Headlines

nagaraj11081993

IPL 2026: ಈ ಐಪಿಎಲ್‌ನಲ್ಲಿ ರೋಹಿತ್ ‘ಇಂಪ್ಯಾಕ್ಟ್’ ಹೇಗಿರಲಿದೆ? ಸ್ಪಷ್ಟನೆ ನೀಡಿದ ಹೆಡ್​ ಕೋಚ್

2026 ರ ಐಪಿಎಲ್ ಸಮೀಪಿಸುತ್ತಿದ್ದು, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಅಭಿಮಾನಿಗಳು ಈ ಚುಟುಕು ಮಾದರಿಯಲ್ಲಿ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದಕ್ಕೆ ಕಾರಣ, ಇವರಿಬ್ಬರು ಈ ಮಾದರಿಯಲ್ಲಿ ಆಡುವುದು ಐಪಿಎಲ್‌ನಲ್ಲಿ ಮಾತ್ರ. ಹೀಗಾಗಿ ಈ ಇಬ್ಬರು ದಿಗ್ಗಜರು ವರ್ಷದ ನಂತರ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಅದರಲ್ಲೂ ಹಿಟ್​ಮ್ಯಾನ್ ರೋಹಿತ್ ಶರ್ಮಾ ಈ ಲೀಗ್​ಗಾಗಿ ಸಾಕಷ್ಟು ಬೆವರು ಹರಿಸುತ್ತಿದ್ದು, ಅದರ ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಇದೆಲ್ಲದರ ನಡುವೆ ಈ ಬಾರಿಯ…

Read More

ಪ್ಲೀಸ್ ಸಾಯಬೇಡಮ್ಮ; ರೈಲು ಹಳಿ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಕಾಪಾಡಿದ 7 ವರ್ಷದ ಮಗಳು

ನವದೆಹಲಿ, ಮಾರ್ಚ್ 17: ಅಲಿಘರ್ ರೈಲು ನಿಲ್ದಾಣದಲ್ಲಿ ಯಾರೂ ಊಹಿಸದ ಘಟನೆಯೊಂದು ನಡೆದಿದೆ. ರೈಲು ಇನ್ನೇನು ಸ್ಟೇಷನ್​ಗೆ ತಲುಪಬೇಕು ಎನ್ನುವಷ್ಟರಲ್ಲಿ ತನ್ನ ಮಗಳ ಜೊತೆ ರೈಲಿಗಾಗಿ ಕಾಯುತ್ತಿದ್ದ ಮಹಿಳೆ ರೈಲು ಹಳಿ ಮೇಲೆ ಹಾರಿದ್ದಳು. ಆತ್ಮಹತ್ಯೆಗೆ ಯತ್ನಿಸಿದ ಆಕೆಯ ಹಿಂದೆಯೇ ಓಡಿದ 7 ವರ್ಷದ ಮಗಳು ಅಮ್ಮಾ ಬೇಡಮ್ಮಾ ಎನ್ನುತ್ತಾ ಕೂಗತೊಡಗಿದ್ದಾಳೆ. ಆಕೆಯ ಕಿರುಚಾಟ ಕೇಳಿದ ನಂತರ ಇತರ ಪ್ರಯಾಣಿಕರು ಮತ್ತು ಜಿಆರ್‌ಪಿ ಸಿಬ್ಬಂದಿ ಓಡಿ ಬಂದು ಆ ಮಹಿಳೆಯನ್ನು ಕಾಪಾಡಿದ್ದಾರೆ. ಮನೆಯಲ್ಲಿನ ಕೌಟುಂಬಿಕ ಹಿಂಸಾಚಾರದಿಂದ ನೊಂದಿದ್ದ…

Read More

‘ನನಗೆ ನಯನತಾರಾ ಬೇಕು’: ಸಂಸದನ ಅಸಭ್ಯ ಮಾತಿಗೆ ಕಲಾವಿದರ ಸಂಘ ಗರಂ

ತಮಿಳುನಾಡಿನ ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ (Nayanthara) ಬಗ್ಗೆ ನೀಡಿದ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆಯು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಸುರಕ್ಷತೆಗಾಗಿ ತಮ್ಮ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲೇ ಅವರು ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಸಿ.ವಿ. ಷಣ್ಮುಗಂ (CV Shanmugam) ಅವರ ಹೇಳಿಕೆಯನ್ನು ದಕ್ಷಿಣ ಭಾರತ ಕಲಾವಿದರ ಸಂಘ ಖಂಡಿಸಿದೆ. ಕೂಡಲೇ ಕ್ಷಮೆ ಕೇಳಬೇಕು ಎಂದು ಸಂಘ ಆಗ್ರಹಿಸಿದೆ. ಘಟನೆ ಹಿನ್ನೆಲೆ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್…

Read More

IPL 2026: ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್

ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಯೂರಿರುವ ವಿರಾಟ್ ಕೊಹ್ಲಿ ಇದೀಗ 2026 ರ ಐಪಿಎಲ್​ಗಾಗಿ ಭಾರತದಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಿಂದ ತನ್ನ ಮಡದಿ ಅನುಷ್ಕಾ ಶರ್ಮಾ ಅವರೊಂದಿಗೆ ಹೊರಬರುತ್ತಿರುವ ಅವರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಐಪಿಎಲ್‌ನ 19 ನೇ ಸೀಸನ್‌ಗಾಗಿ ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದರು. ಅದರ ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಆದಾಗ್ಯೂ, ಭಾರತಕ್ಕೆ ಬಂದ ನಂತರ, ಅವರು ಶೀಘ್ರದಲ್ಲೇ ಆರ್‌ಸಿಬಿ ಶಿಬಿರವನ್ನು ಸೇರಲಿದ್ದು, ತಮ್ಮ ಅಭ್ಯಾಸವನ್ನು ಮುಂದುವರೆಸಿಲಿದ್ದಾರೆ. ಆರ್‌ಸಿಬಿ ಪ್ರಸ್ತುತ ಐಪಿಎಲ್…

Read More

ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?

ಬೆಂಗಳೂರು, (ಮಾರ್ಚ್ 17): ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭೆ ಕಲಾಪದಲ್ಲಿಂದು ಹಿರಿಯ ಶಾಸಕ ಬಿ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ವರ್ಗಾವಣೆ ಆದೇಶ ನನ್ನ ಬಳಿ ಇದೆ. ಅಧಿಕಾರಿಗಳೇ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ಬಂದ ಮೇಲೆ ಇಲಾಖೆಯಲ್ಲಿ ಸುಧಾರಣೆ ತರುತ್ತಿದ್ದಾರೆ. ಆದರೆ ರಿವರ್ಸ್ ಗೇರ್ ನಲ್ಲಿ ತರಬೇಕಾ? ಹಿಂದೆ ಹೋಗುವ ಗಾಡಿ ಮುಂದೆ ಹೋಗಬೇಕು. ಆದರೆ ಅದು ಹಿಂದನೆ ಹೋಗುತ್ತಿದೆ. ಡೆಲಿವರಿನೇ ಆಗಿಲ್ಲ ಎಂದು ವೈದ್ಯರ ವರ್ಗಾವಣೆ ಮಾಡಿದ್ದೀರಿ….

Read More

ಟ್ರಂಪ್​ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ

ವಾಷಿಂಗ್ಟನ್, ಮಾರ್ಚ್ 17: ಇಸ್ರೇಲ್ ಜೊತೆ ಸೇರಿಕೊಂಡು ಇರಾನ್ (Iran War) ಮೇಲೆ ಅಮೆರಿಕ ಕೂಡ ದಂಡೆತ್ತಿ ಹೋಗಿತ್ತು. ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ, ಸುಪ್ರೀಂ ನಾಯಕ ಖಮೇನಿಯನ್ನು ಕೊಂದರೆ ಸೋಲೊಪ್ಪಿಕೊಂಡು ಇರಾನ್ ತಮ್ಮ ಅಡಿಯಾಳಾಗುತ್ತದೆ ಎಂಬ ಭ್ರಮೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ (Donald Trump) ಇರಾನ್ ಸರಿಯಾಗೇ ಬೆವರಿಳಿಸುತ್ತಿದೆ. ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸುತ್ತಲೇ ಇರುವ ಇರಾನ್ ತಾನು ನಾಶವಾಗುವುದಾದರೆ ಅಮೆರಿಕ ಮತ್ತು ಇಸ್ರೇಲ್​ ಅನ್ನು ನಾಶಮಾಡಿಯೇ ತೀರುತ್ತೇನೆ…

Read More

Chanakya Niti: ಈ ಎರಡು ವೈಯಕ್ತಿಕ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ತಪ್ಪಿಯೂ ಕೂಡ ಶೇರ್‌ ಮಾಡಬಾರದು

ವೃತ್ತಿ ಜೀವನದಲ್ಲಿ (career) ಯಶಸ್ಸನ್ನು ಸಾಧಿಸಬೇಕು, ಉನ್ನತ ಸ್ಥಾನವನ್ನು ಪಡೆಯಬೇಕು ಎಂಬ ಬಯಕೆ, ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಇದಕ್ಕಾಗಿ ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮವನ್ನೂ ಪಡುತ್ತಾರೆ. ಆದರೆ ಕೆಲವರು ಎಷ್ಟೇ ಶ್ರಮ ವಹಿಸಿ ಕೆಲಸ ಮಾಡಿದರೂ ವೃತ್ತಿ ಜೀವನದಲ್ಲಿ ಅಂದುಕೊಂಡ ಯಶಸ್ಸು ಲಭಿಸುವುದಿಲ್ಲ. ಇದಕ್ಕೆ ಕಾರಣ ನಮ್ಮ ತಪ್ಪುಗಳೇ ಕಾರಣ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯರು. ಹೌದು ಆಚಾರ್ಯ ಚಾಣಕ್ಯರ ಪ್ರಕಾರ ನಾವು ನಮ್ಮ ಕೆಲವು ಸೀಕ್ರೆಟ್‌ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದರಿಂದಲೇ ಸಮಸ್ಯೆಗಳು ಉದ್ಭವಿಸುವುದು. ಆದ್ದರಿಂದ…

Read More

ವಿಡಿಯೋನಲ್ಲಿರುವ ಮಹಿಳೆಯರು ಬೇರೆ-ಬೇರೆ: ಇನ್ಸ್​ಪೆಕ್ಟರ್​​ ಸಂದೇಶ ಕೇಸಿನ ತನಿಖಾ ವರದಿಯಲ್ಲಿ ಬಹಿರಂಗ

ಮಂಗಳೂರು (ಮಾರ್ಚ್ 17): ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆದು ಲೈಂಗಿಕ ಕಿರುಕುಳ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ (Moodbidri inspector Sandesh case) ನನ್ನು ಅಮಾನತು ಮಾಡಲಾಗಿದೆ. ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸಿಪಿ (ACP) ನೀಡಿದ ಪ್ರಾಥಮಿಕ ತನಿಖಾ ವರದಿಯ ಆಧರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನ…

Read More

ಗ್ಯಾಸ್​​ ಅಭಾವವನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ನೂರಾರು ಸಿಲಿಂಡರ್​​ ಸೀಜ್​​​

ಬೆಂಗಳೂರು, ಮಾರ್ಚ್​ 17: ರಾಜ್ಯದಲ್ಲಿ ಗ್ಯಾಸ್‌ಗಾಗಿ ದೊಡ್ಡ ಸಂಕಷ್ಟವೇ ಎದುರಾಗಿದ್ದರೆ, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಗೃಹಬಳಕೆ ಗ್ಯಾಸ್‌ ಸಿಲಿಂಡರ್‌ಗಳನ್ನ (Gas cylinder) ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವೆಡೆ ಕಳ್ಳಾಟ ಆಡುತ್ತಿದ್ದವರಿಗೆ ಇದೀಗ ಪೊಲೀರು ಬಿಸಿಮುಟ್ಟಿಸಿದ್ದು ಜೊತೆಗೆ ನೂರಾರು ಗ್ಯಾಸ್‌ ಸಿಲಿಂಡರ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೀದರ್‌ನಲ್ಲಿ 105 ಗ್ಯಾಸ್‌ ಸಿಲಿಂಡರ್‌ ವಶಕ್ಕೆ ಇರಾನ್‌-ಇಸ್ರೇಲ್‌, ಅಮೆರಿಕ ಯುದ್ಧದಿಂದ ಭಾರತದಲ್ಲಿ ಅಡುಗೆ ಅನಿಲ ಸಮಸ್ಯೆ ತಲೆದೋರಿದ್ದು, ಕರುನಾಡಿನಲ್ಲೂ ಸಂಕಷ್ಟ ಇದೆ. ಇಂಥಾ…

Read More

Bangalore Rain: ಬೆಂಗಳೂರಿನ ಹಲವೆಡೆ ತುಂತುರು ಮಳೆ: ಬಿಸಿಲ ಬೇಗೆಗೆ ತಂಪೆರೆದ ವರುಣ

ಬೆಂಗಳೂರು, ಮಾರ್ಚ್​​ 17: ಕರ್ನಾಟಕದಲ್ಲಿ ಯುಗಾದಿಗೂ ಮುನ್ನವೇ ಬೇಸಿಗೆ ಮಳೆ (Rain) ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ಸುರಿದಿದೆ. ಆ ಮೂಲಕ ಬಿಸಿಲಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಇತ್ತ ಸಿಲಿಕಾನ್​​ ಸಿಟಿಗೂ ಮಳೆಯ ಸಿಂಚನವಾಗಿದೆ. ಬೆಂಗಳೂರಿನ ಕೆಂಗೇರಿ ಸುತ್ತುಮುತ್ತ ಜೋರು ಮಳೆ ಸುರಿದಿದ್ದು, ರಿಚ್​​​ಮಂಡ್​ ಟೌನ್ ಸುತ್ತಮುತ್ತ ತುಂತುರು ಮಳೆ ಸುರಿದಿದೆ. ಕಳೆದ ಕೆಲ ದಿನಗಳಿಂದ ನಗರದಲ್ಲಿ ಬಿಸಿಲು ಹೆಚ್ಚಾಗಿ ಉಷ್ಣಾಂಶ ಹೆಚ್ಚಾಗಿತ್ತು. ಬೇಸಿಗೆ ಧಗೆಗೆ ಜನರು  ಬೆಂದುಹೋಗಿದ್ದರು. ಹೀಗಾಗಿ…

Read More