ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಬೆಂಗಳೂರು, (ಮಾರ್ಚ್ 17): ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭೆ ಕಲಾಪದಲ್ಲಿಂದು ಹಿರಿಯ ಶಾಸಕ ಬಿ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ವರ್ಗಾವಣೆ ಆದೇಶ ನನ್ನ ಬಳಿ ಇದೆ. ಅಧಿಕಾರಿಗಳೇ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ದಿನೇಶ್ ಗುಂಡೂರಾವ್ ಬಂದ ಮೇಲೆ ಇಲಾಖೆಯಲ್ಲಿ ಸುಧಾರಣೆ ತರುತ್ತಿದ್ದಾರೆ. ಆದರೆ ರಿವರ್ಸ್ ಗೇರ್ ನಲ್ಲಿ ತರಬೇಕಾ? ಹಿಂದೆ ಹೋಗುವ ಗಾಡಿ ಮುಂದೆ ಹೋಗಬೇಕು. ಆದರೆ ಅದು ಹಿಂದನೆ ಹೋಗುತ್ತಿದೆ. ಡೆಲಿವರಿನೇ ಆಗಿಲ್ಲ ಎಂದು ವೈದ್ಯರ ವರ್ಗಾವಣೆ ಮಾಡಿದ್ದೀರಿ….