All posts by nagaraj11081993

ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ರೀಲ್ಸ್​​ ಹುಚ್ಚಿಗೆ ತಂದೆಯನ್ನೇ ಚೀಲಕ್ಕೆ ತುಂಬಿ ಕೊರಿಯರ್​​ ಮಾಡಲು ಬಂದ ಮಗಳು!

ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ರೀಲ್ಸ್​​ ಹುಚ್ಚಿಗೆ ತಂದೆಯನ್ನೇ ಚೀಲಕ್ಕೆ ತುಂಬಿ ಕೊರಿಯರ್​​ ಮಾಡಲು ಬಂದ ಮಗಳು!

ಬೆಂಗಳೂರು, ಮಾರ್ಚ್​​ 18: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್​​ ಮಾಡಿ ಜನರಿಗೆ ಬುದ್ಧಿ ಹೇಳುವವರ ಸಂಖ್ಯೆ ದೊಡ್ಡದಾಗಿದ್ದು, ಏನೋ ಮಾಡಲು ಹೋಗಿ ಇನ್ನೆನೋ ಆಗಿ ಪೇಚಿಗೆ ಸಿಲುಕುವ ಘಟನೆಗಳೂ ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇಂತಹುದದ್ದೇ ಒಂದು ಪ್ರಸಂಗ ಬೆಂಗಳೂರಲ್ಲಿಯೂ ನಡೆದಿದೆ. ರೀಲ್ಸ್​​ ಮಾಡುವ ಚಟಕ್ಕೆ ವೃದ್ಧ ವ್ಯಕ್ತಿಯನ್ನು ಚೀಲದಲ್ಲಿ ಹಾಕಿ ಕೂರಿಯರ್ ಮಾಡಲು ಕುಟುಂಬವೊಂದು ಯತ್ನಿಸಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಬೇಕೆಂಬ ಹುಚ್ಚು ಈ ಮಟ್ಟಕ್ಕೂ ಹೋಗಬಹುದಾ ಎಂಬ ಪ್ರಶ್ನೆಯನ್ನೀಗ ಈ ಘಟನೆ ಹುಟ್ಟುಹಾಕಿದೆ.

ಘಟನೆ ಏನು?

ಮಹಿಳೆ, ಆಕೆಯ ಪತಿ, ಅತ್ತೆ ಹಾಗೂ ಮಾವ ಸೇರಿ ಐವರು ಮಂಗಳವಾರ ವ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೂರಿಯರ್ ಕಚೇರಿಗೆ ದೊಡ್ಡ ಪ್ಯಾಕೇಜ್‌ ಅನ್ನು ಹೊತ್ತು ತಂದಿದ್ದಾರೆ. ಇಷ್ಟು ದೊಡ್ಡ ಚೀಲ ನೋಡಿ ಒಳಗೆ ಏನಿದೆ ಎಂದು ಸಿಬ್ಬಂದಿ ಪ್ರಶ್ನಿಸಿದ್ದು, ಈ ವೇಳೆ ಕುಟುಂಬದವರಿಂದ ಯಾವುದೇ ಉತ್ತರ ಬಂದಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಪ್ಯಾಕೇಜ್ ಓಪನ್​​ ಮಾಡಿ ನೋಡಿದ್ದಾರೆ. ಆ ವೆಳೆ ಅರೆಕ್ಷಣ ಅವರು ಬೆಚ್ಚಿಬಿದ್ದಿದ್ದು, ವೃದ್ಧ ವ್ಯಕ್ತಿಯೋರ್ವರು ಚೀಲದಲ್ಲಿ ಇರೋದು ಗೊತ್ತಾಗಿದೆ. ಆತ ಕೊರಿಯರ್​​ ಮಾಡಲು ಬಂದಿದ್ದ ಕುಟುಂಬದ ಪೈಕಿ ಮಹಿಳೆಯ ತಂದೆ ಎಂಬುದು ತಿಳಿದುಬಂದಿದೆ. ಅವರು ಚೀಲದಲ್ಲಿ ಉಸಿರಾಡಲೂ ಕಷ್ಟ ಪಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ; 2.34 ಕೋಟಿ ರೂ. ಹಣ ಸೀಜ್

ಹೀಗಿದ್ದರೂ ಕುಟುಂಬದವರು ಮಾತ್ರ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಯುಗಾದಿ ಮತ್ತು ರಂಜಾನ್​​ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳು ಸಿಗದ ಸಮಸ್ಯೆಯನ್ನು ತೋರಿಸಲು, ಮನುಷ್ಯನನ್ನೇ ಕೂರಿಯರ್ ಮಾಡುವ ಪರಿಸ್ಥಿತಿ ಬಂದಿದೆ ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​ ಮಾಡಲು ಈ ರೀತಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇವರ ಹುಚ್ಚಾಟದ ಬಗ್ಗೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರೂ, ಇಷ್ಟು ದೂರ ಬಂದು ಇಷ್ಟು ಕಷ್ಟಪಟ್ಟಿದ್ದೇವೆ. ದಯವಿಟ್ಟು ಪಾರ್ಸೆಲ್ ತೆಗೆದುಕೊಳ್ಳಿ ಎಂದು ಮತ್ತೆ ಮೊಂಡುತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಖಾಕಿ, ಕುಟುಂಬಸ್ಥರನ್ನು ಠಾಣೆಗೆ ಕರೆದೊಯ್ದಿದೆ. ತಮ್ಮದು ತಪ್ಪಾಯ್ತು ಎಂದು ಕುಟುಂಬಸ್ಥರು ಕ್ಷಮೆಯಾಚನೆ ಮಾಡಿದ ವಿಡಿಯೋ ದಾಖಲಿಸಿಕೊಂಡ ಪೊಲೀಸರು, ಗಂಭೀರ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Vaibhav Suryavanshi: ಕ್ರಿಸ್​ ಗೇಲ್​ನ ಆ ಒಂದು ದಾಖಲೆಯನ್ನು ಮುರಿಯಲೇಬೇಕು..!

Source link

ಫ್ಲೈಟ್​ನಲ್ಲಿ ಶುಲ್ಕರಹಿತ ಸೀಟುಗಳು ಕನಿಷ್ಠ ಶೇ. 60 ಇರಬೇಕು; ಸರ್ಕಾರದಿಂದ ಹೊಸ ನಿಯಮಗಳು

ನವದೆಹಲಿ, ಮಾರ್ಚ್ 18: ಜನಸಾಮಾನ್ಯರಿಗೆ ವಿಮಾನ ಪ್ರಯಾಣ ಮತ್ತಷ್ಟು ಸುಲಭಗೊಳ್ಳಲಾಗುವಂತೆ ಸರ್ಕಾರ ಕೆಲ ಗಮನಾರ್ಹ ಕ್ರಮಗಳನ್ನು ಕೈಗೊಂಡಿದೆ. ಫ್ಲೈಟ್​ನ ಶೇ. 60ಕ್ಕೂ ಹೆಚ್ಚು ಸೀಟುಗಳಿಗೆ ಶುಲ್ಕ ಉಚಿತಗೊಳಿಸಿರುವುದು ಸೇರಿದಂತೆ ವಿವಿಧ ನಿಯಮಗಳನ್ನು ಕೇಂದ್ರ ನಾಗರಿಕ ವಿಮಾನ ಸಚಿವಾಲಯ (civil aviation ministry) ಪ್ರಕಟಿಸಿದೆ. ಸಚಿವಾಲಯ ಬುಧವಾರ ಪತ್ರಿಕಾ ಹೇಳಿಕೆ ಮೂಲಕ ಈ ಹೊಸ ನಿಯಮಗಳನ್ನು ಬಹಿರಂಗಪಡಿಸಿದೆ.

ಶೇ. 60ಕ್ಕೂ ಹೆಚ್ಚು ಸೀಟುಗಳಿಗೆ ಶುಲ್ಕ ಇರಲ್ಲ…

ಫ್ಲೈಟ್​ನಲ್ಲಿ ನೀವು ಟಿಕೆಟ್ ಬುಕ್ ಮಾಡಿದಾಗ ಟಿಕೆಟ್ ದರದ ಜೊತೆಗೆ ಸೀಟುಗಳಿಗೆ ಪ್ರತ್ಯೇಕ ಶುಲ್ಕ ನೀಡಬೇಕು. ಅಂದರೆ, ವಿಂಡೋ ಸೀಟುಗಳು, ಎಕ್ಸಿಟ್ ಬಳಿಯ ಸೀಟುಗಳು, ಕಾಲು ಚಾಚಲು ಹೆಚ್ಚು ಅವಕಾಶ ಕೊಡುವ ಸೀಟುಗಳು ಇತ್ಯಾದಿಗಳಿಗೆ ಬೇಡಿಕೆ ಇರುವುದರಿಂದ ಹೆಚ್ಚಿನ ಶುಲ್ಕ ಇರುತ್ತದೆ. ಪ್ರಸಕ್ತ ಫ್ಲೈಟ್​ನ ಶೇ. 20ರಷ್ಟು ಸೀಟುಗಳನ್ನು ಶುಲ್ಕರಹಿತವಾಗಿ ಬುಕ್ ಮಾಡಬಹುದು. ಹೊಸ ನಿಯಮಗಳ ಪ್ರಕಾರ, ಈಗ ಕನಿಷ್ಠ ಶೇ. 60ರಷ್ಟು ಸೀಟುಗಳು ಶುಲ್ಕರಹಿತವಾಗಿರಬೇಕು.

ಇದನ್ನೂ ಓದಿ: ಭಯೋತ್ಪಾದನೆ ಆರೋಪದಡಿ ಭಾರತದಲ್ಲಿ 6 ಉಕ್ರೇನಿಯನ್ನರು, ಓರ್ವ ಅಮೆರಿಕನ್ ಬಂಧನ

ಒಂದೇ ಪಿಎನ್​ಆರ್ ನಂಬರ್ ಇರುವ ಪ್ರಯಾಣಿಕರಿಗೆ ಅಕ್ಕಪಕ್ಕದಲ್ಲೇ ಸೀಟುಗಳು

ಈಗ ಇರುವ ವ್ಯವಸ್ಥೆಯಲ್ಲಿ ಒಂದು ಕುಟುಂಬ ಅಥವಾ ಗುಂಪಿನ ಹಲವು ಜನರಿಗೆ ಒಟ್ಟಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿದಾಗ ಅಕ್ಕಪಕ್ಕದ ಸೀಟುಗಳು, ಹಿಂಬದಿ, ಮುಂಬದಿ ಸಾಲುಗಳು ಸಿಗುತ್ತವೆ ಎಂದು ಖಾತ್ರಿ ಇರುವುದಿಲ್ಲ. ಫ್ಲೈಟ್​ನಲ್ಲಿ ಎಲ್ಲಿ ಬೇಕಾದರೂ ಸೀಟ್ ಅಲಾಟ್ ಆಗಬಹುದು. ಹೊಸ ನಿಯಮದ ಪ್ರಕಾರ ಒಂದೇ ಪಿಎನ್​ಆರ್ (PNR) ಅಡಿಯಲ್ಲಿ ಬುಕಿಂಗ್ ಆಗಿರುವ ವ್ಯಕ್ತಿಗಳಿಗೆ ಅಕ್ಕಪಕ್ಕದ ಸೀಟುಗಳನ್ನೇ ಅಲಾಟ್ ಮಾಡಲು ಆದ್ಯತೆ ಕೊಡಬೇಕೆಂದು ಏರ್ಲೈನ್ಸ್ ಕಂಪನಿಗಳಿಗೆ ಸರ್ಕಾರ ನಿರ್ದೇಶನ ಕೊಟ್ಟಿದೆ.

ಲಗೇಜು ವಿಚಾರದಲ್ಲಿ ಸ್ಪಷ್ಟ ಮಾರ್ಗಸೂಚಿಗಳಿರಲಿ

ವಿಮಾನ ಪ್ರಯಾಣ ಮಾಡುವಾಗ ಯಾವ್ಯಾವ ರೀತಿಯ ವಸ್ತುಗಳನ್ನು, ಲಗೇಜುಗಳನ್ನು ತೆಗೆದುಕೊಂಡು ಹೋಗಬಹುದು, ಎಷ್ಟು ಶುಲ್ಕ ಕಟ್ಟಬಹುದು ಇತ್ಯಾದಿ ಬಗ್ಗೆ ವಿಮಾನ ಸಂಸ್ಥೆಗಳು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಯಾಣಿಕರ ಗಮನಕ್ಕೆ ಬರಬೇಕು. ಇದರಿಂದ ಪ್ರಯಾಣಿಕರಿಗೆ ಅನಿಶ್ಚಿತತೆಯ ಸ್ಥಿತಿ ತಪ್ಪುತ್ತದೆ.

ಇದನ್ನೂ ಓದಿ: ಅಗತ್ಯ ಇದ್ದರೆ ಮಾತ್ರ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡಿ: ಇಂಡಿಯನ್ ಆಯಿಲ್ ಮನವಿ

ನಾಗರಿಕ ವಿಮಾನಯಾನ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳು

  • ಫ್ಲೈಟ್​ನಲ್ಲಿ ಶೇ. 60ಕ್ಕಿಂತ ಹೆಚ್ಚು ಸೀಟುಗಳು ಶುಲ್ಕರಹಿತವಾಗಿರಬೇಕು
  • ಒಂದೇ ಪಿಎನ್​ಆರ್ ಅಡಿಯ ಸೀಟುಗಳು ಒಟ್ಟೊಟ್ಟಿಗೆ ಇರುವಂತಿರಬೇಕು.
  • ವಿಶೇಷ ವಸ್ತು ಮತ್ತು ಸಾಕುಪ್ರಾಣಿಕಗಳನ್ನು ಸಾಗಿಸುವಾಗ ಬ್ಯಾಗೇಜ್ ನಿಯಮಗಳು ಸ್ಪಷ್ಟವಾಗಿರಬೇಕು.
  • ಪ್ರಯಾಣಿಕರ ಹಕ್ಕು ರಕ್ಷಣೆ ವ್ಯವಸ್ಥೆ ಸರಿಯಾಗಿ ಜಾರಿಯಲ್ಲಿರಬೇಕು
  • ಪ್ರಯಾಣಿಕರ ಹಕ್ಕುಗಳ ಬಗ್ಗೆ ಮಾಹಿತಿ ಎಲ್ಲಾ ಪ್ಲಾಟ್​ಫಾರ್ಮ್​ಗಳಲ್ಲೂ ಪ್ರದರ್ಶನವಾಗಬೇಕು.
  • ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಲಭ್ಯ ಇರಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Lizard Omens: ದೇವರ ಕೋಣೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಏನರ್ಥ? ಶಾಸ್ತ್ರಗಳು ಹೇಳುವುದೇನು?

ಭಾರತೀಯ ಸನಾತನ ಧರ್ಮ ಹಾಗೂ ಶಾಸ್ತ್ರಗಳ ಪ್ರಕಾರ, ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಶೇಷ ಮಹತ್ವವಿದೆ. ಅದರಲ್ಲಿಯೂ ಮನೆಯ ಗೋಡೆಗಳ ಮೇಲೆ ಓಡಾಡುವ ಹಲ್ಲಿಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸಂಕೇತವೆಂದೇ ಪರಿಗಣಿಸಲಾಗುತ್ತದೆ. ಕೇವಲ ಕೀಟಗಳನ್ನು ತಿಂದು ಮನೆಯನ್ನು ಸ್ವಚ್ಛವಾಗಿಡುವ ಜೀವಿಯಷ್ಟೇ ಅಲ್ಲದೆ, ಹಲ್ಲಿಯು ನಮ್ಮ ಭವಿಷ್ಯದ ಏಳುಬೀಳುಗಳ ಬಗ್ಗೆ ಮುನ್ಸೂಚನೆ ನೀಡುವ ಸಂಕೇತವೂ ಹೌದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಲ್ಲಿಯು ಮೈಮೇಲೆ ಬೀಳುವ ಜಾಗ ಮತ್ತು ಅದು ಕಾಣಿಸಿಕೊಳ್ಳುವ ಸಮಯದ ಮೇಲೆ ಶುಭ-ಅಶುಭ ಫಲಗಳು ನಿರ್ಧಾರವಾಗುತ್ತವೆ.

ವಿಶೇಷವಾಗಿ ನಿಮ್ಮ ಮನೆಯ ಪೂಜಾ ಮಂಟಪದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ಅತ್ಯಂತ ಮಂಗಳಕರ ಸಂಗತಿ. ಇದು ಲಕ್ಷ್ಮೀ ದೇವಿಯ ಕಟಾಕ್ಷ ನಿಮ್ಮ ಮೇಲಿದೆ ಎಂಬುದನ್ನು ಸೂಚಿಸುವುದಲ್ಲದೆ, ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ ಮತ್ತು ಆರ್ಥಿಕ ಸಂಕಷ್ಟಗಳು ದೂರವಾಗಲಿವೆ ಎಂಬ ಪರೋಕ್ಷ ಸಂದೇಶವನ್ನು ನೀಡುತ್ತದೆ. ಆದರೆ, ಮನೆಯಲ್ಲಿ ಎರಡು ಹಲ್ಲಿಗಳು ಜಗಳವಾಡುವುದನ್ನು ನೋಡುವುದು ಅಷ್ಟು ಒಳ್ಳೆಯದಲ್ಲ. ಇದು ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಅಥವಾ ಸ್ನೇಹಿತರೊಂದಿಗೆ ಕಲಹ ಉಂಟಾಗುವ ಸಾಧ್ಯತೆ ಎಂದು ಶಕುನ ಶಾಸ್ತ್ರ ಹೇಳುತ್ತದೆ.

ಇನ್ನು ಹಲ್ಲಿಯು ಮೈಮೇಲೆ ಬೀಳುವ ವಿಚಾರಕ್ಕೆ ಬಂದರೆ, ಕಾಲುಗಳ ಮೇಲೆ ಬೀಳುವ ಹಲ್ಲಿಯು ವಿಶೇಷ ಅರ್ಥವನ್ನು ಹೊಂದಿರುತ್ತದೆ. ಒಂದು ವೇಳೆ ಹಲ್ಲಿ ನಿಮ್ಮ ಬಲ ಪಾದದ ಮೇಲೆ ಬಿದ್ದರೆ, ಶೀಘ್ರದಲ್ಲೇ ನಿಮಗೆ ದೀರ್ಘ ಪ್ರಯಾಣ ಅಥವಾ ಪ್ರವಾಸದ ಯೋಗವಿದೆ ಹಾಗೂ ಆ ಪ್ರಯಾಣದಿಂದ ಧನಲಾಭವಾಗಲಿದೆ ಎಂದರ್ಥ. ಅದೇ ಹಲ್ಲಿ ಎಡಗಾಲಿನ ಮೇಲೆ ಬಿದ್ದರೆ, ಮುಂದೆ ಬರಲಿರುವ ಯಾವುದೋ ಸಂಕಷ್ಟ ಅಥವಾ ಅನಾರೋಗ್ಯದ ಬಗ್ಗೆ ಅದು ನಿಮ್ಮನ್ನು ಎಚ್ಚರಿಸುತ್ತಿದೆ ಎಂದರ್ಥ. ಒಂದು ವೇಳೆ ಹೊಸ ಮನೆ ಪ್ರವೇಶಿಸುವಾಗ ಸತ್ತ ಹಲ್ಲಿ ಕಂಡುಬಂದರೆ, ಆ ಮನೆಯ ವಾಸ್ತು ದೋಷ ಅಥವಾ ಮುಖ್ಯಸ್ಥರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ ಎಂದು ಶಾಸ್ತ್ರಗಳು ಎಚ್ಚರಿಸುತ್ತವೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಕೇವಲ ವಾಸ್ತವದಲ್ಲಿ ಮಾತ್ರವಲ್ಲದೆ, ಕನಸಿನಲ್ಲಿ ಹಲ್ಲಿ ನಿಮ್ಮನ್ನು ಹೆದರಿಸುವಂತೆ ಅಥವಾ ದಾಳಿ ಮಾಡುವಂತೆ ಕಂಡರೆ, ಅದು ಆರ್ಥಿಕ ಮುಗ್ಗಟ್ಟು ಅಥವಾ ಮಾನಸಿಕ ನೆಮ್ಮದಿಗೆ ಭಂಗ ತರುವ ಸೂಚನೆಯಾಗಿರುತ್ತದೆ. ಹಲ್ಲಿಯ ಈ ನಕಾರಾತ್ಮಕ ಪರಿಣಾಮಗಳನ್ನು ಹೋಗಲಾಡಿಸಲು ನಮ್ಮ ಹಿರಿಯರು ಒಂದು ಸರಳ ಪರಿಹಾರವನ್ನು ಸೂಚಿಸಿದ್ದಾರೆ. ಹಲ್ಲಿ ಮೈಮೇಲೆ ಬಿದ್ದ ತಕ್ಷಣವೇ ಅಭ್ಯಂಗ ಸ್ನಾನ ಮಾಡಿ, ಇಷ್ಟ ದೇವರನ್ನು ಪ್ರಾರ್ಥಿಸುವುದರಿಂದ ಮನಸ್ಸಿನ ಭಯ ದೂರವಾಗಿ, ದೋಷದ ತೀವ್ರತೆ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರು ‘ಧುರಂಧರ್’ ಚಿತ್ರದ ಯಶಸ್ಸಿನಿಂದ ಖುಷಿಯಾಗಿದ್ದಾರೆ. ಮಂಗಳವಾರ (ಮಾರ್ಚ್ 17) ಸಂಜೆ ಮುಂಬೈನಲ್ಲಿ ನಡೆದ ‘ಧುರಂಧರ್ 2’ (Dhurandhar 2) ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ತಮ್ಮ ವಿಶಿಷ್ಟ ಶೈಲಿಯ ಮೂಲಕ ವೇದಿಕೆಯ ಮೇಲೆ ಮಿಂಚಿದ ರಣವೀರ್, ಚಿತ್ರದ ಮೊದಲ ಭಾಗಕ್ಕೆ ಪ್ರೇಕ್ಷಕರು ನೀಡಿದ ಅಭೂತಪೂರ್ವ ಯಶಸ್ಸನ್ನು ನೆನೆದು ಭಾವುಕರಾದರು. ಅಲ್ಲದೇ, ‘ಧುರಂಧರ್ 2’ ಸಿನಿಮಾ ಮೇಲೆ ಜನರು ಇಟ್ಟಿರುವ ನಿರೀಕ್ಷೆಯ ಬಗ್ಗೆಯೂ ರಣವೀರ್ ಸಿಂಗ್ (Ranveer Singh) ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಜೊತೆಗೆ ನಟಿ ಸಾರಾ ಅರ್ಜುನ್ ಮತ್ತು ಸಂಗೀತ ತಂಡದ ಸದಸ್ಯರಾದ ಶಾಶ್ವತ್ ಸಚದೇವ್, ಜಾಸ್ಮಿನ್ ಸ್ಯಾಂಡ್ಲಾಸ್, ಖಾನ್ ಸಾಬ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಮೊದಲ ಬಾರಿಗೆ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ರಣವೀರ್, ‘ಸ್ನೇಹಿತರೇ, ನೀವು ನಮ್ಮ ಧುರಂಧರ್ ಚಿತ್ರವನ್ನು ಐತಿಹಾಸಿಕ ಮೈಲಿಗಲ್ಲಿಗೆ ತಲುಪಿಸಿದ್ದೀರಿ. ಇದು ಕೇವಲ ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ. ಇಡೀ ತಂಡದ ಪರವಾಗಿ ಪ್ರಪಂಚದಾದ್ಯಂತ ಇರುವ ಸಿನಿಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ತಿಳಿಸಿದರು.

ಆದಿತ್ಯ ಧಾರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾದ ಎರಡನೇ ಭಾಗದ ಬಗ್ಗೆ ಮಾತನಾಡಿದ ರಣವೀರ್ ಸಿಂಗ್, ‘ಈಗ ಎರಡನೇ ಭಾಗ ಬಿಡುಗಡೆಗೆ ಸಿದ್ಧವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಜನರು ಇದಕ್ಕೆ ಕಾಯುತ್ತಿದ್ದಾರೆ. ಎರಡನೇ ಭಾಗದ ಬಗ್ಗೆ ಇರುವ ನಿರೀಕ್ಷೆ ಅಭೂತಪೂರ್ವವಾದುದು’ ಎಂದು ಹೇಳಿದರು. ಅಲ್ಲದೇ, ಈ ಚಿತ್ರವು ಭಾರತೀಯ ಚಿತ್ರರಂಗದ ಭವಿಷ್ಯವನ್ನೇ ಬದಲಿಸಲಿದೆ ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.

‘ಧುರಂಧರ್’ ಚಿತ್ರದಲ್ಲಿ ಪಾಕಿಸ್ತಾನದ ಕರಾಚಿಗೆ ತೆರಳಿದ್ದ ಭಾರತೀಯ ಗೂಢಚಾರಿಯ ಸಾಹಸದ ಕಥೆಯನ್ನು ಹೇಳಲಾಗಿತ್ತು. 1999ರ ವಿಮಾನ ಅಪಹರಣ, 2001ರ ಸಂಸತ್ ಮೇಲಿನ ದಾಳಿ ಮತ್ತು 2008ರ ಮುಂಬೈ ದಾಳಿಯಂತಹ ನೈಜ ಘಟನೆಗಳ ಎಳೆಯನ್ನು ಈ ಸಿನಿಮಾ ಒಳಗೊಂಡಿತ್ತು. ವಿಶ್ವದಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಇದನ್ನೂ ಓದಿ: ‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು

‘ಧುರಂಧರ್: ದಿ ರಿವೇಂಜ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದೆ. ಮಾರ್ಚ್ 19ರಂದು ಬಿಡುಗಡೆಯಾಗಲಿದ್ದು, ಬುಧವಾರ (ಮಾ.18) ಸಂಜೆ 5.30ರಿಂದಲೇ ಪೇಯ್ಡ್ ಪ್ರಿವ್ಯೂಗಳು ಆರಂಭವಾಗಲಿವೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿದ್ದು, ಸಿನಿಮಾ ಮತ್ತೊಂದು ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Ugadi 2026 Horoscope: ಯುಗಾದಿ ವರ್ಷ ಭವಿಷ್ಯ; ಗ್ರಹಗಳ ಸಂಚಾರ ಮತ್ತು ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಪರಾಭವ ನಾಮ ಸಂವತ್ಸರದ ಯುಗಾದಿ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ ಯುಗಾದಿಯು ಅತ್ಯಂತ ಮಹತ್ವದ ಹಬ್ಬವಾಗಿದ್ದು, ಇದನ್ನು ಮಾರ್ಚ್ 19ರ ಗುರುವಾರದಂದು ಆಚರಿಸಲಾಗುತ್ತದೆ. ಯುಗಾದಿಯು ಜಗತ್ತಿನ ಮತ್ತು ಮನಸ್ಸುಗಳ ಪರಿವರ್ತನೆಯ ಕಾಲವಾಗಿದೆ.

ಈ ವರ್ಷಕ್ಕೆ ಪರಾಭವ ನಾಮ ಸಂವತ್ಸರ ಎಂದು ಹೆಸರಿಸಲಾಗಿದೆ. ಇದು 60 ಸಂವತ್ಸರಗಳಲ್ಲಿ 40ನೇ ಸಂವತ್ಸರವಾಗಿದೆ. ಈ ವರ್ಷದ ರಾಜ ಗುರು ಆಗಿದ್ದು, ಮಂತ್ರಿ ಕುಜ ಆಗಿದ್ದಾನೆ ಮತ್ತು ಸೇನಾಧಿಪತಿ ಚಂದ್ರ ಆಗಿದ್ದಾನೆ. ಗುರು, ಶನಿ, ರಾಹು, ಮತ್ತು ಕೇತು ಗ್ರಹಗಳ ಸಂಚಾರದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಗುರು ಗ್ರಹವು ಜೂನ್ 2, 2026ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಿ, ನಂತರ ಅಕ್ಟೋಬರ್ 31ರಂದು ಸಿಂಹ ರಾಶಿಗೆ ಮತ್ತು ಜನವರಿ 2027ರಲ್ಲಿ ಮತ್ತೆ ಕರ್ಕಾಟಕ ರಾಶಿಗೆ ಮರಳಲಿದೆ. ಶನಿ ಗ್ರಹವು ಮಾರ್ಚ್ 2027ರವರೆಗೆ ಮೀನ ರಾಶಿಯಲ್ಲಿ ಇರಲಿದೆ. ರಾಹು ಮತ್ತು ಕೇತುಗಳು ಡಿಸೆಂಬರ್ 2026ರಲ್ಲಿ ಮಕರ ಮತ್ತು ಕರ್ಕಾಟಕ ರಾಶಿಗಳಿಗೆ ಸ್ಥಾನ ಬದಲಾಯಿಸಲಿವೆ.

ಈ ಪರಾಭವ ನಾಮ ಸಂವತ್ಸರದಲ್ಲಿ ಮೇಷ ರಾಶಿಯವರಿಗೆ ಅದೃಷ್ಟ, ಆರ್ಥಿಕ ಅಭಿವೃದ್ಧಿ ಮತ್ತು ಕಾರ್ಯಗಳಲ್ಲಿ ಜಯ ಸಿಗಲಿದೆ. ವೃಷಭ ರಾಶಿಯವರಿಗೆ ಆದಾಯದಲ್ಲಿ ಏರಿಕೆ, ಹೊಸ ಯೋಜನೆಗಳಿಗೆ ಬೆಂಬಲ ಮತ್ತು ರಾಜಕೀಯ ಪ್ರಗತಿ ಇರಲಿದೆ. ಆದಾಗ್ಯೂ, ಕೆಲವು ಸಣ್ಣಪುಟ್ಟ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಗುರೂಜಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಟ್ರಾಫಿಕ್‌ಗೆ ಡಿಕೆಶಿ ಮಾಸ್ಟರ್ ಪ್ಲಾನ್: ಚಾಮರಾಜಪೇಟೆ TO ಕೆಂಗೇರಿ 810 ಕೋಟಿ ರೂ. ವೆಚ್ಚದ ಮೇಲ್ಸೇತುವೆ ಯೋಜನೆ!

ಬೆಂಗಳೂರು, ಮಾ.18: ವಿಧಾನಸಭೆಯಲ್ಲಿ ಬಜೆಟ್​​ ಮೇಲಿನ ಚರ್ಚೆ ನಡೆಯುತ್ತಿದೆ. ಈ ವೇಳೆ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಸಮಯದಲ್ಲಿ ಶಾಸಕರು ಕೇಳಿದ ಹಲವು ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರಿಸಿದ್ದಾರೆ. ಈ ಮೂಲಕ ಒಂದು ಐತಿಹಾಸಿಕ ವಿಚಾರದ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಚಾಮರಾಜಪೇಟೆ ಮತ್ತು ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಈಗಾಗಲೇ ಮಾಡುತ್ತಿರುವ ಯೋಜನೆಗಳ ಬಗ್ಗೆ ಡಿಕೆ ಶಿವಕುಮಾರ್​​​​​​​​​​​​​ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಈ ಭಾಗದಲ್ಲಿ ಸಂಚಾರ ಸುಗಮಗೊಳಿಸಲು ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಕೈಗೊಂಡ ಕ್ರಮಗಳೇನು? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು ಕಳೆದ 2 ವರ್ಷಗಳಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗಿದೆ. ಪ್ರಸುತ್ತ ಚಾಮರಾಜಪೇಟೆ ಸಿರಸಿ ಜಂಕ್ಷನ್‌ನಿಂದ ಬಿ.ಹೆಚ್.ಇ.ಎಲ್ ಕಿಮ್‌ಕೋ ಜಂಕ್ಷನ್‌ವರೆಗೂ ಮೇಲ್ಸೇತುವೆಯನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಇದೆ ವೇಳೆ, ಚಾಮರಾಜಪೇಟೆಯಿಂದ ಕೆಂಗೇರಿವರೆಗೆ ಮೇಲ್ಸೇತುವೆ ವಿಸ್ತರಿಸುವ ಪ್ರಸ್ತಾವನೆ ಮತ್ತು ಅದರ ಅಂದಾಜು ವೆಚ್ಚ ಎಷ್ಟು? ಎಂಬ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಯೋಜನೆಗೆ ಭೂ-ಸ್ವಾಧೀನ ವೆಚ್ಚವೂ ಸೇರಿದಂತೆ ಅಂದಾಜು 810.00 ಕೋಟಿ ರೂ.ಗಳ ಕಾರ್ಯತಂತ್ರ ತಯಾರಿಸಲಾಗಿದೆ. ಪ್ರಸ್ತುತ ಡಿ.ಪಿ.ಆರ್ (DPR) ತಯಾರಿಸಿ, ಆಡಳಿತಾತ್ಮಕ ಅನುಮೋದನೆಗಾಗಿ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರು ಪಾಲಿಕೆಯಿಂದಲೇ ಫುಟ್​ಪಾತ್ ಒತ್ತುವರಿ! ಅರಮನೆ ಮುಂಭಾಗದ ರಾಜಮಾರ್ಗ ಒಡೆದು ಟಾಂಗಾ ಸ್ಟ್ಯಾಂಡ್​

ನಾಯಂಡಹಳ್ಳಿ ಮೇಲ್ಸೇತುವೆಯ ನಂತರ ರಾಜರಾಜೇಶ್ವರಿನಗರ ಮುಖ್ಯರಸ್ತೆಯ ಕಮಾನು (Arch) ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಜಾರಿಯಲ್ಲಿದೆ. ರಾಜರಾಜೇಶ್ವರಿನಗರ ಕಮಾನಿನಿಂದ ಕೆಂಗೇರಿವರೆಗಿನ ರಸ್ತೆಗೆ 75.00 ಕೋಟಿ ರೂ. ವೆಚ್ಚದಲ್ಲಿ ಡಾಂಬರೀಕರಣ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ.ಮೈಸೂರು ರಸ್ತೆಗೆ ಪರ್ಯಾಯವಾಗಿ ಸುರಂಗ ರಸ್ತೆ ಅಥವಾ ರಾಜಕಾಲುವೆ ಪಕ್ಕದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಯೋಜನೆ ಇದೆಯೇ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಪ್ರಸ್ತುತ ಈ ವಿಧದ ಯಾವುದೇ ವಿಶೇಷ ಕ್ರಿಯಾಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಇಕ್ಕೆ ಉತ್ತರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಮೂರು ತಂಡಗಳಿಗೆ ಆಸ್ಟ್ರೇಲಿಯನ್ ‘ಕ್ಯಾಪ್ಟನ್ಸ್’

Source link

Video: ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ವ್ಯಕ್ತಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ಬಹುಬೇಗನೆ ಎಲ್ಲರ ಹೃದಯ ಗೆಲ್ಲುತ್ತದೆ. ಇನ್ನುಕೆಲ ವಿಡಿಯೋಗಳು ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗುತ್ತವೆ. ಇಲ್ಲೊಬ್ಬ ಯುವಕನು (Young Man) ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನವನ್ನು(dog) ಜೋಪಾನವಾಗಿ ರಸ್ತೆ ದಾಟಿಸಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಕಂಡ ನೆಟ್ಟಿಗರು ಯುವಕನ ಹೃದಯ ಶ್ರೀಮಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

mybeauty_ parlour ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕ ಒಳ್ಳೆಯ ಕೆಲಸವನ್ನು ಕಾಣಬಹುದು. ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನವೊಂದು ರಸ್ತೆ ದಾಟಲು ಕಷ್ಟಪಡುತ್ತಿದೆ. ಇದನ್ನು ಗಮನಿಸಿದ ಯುವಕನು ತನ್ನ ಬೈಕ್‌ನನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ನಿಧಾನವಾಗಿ ಓಡಿಸುತ್ತಿದ್ದು, ಶ್ವಾನವು ಆತನ ಜತೆಗೆ ರಸ್ತೆ ದಾಟುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಾಲೆರಡು ಸ್ವಾಧೀನ ಕಳೆದುಕೊಂಡಂತೆ ನಟಿಸಿ ಆಹಾರ ಗಿಟ್ಟಿಸಿಕೊಂಡ ಶ್ವಾನ

ಈ ವಿಡಿಯೋ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮಾನವೀಯತೆ ಇನ್ನು ಕೂಡ ಜೀವಂತವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಜವಾದ ಪ್ರಾಣಿ ಪ್ರೇಮಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಾನು ನೋಡಿದ ತುಂಬಾ ಸುಂದರವಾದ ದೃಶ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ಧುರಂಧರ್’ ಚಿತ್ರದಲ್ಲಿ ನಟಿಸಲು ಅವಕಾಶ ಸಿಗದಿದ್ದಕ್ಕೆ ಅಕ್ಷಯ್ ಕುಮಾರ್​​ಗೆ ಹೊಟ್ಟೆಕಿಚ್ಚು?

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿತ್ತು ಮಾತ್ರವಲ್ಲದೆ, ಉದ್ಯಮದ ಅನೇಕ ಸೆಲೆಬ್ರಿಟಿಗಳು ಸಹ ಇದನ್ನು ಇಷ್ಟಪಟ್ಟರು. ಈ ಚಿತ್ರಕ್ಕೆ ಮಾರ್ಚ್ 19ರಂದು ಸೀಕ್ವೆಲ್ ಬರುತ್ತಿದೆ. ‘ಧುರಂಧರ್’ ನಂತಹ ಚಿತ್ರದಲ್ಲಿ ನಟಿಸುವ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಚಲನಚಿತ್ರೋದ್ಯಮದ ಬದಲಾಗುತ್ತಿರುವ ಮಾದರಿ ಮತ್ತು ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಅವರ ಪಾತ್ರದ ಬಗ್ಗೆ ಬಹಿರಂಗವಾಗಿ ಮಾತನಾಡಿದರು.

‘ಇಂಡಿಯಾ ಟುಡೇ ಕಾನ್ಕ್ಲೇವ್’ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ‘ಈ ಚಲನಚಿತ್ರೋದ್ಯಮವು ಒಂದು ವೃತ್ತದಂತೆ. ಈ ಉದ್ಯಮವು ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ಬದಲಾಗುತ್ತದೆ. ನಮ್ಮ ಪ್ರೇಕ್ಷಕರು ಅದರ ಬೇಡಿಕೆಗಳಿಗೆ ಅನುಗುಣವಾಗಿ ಬದಲಾಗುತ್ತಾರೆ’ ಎಂದು ಅಕ್ಷಯ್ ಕುಮಾರ್ ಹೇಳಿದರು.

‘ನೀವು ‘ಧುರಂಧರ್’ ಚಿತ್ರದ ಉದಾಹರಣೆಯನ್ನು ನೋಡಿ. ಇದು ಆಕ್ಷನ್ ಚಿತ್ರ ಮತ್ತು ಇದರಲ್ಲಿ ಬಹಳಷ್ಟು ರಕ್ತಪಾತವಿದೆ. ಜನರು ಈ ಚಿತ್ರವನ್ನು ತುಂಬಾ ಇಷ್ಟಪಟ್ಟರು. ಅವರು ಅದನ್ನು ಆನಂದಿಸಿದರು. ಇದರಲ್ಲಿ, ರಣವೀರ್ ಸಿಂಗ್ ಈ ಚಿತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಐದರಿಂದ ಆರು ವರ್ಷಗಳ ಹಿಂದೆ ನಾನು ಸಾಮಾಜಿಕ ಸಮಸ್ಯೆಗಳ ಕುರಿತು ಕೆಲವು ಚಲನಚಿತ್ರಗಳನ್ನು ಮಾಡಿದ್ದೆ. ಅವು ಯಶಸ್ಸು ಕಂಡವು. ಈಗ ಹಾರರ್ ಹಾಸ್ಯ ಚಿತ್ರಗಳ ಸಮಯ. ಸ್ತ್ರೀಯಂತಹ ಚಿತ್ರವು ತುಂಬಾ ಚೆನ್ನಾಗಿ ಓಡಿದೆ. . ಆದ್ದರಿಂದ ಎಲ್ಲವೂ ಬದಲಾಗುತ್ತಲೇ ಇರುತ್ತದೆ ಮತ್ತು ಪ್ರೇಕ್ಷಕರು ಮುಂದೆ ಏನು ಇಷ್ಟಪಡುತ್ತಾರೆಂದು ನಮಗೆ ತಿಳಿದಿಲ್ಲ’ ಎಂದರು ಅವರು.

ಇದನ್ನೂ ಓದಿ: ಕ್ರಿಕೆಟರ್ ಆಗ ಹೊರಟಿದ್ದ ‘ಧುರಂಧರ್’ ನಿರ್ದೇಶಕ; ರಾಜಕೀಯದಿಂದ ಎಲ್ಲವೂ ಬದಲಾಯ್ತು

‘ಧುರಂಧರ್’ ನಂತಹ ಚಿತ್ರದಲ್ಲಿ ಪಾತ್ರ ಸಿಗದಿದ್ದಕ್ಕೆ ವಿಷಾದಿಸುತ್ತಿದ್ದೀರಾ ಅಥವಾ ಅಸೂಯೆ ಪಡುತ್ತಿದ್ದೀರಾ ಎಂದು ಕೇಳಿದಾಗ, ಅಕ್ಷಯ್, ‘ಲಿಯಾರಿ ಗ್ಯಾಂಗ್‌ನಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸುವುದು ನನಗೆ ಸರಿ ಎಂದು ಆದಿತ್ಯ ಭಾವಿಸಿಲ್ಲ. ಅವರು ಹಾಗೆ ಯೋಚಿಸಿಲ್ಲ. ಅದಕ್ಕಾಗಿಯೇ ನನಗೆ ಆ ಪಾತ್ರ ಸಿಗಲಿಲ್ಲ. ನಾನು ರಣವೀರ್ ಅವರನ್ನು ಭೇಟಿಯಾದಾಗ, ಅವರು ನನ್ನ ಕೆಲಸವನ್ನು ಹೊಗಳಿದರು. ಅವರು ನನ್ನ ಕೆಲವು ಪಾತ್ರಗಳನ್ನು ನಿರ್ವಹಿಸಲು ಬಯಸುತ್ತಾರೆ. ಅದೇ ರೀತಿ ನಾನು ಅವರ ಕೆಲವು ಪಾತ್ರಗಳನ್ನು ನಿರ್ವಹಿಸಲು ಬಯಸುತ್ತೇನೆ. ಹಿಂದಿ ಚಿತ್ರರಂಗದಲ್ಲಿ ನಮ್ಮಲ್ಲಿ 15 ರಿಂದ 20 ನಟರಿದ್ದಾರೆ ಮತ್ತು ಭಾರತದಲ್ಲಿ 180 ಚಲನಚಿತ್ರಗಳು ತಯಾರಾಗುತ್ತವೆ. ಎಲ್ಲರಿಗೂ ಒಂದು ಪಾತ್ರವಿದೆ. ನಮಗೆ ಅಂತಹ ಪಾತ್ರಗಳನ್ನು ನಿರ್ವಹಿಸಲು ಅವಕಾಶ ಸಿಗುತ್ತದೆ ಎಂದು ನನಗೆ ವಿಷಾದವಿದೆ, ಆದರೆ ಅದರಲ್ಲಿ ಯಾವುದೇ ಅಸೂಯೆ ಇಲ್ಲ’ ಎಂದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link