All posts by nagaraj11081993

ಚೀನಾದಲ್ಲಿ ದೊಡ್ಡ ಬದಲಾವಣೆಗೆ ಕಾರಣಾಗಿದೆ ಈ ಸಿನಿಮಾ: ಇದಲ್ಲವೆ ನಿಜವಾದ ಯಶಸ್ಸು

ಚೀನಾದಲ್ಲಿ ದೊಡ್ಡ ಬದಲಾವಣೆಗೆ ಕಾರಣಾಗಿದೆ ಈ ಸಿನಿಮಾ: ಇದಲ್ಲವೆ ನಿಜವಾದ ಯಶಸ್ಸು

ಸಿನಿಮಾಗಳ ಯಶಸ್ಸನ್ನು ಬಾಕ್ಸ್ ಆಫೀಸ್​​ (Box Office) ಸಂಖ್ಯೆಯ ಮೇಲೆ ಅಳೆಯಲಾಗುತ್ತದೆ. ಸಿನಿಮಾ ಒಂದು ಬಾಕ್ಸ್ ಆಫೀಸ್​​ನಲ್ಲಿ ಗಳಿಸುವ ಹಣ ಆ ಸಿನಿಮಾದ ಯಶಸ್ಸಿನ ಮಾನದಂಡವಾಗಿದೆ. ಭಾರತದಲ್ಲಂತೂ ಈ ಬಾಕ್ಸ್ ಆಫೀಸ್ ಲೆಕ್ಕಾಚಾರ ಮಿತಿ ಮೀರಿ ಬೆಳೆದುಬಿಟ್ಟಿದೆ. ಮೊದಲೆಲ್ಲ ಸಿನಿಮಾದ ಕತೆ, ನಟನೆ ಇನ್ನಿತರೆ ಅಂಶಗಳ ಮೇಲೆ ಸಿನಿಮಾದ ಗೆಲುವು ನಿಶ್ಚಯ ಆಗುತ್ತಿತ್ತು ಆದರೆ ಈಗ ಬಾಕ್ಸ್ ಆಫೀಸ್ ಸಂಖ್ಯೆಯ ಮೇಲೆ ನಿರ್ಧಾರಿತವಾಗುತ್ತದೆ. ಆದರೆ ಇದು ನಿಜವಾದ ಯಶಸ್ಸೆ? ಖಂಡಿತ ಅಲ್ಲ. ಇತ್ತೀಚೆಗೆ ಸಿನಿಮಾ ಒಂದು ವಿಶ್ವದ ಅತಿ ದೊಡ್ಡ ದೇಶಗಳಲ್ಲಿ ಒಂದಾದ ಚೀನಾದ ಜನರ, ಸರ್ಕಾರದ ಮನಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಭಾರಿ ಬದಲಾವಣೆಗೆ ಕಾರಣವಾಗಿದೆ.

‘ಬಿಗ್ ವರ್ಲ್ಡ್’ ಹೆಸರಿನ ಚೀನಾ ಭಾಷೆಯ ಸಿನಿಮಾ 2024ರ ಡಿಸೆಂಬರ್​ನಲ್ಲಿ ಬಿಡುಗಡೆ ಆಗಿತ್ತು. ಸೆರೆಬ್ರಲ್ ಪ್ಯಾಲಸಿ ಸಮಸ್ಯೆಯಿಂದ ಬಳಲುತ್ತಿರುವ ಯುವಕನೊಬ್ಬನ ಕತೆಯನ್ನು ಸಿನಿಮಾ ಒಳಗೊಂಡಿತ್ತು. ಈ ಸಮಸ್ಯೆ ಉಳ್ಳ ವ್ಯಕ್ತಿಗಳು ಸಾಮಾನ್ಯರಂತೆಯೇ ಬುದ್ಧಿಮತ್ತೆ ಹೊಂದಿರುತ್ತಾರೆ, ಆದರೆ ಅವರಿಗೆ ತಮ್ಮ ದೇಹದ ಮೇಲೆ ಹಿಡಿತ ಇರುವುದಿಲ್ಲ, ನೆಟ್ಟಗೆ ನಡೆಯಲು ಆಗದು, ಅಲುಗಾಡುತ್ತಲೇ ಇರುತ್ತಾರೆ. ಊಟ ಮಾಡಲು ಸಹ ಕಷ್ಟವಾಗುವಂಥಹಾ ದೇಹ ಪರಿಸ್ಥಿತಿ ಇವರಿಗೆ ಇರುತ್ತದೆ. ಆದರೆ ಸಾಮಾನ್ಯ ಮನುಷ್ಯರಂತೆ ಯೋಚಿಸಬಲ್ಲರು, ಓದಬಲ್ಲರು, ಬರೆಯಬಲ್ಲರು ಆದರೆ ದೇಹ ಮಾತ್ರ ನ್ಯೂನ್ಯತೆಯಿಂದ ಕೂಡಿರುತ್ತದೆ.

ಈ ರೀತಿಯ ಸೆರಬ್ರಲ್ ಪ್ಯಾಲಸಿ ಹೊಂದಿರುವ ಯುವಕನೊಬ್ಬ ಇತರರಂತೆ ತಾನೂ ಸಾಮಾನ್ಯ ಜೀವನ ನಡೆಸುವ ಕನಸು ಕಂಡು ಅದಕ್ಕಾಗಿ ಹೋರಾಡುವ ಕತೆಯನ್ನು ‘ಬಿಗ್ ವರ್ಲ್ಡ್’ ಸಿನಿಮಾ ಒಳಗೊಂಡಿತ್ತು. ಸೆರೆಬ್ರಲ್ ಪ್ಯಾಲಸಿ ಹೊಂದಿರುವವರು ದಿನನಿತ್ಯದ ಬದುಕಿನಲ್ಲಿ ಎಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ಅದ್ಭುತವಾಗಿ ತೋರಿಸಿತ್ತು. ಸಾಮಾನ್ಯ ಜಗತ್ತು ಹೇಗೆ ಕೇವಲ ಸಾಮಾನ್ಯರಿಗಾಗಿ ಮಾತ್ರವೇ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ, ಸೆಲೆಬ್ರಲ್ ಪ್ಯಾಲಸಿ ಅಥವಾ ಇನ್ಯಾವುದೇ ಅಂಗವೈಕಲ್ಯ ಹೊಂದಿರುವವರನ್ನು ಹೇಗೆ ನಿರ್ಲಕ್ಷಿಸಲಾಗಿದೆ ಎಂಬುದನ್ನು ತೋರಿಸಲಾಗಿತ್ತು.

ಇದನ್ನೂ ಓದಿ:’ಜನ ನಾಗಯನ್‘ ಸಿನಿಮಾ: ಯಶಸ್ವಿಯಾಯ್ತು ವಿಜಯ್ ರಾಜಕೀಯ ವಿರೋಧಿಗಳ ಪ್ಲ್ಯಾನ್

ಈ ಸಿನಿಮಾ ದೊಡ್ಡ ಹಿಟ್ ಆಗಲಿಲ್ಲ ಆದರೆ ಅದೆಷ್ಟು ಪರಿಣಾಮ ಬೀರಿತೆಂದರೆ ಶಾಲಾ, ಕಾಲೇಜುಗಳು ಸೆಲೆಬ್ರಲ್ ಪ್ಯಾಲಸಿ ಹೊಂದಿರುವ ವಿದ್ಯಾರ್ಥಿಗಳನ್ನು ಸಾಮಾನ್ಯ ತರಗತಿಗೆ ಸೇರಿಸಿಕೊಳ್ಳುವಂತಾಯ್ತು. ಯಾವ ಮಟ್ಟಿಗೆ ಬದಲಾವಣೆ ಆಯ್ತೆಂದರೆ ರೆಸ್ಟೊರೆಂಟ್ ಒಂದರಲ್ಲಿ ಸೆರಬ್ರಲ್ ಪ್ಯಾಲಸಿ ಉಳ್ಳ ವ್ಯಕ್ತಿಯನ್ನು ನೌಕರಿಗೆ ಸೇರಿಸಿಕೊಳ್ಳುವ ಜೊತೆಗೆ ಅವರ ಕೆಲಸಕ್ಕೆ ಅನುಕೂಲ ಆಗುವಂತೆ ವ್ಯವಸ್ಥೆ ಸಹ ಮಾಡಿಕೊಡಲಾಯ್ತು. ಹಲವಾರು ವಿಭಾಗಗಳಲ್ಲಿ ಸೆರಬ್ರಲ್ ಪ್ಯಾಲಸಿ ಹೊಂದಿರುವವರಿಗೆ ಉದ್ಯೋಗ ನೀಡಲಾಯ್ತು. ಸ್ವತಃ ಸರ್ಕಾರವೇ ಹಲವು ಬದಲಾವಣೆಗಳನ್ನು ನಿಯಮಗಳಲ್ಲಿ ಮಾಡಿದ್ದಲ್ಲೆ, ಸಾರ್ವಜನಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯವನ್ನು ಬದಲಾವಣೆ ಮಾಡಿತು.

ಸಿನಿಮಾದ ಮತ್ತೊಂದು ಪ್ರಮುಖ ಅಂಶವನ್ನು ಹೇಳಲೇ ಬೇಕು. ಅದುವೇ ಸಿನಿಮಾದ ನಾಯಕ ಜಾಕ್​​ಸನ್ ಯೀ. ಅದೆಷ್ಟು ಅದ್ಭುತವಾಗಿ ಇವರು ಸೆರಬ್ರಲ್ ಪ್ಯಾಲಸಿ ಇರುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆಂದರೆ, ನಿಜಕ್ಕೂ ಆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೇ ಇವರೇನೋ ಎನಿಸುವಷ್ಟು ಆ ಪಾತ್ರದಲ್ಲಿ ಮುಳುಗಿ ಹೋಗಿದ್ದಾರೆ. ಸಿನಿಮಾ ಇಂಗ್ಲೀಷ್ ಸಬ್​​ಟೈಟಲ್ಸ್​​ಗಳ ಜೊತೆಗೆ ಯೂಟ್ಯೂಬ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ ಆಸಕ್ತಿ ಉಳ್ಳವರು ನೋಡಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಊಟದ ವಿಚಾರಕ್ಕೆ ಗಲಾಟೆ: ಯುವಕನ ಬಡಿದು ಕೊಂದ ಕಿರಾತಕರು; ಆರೋಪಿಗಳು ಅರೆಸ್ಟ್​​

ಆನೇಕಲ್​​, ಮಾರ್ಚ್​​ 15: ಬೆಂಗಳೂರಿನ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಮಾರ್ಚ್ 8ರಂದು ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪನಾಯಕನಹಳ್ಳಿ ನಿವಾಸಿ ತಿಲಕ್(23) ಅಲಿಯಾಸ್​​ ಗುಡ್ಡೆ ಎಂಬಾತನ ತಲೆ ಮೇಲೆ ಇಟ್ಟಿಗೆ ಹಾಕಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಕೆಂಪನಾಯಕನಹಳ್ಳಿ ವಾಸಿ ಅಜಯ್ ಕುಮಾರ್(25), ರವಿಚಂದ್ರ ನಾಯಕ್ ಅಲಿಯಾಸ್​​ ಪಾಯಿಸನ್ ರವಿ (24), ಸಂಜಯ್ ಅಲಿಯಾಸ್​​ ನಾಯಿಬಾಬಾ(26) ಮತ್ತು ಮೊಹಮ್ಮದ್ ರಜಾಕ್(24) ಎಂಬವರನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿ ಆರೋಪಿಗಳು ತಿಲಕ್​​ನ ಕೊಂದಿರೋದಾಗಿ ತಿಳಿದುಬಂದಿದೆ.

ಬನ್ನೇರುಘಟ್ಟ ಗೊಲ್ಲಹಳ್ಳಿ ಗುಟ್ಟೆ ಮೈದಾನ ಬಳಿ ಕೊಲೆ ನಡೆದಿದ್ದು, ಪ್ರಮುಖ ಆರೋಪಿ ಅಜಯ್​​ 30ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಖಾಕಿಯಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಕಾಡಿನಲ್ಲಿ ವಾಸಿಸುತ್ತಿದ್ದ ಕೃತ್ಯ ನಡೆದ ದಿನ ಊಟ ತರಲು ಈತ ತಿಲಕ್​​ಗೆ ಹೇಳಿದ್ದ. ಆದರೆ ತಿಲಕ್​​ ಪ್ರೇಯಸಿ ಭೇಟಿಗಾಗಿ ತೆರಳಿದ್ದು, ಆಕ್ರೋಶಗೊಂಡ ಅಜಯ್ ತಿಲಕ್​​ ಬರುತ್ತಿದ್ದಂತೆ ಆವಾಜ್​​ ಹಾಕಿದ್ದಾನೆ. ತನಗಿಂತ ಹುಡುಗಿ ಹೆಚ್ಚಾ ಎಂದು ಈತ ಪ್ರಶ್ನಿಸಿದ ಹಿನ್ನೆಲೆ ವಾಗ್ವಾದ ನಡೆದಿದೆ. ಹೀಗಾಗಿ ತನ್ನ ವಿರುದ್ಧವೇ ಮಾತನಾಡುತ್ತೀಯಾ ಎಂದು ರೊಚ್ಚಿಗೆದ್ದು ತಿಲಕ್​​ ಮೇಲೆ ದಾಳಿ ನಡೆಸಿರೋದು ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

BAN vs PAK: ಪಾಕ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ತಂಜಿದ್ ಹಸನ್

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ಏಕದಿನ ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಮಿರ್ಪುರದಲ್ಲಿ ನಡೆಯುತ್ತಿರುವ ಈ ಸರಣಿ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಪರ ಆರಂಭಿಕ ಆಟಗಾರ ತಂಜಿದ್ ಹಸನ್ ತಮೀಮ್ ಸ್ಮರಣೀಯ ಶತಕ ಬಾರಿಸಿದ್ದಾರೆ. ಸುಮಾರು ಎರಡೂವರೆ ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ತಂಜಿದ್ ಯಾವುದೇ ಸ್ವರೂಪದಲ್ಲಿ ಗಳಿಸಿದ ಮೊದಲ ಶತಕ ಇದಾಗಿದೆ. ತಂಜಿದ್ ಅವರ ಶತಕದ ಇನ್ನಿಂಗ್ಸ್​ನಲ್ಲಿ 13 ಬೌಂಡರಿ ಮತ್ತು ಸಿಕ್ಸರ್‌ ಕೂಡ ಸೇರಿಸಿತ್ತು.

ಸರಣಿಯ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿದ್ದ ಬಾಂಗ್ಲಾದೇಶ ತಂಡವು ಎರಡನೇ ಪಂದ್ಯವನ್ನು ಅಷ್ಟೇ ಸುಲಭವಾಗಿ ಸೋತಿತ್ತು. ಹೀಗಾಗಿ ಎಲ್ಲರ ಕಣ್ಣುಗಳು ಟ್ರೋಫಿಯನ್ನು ನಿರ್ಧರಿಸುವ ಮೂರನೇ ಪಂದ್ಯದ ಮೇಲೆ ಇದ್ದವು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಪರ ತಂಜಿದ್ ಹಸನ್ 75ನೇ ಅಂತರರಾಷ್ಟ್ರೀಯ ಪಂದ್ಯವನ್ನಾಡಿ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಶತಕ ಬಾರಿಸಿದರು.

ಕೇವಲ 98 ಎಸೆತಗಳಲ್ಲಿ ಶತಕ ಪೂರೈಸಿದ ತಂಜಿದ್, ಲಾಂಗ್-ಆನ್ ಓವರ್‌ನಲ್ಲಿ ಅದ್ಭುತ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಶತಕ ಪೂರೈಸಿದರು. 31 ಏಕದಿನ ಮತ್ತು 45 ಅಂತರರಾಷ್ಟ್ರೀಯ ಟಿ20ಪಂದ್ಯಗಳಲ್ಲಿ ಇದು ಅವರ ಮೊದಲ ಅಂತರರಾಷ್ಟ್ರೀಯ ಶತಕವಾಗಿದೆ. ಅಂತಿಮವಾಗಿ, ಅವರ ಅದ್ಭುತ ಇನ್ನಿಂಗ್ಸ್ 37 ನೇ ಓವರ್‌ನಲ್ಲಿ ಕೊನೆಗೊಂಡಿತು. ತಂಜಿದ್ 107 ಎಸೆತಗಳಲ್ಲಿ 7 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳನ್ನು ಒಳಗೊಂಡಂತೆ 107 ರನ್ ಗಳಿಸಿ ಔಟಾದರು.

Source link

ಆಸ್ಕರ್ 2026 ಸಮಾರಂಭ: ಎಲ್ಲಿ ವೀಕ್ಷಿಸಬಹುದು? ಭಾರತದಲ್ಲಿ ಟೆಲಿಕಾಸ್ಟ್ ಯಾವಾಗ?

ಸಿನಿಮಾ (Cinema) ಲೋಕದ ಅತ್ಯುನ್ನತ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವುದು ಆಸ್ಕರ್ ಅಥವಾ ಅಕಾಡೆಮಿ ಪ್ರಶಸ್ತಿ. ಈ ವರ್ಷದ ಆಸ್ಕರ್ಸ್ (Oscars 2026) ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿವುಡ್‌ನ ಲಾಸ್ ಏಂಜಲ್ಸ್​​ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ ಈ ವರ್ಣರಂಜಿತ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಭಾರತೀಯ ಸಿನಿಮಾ ಪ್ರೇಮಿಗಳಿಗೂ ಸಹ ಆಸ್ಕರ್​ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಆಸ್ಕರ್ಸ್ ಅನ್ನು ಭಾರತೀಯರು ಎಲ್ಲಿ ನೋಡಬಹುದು? ಯಾವ ಸಮಯಕ್ಕೆ ನೋಡಬಹುದು? ಮಾಹಿತಿ ಇಲ್ಲಿದೆ…

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮಾರ್ಚ್ 15ರ ಸಂಜೆ ಈ ಸಮಾರಂಭ ನಡೆಯಲಿದೆ. ಆದರೆ ಭಾರತ ಮತ್ತು ಅಮೆರಿಕದ ನಡುವಿನ ಸಮಯದ ವ್ಯತ್ಯಾಸದಿಂದಾಗಿ, ಭಾರತೀಯ ಪ್ರೇಕ್ಷಕರು ಮಾರ್ಚ್ 16ರ ಸೋಮವಾರ ಮುಂಜಾನೆ ಈ ಕಾರ್ಯಕ್ರಮವನ್ನು ವೀಕ್ಷಿಸಬೇಕಾಗುತ್ತದೆ. ಮಾರ್ಚ್ 16ರ ಸೋಮವಾರ ಮುಂಜಾನೆ ಭಾರತೀಯ ಕಾಲಮಾನ 5:30ಕ್ಕೆ ರೆಡ್ ಕಾರ್ಪೆಟ್ ಸಂಭ್ರಮ ಆರಂಭವಾಗಲಿದ್ದು, 6:30ರಿಂದ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾಗಲಿದೆ.

ಭಾರತದಲ್ಲಿ ಆಸ್ಕರ್ ಪ್ರಸಾರದ ಅಧಿಕೃತ ಹಕ್ಕನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney+ Hotstar) ಹೊಂದಿದೆ. ಹಾಟ್‌ಸ್ಟಾರ್ ಚಂದಾದಾರರು ಮೊಬೈಲ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಸ್ಟಾರ್ ನೆಟ್‌ವರ್ಕ್‌ನ ಇಂಗ್ಲಿಷ್ ಎಂಟರ್‌ಟೈನ್‌ಮೆಂಟ್ ಚಾನೆಲ್‌ಗಳಾದ ಸ್ಟಾರ್ ವರ್ಲ್ಡ್ ಅಥವಾ ಸ್ಟಾರ್ ಮೂವೀಸ್ ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:’ಜನ ನಾಗಯನ್‘ ಸಿನಿಮಾ: ಯಶಸ್ವಿಯಾಯ್ತು ವಿಜಯ್ ರಾಜಕೀಯ ವಿರೋಧಿಗಳ ಪ್ಲ್ಯಾನ್

ಈ ಬಾರಿಯ ಆಸ್ಕರ್ ವೇದಿಕೆಯನ್ನು ಜನಪ್ರಿಯ ಹಾಸ್ಯನಟ ಮತ್ತು ಟಾಕ್ ಶೋ ನಿರೂಪಕ ಕೋನನ್ ಒ’ಬ್ರಿಯಾನ್ ನಿರೂಪಣೆ ಮಾಡಲಿದ್ದಾರೆ. ಭಾರತದ ಯಾವುದೇ ಸಿನಿಮಾಗಳು ಈ ಬಾರಿ ಆಸ್ಕರ್​ಸ್ ರೇಸಿನಲ್ಲಿ ಇಲ್ಲವಾದರೂ ನಟಿ ಪ್ರಿಯಾಂಕಾ ಚೋಪ್ರಾ ಅವರು ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಿರುವುದು ವಿಶೇಷ. ಈ ವರ್ಷ ‘ಒನ್ ಬ್ಯಾಟಲ್ ಆಫ್ಟರ್ ಅನದರ್’, ‘ಸಿನ್ನರ್ಸ್’ ಇನ್ನೂ ಕೆಲವು ದೊಡ್ಡ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೀದರ್‌ನ ಅಷ್ಟೂರು ಜಾತ್ರೆ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂಕೇತ: ಜಾತ್ರೆಯ ವಿಶೇಷತೆ ತಿಳಿಯಿರಿ

ಬೀದರ್​​, ಮಾರ್ಚ್​​ 15: ಹಿಂದೂ-ಮುಸ್ಲಿಂ ಧಾರ್ಮಿಕ ಸಾಮರಸ್ಯದ ಸಂಕೇತವಾದ ಬೀದರ್​​​ ಅಷ್ಟೂರು ಜಾತ್ರೆ (Astur Jatre) ಅದ್ಧೂರಿಯಾಗಿ ನಡೆಯುತ್ತಿದೆ. ಹಿಂದೂ-ಮುಸ್ಲಿಂ ಭೇದ ಭಾವ ಮರೆತು ಶತಮಾನಗಳಿಂದ ವಿಜೃಂಭಣೆಯಿಂದ ಹಿಂದೂಗಳು ಅಲ್ಲಮಪ್ರಭು ಎಂದು ಮುಸ್ಲಿಂರು ಅಹೆಮದ್ ಶಾ ವಲಿ ಎಂದು ಪೂಜಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಜನಸಾಗರವೆ ಹರಿದು ಬರುತ್ತದೆ.

ದೇವನೂಬ್ಬ ನಾಮ ಹಲವು ಎಂಬಂತೆ ಬೀದರ್ ನಗರಕ್ಕೆ ಸಮೀಪದ ಅಷ್ಟೂರ ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕಗಳಾಗಿವೆ. ಈ ದರ್ಗಾದಲ್ಲಿ ಮುಸ್ಲಿಂಮರಿಗೆ ಅಹ್ಮದ ಶಾ ಅಲಿ ವಲಿ ಆರಾಧ್ಯ ದೈವವಾದರೆ, ಹಿಂದೂಗಳಿಗೆ ಅಲ್ಲಮಪ್ರಭುವಾಗಿ ಪೂಜೆ ಪಡೆಯುವುದು ವಿಶೇಷ. ಹಿಂದೂ-ಮುಸ್ಲಿಂ ಭಾವೈಕ್ಯದಲ್ಲಿ ನಂಬಿಕೆಯಿಟ್ಟಿದ್ದ ಅಹ್ಮದ್ ಶಾ ಅಲಿ ಬಹಮನಿ ಅವರ ಜನ್ಮದಿನದಂದು ಗೋರಿಯ ಗುಂಬಜ್‌ಗೆ ತೆರಳುವ ಸಾವಿರಾರು ಜನರು ಭಕ್ತಿ ಸಮರ್ಪಣೆ ಮಾಡುವುದು ಹಲವು ಶತಮಾನಗಳಿಂದ ನಡೆದು ಬಂದಿದೆ.

ಇದನ್ನೂ ಓದಿ: ಬೀದರ್​​ನ​ ಬಿದ್ರಿ ಕಲೆಗೂ ತಟ್ಟಿದ ಯುದ್ಧದ ಬಿಸಿ: ವಿದೇಶಿ ವಹಿವಾಟು ಕುಸಿತ; ಸಂಕಷ್ಟದಲ್ಲಿ ಕಲಾವಿದರು

ಅಷ್ಟೂರಿನ ಅಲ್ಲಮಪ್ರಭು ದೇವರು ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಂತಹ ಮಹಾನ್ ತತ್ವಗಳನ್ನು ಸಾರಿದ ಶರಣರು. ಅವರಸ್ಮರಣೆಯಲ್ಲೇ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ರಾಜ್ಯ, ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸಾವಿರಾರು ಯಾತ್ರಾರ್ಥಿಗಳು, ಪ್ರವಾಸಿಗರು ನಿತ್ಯ ಇಲ್ಲಿಗೆ ಆಗಮಿಸಿ ದರ್ಗಾಕ್ಕೆ ಹೂವಿನ ಚಾದರ್ ಸಮರ್ಪಿಸುತ್ತಾರೆ. ಅಗರಬತ್ತಿ ಹಚ್ಚಿ ಪೂಜಿಸಿ, ಪ್ರಾರ್ಥಿಸಿ ಅಹ್ಮದ್ ಶಾಹ್‌ಗೆ ನಮಿಸುತ್ತಾರೆ. ಇಲ್ಲಿ ಹಿಂದೂಗಳು ಅಲ್ಲಮಪ್ರಭು ಗುಡಿ ಎಂದೂ, ಮುಸ್ಲಿಮರು ವಲಿ ದರ್ಗಾ ಎಂದೂ ಪರಿಗಣಿಸುವ ಅಹ್ಮದ್ ಶಾಹ್‌ನ ಸಮಾಧಿ ಅಪರೂಪದ ಭಾವೈಕ್ಯತೆಯ ತಾಣಗಳಲ್ಲೊಂದು ಎಂದು ಭಕ್ತರಾದ ಬಸವರಾಜ್​​ ಅವರ ಮಾತು.

ಐದು ದಿನಗಳ ಅದ್ಧೂರಿ ಜಾತ್ರೆ

ಅಷ್ಟಕ್ಕೂ ಈ ದರ್ಗಾದ ಜಾತ್ರೆಗೆ ಚಾಲನೆ ನೀಡುವವರು ಪಕ್ಕದ ಗುಲ್ಬರ್ಗ ಜಿಲ್ಲೆಯ ಮಾಡಿಹಾಳ್ ಮತ್ತು ಆಳಂದನ ಅಲ್ಲಮಪ್ರಭು ಮಹಾರಾಜರೆಂದೇ ಗುರುತಿಸಿಕೊಂಡಿರುವ ಗುರುಗಳು. ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಜಾತ್ರೆಯ ಈ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿಯೇ ಆಗಮಿಸುವ ಗುರುಗಳು ದರ್ಗಾ ಮುಂದೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡುತ್ತಾರೆ. ಐದು ದಿನಗಳವರೆಗೆ ನಡೆಯುವ ಈ ಜಾತ್ರೆಯಲ್ಲಿ ಪಟಾಕಿ ಸಿಡಿಸುವುದು ಮತ್ತು ಅಂತಾರಾಜ್ಯ ಕುಸ್ತಿ ಸ್ಪರ್ಧೆ ಏರ್ಪಡಿಸುವುದು ತಲೆತಲಾಂತರಗಳಿಂದ ನಡೆದು ಬಂದ ಸಂಸ್ಕೃತಿ.

ದರ್ಗಾ ಮುಂದೆ ಭಕ್ತರು ಎಣ್ಣೆ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಾರೆ. ಬೀದರ್‌ನಿಂದ 3 ಕಿಮೀ ದೂರದ ಅಷ್ಟೂರು ಗ್ರಾಮ ಪ್ರವೇಶಿಸುವ ಮುನ್ನವೇ ಬಹಮನಿ ಅರಸರ ಗೋರಿಗಳ ಸಾಲು ನೋಡಲು ಸಿಗುತ್ತದೆ. ಇಲ್ಲಿ ಅಲ್ಲಾವುದ್ದಿನ್ ಗೋರಿ, ಸಿಡಿಲ ಹೊಡೆತಕ್ಕೆ ಸಿಲುಕಿ ಅರ್ಧ ಕುಸಿದಿರುವ ಹುಮಾಯೂನ್ ಸಮಾಧಿ, ಅದರ ಪಕ್ಕದಲ್ಲಿಯೇ ಇರುವ ಮಕ್ದುಮ್ ಏ ಜಹಾನ್, ನರ್ಗಿಸ್ ಬೇಗಂ, ನಿಜಾಮ್ ಶಾಹ, ಮಹಮೂದ ಶಾಹ ಬಹಮನಿ, ಮೊಹಮ್ಮದ ಶಾ ಬಹಮನಿ, ಅಹಮದ್ ಶಾ ಬಹಮನಿ, ಅಲ್ಲಾಮುದ್ದೀನ್ ಶಾಹ ಬಹಮನಿ, ವಲಿವುಲ್ಲಾ ಶಾಹ ಬಹಮನಿ, ಖಲೀಮಲ್ಲಾ ಶಾಹ ಬಹಮನಿ ಗೋರಿಗಳಿವೆ. ಅಹಮದ್ ಶಾಹ್‌ನ ಈ ಗೋರಿ ಮೇಲ್ಭಾಗದಲ್ಲಿ ಅಂದರೆ ಗುಂಬಜಿನ ಒಳಭಾಗದಲ್ಲಿ ಚಿನ್ನದ ಲೇಪನ ಹಾಗೂ ವೈವಿಧ್ಯಮಯ ಬಣ್ಣ ಬಳಸಿದ್ದು ಆಕರ್ಷಕವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ.

ಇದನ್ನೂ ಓದಿ: ಕಾರ್ಖಾನೆಗಳಿಗೆ ಸಿಹಿ ಕೊಟ್ಟ ಅನ್ನದಾತರ ಬಾಯಿಗೆ ಕಹಿ: ಸಂಕಷ್ಟಕ್ಕೆ ಸಿಲುಕಿದ ಬೀದರ್ ಕಬ್ಬು ಬೆಳೆಗಾರರು

ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ವ್ಯಾಪ್ತಿಗೆ ಈ ಗುಂಬಜ್‌ಗಳು ಬರುತ್ತಿವೆ. ಪ್ರವಾಸಿ ತಾಣಗಳನ್ನಾಗಿಸುವುದಷ್ಟೇ ಅಲ್ಲದೆ ಪುರಾತನ ಸ್ಮಾರಕ ಸ್ಥಳಗಳನ್ನು ಸಂರಕ್ಷಿಸುವಲ್ಲಿ ವಿಶೇಷ ಆಸಕ್ತಿ ವಹಿಸಲಾಗುತ್ತಿದೆ. ಹೀಗಾಗಿ ಇಲ್ಲಿನ ಜಾತ್ರೆ ಹಿಂದೂ-ಮುಸ್ಲಿಮರು ಒಂದಾಗಿ ಆಚರಣೆ ಮಾಡುವುದರಿಂದ ಈ ಜಾತ್ರೆಗೆ ವಿಶೇಷವಾದ ಸ್ಥಾನ ಬಂದಿದೆ.

ಜಿಲ್ಲಾಡಳಿತ ನಿರ್ಲಕ್ಷ ಆರೋಪ

ಪ್ರತಿವರ್ಷ ಹೂಳಿಹುಣ್ನಿಮೆಯ ನಂತರ ನಡೆಯುವ ಈ ಜಾತ್ರೆ ಹಲವಾರು ವಿಶೇಷತೆಯನ್ನೊಳಗೊಂಡಿದೆ. ಇಲ್ಲಿನ ಹಿಂದೂ-ಮುಸ್ಲಿಂ ಭಾವೈಕತೆಯೆ ಜಾತ್ರೆಗೆ ನೂರಾರು ಹಿಂದೂ-ಮುಸ್ಲಿಂ ಎರಡು ಮೂರು ದಿನವಿದ್ದು ಜಾತ್ರೆ ಮಾಡಿ ಹೊಗುತ್ತಾರೆ. ಆದರೆ ಜಿಲ್ಲಾಡಳಿತ ಮಾತ್ರ ಈ ಜಾತ್ರೆಯನ್ನ ನಿರ್ಲಕ್ಷ ಮಾಡುತ್ತಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯವನ್ನ ಕಲ್ಪಿಸಿಲ್ಲ. ಹಿಂದೂ-ಮುಸ್ಲಿಂ ಭಾವಕೈತೆಯ ಈ ಜಾತ್ರೆಗೆ ಜಿಲ್ಲಾಡಳಿತದ ಸಹಕಾರ ಬೇಕಾಗಿದೆ ಎಂದು ಇಲ್ಲಿನ ಭಕ್ತರ ಆಸೆಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

IPL 2026: ಐಪಿಎಲ್‌ನಲ್ಲಿ ವಿಶೇಷ ತ್ರಿಶತಕದ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ

Source link

ರಾಧಿಕಾ ಪಂಡಿತ್ ಬರ್ತಡೇ ಪಾರ್ಟಿ: ಇಲ್ಲಿದೆ ನೋಡಿ ವಿಡಿಯೋ

ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ (Radhika Pandit) ಅವರ ಹುಟ್ಟುಹಬ್ಬ ಇತ್ತೀಚೆಗಷ್ಟೆ ಇತ್ತು. ತಮ್ಮ ಹುಟ್ಟುಹಬ್ಬದಂದು ರಾಧಿಕಾ ಪಂಡಿತ್ ಅವರು ಅಭಿಮಾನಿಗಳನ್ನು ಭೇಟಿಯಾಗಿ ಅವರೊಟ್ಟಿಗೆ ಸೆಲ್ಫಿಗಳನ್ನು ತೆಗೆಸಿಕೊಂಡರು. ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಖುಷಿ ಪಟ್ಟರು. ಅದೇ ದಿನ ರಾಧಿಕಾ ಪಂಡಿತ್ ಅವರಿಗಾಗಿ ನಟ ಯಶ್ ಅದ್ಧೂರಿ ಬರ್ತ್​​ಡೇ ಪಾರ್ಟಿ ಸಹ ಆಯೋಜನೆ ಮಾಡಿದ್ದರು. ಪಾರ್ಟಿಯಲ್ಲಿ ಕೆವಿಎನ್ ನಿರ್ಮಾಣ ಸಂಸ್ಥೆಯ ವೆಂಕಟ್ ನಾರಾಯಣ್, ನಲಪಾಡ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಗೂ ಯಶ್ ಹಾಗೂ ರಾಧಿಕಾ ಅವರ ಸ್ನೇಹಿತರು ಕುಟುಂಬದವರು ಭಾಗವಹಿಸಿದ್ದರು. ಇಲ್ಲಿದೆ ನೋಡಿ ಪಾರ್ಟಿಯ ಕ್ಯೂಟ್ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

LPG ಸಿಲಿಂಡರ್​​ ಸಮಸ್ಯೆಗೆ ತಲ್ಲಣಿಸಿದ ಹೋಟೆಲ್​ ಉದ್ಯಮ: ಐದೇ ದಿನಗಳಲ್ಲಿ 100 ಕೋಟಿಗೂ ಅಧಿಕ ನಷ್ಟ!

ಬೆಂಗಳೂರು, ಮಾರ್ಚ್​​ 15: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗಿದೆ. ಅದರಲ್ಲೂ ಹೋಟೆಲ್​​ ಉದ್ಯಮವಂತೂ ಇದರಿಂದ ಬಹಳ ಸಮಸ್ಯೆಗೆ ಸಿಲುಕಿದ್ದು, ಹಲವೆಡೆ ರೆಸ್ಟೋರೆಂಟ್​​ಗಳು ಬಂದ್​​ ಆಗಿದ್ದರೆ, ಇನ್ನು ಕೆಲ ಹೋಟೆಲ್​​ಗಳು ಮೆನುವಿನಿಲ್ಲಿ ಭಾರಿ ಕಡಿತ ಮಾಡಿ ಗ್ರಾಹಕರಿಗೆ ಸೇವೆ ಒದಗಿಸುತ್ತಿವೆ. ಇದೆಲ್ಲದರ ಪರಿಣಾಮ ಎಂಬಂತೆ ರಾಜ್ಯ ರಾಜಧಾನಿ ಬೆಂಗಳೂರೊಂದರಲ್ಲೇ ಕಳೆದ 5 ದಿನಗಳಲ್ಲಿ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದ್ದು, ಹೋಟೆಲ್​​ಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟ್ಯಾಕ್ಸ್ ವಿನಾಯತಿಗೆ ಸರ್ಕಾರಕ್ಕೆ ಮನವಿ

ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್​ಗಳಿದ್ದು, ಈ ಪೈಕಿ 4,500 ಹೋಟೆಲ್​​ಗಳು ರಿಜಿಸ್ಟರ್​​ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹೀಗಾಗಿ ಟ್ಯಾಕ್ಸ್ ವಿನಾಯತಿ ನೀಡುವಂತೆ ಹೋಟೆಲ್ ಮಾಲೀಕರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ . ಪ್ರಾಪರ್ಟಿ ತೆರಿಗೆ ಸೇರಿ ಎಲ್ಲ ವಿಧದ ಟ್ಯಾಕ್ಸ್​​ನಿಂದ ಶೇ.20ರಿಂದ 25ರಷ್ಟು ವಿನಾಯಿತಿ ನೀಡುವಂತೆ ಕೋರಲಾಗಿದೆ. ಇನ್ನು ನಾಳೆಯಿಂದ ರಾಜ್ಯದ ಹೋಟೆಲ್​​ಗಳಿಗೆ ಶೇ.20ರಷ್ಟು LPG ಸಿಲಿಂಡರ್ ಪೂರೈಕೆಯಾಗಲಿದೆ ಎಂದು ಕೇಂದ್ರದಿಂದ ಸೂಚನೆ ಬಂದಿದ್ದು, ಇದು ನೆರವೇರಿದ್ದೇ ಆದಲ್ಲಿ ಹೋಟೆಲ್ ಉದ್ಯಮ ಕೊಂಚ ಉಸಿರಾಡಬಹುದು ಎಂದು ಆಹಾರೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಹಬ್ಬದ ಹೋಳಿಗೆ ತಯಾರಿಗೂ ಸಿಗ್ತಿಲ್ಲ LPG ಸಿಲಿಂಡರ್​​

ಇನ್ನೇನು ಯುಗಾದಿ ಹಬ್ಬ ಸಮೀಪಿಸುತ್ತಿದ್ದು ಹೋಳಿಗೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಸಿಲಿಂಡರ್​​ಗಳ ಕೊರತೆ ಇವುಗಳ ತಯಾರಿ ಮೇಲೆಯೂ ಪ್ರಭಾವ ಬೀರಿದೆ. ವೆರೈಟಿ ಹೋಳಿಗೆ ತಯಾರಿಸುವ ಬಹುತೇಕ ಹೋಳಿಗೆ ಮನೆಗಳು ಬಂದ್​​ ಆಗಿದ್ದು, ಸಂಪಿಗೆ ರಸ್ತೆಯ ಹಳ್ಳಿಮನೆ ಹೋಟೆಲ್ ಹಬ್ಬದ ಹೋಳಿಗೆ ತಯಾರಿಸಲು ಸೌದೆ ಒಲೆ ಮೊರೆ ಹೋಗಿರುವ ದೃಶ್ಯ ಕಂಡುಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

2 ಐಸಿಸಿ ಫೈನಲ್‌ಗಳಲ್ಲಿ ಭಾರತವನ್ನು ಮಣಿಸಿದ್ದ ಪಾಕ್ ಮಾಜಿ ನಾಯಕ ಕ್ರಿಕೆಟ್​ಗೆ ವಿದಾಯ

Source link

ಏಪ್ರಿಲ್ 1ರಿಂದ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಇಲ್ಲಿದೆ ಹೊಸ ದರ

ನವದೆಹಲಿ, ಮಾರ್ಚ್ 15: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2026-27ರ ಹಣಕಾಸು ವರ್ಷಕ್ಕೆ ಫಾಸ್​ಟ್ಯಾಗ್ ಶುಲ್ಕವನ್ನು (FASTag annual pass) ಪರಿಷ್ಕರಿಸಿದೆ. ಕಮರ್ಷಿಯಲ್ ಅಲ್ಲದ ವಾಹನಗಳ ವಾರ್ಷಿಕ ಫಾಸ್​ಟ್ಯಾಗ್ ಪಾಸ್ ಶುಲ್ಕದಲ್ಲಿ ಅಲ್ಪ ಏರಿಕೆ ಆಗಿದೆ. ಖಾಸಗಿ ಕಾರುಗಳು, ಜೀಪ್, ವ್ಯಾನ್​ಗಳ ಮಾಲೀಕರು ವಾರ್ಷಿಕ ಪಾಸ್​ನ ಬೆಲೆ 3,000 ರೂನಿಂದ 3,075 ರೂಗೆ ಏರಿಸಲಾಗಿದೆ. ಮುಂಬರುವ ಹಣಕಾಸು ವರ್ಷದಿಂದ, ಅಂದರೆ 2026ರ ಏಪ್ರಿಲ್ 1ರಿಂದ ಹೊಸ ದರಗಳು ಜಾರಿಗೆ ಬರುತ್ತವೆ.

2025ರಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಫಾಸ್​ಟ್ಯಾಗ್ ವಾರ್ಷಿಕ ಪಾಸ್​ನ ಸ್ಕೀಮ್ ಆರಂಭವಾಯಿತು. ನಾನ್-ಕಮರ್ಷಿಯಲ್ ಬಳಕೆಗೆ ನೊಂದಾಯಿಸಲಾದ ಖಾಸಗಿ ವಾಹನಗಳ ಮಾಲೀಕರಿಗೆ ಅನುಕೂಲವಾಗಲೆಂದು ಈ ಯೋಜನೆ ಚಾಲನೆಗೆ ತರಲಾಗಿದೆ. ಹೆದ್ದಾರಿಯಲ್ಲಿ ಹೆಚ್ಚೆಚ್ಚು ಓಡಾಡುವ ಇಂಥ ವಾಹನ ಮಾಲೀಕರಿಗೆ ವಾರ್ಷಿಕ ಪಾಸ್ ಬಹಳ ಅನುಕೂಲವಾಗುತ್ತದೆ.

ಇದನ್ನೂ ಓದಿ: Salary Hike: ಸರ್ಕಾರಿ ಉದ್ಯೋಗಿಗಳಿಗೆ ಶೇ 35ರಷ್ಟು ವೇತನ ಏರಿಕೆಯಾ?

ವಾರ್ಷಿಕ್ ಫಾಸ್​ಟ್ಯಾಗ್ ಪಾಸ್ ಪಡೆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ 200 ಬಾರಿ ಟೋಲ್ ಪ್ಲಾಜಾದಲ್ಲಿ ಪ್ರವೇಶ ಪಡೆಯಬಹುದು. ಈ ಪಾಸ್ ಒಂದು ವರ್ಷ ಸಿಂಧು ಇರುತ್ತದೆ. ಯಾವುದೇ ಟೋಲ್ ಪ್ಲಾಜಾ ಆದರೂ ಉಚಿತವಾಗಿ ಹಾದು ಹೋಗಬಹುದು. ಕೆಲ ಟೋಲ್ ಪ್ಲಾಜಾಗಳಲ್ಲಿ ದರ ಹೆಚ್ಚಿರಲಿ, ಅಥವಾ ಕಡಿಮೆ ಇರಲಿ, ಅದು ಈ ವಾರ್ಷಿಕ ಪಾಸ್​ನಲ್ಲಿ ಗಣನೆಗೆ ಬರುವುದಿಲ್ಲ. ಒಂದು ವರ್ಷದೊಳಗೆ ಹಾದು ಹೋಗುವ ಟೋಲ್ ಪ್ಲಾಜಾಗಳ ಸಂಖ್ಯೆ 200 ದಾಟುವಂತಿಲ್ಲ.

ವಾರ್ಷಿಕ ಪಾಸ್ ಪಡೆದರೆ ಪದೇ ಪದೇ ಫಾಸ್​ಟ್ಯಾಗ್ ರೀಚಾರ್ಜ್ ಮಾಡುವುದು ತಪ್ಪುತ್ತದೆ. ಈ ಪಾಸ್ ಸ್ಕೀಮ್ ಆರಂಭವಾಗಿ ಇನ್ನೂ ಒಂದು ವರ್ಷ ಆಗಿಲ್ಲ, ಆಗಲೇ ಸಾಕಷ್ಟು ಜನಬಳಕೆ ಪಡೆಯುತ್ತಿದೆ. 50 ಲಕ್ಷಕ್ಕೂ ಹೆಚ್ಚು ಜನರು ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಖರೀದಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಖಾಸಗಿ ಕಾರುಗಳ ಶೇ. 20ರಷ್ಟು ಟೋಲ್ ಟ್ರಾನ್ಸಾಕ್ಷನ್​ಗಳು ವಾರ್ಷಿಕ ಪಾಸ್ ಬಳಸಿ ಆಗುತ್ತಿವೆ ಎಂದು ದತ್ತಾಂಶಗಳು ಹೇಳುತ್ತವೆ.

ಇದನ್ನೂ ಓದಿ: ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿ, ಫ್ಲಿಪ್​ಕಾರ್ಟ್ ಅನ್ನು ಮೀರಿಸಿದ ಎಲ್​ಪಿಜಿ ಬುಕಿಂಗ್ ಆ್ಯಪ್

ವಾರ್ಷಿಕ ಫಾಸ್​ಟ್ಯಾಗ್ ಪಾಸ್ ಪಡೆಯುವುದು ಹೇಗೆ?

ರಾಜಮಾರ್ಗ್ ಯಾತ್ರಾ ಆ್ಯಪ್ ಹಾಗೂ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಅಧಿಕೃತ ವೆಬ್​ಸೈಟ್​ಗಳಲ್ಲಿ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನ್ನು ಪಡೆಯಬಹುದು. ಈ ವೆಬ್​ಸೈಟ್ ಅಥವಾ ಆ್ಯಪ್​ಗೆ ಹೋಗಿ, ಫಾಸ್​ಟ್ಯಾಗ್ ಜೋಡಿತ ಅಕೌಂಟ್, ವಾಹನ ನೊಂದಣಿ ವಿವರ ಮತ್ತು ನೊಂದಾಯಿತ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಬೇಕು. ವಾರ್ಷಿಕ ಪಾಸ್​ಗೆ ಪೇಮೆಂಟ್ ಮಾಡಿದ ಬಳಿಕ ಅದು ಆ್ಯಕ್ಟಿವೇಟ್ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link