All posts by nagaraj11081993

‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆ ಬದಲು: ಸಲ್ಮಾನ್ ಖಾನ್ ಚಿತ್ರಕ್ಕೆ ಈಗ ‘ಮಾತೃಭೂಮಿ’ ಟೈಟಲ್

‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆ ಬದಲು: ಸಲ್ಮಾನ್ ಖಾನ್ ಚಿತ್ರಕ್ಕೆ ಈಗ ‘ಮಾತೃಭೂಮಿ’ ಟೈಟಲ್

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ (Battle of Galwan) ಸಿನಿಮಾದ ಬಿಡುಗಡೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಆದರೆ ಈಗ ಯಾವುದೇ ಸೂಚನೆ ನೀಡದೇ ಚಿತ್ರತಂಡದವರು ಶೀರ್ಷಿಕೆ ಬದಲಾವಣೆ ಮಾಡಿದ್ದಾರೆ. ‘ಬ್ಯಾಟಲ್ ಆಫ್ ಗಲ್ವಾನ್’ ಬದಲಿಗೆ ‘ಮಾತೃಭೂಮಿ’ (Maatrubhoomi) ಎಂದು ನಾಮಕರಣ ಮಾಡಲಾಗಿದೆ. ಮಾರ್ಚ್ 16ರಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿರುವ ಸಲ್ಮಾನ್ ಖಾನ್ (Salman Khan), ‘ಯುದ್ಧಕ್ಕೆ ಶಾಂತಿ ಸಿಗಲಿ’ ಎಂಬ ಕ್ಯಾಪ್ಶನ್ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ರಕ್ತಸಿಕ್ತ ಮುಖದೊಂದಿಗೆ ಕಾಣಿಸಿಕೊಂಡಿದ್ದು, ಮುಳ್ಳುತಂತಿಗಳಿಂದ ಸುತ್ತಲ್ಪಟ್ಟ ಕಂಬವೊಂದನ್ನು ತಡೆಯುತ್ತಿರುವ ದೃಶ್ಯವಿದೆ. ಚಿತ್ರದ ಹೊಸ ಶೀರ್ಷಿಕೆ ಪೋಸ್ಟರ್‌ನಲ್ಲಿ ಎದ್ದು ಕಾಣುತ್ತಿದೆ. ಈ ಹಿಂದೆ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು, ಆದರೆ ಹೊಸ ಪೋಸ್ಟರ್‌ನಲ್ಲಿ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

ಶೀರ್ಷಿಕೆ ಬದಲಾವಣೆ ಬಗ್ಗೆ ಮಾತನಾಡಿರುವ ನಿರ್ದೇಶಕ ಅಪೂರ್ವ ಲಖಿಯಾ, ‘ಇದು ದಿಢೀರ್ ನಿರ್ಧಾರವಲ್ಲ. ನಾವು ಮೊದಲಿನಿಂದಲೂ ಬ್ಯಾಟಲ್ ಆಫ್ ಗಲ್ವಾನ್ ಮತ್ತು ಮಾತೃಭೂಮಿ ಎಂಬ ಎರಡು ಶೀರ್ಷಿಕೆಗಳನ್ನು ನೋಂದಾಯಿಸಿದ್ದೆವು. ಚಿತ್ರೀಕರಣದ ಹಂತದಲ್ಲಿ ನಮಗೆ ಇದು ಕೇವಲ ಒಂದು ಯುದ್ಧದ ಕಥೆಯಲ್ಲ, ಬದಲಾಗಿ ಮಾನವೀಯತೆ, ಸಹಾನುಭೂತಿ ಮತ್ತು ಸೈನಿಕರ ಹೋರಾಟಗಳ ಕಥೆ ಎಂದು ಅರಿವಾಯಿತು. ಹಾಗಾಗಿ ಮಾತೃಭೂಮಿ ಎಂಬ ಹೆಸರು ಹೆಚ್ಚು ಸೂಕ್ತವೆನಿಸಿತು’ ಎಂದು ವಿವರಿಸಿದ್ದಾರೆ.

‘ಬ್ಯಾಟಲ್ ಆಫ್ ಗಲ್ವಾನ್’ ಶೀರ್ಷಿಕೆಗೆ ಚೀನಾದಿಂದಲೂ ವಿರೋಧ ವ್ಯಕ್ತವಾಗಿತ್ತು. 2020ರ ಗಲ್ವಾನ್ ಸಂಘರ್ಷದ ಆಧಾರಿತ ಈ ಚಿತ್ರದ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಸಿನಿಮಾ ವಾಸ್ತವವನ್ನು ತಿರುಚುತ್ತಿದೆ ಮತ್ತು ಚೀನಾ ವಿರೋಧಿ ಭಾವನೆಯನ್ನು ಪ್ರಚೋದಿಸುತ್ತಿದೆ ಎಂದು ಆಕ್ಷೇಪ ಎತ್ತಿತ್ತು.

ಇದನ್ನೂ ಓದಿ: ಸಲ್ಮಾನ್​ ಖಾನ್​ ಮದುವೆ ಆಗಿಲ್ಲ ಯಾಕೆ? ಕಾರಣ ಬಿಚ್ಚಿಟ್ಟಿದ್ದ ತಂದೆ ಸಲೀಂ

‘ಮಾತೃಭೂಮಿ’ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ‘ಸಲ್ಮಾನ್ ಖಾನ್ ಫಿಲ್ಮ್ಸ್’ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಶೀರ್ಷಿಕೆ ಬದಲಾವಣೆಯ ಸುದ್ದಿ ಕೇಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ಶೀರ್ಷಿಕೆ ಬದಲಾವಣೆಯೋ ಅಥವಾ ಹೊಸ ಸಿನಿಮಾದ ಶೀರ್ಷಿಕೆಯೋ ಎಂಬ ಕಮೆಂಟ್​​ಗಳು ಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​: ರೆಡಿಮೇಡ್ ಉಡುಪುಗಳ ಬೆಲೆ ಏರಿಕೆ ಸಾಧ್ಯತೆ

ಬೆಂಗಳೂರು, ಮಾರ್ಚ್​​ 16: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಬೆಂಗಳೂರಿನ ಚಿಕ್ಕಪೇಟೆಯ ಜವಳಿ ಉದ್ಯಮದಕ್ಕೂ ತಟ್ಟಿದೆ. ಕಡಿಮೆ ಬೆಲೆಗೆ ಮತ್ತು ವಿವಿಧ ಬಗೆಯ ಬಟ್ಟೆಗಳಿಗೆ ಹೆಸರುವಾಸಿಯಾದ ಚಿಕ್ಕಪೇಟೆಯ ರೆಡಿಮೇಡ್ ಉಡುಪುಗಳ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಟ್ರೇಡ್ ಆಕ್ಟಿವಿಸ್ಟ್ ಸಜ್ಜನ್‌ರಾಜ್ ಮೆಹ್ತಾ ಅವರ ಪ್ರಕಾರ ಯುದ್ಧ ಮುಂದುವರಿದರೆ ಏಪ್ರಿಲ್‌ನಿಂದ ಬಟ್ಟೆಗಳ ಬೆಲೆ ಶೇ. 10-15 ಹೆಚ್ಚಳವಾಗುವ ಸಾಧ್ಯತೆ ಇದೆ. ಉತ್ಪಾದನಾ ಹಂತದಲ್ಲಿ ಈಗಾಗಲೇ ಶೆ. 30-40ರಷ್ಟು ಬೆಲೆ ಏರಿಕೆಯಾಗಿದ್ದು, ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಡೈಗಳ ಕೊರತೆ ಎದುರಾಗಿದೆ. ಇವುಗಳ ಆಮದು ಮತ್ತು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸೂರತ್‌ನಂತಹ ಉತ್ಪಾದನಾ ಕೇಂದ್ರಗಳಲ್ಲಿ ದಾಸ್ತಾನು ಕಡಿಮೆಯಾಗುತ್ತಿದೆ. ಇದು ಚಿಕ್ಕಪೇಟೆಯ ಸಗಟು ವ್ಯಾಪಾರಕ್ಕೆ ಸಮಸ್ಯೆಯಾಗುತ್ತಿದ್ದು, ಯುಗಾದಿ ಮತ್ತು ರಂಜಾನ್‌ನಂತಹ ಹಬ್ಬಗಳ ಸೀಸನ್‌ನಲ್ಲಿ ಹೆಚ್ಚುವರಿಯಾಗಿ ಕಾರ್ಮಿಕರ ಕೊರತೆಯೂ ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಬಾಸ್’ ಸಿನಿಮಾಗೆ ಸಂಕಷ್ಟ; ನೋಟಿಸ್ ಕೊಟ್ಟ ದರ್ಶನ್ ಲಾಯರ್

ನಟ ದರ್ಶನ್ ಅವರು (Darshan) ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರು ಈ ಪ್ರಕರಣದಲ್ಲಿ ಎ2 ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದ ವಿವರ ಎಲ್ಲರಿಗೂ ತಿಳಿದಿದೆ. ಚಾರ್ಜ್​​ಶೀಟ್​​​ನಲ್ಲಿ ಎಲ್ಲ ವಿಷಯವನ್ನೂ ವಿವರವಾಗಿ ಬರೆಯಲಾಗಿದೆ. ಹೀಗಿರುವಾಗಲೇ ‘ಬಾಸ್’ ಹೆಸರಿನ ಸಿನಿಮಾ ಸೆಟ್ಟೇರಿ, ರಿಲೀಸ್​​​ಗೆ ರೆಡಿ ಆಗಿದೆ. ಈ ಸಿನಿಮಾ ಟೀಸರ್ ನೋಡಿದರೆ ಇದು ದರ್ಶನ್ ಪ್ರಕರಣವನ್ನೇ ನೆನಪಿಸಿದೆ. ಇದು ಚರ್ಚೆಗೆ ಕಾರಣ ಆಗಿತ್ತು. ಹೀಗಿರುವಾಗಲೇ ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದು, ಸಿನಿಮಾಗೆ ಸೆನ್ಸಾರ್ ಮಾಡದಂತೆ ಕೋರಿದೆ.

ರೇಣಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಬೆಂಗಳೂರಿನ ಪಟ್ಟಣಗೆರೆ ಶೆಡ್​ ಅಲ್ಲಿ ಕೊಲೆ ಮಾಡಲಾಯಿತು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಕೂಡ ಸ್ಥಳದಲ್ಲಿ ಇದ್ದರು ಎನ್ನುವ ಆರೋಪ ಇದೆ. ಆ ಬಳಿಕ ಹೆಣವನ್ನು ಮೋರಿ ಪಕ್ಕದಲ್ಲಿ ಹಾಕಲಾಯಿತು. ಹೆಣ ಬಿಸಾಕಿದವರು ಸಿಕ್ಕಿ ಬಿದ್ದರು. ನಂತರ ದರ್ಶನ್ ಹೆಸರು ಕೂಡ ಹೊರಬಿತ್ತು. ಅವರನ್ನು ಬಂಧಿಸಲಾಯಿತು. ತಾವು ನಿರಪರಾಧಿ ಎಂದು ಅವರು ಹೇಳುತ್ತಾ ಬರುತ್ತಿದ್ದಾರೆ.

ಈಗ ರಿಲೀಸ್ ಆಗಿರೋ ‘ಬಾಸ್’ ಸಿನಿಮಾ ಟೀಸರ್ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುವ ರೀತಿಯಲ್ಲಿ ಇದೆ. ಟೀಸರ್​​​ನಲ್ಲಿ ಶೆಡ್​, ಮೋರಿಗಳನ್ನು ತೋರಿಸಲಾಗಿದೆ. ಸೆಲೆಬ್ರಿಟಿ ಓರ್ವ ಈ ಪ್ರಕರಣದಲ್ಲಿ ಸಿಲುಕುತ್ತಾನೆ. ತಾನು ನಿರಪರಾಧಿ ಎಂದು ಹೇಳುತ್ತಾನೆ. ಇದು ಕೇವಲ ಕಾಲ್ಪನಿಕ ಕಥೆ ಎಂದರೆ ಪ್ರಕರಣ ಅಷ್ಟು ಚರ್ಚೆಗೆ ಗ್ರಾಸವಾಗುತ್ತಿರಲಿಲ್ಲವೇನೋ. ಆದರೆ, ಇದು ನೈಜ ಘಟನೆ ಆಧಾರಿತ ಕಥೆ ಎಂದು ಹೇಳಿರೋದು ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ಮೋರಿ, ಶೆಡ್​, ಸೆಲೆಬ್ರಿಟಿ, ರಾಜಕೀಯ ; ‘ಬಾಸ್’ ಸಿನಿಮಾದಲ್ಲಿ ದರ್ಶನ್ ಕಥೆ?

ಈ ಪ್ರಕರಣ ಇನ್ನೂ ಕೋರ್ಟ್​​​ನಲ್ಲಿದೆ. ದರ್ಶನ್ ತಪ್ಪು ಮಾಡಿದ್ದಾನೆ ಅಥವಾ ಮಾಡಿಲ್ಲ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಅದಕ್ಕೂ ಮೊದಲೇ ಈ ಘಟನೆ ಆಧರಿಸಿ ಸಿನಿಮಾ ಮಾಡೋದು ಎಷ್ಟು ಸರಿ ಎಂಬ ಪ್ರಶ್ನೆ ಕೆಲವರದ್ದು. ಈಗ ದರ್ಶನ್ ಪರ ವಕೀಲರು ಸೆನ್ಸರ್ ಮಂಡಳಿಗೆ ನೋಟೀಸ್ ನೀಡಿ, ಯಾವುದೇ ಕಾರಣಕ್ಕೂ ಸಿನಿಮಾಗೆ ಸೆನ್ಸಾರ್ ಮಾಡಬಾರದು ಎಂದು ಹೇಳಿದ್ದಾರೆ. ನಿರ್ದೇಶಕ ಲವ ಆ್ಯಕ್ಷನ್ ಕಟ್ ಹೇಳಿದ್ದು, ತನುಷ್ ಶಿವಣ್ಣ ನಾಯಕನಾಗಿ ಸಿನಿಮಾದಲ್ಲ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ರಾಜ್ಯದಿಂದ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದು

ಬೆಂಗಳೂರು, ಮಾರ್ಚ್​​ 16: ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ ಹಿನ್ನೆಲೆ ಭಾರತದಿಂದ ದುಬೈಗೆ ತೆರಳಬೇಕಿದ್ದ ವಿಮಾನಗಳ ಹಾರಾಟ ರದ್ದುಗೊಂಡಿದೆ. ಏರ್‌ ಇಂಡಿಯಾ, ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಭವಿಷ್ಯದ ಬೇರೆ ದಿನಾಂಕಕ್ಕೆ ತಮ್ಮ ಪ್ರಯಾಣವನ್ನು ಮರುನಿಗದಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರಯಾಣ ಬೇಡವೆನ್ನುವವರು ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದಾಗಿದೆ. ಇನ್ನು ವಿಮಾನ ರದ್ದಿನಿಂದ‌ ದುಬೈನಲ್ಲಿ ಸಿಲುಕಿರುವ ಪ್ರಯಾಣಿಕರು ಪರದಾಟ ನಡೆಸಿರುವ ಪ್ರಸಂಗವೂ ವರದಿಯಾಗಿದೆ.

ಬೆಂಗಳೂರಲ್ಲಿ 24 ವಿಮಾನಗಳ ಹಾರಾಟ ಕ್ಯಾನ್ಸಲ್

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ನಿಂದ ನಿರ್ಗಮನ ಮತ್ತು ಆಗಮಿಸಬೇಕಿದ್ದ ಒಟ್ಟು 24 ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿವೆ. ಕೆಂಪೇಗೌಡ ಏರ್​ಪೋರ್ಟ್​ನಿಂದ ನಿರ್ಗಮಿಸಬೇಕಿದ್ದ 11 ಫ್ಲೈಟ್​ಗಳು ಮತ್ತು ಅರಬ್ ದೇಶಗಳಿಂದ ಕೆಐಎಬಿಗೆ ಆಗಮಿಸಬೇಕಿದ್ದ 13 ಫ್ಲೈಟ್ ರದ್ದಾಗಿವೆ. ಅಬುದಾಬಿ, ರಿಯಾದ್, ಜಿಡ್ಡಾ, ಡಮಾಮ್, ದುಬೈ ಹಾಗೂ ದೋಹಾದಿಂದ ಕೆಐಎಬಿಗೆ ಆಗಮಿಸಿದ್ದ ವಿಮಾನಗಳು ಕ್ಯಾನ್ಸಲ್ ಆಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ ಆರೋಪ; ಯುಎಇಯಲ್ಲಿ 19 ಭಾರತೀಯರು ಸೇರಿ 35 ಮಂದಿ ಬಂಧನ

ಮಂಗಳೂರು ಏರ್​​ಪೋರ್ಟ್​​ನಿಂದಲೂ ವಿಮಾನ ಹಾರಾಟ ವ್ಯತ್ಯಯ

ದುಬೈ ವಿಮಾನ ನಿಲ್ದಾಣದ ಬಳಿ ದಾಳಿ ಹಿನ್ನೆಲೆ ಮಂಗಳೂರಿನಿಂದ ದುಬೈ, ಡಮಾಮ್ ಮತ್ತು ಅಬುಧಾಬಿಗೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಏರ್ ಇಂಡಿಯಾ ಎಕ್ಸ್​​ಪ್ರೆಸ್​​ನ ಇಂದು ಮತ್ತು ನಾಳೆಯ ವಿಮಾನ ಹಾರಾಟ ರದ್ದಾಗಿದೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್ ವಿಮಾನ ನಿಲ್ದಾಣದ ಅಧಿಕಾರಿಗಳ ಸೂಚನೆಯ ಹಿನ್ನೆಲೆ ವಿಮಾನಯಾನ ಹಾರಾಟ ನಡೆಸುತ್ತಿಲ್ಲ ಎಂದು ತಿಳಿದುಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ಭಯಾನಕ ವಿಡಿಯೋ ವೈರಲ್

ಆನೇಕಲ್, ಮಾರ್ಚ್ 16: ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಡೆಡ್ಲಿ ರೋಡ್ ರೇಜ್ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ತಮಿಳುನಾಡು ಗಡಿಯ ಸಮೀಪದ ಜೂಜುವಾಡಿ ಚೆಕ್​ಪೋಸ್ಟ್ ಬಳಿ ಪೊಲೀಸರು ತಡೆದಾಗ ಕಾರು ನಿಲ್ಲಿಸದ ಚಾಲಕ ಎದುರಿದ್ದ ಪೊಲೀಸ್ ಸಿಬ್ಬಂದಿಯನ್ನೇ ಬಾನೆಟ್ ಮೇಲೆ ಹಾರಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ತಮಿಳುನಾಡಿನಲ್ಲಿ ಗುಟ್ಕಾ ನಿಷೇಧ ಇರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಅಕ್ರಮವಾಗಿ ಗುಟ್ಕಾ ಮತ್ತು ಮದ್ಯವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನಕ್ಕೆ ಪೊಲೀಸರು ಕಾರನ್ನು ತಡೆದು ಪರಿಶೀಲಿಸಲು ಮುಂದಾದರು. ಈ ವೇಳೆ ಕಾರು ಚಾಲಕ ಯಾರಬ್ ಪಾಷ (34) ಎಂಬಾತ ವಾಹನವನ್ನು ನಿಲ್ಲಿಸದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಹೆಡ್ ಕಾನ್ಸ್‌ಟೇಬಲ್ ರಾಜೀವ್ ಗಾಂಧಿ ಕಾರಿನ ಮುಂದೆ ಅಡ್ಡವಾಗಿ ನಿಂತಾಗ, ಲೆಕ್ಕಿಸದೇ ಚಾಲಕ ಕಾರನ್ನು ಮುನ್ನಡೆಸಿದ್ದಾನೆ. ಪರಿಣಾಮವಾಗಿ ಪೊಲೀಸ್ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಬಾನೆಟ್ ಮೇಲೆ ನೇತಾಡುತ್ತಿದ್ದಾಗಲೇ ಕೆಲದೂರ ಕಾರು ಚಲಾಯಿಸಿದ್ದಾನೆ. ಅದೃಷ್ಟವಶಾತ್ ಹೆಡ್ ಕಾನ್ಸ್‌ಟೇಬಲ್ ರಾಜೀವ್ ಗಾಂಧಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ನಂತರ ಹೊಸೂರು ಸಿಪ್ಕಾಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 390 ಕೆಜಿ ಗುಟ್ಕಾ ಹಾಗೂ ಮದ್ಯವನ್ನು ವಶಕ್ಕೆ ಪಡೆದಿದ್ದು, ಇದರ ಅಂದಾಜು ಮೌಲ್ಯ ಸುಮಾರು 2.20 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಪ್ರಸ್ತುತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!

ಬೆಂಗಳೂರು, ಮಾರ್ಚ್​ 16: ಕ್ಯೂ ನೆಟ್ (Qnet) ಹಾಗೂ ವಿಹಾನ್ ದೈರೆಕ್ಟ್ ಸೆಲ್ಲಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Vihaan Direct Selling India Private Limited) ವಿರುದ್ಧವಾಗಿ ಯಾವುದೇ ರೀತಿಯ ಸುಳ್ಳು ಮಾಹಿತಿ ಸುದ್ದಿಗಳನ್ನು ಸಾರ್ವಜನಿಕ ವಲಯ ಹಾಗೂ ಮಾಧ್ಯಮದಲ್ಲಿ ಬಿತ್ತರಿಸಬಾರದು ಎಂದು ಬೆಂಗಳೂರಿನ ಮಾನ್ಯ ಸಿವಿಲ್ ನ್ಯಾಯಾಲಯವು ಹಣಕಾಸು ವಂಚನೆ ಸಂತ್ರಸ್ತರ ಕಲ್ಯಾಣ ಸಂಘದ (Financial Fraud Victims Welfare Association) ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಆದೇಶ ನೀಡಿದೆ.

ವಿಹಾನ್ ಹಾಗೂ ಕ್ಯೂ ನೆಟ್ ಮೇಲೆ ಹಲವಾರು FIR ದಾಖಲಾದ ಬಗ್ಗೆ ಅಂದಿನ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಮಾಧ್ಯಮಗಳಿಗೆ ನೀಡಿದ್ದ ಮಾಹಿತಿ ಮೇರೆಗೆ ನಮ್ಮ ವಾಹಿನಿಯಲ್ಲಿ 31-3-2018 ರಂದು ಸುದ್ದಿ ಬಿತ್ತರಿಸಲಾಗಿತ್ತು. ಮಾನ್ಯ ಕರ್ನಾಟಕ ಹೈ ಕೋರ್ಟ್​ ಸದರಿ FIR ಗಳನ್ನ ರದ್ದುಗೊಳಿಸಿ ಆದೇಶ ಹೊರಡಿಸಿರುವುದಾಗಿ ಮೂಲಗಳಿಂದ ತಿಳಿದು ಬಂದಿರುತ್ತೆ. ಇನ್ನು ಮುಂದೆ ದೃಢಪಡಿಸದ, ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ. TV9 ಕನ್ನಡವು ಈ ಹಿಂದೆ ಆದ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಬೆಂಗಳೂರಿನಲ್ಲಿ ಮಂತ್ರಿ ಡೆವಲಪರ್ಸ್​ ಮೇಲೆ ಇಡಿ ದಾಳಿ! ಅಕ್ರಮ ಹಣ ವರ್ಗಾವಣೆ ಆರೋಪ

ಬೆಂಗಳೂರು, ಮಾರ್ಚ್​ 16: ಬೆಂಗಳೂರು ನಗರದ ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆಯಾದ ಮಂತ್ರಿ ಡೆವೆಲಪರ್ಸ್​ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ (ED Raid) ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆ ED ಅಧಿಕಾರಿಗಳು ಸಂಸ್ಥೆಯ ಕಚೇರಿ ಹಾಗೂ ಸಂಸ್ಥಾಪಕ ಸುನಿಲ್ ಮಂತ್ರಿ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ.

ದೆಹಲಿಯಿಂದ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ

1999ರಲ್ಲಿ ಸ್ಥಾಪನೆಯಾದ ಮಂತ್ರಿ ಡೆವಲಪರ್ಸ್ ಸಂಸ್ಥೆ ಬೆಂಗಳೂರು ಕೇಂದ್ರ ಕಚೇರಿಯೊಂದಿಗೆ ಚೆನ್ನೈ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ವಸತಿ, ವಾಣಿಜ್ಯ, ರಿಟೇಲ್ ಹಾಗೂ ಇತರೆ ಕ್ಷೇತ್ರಗಳಲ್ಲಿ ಹಲವು ಯೋಜನೆಗಳನ್ನು ಸಂಸ್ಥೆ ಕೈಗೊಂಡಿದೆ. ಇದೀಗ ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯಲ್ಲಿರುವ ಕಚೇರಿ ಹಾಗೂ ಸಂಸ್ಥಾಪಕರ ಮನೆ ಮೇಲೂ ದಾಳಿ ನಡೆಸಿದೆ.

ಬೆಳಗ್ಗೆ ದೆಹಲಿ ಕಚೇರಿಯಿಂದ ಬಂದ ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಆರು ವಾಹನಗಳಲ್ಲಿ ಆಗಮಿಸಿ ಕಚೇರಿ ಹಾಗೂ ಸಂಬಂಧಿತ ಸ್ಥಳಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಇಡಿ ತಂಡ, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಅರೆಸ್ಟ್

ಇದೇ ರೀತಿ ಹಣಕಾಸಿನ ಪ್ರಕರಣದಲ್ಲಿ ಇಡಿಯು ಈಗಾಗಲೇ 2022ರಲ್ಲಿ ದಾಳಿ ನಡೆಸಿದ್ದು, 2023ರಲ್ಲಿ ಸುಮಾರು 300 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಅಲ್ಲದೇ ಗ್ರಾಹಕರಿಂದ ಅಪಾರ್ಟ್ಮೆಂಟ್‌ಗಾಗಿ ಹಣ ಪಡೆದು ಅದನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿರುವ ಆರೋಪವೂ ಕೇಳಿಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ದಾಳಿ ನಡೆಸಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಾರ್ವಕಾಲಿಕ RCB ಇಲೆವೆನ್ ಹೆಸರಿಸಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಕಳೆದ 18 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಣಕ್ಕಿಳಿದಿದ್ದಾರೆ. ಈ ಹದಿನೆಂಟು ವರ್ಷಗಳಲ್ಲಿ ಅನೇಕ ಆಟಗಾರರು ಬಂದು ಹೋಗಿದ್ದಾರೆ. ಇವರಲ್ಲಿ ಕೆಲವರು ಆರ್​ಸಿಬಿ ತಂಡದ ಆಲ್​ ಟೈಮ್ ಫೇವರೇಟ್ ಆಗಿ ಗುರುತಿಸಿಕೊಂಡರೆ, ಇನ್ನು ಕೆಲವರು ಮಿಂಚಿ ಮರೆಯಾಗಿದ್ದಾರೆ. ಹೀಗೆ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡ ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಸಾರ್ವಕಾಲಿಕ ಇಲೆವೆನ್ ಹೆಸರಿಸಿದ್ದಾರೆ ವಿರಾಟ್ ಕೊಹ್ಲಿ. ಈ ಹನ್ನೊಂದು ಆಟಗಾರರಲ್ಲಿ ಇಬ್ಬರು ಕನ್ನಡಿಗರು ಕೂಡ ಕಾಣಿಸಿಕೊಂಡಿರುವುದು ವಿಶೇಷ.

ವಿರಾಟ್ ಕೊಹ್ಲಿ ತಮ್ಮ ಸಾರ್ವಕಾಲಿಕ ಇಲೆವೆನ್​ನಲ್ಲಿ ಆರಂಭಿಕರಾಗಿ ಆಯ್ಕೆ ಮಾಡಿದ್ದು ಲೆಜೆಂಡ್ ಕ್ರಿಸ್ ಗೇಲ್ ಅವರನ್ನು. ಕ್ರೀಸ್ ಗೇಲ್ ಜೊತೆ ಆರಂಭಿಕನಾಗಿ ತನ್ನನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಆಪತ್ಭಾಂಧವ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರನ್ನು ಹೆಸರಿಸಿದ್ದಾರೆ.

ನಾಲ್ಕನೇ ಕ್ರಮಾಂಕಕ್ಕೆ ಕನ್ನಡಿಗ ಕೆಎಲ್ ರಾಹುಲ್ ಅವರ ಹೆಸರು ಸೂಚಿಸಿದ್ದಾರೆ. ಇನ್ನು ಐದನೇ ಕ್ರಮಾಂಕಕ್ಕೆ ಪ್ರಸ್ತುತ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಿದ್ದಾರೆ.

ವಿಕೆಟ್ ಕೀಪರ್ ಬ್ಯಾಟರ್​ ಆಗಿ ವಿರಾಟ್ ಕೊಹ್ಲಿ ಆಯ್ಕೆ ಮಾಡಿರುವುದು ದಿನೇಶ್ ಕಾರ್ತಿಕ್ ಅವರನ್ನು. ಇನ್ನು ವೇಗಿಗಳಾಗಿ ಹರ್ಷಲ್ ಪಟೇಲ್, ಡೇಲ್ ಸ್ಟೈನ್ ಹಾಗೂ ಮಿಚೆಲ್ ಸ್ಟಾರ್ಕ್​ ಅವರನ್ನು ಹೆಸರಿಸಿದ್ದಾರೆ.

ಹಾಗೆಯೇ ಸ್ಪಿನ್ನರ್​ಗಳಾಗಿ ಕನ್ನಡಿಗ ಅನಿಲ್ ಕುಂಬ್ಳಿ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಹೆಸರಿಸಿದ ಸಾರ್ವಕಾಲಿಕ ಇಲೆವೆನ್​ನಲ್ಲಿ ಐವರು ಬೌಲರ್​ಗಳಿದ್ದರೆ, ಆರು ಬ್ಯಾಟರ್​ಗಳು ಕಾಣಿಸಿಕೊಂಡಿದ್ದಾರೆ.

ಇನ್ನು ಈ ಇಲೆವೆನ್​ನ ನಾಯಕನನ್ನಾಗಿ ಆಯ್ಕೆ ಮಾಡಿರುವುದು ರಜತ್ ಪಾಟಿದಾರ್ ಅವರನ್ನು ಎಂಬುದು ವಿಶೇಷ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟಂತಹ ಪಾಟಿದಾರ್ ಅವರನ್ನು ತಮ್ಮ ಸಾರ್ವಕಾಲಿಕ ಇಲೆವೆನ್​ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್ ಅನುಮಾನ ಹುಟ್ಟುಹಾಕಿದ ಪಾಕ್ ವೇಗಿ

ವಿರಾಟ್ ಕೊಹ್ಲಿಯ ಸಾರ್ವಕಾಲಿಕ ಆರ್​ಸಿಬಿ ಇಲೆವೆನ್:

  • ಕ್ರಿಸ್ ಗೇಲ್
  • ವಿರಾಟ್ ಕೊಹ್ಲಿ
  • ಎಬಿ ಡಿವಿಲಿಯರ್ಸ್
  • ಕೆಎಲ್ ರಾಹುಲ್
  • ರಜತ್ ಪಾಟಿದಾರ್ (ನಾಯಕ)
  • ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
  • ಹರ್ಷಲ್ ಪಟೇಲ್
  • ಅನಿಲ್ ಕುಂಬ್ಳೆ
  • ಮಿಚೆಲ್ ಸ್ಟಾರ್ಕ್
  • ಡೇಲ್​ ಸ್ಟೈನ್
  • ಯುಜ್ವೇಂದ್ರ ಚಹಲ್.

 

 

Source link

ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ

ಬೆಂಗಳೂರು, ಮಾರ್ಚ್​​ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆಗಿ ಸದನ ಮುಂದೂಡಿದ್ದಲ್ಲದೆ ಪೀಠದಿಂದಲೇ ಎದ್ದು ಹೊರ ನಡೆದ ಯು.ಟಿ. ಖಾದರ್​​ ಅವರನ್ನು ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಮನವೊಲಿಸಿದ್ದಾರೆ. ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ.  ಜೊತೆಗೆ ಸಮರ್ಪಕ ಉತ್ತರ ಕೊಡದ 3-4 ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಉತ್ತರ ಒದಗಿಸದ ಪಿಡಬ್ಲ್ಯುಡಿ, ಪಶುಸಂಗೋಪನೆ, ಸಾರಿಗೆ, ಐಟಿ-ಬಿಟಿ, ಡಿಪಿಎಆರ್ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ನೀಡಲು ಸಿಎಂಗೆ ಸ್ಪೀಕರ್​​ ತಿಳಿಸಿರುವ ಹಿನ್ನೆಲೆ, ಹಿರಿಯ ಐಎಎಸ್ ಅಧಿಕಾರಿಗಳೂ ಆದ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಬಿಸಿ ಮುಟ್ಟಿದೆ. ಮತ್ತೊಂದೆಡೆ ಸಿಎಂ ಸೂಚನೆ ಹಿನ್ನೆಲೆ ಮಧ್ಯಾಹ್ನ ಸಿಎಸ್‌ ಶಾಲಿನಿ ರಜನೀಶ್​​ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ.

ಇದನ್ನೂ ಓದಿ: ಸರ್ಕಾರದ ಧೋರಣೆಗೆ ಸ್ಪೀಕರ್​​ ಗರಂ; ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್​​

ಅಂತಿಮವಾಗಿ ಸ್ವೀಕರ್​ ಸಂಧಾನ ಯಶಸ್ವಿ ಹಿನ್ನೆಲೆ ವಿಧಾನಸಭೆ ಕಲಾಪ ಪುನಾರಂಭವಾಗಿದೆ. ಸಭೆಯಲ್ಲಿ ಲಿಖಿತ ರೂಪದ ಪ್ರಶ್ನೆಗಳಿಗೆ ಉತ್ತರ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲ ಶಾಸಕರಿಗೆ ಉತ್ತರ ಸಿಗಬೇಕು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕರೆಲ್ಲರೂ ಸೇರಿ ಚರ್ಚಿಸಿದ್ದೇವೆ. ಎಲ್ಲರಿಗೂ ಉತ್ತರ ಸಿಗುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿರೋದಾಗಿ ಸ್ಪೀಕರ್​ ಖಾದರ್​​ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್​ನಲ್ಲೂ ಸದ್ದು ಮಾಡಿದ ಸಚಿವರ ಹಾಜರಾತಿ

ವಿಧಾನ ಸಭೆಯ ಬೆನ್ನಲ್ಲೇ ಅತ್ತ ವಿಧಾನ ಪರಿಷತ್​ನಲ್ಲೂ ಸಚಿವರ ಹಾಜರಾತಿ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕಡ್ಡಾಯ ಹಾಜರಾತಿ ಅಂದರೂ ಸಚಿವರು ಸದನಕ್ಕೆ ಬಂದಿಲ್ಲ. ಅಧಿಕಾರಿಗಳೂ ಇಲ್ಲ, ಹೀಗಾದ್ರೆ ಹೇಗೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಭಾಪತಿಗಳನ್ನು ಪ್ರಶ್ನಿಸಿದ್ದಾರೆ. ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹೇಳಿ? ವಿಧಾನಸಭೆಯಲ್ಲಿ ಉತ್ತರ ಸಿಗಲಿಲ್ಲ ಅಂತಾ ಸದನ ಮುಂದೂಡಿದ್ದಾರೆ. ನಮ್ಮಲ್ಲಿ ಏಕೆ ಈ ಅಸಡ್ಡೆ? ಅಧಿಕಾರಿಗಳು ಸಮರ್ಪಕ ಉತ್ತರ ಕೊಡಲ್ಲ. ಸದಸ್ಯರ 126 ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲವೆಂದು ತಿಳಿದು ಬಂದಿದೆ. ನಮ್ಮ ಸದಸ್ಯರೊಬ್ಬರು ಇಂದಿನವರೆಗೂ ಪ್ರಶ್ನೆ ಮಾಡ್ತಾನೇ ಇದ್ದಾರೆ. ನಾವು ಉತ್ತರ ಕೊಡಲಾರದ ಪ್ರಶ್ನೆಯನ್ನ ಕೇಳುತ್ತಿದ್ದೀವಾ? ಎಂದು ಛಲವಾದಿ ಗರಂ ಆಗಿದ್ದಾರೆ. ಹೀಗಾಗಿ ಕೂಡಲೇ ಉತ್ತರ ಕೊಡಿಸಿ, ಇಲ್ಲ ಕ್ರಮ ಜರುಗಿಸಿ ಎಂದು ಸಭಾನಾಯಕ ಬೋಸರಾಜುಗೆ ​ ಸಭಾಪತಿ ಸೂಚನೆ ನೀಡಿದ ಪ್ರಸಂಗ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ರೂ. ಟೋಲ್ ಸಂಗ್ರಹಿಸಿ ಮಜಾ ಮಾಡ್ತಾರೆ, ಸೌಕರ್ಯ ಕೊಡಲ್ಲ: ಶಾಸಕ ಸೋಮಶೇಖರ್ ಆಕ್ರೋಶ

ಬೆಂಗಳೂರು, ಮಾರ್ಚ್​ 16: ನೈಸ್ ರಸ್ತೆಯ (NICE Road) ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಜೆಟ್ ಅಧಿವೇಶನದಲ್ಲಿ ಶಾಸಕ ಎಸ್​ಟಿ ಸೋಮಶೇಖರ್ (ST Somashekhar) ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೊಸೂರು ರಸ್ತೆಯಿಂದ ಮಾಗಡಿ ರಸ್ತೆ ವರೆಗೆ ನೈಸ್ ರಸ್ತೆಯನ್ನು ಸರ್ಕಾರ ತಕ್ಷಣವೇ ವಶಕ್ಕೆ ಪಡೆಯಬೇಕು ಎಂದು ಅವರು ಸದನದಲ್ಲಿ ಆಗ್ರಹಿಸಿದರು. ಈ ಹಿಂದೆ ಇದೇ ವಿಷಯದ ಕುರಿತು ಪ್ರಶ್ನೆ ಎತ್ತಿದಾಗ ತನಿಖೆಗೆ ಆದೇಶ ನೀಡಲಾಗಿದ್ದರೂ, ನೈಸ್ ರಸ್ತೆಯ ಸೇತುವೆಗಳ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 30–35 ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡಿದ ಭೂಮಾಲೀಕರಿಗೆ ಇನ್ನೂ ಪರಿಹಾರ ನಿವೇಶನಗಳನ್ನು ನೀಡಲಾಗಿಲ್ಲ. ನೈಸ್ ಕಂಪನಿಯ ನಿರ್ವಹಣೆ ಹಾಗೂ ವರ್ತನೆ ಸರಿಯಿಲ್ಲ ಎಂಬುದನ್ನು ತಿಳಿಸುವುದಕ್ಕಾಗಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಎಂದು ಅವರು ಹೇಳಿದರು.

ನೈಸ್ ರಸ್ತೆಯಲ್ಲಿ ಪ್ರತಿದಿನ ಸುಮಾರು 10 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ. ಇಷ್ಟು ದೊಡ್ಡ ಆದಾಯವಿದ್ದರೂ ರಸ್ತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಿಶೇಷವಾಗಿ 25–30 ವರ್ಷಗಳ ಹಿಂದೆ ನಿರ್ಮಿಸಲಾದ ಕೆಲವು ಸೇತುವೆಗಳು ದುಸ್ಥಿತಿಯಲ್ಲಿದ್ದು, ಸ್ಕೂಟರ್ ಸಂಚಾರಕ್ಕೂ ಯೋಗ್ಯವಾಗಿಲ್ಲ. ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಎಂಟು ಸೇತುವೆಗಳು ಅಪಾಯಕರ ಸ್ಥಿತಿಯಲ್ಲಿ ಇರುವುದಾಗಿ ಸೋಮಶೇಖರ್ ಹೇಳಿದರು.

ಸರ್ಕಾರದ ಸೂಚನೆಗಳನ್ನು ಪಾಲಿಸದ ನೈಸ್: ಸೋಮಶೇಖರ್ ಆರೋಪ

ಈ ಕುರಿತು ನೈಸ್ ಕಂಪನಿ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಾಜಿ ಪಿಡಬ್ಲ್ಯೂಡಿ ಸಚಿವ ಹೆಚ್​​ಸಿ ಅವರ ಅವಧಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಸದಸ್ಯರಾಗಿದ್ದ ಡಿಕೆ ಜಯಚಂದ್ರ ಸೇರಿದಂತೆ ಹಲವು ಸದಸ್ಯರು ಸ್ಥಳ ಪರಿಶೀಲನೆ ನಡೆಸಿ ಅನೇಕ ಸಮಸ್ಯೆಗಳನ್ನು ಪತ್ತೆಹಚ್ಚಿದ್ದರು. ಆದರೂ ನೈಸ್ ಕಂಪನಿ ಸರ್ಕಾರ ಅಥವಾ ಸದನದ ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಆರೋಪಿಸಿದರು.

3 ದಶಕಗಳಿಂದ ರೈತರಿಗೆ ಸಂಕಷ್ಟ

ರಸ್ತೆ ಪಕ್ಕದಲ್ಲಿರುವ ಸುಮಾರು 1,700 ಎಕರೆ ಭೂಮಿಯಲ್ಲಿ ಲೇಔಟ್ ನಿರ್ಮಾಣ ಮಾಡುವ ವಿಚಾರವೂ ನ್ಯಾಯಾಲಯದಲ್ಲಿದೆ. 35 ವರ್ಷಗಳಾದರೂ ಭೂಮಾಲೀಕರಿಗೆ ಹಣ ನೀಡಲಾಗಿಲ್ಲ ಹಾಗೂ ಲೇಔಟ್ ಅಭಿವೃದ್ಧಿಯೂ ಆಗಿಲ್ಲ. ಇದರಿಂದ ಕಳೆದ ಮೂರು ದಶಕಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸೋಮಶೇಖರ್ ಗಮನ ಸೆಳೆದರು.

ಎಸ್​​ಟಿ ಸೋಮಶೇಖರ್ ಮಾತಿನ ವಿಡಿಯೋ


ಬಿಜೆಪಿ ಸರ್ಕಾರದ ಅವಧಿಯಲ್ಲಾಗಲಿ ಅಥವಾ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾಗಲಿ ಈ ಕಂಪನಿಯ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸರ್ಕಾರ ನೀಡಿದ 30 ವರ್ಷದ ಗುತ್ತಿಗೆ ರದ್ದುಪಡಿಸಿ ರಸ್ತೆ ವಶಕ್ಕೆ ಪಡೆದುಕೊಂಡರೆ ಮಾತ್ರ ಸೇತುವೆಗಳ ದುರಸ್ತಿ ಹಾಗೂ ಇತರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಸೋಮಶೇಖರ್ ಮಾತಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ನೈಸ್ ಸಂಸ್ಥೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ ಸಂಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ದ್ವಿಚಕ್ರ ವಾಹನಗಳಿಗೆ ನೈಸ್​​ ರಸ್ತೆ ಶೀಘ್ರ ಟೋಲ್​​ ಮುಕ್ತ?

ಈ ವಿಚಾರವನ್ನು ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ. ಉಪಸಮಿತಿ ನೀಡುವ ವರದಿ ಬಂದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link