IPL 2026: ಸಿಕ್ಸರ್‌ಗಳ ಶತಕ; ಐಪಿಎಲ್‌ನಲ್ಲಿ ಇತಿಹಾಸ ಬರೆದ ಆರ್ಸಿಬಿ ನಾಯಕ
ಗಾಯದ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಆರ್ಸಿಬಿ ನಾಯಕ ರಜತ್ ಪಾಟಿದರ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಆರ್ಸಿಬಿ 55 ರನ್ಗಳಿಂದ ಸೋತಿತ್ತಾದರೂ, ರಜತ್ ಪಾಟಿದರ್ ಮಾತ್ರ ನಾಯಕನಾಗಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು ಅಗ್ರಸ್ಥಾನದಲ್ಲಿಯೇ ಉಳಿಯುವಂತೆ ಮಾಡಿದರು (PC- RCB X). ಆರ್ಸಿಬಿ ಅಗ್ರಸ್ಥಾನದಲ್ಲಿ ಉಳಿಯಬೇಕಿದ್ದರೆ, ಸನ್ರೈಸರ್ಸ್ ತಂಡ ನೀಡಿದ್ದ 255 ರನ್ಗಳ ಗುರಿಯಲ್ಲಿ 166 ರನ್ ಬಾರಿಸಲೇಬೇಕಿತ್ತು. ಅದರಂತೆ ಗುರಿ ಬೆನ್ನಟ್ಟಿದ ಆರ್ಸಿಬಿ ಸುಲಭವಾಗಿ…