕಂಡಕ್ಟರ್ ಅಗತ್ಯದಲ್ಲಿ ಶೇ. 90ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನತ್ತು ವರ್ಷದೊಳಗೆ ಭಾರತಕ್ಕೆ ಬೇಕಾದ ಸೆಮಿಕಂಡಕ್ಟರ್ ಅಗತ್ಯಗಳಲ್ಲಿ ಶೇ. 60ರಷ್ಟವು ಸ್ಥಳೀಯವಾಗಿ ಪೂರೈಕೆ ಆಗುತ್ತಿರುತ್ತದೆ ಎಂದು ಈ ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಇದನ್ನೂ ಓದಿ: ಫ್ಲೈಟ್​ನಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು

ಸದ್ಯ ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆಯ ಗಾತ್ರ 2024-25ರ ಹಣಕಾಸು ವರ್ಷದಲ್ಲಿ 45-50 ಬಿಲಿಯನ್ ಡಾಲರ್​ನಷ್ಟು ಇದೆ. ಕಳೆದ ಮೂರು ವರ್ಷಗಳಿಂದ ಈ ಉದ್ಯಮದ ಗಾತ್ರ ಶೇ 20ರ ಸಿಎಜಿಆರ್​ನಲ್ಲಿ ಬೆಳೆಯುತ್ತಿದೆ ಎಂಬುದನ್ನು ಡುಲಾಯ್ಟ್ ವರದಿಯಲ್ಲಿ ಗಮನಿಸಲಾಗಿದೆ.

‘2035ರೊಳಗೆ ಭಾರತದಲ್ಲಿ 4-5 ಸಿಲಿಕಾನ್ ಫ್ಯಾಬ್ ಘಟಕಗಳು, 8-10 ಕಾಂಪೌಂಡ್ ಫ್ಯಾಬ್​ಗಳು, 1-2 ಡಿಸ್​ಪ್ಲೇ ಫ್ಯಾಬ್ರಿಕೇಶನ್​ಗಳು, ಮತ್ತು 20-25 ಒಸಾಟ್ ಫೆಸಿಲಿಟಿಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಈ ಸ್ಥಳೀಯ ಉತ್ಪಾದನೆಯು ದೇಶದ ಶೇ. 60 ರಷ್ಟು ಸೆಮಿಕಂಡಕ್ಟರ್ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ.

ಮೊಬೈಲ್ ಫೋನ್, ಆಟೊಮೋಟಿವ್, ಕಂಪ್ಯೂಟಿಂಗ್, ಡಾಟಾ ಸೆಂಟರ್ ಇತ್ಯಾದಿ ಸೆಗ್ಮೆಂಟ್​ಗಳಿಗೆ ಹೆಚ್ಚಿನ ಸೆಮಿಕಂಡಕ್ಟರ್ ಬೇಕಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ

ಭಾರತದ ಸೆಮಿಕಂಡಕ್ಟರ್ ಮಿಷನ್​ನಿಂದಾಗಿ ಈ ಕ್ಷೇತ್ರದಲ್ಲಿ ಮ್ಯಾನುಫ್ಯಾಕ್ಚರಿಂಗ್​ಗೆ 19 ಬಿಲಿಯನ್ ಡಾಲರ್​ಗೂ ಅಧಿಕ ಮೌಲ್ಯದ ಹೂಡಿಕೆಗಳು ಹರಿದುಬಂದಿವೆ. ಎಂಟು ಒಸಾಟ್, ಒಂದು ಕಾಂಪೌಂಡ್ ಫ್ಯಾಬ್ ಮತ್ತು ಒಂದು ಸೆಮಿಕಂಡಕ್ಟರ್ ಫ್ಯಾಬ್ ಘಟಕ ಸ್ಥಾಪನೆ ಸೇರಿ 10 ಪ್ರಾಜೆಕ್ಟ್​ಗಳು ಜಾರಿಗೆ ಬರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎಂಥಾ ಕಾಲ ಬಂತಪ್ಪ: LPG ಸಿಲಿಂಡರ್​​ಗಳ ವಿತರಣೆ ವೇಳೆ ಪೊಲೀಸ್​​ ಭದ್ರತೆ!

ಬೆಂಗಳೂರು, ಮಾರ್ಚ್​​ 18: ಎಲ್​​ಪಿಜಿ ಸಿಲಿಂಡರ್‌ಗಳ ಬಿಕ್ಕಟ್ಟುಬೆಂಗಳೂರಿನಲ್ಲಿ ತೀವ್ರಗೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಆತಂಕ ಇದೀಗ ಗೃಹಬಳಕೆಯ ಸಿಲಿಂಡರ್‌ಗಳ ಬಳಕೆದಾರರಿಗೂ ಹಬ್ಬಿದೆ. ಸಿಲಿಂಡರ್‌ಗಳು ಸಿಗುವುದಿಲ್ಲ ಎಂಬ ಭಯದಲ್ಲಿ ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಗೃಹಬಳಕೆ ಗ್ರಾಹಕರು, ಏಜೆನ್ಸಿಗಳ ಬಳಿ ಮುಗಿಬೀಳುತ್ತಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣದ ಸಮೀಪ ದೊಡ್ಡ ಸಂಖ್ಯೆಯ ಗ್ರಾಹಕರು ಸಿಲಿಂಡರ್‌ಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡುಬಂದಿವೆ. ಸಾಮಾನ್ಯವಾಗಿ ಏಜೆನ್ಸಿಗಳು ಮನೆಗಳಿಗೆ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮನೆ ವಿತರಣೆ ವಿಳಂಬವಾಗುತ್ತಿರುವುದರಿಂದ ಗ್ರಾಹಕರು ತಾವೇ ಖಾಲಿ ಸಿಲಿಂಡರ್‌ಗಳನ್ನು ತಂದು ಭರ್ತಿ ಮಾಡಿದ ಸಿಲಿಂಡರ್‌ಗಳನ್ನು ಕೊಂಡೊಯ್ಯಲು ಮುಂದಾಗಿದ್ದಾರೆ. ನೂಕು ನುಗ್ಗಲು ಉಂಟಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್​​ ಸಿಬ್ಬಂದಿಯೂ ಹಾಜರಿದ್ದಿದ್ದು ಗಮನ ಸೆಳೆದಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಉಡುಪಿಯಲ್ಲಿ ಮತಾಂತರ ಪ್ರಚೋದಿತ ಕಾರ್ಯಕ್ರಮ: ಹಿಂದೂ ಜಾಗರಣ ವೇದಿಕೆ ಗಂಭೀರ ಆರೋಪ

ಉಡುಪಿ, ಮಾರ್ಚ್​​ 18: ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಜರಸ್ (Mohan C. Lazarus)​ ನೇತೃತ್ವದಲ್ಲಿ ನಗರದ ಮಿಷನ್ ಕಾಂಪೌಂಡ್ ಪರಿಸರದಲ್ಲಿ ಮಾರ್ಚ್ 20, 21, 22 ರಂದು ಸಮಾಧಾನ ಮಹೋತ್ಸವ ಆಯೋಜಿಸಲಾಗಿದೆ. ಸದ್ಯ ಈ ಕಾರ್ಯಕ್ರಮದ ವಿರುದ್ಧ ಮತಾಂತರ ಆರೋಪ ಕೇಳಿಬಂದಿದ್ದು, ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ತಕ್ಷಣ ಜಿಲ್ಲಾಡಳಿತ ತಡೆ ನೀಡಬೇಕೆಂದು ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಒತ್ತಾಯಿಸಿದ್ದಾರೆ.

ಮಾರ್ಚ್​​ 20,21 ಮತ್ತು 22ರಂದು ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಜರಸ್​ ಎಂಬುವರು ನಡೆಸಿಕೊಡುವ ಸಮಾಧಾನ ಮಹೋತ್ಸವಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ. ಉಡುಪಿಯಲ್ಲಿ ಮತಾಂತರ ಪ್ರಚೋದಿತ ಸಮಾಧಾನ ಮಹೋತ್ಸವ ಎಂದು ಗಂಭೀರ ಆರೋಪ ಮಾಡಿದೆ.

ಇದನ್ನೂ ಓದಿ: ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಯತ್ನಿಸಿದವರ ಹೆಡೆಮುರಿ ಕಟ್ಟಿದ ಪೊಲೀಸರು

ಮೋಹನ್ ಸಿ. ಲಾಜರಸ್​ ಮೇಲೆ ಗಂಭೀರ ಆಪರೂಪಗಳಿವೆ. ಪವಾಡದ ನೆಪದಲ್ಲಿ ಮತಾಂತರಗೊಳಿಸುತ್ತಾರೆ. ಈ ಹಿಂದೆ ಹಿಂದೂ ದೇವಾಲಯಗಳನ್ನು ಸೈತಾನನ ನೆಲೆಗಳು ಎಂದು ಕರೆದಿದ್ದರು. ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ದ್ವೇಷಪೂರಿತ ಭಾಷಣಗಳಿಗೆ ತಮಿಳುನಾಡಿನ ವಿವಿಧ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ವಿದೇಶಿ ಹಣ ದುರುಪಯೋಗ ಮಾಡಿರುವ ಆರೋಪ ಇದೆ.

ಜೀಸಸ್ ರಿಡೀಮ್ಸ್ ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿದ ಆರೋಪ ಹೊತ್ತಿದೆ. ಕೇಂದ್ರ ಗೃಹ ಸಚಿವಾಲಯ ಇತ್ತೀಚಿಗೆ ಸಂಸ್ಥೆಯ ಲೈಸೆನ್ಸ್ ಅಮಾನತುಗೊಳಿಸಿದೆ. ಕೋಮು ಸೌಹಾರ್ದ ಕೆಡಿಸುವ ಕೆಲಸಕ್ಕೆ ಹಣ ಬಳಕೆ ಎಂಬ ಗಂಭೀರ ಆರೋಪವಿದೆ. ಮುಗ್ಧ ಜನರನ್ನು ಸೇರಿಸಿ ರೋಗವಾಸಿ ಮಾಡುವ ಅಥವಾ ಆಮಿಷ ಒಡ್ಡುವ ಮೂಲಕ ಮತಾಂತರ ನಡೆಸುವ ಸಂಶಯವಿದೆ.

ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್​​ ನಡುವೆ ಧ್ವಜ ದಂಗಲ್​​: ಉಡುಪಿ ಡಿಸಿ ನಡೆ ಬಗ್ಗೆ ಪರ-ವಿರೋಧ ಚರ್ಚೆ

ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಕೇಳಿದ ನಂತರ ಕೆಲವು ಪ್ರಕರಣ ರದ್ದುಗೊಳಿಸಲಾಗಿದೆ. ಉಡುಪಿ ಅಂತಹ ಪವಿತ್ರ ಕ್ಷೇತ್ರದಲ್ಲಿ ಧಾರ್ಮಿಕ ಅಶಾಂತಿ ಮೂಡುವ ಸಾಧ್ಯತೆ ಇದೆ. ವಿವಾದಾತ್ಮಕ ವ್ಯಕ್ತಿಗಳು ಪ್ರವೇಶ ಮಾಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಒಂದು ವೇಳೆ ಮೋಹನ್ ಸಿ. ಲಾಜರಸ್​​​ ಜಿಲ್ಲೆಗೆ ಪ್ರವೇಶಿಸಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೂಡ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಮ್ಮ ಇತಿಹಾಸ ಇಡೀ ಜಗತ್ತಿಗೆ ಗೊತ್ತು’; ಭಾರತದಲ್ಲಿ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಎಂಐ ಆಟಗಾರ

2026 ರ ಐಪಿಎಲ್ (IPL 2026) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿವೆ. ಇತ್ತ ದೇಶೀಯ ಹಾಗೂ ವಿದೇಶಿಯ ಆಟಗಾರರು ಕೂಡ ಭಾರತಕ್ಕೆ ಬಂದಿಳಿದು ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಅದರಂತೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಂಬೈ ಇಂಡಿಯನ್ಸ್ ಪರ ಆಡಲಿರುವ ಅಲ್ಲಾಹ್ ಗಜನ್‌ಫರ್, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ವಾಯುಪಡೆಯು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿನ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆಸಿ 400 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಪಾಕಿಸ್ತಾನದ ಈ ಹೇಡಿತನದ ದಾಳಿಯು ಅಫ್ಘಾನ್ ಸರ್ಕಾರ ಮತ್ತು ಅಫ್ಘಾನ್ ಕ್ರಿಕೆಟಿಗರನ್ನು ಕೆರಳಿಸಿದೆ. ರಶೀದ್ ಖಾನ್ ಮತ್ತು ರಹಮಾನುಲ್ಲಾ ಗುರ್ಬಾಜ್‌ರಂತಹ ಆಟಗಾರರು ಪಾಕಿಸ್ತಾನವನ್ನು ಬಹಿರಂಗವಾಗಿ ಟೀಕಿಸಿದ್ದಾರೆ.

ಪಾಕಿಸ್ತಾನಕ್ಕೆ ಗಜನ್‌ಫರ್ ಎಚ್ಚರಿಕೆ

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿರುವ ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾಹ್ ಗಜನ್‌ಫರ್, ‘ಅಫ್ಘಾನಿಸ್ತಾನದ ಇತಿಹಾಸ ಜಗತ್ತಿಗೆ ತಿಳಿದಿದೆ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ‘ಅಫ್ಘಾನಿಸ್ತಾನದಲ್ಲಿರುವ ಆ ಬಡವರ ಬಳಿ ವೈದ್ಯಕೀಯ ಚಿಕಿತ್ಸೆಗೂ ಹಣವಿರಲಿಲ್ಲ. ಪಾಕಿಸ್ತಾನಿಗಳು ಅಂತಹ ಸ್ಥಳಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಜನರು ಇದನ್ನು ಎಂದಿಗೂ ಸಹಿಸುವುದಿಲ್ಲ. ಪಾಕಿಸ್ತಾನ ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ ಎಂದು ನನಗೆ ತಿಳಿದಿಲ್ಲ. ಅವರು ನಾಗರಿಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಇತಿಹಾಸ ಎಲ್ಲರಿಗೂ ತಿಳಿದಿದೆ. ಇತಿಹಾಸ ಪುನರಾವರ್ತನೆಯಾದರೆ, ಅದು ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ’ ಎಂದು ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಗಜನ್‌ಫರ್ ಹೇಳಿದ್ದಾರೆ.

ಐಪಿಎಲ್‌ಗೆ ಗಜನ್‌ಫರ್ ಪಾದಾರ್ಪಣೆ

ಅಲ್ಲಾಹ್ ಗಜನ್‌ಫರ್ 2026 ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಸಜ್ಜಾಗಿದ್ದಾರೆ. ಕೇವಲ 19 ವರ್ಷ ವಯಸ್ಸಿನಲ್ಲಿಯೇ 14 ಏಕದಿನ ಪಂದ್ಯಗಳನ್ನಾಡಿರುವ ಗಜನ್‌ಫರ್, 23 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 5 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲಾಹ್ ಗಜನ್‌ಫರ್ ಒಟ್ಟು 63 ಟಿ20ಪಂದ್ಯಗಳನ್ನು ಆಡಿದ್ದು, 77 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಅವರು ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಿಯಾನ್ ರಿಕಲ್ಟನ್, ರಾಬಿನ್ ಮಿಂಜ್, ರಾಜ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಘಜನ್‌ಫರ್, ಅಶ್ವನಿ ಕುಮಾರ್, ದೀಪಕ್ ಚಾಹರ್, ವಿಲ್ ಜಾಕ್ಸ್, ಶೆರ್ಫೇನ್ ರುದರ್‌ಫೋರ್ಡ್, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೇಕರ್, ಮಯಾಂಕ್ ರಾವತ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಆಪ್ತರಿಂದಲೇ ಪ್ರಜ್ವಲ್​​ ರೇವಣ್ಣಗೆ ಖೆಡ್ಡಾ: ಚಾರ್ಜ್​​ಶೀಟ್​​ನಲ್ಲಿ ಸ್ಫೋಟಕ ಮಾಹಿತಿ ರಿವೀಲ್​

ಹಾಸನ, ಮಾರ್ಚ್​​ 18: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಇರುವ ಪೆನ್​​ಡ್ರೈವ್​​ ಹಂಚಿಕೆ ಪ್ರಕರಣ ಸಂಬಂಧ 2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಎಸ್​​ಐಟಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಹಾಸನದ ಸಿವಿಲ್​​ ಕೋರ್ಟ್​​ಗೆ ಸಲ್ಲಿಸಲಾಗಿರುವ ಒಟ್ಟು 13,712 ಪುಟಗಳ ಚಾರ್ಜ್​​ಶೀಟ್​​ನಲ್ಲಿ ಕೆಲವು ಸ್ಫೋಟಕ ವಿಚಾರಗಳು ಬಹಿರಂಗಗೊಂಡಿವೆ.

ಮಾಜಿ ಆಪ್ತರೇ ತೋಡಿದ್ದ ಖೆಡ್ಡಾಗೆ ಪ್ರಜ್ವಲ್​​ ರೇವಣ್ಣ ಬಿದ್ದಿದ್ದಾರೆ. ಹಲವು ವರ್ಷಗಳ ಕಾಲ ಇದೇ ಪ್ರಜ್ವಲ್ ಜೊತೆಯಲ್ಲೇ ಇದ್ದ ನವೀನ್ ಗೌಡ, ಕಾರ್ತಿಕ್, ಚೇತನ್ ಹಾಗೂ ಹರೀಶ್ ಮಾಜಿ ಸಂಸದನ ವಿಡಿಯೋ ವೈರಲ್​​ ಹಿಂದಿನ ಪ್ರಮುಖ ರೂವಾರಿಗಳು. ಪ್ರಜ್ವಲ್​​ ಕುರಿತು ಎಲ್ಲ ಮಾಹಿತಿ ಗೊತ್ತಿದ್ದ ಕಾರು ಚಾಲಕ ಕಾರ್ತಿಕ್​​, ಮೊಬೈಲ್​​ನಿಂದ ವಿಡಿಯೋ ಕದ್ದಿದ್ದ. ರೇವಣ್ಣ ಕುಟುಂಬದ ವ್ಯವಹಾರ ಆಡಿಟಿಂಗ್​​ ಕೆಲಸವನ್ನು ನವೀನ್​​ ಮಾಡುತ್ತಿದ್ದರೆ, ಇತ್ತ ಜೆಡಿಎಸ್​​ನಲ್ಲಿಯೇ ಇದ್ದ ಚೇತನ್​​ ತನಗೆ ಹಾಗೂ ತಾಯಿಗೆ ಚುನಾವಣೆಯಲ್ಲಿ ಸಹಾಯ ಮಾಡಲಿಲ್ಲ ಎಂದು ಪಕ್ಷ ತೊರೆದಿದ್ದ. ಪ್ರಜ್ವಲ್​​ ಜೊತೆ ಗುರುತಿಸಿಕೊಂಡಿದ್ದ ಈತ ಬೇಲೂರು ಯುವ ಜೆಡಿಎಸ್ ಅಧ್ಯಕ್ಷನೂ ಆಗಿದ್ದ. 2019ರಲ್ಲಿ ನವೀನ್​​ ಕಾಂಗ್ರೆಸ್​​ ಸೇರಿದ್ದರೆ, 2020ರಲ್ಲಿ ಚೇತನ್​​ ‘ಕೈ’ ಹಿಡಿದಿದ್ದ. ಈ ಇಬ್ಬರ ಜೊತೆ ಹರೀಶ್​​ ಕೂಡ ಪ್ರಜ್ವಲ್​​ ರೇವಣ್ಣ ಕಾರು ಚಾಲಕ ಕಾರ್ತಿಕ್​​ ಜೊತೆ ಆತ್ಮೀಯತೆ ಹೊಂದಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ಪ್ರಜ್ವಲ್ ವಿಡಿಯೋ ವೈರಲ್ ಪ್ರಕರಣ; ಪ್ರಮುಖರ ಹೆಸರೇ ಚಾರ್ಜ್​​ಶೀಟ್​​ನಿಂದ ಮಿಸ್ಸಿಂಗ್​​?

ಪ್ರಜ್ವಲ್​ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಇರೋದಾಗಿ ದೇವರಾಜೇಗೌಡ ಸುದ್ದಿಗೊಷ್ಠಿ ನಡೆಸಿ ಆರೋಪಿಸಿದ ಬಳಿಕ ಚೇತನ್, ನವೀನ್ ಹಾಗೂ ಹರೀಶ್ ಸೇರಿಕೊಂಡು ಕಾರ್ತಿಕ್​​ ಸಂಪರ್ಕ ಮಾಡಿದ್ದರು. ಆ ಬಳಿಕ ಪೆನ್​​ಡ್ರೈವ್​​ ಖರೀದಿಸಿ ಅದರಲ್ಲಿ ಆಸ್ಲೀಲ ವಿಡಿಯೋಗಳನ್ನು ತುಂಬಿ ಜೆಡಿಎಸ್​​ನ ಮಾಜಿ ಕಾರ್ಯಕರ್ತರೇ ಹಂಚಿಕೆ ಮಾಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ ಈ ಪ್ರಕರಣದಲ್ಲಿ, ಶಾಸಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಪ್ರೀತಂ ಗೌಡ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಶ್ರೇಯಸ್ ಪಟೇಲ್ ಆಪ್ತರಾಗಿರುವ ಪುಟ್ಟರಾಜು ಅವರಿಗೆ ಆರೋಪಗಳಿಂದ ಮುಕ್ತಿ ದೊರೆತಿದೆ. ಪ್ರಾಥಮಿಕ ಆರೋಪಗಳ ಪ್ರಕಾರ, ಶರತ್, ಕಿರಣ್ ಮತ್ತು ಪುಟ್ಟರಾಜು ಅವರು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಪೆನ್ ಡ್ರೈವ್ ವೀಡಿಯೋಗಳ ಹಂಚಿಕೆಯಲ್ಲಿ ಮತ್ತು ಅವುಗಳನ್ನು ದೊಡ್ಡ ಮಟ್ಟದಲ್ಲಿ ವೈರಲ್ ಮಾಡುವಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ತನಿಖೆಯಲ್ಲಿ ಇವರು ಯಾವುದೇ ವೈರಲ್ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿರೋದಾಗಿ ಎಸ್​​ಐಟಿ ಉಲ್ಲೇಖಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರೇಮ್​​ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ಭಾರಿ ವಿವಾದಕ್ಕೆ ಕಾರಣ ಆಗಿರುವ ‘ಕೆಡಿ’ (KD) ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಬಗ್ಗೆ ನಟಿ ನೋರಾ ಫತೇಹಿ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಿಂದಿ ವರ್ಷನ್ (Sarke Chunar Teri Sarke) ಹಾಡನ್ನು ಕೂಡಲೇ ಡಿಲೀಟ್ ಮಾಡಲಾಯಿತು. ಇಷ್ಟೆಲ್ಲ ವಿವಾದ ಆಗಿದ್ದಕ್ಕೆ ನಟಿ ನೋರಾ ಫತೇಹಿ (Nora Fatehi) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಾಡಿನಲ್ಲಿ ಇಷ್ಟು ಕೆಟ್ಟ ಸಾಹಿತ್ಯ ಇದೆ ಎಂಬುದು ನನಗೆ ಗೊತ್ತೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ ಅವರು ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ್ದಾರೆ. ‘ಕೆಲವು ವಿಷಯಗಳನ್ನು ನಾನು ಸ್ಪಷ್ಟಪಡಿಸಬೇಕಿದೆ. ನಾನು ಈ ಹಾಡನ್ನು 3 ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದು. ಸಂಜಯ್ ದತ್ ಅವರಂತಹ ದೊಡ್ಡ ಕಲಾವಿದರು ಇರುವ ದೊಡ್ಡ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದೆ. ಕನ್ನಡ ಭಾಷೆ ನನಗೆ ತಿಳಿಯುವುದಿಲ್ಲ. ಶೂಟಿಂಗ್ ಮಾಡುವಾಗ ಹಾಡಿನ ಅರ್ಥ ತಿಳಿಯಲು ನಾನು ಚಿತ್ರತಂಡದ ಮೇಲೆ ಅವಲಂಬಿತಳಾಗಿದ್ದೆ. ಅವರು ಭಾಷಾಂತರ ಮಾಡಿ ಹೇಳಿದಾಗ ನನಗೆ ಯಾವುದೂ ಅಸಭ್ಯ ಅಂತ ಅನಿಸಿರಲಿಲ್ಲ’ ಎಂದು ನೋರಾ ಫತೇಹಿ ಹೇಳಿದ್ದಾರೆ.

‘ಆದರೆ ಈಗ ಹಿಂದಿಗೆ ಭಾಷಾಂತರ ಮಾಡಿರುವುದು ತುಂಬ ಆಕ್ಷೇಪಾರ್ಹವಾಗಿದೆ. ಅದರ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ನನ್ನ ಅನುಮತಿಯನ್ನು ಚಿತ್ರತಂಡದವರು ಪಡೆದುಕೊಂಡಿಲ್ಲ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿದ ರೀತಿ ಕಂಡು ನನಗೆ ಬೇಸರ ಆಯಿತು. ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ ಮೂಲಕ ಸೃಷ್ಟಿಸಿ ಬಳಸಿದ್ದಾರೆ. ಅದನ್ನು ನಾನು ವಿರೋಧಿಸುತ್ತೇನೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲೇ ನನಗೆ ಕಿರಿಕಿರಿ ಆಯಿತು’ ಎಂದಿದ್ದಾರೆ ನೋರಾ ಫತೇಹಿ.

‘ನಾನು ಅಲ್ಲಿ ಎಲ್ಲರ ಎದುರು ಗೌರವಯುತವಾಗಿ ನಡೆದುಕೊಳ್ಳಲೇ ಬೇಕಿತ್ತು. ಹಿಂದಿ ವರ್ಷನ್ ಹಾಡು ಪ್ಲೇ ಮಾಡಿದಾಗ ನನಗೆ ಎಲ್ಲವೂ ತಿಳಿಯಿತು. ಇದು ವಿವಾದ ಆಗುತ್ತೆ ಎಂಬುದು ಗೊತ್ತಾಯಿತು. ಯಾಕೆಂದರೆ ನನಗೆ ಹಿಂದಿ ಅರ್ಥ ಆಗುತ್ತದೆ. ಇದು ಸರಿ ಅಲ್ಲ ಅಂತ ನಾನು ನಿರ್ದೇಶಕರಿಗೆ ಆಗಲೇ ಎಚ್ಚರಿಕೆ ನೀಡಿದೆ. ನಾನು ಸಿನಿಮಾದಿಂದ ಹೊರಗೆ ಬರುತ್ತೇನೆ. ನಾವು ಯಾವುದೇ ಕಾರಣಕ್ಕೂ ಇದನ್ನು ಪ್ರಚಾರ ಮಾಡಲ್ಲ. ನನ್ನ ಘನತೆಗೆ ಧಕ್ಕೆ ಆಗಿದೆ ಅಂತ ನಿರ್ದೇಶಕರಿಗೆ ಹೇಳಿದೆ’ ಎಂದಿದ್ದಾರೆ ನೋರಾ.

ಇದನ್ನೂ ಓದಿ: ಪ್ರೇಮ್ ಬರೆದ ‘ಕೆಡಿ’ ಸಿನಿಮಾದ ಹಾಡಿನ ಅಶ್ಲೀಲತೆಗೆ ಕಂಗನಾ ರಣಾವತ್ ಆಕ್ರೋಶ

‘ನನ್ನಂಥ ಕಲಾವಿದರಿಗೆ ಹೆಚ್ಚಿನ ಶಕ್ತಿ ಇರುವುದಿಲ್ಲ. ಇಂಥ ಚಿತ್ರರಂಗದಲ್ಲಿ ನನ್ನ ಅಭಿಪ್ರಾಯವನ್ನು ಯಾರೂ ಕೇಳಲ್ಲ. ವಿರೋಧ ವ್ಯಕ್ತವಾದ ಬಳಿಕ ಹಾಡನ್ನು ಡಿಲೀಟ್ ಮಾಡಿದ್ದಾರೆ ಎಂಬುದು ಸಮಾಧಾನಕರ ಸಂಗತಿ. ನೀವೆಲ್ಲ ವಿರೋಧಿಸಿದಕ್ಕೆ ಧನ್ಯವಾದಗಳು. ಇಂಥ ಹಾಡು ಸರಿಯಲ್ಲ ಎನಿಸಿದರೆ ಅದನ್ನು ತಯಾರಿಸಿದ ಚಿತ್ರತಂಡವನ್ನು ಹೊಣೆಗಾರರನ್ನಾಗಿ ಮಾಡಬೇಕು. ವಿರೋಧಿಸುವಾಗ ಅವರ ಹೆಸರು ಮತ್ತು ಫೋಟೋವನ್ನೇ ಬಳಸಬೇಕು. ಆಗ ಮಾತ್ರ ಅವರಿಗೆ ಭಯ ಇರುತ್ತದೆ. ಇನ್ಮುಂದೆ ಬಹಳ ಎಚ್ಚರಿಕೆಯಿಂದ ಇರುತ್ತೇನೆ’ ಎಂದು ನೋರಾ ಫತೇಹಿ ಅವರು ಸ್ಪಷ್ಟನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link