All posts by nagaraj11081993

ಮಾರ್ಗ ಮಧ್ಯದಲ್ಲೇ ಶತ್ರುಗಳ ಕಣ್ತಪ್ಪಿಸುವ ಡ್ಯಾನ್ಸಿಂಗ್ ಮಿಸೈಲ್! ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಸೆಜ್ಜಿಲ್ ಅಸಲಿಯತ್ತು ಇಲ್ಲಿದೆ

ಮಾರ್ಗ ಮಧ್ಯದಲ್ಲೇ ಶತ್ರುಗಳ ಕಣ್ತಪ್ಪಿಸುವ ಡ್ಯಾನ್ಸಿಂಗ್ ಮಿಸೈಲ್! ಇಸ್ರೇಲ್ ವಿರುದ್ಧ ಇರಾನ್ ಬಳಸಿದ ಸೆಜ್ಜಿಲ್ ಅಸಲಿಯತ್ತು ಇಲ್ಲಿದೆ

ನವದೆಹಲಿ, ಮಾರ್ಚ್ 16: ಯುದ್ಧದ ತೀವ್ರತೆ ಹೆಚ್ಚುತ್ತಿರುವ ಬೆನ್ನಲ್ಲೇ ಇರಾನ್ (Iran) ಅತ್ಯಾಧುನಿಕ, ದೇಶೀಯ ನಿರ್ಮಿತ ‘ಡ್ಯಾನ್ಸಿಂಗ್ ಮಿಸೈಲ್ (Dancing Missile)’ ಸೆಜ್ಜಿಲ್ (Sejjil) ಮೂಲಕ ಇಸ್ರೇಲ್ ವಿರುದ್ಧ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ, ಇರಾನ್ ಮೊತ್ತಮೊದಲ ಬಾರಿಗೆ ಇಸ್ರೇಲ್ ವಿರುದ್ಧ ಡ್ಯಾನ್ಸಿಂಗ್ ಮಿಸೈಲ್ ಪ್ರಯೋಗ ಮಾಡಿದಂತಾಗಿದೆ. ಇಸ್ರೇಲ್​ನ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿ ಇರಾನ್, ಸೆಜ್ಜಿಲ್ ಮೂಲಕ ದಾಳಿ ನಡೆಸಿದೆ.

ಸದ್ಯ ‘ಡ್ಯಾನ್ಸಿಂಗ್ ಮಿಸೈಲ್’ ಎಂಬ ಹೆಸರು ಜಗತ್ತಿನ ಗಮನ ಸೆಳೆದಿದೆ. ‘ಡ್ಯಾನ್ಸಿಂಗ್ ಮಿಸೈಲ್’ ಎಂದರೇನು? ಡ್ಯಾನ್ಸಿಂಗ್ ಮಿಸೈಲ್ ಸೆಜ್ಜಿಲ್ ಇದರ ವಿಶೇಷ ಏನು ಎಂಬ ಮಾಹಿತಿ ಇಲ್ಲಿದೆ.

ಸೆಜ್ಜಿಲ್ ಕ್ಷಿಪಣಿ ಎಂದರೇನು?

ಸೆಜ್ಜಿಲ್-2 ಇರಾನ್​ನಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎರಡು ಹಂತಗಳ ಘನ ಇಂಧನ (Solid Fuel) ಬಳಸುವ ಮಧ್ಯಮ ದೂರದ ಬಾಲಿಸ್ಟಿಕ್ ಕ್ಷಿಪಣಿಯಾಗಿದೆ. ಈ ಕ್ಷಿಪಣಿಯ ಅಂದಾಜು ವ್ಯಾಪ್ತಿ ಸುಮಾರು 2,000 ಕಿಲೋಮೀಟರ್ ಆಗಿದ್ದು, ಸುಮಾರು 700 ಕಿಲೋಗ್ರಾಂ ತೂಕದ ಪೇಲೋಡ್ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

ಡ್ಯಾನ್ಸಿಂಗ್ ಮಿಸೈಲ್ ಹೆಸರು ಯಾಕೆ ಬಂತು?

ಈ ಕ್ಷಿಪಣಿಯು ಗುರಿಯತ್ತ ಸಾಗುತ್ತಿರುವಾಗ ಚುರುಕಾಗಿ ದಿಕ್ಕು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಶತ್ರುಗಳ ರೇಡಾರ್ ಕಣ್ತಪ್ಪಿಸಿ ನೆಗೆಯಬಲ್ಲದ್ದಾಗಿದೆ. ಛಂಗನೆ ದಿಕ್ಕು ಬದಲಾಯಿಸಿ ರೇಡಾರ್​ಗಳ ಕಣ್ತಪ್ಪಿಸಿ ನೆಗೆಯಬಲ್ಲದ್ದಾದ್ದರಿಂದ ಇದಕ್ಕೆ ‘ಡ್ಯಾನ್ಸಿಂಗ್ ಮಿಸೈಲ್’ ಎಂಬ ಹೆಸರು ಬಂದಿದೆ.

ಅಮೆರಿಕದ ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್​​ನ್ಯಾಷನಲ್ ಸ್ಟಡೀಸ್(CSIS) ಮಾಹಿತಿಯ ಪ್ರಕಾರ, ಸೆಜ್ಜಿಲ್ ಕ್ಷಿಪಣಿ ಸುಮಾರು 18 ಮೀಟರ್ ಉದ್ದ, 1.25 ಮೀಟರ್ ವ್ಯಾಸ ಹೊಂದಿದ್ದು, ಸುಮಾರು 23,600 ಕಿಲೋಗ್ರಾಂ ತೂಕವಿದೆ.

ಘನ ಇಂಧನ ಬಳಸುವ ಕ್ಷಿಪಣಿಯಾದ್ದರಿಂದ ಹಳೆಯ ಶಹಾಬ್ ಮಿಸೈಲ್​ನಂಥ ದ್ರವ ಇಂಧನ ಕ್ಷಿಪಣಿಗಳಿಗಿಂತ ಇದು ಬೇಗ ಸಿದ್ಧಪಡಿಸಿ ಉಡಾಯಿಸಲು ಸಾಧ್ಯವಾಗುತ್ತದೆ.

ಸೆಜ್ಜಿಲ್ ಕ್ಷಿಪಣಿಯ ವಿನ್ಯಾಸ ಕಾರ್ಯ 1990ರ ದಶಕದ ಆರಂಭದಲ್ಲೇ ಪ್ರಾರಂಭಗೊಂಡಿತ್ತು. ಮೊದಲ ಪರೀಕ್ಷಾ ಉಡಾವಣೆ 2008ರಲ್ಲಿ ನಡೆದಿದ್ದು, ಆಗ ಕ್ಷಿಪಣಿ ಸುಮಾರು 800 ಕಿಲೋಮೀಟರ್ ದೂರದ ಗುರಿ ತಲುಪಿತ್ತು. ನಂತರ 2009ರ ಮೇ ತಿಂಗಳಲ್ಲಿ ಎರಡನೇ ಪರೀಕ್ಷೆ ನಡೆಸಿ ಗೈಡೆನ್ಸ್ ಆ್ಯಂಡ್ ನ್ಯಾವಿಗೇಶನ್ ವ್ಯವಸ್ಥೆಯನ್ನು ಸುಧಾರಿಸಲಾಯಿತು. 2009ರಿಂದ ಬಳಿಕ ಇನ್ನೂ ನಾಲ್ಕು ಪರೀಕ್ಷಾರ್ಥ ಉಡಾವಣೆಗಳು ನಡೆದಿದ್ದು, ಆರನೇ ಪರೀಕ್ಷೆಯಲ್ಲಿ ಕ್ಷಿಪಣಿ ಸುಮಾರು 1,900 ಕಿಲೋಮೀಟರ್ ದೂರ ಇಂಡಿಯನ್ ಓಷನ್ ಕಡೆಗೆ ಪ್ರಯಾಣಿಸಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ರಕ್ಷಣೆ: ಭಾರತದ ನೆರವಿಗೆ ಅಮೆರಿಕ ಯಾಚನೆ?

ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸೆಜ್ಜಿಲ್ ಕ್ಷಿಪಣಿಯ ಬಳಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ

ಯಾವುದೇ ಸೆಲೆಬ್ರಿಟಿ ಹೊರಗೆ ಕಾಣಿಸಿಕೊಂಡರೆ ಸಾಕು, ಅವರನ್ನು ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಹೀಗಾಗದಂತೆ ತಡೆಯಲು ಭದ್ರತಾ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗೋದಿಲ್ಲ. ಈಗ ಕಾಜೋಲ್ ಅವರಿಗೆ ಹಾಗೆಯೇ ಆಗಿದೆ. ಅವರು ಬಾಲಿವುಡ್ ನಟಿ. ಅಜಯ್ ದೇವಗನ್ ಪತ್ನಿ. ಅವರು ಬರುತ್ತಾರೆ ಎಂದರೆ ಸಾಕಷ್ಟು ಭದ್ರತೆ ನೀಡಲಾಗುತ್ತದೆ. ಆದಾಗ್ಯೂ ಅಭಿಮಾನಿಗಳು ಮುತ್ತಿಕೊಂಡರು. ಕೊನೆಗೆ ಅವರು ಕಷ್ಟಪಟ್ಟು ಕಾರನ್ನು ಏರಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: 10 ತಂಡಗಳು ರೆಡಿ: ಯಾರು ಬಲಿಷ್ಠ?

Source link

ಹಾರ್ಮುಜ್ ಜಲಸಂಧಿ ರಕ್ಷಣೆಗೆ ಬರಲು ಭಾರತವೂ ಸೇರಿ ಹಲವು ರಾಷ್ಟ್ರಗಳಿಗೆ ಅಮೆರಿಕ ಮನವಿ

ನವದೆಹಲಿ, ಮಾರ್ಚ್ 16: ಜಗತ್ತಿನ ಪ್ರಮುಖ ತೈಲ ಮಾರ್ಗಗಳಲ್ಲಿ ಒಂದೆನಿಸಿರುವ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ತೈಲ ಹಡಗುಗಳ ಸಾಗಣೆಗೆ ರಕ್ಷಣೆ ಒದಗಿಸಲು ಅಮೆರಿಕವು ಹಲವು ದೇಶಗಳ ನೆರವು ಯಾಚಿಸುತ್ತಿದೆ. ಇರಾನ್ ಯುದ್ಧದಿಂದಾಗಿ ಈ ಹಾರ್ಮುಜ್ ಸ್ಟ್ರೇಟ್ ಬಹುತೇಕ ಸ್ಥಗಿತಗೊಂಡಿದೆ. ತೈಲ ಹೊತ್ತ ಕೆಲವೇ ಕೆಲವು ಹಡಗುಗಳ ಮಾತ್ರ ಆಗಾಗ್ಗೆ ಹೊರಬರುತ್ತಿವೆ. ಇದರ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರುತ್ತಿದೆ.

ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳನ್ನು ಸಾಗಿಸಲು ಬಿಡುವುದಿಲ್ಲ ಎಂದು ಇರಾನ್ ಹೇಳಿರುವ ಹಿನ್ನೆಲೆಯಲ್ಲಿ ಅಮೆರಿಕ ಇತರ ರಾಷ್ಟ್ರಗಳ ನೆರವು ಕೇಳುತ್ತಿದೆ. ತನ್ನ ನೌಕಾಸೇನೆಯ ಭದ್ರತೆಯಲ್ಲಿ ತೈಲ ಹಡಗುಗಳನ್ನು ಸಾಗಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಅಮೆರಿಕ ಈಗ ಇತರ ದೇಶಗಳ ನೆರವು ಕೇಳುವಂತಾಗಿದೆ. ವರದಿ ಪ್ರಕಾರ ಭಾರತದ ನೆರವನ್ನೂ ಕೇಳಲು ಅಮೆರಿಕ ಯೋಜಿಸಿದೆ.

ಚೀನಾ, ಜಪಾನ್, ಫ್ರಾನ್ಸ್, ಆಸ್ಟ್ರೇಲಿಯಾ, ಬ್ರಿಟನ್, ಸೌತ್ ಕೊರಿಯ, ಹಾಗೆಯೇ ನಾಟೋ ಕೂಟದ ದೇಶಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಭದ್ರತೆಗೆ ಬರಬೇಕೆಂದು ಕೇಳಿಕೊಂಡಿರುವುದಾಗಿ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ನಿನ್ನೆ ಹೇಳಿದ್ದರು.

ಇದನ್ನೂ ಓದಿ: ಮೊಜ್ತಬಾ ಖಮೇನಿ ಜೀವಂತವಿಲ್ಲ, ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ, ಆದರೆ ನಮಗೆ ಮನಸ್ಸಿಲ್ಲ ಎಂದ ಟ್ರಂಪ್

ಅವರ ಪ್ರಕಾರ, ಕೆಲ ದೇಶಗಳು ಅಮೆರಿಕದ ಮನವಿಗೆ ಸಮ್ಮತಿಸಿವೆ. ಕೆಲ ವರದಿಗಳ ಪ್ರಕಾರ ಅಮೆರಿಕದ ಹಲವು ಮಿತ್ರ ದೇಶಗಳು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ಹಾರ್ಮುಜ್ ಜಲಸಂಧಿ ಬಳಿ ತಮ್ಮ ನೌಕೆಗಳನ್ನು ಕಳುಹಿಸಲು ನಿರಾಕರಿಸಿವೆ.

ಭಾರತ ಸೇರಿದಂತೆ ಇನ್ನೂ ಕೆಲ ದೇಶಗಳನ್ನು ಹಾರ್ಮುಜ್ ಜಲಸಂಧಿ ಭದ್ರತೆಗೆ ಬರಬೇಕೆಂದು ಆಹ್ವಾನಿಸುವ ಆಲೋಚನೆಯಲ್ಲಿ ಅಮೆರಿಕ ಇದೆ. ಹಾರ್ಮುಜ್ ಜಲಸಂಧಿ ಮೂಲಕ ಬರುವ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ, ಜಪಾನ್, ಕೊರಿಯಾ, ಚೀನಾ, ಥಾಯ್ಲೆಂಡ್ ಮೊದಲಾದ ಏಷ್ಯನ್ ದೇಶಗಳು ಹಾರ್ಮುಜ್ ಸ್ಟ್ರೇಟ್ ರಕ್ಷಣೆಗೆ ಬರಬಹುದು ಎಂದು ಅಮೆರಿಕ ನಿರೀಕ್ಷಿಸುತ್ತಿದೆ.

ಹಾರ್ಮುಜ್ ಜಲಸಂಧಿ ಯಾಕೆ ಮುಖ್ಯ?

ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುತ್ತದೆ. ಬಹಳ ಕಿರಿದಾಗಿರುವ ಜಲಮಾರ್ಗವಾದ್ದರಿಂದ ಹಡಗುಗಳ ಸಾಗಾಟ ಬಹಳ ಸೂಕ್ಷ್ಮ ಎನಿಸುತ್ತದೆ. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡಿದ ಹಿನ್ನೆಲೆಯಲ್ಲಿ ಈ ಜಲಸಂಧಿಗೆ ಕಂಟಕ ಶುರುವಾಗಿದೆ.

ಇದನ್ನೂ ಓದಿ: ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಬದುಕಿದ್ದಾರಷ್ಟೇ, ಟ್ರಂಪ್ ಹೀಗ್ಯಾಕಂದ್ರು?

ಕೊಲ್ಲಿ ದೇಶಗಳ ತೈಲಗಳು ಇತರೆಡೆ ಸಾಗಲು ಈ ಜಲಸಂಧಿಯೇ ಮುಖ್ಯ ಮಾರ್ಗ. ಜಗತ್ತಿನ ಶೇ. 40ರಷ್ಟು ತೈಲ ಸಾಗಾಟ ಇಲ್ಲಿಂದಲೇ ನಡೆಯುತ್ತದೆ. ಭಾರತ, ಚೀನಾ ಸೇರಿದಂತೆ ಹೆಚ್ಚಿನ ಏಷ್ಯನ್ ದೇಶಗಳಿಗೆ ಬೇಕಾದ ಹೆಚ್ಚಿನ ತೈಲವು ಇಲ್ಲಿಂದಲೇ ಪೂರೈಕೆಯಾಗುವುದು. ಹೀಗಾಗಿ, ಕೊಲ್ಲಿ ದೇಶಗಳು ಹಾಗೂ ಏಷ್ಯನ್ ದೇಶಗಳಿಗೆ ಈ ಜಲಸಂಧಿಯ ಭದ್ರತೆ ಬಹಳ ಮುಖ್ಯವಾಗುತ್ತದೆ. ಜಾಗತಿಕವಾಗಿ ತೈಲ ಬೆಲೆಯಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲೂ ಇದು ಮುಖ್ಯ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ ಶುರು

ಬಾಗಲಕೋಟೆ, ಮಾರ್ಚ್​​ 16: ಉಪ ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಬಾಗಲಕೋಟೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್​​ ಆಕಾಂಕ್ಷಿಗಳ ನಡುವೆ ಫೈಟ್​​ ಜೋರಾಗಿದೆ. ಹೈಕಮಾಂಡ್​​ ಮಟ್ಟದಲ್ಲಿ ಲಾಭಿ ಶುರುವಾಗಿದ್ದು, ಪ್ರಬಲ ಆಕಾಂಕ್ಷಿ ವೀರಣ್ಣ ಹಳೆಗೌಡರ ಪತ್ರ ಕೂಡ ಬರೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್, ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಪ್ರಮುಖರಿಗೆ ಟಿಕೆಟ್​​ಗಾಗಿ ಮನವಿ ಮಾಡಿದ್ದಾರೆ. ನಾನು ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಬಾಗಲಕೋಟೆಯಲ್ಲಿ 25 ವರ್ಷಗಳಿಂದ ಒಂದು ಸಾರಿಯೂ ಈ  ವರ್ಗಕ್ಕೆ ಅವಕಾಶ ಕೊಟ್ಟಿಲ್ಲ. ಎದುರಾಳಿ ಅಭ್ಯರ್ಥಿ ಕೂಡ ಕುರುಬ ಸಮುದಾಯದವರೇ ಆಗುವುದು ಬಹುತೇಕ ಫಿಕ್ಸ್​​ ಆಗಿದೆ. ಕುರುಬ ಸಮುದಾಯದ ಪರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿರುವ ನಾನು, 2017ರಲ್ಲಿ ಇದೇ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ವಾಗ್ವಾದ ಮಾಡಿ ಜೈಲಿಗೆ ಕೂಡ ಹೋಗಿ ಬಂದಿದ್ದೇನೆ. ನನ್ನಂತ ಒಬ್ಬ ಕಾರ್ಯಕರ್ತನಿಗೆ ಅವಕಾಶ ಒದಗಿಸಿ ಕೊಟ್ಟರೆ ನೂರಕ್ಕೆ ನೂರರಷ್ಟು ಒಳ್ಳೆಯದಾಗುತ್ತದೆ ಎಂದು ಆತ್ಮವಿಶ್ವಾಸವಿರೋದಾಗಿ ಟಿವಿ9ಗೆ ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳು ನಷ್ಟವನ್ನೇ ಮಾಡಿವೆ’; ವಿಜಯ್ ಸೇತುಪತಿ ಬೇಸರ

ಸ್ಟಾರ್ ಹೀರೋ ಆಗಿ ಬೆಳೆದ ಬಳಿಕ ಕೆಲವರಿಗೆ ಸಿನಿಮಾ ನಿರ್ಮಾಣ ಮಾಡುವ ಹುಮ್ಮಸ್ಸು ಬರುತ್ತದೆ. ಹಾಗಂತ ಅದನ್ನು ಮಾಡೋದ್ರಲ್ಲಿ ಸ್ವಾರ್ಥ ಇದೆ ಎಂದರ್ಥವಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿ ಎಂಬುದು ಇದರ ಮುಖ್ಯ ಉದ್ದೇಶ ಆಗಿರುತ್ತದೆ. ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಹೊಸ ಸಿನಿಮಾಗಳನ್ನು ಅವರು ನಿರ್ಮಿಸುತ್ತಿದ್ದಾರೆ. ಅವರು ಬಂಡವಾಳ ಹಾಕಿದ ಸಿನಿಮಾಗಳೆಲ್ಲ ಬಾಕ್ಸ್ ಆಫೀಸ್​​​ನಲ್ಲಿ ಸೋತಿವೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಭಾರದ್ವಾಜ್ ರಂಗನ್ ಜೊತೆ ‘ಗಲಾಟಾ ಪ್ಲಸ್’ ಅಲ್ಲಿ ಮಾತನಾಡಿದ ವಿಜಯ್ ಸೇತುಪತಿ, ‘ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳು ನನಗೆ ನಷ್ಟವನ್ನೇ ತಂದಿವೆ’ ಎಂದರು. ಕೆಲವು ನಿರ್ಮಾಪಕರು ಈ ವಿಷಯದಲ್ಲಿ ಓಪನ್ ಆಗಿ ಮಾತನಾಡುವುದಿಲ್ಲ. ಆದರೆ, ವಿಜಯ್ ಸೇತುಪತಿ ಆ ರೀತಿ ಮಾತನಾಡಿಲ್ಲ.

‘ನನ್ನ ಬ್ಯಾನರ್‌ನಲ್ಲಿ ‘ಸಂಗುತೇವನ್’ ಎಂಬ ಚಿತ್ರ ಪ್ರಾರಂಭಿಸಿದ್ದೆ. ಆದರೆ, ಅದು ಅರ್ಧದಲ್ಲೇ ನಿಂತುಹೋಯಿತು. ಇದರಿಂದಾಗಿ 1.75 ಕೋಟಿ ರೂ. ನಷ್ಟವಾಯಿತು. ಅದರ ನಂತರ ನಾನು ನಾಲ್ಕು ಚಿತ್ರಗಳನ್ನು ನಿರ್ಮಿಸಿದೆ. ‘ಆರೆಂಜ್ ಮಿಠೈ’ ‘ಮೆರ್ಕು ದೊಡರ್ಚಿ ಮಲೈ’, ‘ಜಂಗ್’, ‘ಮಹಾಬಾತ್’ ಚಿತ್ರಗಳು. ಇವುಗಳಲ್ಲಿ ಒಂದೂ ನನಗೆ ಯಾವುದೇ ಲಾಭ ತಂದುಕೊಡಲಿಲ್ಲ. ಕನಿಷ್ಠ ಹೂಡಿಕೆಯನ್ನು ಸಹ ಅವರು ಮರಳಿ ಪಡೆಯಲು ವಿಫಲವಾದವು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್

‘ಬಾಕ್ಸ್ ಆಫೀಸ್‌ನಲ್ಲಿ ಅವು ಸೋತರೂ, ಆ ಎಲ್ಲಾ ಸಿನಿಮಾಗಳು ನನಗೆ ಇನ್ನೂ ಇಷ್ಟ. ಅದಕ್ಕಾಗಿಯೇ ನನಗೆ ಅವುಗಳನ್ನು ಮಾಡಲು ಇಷ್ಟ’ ಎಂದು ಅವರು ಹೇಳಿದರು. ಪ್ರಸ್ತುತ ವಿಜಯ್ ಸೇತುಪತಿ ಸಿನಿಮಾ ನಟನೆಯಲ್ಲಿ ಬ್ಯುಸಿ ಇದ್ದಾರೆ. ತಮಿಳು, ತೆಲುಗು ಭಾಷೆಯಲ್ಲಿ ಅವರು ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!

ಕಾರವಾರ, ಮಾರ್ಚ್ 16: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಭಾನುವಾರ ಸಂಜೆ ಅಬ್ಬರದ ಗಾಳಿ ಮಳೆ ಸುರಿದಿದೆ. ಪರಿಣಾಮವಾಗಿ ಬೃಹತ್ ಮರ ಧರೆಗುರುಳಿದೆ. ಮುಂಡಗೋಡ–ಪಾಳ–ಹಾನಗಲ್ ರಸ್ತೆಯಲ್ಲಿ ಮರ ಉರುಳಿಬಿದ್ದಿದೆ. ಆಲಿಕಲ್ಲು ಮಳೆಯೂ ಸಹ ಸುರಿದಿದೆ. ಮರ ಹೆದ್ದಾರಿಯ ಮಧ್ಯೆ ಬಿದ್ದ ಪರಿಣಾಮ ವಾಹನ ಸವಾರರು ಕೆಲಕಾಲ ಪರದಾಡಬೇಕಾಯಿತು. ಇದರ ಮಧ್ಯೆ ದೇಶದ ಹಲವು ಭಾಗಗಳಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿರುವ ಹಿನ್ನೆಲೆ, ಸ್ಥಳೀಯರು ಮರವನ್ನು ಸೌದೆಗಾಗಿ ಕತ್ತರಿಸಿಕೊಳ್ಳಲು ಮುಗಿಬಿದ್ದರು. ಮಳೆ ಸುರಿಯುತ್ತಿದ್ದರೂ ಸಹ ಹಲವರು ಮರದ ಕೊಂಬೆಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದವು.

ನಂತರ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮರವನ್ನು ಸಂಪೂರ್ಣವಾಗಿ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರಿನಲ್ಲಿ ಎರಡು ತಿಂಗಳ ಇಂಟರ್ನ್‌ಶಿಪ್‌ ಅವಧಿಯಲ್ಲಿ ಆದ ಖರ್ಚು ವೆಚ್ಚ ವಿವರಿಸಿದ ಯುವತಿ

ಬೆಂಗಳೂರು, ಮಾರ್ಚ್ 16: ಬೆಂಗಳೂರು (Bengaluru) ಅಂದ್ರೆ ದುಬಾರಿ. ಇಲ್ಲಿ ಎಷ್ಟು ದುಡಿದ್ರೂ ಮನೆ ಬಾಡಿಗೆ, ದಿನಸಿ ಹಾಗೂ ಉಳಿದ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದ್ರಲ್ಲಿಯೇ ಜೇಬು ಖಾಲಿಯಾಗಿರುತ್ತದೆ. ಇಂತಹದ್ದೇ ಅನುಭವ ಯುವತಿಯೊಬ್ಬಳಿಗೆ ಆಗಿದೆ. ಬೆಂಗಳೂರಿನಲ್ಲಿ ಎರಡು ತಿಂಗಳ ಇಂಟರ್ನ್‌ಶಿಪ್‌ ಅವಧಿಯಲ್ಲಿ ಅಂಶಿಕಾ ಅಗರ್ವಾಲ್ (Anshika Aggarwal) ತನ್ನ ಮಾಸಿಕ ಖರ್ಚು ವೆಚ್ಚಗಳ ಬಗ್ಗೆ ಮಾತನಾಡಿದ್ದಾಳೆ. ಈ ಪೋಸ್ಟ್‌ನಲ್ಲಿ ವಿವರವಾದ ಮಾಹಿತಿ ನೀಡಿದ್ದಾಳೆ.

ಅಂಶಿಕಾ ಅಗರ್ವಾಲ್  (@kipupwidanshika) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಸಿಕ ಖರ್ಚುವೆಚ್ಚಗಳ ಬಗ್ಗೆ   ಉಲ್ಲೇಖಿಸಿರುವುದನ್ನು ಕಾಣಬಹುದು. ಪಿಜಿಗೆ ಪಾವತಿಸಲು ಮಾತ್ರ ತಿಂಗಳಿಗೆ ಸುಮಾರು 12,500 ರೂ ಖರ್ಚು ಆಯ್ತು. ಆಹಾರವು ಎರಡನೇ ಅತಿದೊಡ್ಡ ವೆಚ್ಚವಾಗಿದ್ದು, ಪ್ರತಿ ತಿಂಗಳು ಸುಮಾರು 6,000 ರೂ ಊಟಕ್ಕೆ ಎತ್ತಿಡಬೇಕಾಯ್ತು. ಪಿಜಿ ವಸತಿ ಸೌಕರ್ಯವು ಸಾಮಾನ್ಯವಾಗಿ ಆಹಾರವನ್ನು ಒಳಗೊಂಡಿದ್ದರೂ, ಆ ಆಹಾರವನ್ನು ಹೆಚ್ಚು ಅವಲಂಬಿಸಲು ಸಾಧ್ಯವಾಗಲಿಲ್ಲ ಹೊರಗಿನ ಊಟಕ್ಕೆ ಹೆಚ್ಚುವರಿ ಖರ್ಚು ಮಾಡಬೇಕಾಗಿತ್ತು ಎಂದು ಹೇಳಿದ್ದಾಳೆ.

ವೈರಲ್ ಪೋಸ್ಟ್ ಇಲ್ಲಿದೆ

ಮಾಸಿಕ ವೆಚ್ಚಗಳಲ್ಲಿ ಟ್ರಾವೆಲ್‌ಗಾಗಿ ಸರಿಸುಮಾರು 2,000 ರೂ ಸೇರಿವೆ. ಸುತ್ತಾಟಕ್ಕಾಗಿ 2,000 ರೂ, (ಇಂಟರ್ನ್‌ಶಿಪ್ ಅವಧಿಯಲ್ಲಿ ತಾನು ಹೆಚ್ಚಾಗಿ ಹೊರಗೆ ಹೋಗುತ್ತಿರಲಿಲ್ಲ) ಹಾಗೂ ದೈನಂದಿನ ಅಗತ್ಯ ವಸ್ತುಗಳಂತಹ ವಿವಿಧ ವೆಚ್ಚಗಳು 1,000 ರೂಯಿಂದ 2,000 ರೂ ತಗಲಿವೆ. ಒಟ್ಟಾರೆಯಾಗಿ ಎರಡು ತಿಂಗಳ ಇಂಟರ್ನ್‌ಶಿಪ್‌ ಅವಧಿಯಲ್ಲಿ26,000 ರೂ ಖರ್ಚು ಆಯಿತು ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಿಂಗಳಿಗೆ 1.5 ಲಕ್ಷ ರೂ. ಸಂಬಳ, ಉಳಿಯೋದು 20 ಸಾವಿರ ಮಾತ್ರ! ಟೆಕ್ಕಿ ಸಂಬಂಧಿಯ ಪೋಸ್ಟ್ ವೈರಲ್

ಈ ಪೋಸ್ಟ್ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನನ್ನದು ತಿಂಗಳಿಗೆ 40 ರಿಂದ 50 ಸಾವಿರ ರೂ ಖರ್ಚು ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ದುಬಾರಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬಹುಶಃ ನನಗೆ ಪ್ರವಾಸಕ್ಕೆ ಸುಮಾರು 4-5 ಸಾವಿರ ಬೇಕಾಗಬಹುದು. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿದರೆ ಬೆಂಗಳೂರಿನಲ್ಲಿ ವಾಸಿಸುವುದು ಅಷ್ಟು ದುಬಾರಿಯಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

110 ಅಡಿಗೆ ಇಳಿದ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ; ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಾ?

ಮಂಡ್ಯ, ಮಾರ್ಚ್​ 16: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ ಇದೀಗ 110 ಅಡಿಗೆ ಇಳಿದಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 110.44 ಅಡಿ ನೀರು ಇದ್ದು, ಸುಮಾರು 32.167 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಈ ಬಾರಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಾ ಎಂಬ ಆತಂಕ ಶುರುವಾಗಿದೆ.

ಬೆಂಗಳೂರಿಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲಾ

ಸಾಮಾನ್ಯವಾಗಿ ಜೂನ್–ಜುಲೈ ತಿಂಗಳಲ್ಲಿ ತುಂಬುವ ಕೆಆರ್‌ಎಸ್ ಜಲಾಶಯ ಈ ಬಾರಿ ಉತ್ತಮ ಮಳೆಯ ಪರಿಣಾಮವಾಗಿ  ಮೇ ತಿಂಗಳಲ್ಲೇ ಭರ್ತಿಯಾಗಿತ್ತು. ಆದರೆ ಈಗ ನೀರಿನ ಮಟ್ಟ 110 ಅಡಿಗೆ ಇಳಿದಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯಲು ನೀರು ಸಿಗದಂತೆ ಆಗುತ್ತಾ ಎಂಬ ಪ್ರಶ್ನೆ ಉದಭವಿಸಿದ್ದು, ನೀರಿನ ಮಟ್ಟ ಕುಸಿದಿದ್ದರೂ ಜೂನ್ ಹಾಗೂ ಜುಲೈವರೆಗೆ ಕುಡಿಯುವ ನೀರಿಗೆ ಯಾವುದೇ ಆತಂಕ ಇಲ್ಲ ಎಂದು ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ KRS Dam Full: ಕೆಆರ್​ಎಸ್ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್​ನಲ್ಲೇ ಭರ್ತಿ!

ರೈತರ ಬೆಳೆಗಳಿಗೆ ಕಟ್ಟು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಬಿಡಲಾಗುತ್ತಿದ್ದು, ನೀರಿನ ಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ. ಹೀಗಾಗಿ ಮೈಸೂರು ಹಾಗೂ ಬೆಂಗಳೂರಿಗೆ ಪೂರೈಕೆ ಮಾಡುವ ಕುಡಿಯುವ ನೀರಿಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ವರ್ಷ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಮುಖಕ್ಕೆ ಗಾಯ; ಆಗಿದ್ದು ಹೇಗೆ?

ತೆಲುಗು ಬಿಗ್ ಬಾಸ್ ಖ್ಯಾತಿಯ ಪ್ರಸಿದ್ಧ ನಟಿ ಅಶ್ವಿನಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದರು. ಬಿಗ್ ಬಾಸ್‌ನ ಏಳನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಈಗ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಈಗ ಅವರಿಗೆ ಗಾಯ ಆಗಿದೆ.

ಅಶ್ವಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರಸ್ ಫೋಟೋ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಅಶ್ವಿನಿ ಶ್ರೀ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವರು ತಮ್ಮ ಮುಖಕ್ಕೆ ಗಾಯವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ‘ಬೆಳಿಗ್ಗೆ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದೆ. ನನ್ನ ಮುಖಕ್ಕೆ ಗಾಯಗಳಾಗಿವೆ. ನಾನು ಈ ರೀತಿ ನಿಮ್ಮ ಮುಂದೆ ಬರುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಮುಖಕ್ಕೆ ಪೆಟ್ಟು ಬಿದ್ದ ನಂತರ ನನಗೆ ತುಂಬಾ ನೋವಾಗಿದೆ. ನೀವೆಲ್ಲರೂ ನನಗಾಗಿ ಪ್ರಾರ್ಥಿಸುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ’ ಎಂದು ಅಶ್ವಿನಿ ಶ್ರೀ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಬ್ಯೂಟಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಗ್ ಬಾಸ್ ಸೆಲೆಬ್ರಿಟಿಗಳು, ಆಪ್ತ ಸ್ನೇಹಿತರು ಮತ್ತು ಸ್ನೇಹಿತರು ಇದನ್ನು ನೋಡಿದ ನಂತರ ಪ್ರತಿಕ್ರಿಯಿಸುತ್ತಿದ್ದಾರೆ. ಅವರು ಅಶ್ವಿನಿ ಶ್ರೀ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ.

ಇದನ್ನೂ ಓದಿ: ಅಶ್ವಿನಿ ಗೌಡ ವಿಷಯದಲ್ಲಿ ಗಿಲ್ಲಿ ಹೇಳಿದ್ದ ಆ ಮಾತು ನಿಜವೇ ಆಯ್ತು

ತೆಲಂಗಾಣ ಮೂಲದ ಅಶ್ವಿನಿ ಶ್ರೀ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಪೋಷಕ ನಟಿಯಾಗಿ ಪ್ರಭಾವಿತರಾದರು. ಆದಾಗ್ಯೂ, ಅವರು ಹೆಚ್ಚಿನ ಮನ್ನಣೆಯನ್ನು ಗಳಿಸಲು ಸಾಧ್ಯವಾಗಲಿಲ್ಲ. ಅವರು ಸರ್ದಾರ್ ಗಬ್ಬರ್ ಸಿಂಗ್, ರಾಜಾ ದಿ ಗ್ರೇಟ್, ಬಿ.ಟೆಕ್ ಬಾಬುಲು, ಆಮಿರ್ ಪೆಟಾಲೊ ಮತ್ತು ಇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಅನೇಕ ಸಂಗೀತ ವೀಡಿಯೊಗಳು ಮತ್ತು ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link