ಹೊರನಡೆದಿದ್ದು ಒಳ್ಳೆಯದೇ ಆಯಿತು; ಜೋ ಕೆಂಟ್ ರಾಜೀನಾಮೆ ಕುರಿತು ಟ್ರಂಪ್ ಪ್ರತಿಕ್ರಿಯೆ
ವಾಷಿಂಗ್ಟನ್, ಮಾರ್ಚ್ 17: ಇರಾನ್ ಮೇಲೆ ಇಸ್ರೇಲ್ ಜೊತೆ ಕೈಜೋಡಿಸಿ ಅಮೆರಿಕ ಯುದ್ಧ ಸಾರಿದ ನಂತರ ಟ್ರಂಪ್ (Donald Trump) ಸರ್ಕಾರದ ಪ್ರಮುಖ ಅಧಿಕಾರಿಯಾದ ಜೋ ಕೆಂಟ್ ರಾಜೀನಾಮೆ ನೀಡಿದ್ದಾರೆ. ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕನಾಗಿರುವ ಜೋ ಕೆಂಟ್ ಇಂದು ರಾಜೀನಾಮೆ ನೀಡಿದ್ದಾರೆ. ಈ ವೇಳೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಅವರು ಅಮೆರಿಕಕ್ಕೆ ಇರಾನ್ ಬೆದರಿಕೆಯೊಡ್ಡಿರಲಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. “ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋ ಕೆಂಟ್…