IPL 2026: ಕಣ್ಣೀರಿಟ್ಟಿದ್ದ ಅಭಿಮಾನಿ ಬಳಿ ಕ್ಷಮೆಯಾಚಿಸಿದ ರೋಹಿತ್ ಶರ್ಮಾ – Kannada News | Rohit Sharma Apologizes to Crying Fan: MI Star’s Kind Gesture Amidst IPL Struggles
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಈ ಸೀಸನ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿರುವ 13 ಪಂದ್ಯಗಳಲ್ಲಿ ಮುಂಬೈ ಕೇವಲ 4 ಪಂದ್ಯಗಳನ್ನು ಗೆದ್ದು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಆಟಗಾರರ ಸ್ಥಿರ ಪ್ರದರ್ಶನದಲ್ಲಿನ ಕೊರೆತೆಯೇ ಪ್ರಮುಖ ಕಾರಣ ಎನ್ನಬಹುದು. ಅದರಲ್ಲೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದು ಕೂಡ ತಂಡವನ್ನು ಸಂಕಷ್ಟಕ್ಕೆ ದೂಡಿತು. ರೋಹಿತ್ ಪಂದ್ಯವನ್ನು ಆಡದಿದ್ದರೂ ಅವರ ಅಭಿಮಾನಿಗಳ…