All posts by nagaraj11081993

ರಜನಿಕಾಂತ್ ರಾಜಕೀಯಕ್ಕೆ ಬರದಿರಲು ಆ ವ್ಯಕ್ತಿಯ ಒತ್ತಡ ಕಾರಣ? ಮೌನ ಮುರಿದ ಸೂಪರ್​ ಸ್ಟಾರ್

ರಜನಿಕಾಂತ್ ರಾಜಕೀಯಕ್ಕೆ ಬರದಿರಲು ಆ ವ್ಯಕ್ತಿಯ ಒತ್ತಡ ಕಾರಣ? ಮೌನ ಮುರಿದ ಸೂಪರ್​ ಸ್ಟಾರ್

ತಮಿಳುನಾಡಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಎಲ್ಲಾ ಪಕ್ಷದವರು ಪ್ರಚಾರಕ್ಕೆ ಇಳಿದಿದ್ದಾರೆ. ಈಗ ಚುನಾವಣೆ ಪ್ರಚಾರದ ವೇಳೆ ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ನಾಯಕ ಆಧವ್ ಅರ್ಜುನ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆಗೆ ಬರದಿರಲು ರಜನಿಗೆ ಒತ್ತಡ ಇತ್ತು ಎಂದಿದ್ದಾರೆ. ಇದು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ವಿಜಯ್​​ಗೆ ಈ ರೀತಿಯ ಬೆದರಿಕೆ ಬಂದರೂ ಅವರು ಎದುರಿಸಿ ನಿಲ್ಲುತ್ತಿದ್ದಾರೆ ಎಂದಿದ್ದಾರೆ. ಈ ಹೇಳಿಕೆಗೆ ಈಗ ರಜನಿಕಾಂತ್ (Rajinikanth) ಅವರೇ ಉತ್ತರ ನೀಡಿದ್ದಾರೆ

ನಟ ರಜನಿಕಾಂತ್ ರಾಜಕೀಯ ಪ್ರವೇಶಿಸಲು ಪ್ರಯತ್ನಿಸಿದ್ದರು.ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆಯಿತು. ಆದರೆ, ಆ ಸಂದರ್ಭದ ಅನಾರೋಗ್ಯ ಕಾಡಿತು. ಇದನ್ನೇ ಮುಂದಿಟ್ಟುಕೊಂಡು ಅವರು ರಾಕೀಯದಿಂದ ಹಿಂದೆ ಸರಿದರು. ಆದರೆ, ಇದಕ್ಕೆ ಬೇರೆಯದೇ ಕಾರಣ ಇದೆ ಎಂದು ಆಧವ್ ಅರ್ಜುನ್ ಹೇಳಿದ್ದಾರೆ. ‘ರಜನಿಕಾಂತ್ ಚುನಾವಣೆಗೆಗೆ ಬರಲು ಪ್ರಯತ್ನಿಸಿದಾಗ ಡಿಎಂಕೆ ಕುಟುಂಬ ಅವರಿಗೆ ಬೆದರಿಕೆ ಹಾಕಿದೆ. ರಜನಿಕಾಂತ್ ಅವರನ್ನು ಟೀಕಿಸುತ್ತಿಲ್ಲ ಆದರೆ ವಿಜಯ್ ಅವರಿಗೆ ಅಂತಹ ಒತ್ತಡವನ್ನು ತಡೆದುಕೊಳ್ಳುವ ಧೈರ್ಯವಿದೆ’ ಎಂದು ಅರ್ಜುನ ವಿವರಿಸಿದ್ದರು.

ಈ ವಿಷಯಕ್ಕೆ ರಜನಿಕಾಂತ್ ಉತ್ತರಿಸಿದ್ದಾರೆ. ಟಿವಿಕೆ ನಾಯಕನ ಹೇಳಿಕೆಯನ್ನು ಟೀಕಿಸಿದ ಎಲ್ಲರಿಗೂ ರಜನಿಕಾಂತ್ ಧನ್ಯವಾದ ಹೇಳಿದ್ದಾರೆ. ‘ಸಮಯ ಮಾತನಾಡುವುದಿಲ್ಲ. ಆದರೆ ಅದು ಕಾದು ನಂತರ ಉತ್ತರ ನೀಡುತ್ತದೆ’ ಎಂದು ರಜನಿಕಾಂತ್ ಹೇಳಿದ್ದಾರೆ.

ಇದನ್ನೂ ಓದಿ:  ಆಪ್ತ ಗೆಳೆಯನಿಗೂ ಇಲ್ಲ ರಿಯಾಯಿತಿ, ಕಮಲ್ ಜೊತೆ ಸಿನಿಮಾಕ್ಕೆ ರಜನಿಕಾಂತ್ ಪಡೆದ ಸಂಭಾವನೆ ಎಷ್ಟು?

‘ಅವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ, ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಕೇಂದ್ರ ಸಚಿವ ಎಲ್. ಮುರುಗನ್, ತಮಿಳುನಾಡು ಸಚಿವ ರಘುಪತಿ, ನನ್ನ ಗೆಳೆಯ ಅಣ್ಣಮಲೈ ಸೇರಿ ಎಲ್ಲರಿಗೂ ಧನ್ಯವಾದ’ ಎಂದು ಅವರು ಹೇಳಿದ್ದಾರೆ.

ಅರ್ಜುನ್ ಹೇಳಿಕೆ ಏನು?

ಡಿಎಂಕೆ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ವಿಫಲ ಆಗುತ್ತಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ಅರ್ಜುನ, ‘ಎಂಜಿಆರ್ ನಂತರ, ರಾಜಕೀಯ ಪ್ರವೇಶಿಸಲು ಉದ್ದೇಶಿಸಿದ್ದ ಅತ್ಯಂತ ಜನಪ್ರಿಯ ನಟರಲ್ಲಿ ರಜನಿಕಾಂತ್ ಒಬ್ಬರು . ರಜನಿಕಾಂತ್ ತಮಿಳುನಾಡು ರಾಜಕೀಯ ಪ್ರವೇಶಿಸಲು ಮತ್ತು ವ್ಯವಸ್ಥೆಯನ್ನು ಬದಲಾಯಿಸಲು ಬಯಸಿದ್ದರು. ಆದಾಗ್ಯೂ, ಡಿಎಂಕೆ ಕುಟುಂಬವು ರಜನಿಕಾಂತ್ ಅವರಿಗೆ ಹಲವಾರು ಬೆದರಿಕೆಗಳನ್ನು ಹಾಕಿತು. ಅವರು ರಾಜಕೀಯ ಪ್ರವೇಶಿಸದಂತೆ ತಡೆದಿತು. ಈಗ ಅವರು ಸಿನಿಮಾ ಮಾಡಿಕೊಂಡಿದ್ದಾರೆ’ ಎಂದಿದ್ದರು ಅರ್ಜುನ. ಈ ಹೇಳಿಕೆಯನ್ನು ಅನೇಕರು ಖಂಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional​: ಯುಗಾದಿಯ ಆಚರಣೆ ಹೇಗೆ ಮಾಡಬೇಕು? ಈ ವರ್ಷ ಯಾವೆಲ್ಲ ಬದಲಾವಣೆಗಳು?

ಬೆಂಗಳೂರು, ಮಾ.18: ಭಾರತೀಯ ಸಂಸ್ಕೃತಿಯ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ಯುಗಾದಿ, ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಯುಗಸ್ಯ ಆದಿ ಅಂದರೆ ಯುಗದ ಪ್ರಾರಂಭ ಎಂಬ ಅರ್ಥವನ್ನು ಹೊಂದಿರುವ ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಡಗರದಿಂದ ಆಚರಿಸಲಾಗುತ್ತದೆ. ಪ್ರಕೃತಿಯಲ್ಲಿ ಹೊಸತನ ಮೂಡಿಬರುವ, ಗಿಡಮರಗಳು ಚಿಗುರಿ ಹೂ ಬಿಡುವ, ಕೋಗಿಲೆ ಇಂಪಾಗಿ ಹಾಡುವ ವಸಂತ ಋತುವಿನ ಆಗಮನವೇ ಯುಗಾದಿಯ ಮೂಲ. ಬ್ರಹ್ಮದೇವನು ಸೃಷ್ಟಿಯನ್ನು ಪ್ರಾರಂಭಿಸಿದ ದಿನವೆಂಬ ನಂಬಿಕೆಯೂ ಇದೆ. ಈ ದಿನ ಮನೆಯನ್ನು ಶುದ್ಧಗೊಳಿಸಿ ಮಾವಿನ ತೋರಣ ಕಟ್ಟಲಾಗುತ್ತದೆ. ಅಭ್ಯಂಗ ಸ್ನಾನ, ಹೊಸ ವಸ್ತ್ರ ಧಾರಣೆ, ಕುಲದೇವರ ಪೂಜೆಗಳು ಸಾಂಪ್ರದಾಯಿಕ ಆಚರಣೆಗಳಾಗಿವೆ. ಪಂಚಾಂಗ ಪೂಜೆ ಮಾಡುವುದರಿಂದ ವರ್ಷಪೂರ್ತಿ ಶುಭ ಫಲಗಳು ದೊರೆಯುವುದೆಂಬ ನಂಬಿಕೆಯಿದೆ. ಯುಗಾದಿಯ ವಿಶೇಷ ಖಾದ್ಯ ಬೇವು-ಬೆಲ್ಲ. ಇದು ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿದೆ. ಈ ಹಬ್ಬ ಆರೋಗ್ಯ, ಅದೃಷ್ಟ ಮತ್ತು ಮಾನಸಿಕ ನೆಮ್ಮದಿಗೆ ಪ್ರೇರಕವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಯವರು ಒಂದು ಮಂತ್ರವನ್ನು ಮಾತ್ರ ಕಡ್ಡಾಯವಾಗಿ ಜಪಿಸಬೇಕು, ಯಾಕೆ ಗೊತ್ತಾ?

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಮಾರ್ಚ್ 18ರ ಬುಧವಾರದ ದಿನಭವಿಷ್ಯದ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಈ ದಿನದ ಪಂಚಾಂಗದ ಪ್ರಕಾರ, ಇದು ವಿಶ್ವಾ ವಸ್ನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣಪಕ್ಷ, ಚತುರ್ದಶಿ, ಪೂರ್ವಾಭಾದ್ರ ನಕ್ಷತ್ರ, ಶುಭ ಯೋಗ ಮತ್ತು ಶಕುನೀಕರಣದ ದಿನವಾಗಿದೆ. ಈ ಪರ್ವದಿನವು ಬುಧವಾರವಾಗಿದ್ದು, ವಿಷ್ಣು, ವಿನಾಯಕ ಮತ್ತು ಕಾಲಭೈರವನ ಅಂಶಗಳನ್ನು ಒಳಗೊಂಡಿದೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚರಿಸುತ್ತಾನೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳಿಗೆ ಆ ದಿನದ ಫಲಾಫಲಗಳನ್ನು ವಿಸ್ತೃತವಾಗಿ ವಿವರಿಸಿದ್ದಾರೆ. ಪ್ರತಿಯೊಂದು ರಾಶಿಚಕ್ರದ ಚಿಹ್ನೆಗೆ ವೃತ್ತಿ, ಆರ್ಥಿಕ ಸ್ಥಿತಿ, ಆರೋಗ್ಯ, ಕೌಟುಂಬಿಕ ಸಂಬಂಧಗಳು, ಅದೃಷ್ಟದ ಬಣ್ಣ, ದಿಕ್ಕು, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ಒದಗಿಸಲಾಗಿದೆ. ಇದು ದೈನಂದಿನ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುರ್ಚಿ ಕದನದ ಮಧ್ಯೆ ಸಚಿವ ಸಂಪುಟ ಪುನಾರಚನೆಗೆ ಕೂಗು: ಡಿಕೆ ಶಿವಕುಮಾರ್ ದೆಹಲಿ ಟೂರ್‌, ಇತ್ತ ಹೋಟೆಲ್‌ನಲ್ಲಿ ಶಾಸಕರಿಂದ ಡಿನ್ನರ್‌!

ಬೆಂಗಳೂರು, ಮಾರ್ಚ್ 18: ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್‌ ಮೀಟಿಂಗ್‌ಗಳ ಸರಣಿ ನಿಲ್ಲುವಂತೆ ಕಾಣ್ತಿಲ್ಲ. ಕಾಂಗ್ರೆಸ್‌ ಕುರ್ಚಿ ಕದನದ ಮಧ್ಯೆ ಸೈಲೆಂಟಾಗಿ ತೆರೆಮರೆಯಲ್ಲಿ ತಂತ್ರಗಾರಿಕೆ ನಿಲ್ಲುತ್ತಿಲ್ಲ. ಒಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ರೆ ಇತ್ತ ಶಾಸಕರ ಡಿನ್ನರ್‌ ಮೀಟಿಂಗ್ ಸರಣಿ ಮುಂದುವರಿದಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಮೊದಲ ಬಾರಿಗೆ ಮತ್ತು 2ನೇ ಬಾರಿಗೆ ಆಯ್ಕೆಯಾದ ಶಾಸಕರು ಮಂಗಳವಾರ ರಾತ್ರಿ ಡಿನ್ನರ್‌ ಸಭೆ ಸೇರಿದ್ರು. ಕಳೆದ ವಾರವಷ್ಟೇ ಮೂರ್ನಾಲ್ಕು ಬಾರಿ ಆಯ್ಕೆಯಾದ ಹಿರಿಯ ಶಾಸಕರ ಸಭೆ ನಡೆದಿತ್ತು. ಇದರ ಭಾಗವಾಗಿ ಶಾಸಕರ ಮತ್ತೊಂದು ಡಿನ್ನರ್‌ ಮೀಟಿಂಗ್‌ ನಡೆದಿದೆ. ಅಚ್ಚರಿಯೆಂದರೆ, ಈ ಸಭೆಯಲ್ಲಿ ಸಿಎಂ ಮತ್ತು ಡಿಸಿಎಂ ಎರಡೂ ಬಣದ ಶಾಸಕರಿದ್ದರು. ಸಭೆಯಲ್ಲಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒತ್ತಡ ಹೇರುವ ಚರ್ಚೆ ನಡೆದಿದೆ.

ಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರುವ ಬಗ್ಗೆ ಚರ್ಚೆ ನಡೆಯಿತು. ಈ ಕುರಿತು ಸಹಿ ಮಾಡಿದ ಪತ್ರವನ್ನು ಈಗಾಗಲೇ ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಸಿಎಂ ಮತ್ತು ಡಿಸಿಎಂ ಎರಡೂ ಬಣಗಳ ಶಾಸಕರು ಈ ಸಭೆಯಲ್ಲಿ ಹಾಜರಾಗಿದ್ದರೂ ಡಿಕೆ ಶಿವಕುಮಾರ್ ಬೆಂಬಲಿತ ಶಾಸಕರ ಸಂಖ್ಯೆ ಹೆಚ್ಚಾಗಿತ್ತು. ನಾಯಕತ್ವ ಬದಲಾವಣೆಯ ವಿಷಯದಲ್ಲಿಯೂ ಹೈಕಮಾಂಡ್ ಮಧ್ಯಪ್ರವೇಶಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಕು ಎಂದೂ ಡಿಕೆಶಿ ಬೆಂಬಲಿಗ ಶಾಸಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕಳೆದ ವಾರ ಹಿರಿಯ ಶಾಸಕರ ಸಭೆ ನಡೆದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ; ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸ್ಥಿತಿ ಏನು?

ಬೆಂಗಳೂರು, ಮಾ.18: ಕರ್ನಾಟಕದಾದ್ಯಂತ ಇಂದು ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಗರಿಷ್ಠ ತಾಪಮಾನವು 33°C ಮತ್ತು ಕನಿಷ್ಠ ತಾಪಮಾನವು 21°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ 32°C ಮತ್ತು ಕನಿಷ್ಠ 19°C ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಹಗಲಿನಲ್ಲಿ ಹಗುರ ಮಳೆಯ ಮುನ್ಸೂಚನೆ ಇದ್ದು, ರಾತ್ರಿಯ ವೇಳೆ ಆಕಾಶವು ತಿಳಿಯಾಗಿರಲಿದೆ. ಇನ್ನು ನಗರದ ಕೆಲವು ಭಾಗಗಳಲ್ಲಿ ಸಾಯಂಕಾಲ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ (ಬೀದರ್, ಕಲಬುರಗಿ, ರಾಯಚೂರು ಇತ್ಯಾದಿ) ತೀವ್ರ ಬಿಸಿಲಿನ ನಡುವೆಯೂ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನವು 37°C ಆಸುಪಾಸಿನಲ್ಲಿರಬಹುದು. ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರೀತಿಯಿಂದ ವಂಚನೆಗೆ ಒಳಗಾಗುವರು

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಇನ್ನು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನವು ಇತರ ಜಿಲ್ಲೆಗಳಿಗಿಂತ ಕಡಿಮೆ ಇರಲಿದೆ. ಹಾವೇರಿ ಮತ್ತು ಚಿತ್ರದುರ್ಗ ಭಾಗಗಳಲ್ಲಿ ಹಗಲು ಬಿಸಿಲು ತೀವ್ರವಾಗಿರಲಿದ್ದು, ಸಂಜೆಯ ಹೊತ್ತಿಗೆ ಆಕಾಶ ಮೋಡದಿಂದ ಕೂಡಿರುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರೀತಿಯಿಂದ ವಂಚನೆಗೆ ಒಳಗಾಗುವರು

ಮೇಷ ರಾಶಿ:

ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಸೇವೆ ಮಾಡಲು ನಾಯಕನೇ ಆಗಬೇಕಿಲ್ಲ, ಸೇವಕನಾದರೂ ಸಾಕು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ‌ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ನಿಮ್ಮ ಮೌನವು ಹಲವಾರ ಅನುಮಾನಕ್ಕೆ ಕಾರಣವಾಗಬಹುದು.

ವೃಷಭ ರಾಶಿ:

ದಾಯಾದಿಗಳು ನಿಮ್ಮ ಸಂಕಷ್ಟವನ್ನು ಎದುರು ನೋಡುತ್ತ ಇರಬಹುದು. ಸಲ್ಲದ ಮಾತುಗಳನ್ನಾಡಿ ಶತ್ರುಗಳನ್ನು ಪ್ರಬಲವಾಗಿಸುವಿರಿ. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಹೊಸತನ್ನು ನಿಮ್ಮದಾಗಿಸಿಕೊಳ್ಳುವ ಕಡೆ ಗಮನ ಅಧಿಕ. ಕಳೆದುಹೋದ ವ್ಯಕ್ತಿಗಳನ್ನು ಮತ್ತೆ ಪಡೆಯುವ ಪ್ರಯತ್ನ ಬೇಡ.

ಮಿಥುನ ರಾಶಿ:

ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎನಿಸುವುದು. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದೇಯಿರುವುದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಇಂದು ಹಣವನ್ನು ಹೊಂದಿಸುವುದು ಚಿಂತೆಯಾಗಬಹುದು.

ಕರ್ಕಾಟಕ ರಾಶಿ:

ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಸಾಲ ಕೊಟ್ಟವರಿಗೆ ಸಮಾಧಾನವಾಗುವಂತೆ ನಡೆದುಕೊಳ್ಳಿ. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಪುಣ್ಯ ಕ್ಷೇತ್ರದ ಭೇಟಿಯಿಂದ ಸಮಾಧಾನ‌. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.

ಸಿಂಹ ರಾಶಿ:

ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ದಿನಚರಿಯನ್ನು ಬದಲಿಸಿಕೊಳ್ಳಬೇಕು ಎಂದನಿಸಬಹುದು. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು.

ಕನ್ಯಾ ರಾಶಿ:

ಉದ್ಯಮಕ್ಕೆ ಬೇಕಾದ ಕಾನೂನಿನ ವಿಚಾರವನ್ನು ಚರ್ಚಿಸುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ಇಂದು ನೀವು ಸಮಯವನ್ನು ಮಾಡಿಕೊಂಡು ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ.

ತುಲಾ ರಾಶಿ:

ಕೆಲವು ನಿರಾಶೆಯನ್ನು ಮೆಟ್ಟಿನಿಲ್ಲುವ ಧೈರ್ಯ ತೋರಬೇಕು. ನಿಮ್ಮ‌ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ‌ ಸ್ನೇಹಿತರ ಮನೆಗೆ ಹೋಗುವಿರಿ. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ.

ವೃಶ್ಚಿಕ ರಾಶಿ:

ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಇಲ್ಲದ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ ಬರಬಹುದು. ಅಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸಬೇಕಾಗುವುದು. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ‌ ಮೇಲೆ ಬರಲಿದೆ. ಸಿಟ್ಟಿನಿಂದ ಅಂತಃಪ್ರಜ್ಞೆ ದೂರಾಗಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ಧನು ರಾಶಿ:

ಅತಿಯಾದ ಕೋಪದಿಂದ ಎಲ್ಲ ಕೆಲಸವು ವ್ಯತ್ಯಾಸವಾಗಬಹುದು. ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಬೇಕಾಗುವುದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ತಪ್ಪುಗಳನ್ನು ಸರಿಮಾಡಿಕೊಳ್ಳುವ ಮನಃಸ್ಥಿತಿ ಬರುತ್ತದೆ. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ‌ ಮನಸ್ಸಿನಿಂದ ಮಾತನಾಡುವಿರಿ.‌

ಮಕರ ರಾಶಿ:

ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಯಾರದೋ ಅಪರಿಚಿತರ ಸಂಪರ್ಕವನ್ನು ಮಾಡಬೇಕಾದೀತು. ಸ್ನೇಹಿತರಿಂದ ಆರ್ಥಿಕತೆಗೆ ಸಹಾಯವು ಸಿಗುವುದು. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧದಲ್ಲಿ ಒಡಕು ಬರಬಹುದು.‌ ವ್ಯವಹಾರವು ಸರಿಯಾಗಿ ಇರಲಿ. ಇಂದು ಯಾರನ್ನೂ ಸುಲಭವಾಗಿ ನಂಬಲಾರಿರಿ.

ಕುಂಭ ರಾಶಿ:

ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ಸುತ್ತಲಿನ ವಾತಾವರಣದಿಂದ ಮನಸ್ಸು ಕೆಡುವ ಸಾಧ್ಯತೆ ಹೆಚ್ಚು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ದುರ್ಬಲರ‌ ಜೊತೆ ಸಂಘರ್ಷ ಬೇಡ.

ಮೀನ ರಾಶಿ:

ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ತಮಾಷೆಯಾಗಿ ಶುರುವಾದ ಮಾತು ಕಲಹದಲ್ಲಿಯೋ ದ್ವೇಷದಲ್ಲಿಯೋ ಮುಕ್ತಯವಾಗಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ದೇಹದ ಯಾವುದಾದರೂ ಭಾಗದಲ್ಲಿ ಪ್ರಾಣಾಂತಿಕ ನೋವು ಕಾಣಿಸಿಜತು. ಉಗುಳಲಾಗದ, ನುಂಗಲಾಗದ ತುತ್ತನ್ನು ಬಾಯಲ್ಲಿ ಇಟ್ಟುಕೊಳ್ಳಬೇಕಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ / ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಾಧ್ಯ, ಕರಣ : ಚತುಷ್ಪಾತ್, ಸೂರ್ಯೋದಯ – 06 – 31 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:33 – 14:03, ಯಮಗಂಡ ಕಾಲ 08:02 – 09:32, ಗುಳಿಕ ಕಾಲ 11:02 – 12:33

-ಲೋಹಿತ ಹೆಬ್ಬಾರ್-8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 18ರ ದಿನಭವಿಷ್ಯ

ಈ ದಿನ ನೀವು ಹನುಮಾನ್ ಚಾಲೀಸಾ ಪಠಿಸುವುದರಿಂದ ಮಾತು ಮತ್ತು ಆರೋಗ್ಯದ ಏರುಪೇರು ನಿಯಂತ್ರಣಕ್ಕೆ ಬರುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಆಯಾ ಋತುಮಾನಕ್ಕೆ ತಕ್ಕಂತೆ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನಿಮ್ಮಲ್ಲಿ ಯಾರಿಗೆ ಆಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುತ್ತದೋ ಅಂಥವರಿಗೆ ಅದು ಉಲ್ಬಣಿಸುವ ಸಾಧ್ಯತೆ ಸಿಕ್ಕಾಪಟ್ಟೆ ಇದೆ. ಮುಖ್ಯವಾಗಿ ನಿಮಗೆ ಯಾವ ಆಹಾರ ಪದಾರ್ಥವು ಅಲರ್ಜಿಯೋ ಅಂಥ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಈ ದಿನ ನಿಮ್ಮ ಬಾಯಿಯ ಕಾರಣಕ್ಕೆ ಸಮಸ್ಯೆಯನ್ನು ಮಾಡಿಕೊಳ್ಳಲಿದ್ದೀರಿ. ಅದು ಬಾಯಿ ಚಪಲಕ್ಕೆ ಬಿದ್ದು, ವಿಪರೀತ ರುಚಿರುಚಿಯಾದದ್ದನ್ನು ಸೇವಿಸಿ ಸಮಸ್ಯೆ ಮಾಡಿಕೊಳ್ಳುತ್ತೀರೋ ಅಥವಾ ಆಡಬಾರದ ಮಾತು ಹಾಗೂ ಆಡಬಾರದ ಸ್ಥಳದಲ್ಲಿ ಆಡಿ, ತೊಂದರೆ ಮೈ ಮೇಲೆ ಎಳೆದುಕೊಳ್ಳುತ್ತೀರೋ ಒಟ್ಟಿನಲ್ಲಿ ನೆಮ್ಮದಿಯಂತೂ ಇಲ್ಲದಂತಾಗುತ್ತದೆ. ಇನ್ನು ಕೆಲವರಿಗೆ ಕೂದಲು ಹಾಗೂ ಚರ್ಮಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಡಬಹುದು. ಅಥವಾ ನೀವು ಈಗಾಗಲೇ ತೆಗೆದುಕೊಂಡ ಔಷಧಿಯಿಂದ ಸಮಸ್ಯೆ ಇನ್ನೂ ವಿಪರೀತಕ್ಕೆ ಹೋಗಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಆಲೋಚನೆಗೆ ಮನ್ನಣೆ ದೊರೆಯಲಿದೆ. ನನ್ನ ಮಾತಿಗೆ ಯಾವ ಮಹತ್ವ ಇದೆ ಎಂದುಕೊಂಡು ಇಷ್ಟು ಸಮಯ ನೀವೇನಾದರೂ ಇದ್ದಲ್ಲಿ ಈ ದಿನ ಅಭಿಪ್ರಾಯವನ್ನೇ ಬದಲಿಕೊಳ್ಳುವಂಥ ಬೆಳವಣಿಗೆಗಳು ಆಗಲಿವೆ. ಯಾರು ನಿಮ್ಮ ಬಗ್ಗೆ ಲಘುವಾಗಿ ಪರಿಗಣಿಸಿರುತ್ತಾರೋ ಅಂಥವರಿಗಂತೂ ಭಾರೀ ಅಚ್ಚರಿ ಮೂಡುವಂತೆ ಆಗುತ್ತದೆ. ಒಂದು ವೇಳೆ ನೀವೇನಾದರೂ ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ನೀವು ನಿರೀಕ್ಷೆ ಮಾಡಿದಂಥ ಅಥವಾ ನಿಮ್ಮಲ್ಲಿ ಕೆಲವರಿಗೆ ನಿರೀಕ್ಷೆಯನ್ನು ಮೀರಿ ಬೆಲೆಯು ದೊರೆಯಬಹುದು.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 18ರ ದಿನಭವಿಷ್ಯ

ಈ ದಿನ ಯಾವುದೇ ಮುಖ್ಯ ಕೆಲಸಕ್ಕಾಗಿ ತೆರಳುವ ಮುನ್ನ ಮನೆಯ ದೇವತೆಗೆ ಕುಂಕುಮಾರ್ಚನೆ ಮಾಡುವುದು ಸೌಭಾಗ್ಯ ತರುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸಂಕೋಚ ಪಟ್ಟು ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಎಂದೆನಿಸಲಿದೆ. ನಿಮ್ಮ ಎಲ್ಲ ವಿಚಾರಗಳಿಗೆ, ಸಂಗತಿಗಳಿಗೆ ಮೂಗು ತೂರಿಸಿಕೊಂಡು ಬರುತ್ತಿದ್ದ ಅಥವಾ ಬರುತ್ತಿರುವ ವ್ಯಕ್ತಿಯೊಬ್ಬರಿಗೆ ಮುಲಾಜಿಲ್ಲದೆ ಎಚ್ಚರಿಕೆಯನ್ನು ನೀಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಯಾವುದೋ ಸಂಕೋಚದಿಂದ ಹೇಳದೇ ಉಳಿದ ಸಂಗತಿಗಳನ್ನು ಏಕಾಏಕಿ ಹೇಳಿ ಮುಗಿಸಲಿದ್ದೀರಿ. ನಿಮ್ಮಲ್ಲಿ ಯಾರು ಪ್ರೀತಿ- ಪ್ರೇಮ ವಿಚಾರಗಳನ್ನು ಹೇಳಬೇಕು ಎಂದುಕೊಳ್ಳಲೇ ಬೇಕು

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಎಲ್ಲ ಜವಾಬ್ದಾರಿಗಳು ಒಂದೇ ಸಮನೆ ಬರುವುದರಿಂದ ಈ ದಿನ ಬಿಡುವೇ ಸಿಗದಷ್ಟರ ಮಟ್ಟಿಗೆ ಕೆಲಸಗಳು ಮೈ ಮೇಲೆ ಬೀಳಲಿವೆ. ಅದರ ಜತೆಗೆ ನೀವು ಪಡುವಂಥ ಶ್ರಮಕ್ಕೆ ತಕ್ಕ ಪ್ರತಿಫಲವೂ ದೊರೆಯಲಿದೆ. ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಲೆಟ್ ಅಥವಾ ಇಂಥ ಯಾವುದಾದರೂ ವಸ್ತುವನ್ನು ಈ ದಿನ ಕೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕ್ರೆಡಿಟ್ ಕಾರ್ಡ್ ಬಳಸಿಯೋ ಅಥವಾ ಇಎಂಐ ಆಗಿ ಕನ್ವರ್ಟ್ ಮಾಡಿಸಿಯೋ ಕೆಲವು ಖರೀದಿ ಮಾಡುವಂಥ ಸಾಧ್ಯತೆಗಳಿವೆ. ನೆನಪಿನಲ್ಲಿಡಿ, ಸಾಲ ದೊರೆಯುತ್ತದೆ ಅಥವಾ ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದೆ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯವನ್ನು ಮೀರಿ, ಖರೀದಿ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಅಥವಾ ಕುಟುಂಬದಲ್ಲಿನ ಕಿರಿಯರ ಶಿಕ್ಷಣದ ವಿಚಾರ ವಿಪರೀತ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ನೀವೇ ಸಾಲ ಮಾಡಬೇಕಾಗಬಹುದು.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 18ರ ದಿನಭವಿಷ್ಯ

ಈ ದಿನ ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸಿ. ಜ್ಞಾನ ಮತ್ತು ವೃತ್ತಿ ಏಳಿಗೆಗಾಗಿ ಗುರು ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆಯಿಂದ ಅನುಕೂಲ ಆಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಯಾವುದೇ ಪ್ರಯತ್ನದಲ್ಲಿ ಗೆಲುವು ಕಾಣಲಿದ್ದೀರಿ. ಅಚಾನಕ್ ಸಿಗುವಂತಹ ಹಳೆಯ ಸ್ನೇಹಿತರು ಹೇಳುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ. ಅವರೇನಾದರೂ ವ್ಯಾಪಾರ ಅಥವಾ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಅವಕಾಶಗಳ ಬಗ್ಗೆ ತಿಳಿಸಿದಲ್ಲಿ ಆ ಬಗ್ಗೆ ಕೂಡಲೇ ಸ್ಪಂದಿಸಿ. ಯಾವುದೇ ಕಾರಣಕ್ಕೂ ಆಮೇಲೆ ಮಾಡಿದರಾಯಿತು, ನೋಡಿದರಾಯಿತು ಎಂಬ ಧೋರಣೆಯನ್ನು ತೋರಿಸಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನೀವು ಈ ದಿನ ಇತರರ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತೀರಿ ಅಥವಾ ಅವರ ಪರವಾಗಿ ಮಾತುಕತೆಯನ್ನು ಮಾಡುತ್ತೀರಿ ಎಂದಾದಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳು ಬಹಳ ಹೆಚ್ಚಿದೆ. ನಿಮ್ಮ ಪ್ರಭಾ ವಲಯ ವಿಸ್ತರಣೆ ಆಗಲಿದೆ. ಮಕ್ಕಳ ಸಲುವಾಗಿ ವಾಹನಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇನ್ನು ಅವರ ಸಲುವಾಗಿ ಪ್ರವಾಸಗಳ ಯೋಜನೆಯನ್ನು ರೂಪಿಸಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮಲ್ಲಿ ಕೆಲವರು ಬಸ್, ರೈಲು, ವಿಮಾನದಲ್ಲಿ ಸೀಟ್ ಇಂಥದ್ದನ್ನು ಬುಕ್ ಮಾಡಬಹುದು ಅಥವಾ ಪ್ಯಾಕೇಜ್ ಪ್ರವಾಸಗಳನ್ನು ಸಹ ಬುಕ್ ಮಾಡುವಂಥ ಸಾಧ್ಯತೆಗಳು ಈ ದಿನ ಇದೆ. ಸಂಗಾತಿಯ ಕಡೆ ಸಂಬಂಧಿಕರು ಸಹಾಯ ಕೇಳಿಕೊಂಡು ಬರಬಹುದು. ನಿಮ್ಮಲ್ಲಿ ಕೆಲವರು ಈಗ ಮಾಡುತ್ತಿರುವ ಉದ್ಯೋಗ, ವೃತ್ತಿ ಅಥವಾ ವ್ಯಾಪಾರದ ಜತೆಗೆ ಇನ್ನೊಂದು ವ್ಯವಹಾರ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

15 ದಿನ ಮಗು ಅನುಮಾಸ್ಪದ ಸಾವು:ತಂದೆಯೇ ಮಗುವಿಗೆ ವಿಷ ಪ್ರಾಶನ ಶಂಕೆ

ಬೆಳಗಾವಿ, (ಮಾರ್ಚ್ 17): 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ತಂದೆ ಮೇಲೆ ಅನುಮಾನ ವ್ಯಕ್ತವಾಗಿದೆ. ಹೌದು…ಳಗಾವಿ (Belagavi) ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಪ್ರಿಯಾಂಕಾ ಇಂದು (ಮಾರ್ಚ್ 17) ಏಕಾಏಕಿ ಸಾವನ್ನಪ್ಪಿದ್ದು, ತಂದೆಯೇ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾನೆ. ಬಿಮ್ಸ್ ಆಸ್ಪತ್ರೆಗೆ ಡಿಸಿಪಿ ನಾರಾಯಣ್ ಬರಮನಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.

ಹೆರಿಗೆ ಹಿನ್ನೆಲೆ ಶೀಲಾ ತವರುಮನೆ ಉಕ್ಕಡ ಗ್ರಾಮದಲ್ಲಿ ಇದ್ದಳು. ಹೀಗಾಗಿ ಭೀಮರಾಯ ಇಂದು (ಮಾರ್ಚ್ 17) ಮಧ್ಯಾಹ್ನ ಉಕ್ಕಡ ಗ್ರಾಮ ಆಗಮಿಸಿ ಪತ್ನಿ ಹಾಗೂ ಮಗು ಪ್ರಿಯಾಂಕಾಳನ್ನ ನೋಡಿಕೊಂಡು ವಾಪಸ್ ತಮ್ಮೂರು ಕಡೆ ಹೋಗಿದ್ದಾನೆ. ಆದ್ರೆ, ಏಕಾಏಕಿ ಮಗು ಸಾವನ್ನಪ್ಪಿದೆ. ಇದರಿಂದ ಪೋಷಕರು ಕಂಗಾಲಾಗಿದ್ದು, ಮಗು ಚೆನ್ನಾಗಿತ್ತು ದಿಢೀರ್ ಏನಾಯ್ತು ಎಂದು ಯೋಚಿಸುವಾಗ ಮೃತ ಮಗುವಿನ ತಂದೆ ಭೀಮರಾಯನ ಮೇಲೆ ಅನುಮಾನ ಬಂದಿದೆ.

ಇದನ್ನೂ ಓದಿ: ಒಂದೇ ರೂಮ್​ನಲ್ಲಿದ್ದ ಸ್ನೇಹಿತರ ನಡುವೆ ಗಲಾಟೆ: ಸುತ್ತಿಗೆಯಿಂದ ಹೊಡೆದು ಗೆಳೆಯನ ಬರ್ಬರ ಹತ್ಯೆ

ಸಣ್ಣದೊಂದು ಟ್ಯೂಬ್ ಹಿಡಿದುಕೊಂಡು ಬಂದಿದ್ದ. ಅದೇ ಟ್ಯೂಬ್​ನಿಂದ ಮಗುವಿಗೆ ಕುಡಿಸಿದ್ದಾನೆ ಎಂದು ಪತ್ನಿ ಶೀಲಾ ಹಾಗೂ ಆಕೆಯ ಪೋಷಕರಿಂದ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಭೀಮರಾಯ ಸಹ ನಾಪತ್ತೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ  ಡಿಸಿಪಿ ನಾರಾಯಣ್ ಬರಮನಿ ಆಗಮಿಸಿ ಪರಿಶೀಲನೆ ಮಾಡಿದ್ದು, ಮೃತ ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಆಚೆ ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link