ಡಾಲಿ ಧನಂಜಯ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣ ಕೆಲಸಗಳಲ್ಲೂ ಅವರು ತೊಡಗಿಕೊಂಡಿದ್ದು, ಹೊಸ ಮುಖಗಳಿಗೆ ಮಣೆ ಹಾಕುತ್ತಿದ್ದಾರೆ. ಈಗ ಅವರ ಕಡೆಯಿಂದ ಹೊಸ ಸುದ್ದಿ ಒಂದು ಸಿಗುವ ಸೂಚನೆ ಸಿಕ್ಕಿದೆ. ಜೀ5 ಅಲ್ಲಿ ಕನ್ನಡದ ಹೊಸ ಸರಣಿ ಬರುತ್ತಿದ್ದು, ಇದಕ್ಕೆ ಡಾಲಿ ನಿರ್ಮಾಣ ಇದೆ ಎನ್ನಲಾಗಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ.
ಬೆಂಗಳೂರು, ಮಾರ್ಚ್ 16: ಹಲವಾರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿತ್ತು. ಆದರೆ ಇಂದು ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದಂತಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ.
ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 158ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಹುಬ್ಬಳ್ಳಿ, ಬೆಳಗಾವಿ ಸೇರಿ ಹಲವೆಡೆ ಏರ್ ಕ್ವಾಲಿಟಿ 100ಕ್ಕಿಂತ ಕಡಿಮೆ ಇದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ಕಟಕ್, ಮಾರ್ಚ್ 16: ಒಡಿಶಾದ ಕಟಕ್ ನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡವೊಂದು ಸಂಭವಿಸಿದ್ದು, 10 ರೋಗಿಗಳು ಬಲಿಯಾಗಿದ್ದಾರೆ. 11ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಎಸ್ಸಿಬಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ (SCB Medical College & Hospital) ಈ ದುರಂತ ಸಂಭವಿಸಿರುವುದು ವರದಿಯಾಗಿದೆ. ಮಧ್ಯರಾತ್ರಿಯ ನಂತರ 2:30ರಿಂದ 3 ಗಂಟೆಯ ಸಮಯದಲ್ಲಿ ಈ ಅಗ್ನಿ ಅಪಘಾತವಾಗಿರುವುದು (Fire Accident) ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿರಬಹುದು ಎಂದು ಸದ್ಯ ಶಂಕಿಸಲಾಗಿದೆ.
ಆಸ್ಪತ್ರೆಯ ಟ್ರಾಮಾ ಕೇರ್ ವಿಭಾಗದ ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗಂಭೀರವಾಗಿ ಗಾಯಗೊಂಡಿರುವ ರೋಗಿಗಳು ಈ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಘಟನೆಯಲ್ಲಿ ಐಸಿಯುನಲ್ಲಿದ್ದ 10 ರೋಗಿಗಳು ಬಲಿಯಾಗಿದ್ದಾರೆ. ಅವರನ್ನು ರಕ್ಷಿಸಲು ಯತ್ನಿಸಿದ ಸಿಬ್ಬಂದಿ ಪೈಕಿ 11 ಮಂದಿಗೆ ಗಾಯಗಳಾಗಿವೆ.
ಘಟನೆ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ವರದಿ
#WATCH | Odisha: A fire broke out at Trauma Care ICU of S.C.B. Medical College and Hospital in Cuttack. Fire brigade present at the spot for firefighting operations. Visuals from the spot. More details awaited. pic.twitter.com/KZVF5wOy4V
ಬೆಂಕಿ ಅವಘಡ ಸಂಭವಿಸಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಐಸಿಯುನಲ್ಲಿದ್ದ ಇತರ ರೋಗಿಗಳನ್ನು ಆಸ್ಪತ್ರೆಯ ಬೇರೆ ವಾರ್ಡ್ಗಳಿಗೆ ಶಿಫ್ಟ್ ಮಾಡಲಾಗಿದೆ. ಒಟ್ಟು 23 ರೋಗಿಗಳನ್ನು ಬೇರೆಡೆ ವರ್ಗಾಯಿಸಲಾಗಿದೆ. ಹೀಗೆ ಬೇರೆಡೆ ಸಾಗಿಸುವ ಹಂತದಲ್ಲಿ 7 ಮಂದಿ ರೋಗಿಗಳು ಅಸುನೀಗಿದ್ದಾರೆ. ಮೂರು ರೋಗಿಗಳು ನಂತರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ಆರೋಗ್ಯ ಸಚಿವ ಮುಕೇಶ್ ಮಹಾಲಿಂಗ್ ಅವರು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಮೃತಪಟ್ಟಿರುವ ರೋಗಿಗಳ ಸಂಬಂಧಿಕರಿಗೆ 25 ಲಕ್ಷ ರೂ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ. ಹಾಗೆಯೇ, ಗಾಯಗೊಂಡಿರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕರಣ್ ಜೋಹರ್ ಪರಿಚಯಿಸಿದ ಆಲಿಯಾ ಭಟ್ ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕರಣ್ ಜೋಹರ್ ನಿರ್ದೇಶನದ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ನಂತರ ಆಲಿಯಾ ಹಿಂತಿರುಗಿ ನೋಡಿಲ್ಲ. ಇಂದು ಆಲಿಯಾ ಬಾಲಿವುಡ್‌ನ ಪ್ರಸಿದ್ಧ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ನಂತರ, ನಟಿ ‘2 ಸ್ಟೇಟ್ಸ್’, ‘ಹೈವೇ’, ‘ಡಿಯರ್ ಜಿಂದಗಿ’, ‘ರಾಝಿ’, ‘ಗಲ್ಲಿ ಬಾಯ್’ ಮತ್ತು ‘ಗಂಗೂಬಾಯಿ ಕಥಿಯಾವಾಡಿ’ ಮುಂತಾದ ಚಿತ್ರಗಳಲ್ಲಿ ನಟಿಸಿ ಫೇಮಸ್ ಆದರು. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ಆಲಿಯಾ ಬಹಳ ಕಡಿಮೆ ಸಮಯದಲ್ಲಿ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಅವರ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಆಲಿಯಾ ಅವರ ಸಂಪತ್ತಿನ ಬಗ್ಗೆ ಹೇಳುವುದಾದರೆ, ನಟಿ 550 ಕೋಟಿ ರೂ ಆಸ್ತಿ ಒಡತಿ. ಆಲಿಯಾ ಚಲನಚಿತ್ರಗಳಿಂದ ಮಾತ್ರವಲ್ಲದೆ ಇತರ ಮಾರ್ಗಗಳಿಂದಲೂ ಕೋಟಿ ಗಳಿಸುತ್ತಾರೆ.
ಆಲಿಯಾ ಒಂದು ಚಿತ್ರಕ್ಕೆ 10 ರಿಂದ 20 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾರೆ… ಆರ್‌ಆರ್‌ಆರ್ ಚಿತ್ರದಲ್ಲಿ ಕೇವಲ 20 ನಿಮಿಷಗಳ ದೃಶ್ಯಕ್ಕೆ ಆಲಿಯಾ 9 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆದಿದ್ದರು… ಇದಲ್ಲದೆ, ಆಲಿಯಾ ವೆಬ್ ಸರಣಿಗಳಲ್ಲಿ ನಟಿಸಿ ಭಾರಿ ಮೊತ್ತದ ಆದಾಯವನ್ನು ಗಳಿಸುತ್ತಾರೆ. ವಿವಿಧ ಜಾಹೀರಾತುಗಳ ಮೂಲಕವೂ ಆಲಿಯಾ ದೊಡ್ಡ ಮೊತ್ತವನ್ನು ಗಳಿಸುತ್ತಾರೆ.
ಆಲಿಯಾ ತನ್ನದೇ ಆದ ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ. ‘ಎಡ್-ಎ-ಮಮ್ಮಾ’ ಎಂಬುದು ಆಲಿಯಾಳ ಬ್ರ್ಯಾಂಡ್‌ನ ಹೆಸರು. ಆಲಿಯಾಳ ಬಟ್ಟೆ ಬ್ರಾಂಡ್ 2 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ. ಸಾಕಾಷ್ಟು ಆದಾಯವನ್ನು ಇದು ಗಳಿಸುತ್ತದೆ. ಆಲಿಯಾ ಯಾವಾಗಲೂ ತನ್ನ ಬ್ರ್ಯಾಂಡ್ ಬಗ್ಗೆ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
ಆಲಿಯಾ ಅವರ ಆಸ್ತಿಗಳ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ, ಆಲಿಯಾ ಅವರಿಗೆ ಕೋಟ್ಯಂತರ ಮೌಲ್ಯದ ಆಸ್ತಿಗಳಿವೆ. ಆಲಿಯಾ ಲಂಡನ್‌ನ ಕೋವೆಂಟ್ ಗಾರ್ಡನ್ ಪ್ರದೇಶದಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ ಮತ್ತು ಆ ಮನೆಯ ಬೆಲೆ 25 ಕೋಟಿ ರೂ. ಇದಲ್ಲದೆ, ನಟಿ ಮುಂಬೈನ ಬಾಂದ್ರಾದಲ್ಲಿ ಒಂದು ಬಂಗಲೆಯನ್ನು ಹೊಂದಿದ್ದಾರೆ. ಬಂಗಲೆಯ ಬೆಲೆ 32 ಕೋಟಿ ರೂ. ನಟಿ ಬಳಿ ಅನೇಕ ಐಷಾರಾಮಿ ಕಾರುಗಳಿವೆ. ಅವುಗಳಲ್ಲಿ ಆಡಿ Q7, BMW 7 ಸರಣಿ, ರೇಂಜ್ ರೋವರ್ ವೋಗ್, ಮರ್ಸಿಡಿಸ್-ಬೆನ್ಜ್ GLS, ಆಡಿ A6 ಸೇರಿವೆ.
ದೆಹಲಿಯಲ್ಲಿ ಭಾನುವಾರ (ಮಾರ್ಚ್ 15) ನಡೆದ ಸಮಾರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ವಾರ್ಷಿಕ ನಮನ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಈ ಸಮಾರಂಭದಲ್ಲಿ ದಿಗ್ಗಜ ರಾಹುಲ್ ದ್ರಾವಿಡ್ ಅವರಿಗೆ ಪ್ರತಿಷ್ಠಿತ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇನ್ನು ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್, ಟೀಮ್ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಲಾಯಿತು. ಈ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಕೆಳಗಿನಂತಿದೆ…
2025ರ ನಮನ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:
2024-25ರ ಅತ್ಯುತ್ತಮ ಮಹಿಳಾ ಆಟಗಾರ್ತಿ (ಜೂನಿಯರ್ – ದೇಶೀಯ) – ಇರಾ ಜಾಧವ್
2024-25ರ ಅತ್ಯುತ್ತಮ ಮಹಿಳಾ ಕ್ರಿಕೆಟಿಗ (ಸೀನಿಯರ್ – ದೇಶೀಯ ವುಮೆನ್ಸ್ ಒನ್ ಡೇ) – ಶಫಾಲಿ ವರ್ಮಾ
2024-25ರ ವಿಜಯ್ ಮರ್ಚೆಂಟ್ ಟ್ರೋಫಿಯ ಅತ್ಯುತ್ತಮ ಬೌಲರ್ – (ಎಲೈಟ್ ಗ್ರೂಪ್) – ಯಶ್ವರ್ಧನ್ ಸಿಂಗ್ ಚೌಹಾಣ್
ಬೆಂಗಳೂರು, ಮಾರ್ಚ್ 16: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಹೆಚ್ಚಾದ ತಾಪಮಾನದೊಂದಿಗೆ ಒಣ ಹವೆ (Weather Forecast) ಆವರಿಸಿತ್ತು. ಆದರೆ ಇಂದು ಕರಾವಳಿ ಸೇರಿದಂತೆ ಹಲವೆಡೆ ಸಾಧಾರಣ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆಯೇ ಮುಂದುವರೆಯಲಿದ್ದು, ಇನ್ನೂ ಕೆಲ ದಿನ ಇದೇ ರೀತಿಯ ಶುಷ್ಕ ವಾತಾವರಣ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ತುಂತುರು ಮಳೆ?
ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿಯ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಅದರೊಂದಿಗೆ ದಕ್ಷಿಣ ಒಳನಾಡಿನ ಕೊಡಗು, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಎಲ್ಲೆಲ್ಲಿ ಒಣ ಹವೆ?
ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಚಾಮರಾಜನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾರ್ಚ್ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ
ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.
ನಟ ಪುನೀತ್ ರಾಜ್ಕುಮಾರ್ ಅವರಿಗೆ (Puneeth Rajkumar) ಮಾರ್ಚ್ 17 ಜನ್ಮದಿನ. ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅವರನ್ನು ಕಳೆದುಕೊಂಡು ಕೆಲವು ವರ್ಷಗಳು ಕಳೆದಿವೆ. ಆದಾಗ್ಯೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಅಭಿಮಾನಿಗಳಿಂದ ಆಗಾಗ ಆಗುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ಅವರ ವಹಲವು ವಿಷಯಗಳು ಚರ್ಚೆ ಆಗುತ್ತಿವೆ. ಅದೇ ರೀತಿ ಅವರು ಅಕ್ರಮವಾಗಿ ಗ್ರ್ಯಾನೇಟ್ ಬಿಸ್ನೆಸ್ ಮಾಡುತ್ತಿದ್ದರು ಎಂಬ ಆರೋಪ ಇತ್ತು. ಈ ವಿಷಯವಾಗಿ ಅವರು ಮಾತನಾಡಿದ್ದರು. ಈ ಕಾರಣಕ್ಕೆ ಅವರ ತಂದೆ ರಾಜ್ಕುಮಾರ್ ಅವರನ್ನು ಬಂಧಿಸಲಾಗಿತ್ತು ಎನ್ನುವ ಆರೋಪ ಇತ್ತು. ಇದಕ್ಕೆ ಪುನೀತ್ ಅವರು ಸ್ಪಷ್ಟನೆ ಕೊಟ್ಟಿದ್ದರು.
ಪುನೀತ್ ರಾಜ್ಕುಮಾರ್ ಅವರು ಕೇವಲ ನಟಾಗಿರಲಿಲ್ಲ. ಅವರಿಗೆ ನಟನೆಗಿಂತ ಹೆಚ್ಚು ಉದ್ಯಮದ ಕಡೆಗಳಲ್ಲಿ ಆಸಕ್ತಿ ಇತ್ತು. ಈ ಕಾರಣದಿಂದ ಉದ್ಯಮದ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಅವರ‘ಪಿಆರ್ಕೆ’ ನಿರ್ಮಾಣ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಅವರ ಬಗ್ಗೆ ಕೇಳಿಬಂದ ಗಂಭೀರ ಆರೋಪದ ಬಗ್ಗೆ ಪುನೀತ್ ಮಾತನಾಡಿದ್ದರು.
‘ನಮ್ಮ ತಂದೆಯವರು ವೀರಪ್ಪನ್ ಅವರಿಂದ ಕಿಡ್ನ್ಯಾಪ್ ಆದಾಗ ಅನೇಕ ಚರ್ಚೆಗಳು ನಡೆದವು. ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಅದಕ್ಕಾಗಿ ನಮ್ಮ ತಂದೆಯನ್ನು ವೀರಪ್ಪನ್ ಹಿಡಿದುಕೊಂಡು ಹೋದರು ಎಂಬ ಸುದ್ದಿ ಹರಿದಾಡಿತ್ತು. ಈ ರೀತಿಯ ಹಲವಾರು ಸುದ್ದಿ ಬಂತು’ ಎಂದು ಪುನೀತ್ ರಾಜ್ಕುಮಾರ್ ಹೇಳಿದ್ದರು.
‘ನಾನು ಗ್ರಾನೈಟ್ ಬಿಸ್ನೆಸ್ ಮಾಡಲು ಮುಂದಾಗಿದ್ದೆ ಎಂಬುದು ಅನೇಕರಿಗೆ ತಿಳಿದೇ ಇಲ್ಲ. ಆಗ ಇದು ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್ನಲ್ಲಿ ಬಂದಿತ್ತು. ಈ ರೀತಿಯಲ್ಲ ಏಕೆ ಹಾಕುತ್ತಾರೆ ಎಂಬುದು ನನ್ನ ಪ್ರಶ್ನೆ ಆಗಿತ್ತು. ನನ್ನ ಬಿಸ್ನೆಸ್ ಅದು. ಅದು ಅಕ್ರಮವೇ ಆಗಿದ್ದರೆ ಕಾನೂನು ನೋಡಿಕೊಳ್ಳುತ್ತಿತ್ತು. ಹೊರಗಡೆ ಇದ್ದವರು ಕಮೆಂಟ್ ಮಾಡೋದೇಕೆ ಎಂದು ನನ್ನ ಮನಸ್ಸಿಗೆ ಅನಿಸಿತ್ತು’ ಎಂದಿದ್ದರು ಅವರು.
‘ಯಾರೋ ಹೀಗೆ ಹೇಳಿದ್ರೂ ತೊಂದರೆ ಇಲ್ಲ. ಆದರೆ, ತಂದೆ ಅಪಹರಣ ಆದಾಗ ಅನೇಕರು ಇದನ್ನು ಲಿಂಕ್ ಮಾಡಿದಾಗ ಸಾಕಷ್ಟು ಬೇಸರ ಆಯಿತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ನನಗೇನು ಬುದ್ಧಿ ಇಲ್ವ? ಕುಟುಂಬದವರಿಗೆ ಸತ್ಯ ಏನು ಎಂಬುದು ಗೊತ್ತಿತ್ತು’ ಎಂದಿದ್ದರು ಪುನೀತ್ ರಾಜ್ಕುಮಾರ್. ಈ ರೀತಿಯ ಸುದ್ದಿಯಿಂದ ರಾಜ್ಕುಮಾರ್ ಬೇಸರಗೊಂಡಿದ್ದರು. ಪುನೀತ್ಗೆ ಇದೆಲ್ಲ ನಿಲ್ಲಿಸುವಂತೆ ಕೋರಿಕೊಂಡಿದ್ದರು.
ಪುನೀತ್ ರಾಜ್ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಅವರು ನಿಧನ ಹೊಂದಿದರು. ಅವರಿಗೆ 46 ವರ್ಷ ವಯಸ್ಸು ಆಗಿತ್ತು. ಹೃದಯಾಘಾತದಿಂದ ಅಪ್ಪು ನಿಧನ ಹೊಂದಿದರು. ಅವರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರಿಲ್ಲ ಎನ್ನುವ ನೋವು ಎಲ್ಲರನ್ನೂ ಈಗಲೂ ಕಾಡುತ್ತಿದೆ.
ಚಿಕ್ಕಬಳ್ಳಾಪುರ, ಮಾರ್ಚ್ 16: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ರಾಜ್ಯದ್ಯಂತ ಹಲವು ಹೋಟೆಲ್‌ಗಳು ಬಂದ್ ಆಗಿದ್ದರೆ, ಇನ್ನೂ ಕೆಲವೆಡೆ ಸೌದೆ ಒಲೆಗಳನ್ನೇ ನಂಬಿಕೊಂಡು ಹೋಟೆಲ್ ನಡೆಸುವ ಸ್ಥಿತಿ ಇದೆ. ಇದರ ಪರಿಣಾಮ ಪ್ರವಾಸೋದ್ಯಮದ ಮೇಲೂ ತಟ್ಟಿದೆ. ವಾರಾಂತ್ಯಗಳಲ್ಲಿ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಪ್ರವಾಸಿತಾಣ ನಂದಿಗಿರಿಧಾಮ ಭಾನುವಾರ ಜನ ಇಲ್ಲದೆ ಬಿಕೊ ಎನ್ನುತ್ತಿತ್ತು. ಗಿರಿಧಾಮದಕ್ಕೆ ಹೊದರೆ ಅಲ್ಲಿರುವ ಹೋಟೆಲ್ಗಳಲ್ಲಿ ತಿಂಡಿ-ಊಟ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನದಿಂದ ಪ್ರವಾಸಿಗರು ಅತ್ತ ಮುಖ ಮಾಡಿಲ್ಲ. ಮತ್ತೊಂದೆಡೆ ನಂದಿಗಿರಿಧಾಮದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ಗಳಲ್ಲಿ ಕಮರ್ಷಿಯಲ್ ಗ್ಯಾಸ್ ಗಳಿಗೆ ಕೊರತೆ ಇಲ್ಲ. ಅವು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
Oscars 2026 Updates:98ನೇ ಸಾಲಿ ಆಸ್ಕರ್ ಅವಾರ್ಟಡ್ ಕಾರ್ಯಕ್ರಮ ಭಾರತೀಯ ಕಾಲಮಾನದ ಪ್ರಕಾರ ಸೋಮವಾರ (ಮಾರ್ಚ್ 16) ಬೆಳಿಗ್ಗೆ ಆರಂಭ ಆಗಿದೆ. ಭಾರತ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಕಾರ್ಯಕ್ರಮದಲ್ಲಿ ಮಿಂಚಿದರು. ಅಚ್ಚರಿಯೆಂದರೆ, ಬಾಲಿವುಡ್ ದಂತಕಥೆ ಧರ್ಮೇಂದ್ರ ಅವರನ್ನು ಆಸ್ಕರ್ 2026 ‘ಮೆಮೋರಿಯಮ್’ ವಿಭಾಗದಲ್ಲಿ ಸೇರಿಸಲಾಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಭಾರತ ಮೂಲದ ಅಮೆರಿಕ ನಿರ್ದೇಶಕಿ ಗೀತಾ ಕೂಡ ಆಸ್ಕರ್ ಕಾರ್ಯಕ್ರಮದಲ್ಲಿ ಇದ್ದರು. ‘ದಿ ಪರ್ಫೆಕ್ಟ್ ನೇಬರ್’ (ಬೆಸ್ಟ್ ಡಾಕ್ಯುಮೆಂಟರಿ ಫೀಚರ್) ಹಾಗೂ ‘ದಿ ಡೆವಿಲ್’ (ದಿ ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್) ನಾಮಿನೇಟ್ ಆಗಿದ್ದವು. ಆದರೆ, ಅವಾರ್ಡ್ ಗೆಲ್ಲಲು ಸಾಧ್ಯವಾಗಿಲ್ಲ.
ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ಧರ್ಮೇಂದ್ರ ಅವರು ಕಳೆದ ವರ್ಷ ನಿಧನ ಹೊಂದಿದರು. ಅವರು ಭಾರತೀಯ ಮತ್ತು ಜಾಗತಿಕ ಸಿನಿಮಾಗೆ ಹಲವು ದಶಕಗಳ ಕಾಲ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಇವರನ್ನು ಅಕಾಡೆಮಿ ಅವಾರ್ಡ್ಸ್ನಲ್ಲಿ ಗೌರವಿಸಲಾಗುವುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದರಲ್ಲಿ ಅವರ ಹೆಸರು ಇರಲೇ ಇಲ್ಲ. ಈ ವರ್ಷ ಅಕಾಡೆಮಿಯ ಗೌರವವು ಇತರ ಸಿನಿಮಾ ರಂಗದ ದಂತಕಥೆಗಳ ಮೇಲೆ ಆಧರಿಸಿದೆ.
ಕಾಮಿಡಿಯನ್ ಕೊನನ್ ಒ ಬ್ರೇನ್ ಅವವರು ಈ ಬಾರಿ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮ ಹೋಸ್ಟ್ ಮಾಡಿದ್ದಾರೆ. ‘ಸಿನ್ನರ್ಸ್’ ಸಿನಿಮಾ ಬರೋಬ್ಬರಿ 17 ವಿಭಾಗಳಲ್ಲಿ ನಾಮ ನಿರ್ದೇಶನಗೊಂಡಿದೆ.
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಕಳೆದ ನವೆಂಬರ್ 24ರಂದು ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹಲವು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಗೂ ಬದುಕುಳಿಯಲೇ ಇಲ್ಲ.
ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ್ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ 8 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 127 ರನ್ಗಳ ವಿಜಯ ದಾಖಲಿಸಿದ್ದರು. ಇದೀಗ ಮೂರನೇ ಪಂದ್ಯದಲ್ಲಿ 11 ರನ್ಗಳ ರೋಚಕ ಗೆಲುವು ದಾಖಲಿಸಿ ಬಾಂಗ್ಲಾದೇಶ್ ತಂಡ ಸರಣಿ ವಶಪಡಿಸಿಕೊಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 50 ಓವರ್ಗಳಲ್ಲಿ 290 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 279 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾದೇಶ್ ಪಡೆ 11 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಮೂರು ಸರಣಿಗಳನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.
ಕಳೆದ ಎರಡು ವರ್ಷಗಳಲ್ಲಿ ಬಾಂಗ್ಲಾದೇಶವು ಪಾಕಿಸ್ತಾನ್ ವಿರುದ್ಧ ಅಸಾಧಾರಣ ಪ್ರದರ್ಶನ ನೀಡಿದೆ. ಏಕೆಂದರೆ ಬಾಂಗ್ಲಾ ಪಡೆ ಬ್ಯಾಕ್ ಟು ಬ್ಯಾಕ್ ಸರಣಿ ಗೆಲ್ಲುತ್ತಿರುವುದು ಇದೇ ಮೊದಲ ಬಾರಿಗೆ…
ಟೆಸ್ಟ್ ಕ್ರಿಕೆಟ್ (2024): ಪಾಕಿಸ್ತಾನದ ನೆಲದಲ್ಲೇ ಅವರನ್ನು 2-0 ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದುಕೊಂಡಿತು.
ಟಿ20 ಕ್ರಿಕೆಟ್ (2025): ಜುಲೈ 2025 ರಲ್ಲಿ ನಡೆದ ಸರಣಿಯಲ್ಲಿ ಪಾಕಿಸ್ತಾನವನ್ನು 2-1 ರಿಂದ ಸೋಲಿಸಿ ಮೊದಲ ಟಿ20 ಸರಣಿ ಜಯ ದಾಖಲಿಸಿತು.
ಏಕದಿನ ಕ್ರಿಕೆಟ್ (2026): ಇದೀಗ ಏಕದಿನ ಸರಣಿ ಗೆಲುವಿನೊಂದಿಗೆ, ಬಾಂಗ್ಲಾದೇಶವು ಪಾಕಿಸ್ತಾನದ ವಿರುದ್ಧ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಸರಣಿ ಗೆದ್ದ ಅಪರೂಪದ ಸಾಧನೆ ಮಾಡಿದೆ.
ಅಷ್ಟೇ ಅಲ್ಲದೆ ಇದು ಬಾಂಗ್ಲಾದೇಶ್ ತಂಡದ ಐತಿಹಾಸಿಕ ಸರಣಿ ಗೆಲುವು ಎಂಬುದು ವಿಶೇಷ. ಅಂದರೆ ಬಾಂಗ್ಲಾದೇಶ್ ತಂಡವು ಪಾಕಿಸ್ತಾನದ ವಿರುದ್ಧ 11 ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ಸರಣಿಯನ್ನು (2-1 ರಿಂದ) ಗೆದ್ದುಕೊಂಡಿದೆ. 2015 ರ ಬಳಿಕ ಪಾಕ್ ವಿರುದ್ಧ ಒಮ್ಮೆಯೂ ಬಾಂಗ್ಲಾ ತಂಡ ಗೆದ್ದಿರಲಿಲ್ಲ.
ಇದೀಗ ದಶಕದ ಬಳಿಕ ಪಾಕಿಸ್ತಾನ್ ತಂಡವನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿಯಾಗಿರುವುದು ವಿಶೇಷ.