Headlines

nagaraj11081993

ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಪಟ್ಟು

ಬೆಂಗಳೂರು, ಮಾರ್ಚ್​ 17: ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ಅಚ್ಚರಿ ಮೂಡಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯನ್ನು ಚೀಲಕ್ಕೆ ಹಾಕಿ ಕೊರಿಯರ್ ಶಾಪ್​ಗೆ ತಂದಿದ್ದಾರೆ. ಪುಂಡರ ಹುಚ್ಚಾಟಕ್ಕೆ ಕೊರಿಯರ್ ಶಾಪ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಪ್ರೊಫೆಷನಲ್ ಕೊರಿಯರ್ ಶಾಪ್​ಗೆ ಬಂದ ಪುಂಡರು ಪ್ಲಾಸ್ಟಿಕ್ ಚೀಲದಲ್ಲಿರುವ ವ್ಯಕ್ತಿಯನ್ನು ಕೊರಿಯರ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಈ ವೇಳೆ ಚೀಲ ಅಲುಗಾಡುತ್ತಿರುವುದನ್ನು ಗಮನಿಸಿದ ಕೊರಿಯರ್ ಸಿಬ್ಬಂದಿ ಪರಿಶೀಲಿಸಿದ್ದು, ಅದರೊಳಗೆ ಮನುಷ್ಯನೊಬ್ಬ ಇರುವುದು ಕಂಡುಬಂದಿದೆ. ಒಂದು ಕ್ಷಣ ಕೊರಿಯರ್ ಶಾಪ್ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ….

Read More

ಪ್ರೇಮ್ ಬರೆದ ‘ಕೆಡಿ’ ಸಿನಿಮಾದ ಹಾಡಿನ ಅಶ್ಲೀಲತೆಗೆ ಕಂಗನಾ ರಣಾವತ್ ಆಕ್ರೋಶ

ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ (KD: The Devil) ನೆಗೆಟಿವ್ ಕಾರಣಕ್ಕೆ ಸುದ್ದಿ ಆಗುತ್ತಿದೆ. ಈ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಸದ್ಯ ದೇಶಾದ್ಯಂತ ಭಾರಿ ವಿವಾದಕ್ಕೆ ಸಿಲುಕಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಹಾಡಿನ ಸಾಹಿತ್ಯ ಮತ್ತು ನೃತ್ಯ ಸಂಯೋಜನೆ ಬಗ್ಗೆ ಈಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ತೀವ್ರವಾಗಿ ಕಿಡಿಕಾರಿದ್ದಾರೆ. ಈ…

Read More

IPL 2026: ಕನ್ನಡಿಗ ಕೆಎಲ್ ರಾಹುಲ್​ಗೆ ಮಹತ್ವದ ಜವಾಬ್ದಾರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

ರಣಜಿ ಅಂಗಳದಲ್ಲಿ ಕರ್ನಾಟಕ ತಂಡವನ್ನು ಫೈನಲ್​ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಇದೀಗ ಐಪಿಎಲ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕೆಎಲ್ ರಾಹುಲ್, ಈ ಬಾರಿಯ ಐಪಿಎಲ್‌ನಲ್ಲಿ ಡೆಲ್ಲಿ ತಂಡದಲ್ಲಿ ಹೊಸ ಪಾತ್ರವನ್ನು ನಿರ್ವಹಿಸಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದು, ಕೆಎಲ್ ರಾಹುಲ್ ಅವರನ್ನು ಓಪನರ್ ಆಗಿ ಆಡಿಸಲು ನಿರ್ಧರಿಸಿದೆ. ಹೀಗಾಗಿ ಅವರು ಈ ಆವೃತ್ತಿಯ ಮೊದಲ ಪಂದ್ಯದಿಂದಲೇ ಡೆಲ್ಲಿ ಕ್ಯಾಪಿಟಲ್ಸ್…

Read More

ಮಳೆ ಅಂತ ಪಾಳು ಮನೆಯ ಕೆಳಗೆ ನಿಂತಿದ್ದ ದಂಪತಿ ಮೇಲೆ ಕುಸಿದ ಗೋಡೆ: ಮುಂದಾಗಿದ್ದು ಘೋರ ದುರಂತ

ಬೆಳಗಾವಿ, ಮಾರ್ಚ್​ 17: ರಣ ರಣ ಬಿಸಿಲಿನ ನಡುವೆ ರಾಜ್ಯದಲ್ಲಿ ಆಲಿಕಲ್ಲು ಸಹಿತ ಮಳೆಯಾಗುತ್ತಿದೆ (Rain). ಆ ಮೂಲಕ ಬಿಸಿಲಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರದಿದ್ದಾನೆ. ಸುಡುಬೇಸಿಗೆ ನಡುವೆ ಅಕಾಲಿಕ ಮಳೆ ಶುರುವಾಗಿದೆ. ಈ ಅಕಾಲಿಕ ಮಳೆಗೆ ದುರಂತಗಳು ಸಂಭವಿಸಿದೆ. ಮಳೆ ಹೆಚ್ಚಾದ ಹಿನ್ನೆಲೆ ಪಾಳು ಮನೆಯ ಕೆಳಗೆ ನಿಂತಿದ್ದ ದಂಪತಿ ಮೇಲೆ ಗೋಡೆ ಕುಸಿದುಬಿದ್ದು ಪತ್ನಿ ಸಾವನ್ನಪ್ಪಿದ್ದು (death), ಪತಿ ಬಚಾವ್ ಆಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ನಡೆದಿದ್ದೇನು? ದಂಪತಿ ಕೋಳಿಗಳನ್ನು…

Read More

ಭಯೋತ್ಪಾದನೆ ಆರೋಪದಡಿ ಭಾರತದಲ್ಲಿ 6 ಉಕ್ರೇನಿಯನ್ನರು, ಓರ್ವ ಅಮೆರಿಕನ್ ಬಂಧನ

ನವದೆಹಲಿ, ಮಾರ್ಚ್ 17: ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಅಧಿಕಾರಿಗಳು 6 ಉಕ್ರೇನಿಯನ್ನರು ಮತ್ತು ಒಬ್ಬ ಅಮೇರಿಕನ್ ಪ್ರಜೆಯನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ 3 ವಿಮಾನ ನಿಲ್ದಾಣಗಳಲ್ಲಿ 7 ವಿದೇಶಿ ಪ್ರಜೆಗಳನ್ನು UAPA ಅಡಿಯಲ್ಲಿ ಬಂಧಿಸಿತ್ತು. ಆರೋಪಿಗಳು ಪ್ರಸ್ತುತ ಎನ್​ಐಎ ವಶದಲ್ಲಿದ್ದಾರೆ. ಅವರನ್ನು ಇಂದು ಪಟಿಯಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧದಲ್ಲಿ ತರಬೇತಿ ನೀಡುವ ಪಿತೂರಿಯ ತನಿಖೆಗಾಗಿ ದೆಹಲಿ…

Read More

ಅಪ್ಪು ಅಭಿಮಾನಿಗಳ ಪುಣ್ಯದ ಕೆಲಸ: ಮನಸಾರೆ ಹೊಗಳಿದ ನಟ ಪ್ರಥಮ್

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಹೆಸರಿನಲ್ಲಿ ಅವರ ಅಭಿಮಾನಿಗಳು ಪುಣ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ. ಅದನ್ನು ನಟ ಪ್ರಥಮ್ ಮೆಚ್ಚಿಕೊಂಡಿದ್ದಾರೆ. ಇಂದು (ಮಾರ್ಚ್ 17) ಅಪ್ಪು ಹುಟ್ಟುಹಬ್ಬ. ಆ ಪ್ರಯುಕ್ತ ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬದವರು, ಅನೇಕ ಸೆಲೆಬ್ರಿಟಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ನಟ ಪ್ರಥಮ್ (Pratham) ಅವರು ಈ ವೇಳೆ ಮಾತನಾಡಿದರು. ‘ಅಭಿಮಾನಿಗಳು ನೇತ್ರದಾನ ಮಹಾದಾನ ಎಂಬ ಈ ಕೆಲಸವನ್ನು ನಾಲ್ಕು ವರ್ಷಗಳಿಂದ ಶ್ರಮವಹಿಸಿ ಮಾಡುತ್ತಿದ್ದಾರೆ. ಅಪ್ಪು ಸರ್ ಹೆಸರಲ್ಲಿ ಇದು…

Read More

ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ

ಇತ್ತೀಚಿನ ವರ್ಷಗಳಲ್ಲಿ ಹೈ ಬಿಪಿ ಪ್ರಕರಣಗಳು ಹೆಚ್ಚುತ್ತಿವೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ವಸ್ಥ ಜೀವನಶೈಲಿ ಈ ರೀತಿ ಸಮಸ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟ 120/80 ಎಂಎಂಎಚ್ಜಿ (mmHg) ಇರಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಇದು ನಿರಂತರವಾಗಿ 140/90 ಎಂಎಂಎಚ್ಜಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅದನ್ನು ಹೈಪರ್‌ಟೆನ್ಶನ್ ಎಂದು ಕರೆಯಲಾಗುತ್ತದೆ. ಈ ಮಟ್ಟದಲ್ಲಿ ಬಿಪಿ ದೀರ್ಘಕಾಲ ಇದ್ದರೆ ಸ್ಟ್ರೋಕ್ ಅಪಾಯ ಬಹಳ ಹೆಚ್ಚುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ…

Read More

ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು, ಫುಲ್ ಟ್ರಾಫಿಕ್ ಜಾಮ್

ಧಾರವಾಡ, (ಮಾರ್ಚ್ 17): ಕಾಶ್ಮೀರ, ಶಿಮ್ಲಾದಲ್ಲಿ ಹಿಮಪಾತದಿಂದಾಗಿ ಹೇಗೆ ಮಂಜುಗಡ್ಡೆ ರಸ್ತೆ ತುಂಬೆಲ್ಲಾ ಬಿದ್ದಿರುತ್ತೋ ಹಾಗೇ ಧಾರವಾಡ ಜಿಲ್ಲೆಯ ಕಲ್ಲಘಟಗಿಯಲ್ಲೂ ಸಹ ಆಲಿಕಲ್ಲು ಬಿದ್ದಿದೆ. ಮಳೆಯಿಂದಾಗಿ ರಸ್ತೆಯಲೆಲ್ಲಾ ಆಲಿಕಲ್ಲು ಬಿದ್ದಿದ್ದು, ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಶಿ ರಾಶಿ ಆಲಿಕಲ್ಲು ಹೇಗೆ ಬಿದ್ದಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ. Source link

Read More

ಅಮೆರಿಕ, ಇಸ್ರೇಲ್ ನಮ್ಮೆದುರು ಮಂಡಿಯೂರಬೇಕು; ಇರಾನ್‌ ಸುಪ್ರೀಂ ನಾಯಕ ಪಟ್ಟು

ಟೆಹ್ರಾನ್, ಮಾರ್ಚ್ 17: ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ನಿಲ್ಲಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಮ್ಮ ಮುಂದೆ ಮಂಡಿಯೂರಬೇಕು, ಆ ಎರಡೂ ದೇಶಗಳು ಸೋಲನ್ನು ಒಪ್ಪಿಕೊಳ್ಳಬೇಕು. ಶಾಂತಿ ಮಾತುಕತೆಯ ಸಮಯ ಮುಗಿದುಹೋಗಿದೆ ಎಂದು ಅವರು ಘೋಷಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ವಿರೂಪಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ ಬೆನ್ನಲ್ಲೇ ಅವರು ಈ…

Read More

IPL 2026: ಹೇಜಲ್​ವುಡ್ ಎಷ್ಟು ಪಂದ್ಯಗಳಿಗೆ ಅಲಭ್ಯ? ಅವರನ್ನು ಬದಲಿಸುವವರ್ಯಾರು?

2026 ರ ಐಪಿಎಲ್​ಗೆ ಎರಡು ವಾರಕ್ಕೂ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಈ ಲೀಗ್​ನಲ್ಲಿ ಆಡುವ ವಿದೇಶಿ ಆಟಗಾರರು ತಮ್ಮ ತಮ್ಮ ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಆರ್​ಸಿಬಿ ಜೀವಾಳ ವಿರಾಟ್ ಕೊಹ್ಲಿ ಕೂಡ ಇಂದು ಮಡದಿಯೊಂದಿಗೆ ಭಾರತಕ್ಕೆ ಬಂದಿದ್ದಾರೆ. ಲೀಗ್​ನ ಮೊದಲ ಪಂದ್ಯ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿ ಪಾಳಯಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಅನುಭವಿ…

Read More