Video: ಪುಟ್ಟಹುಡುಗಿ ಐಸ್ ಕ್ರೀಮ್ ಕೊಟ್ಟಿದ್ದಕ್ಕೆ ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ
ಆನೆಗಳ ((elephants) ಆಟ ತುಂಟಾಟ ನೋಡುವುದೇ ಚಂದ. ಎಲ್ಲರಿಗೂ ತಿಳಿದಿರುವಂತೆ ಈ ಆನೆಗಳು ಭಾವನಾತ್ಮಕ ಜೀವಿಗಳು. ಆನೆಗಳಿಗೆ ಮನುಷ್ಯರು ತುಂಬಾ ಮುದ್ದಾಗಿ ಕಾಣುತ್ತಾರೆಯಂತೆ. ಹೀಗಾಗಿ ಈ ಪ್ರಾಣಿಗಳು ಮನುಷ್ಯರೊಂದಿಗೆ ಬಹುಬೇಗನೇ ಆಪ್ತವಾಗುತ್ತವೆ. ಹೀಗಾಗಿ ಗಜರಾಜನ ಜತೆಗಿನ ಬಾಂಧವ್ಯ ಸಾರುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಹುಡುಗಿಯೊಂದಿಗೆ ಆನೆಯೊಂದು ಪ್ರೀತಿಯಿಂದ ವರ್ತಿಸಿದೆ. ಹೌದು ಐಸ್ ಕ್ರೀಮ್ ಕೊಟ್ಟ ಬಾಲಕಿಗೆ ಮುತ್ತು ನೀಡಿ ಧನ್ಯವಾದ ತಿಳಿಸಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. primepost07 ಹೆಸರಿನ ಇನ್ಸ್ಟಾಗ್ರಾಮ್…