ಬೆಳಗಾವಿ, (ಮೇ 21):ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ (Darshan) ಜೊತೆ ಚಹಾ ಹೀರುತ್ತ ಧಮ್ ಹೊಡೆದು ಭಾರೀ ಸುದ್ದಿಯಾಗಿದ್ದ ವಿಲ್ಸನ್ ಗಾರ್ಡನ್ ನಾಗ (Wilson garden naga) ಜೈಲಿನಿಂದ ಬಿಡುಗಡೆಯಾಗಿದ್ದಾನೆ. ದರ್ಶನ್ ಜೊತೆ ಕೂತ ಜೈಲಿನಲ್ಲಿ ಮೋಜು ಮಸ್ತಿ ಮಾಡಿದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಹೀಗಾಗಿ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಜಾಮೀನು ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ. ಆದ್ರೆ, ದರ್ಶನ್ ಮಾತ್ರ ಇನ್ನೂ ಒಂದು ವರ್ಷ ಜೈಲಿನಲ್ಲೇ ಇರಬೇಕಿದೆ.
ಟಾಲಿವುಡ್‌ನ ಸ್ಟಾರ್ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಕಳೆದ ಫೆಬ್ರವರಿ 26ರಂದು ಉದಯಪುರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಕೆಲವು ತಿಂಗಳು ಕಳೆದರೂ ಈ ತಾರಾ ಜೋಡಿಯ ಮದುವೆಯ ಉಡುಪು, ಆಭರಣ ಮತ್ತು ಆಚರಣೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಇನ್ನೂ ನಿಂತಿಲ್ಲ. ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆಯ ಲುಕ್ ವಿನ್ಯಾಸಗೊಳಿಸಿದ್ದ ಪ್ರಸಿದ್ಧ ಸ್ಟೈಲಿಸ್ಟ್ ಪ್ರಿಯಾ ಮಗಂತಿ ಅವರು, ಮದುವೆಯ ದಿನ ರಶ್ಮಿಕಾ ಅವರ ವಿಶಿಷ್ಟ ಆಯ್ಕೆಗಳ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿರುವ ಪ್ರಿಯಾ ಮಗಂತಿ, ‘ರಶ್ಮಿಕಾ ಮಂದಣ್ಣ ಅವರು ತಮ್ಮ ಮದುವೆಯ ಮಂಗಳಸೂತ್ರವನ್ನು ತಾವೇ ಸ್ವತಃ ವಿನ್ಯಾಸಗೊಳಿಸಿದ್ದರು. ಇದು ಅವರ ವಿಭಿನ್ನ ಮತ್ತು ವಿಶಿಷ್ಟ ಅಭಿರುಚಿಯನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ. ಅಲ್ಲದೆ, ವಿಜಯ್ ಮತ್ತು ರಶ್ಮಿಕಾ ಇಬ್ಬರೂ ತಮ್ಮ ಮದುವೆ ಬೇರೆ ಸೆಲೆಬ್ರಿಟಿಗಳ ಮದುವೆಯಂತೆ ಟ್ರೆಂಡ್ ಫಾಲೋ ಮಾಡಬಾರದು, ಬದಲಿಗೆ ಪ್ರತಿಯೊಂದು ಆಯ್ಕೆಯೂ ತಮ್ಮ ಮನಸ್ಸಿಗೆ ಹತ್ತಿರವಾಗಿರಬೇಕು ಅಂತ ಮೊದಲೇ ನಿರ್ಧರಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಕಿತ್ತಳೆ ಬಣ್ಣದ ಸೀರೆ ಆಯ್ಕೆ ಮಾಡಿದ್ದೇಕೆ?
ಸಾಮಾನ್ಯವಾಗಿ ಸೆಲೆಬ್ರಿಟಿ ವಧುಗಳು ತಮ್ಮ ಮದುವೆಗೆ ಕೆಂಪು, ಬಿಳಿ ಅಥವಾ ಇನ್ನಿತರ ಬಣ್ಣದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರಶ್ಮಿಕಾ ಮಾತ್ರ ಎಲ್ಲರಿಗಿಂತ ಭಿನ್ನವಾಗಿ ಕಿತ್ತಳೆ ಬಣ್ಣದ ಸೀರೆಯನ್ನು ಉಡಲು ಬಯಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಕೂಡ ಪ್ರಿಯಾ ಅವರು ಮಾತನಾಡಿದ್ದಾರೆ.
‘ಮದುವೆಯ ಸೀರೆಗೆ ಕಿತ್ತಳೆ ಬಣ್ಣ ಅಷ್ಟಾಗಿ ಬಳಸದ ಕಾರಣ, ಹಲವು ಪ್ರಮುಖ ಡಿಸೈನರ್ಗಳು ರಶ್ಮಿಕಾಗೆ ಕೆಂಪು ಅಥವಾ ಬಿಳಿ ಬಣ್ಣದ ಸೀರೆ ಉಡುವಂತೆ ಸಲಹೆ ನೀಡಿದ್ದರು. ಆದರೆ ರಶ್ಮಿಕಾ ಮಾತ್ರ ಕಿತ್ತಳೆ ಬಣ್ಣಕ್ಕೇ ಪಟ್ಟು ಹಿಡಿದಿದ್ದರು. ಆಗ ನಾನು ಅವರಿಗೆ ಧೈರ್ಯ ತುಂಬಿ, ಬೇರೆಯವರ ಮಾತನ್ನು ಕೇಳಬೇಡಿ, ನಿಮ್ಮ ಮನಸ್ಸಿಗೆ ಅನಿಸಿದ್ದನ್ನೇ ಮಾಡಿ ಎಂದು ಹೇಳಿದೆ. ಅದರಂತೆ ಅವರು ಕಿತ್ತಳೆ ಬಣ್ಣದ ಸೀರೆಯಲ್ಲಿಯೇ ಮಿಂಚಿದರು’ ಎಂದು ಪ್ರಿಯಾ ಅವರು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇಂಟರ್ನೆಟ್‌ನಲ್ಲಿ ಯಾವುದು ಟ್ರೆಂಡ್ ಆಗುತ್ತಿದೆ ಎನ್ನುವುದಕ್ಕಿಂತ, ತಮಗೆ ಯಾವುದು ಸಂತೋಷ ನೀಡುತ್ತದೆ ಎಂಬದಕ್ಕೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಆದ್ಯತೆ ನೀಡಿದ್ದರು ಎಂದು ವೆಡ್ಡಿಂಗ್ ಪ್ಲಾನರ್ ತಂಡದ ಪ್ರಿಯಾ ಹೇಳಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ರಣಬಾಲಿ’ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ.
ಬಳ್ಳಾರಿ, ಮೇ 21: ವಿವಿಧ ಏರಿಯಾಗಳಲ್ಲಿ ನಡೆದಿದ್ದ ವೇಶ್ಯಾವಾಟಿಕೆ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸತ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಧಿನಗರ, ಎಪಿಎಂಸಿ ಮತ್ತು ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಏಕಕಾಲದಲ್ಲಿ ದಿಢೀರ್ ದಾಳಿ ಮಾಡಿದ್ದಾರೆ. ಈ ವೇಳೆ ದಂಧೆಯಲ್ಲಿ ತೊಡಗಿದ್ದ 6 ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ 8 ಮಹಿಳಾ ಸಂತ್ರಸ್ತೆಯರನ್ನು ರಕ್ಷಣೆ ಮಾಡಲಾಗಿದೆ. ಗಾಂಜಾ, ಇಸ್ಪೀಟ್ ದಂಧೆಯಂತೆ ವೇಶ್ಯಾವಾಟಿಕೆಯೂ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಮತ್ತೊಮ್ಮೆ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಸುದರ್ಶನ್ 84 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಸದರ್ಶನ್ ಅವರ ಸತತ ಐದನೇ ಅರ್ಧಶತಕವಾಗಿದ್ದು, ಈ ಮೂಲಕ ಅವರು ಐಪಿಎಲ್‌ನಲ್ಲಿ ಏಳು ವರ್ಷಗಳ ನಂತರ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಸುದರ್ಶನ್ಗೂ ಮೊದಲು, 2012 ರ ಐಪಿಎಲ್‌ನಲ್ಲಿ ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದರು. ಅವರ ನಂತರ, ಜೋಸ್ ಬಟ್ಲರ್ 2018 ರಲ್ಲಿ ಈ ಸಾಧನೆ ಮಾಡಿದರೆ, ಡೇವಿಡ್ ವಾರ್ನರ್ 2019 ರಲ್ಲಿ ಈ ಸಾಧನೆ ಮಾಡಿದ್ದರು. ಸಾಯಿ ಸುದರ್ಶನ್ ಈ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸತತ ಐದು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಐಪಿಎಲ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸುದರ್ಶನ್, 2024 ರ ಐಪಿಎಲ್‌ನಲ್ಲಿ 527 ರನ್ ಬಾರಿಸಿದರೆ, ಐಪಿಎಲ್ 2025 ರಲ್ಲಿ 759 ರನ್ ಕಲೆಹಾಕಿದ್ದರು. ಈಗ ಈ ಆವೃತ್ತಿಯಲ್ಲಿ ಆಡಿರುವ 14 ಪಂದ್ಯಗಳಲ್ಲಿ 638 ರನ್ ಗಳಿಸಿದ್ದಾರೆ. ಸುದರ್ಶನ್ ಈ ಸೀಸನ್ನಲ್ಲಿ ಒಂದು ಶತಕ ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಮೇ 21): ಕರ್ನಾಟಕದಲ್ಲಿ (karnataka) ಮತ್ತೆ ಉಪಚುನಾವಣೆ ಮತ್ತು ಜಿಬಿಎ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲೇ ರಾಜ್ಯ ನಾಯಕತ್ವ ವಿಚಾರದಲ್ಲಿ ಸ್ಪಷ್ಟತೆ ನೀಡಲು ಬಿಜೆಪಿ (BJP) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಗೆ ಅಂತಿಮ ಪ್ರಕ್ರಿಯೆ ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಆಯ್ದ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮೊದಲು ಸಭೆ ನಡೆಸಿದ ಶಿವಪ್ರಕಾಶ್ ಮತ್ತು ಪಾಂಡಾ ನಂತರ ಆಯ್ದ ಮುಖಂಡರ ಜೊತೆ ಪ್ರತ್ಯೇಕ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇನ್ನು ರಾಜ್ಯ ಬಿಜೆಪಿಯಲ್ಲಿ ಮಹತ್ವ ಬದಲಾವಣೆಯಾಗುವ ಬಗ್ಗೆ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಸುಳಿವು ಕೊಟ್ಟಿದ್ದಾರೆ.
ಮುಖ್ಯಾಂಶಗಳು
ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬೀಸಿತು ಬದಲಾವಣೆಯ ಗಾಳಿ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಘೋಷಣೆಯ ಪ್ರಕ್ರಿಯೆ ಚುರುಕು
ರಾಜ್ಯ ಬಿಜೆಪಿಯ ಆಯ್ದ ಪ್ರಮುಖರ ಅಭಿಪ್ರಾಯವನ್ನು ಆಲಿಸಿದ ವರಿಷ್ಠರು
ಕರ್ನಾಟಕ ಬಿಜೆಪಿಯಲ್ಲಿ ಮಹತ್ವ ಬದಲಾವಣೆ ಸುಳಿವು ಕೊಟ್ಟ ಉಸ್ತುವಾರಿ
ಸುಮಾರು 35 ಆಯ್ದ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು ಮತ್ತು ರಾಜ್ಯ ಪದಾಧಿಕಾರಿಗಳಿಗೆ ಇಂದಿನ ಸಭೆಗೆ ವರಿಷ್ಠರಿಂದಲೇ ಆಹ್ವಾನ ನೀಡಲಾಗಿತ್ತು. ಎಲ್ಲರೂ ಒಟ್ಟಾಗಿ ಹೋಗಿ ಎನ್ನುವ ಮೂಲಕ ಸಭೆಯಲ್ಲಿ ಪರೋಕ್ಷವಾಗಿ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುಂದುವರಿಕೆ ಬಗ್ಗೆ ಹೈಕಮಾಂಡ್ ನಾಯಕರ ಸುಳಿವು ನೀಡಿದ್ದಾರೆ. ಹಾಲಿ ರಾಜ್ಯಾಧ್ಯಕ್ಷರು ಮುಂದುವರಿಯಬೇಕೋ ಬೇಡವೋ, ಬದಲಾವಣೆ ಮಾಡುವುದಾದರೆ ಯಾರನ್ನು ಮಾಡಬೇಕು ಎಂದು ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಕೂಡಾ ಶೀಘ್ರ ರಾಜ್ಯಾಧ್ಯಕ್ಷರ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
ಪಕ್ಷದ ನಾಯಕರು ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ದೆಹಲಿ ನಾಯಕರು ಇಲ್ಲಿಗೆ ಬರಬೇಕಾಗಿಲ್ಲ.
ನಾನೇ ಮಾಹಿತಿ ಕೊಡಬಹುದು. ನಾನು ಅಧ್ಯಕ್ಷರ ಕಾರ್ಯಕರ್ತ ಅಲ್ಲ, ಪಕ್ಷದ ಕಾರ್ಯಕರ್ತ. ಕೆಲವೇ ದಿನಗಳಲ್ಲಿ ಅಧ್ಯಕ್ಷರ ಹೆಸರು ಘೋಷಣೆ ಮಾಡುತ್ತೇವೆ . ಹೊಸ ಟೀಂ ಬರುತ್ತದೆ. ಕೆಲಸ ಮಾಡದವರು ಬದಲಾಗುತ್ತಾರೆ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿದ್ದಾರೆ.
ಕೋರ್ ಕಮಿಟಿಯಲ್ಲಿ ಯಾರು ಇರುತ್ತಾರೆ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ.ಅಧ್ಯಕ್ಷ ಈಗ ಇರುವವರು ಅಧ್ಯಕ್ಷರು ಅಷ್ಟೇ. ಮುಂದುವರಿಕೆ, ಹೊಸಬರು ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನೌಕರರ ರೀತಿ ಯಾವುದೇ ಟೈಂ ಬಾಂಡ್ ಇರಲ್ಲ. ಈಗಿರುವ ಅಧ್ಯಕ್ಷ ಪವರ್ ಫುಲ್, ಹೊಸ ಅಧ್ಯಕ್ಷರಿಗೂ ಅಷ್ಟೇ ಪವರ್ ಇರುತ್ತದೆ. ಯಾರು ಅಧ್ಯಕ್ಷರಾಗುತ್ತಾರೋ ಅವರ ಅಧ್ಯಕ್ಷತೆಯಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ. ಮೂರು ವರ್ಷದ ಅವಧಿ ಎಂದು ಇಲ್ಲ. ಗರಿಷ್ಠ ಎರಡು ಅವಧಿಗೆ ಆಯ್ಕೆ ಮಾಡಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
ಇಂದಿನ ಅಭಿಪ್ರಾಯ ಸಂಗ್ರಹದಲ್ಲಿ ಬಹುತೇಕ ವಿಜಯೇಂದ್ರ ಪರವಾಗಿಯೇ ಸಲ್ಲಿಕೆಯಾಗಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಗೆ ವರದಿ ಸಲ್ಲಿಕೆಯಾಗಲಿದೆ. ಬಹುತೇಕ ಜೂನ್ ತಿಂಗಳಿನಲ್ಲಿ ಅಧ್ಯಕ್ಷ ಸ್ಥಾನದ ಘೋಷಣಾ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ.
ನವದೆಹಲಿ, ಮೇ 21: ಬಿಹಾರದ ಮೋತಿಹಾರಿಯಲ್ಲಿ ದಂಪತಿಯ ನಡುವಿನ ಕೌಟುಂಬಿಕ ಕಲಹವು ತಾರಕಕ್ಕೇರಿದ್ದು, ಪತಿ ತನ್ನ ಹೆಂಡತಿಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾನೆ. ಪೊಲೀಸರು ಮತ್ತು ಆ ಮಹಿಳೆಯ ತಂದೆ ಸ್ಥಳಕ್ಕೆ ಬಂದಾಗ, ಇಡೀ ಗ್ರಾಮವನ್ನೇ ದಿಗ್ಭ್ರಮೆಗೊಳಿಸುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತು. ಹೆಂಡತಿಯೊಂದಿಗಿನ ಭಿನ್ನಾಭಿಪ್ರಾಯದಿಂದ ವ್ಯಕ್ತಿ ತನ್ನ ಹೆಂಡತಿಯನ್ನು ಕಂಬಕ್ಕೆ ಕಟ್ಟಿಹಾಕಿದ್ದಾನೆ. “ಅವಳು ಓಡಿಹೋಗುತ್ತಲೇ ಇರುತ್ತಾಳೆ. ಆದ್ದರಿಂದ ನಾನು ಅವಳನ್ನು ಕಟ್ಟಿ ಹಾಕಿದೆ” ಎಂದು ಆತ ಹೇಳಿದ್ದಾನೆ. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 21: ಭಾರೀ ಗಾಳಿ ಮಳೆಯಿಂದಾಗಿ ನಗರದ ಹಲವೆಡೆ ಬೃಹತ್ ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಶಂಕರಮಠ ರಸ್ತೆಯಲ್ಲಿ ಬುಡಸಮೇತ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಮರ ಬಿಳ್ಳುವ ವೇಳೆ ರಸ್ತೆ ಬಹುತೇಕ ಖಾಲಿ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಆದರೆ ಒಂದು ಕಾರು ಮರದ ಕೆಳಗೆ ಸಿಲುಕಿ ಜಖಂಗೊಂಡಿದೆ. ಎರಡು ಭಾಗದ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸದ್ಯ ಜಿಬಿಎ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಒಂದು ಗಂಟೆಗೂ ಹೆಚ್ಚು ಕಾಲ ಬೇಕಾಗಲಿದೆ. ಇದೇ ವೇಳೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಿಟಿ ಆಸ್ಪತ್ರೆ ಬಳಿ ಫ್ಲೈಓವರ್ ಮೇಲೆ ಬೃಹತ್ ಮರ ಬಿದ್ದು ಚಲಿಸುತ್ತಿದ್ದ ಎರಡು ಕಾರುಗಳು ಜಖಂಗೊಂಡಿವೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮೆಜೆಸ್ಟಿಕ್ ಕಡೆಗೆ ಹೋಗುವ ರಸ್ತೆ ಬಂದ್ ಆಗಿದ್ದು, ರಾಜಿನಗರ ಪೊಲೀಸರು ಮತ್ತು ಜಿಬಿಎ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು, (ಮೇ 21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಂದು ಸುರಿದ ಮಳೆಯು (Bengaluru rainss) ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ದೈನಂದಿನ ಸಂಚಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಹೌದು… ಇಂದು (ಮೇ 21) ಸಂಜೆ ಭಾರೀ ಗಾಳಿ ಮಳೆಯಿಂದಾಗಿ ಬೆಂಗಳೂರು (Bengaluru) ಮೆಟ್ರೋ ರೈಲು ನಿಗಮ ವ್ಯಾಪ್ತಿಯ ಹಸಿರು ಮತ್ತು ನೇರಳೆ ಸೇರಿದಂತೆ ಎಲ್ಲಾ ಪ್ರಮುಖ ಮೆಟ್ರೋ ಮಾರ್ಗಗಳ ರೈಲು ಸೇವೆಗಳಲ್ಲಿ ವಿಳಂಬ ಉಂಟಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದ್ದು. ಈ ಬಗ್ಗೆ ಬಿಎಂಆರ್‌ಸಿಎಲ್ (BMRCL) ವಿಶೇಷ ಮನವಿ ಮಾಡಿಕೊಂಡಿದೆ.
ಮುಖ್ಯಾಂಶಗಳು
ಬೆಂಗಳೂರಿನಲ್ಲಿ ಭಾರಿ ಗಾಳಿ ಮಳೆಯಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಇಂದು ಸಂಜೆ ಸುರಿದ ಮಳೆಗೆ ಎಲ್ಲಾ ಮೆಟ್ರೋ ಮಾರ್ಗಗಳ ರೈಲು ಸಂಚಾರದಲ್ಲಿ ವ್ಯತ್ಯಯ
ಅನಾನುಕೂಲತೆಗೆ ವಿಷಾದಿಸ್ತೇವೆ ಎಂದ ಬಿಎಂಆರ್‌ಸಿಎಲ್
ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ
ಘಟನೆಗೆ ಸಂಬಂಧಿಸಿದಂತೆ ತುರ್ತು ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಭಾರೀ ಗಾಳಿ ಹಾಗೂ ಮಳೆಯಿಂದಾಗಿ ಎಲ್ಲಾ ಮೆಟ್ರೋ ಮಾರ್ಗಗಳ ಸೇವೆಯಲ್ಲಿ ವಿಳಂಬ ಉಂಟಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನಾನುಕೂಲತೆಗೆ ವಿಷಾಧಿಸುತ್ತೇವೆ. ಸುರಕ್ಷಿತವಾಗಿ ರೈಲುಗಳನ್ನು ಕಾರ್ಯಾಚರಣೆ ಮಾಡಬೇಕಿರುವುದರಿಂದ ವೇಳಾಪಟ್ಟಿಯಲ್ಲಿ ಕೊಂಚ ಏರುಪೇರಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕಾಗಿ ಕೋರಿದೆ.
🚇 ಸಾರ್ವಜನಿಕ ಮಾಹಿತಿಗಾಗಿ
ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಎಲ್ಲಾ ಮೆಟ್ರೋ ಮಾರ್ಗಗಳ ಸೇವೆಯಲ್ಲಿ ವಿಳಂಬ ಉಂಟಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಪ್ರಯಾಣಿಕರ ಸಹಕಾರವನ್ನು ಕೋರಿದೆ. ಈ ಅನಾನುಕೂಲತೆಗೆ ವಿಷಾಧಿಸುತ್ತೇವೆ. @srivasrbmrccoi1
ಇನ್ನು ಇದೇ ಮೇ 24ರಂದು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ನಮ್ಮ ಮೆಟ್ರೋ ಸೇವೆ ಇರಲಿದೆ. ಭಾನುವಾರ ಯುಪಿಎಸ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಒಂದು ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಆರಂಭಿಸಲಾಗುತ್ತಿದೆ. ಬೆಳ್ಳಿಗ್ಗೆ 7 ಗಂಟೆ ಬದಲಾಗಿ 6 ಗಂಟೆಯಿಂದಲೇ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾಗಿದೆ.
Early Commencement of Metro Services for UPSC Civil Services Preliminary Examination on 24.05.2026. / ಯು ಪಿ ಎಸ್ ಸಿಯ ಸಿವಿಲ್ ಸರ್ವೀಸ್ (ಪ್ರಾಥಮಿಕ) ಪರೀಕ್ಷೆ ಹಿನ್ನಲೆಯಲ್ಲಿ ಮೆಟ್ರೋ ಸೇವೆಗಳು ಮುಂಚಿತವಾಗಿ ಆರಂಭ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ pic.twitter.com/3cDdRxepLD
ನೇರಳೆ ಮಾರ್ಗದ ವೈಟ್ ಫೀಲ್ಡ್ ಟು ಚೆಲ್ಲಘಟ್ಟ, ಹಸಿರು ಮಾರ್ಗದ ಮಾದವಾರ ಟು ಚೆಲ್ಲಘಟ್ಟ, ಹಳದಿ ಮಾರ್ಗದ ಆರ್ ವಿ ರೋಡ್ ಟು ಬೊಮ್ಮಸಂದ್ರ ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಭಾನುವಾರ ಆರು ಗಂಟೆಯಿಂದಲೇ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ.
ಹೈದರಾಬಾದ್, ಮೇ 21: ಹೈದರಾಬಾದ್‌ನ ಕುಕತ್‌ಪಲ್ಲಿ ಪ್ರದೇಶದಲ್ಲಿ ವಿದ್ಯುತ್ ಚಾಲಿತ (EV Car) ಕಾರು ಭೀಕರ ಅಪಘಾತಕ್ಕೆ ಒಳಗಾಗಿದೆ. ವಿವೇಕಾನಂದ ನಗರದಲ್ಲಿ ನಡೆದ ಅಪಘಾತ ಭಾರೀ ಸಂಚಲನ ಮೂಡಿಸಿದೆ. ವೇಗವಾಗಿ ಬಂದ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ ಕಾರು ನಂತರ ನೇರವಾಗಿ ಟಿಫಿನ್ ಸೆಂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಹಲವಾರು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಗಿಲ್ ಈ ಐಪಿಎಲ್‌ನಲ್ಲಿ 600 ರನ್ಗಳ ಗಡಿ ದಾಟಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ 600 ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಇದು ಆರನೇ ಅರ್ಧಶತಕವಾಗಿದೆ. ಗಿಲ್, ಲಕ್ನೋ, ಕೆಕೆಆರ್, ರಾಜಸ್ಥಾನ್ ರಾಯಲ್ಸ್, ಕೆಕೆಆರ್, ದೆಹಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐವತ್ತಕ್ಕೂ ಹೆಚ್ಚು ರನ್ಗಳ ಇನ್ನಿಂಗ್ಸ್ ಆಡಿದ್ದಾರೆ.
ಐಪಿಎಲ್‌ನಲ್ಲಿ ಮೂರನೇ ಬಾರಿಗೆ 600 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗಿಲ್, ವಾರ್ನರ್ ಮತ್ತು ಗೇಲ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರ ಜೊತೆಗೆ ಗಿಲ್ ಟಿ20 ಕ್ರಿಕೆಟ್‌ನಲ್ಲಿ 6,000 ರನ್‌ಗಳನ್ನು ಪೂರೈಸಿದ್ದಾರೆ. ಗಿಲ್ ಕೇವಲ 185 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, 184 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿಯ ನಂತರದ ಸ್ಥಾನದಲ್ಲಿದ್ದಾರೆ. ಕನ್ನಡಿಗ ರಾಹುಲ್ ಕೇವಲ 166 ರನ್ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶುಭಮನ್ ಗಿಲ್ ಚೆನ್ನೈ ವಿರುದ್ಧ ಸುದರ್ಶನ್ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಇಬ್ಬರು ಆಟಗಾರರು ಶತಕದ ಪಾಲುದಾರಿಕೆಯನ್ನು ಹಂಚಿಕೊಂಡಿದ್ದು ಇದು 10 ನೇ ಬಾರಿ. ಈ ಮೂಲಕ ಗಿಲ್-ಸುದರ್ಶನ್ ಜೋಡಿ ಡಿವಿಲಿಯರ್ಸ್ ಮತ್ತು ವಿರಾಟ್ ಅವರ ದಾಖಲೆಯನ್ನು ಸರಿಗಟ್ಟಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ