ಶಕ್ತಿಮಾನ್ ಕತೆಯನ್ನೇ ಅಲ್ಲು ಅರ್ಜುನ್ಗಾಗಿ ಹೆಣೆಯುತ್ತಿರುವ ಬಾಸಿಲ್ ಜೋಸೆಫ್? – Kannada News | Basil Joseph not doing Shaktiman movie with Allu Arjun
‘ಪುಷ್ಪ 2’ (Pushpa 2) ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಅಲ್ಲು ಅರ್ಜುನ್ ಗೆ ಒಂದರ ಹಿಂದೊಂದು ದೊಡ್ಡ ದೊಡ್ಡ ನಿರ್ದೇಶಕರುಗಳ ಆಫರ್ ಬಂದಿದ್ದು, ಈಗಾಗಲೇ ಕೆಲವು ನಿರ್ದೇಶಕರುಗಳೊಟ್ಟಿಗೆ ಸಿನಿಮಾ ಒಪ್ಪಿಕೊಂಡಿದ್ದಾರೆ ಸಹ. ಇದೀಗ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಸ್ಟಾರ್ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಸಂದೀಪ್ ರೆಡ್ಡಿ ವಂಗಾ ಸಿನಿಮಾ…