All posts by nagaraj11081993

ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ತೋರಿದ ಭಾರತ

ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ತೋರಿದ ಭಾರತ

ನವದೆಹಲಿ, ಮಾರ್ಚ್ 18: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಇನ್ನೂ ನಿಂತಿಲ್ಲ. ಅತ್ತ ಇರಾನ್ ಕೂಡ ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಯುದ್ಧದಲ್ಲಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳಿಗೆ ಹಾನಿಯಾಗಿದ್ದು ಬಿಟ್ಟರೆ ಅಮೆರಿಕ ದೇಶದ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದರೆ, ಇಸ್ರೇಲ್ ಮತ್ತು ಇರಾನ್ ಅಕ್ಷರಶಃ ಸ್ಮಶಾನದಂತಾಗಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್ ವಿರುದ್ಧ ಬೇರೆ ದೇಶಗಳು ಯುದ್ಧನೌಕೆಗಳನ್ನು ಕಳುಹಿಸಿ ಎಚ್ಚರಿಕೆ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಘೋಷಿಸಿದ್ದರು. ಇರಾನ್ (Iran War) ಮೇಲೆ ಮತ್ತೆ ದಾಳಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದೆಲ್ಲದರ ನಡುವೆ ಭಾರತ ಇರಾನ್​ ದೇಶಕ್ಕೆ ವೈದ್ಯಕೀಯ ನೆರವು ನೀಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಪ್ರಧಾನಿ ಮೋದಿ ಬಹಳ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಶಾಂತಿ ಮಾತುಕತೆಯ ಮೂಲಕ ಯುದ್ಧಕ್ಕೆ ಅಂತ್ಯ ಹಾಡಲು ಮೋದಿ ಇಸ್ರೇಲ್​ಗೆ ಮನವಿ ಮಾಡಿದ್ದರು. ಈ ಯುದ್ಧ ಆರಂಭವಾದಾಗಿನಿಂದ ಹಲವು ಬಾರಿ ಇಸ್ರೇಲ್ ಜೊತೆ ಪ್ರಧಾನಿ ಮೋದಿ ಮಾತುಕತೆ ಕೂಡ ನಡೆಸಿದ್ದರು. ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ಬಗ್ಗೆ ಮೌನ ತಳೆದಿದ್ದ ಭಾರತ ಕೊನೆಗೆ ಖಮೇನಿಯ ಸಂತಾಪ ಸಭೆಯಲ್ಲಿ ಭಾಗವಹಿಸಿತ್ತು. ಇದಾದ ನಂತರ ಇರಾನ್ ಜೊತೆ ಮಾತುಕತೆ ನಡೆಸಿ ಭಾರತದ ತೈಲ ಟ್ಯಾಂಕರ್​ಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟ ಮಾಡಲು ಅನುಮತಿ ನೀಡಲು ಮವಿ ಮಾಡಲಾಗಿತ್ತು. ಅದಕ್ಕೆ ಒಪ್ಪಿದ್ದ ಇರಾನ್ ಭಾರತದ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಿತ್ತು. ಇದೀಗ ಭಾರತ ಇರಾನ್​ಗೆ ವೈದ್ಯಕೀಯ ನೆರವು ನೀಡಿದ್ದು, ಭಾರತೀಯರಿಗೆ ಹಾಗೂ ಭಾರತ ಸರ್ಕಾರಕ್ಕೆ ಇರಾನ್ ವಿಶೇಷವಾಗಿ ಧನ್ಯವಾದ ತಿಳಿಸಿದೆ.

ಇದನ್ನೂ ಓದಿ: ಟ್ರಂಪ್​ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ

ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಬಗೆಹರಿಸಿಕೊಳ್ಳುವಂತೆ ಭಾರತ ಶಾಂತಿಯ ಮಂತ್ರ ಪಠಿಸುತ್ತಲೇ ಇದೆ. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಇತರೆ ದೇಶಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಕ್ಕೆ ಇರಾನ್​ಗೆ ಎಲ್ಲ ದೇಶಗಳೂ ಸೇರಿ ಪಾಠ ಕಲಿಸಬೇಕೆಂದು ಟ್ರಂಪ್ ಹೇಳಿಕೆ ನೀಡಿದ್ದರು. ಈ ಕುರಿತು ಭಾರತ ಸೇರಿದಂತೆ ಥೈಲ್ಯಾಂಡ್, ಚೀನಾ ಮುಂತಾದ ದೇಶಗಳನ್ನು ಅಮೆರಿಕ ಸಂಪರ್ಕ ಮಾಡಿದ್ದು, ಹಾರ್ಮುಜ್ ಜಲಸಂಧಿಗೆ ಯುದ್ಧನೌಕೆಯನ್ನು ಕಳುಹಿಸಲು ಕೋರಿದೆ ಎನ್ನಲಾಗುತ್ತಿದೆ. ಆದರೆ, ಅಮೆರಿಕದ ಈ ಮನವಿಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

ಇದನ್ನೂ ಓದಿ: ಅಮೆರಿಕ, ಇಸ್ರೇಲ್ ನಮ್ಮೆದುರು ಮಂಡಿಯೂರಬೇಕು; ಇರಾನ್‌ ಸುಪ್ರೀಂ ನಾಯಕ ಪಟ್ಟು

ಯುದ್ಧದಿಂದ ಕಂಗೆಟ್ಟಿರುವ ಇರಾನ್ ದೇಶಕ್ಕೆ ಭಾರತದಿಂದ ವೈದ್ಯಕೀಯ ಕಿಟ್​ಗಳು ರವಾನೆಯಾಗಿದೆ. ಇವು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ತಲುಪಿದೆ. ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒಳಗೊಂಡಿರುವ ಈ ಕಿಟ್​ಗಳನ್ನು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ತಲುಪಿಸಲಾಗಿದೆ. ಇದು ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಮಾನವೀಯತೆಯ ನಿರ್ಧಾರವಾಗಿದೆ.

ಭಾರತದಲ್ಲಿನ ಇಸ್ಲಾಮಿಕ್ ಗಣರಾಜ್ಯ ಇರಾನ್ ರಾಯಭಾರ ಕಚೇರಿಯು ಭಾರತದ ಈ ನೆರವನ್ನು ಒಪ್ಪಿಕೊಂಡಿದೆ. ಹಾಗೇ, ಭಾರತೀಯ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ. ಇರಾನ್​ನ ರಾಯಭಾರ ಕಚೇರಿಯು ಭಾರತದಿಂದ ಕಳುಹಿಸಲಾದ ವೈದ್ಯಕೀಯ ಸಾಮಗ್ರಿಗಳ ವಿತರಣೆಯನ್ನು ತೋರಿಸುವ ವೀಡಿಯೊ ತುಣುಕನ್ನು ಸಹ ಹಂಚಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Source link

ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳಿರುವಾಗ ‘ಧುರಂಧರ್’​ ನಿರ್ದೇಶಕ ಹೇಳಿದ್ದೇನು?

ಧುರಂಧರ್ 2’ (Dhurandhar 2) ಸಿನಿಮಾದ ಮೊದಲ ಸಾರ್ವಜನಿಕ ಪ್ರದರ್ಶನಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ರಣವೀರ್ ಸಿಂಗ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ನಾಳೆ (ಮಾರ್ಚ್ 19) ಬಿಡುಗಡೆಯಾಗುತ್ತಿದೆ. ಆದರೆ ಈ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಇಂದೇ ಪ್ರದರ್ಶನಗೊಳ್ಳಲಿದ್ದು, ಪ್ರೀಮಿಯರ ಶೋನ ಲಕ್ಷಾಂತರ ಟಿಕೆಟ್​​ಗಳು ಮುಂಗಡವಾಗಿ ಮಾರಾಟವಾಗಿವೆ. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಂಜೆ ಐದು ಗಂಟೆಯಿಂದ ‘ಧುರಂಧರ್ 2’ ಸಿನಿಮಾದ ಶೋಗಳ ಪ್ರದರ್ಶನ ಆರಂಭವಾಗಲಿದೆ. ಸಿನಿಮಾದ ಮೊದಲ ಶೋ ಪ್ರಾರಂಭಕ್ಕೆ ಕೆಲವೇ ಗಂಟೆಗಳಿರುವಾಗ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರಿಗೆ ಸಂದೇಶವೊಂದನ್ನು ನೀಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ಮುಗಿದ ಕೂಡಲೇ ಪ್ರೇಕ್ಷಕರು ಎದ್ದು ಹೊರನಡೆಯುತ್ತಾರೆ. ಆದರೆ ಈ ಬಾರಿ ಹಾಗೆ ಮಾಡಬೇಡಿ ಎಂದು ಆದಿತ್ಯ ಧರ್ ಮನವಿ ಮಾಡಿದ್ದಾರೆ. ಚಿತ್ರದ ಎಂಡ್ ಕ್ರೆಡಿಟ್ಸ್ ಮುಗಿಯುವವರೆಗೂ ಕುಳಿತಿರಬೇಕು, ಅಲ್ಲಿ ಒಂದು ದೊಡ್ಡ ‘ಪೋಸ್ಟ್-ಕ್ರೆಡಿಟ್ ಸೀನ್’ ಅಡಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ಆ ಮೂಲಕ ಭಾರಿ ಕುತೂಹಲವನ್ನೇ ಹುಟ್ಟುಹಾಕಿದ್ದಾರೆ ನಿರ್ದೇಶಕ ಆದಿತ್ಯ ಧರ್.

ಅದು ಮಾತ್ರವೇ ಅಲ್ಲದೆ, ಸಿನಿಮಾ ನೋಡಿ ಹೊರಬಂದ ಮೇಲೆ ಚಿತ್ರದ ರಹಸ್ಯಗಳನ್ನು ಅಥವಾ ಟ್ವಿಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ‘ನಮ್ಮ ಇಡೀ ತಂಡ ಈ ಚಿತ್ರಕ್ಕಾಗಿ ತುಂಬಾ ಶ್ರಮವಹಿಸಿದೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಆ ಥ್ರಿಲ್ ಸಿಗಬೇಕು. ಹಾಗಾಗಿ ದಯವಿಟ್ಟು ಸ್ಪಾಯ್ಲರ್ (ಗುಟ್ಟು ರಟ್ಟು) ನೀಡುವ ಮೂಲಕ ಇತರರ ಕುತೂಹಲವನ್ನು ಹಾಳು ಮಾಡಬೇಡಿ’ ಎಂದು ಆದಿತ್ಯ ಧರ್ ವಿನಂತಿಸಿದ್ದಾರೆ.

ಇದನ್ನೂ ಓದಿ:

‘ಧುರಂಧರ್ 2’ ಸಿನಿಮಾವು ಭಾರತದ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದಕ ಸಂಘಟನೆಗಳ ಮುಖಂಡರನ್ನು ಬಲಿ ಪಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಜೊತೆಗೆ ಸಾಕಷ್ಟು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳು ಸಹ ಇವೆ. ಹಾಗಾಗಿಯೇ ನಿರ್ದೇಶಕ ಆದಿತ್ಯ ಧರ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದು, ಸಿನಿಮಾದ ಕತೆಯ ಗುಟ್ಟುಗಳನ್ನು ರಟ್ಟು ಮಾಡಬೇಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.

ಈಗಾಗಲೇ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಭರ್ಜರಿಯಾಗಿ ನಡೆದಿದ್ದು, ಬಿಡುಗಡೆಗೂ ಮುನ್ನವೇ ಕೋಟಿಗಟ್ಟಲೆ ಹಣ ಬಾಚಿಕೊಂಡಿದೆ ಎಂಬ ಸುದ್ದಿ ಇದೆ. ಯುಗಾದಿ ಮತ್ತು ಈದ್ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್ ಮಾಧವನ್ ಅವರಂತಹ ದಿಗ್ಗಜ ಕಲಾವಿದರು ನಟಿಸಿದ್ದಾರೆ. ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗೆ ಕೊನೆ ಕ್ಷಣದಲ್ಲಿ ಸಮಸ್ಯೆ ಎದುರಾಗಿದ್ದು, ಹಿಂದಿ ಹೊರತಾಗಿ ಭಾರತದ ಇತರೆ ಭಾಷೆಗಳ ಆವೃತ್ತಿಯ ಶೋಗಳನ್ನು ರದ್ದು ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಪೇಯಸಿಗೆ ಮಾಡಿದ್ದೇನು ಗೊತ್ತಾ?

ಬೆಳಗಾವಿ, ಮಾರ್ಚ್​ 18: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೋರ್ವ ಯುವತಿಯ ತಲೆಗೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದು (Assault), ಅಷ್ಟೇ ಅಲ್ಲದೆ ಆಕೆಯ ತಂದೆ, ತಾಯಿ ಮೇಲೂ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ  ಜೋಡಕುರಳಿಯಲ್ಲಿ ನಡೆದಿದೆ. ವಿದ್ಯಾಶ್ರೀ ಕಿಲಾರಿ ಮೇಲೆ ಬೀರಪ್ಪ ರಾಮಪ್ಪ ಕಜ್ಜನ್ನವರ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಎರಡು ವರ್ಷಗಳಿಂದ ವಿದ್ಯಾಶ್ರೀ ಮದುವೆ ಮಾಡಿಕೊಡುವಂತೆ ಬೀರಪ್ಪ ರಾಮಪ್ಪ ಕಜ್ಜನ್ನವರ ದುಂಬಾಲು ಬಿದ್ದಿದ್ದ. ಆದರೆ ಬೀರಪ್ಪನಿಗೆ ಮಗಳನ್ನ ಕೊಡಲು ಮಹದೇವ ಕಿಲಾರಿ ಹಿಂದೇಟು ಹಾಕಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ರಾತ್ರಿ ಏಕಾಏಕಿ ಮನೆಗೆ ನುಗ್ಗಿ ಖಾರದಪುಡಿ ಎರಚಿ ರಾಡ್​ನಿಂದ ಹಲ್ಲೆ ಮಾಡಿದ್ದಾರೆ. ಸುಮಾರು 10 ಜನರು ವಿದ್ಯಾಶ್ರೀ ಸೇರಿದಂತೆ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ದಾವಣಗೆರೆಯಲ್ಲಿ ಪುಂಡರ ಹಾವಳಿ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ 

ದಾವಣಗೆರೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಯುವಕನೊಬ್ಬನನ್ನು ಹಿಡಿದು ಹತ್ತಾರು ಯುವಕರಿಂದ ಹಲ್ಲೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಪುಂಡರ ಗ್ಯಾಂಗ್​​ ರಾಡ್, ಕಲ್ಲುಗಳಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಹಲ್ಲೆಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

ಇದನ್ನೂ ಓದಿ: ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಇನ್ನು ಪುಂಡರ ಹಾವಳಿ ಒಂದು ತಿಂಗಳಲ್ಲಿ ಮೂರನೇ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರ ಭಯವಿಲ್ಲದೆ ರಸ್ತೆ ನಡುವೆ ಹೊಡೆದಾಡಿಕೊಂಡಿರುವುದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಕೂಡಲೇ ಪುಂಡರ ಹಾವಳಿ ತಪ್ಪಿಸುವಂತೆ ಆಗ್ರಹಿಸಿದ ಸಾರ್ವಜನಿಕರು ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರ್ಯಾಕ್ಟರ್ ಇಂಜಿನ್ ಮೈಮೇಲೆ ಬಿದ್ದು ಚಾಲಕ ಸಾವು

ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್ ಇಂಜಿನ್ ಮೈಮೇಲೆ ಬಿದ್ದು ಚಾಲಕ ಸಾವನ್ನಪ್ಪಿರುವಂತಹ ಘಟನೆಯೊಂದು ಹಾವೇರಿ ತಾಲ್ಲೂಕಿನ ಮರೋಳ ಗ್ರಾಮದಲ್ಲಿ ಘಟನೆ ನಡೆದಿದೆ. ಹಾವೇರಿ ತಾಲ್ಲೂಕಿನ ಗುತ್ತಲ ತಾಂಡಾದ ನಿವಾಸಿ ದೇವರಾಜ್ ಲಮಾಣಿ ಮೃತ ವ್ಯಕ್ತಿ.

ಇದನ್ನೂ ಓದಿ: 15 ದಿನ ಮಗು ಅನುಮಾಸ್ಪದ ಸಾವು:ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ

ಬೆಳಗ್ಗೆ ಎರಡುವರೆ ಸಾವಿರ ಇಟ್ಟಿಗೆ ತುಂಬಿಕೊಂಡು ಮರೋಳ ಗ್ರಾಮಕ್ಕೆ ಬಂದಿದ್ದರು. ಆದರೆ ಏಕಾಏಕಿ ಟ್ರ್ಯಾಕ್ಟರ್ ಇಂಜಿನ್ ಮೇಲೆ ಎದ್ದು ಸಿಲುಕಿ ಚಾಲಕ ಸಾವನ್ನಪ್ಪಿದ್ದಾರೆ. ಇನ್ನು ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.

Source link

ಡಿಜೆ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ: ಆಝಾನ್ ಬ್ಯಾನ್ ಮಾಡಿ ಎಂದು ಬಿಜೆಪಿ ಶಾಸಕ ಸವಾಲ್!

ಬೆಂಗಳೂರು, (ಮಾರ್ಚ್ 18): ಕರ್ನಾಟಕದಲ್ಲಿ ಆಚರಿಸಲಾಗುವ ಎಲ್ಲಾ ಜಯಂತಿಗಳಲ್ಲಿ ಹಾಕುವ ಡಿಜೆಗಳನ್ನು (DJ) ನಿಷೇಧಿಸಬೇಕು ಎಂದು ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದು, ಸದನದಲ್ಲಿ ಬಿಜೆಪಿ ನಾಯಕರ ಹಾಗೂ ಸರ್ಕಾರದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಡಿಜೆ ಬಳಕೆ ನಿಷೇಧಿಸಿ ಎಂದ ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ಕೊಟ್ಟ ಬಿಜೆಪಿ ಸದಸ್ಯ ಚನ್ನಬಸಪ್ಪ ಡಿಜೆ ಮಾತ್ರ ಏಕೆ ನಿಷೇಧ ಹೇರಬೇಕು, ಸುಪ್ರೀಂ ಕೋರ್ಟ್‌ ಆದೇಶದಂತೆ ಆಝಾನ್ ಬ್ಯಾನ್ ಮಾಡ್ತಿರಾ ಎಂದು ತಿರುಗೇಟು ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಸುಪ್ರೀಂ ಆದೇಶ ಶಬ್ಧದ ಪ್ರಮಾಣಕ್ಕೆ ಸಂಬಂಧಿಸಿದಂತದ್ದು, ಒಂದು ವೇಳೆ ಸರ್ಕಾರ ಆದೇಶ ನೀಡಿದ್ರೆ ಪಾಲನೆ ಮಾಡಬೇಕು ಎಂದು ಹೇಳಿದರು.

ಬಳಿಕ ಡಿಜೆ ಬ್ಯಾನ್ ಮಾಡುವ ಸಂಬಂಧ ಸಚಿವರಾದ ಶಿವರಾಜ್ ತಂಗಡಿಗಿ ಹಾಗೂ ಪ್ರಿಯಾಂಕ್ ಖರ್ಗೆ ಸಹ ಪ್ರಸ್ತಾಪಿಸಿದ್ದು, ಬಿಜೆಪಿ ನಾಯಕರು ಸಹಕರಿಸಿದರೆ ಬ್ಯಾನ್ ಮಾಡುವುದಾಗಿ ಹೇಳಿದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಪರ ವಿರೋಧದ ಚರ್ಚೆಗೆ ಕಾರಣವಾಯ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ. 

Source link

ಗ್ರಾಮಾಂತರ ಪ್ರದೇಶದಲ್ಲಿ ಮನೆಗಳ ಮೇಲೆ ಹಾಕಿದ ಜಾಹೀರಾತಿಗೂ ತೆರಿಗೆ!: ವಿಪಕ್ಷಗಳಿಂದ ತೀವ್ರ ವಿರೋಧ

ಬೆಂಗಳೂರು, ಮಾರ್ಚ್​​ 18: ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧಾನ ಪರಿಷತ್​ನಲ್ಲಿ ಕರ್ನಾಟಕ ಮುನ್ಸಿಪಾಲಿಟಿ ಮತ್ತು ಕೆಲವು ಇತರೆ ಕಾನೂನು(ತಿದ್ದುಪಡಿ) ವಿಧೇಯಕ-2026 ಅಂಗೀಕಾರಗೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಮನೆಗೆ ಹಾಕಿದ ಜಾಹೀರಾತಿಗೂ ತೆರಿಗೆ ವಿಧಿಸಲು ಮುಂದಾಗಿದ್ದು, ಜೀವನಕ್ಕೆ ಏನೋ ಮಾಡಿಕೊಂಡಿರುವವರಿಗೂ ಟ್ಯಾಕ್ಸ್​​ ಹಾಕುವಷ್ಟು ಸರ್ಕಾರ ಬರಗೆಟ್ಟಿದ್ಯಾ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.

ರಾಜಕಾರಣಿಗಳು ಫ್ಲೆಕ್ಸ್ ಹಾಕ್ತಾರೆ, ಅವರಿಗೆ ಯಾವುದೇ ಟ್ಯಾಕ್ಸ್ ಇಲ್ಲ. ಹೀಗಿರುವಾಗ ಖಾಸಗಿಯಾಗಿ ಮನೆ ಮೇಲೆ ಜಾಹೀರಾತು ಹಾಕಿಕೊಂಡ್ರೆ ನಿಮಗೇನು? ಎಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರಶ್ನೆ ಮಾಡಿದ್ದಾರೆ. ಮನೆ ಮೇಲೆ ಜಾಹೀರಾತು ಹಾಕಿದ್ದಕ್ಕೆ ತೆರಿಗೆ ಬೇಕಾ, ನಾಚಿಕೆ ಆಗಲ್ವಾ? ಎಂದು ತಿವಿದಿದ್ದಾರೆ. ಈ ವೇಳೆ ಚಿಕ್ಕಮಗಳೂರಲ್ಲಿ ನಿಮ್ಮ, ಸಿ.ಟಿ. ರವಿ ಫೋಟೋ ಇದೆ ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದು, ನೀವು ಹೇಳಿದಂತೆ ಎಲ್ಲಾ ಕಡೆ ನನ್ನ ಫೋಟೋ ಇದ್ದರೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಭೋಜೇಗೌಡ ಸವಾಲು ಹಾಕಿದ ಪ್ರಸಂಗವೂ ನಡೆದಿದೆ.

ಇದನ್ನೂ ಓದಿ: ಅಂತರ್ಜಾತಿ ವಿವಾಹವಾಗುವವರಿಗೆ ಶುಭ ಸುದ್ದಿ; ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ

ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ನಾರಾಯಣಸ್ವಾಮಿ, ಸರ್ಕಾರಿ ಜಾಗದಲ್ಲಿ ಜಾಹೀರಾತು ಹಾಕಿದರೆ ತೆರಿಗೆ ಹಾಕುವುದು ಸರಿ. ಆದರೆ ಖಾಸಗಿ ಜಾಗದಲ್ಲಿನ ಜಾಹೀರಾತಿಗೆ ಯಾಕೆ ತೆರಿಗೆ? ಇದನ್ನು ಕೈಬಿಡಬೇಕು. ಜಾಹೀರಾತು ಎನ್ನುವುದು ದೊಡ್ಡ ಮಾಫಿಯಾ, ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ತಮಿಳುನಾಡು, ಮುಂಬೈ ಮಾದರಿಯಲ್ಲಿ ಜಾಹೀರಾತು ನಿಯಮ ತನ್ನಿ. ಪಾರಂಪರಿಕ ಕಟ್ಟಡದ ಬಳಿ ಯಾವುದೇ ಜಾಹೀರಾತು ಹಾಕಬಾರದು. ಫ್ಲೆಕ್ಸ್ ಹಾಕುವ ವ್ಯವಸ್ಥೆಯನ್ನೇ ರದ್ದುಮಾಡಬೇಕು. ಪ್ರಮುಖ ಜಂಕ್ಷನ್​ಗಳಲ್ಲಿನ ಖಾಸಗಿ ಜಾಹೀರಾತಿಗೆ ತೆರಿಗೆ ಹಾಕಬೇಕು ಎಂದು ಕಾಂಗ್ರೆಸ್ ಸದಸ್ಯ ಶಿವಕುಮಾರ್ ಕೂಡ ಆಗ್ರಹಿಸಿದ್ದಾರೆ.

ಸಚಿವರ ಸಮರ್ಥನೆ

ವಿಪಕ್ಷಗಳ ಆಕ್ರೋಶದ ನಡುವೆಯೂ ತೆರಿಗೆ ವಿಧಿಸುವ ಸರ್ಕಾರದ ಕ್ರಮ ಸರಿಯಿದೆ ಎಂದು ನಗರಾಭಿವೃದ್ಧಿ ಸಚಿವರ ಭೈರತಿ ಸುರೇಶ್ ಸಮರ್ಥಿಸಿಕೊಂಡಿದ್ದು, ಟ್ಯಾಕ್ಸ್​​ ಸಂಗ್ರಹಿಸದೆ ನಗರ ಪಾಲಿಕೆಗಳನ್ನು ನಡೆಸುವುದು ಹೇಗೆ? ತೆರಿಗೆ ಬಾರದೆ ನೂರಾರು ಕೋಟಿ ರೂಪಾಯಿ ಲಾಸ್ ಆಗಿದೆ. ಸರ್ಕಾರಿ ಪ್ರಾಯೋಜಿತ ಜಾಹಿರಾತಿಗೆ ಟ್ಯಾಕ್ಸ್ ಇಲ್ಲ. ಆದರೆ ಖಾಸಗಿ ಜಾಗದಲ್ಲಿ ಜಾಹಿರಾತು ಹಾಕಿದ್ರೆ ಅದಕ್ಕೆ ಟ್ಯಾಕ್ಸ್ ಹಾಕ್ತೀವಿ. ಲಾಭಕ್ಕಾಗಿ ಅವರು ಜಾಹೀರಾತು ಹಾಕುವ ಕಾರಣ ಅವರು ಸಣ್ಣ ಪ್ರಮಾಣದ ತೆರಿಗೆ ಕಟ್ಟಬೇಕು. ಖಾಸಗಿ ಕಟ್ಟಡಗಳ ಮಾಲೀಕರಿಗೆ ನಾವು ಟ್ಯಾಕ್ಸ್ ಹಾಕಲ್ಲ. ಬದಲಾಗಿ ತೆರಿಗೆ ನೀಡಬೇಕಿರೋದು ಕಂಪನಿಗಳು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ರೀತಿಯ ತೆರಿಗೆ ಹೊಸದೇನಲ್ಲ. ಹಿಂದೆಯೂ ಇತ್ತು, ಅದಕ್ಕೆ ಈಗ ತಿದ್ದುಪಡಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಿಸಿ ಶೇಖರ್ ಜೊತೆ ಕೈ ಜೋಡಿಸಿದ ‘ಲ್ಯಾಂಡ್‌ಲಾರ್ಡ್’ ನಿರ್ಮಾಕರ ಕೆವಿ ಸತ್ಯಪ್ರಕಾಶ್

ಯುಗಾದಿ ಎಂದರೆ ಹೊಸ ವರ್ಷ. ಆ ಪ್ರಯುಕ್ತ ಚಿತ್ರರಂಗದಲ್ಲಿ (Kannada Film Industry) ಕೂಡ ಹೊಸ ಉತ್ಸಾಹ ಮೂಡುತ್ತಿದೆ. ಹೊಸ ವರ್ಷಕ್ಕೆ ಅನೇಕ ಹೊಸ ಸಿನಿಮಾಗಳ ಅನೌನ್ಸ್‌ ಆಗುತ್ತಿವೆ. ಯುಗಾದಿ ಸಂಭ್ರಮದಲ್ಲಿ ನಿರ್ದೇಶಕ ಪಿಸಿ ಶೇಖರ್‌ (PC Shekar) ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ‘ರಾಗ’, ‘ರೊಮಿಯೋ’ ಮುಂತಾದ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಪಿಸಿ ಶೇಖರ್ ಈಗ ತಮ್ಮ ಹೊಸ ಸಿನಿಮಾಗೆ ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಈ ಬಾರಿ ಪಿಸಿ ಶೇಖರ್ ಜೊತೆ ‘ಸಾರಥಿ’, ‘ಲ್ಯಾಂಡ್‌ಲಾರ್ಡ್’ ಖ್ಯಾತಿಯ ನಿರ್ಮಾಪಕ ಕೆವಿ ಸತ್ಯಪ್ರಕಾಶ್ (KV Sathyaprakash) ಅವರು ಕೈ ಜೋಡಿಸಿದ್ದಾರೆ.

ಪಿಸಿ ಶೇಖರ್ ಮತ್ತು ಕೆವಿ ಸತ್ಯಪ್ರಕಾಶ್ ಅವರು ಒಂದಾಗುತ್ತಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ಈ ಚಿತ್ರಕ್ಕೆ ಎಲ್ಲ ತಯಾರಿ ಮುಗಿದಿದೆ. ಇನ್ನೇನು ಸಿನಿಮಾ ಸೆಟ್ಟೇರುವುಷ್ಟೇ ಬಾಕಿ ಇದೆ. ಸದ್ಯ ‘ಮಹಾನ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಇರುವ ಪಿಸಿ ಶೇಖರ್ ಅವರು ಆ ಸಿನಿಮಾದ ಬಿಡುಗಡೆಗೂ ಮೊದಲೇ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ.

ಈ ಚಿತ್ರವು ದೊಡ್ಡ ಮಟ್ಟದಲ್ಲಿ ತಯಾರಾಗಲಿದೆ ಎಂದು ನಿರ್ದೇಶಕ ಪಿಸಿ ಶೇಖರ್ ಹೇಳಿದ್ದಾರೆ. ‘ಸಾರಥಿ, ಲ್ಯಾಂಡ್‌ಲಾರ್ಡ್ ರೀತಿಯ ದೊಡ್ಡ ಸಿನಿಮಾಗಳನ್ನು ಮಾಡಿರುವ ನಿರ್ಮಾಪಕರು ನನಗೆ ಅವಕಾಶ ಕೊಟ್ಟಿದ್ದು ಬಹಳ ಖುಷಿಯಾಗುತ್ತಿದೆ. ಸದ್ಯದಲ್ಲೇ ಸಿನಿಮಾದ ಟೈಟಲ್ ಮತ್ತು ಪಾತ್ರವರ್ಗದ ಬಗ್ಗೆ ಮಾಹಿತಿ ನೀಡುತ್ತೇವೆ’ ಎಂದು ಪಿಸಿ ಶೇಖರ್ ಅವರು ಹೇಳಿದ್ದಾರೆ.

ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಹಾಗೂ ನಿರ್ದೇಶಕ ಪಿಸಿ ಶೇಖರ್ ಅವರ ಗೆಳೆಯ ನಟ-ನಿರ್ಮಾಪಕ ಮಿತ್ರ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪಿಸಿ ಶೇಖರ್ ನಿರ್ದೇಶನ ಮಾಡಿದ್ದ ‘ರಾಗ’ ಸಿನಿಮಾದಲ್ಲಿ ಮಿತ್ರ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದರು. ಆದರೆ ಈ ಹೊಸ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕ್ಯಾಮರಾ ಹಿಂದೆ ಕೆಲಸ ಮಾಡುತ್ತಿರುವುದು ವಿಶೇಷ.

ಇದನ್ನೂ ಓದಿ: ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

‘ರಾಗ’ ಸಿನಿಮಾದಲ್ಲಿ ನಟ ಮಿತ್ರ ಮತ್ತು ಪಿಸಿ ಶೇಖರ್ ಅವರ ಕಾಂಬಿನೇಷನ್ ತುಂಬ ಚೆನ್ನಾಗಿ ವರ್ಕೌಟ್ ಆಗಿತ್ತು. ಹಾಗಾಗಿ ಇದೀಗ ಮತ್ತೆ ಒಟ್ಟಿಗೆ ಸೇರಿರುವುದರಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ಸಿನಿಮಾ ತಂಡ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯುಗಾದಿಯ ನಂತರ ಈ ರಾಶಿಯ ಯೋಗ, ಭಾಗ್ಯ, ಭೋಗ ನಾಶ!: ಆದರೆ ಗುರು ಬಲಕ್ಕಾಗಿ ಈ ಒಂದು ಕೆಲಸ ಮಾಡಬೇಕು

ಹೊಸ ವರ್ಷದ ಆರಂಭದಲ್ಲಿ ಅಂದರೆ ಸೂರ್ಯೋದಯದ ಕಾಲದಲ್ಲಿ ಗ್ರಹಗತಿಗಳು ಹೇಗಿರುತ್ತವೋ ಹಾಗೆ ವರ್ಷಪೂರ್ತಿ ಅದರ ಪ್ರಭಾವ ಇರುತ್ತದೆ. ಇಂದು ಮುಖ್ಯವಾಗಿ ಮೀನ ರಾಶಿಯಲ್ಲಿ ಸೂರ್ಯ, ಚಂದ್ರ, ಶುಕ್ರ ಮತ್ತು ಶನಿ ಸೇರಿರುವ ಅಸಾಧಾರಣ ಗ್ರಹಗತಿಗಳನ್ನು ಆಧರಿಸಿದೆ. ಗುರುವಾರವಾದ ಕಾರಣ ಗುರುವು ಲಗ್ನದಿಂದ ಚತುರ್ಥ ಸ್ಥಾನದಲ್ಲಿ ಇದ್ದಾನೆ.

​ಈ ವರ್ಷವು ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ಮತ್ತು ಹೊಸ ಆರಂಭಗಳನ್ನು ತರುವ ಸೂಚನೆ ನೀಡುತ್ತಿದೆ. ಲಗ್ನ ಮತ್ತು ರಾಶಿ ಎರಡೂ ಮೀನವಾಗಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ದೈವಿಕ ಚಿಂತನೆ ಮತ್ತು ತಾಳ್ಮೆ ಹೆಚ್ಚಾಗಿ ಕಂಡುಬರುತ್ತದೆ.

ವೃತ್ತಿ ಮತ್ತು ಆರ್ಥಿಕ ಸ್ಥಿತಿ :

​ದಶಮ ಸ್ಥಾನದ ಅಧಿಪತಿ ಗುರುವು ಮಿಥುನ ರಾಶಿಯಲ್ಲಿದ್ದು, ಚತುರ್ಥ ಸ್ಥಾನದಲ್ಲಿರುವುದರಿಂದ ವೃತ್ತಿ ಜೀವನದಲ್ಲಿ ಸ್ಥಿರತೆ ಇರುತ್ತದೆ.

ಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳು ಅಂದರೆ ಬೋಧನೆ, ಸಲಹೆಗಾರಿಕೆ ಅಥವಾ ಬರವಣಿಗೆ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಪ್ರಗತಿ ಇದೆ. ಕುಂಭ ರಾಶಿಯಲ್ಲಿ ಬುಧ, ರಾಹು ಮತ್ತು ಮಂಗಳ ಇರುವುದರಿಂದ ಆರ್ಥಿಕ ವಿಷಯದಲ್ಲಿ ಮಿಶ್ರ ಫಲಗಳಿವೆ. ಅನಿರೀಕ್ಷಿತ ಖರ್ಚುಗಳು ಬರಬಹುದು, ಆದ್ದರಿಂದ ಹೂಡಿಕೆ ಮಾಡುವಾಗ ಎಚ್ಚರಿಕೆ ಅಗತ್ಯ.

ಕೌಟುಂಬಿಕ ಮತ್ತು ಸಾಮಾಜಿಕ ಜೀವನ :

​ಗುರುವು ಸುಖ ಸ್ಥಾನದಲ್ಲಿ ಇರುವುದು ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ತರುತ್ತದೆ. ಹೊಸ ಮನೆ ಖರೀದಿಸುವ ಅಥವಾ ಮನೆಯನ್ನು ನವೀಕರಿಸುವ ಯೋಗವಿದೆ. ಸಪ್ತಮ ಸ್ಥಾನದಲ್ಲಿ ಕೇತು ಇರುವುದರಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಅನಗತ್ಯ ವಾದಗಳನ್ನು ತಪ್ಪಿಸುವುದು ಒಳಿತು.

ಆರೋಗ್ಯ ಮತ್ತು ಮಾನಸಿಕ ಸ್ಥಿತಿ :

​ಲಗ್ನದಲ್ಲೇ ಶನಿ ಮತ್ತು ಚಂದ್ರನ ಯುತಿ ವಿಷ ಯೋಗದ ಪ್ರಭಾವ ಇರುವುದರಿಂದ ಮಾನಸಿಕವಾಗಿ ಸ್ವಲ್ಪ ಒತ್ತಡ ಅಥವಾ ಆತಂಕ ಕಾಡಬಹುದು. ಕಾಲು ನೋವು ಅಥವಾ ನಿದ್ರಾಹೀನತೆಯಂತಹ ಸಮಸ್ಯೆಗಳ ಬಗ್ಗೆ ಗಮನವಿರಲಿ.

​ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ :

​ವಿದ್ಯಾಭ್ಯಾಸಕ್ಕೆ ಈ ವರ್ಷ ಬಹಳ ಪೂರಕವಾಗಿದೆ. ಬುಧನ ಸ್ಥಾನವು ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚಿನ ಶ್ರಮ ಬೇಕಾಗುತ್ತದೆ.

​ಗುರು ಬಲವು ನಿಮಗೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಯಾವುದೇ ದೊಡ್ಡ ಸಂಕಷ್ಟ ಬಂದರೂ ಅದರಿಂದ ಪಾರಾಗುವ ಹಾದಿ ಸಿಗುತ್ತದೆ. ಲಗ್ನದಲ್ಲಿ ಸೂರ್ಯ ಮತ್ತು ಶನಿ ಒಟ್ಟಿಗೆ ಇರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಅಥವಾ ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ.

ಹನುಮಾನ್ ಚಾಲೀಸಾ ಪಠಿಸುವುದು ಮತ್ತು ಗುರುವಾರ ದಕ್ಷಿಣಾಮೂರ್ತಿಯ ಆರಾಧನೆ ಮಾಡುವುದು, ಗುರು ಚರಿತ್ರೆಯ ಪಠಣ, ಗುರುಸನ್ನಿಧಿ, ಗುರುದರ್ಶನ ಇವೆನ್ನಲ್ಲ ಆರಂಭದಿಂದಲೇ ಮಾಡಿ. ನಿಮಗೆ ಹೆಚ್ಚಿನ ಯಶಸ್ಸನ್ನು ನೀಡುತ್ತದೆ. ನಿಮ್ಮ ಸಮಸ್ಯೆಗಳಿಗೆ ಗುರುಮುಖೇನ ಪರಿಹಾರ ಸಿಗಲಿದೆ. ಮಹಾವಿಷ್ಣುವಿನ ಆರಾಧನೆಯಿಂದ ಶ್ರೇಯಸ್ಸು.

ಒಟ್ಟಿನಲ್ಲಿ ಎಲ್ಲರೂ ಸಂರತೋಷದಿಂದ ಪರರಿಗೂ ಸಂತೋಷವನ್ನು ನೀಡುತ್ತ ಕಳೆಯಿರಿ. ಶುಭಂ ಭವತು ಸರ್ವದಾ.

– ಲೋಹಿತ ಹೆಬ್ಬಾರ್

Source link

ದೇವೇಗೌಡರು ನಮ್ಮನ್ನು ಪ್ರೇಮಿಸಿದರು, ಮೋದಿ ಜತೆ ಮದುವೆಯಾದರು! ಮಲ್ಲಿಕಾರ್ಜುನ ಖರ್ಗೆ ಹೀಗಂದಾಗ ಮೋದಿ ರಿಯಾಕ್ಷನ್ ಹೇಗಿತ್ತು ನೋಡಿ

ನವದೆಹಲಿ, ಮಾರ್ಚ್​ 18: ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ರಾಜ್ಯಸಭೆಯಲ್ಲಿ (Rajya Sabha) ಬುಧವಾರ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭ ಹಾಸ್ಯಮಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ (HD Deve Gowda) ಶುಭ ಹಾರೈಸಿದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಜೊತೆಗಿನ ಅವರ ಸಂಬಂಧದ ಬಗ್ಗೆ ತಿಳಿಸಿ ಹಾಸ್ಯ, ವ್ಯಂಗ್ಯಭರಿತ ಮಾತನ್ನಾಡಿದ್ದು, ಸದನವನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಎನ್ಸಿಪಿ ಸಂಸ್ಥಾಪಕ ಶರದ್ ಪವಾರ್ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು ಪ್ರಧಾನಿಯಾಗಿದ್ದರು ಮತ್ತು ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

‘ನಾನು ಅವರನ್ನು (ದೇವೇಗೌಡ) 54 ವರ್ಷಗಳಿಂದ ಬಲ್ಲೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಆ ನಂತರ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಅವರು ನಮ್ಮನ್ನು ಪ್ರೀತಿಸಿದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಾಹವಾದರು’ ಎಂದು ಮಲ್ಲಿಕಾರ್ಜು ಖರ್ಗೆ ಹೇಳಿದರು. ಆಗ ಸದನದಾದ್ಯಂತ ನಗು ಮೂಡಿತು. ರಾಜ್ಯಸಭೆಯಲ್ಲಿ ಹಾಜರಿದ್ದ ಪ್ರಧಾನಿ ಮೋದಿಯೂ ನಗುತ್ತಿರುವುದು ಕಂಡುಬಂದಿತು.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಮತ್ತು ಮೋದಿ ನಗುತ್ತಿರುವ ವಿಡಿಯೋ

ರಾಜಕೀಯದಲ್ಲಿರುವವರು, ಸಾರ್ವಜನಿಕ ಜೀವನದಲ್ಲಿ ಇರುವವರು ದೇಶ ಸೇವೆ ಮಾಡುವ ಉತ್ಸಾಹದಿಂದ ಸುಸ್ತಾಗುವುದಿಲ್ಲ ಅಥವಾ ನಿವೃತ್ತರಾಗುವುದಿಲ್ಲ ಎಂದು ಖರ್ಗೆ ಹೇಳಿದರು.

ಪ್ರಧಾನಿ ಮೋದಿ ಹೇಳಿದ್ದೇನು?

ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ , ನಿವೃತ್ತಿ ಹೊಂದುತ್ತಿರುವ ರಾಜ್ಯಸಭಾ ಸಂಸದರಿಗೆ ಅವರು ನೀಡಿದ ಕೊಡುಗೆಗೆಳಿಗಾಗಿ ಧನ್ಯವಾದ ಅರ್ಪಿಸಿದರು. ಅವರ ಭವಿಷ್ಯದ ರಾಜಕೀಯ ಪ್ರಯತ್ನಗಳಿಗೆ ಶುಭ ಹಾರೈಸಿದರು. ಮೋದಿ ಸಹ ‘ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ’ ಎಂದು ಒತ್ತಿ ಹೇಳಿದರು.

ಸದನದಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತವೆ ಮತ್ತು ಪ್ರತಿಯೊಬ್ಬ ಸದಸ್ಯರು ಅವುಗಳಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ, ಪಕ್ಷದ ಗಡಿಯನ್ನು ಮೀರಿ ಗೌರವದ ಸಾಮಾನ್ಯ ಪ್ರಜ್ಞೆ ನಮ್ಮಲ್ಲಿರುತ್ತದೆ. ಅಧಿಕಾರಾವಧಿಯ ನಂತರ ಸದನವನ್ನು ತೊರೆಯುತ್ತಿರುವ ನಾಯಕರಿಗೆ, ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಭವಿಷ್ಯವು ನಿಮಗಾಗಿ ಕಾಯುತ್ತಿದೆ. ನಿಮ್ಮ ಅನುಭವ ಮತ್ತು ಕೊಡುಗೆಯನ್ನು ಯಾವಾಗಲೂ ಸ್ಮರಣೀಯವಾಗಿಡಲಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: “ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ”: ನಿವೃತ್ತಿ ಹೊಂದುತ್ತಿರುವ ಸಂಸದರಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಹೊಸದಾಗಿ ಆಯ್ಕೆಯಾದ ಸಂಸದರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸದೀಯ ಕೆಲಸದಲ್ಲಿ ಕಳೆದಿರುವ ಹೆಚ್‌ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್ ಅವರಂತಹ ಅನುಭವಿಗಳಿಂದ ಕಲಿಯಬೇಕೆಂದು ಮೋದಿ ಸಲಹೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತರ್ಜಾತಿ ವಿವಾಹವಾಗುವವರಿಗೆ ಶುಭ ಸುದ್ದಿ: ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ

ಬೆಂಗಳೂರು, ಮಾರ್ಚ್​​ 18: ಅಂತರ್ಜಾತಿ ವಿವಾಹ ಸಂದರ್ಭ ಕುಟುಂಬಸ್ಥರಿಂದ ತೀವ್ರ ಆಕ್ಷೇಪ, ಬಹಿಷ್ಕಾರ ಸೇರಿ ಕೆಲ ಪ್ರಕರಣಗಳಲ್ಲಿ ಕೊಲೆಯೂ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಅಂತರ್ಜಾತಿ ವಿವಾಹಿತರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಕಾಯ್ದೆ ತರಲು ಮುಂದಾಗಿದೆ. ಈ ಸಂಬಂಧ ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ವಿಧೇಯಕ ಮಂಡನೆ ಮಾಡಲಾಗಿದ್ದು, ಜಾತಿ ಶ್ರೇಣೀಕರಣ, ಸಂಪ್ರದಾಯಗಳ ಹೆಸರಿನಲ್ಲಿ ಹಿಂಸೆ ಮತ್ತು ಕಿರುಕುಳ‌ ತಪ್ಪಿಸಲು ಮುಂದಾಗಿದೆ. ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದಿದ್ದೇ ಆದರೆ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಮಾನ್ಯತೆ ಸಿಗಲಿದೆ.

ವಿಧೇಯಕ ಏನು ಹೇಳುತ್ತೆ?

  • ಅಂತರ್ಜಾತಿ ಮದುವೆಯಾದ್ರೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ಹಾಕುವಂತಿಲ್ಲ
  • ಸಂಬಂಧಿಸಿದ ಜೋಡಿ ವಾಸಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸುವುದು ಅವರ ಕುಟುಂಬವನ್ನು ಹೊರಹಾಕುವುದು ಕಾನೂನು‌ಬಾಹಿರ
  • ಜಾತಿ, ಇಲ್ಲವೆ ಸಮುದಾಯದಲ್ಲಿ ಬಲವಂತವಾಗಿ ಸಂಪ್ರದಾಯ ಹೇರುವಂತಿಲ್ಲ
  • ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ
  • ಅಂತರ್ಜಾತಿ ವಿವಾಹಿತರಿಂದ ಕುಟುಂಬದ ಆಸ್ತಿ, ದಂಡಹಾಕುವಂತಿಲ್ಲ
  • ಕೆಲಸಕ್ಕೆ ಅಡ್ಡಿ, ಕೆಲಸ ಕೊಡಲು ಹಿಂದೇಟು ಹಾಕುವುದು ಅಪರಾಧ
  • ಅಂರ್ಜಾತಿ ವಿವಾಹವಾಗಲು ಅವರ ಕುಟುಂಬಸ್ಥರು ವಿರೋಧಿಸುವಂತಿಲ್ಲ
  • ಇಬ್ಬರು ವಯಸ್ಕರ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿಲ್ಲ
  • ವಿವಾಹಿತ ಜೋಡಿಗೆ ಹಿಂಸೆ, ಮಾನಸಿಕ ನಿಂದನೆ ಕಾನೂನು‌ಬಾಹಿರ
  • ದಂಪತಿಯನ್ನು ಬಲವಂತವಾಗಿ ದೂರ ಇಡುವ ಪ್ರಯತ್ನ ಸರಿಯಲ್ಲ. ಮದುವೆಯಾದ ಜೋಡಿಯನ್ನ ಕಿಡ್ನ್ಯಾಪ್​ ಮಾಡುವುದು,
    ಆರ್ಥಿಕ‌ ಬಹಿಷ್ಕಾರ ಹಾಕುವುದು ಕಾನೂನು‌ಬಾಹಿರ
  • ದಂಪತಿಗೆ ಸಹಕಾರ ಕೊಟ್ಟವರ ಬಹಿಷ್ಕಾರ ಮಾಡುವುದು ಸರಿಯಲ್ಲ
  • ಬ್ಯಾಂಕ್ ಖಾತೆ ಸ್ಥಗಿತ, ಉದ್ಯೋಗ ಕೊಟ್ಟವರ ಮೇಲೆ ಒತ್ತಡ ಅಪರಾಧ
  • ಲೈಂಗಿಕ‌ ಹಿಂಸೆ ನೀಡುವುದು, ಕಿರುಕುಳ ನೀಡುವುದು ಅಪರಾಧ
  • ಬಲವಂತದ ಗರ್ಭಪಾತ ಗರ್ಭಸ್ರಾವಕ್ಕೆ ಒತ್ತಡ ಹೇರುವುದು ಅಪರಾಧ
  • ಅಂತರ್ಜಾತಿ ವಿವಾಹವಾದವರ ಬೇರ್ಪಡಿಸಿ ಬೇರೆ ಮದುವೆ ಮಾಡಿಸುವಂತಿಲ್ಲ. ಒಂದು ವೇಳೆ ಮರ್ಯಾದಾ ಹತ್ಯೆ ಮಾಡಿದರೆ 5 ವರ್ಷ ಜೈಲು, ದಂಡ. ದಂಪತಿಯನ್ನು ಗಾಯಗೊಳಿಸಿದ್ರೂ 3 ಲಕ್ಷ ದಂಡ, 3 ವರ್ಷ ಜೈಲು
  • ದಂಪತಿಯನ್ನು ಬೆದರಿಸಿದರೆ 5 ವರ್ಷ ಶಿಕ್ಷೆ, 2 ಲಕ್ಷ ರೂಪಾಯಿ ದಂಡ. ನಿರಂತರ ಬೆದರಿಕೆಗೆ 7 ವರ್ಷಗಳವರೆಗೆ ಶಿಕ್ಷೆ ವಿಸ್ತರಣೆ ಮಾಡಬಹುದು
  • ವಿವಾಹಿತ ಜೋಡಿ ವಿಚಾರದಲ್ಲಿ ಸಾಕ್ಷಿಗಳ ಗುರುತು, ವಿಳಾಸ ನೀಡುವಂತಿಲ್ಲ

ಇದನ್ನೂ ಓದಿ: ದೀಢೀರ್​​ ಸಿಎಂ ಭೇಟಿಯಾಗಿದ್ದೇಕೆ ಕಾಂಗ್ರೆಸ್​​ನ ಹಿರಿಯ ಶಾಸಕರ ತಂಡ?

ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಅಂತಹ ಜೋಡಿಗಳ ರಕ್ಷಣೆಗಾಗಿ ಹಲವು ಪ್ರಮುಖ ವಿಚಾರಗಳನ್ನು ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಂತಹ ವಿಚಾರಗಳನ್ನು ಇದು ಒಳಗೊಂಡಿರುವ ಕಾರಣ, ಕಾಯ್ದೆಯಾದಲ್ಲಿ ಅನ್ಯ ಜಾತಿ ವಿವಾಹವಾಗುವ ಜೋಡಿಗಳಿಗೆ ಕಾನೂನಿನ ಬಲವೂ ಸಿಕ್ಕಂತಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ. 

Source link

ಐಪಿಎಲ್ ಆರಂಭಕ್ಕೂ ಮುನ್ನವೇ ‘ಕಪ್ ಗೆಲ್ಲುತ್ತೇವೆ’ ಎಂದು ಮೆಸೇಜ್ ಮಾಡಿದ್ದ ಕೊಹ್ಲಿ!

ಇಂಡಿಯನ್ ಪ್ರೀಮಿಯರ್ ಲೀಗ್​​ ಸೀಸನ್-18ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿದ್ದರು. ಆದರೆ ಈ ಕಾಯುವಿಕೆ ಈ ವರ್ಷವೇ ಅಂತ್ಯವಾಗಲಿದೆ ಎಂಬುದು ವಿರಾಟ್ ಕೊಹ್ಲಿಗೆ ಮೊದಲೇ ಗೊತ್ತಿತ್ತು. ಏಕೆಂದರೆ ಐಪಿಎಲ್​ನ ಹರಾಜಿನ ಬಳಿಕ ಆರ್​ಸಿಬಿ ತಂಡದ ಸಮತೋಲನವನ್ನು ನೋಡಿದ್ದ ಕೊಹ್ಲಿ ಅಂತಹದೊಂದು ವಿಶ್ವಾಸ ಹೊಂದಿದ್ದರು. ಇದೇ ವಿಶ್ವಾಸದೊಂದಿಗೆ ತನ್ನ ಗೆಳೆಯ ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ಗೆ ವಿಶೇಷ ಸಂದೇಶವನ್ನೂ ಸಹ ರವಾನಿಸಿದ್ದರು.

2025ರ ಮೆಗಾ ಹರಾಜಿನ ನಂತರ, ಆರ್​ಸಿಬಿ ತಂಡದ ಸಮತೋಲನವನ್ನು ನೋಡಿ ವಿರಾಟ್ ಕೊಹ್ಲಿ ನನಗೆ ಮೆಸೇಜ್ ಕಳಿಸಿದ್ದರು. “ಬಿಸ್ಕೆಟ್, ನಾವು ಈ ವರ್ಷ ಕಪ್ ಗೆಲ್ಲಲಿದ್ದೇವೆ. ನಾವು ಫೈನಲ್ ತಲುಪಿದಾಗ ನೀನು ಅಲ್ಲಿರಬೇಕೆಂದು ನಾನು ಬಯಸುತ್ತೇನೆ.” ಎಂದು ಸಂದೇಶ ರವಾನಿಸಿದ್ದರು.

ಅವರ ಈ ನಂಬಿಕೆ ನಿಜವಾಗಿದೆ. 17 ವರ್ಷಗಳಲ್ಲಿ ಸಾಧ್ಯವಾಗದೇ ಇರುವುದನ್ನು ಆರ್​ಸಿಬಿ 18ನೇ ಸೀಸನ್​ನಲ್ಲಿ ಸಾಧಿಸಿ ತೋರಿಸಿದೆ. ಅತ್ತ ಫೈನಲ್​ ಪಂದ್ಯದ ವೇಳೆ ನಾನು ಸಹ ಅಲ್ಲಿದದ್ದು ಖುಷಿಯ ವಿಚಾರ. ಅಲ್ಲದೆ ವಿರಾಟ್ ಕೊಹ್ಲಿಯ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾದೆ.

ಈ ವೇಳೆ ವಿರಾಟ್ ಕೊಹ್ಲಿ, “ಇದು ನಮಗೆ ಎಷ್ಟು ಸೇರುತ್ತದೆಯೋ ಅಷ್ಟೇ ನಿಮಗೂ (ಡಿವಿಲಿಯರ್ಸ್‌ಗೆ) ಸೇರುತ್ತದೆ” ಎಂದಿದ್ದರು. ನಿಜಕ್ಕೂ ಅವೆಲ್ಲವೂ ಅತ್ಯಮೂಲ್ಯ ಕ್ಷಣಗಳಾಗಿದ್ದವು ಎಂದು ಎಬಿ ಡಿವಿಲಿಯರ್ಸ್ ಆರ್​ಸಿಬಿ ಫೈನಲ್ ಗೆಲುವನ್ನು ಸ್ಮರಿಸಿದ್ದಾರೆ.

ಫೈನಲ್ ಪಂದ್ಯದ ಮುಖ್ಯಾಂಶಗಳು:

ಜೂನ್ 3, 2025 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 190 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 184 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್​ಸಿಬಿ ತಂಡ 6 ರನ್​ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಇದೀಗ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಬಾರಿ ಕೂಡ ಈ ಹಿಂದಿನ ತಂಡವನ್ನೇ ಉಳಿಸಿಕೊಂಡಿರುವ ಆರ್​ಸಿಬಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ಮೂರು ತಂಡಗಳಿಗೆ ಆಸ್ಟ್ರೇಲಿಯನ್ ‘ಕ್ಯಾಪ್ಟನ್ಸ್’

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

 

Source link