ಸ್ಯಾಂಡಲ್‌ವುಡ್‌ನ ತಾರಾ ಜೋಡಿ ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೊ ವನ್ಯಜೀವಿಗಳ ವೀಕ್ಷಣೆಗಾಗಿ ಸಫಾರಿ ಪ್ರವಾಸ ಕೈಗೊಂಡಿದ್ದಾರೆ. ದಟ್ಟವಾದ ಕಾಡಿನ ಮಧ್ಯೆ ಜಿಪ್ಸಿ ಗಾಡಿಯಲ್ಲಿ ಪ್ರಯಾಣಿಸುತ್ತಾ, ಪ್ರಕೃತಿಯ ಸೌಂದರ್ಯವನ್ನು ಸವಿದಿದ್ದಾರೆ. ಪ್ರವಾಸದ ಉದ್ದಕ್ಕೂ ವನ್ಯಜೀವಿಗಳಾದ ಆನೆ, ಕೃಷ್ಣಮೃಗ ಮತ್ತು ಗಜಗಾಂಭೀರ್ಯದ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಿ, ಆ ಸುಂದರ ನೆನಪುಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ.
ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್ (Mohammad Amir) ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಸಿಗಲು ಮುಂದಿನ ವರ್ಷದ ಐಪಿಎಲ್ ಮಿನಿ ಹರಾಜುವರೆಗೆ ಕಾಯಲೇಬೇಕು. ಏಕೆಂದರೆ ಐಪಿಎಲ್ 2027ರ ಹರಾಜಿಗೆ ಹೆಸರು ನೊಂದಾಯಿಸಿಕೊಳ್ಳಲು ಪಾಕ್ ವೇಗಿ ತುದಿಗಾಲಲ್ಲಿ ನಿಂತಿದ್ದಾರೆ. (PC: Google)
ಆದರೆ ಅದು ಪಾಕಿಸ್ತಾನ್ ಆಟಗಾರನಾಗಿ ಅಲ್ಲ. ಬದಲಾಗಿ ಬ್ರಿಟಿಷ್ ಪ್ರಜೆಯಾಗಿ. ಅಂದರೆ ಮೊಹಮ್ಮದ್ ಅಮಿರ್ ಅಧಿಕೃತವಾಗಿ ಬ್ರಿಟಿಷ್ ಪೌರತ್ವವನ್ನು (British Citizenship) ಪಡೆದಿದ್ದಾರೆ. ಅಮಿರ್ 2016 ರಲ್ಲಿ ಬ್ರಿಟಿಷ್ ಪ್ರಜೆಯಾದ ನರ್ಜೀಸ್ ಖಾನ್ ಅವರನ್ನು ವಿವಾಹವಾಗಿದ್ದರು. (PC: Google)
ಮದುವೆಯ ನಂತರ ಅವರು 2020 ರಿಂದ ಯುನೈಟೆಡ್ ಕಿಂಗ್ಡಮ್ನಲ್ಲಿ (UK) ನೆಲೆಸಿದ್ದು, ನಿಯಮಾವಳಿಗಳ ಪ್ರಕಾರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಯುಕೆ ಪಾಸ್ಪೋರ್ಟ್ ಪಡೆದುಕೊಂಡಿದ್ದಾರೆ. ಈ ಪರೌತ್ವದೊಂದಿಗೆ ಅಮಿರ್ ಐಪಿಎಲ್ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು. (PC: Google)
ಕಳೆದ ವರ್ಷವೇ ಮೊಹಮ್ಮದ್ ಅಮಿರ್ ಇಂಡಿಯನ್ ಪ್ರೀಮಿಯರ್ ಲೀಗ್ ಆಡಬೇಕೆಂಬ ಇರಾದೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಬ್ರಿಟಿಷ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವುದನ್ನು ಸಹ ಖಚಿತಪಡಿಸಿದ್ದರು. ಇದೀಗ ಬ್ರಿಟನ್ ಪೌರತ್ವ ಸಿಕ್ಕಿರುವ ಹಿನ್ನಲೆ ಇಂಗ್ಲೆಂಡ್ ಪ್ರಜೆಯಾಗಿ ಅವರು ಐಪಿಎಲ್ ಹರಾಜಿಗಾಗಿ ಹೆಸರು ರಿಜಿಸ್ಟರ್ ಮಾಡಿಕೊಳ್ಳಬಹುದು. (PC: Google)
2008ರ ಮುಂಬೈ ದಾಳಿಯ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪಾಕಿಸ್ತಾನಿ ಆಟಗಾರರನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವುದನ್ನು ನಿಷೇಧಿಸಿದೆ. ಆದರೆ ಪ್ರಸ್ತುತ ಅಮಿರ್ ಬ್ರಿಟಿಷ್ ಪೌರತ್ವ ಹೊಂದಿರುವುದರಿಂದ, ಅವರು ಬ್ರಿಟಿಷ್ ಪ್ರಜೆಯಾಗಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಹೀಗಾಗಿ ಮುಂದಿನ ವರ್ಷ ಅಮಿರ್ ಹರಾಜಿನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ. (PC: Google)
ಆರ್ಥಿಕ ಸಂಕಷ್ಟಕ್ಕೆ ಇಲ್ಲಿದೆ ಮುಕ್ತಿImage Credit source: Pinterest
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ, ಪರ್ಸ್ (ಕೈಚೀಲ) ಅನ್ನು ಕೇವಲ ಹಣ ಇಡುವ ಸ್ಥಳವೆಂದು ಪರಿಗಣಿಸುವುದಿಲ್ಲ. ಬದಲಿಗೆ, ಇದು ಒಬ್ಬ ವ್ಯಕ್ತಿಯ ಆರ್ಥಿಕ ಶಕ್ತಿ ಮತ್ತು ಭಾಗ್ಯದೊಂದಿಗೆ ನೇರ ಸಂಬಂಧ ಹೊಂದಿದೆ. ನಂಬಿಕೆಗಳ ಪ್ರಕಾರ, ಶುದ್ಧ ಮತ್ತು ಶುಭ ವಸ್ತುಗಳಿಂದ ತುಂಬಿದ ಪರ್ಸ್ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಅನಗತ್ಯ ಅಥವಾ ನಕಾರಾತ್ಮಕ ವಸ್ತುಗಳಿಂದ ತುಂಬಿದ ಪರ್ಸ್ ತೀವ್ರ ಆರ್ಥಿಕ ತೊಂದರೆಗಳನ್ನು ತಂದೊಡ್ಡಬಹುದು.
ಜ್ಯೋತಿಷ್ಯ ತಜ್ಞರ ಪ್ರಕಾರ, ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಮತ್ತು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕಾದ ಆ 5 ಶುಭ ವಸ್ತುಗಳು ಇಲ್ಲಿವೆ:
ಅರಳಿ ಎಲೆ:
ವಾಸ್ತು ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಅರಳಿ ಮರಕ್ಕೆ ಅತ್ಯುನ್ನತ ಸ್ಥಾನವಿದೆ. ಸಾಕ್ಷಾತ್ ವಿಷ್ಣು ಅರಳಿ ಮರದಲ್ಲಿ ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಒಂದು ಸ್ವಚ್ಛ ಮತ್ತು ತಾಜಾ ಅರಳಿ ಎಲೆಯನ್ನು ತಂದು, ಗಂಗಾ ನೀರಿನಿಂದ ತೊಳೆದು ಶುದ್ಧೀಕರಿಸಿ. ಅದರ ಮೇಲೆ ಶ್ರೀಗಂಧ ಅಥವಾ ಕೇಸರಿಯಿಂದ “ಶ್ರೀ” ಎಂದು ಬರೆದು, ಅದು ಒಣಗಿದ ನಂತರ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಇದು ಸಂಪತ್ತನ್ನು ಆಕರ್ಷಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
ದೈವಿಕ ಗೋಮತಿ ಚಕ್ರ:
ಗೋಮತಿ ಚಕ್ರವನ್ನು ಅತ್ಯಂತ ಶಕ್ತಿಶಾಲಿ ಮತ್ತು ಶುಭ ತರುವ ವಸ್ತು ಎಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಗೋಮತಿ ಚಕ್ರವನ್ನು ಕೈಚೀಲದಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಅಡೆತಡೆಗಳು ತಕ್ಷಣವೇ ನಿವಾರಣೆಯಾಗುತ್ತವೆ. ಇದು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ತಂದುಕೊಡುವುದಲ್ಲದೆ, ದೀರ್ಘಕಾಲದ ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ.
ಅಕ್ಷತೆ ಅಥವಾ ಅಕ್ಕಿ ಕಾಳುಗಳು:
ಹಿಂದೂ ಧರ್ಮದಲ್ಲಿ ಅಕ್ಕಿ ಕಾಳುಗಳನ್ನು ಸಮೃದ್ಧಿ ಮತ್ತು ಸಂತೋಷದ ಸಂಕೇತವೆಂದು ಪೂಜಿಸಲಾಗುತ್ತದೆ. 11 ಅಥವಾ 21 ಅಕ್ಕಿ ಕಾಳುಗಳನ್ನು ಒಂದು ಸಣ್ಣ ಬಿಳಿ ಬಟ್ಟೆ ಅಥವಾ ಕಾಗದದಲ್ಲಿ ಅಚ್ಚುಕಟ್ಟಾಗಿ ಕಟ್ಟಿ ಪರ್ಸ್‌ನಲ್ಲಿ ಇಡಿ. ಹೀಗೆ ಮಾಡುವುದರಿಂದ ಅನಗತ್ಯ ಖರ್ಚುಗಳು ನಿಯಂತ್ರಣಕ್ಕೆ ಬಂದು, ಸಂಪತ್ತು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.
ಬಿಳಿ ಅಥವಾ ಹಳದಿ ಕವಡೆಗಳು:
ಬಿಳಿ ಅಥವಾ ಹಳದಿ ಬಣ್ಣದ ಕವಡೆಗಳನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಲಕ್ಷ್ಮಿ ದೇವಿಯ ಜೊತೆಗೆ ಈ ಕವಡೆಗಳು ಸಹ ಉದ್ಭವಿಸಿದವು. ನಿಮ್ಮ ಕೈಚೀಲದಲ್ಲಿ ಒಂದು ಅಥವಾ ಮೂರು ಬಿಳಿ/ಹಳದಿ ಕವಡೆಗಳನ್ನು ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ, ಆರ್ಥಿಕ ತೊಂದರೆಗಳು ಶೀಘ್ರದಲ್ಲೇ ದೂರವಾಗುತ್ತವೆ.
ಅನೇಕ ಜನರು ತಮ್ಮ ಪರ್ಸ್‌ನಲ್ಲಿ ತಮಗೆ ಇಷ್ಟವಾದ ದೇವರು, ಓಂ (Om) ಅಥವಾ ಸ್ವಸ್ತಿಕ ಚಿಹ್ನೆಯ ಸಣ್ಣ ಚಿತ್ರವನ್ನು ಇಟ್ಟುಕೊಳ್ಳುತ್ತಾರೆ. ವಾಸ್ತು ಪ್ರಕಾರ, ಇಂತಹ ಪವಿತ್ರ ವಸ್ತುಗಳು ನಿಮ್ಮನ್ನು ಆರ್ಥಿಕ ನಷ್ಟದಿಂದ ರಕ್ಷಿಸುತ್ತವೆ ಮತ್ತು ಯಾವುದೇ ನಕಾರಾತ್ಮಕ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ತಡೆಯುತ್ತವೆ. ಇದು ಮನಸ್ಸಿನಲ್ಲಿ ಸಕಾರಾತ್ಮಕತೆ ಮತ್ತು ಆತ್ಮವಿಶ್ವಾಸವನ್ನು ಸದಾ ಜಾಗೃತವಾಗಿಡುತ್ತದೆ.
ಪರ್ಸ್ ಬಳಸುವಾಗ ನೆನಪಿರಬೇಕಾದ ವಾಸ್ತು ನಿಯಮಗಳು:
ಕೇವಲ ಶುಭ ವಸ್ತುಗಳನ್ನು ಇಡುವುದಷ್ಟೇ ಅಲ್ಲ, ಪರ್ಸ್ ಅನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಕೂಡ ಅಷ್ಟೇ ಮುಖ್ಯ:
ಪರ್ಸ್ ಅನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು.
ಹರಿದ ಕಾಗದಗಳು, ಹಳೆಯ ಬಿಲ್‌ಗಳು, ಅನಗತ್ಯ ರಸೀದಿಗಳು ಅಥವಾ ಮುರಿದ ವಸ್ತುಗಳನ್ನು ಪರ್ಸ್‌ನಲ್ಲಿ ಇಡಬೇಡಿ. ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಹಣದ ನಷ್ಟಕ್ಕೆ ಕಾರಣವಾಗುತ್ತವೆ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ನಂಬಿಕೆಗಳು ಮತ್ತು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ನೀಡಲಾದ ಮಾಹಿತಿಯಾಗಿದೆ. ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 65ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ ಕಲೆಹಾಕಿದ್ದು 147 ರನ್ಗಳು ಮಾತ್ರ. ಈ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 18.5 ಓವರ್ಗಳಲ್ಲಿ ಚೇಸ್ ಮಾಡಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಂಡವು ಎದುರಿಸಿದ ಹಿನ್ನಡೆಗೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವಿಭಾಗದ ತಪ್ಪುಗಳೇ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ.
ಬ್ಯಾಟಿಂಗ್ ವೈಫಲ್ಯ ಮತ್ತು ಪವರ್‌ಪ್ಲೇ ಕುಸಿತ:
ಈ ಪಂದ್ಯದಲ್ಲಿ ನಮ್ಮ ತಂಡವು ನಿರೀಕ್ಷಿತ ಮೊತ್ತಕ್ಕಿಂತ ಸುಮಾರು 20 ರನ್ ಕಡಿಮೆ ಗಳಿಸಿತು. ಮೊದಲ 6 ಓವರ್ಗಳ ಅವಧಿಯಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ತಾವಾಗಲಿ ಅಥವಾ ತಿಲಕ್ ವರ್ಮಾ ಅವರಾಗಲಿ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿದು ದೊಡ್ಡ ಜೊತೆಯಾಟ ಆಡಿದ್ದರೆ, ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶ ಇರುತ್ತಿತ್ತು ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.
ಬೌಲರ್‌ಗಳಿಗೆ ಸಹಕಾರಿಯಾದ ಪಿಚ್:
ಇತ್ತೀಚಿನ ಐಪಿಎಲ್ ಪಂದ್ಯಗಳು ಸಂಪೂರ್ಣವಾಗಿ ಬ್ಯಾಟರ್‌ಗಳ ಪರವಾಗಿರುತ್ತಿದ್ದು, ಬೌಲರ್‌ಗಳು ಅಸಹಾಯಕರಾಗುತ್ತಿದ್ದಾರೆ. ಆದರೆ, ಈ ಪಂದ್ಯದ ಪಿಚ್ ಬೌಲರ್‌ಗಳಿಗೂ ಸ್ವಲ್ಪ ಸಹಾಯ ಮಾಡಿತು. ಇಂತಹ ಸವಾಲಿನ ಪಿಚ್‌ಗಳಲ್ಲಿ ಆಡುವುದನ್ನು ತಾವು ಇಷ್ಟಪಡುವುದಾಗಿ ಹಾರ್ದಿಕ್ ಹೇಳಿದ್ದಾರೆ.
ಇದು ಬ್ಯಾಟರ್‌ಗಳು ಉತ್ತಮ ಕ್ರಿಕೆಟ್ ಆಡಿ ರನ್ ಗಳಿಸುವಂತೆ ಪ್ರೇರೇಪಿಸುತ್ತದೆ ಮತ್ತು ಪಂದ್ಯದಲ್ಲಿ ಸಮಬಲದ ಪೈಪೋಟಿ ತರುತ್ತದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಕಳಪೆ ಫೀಲ್ಡಿಂಗ್:
ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿದೆ ಎಂದು ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯವನ್ನು ಗೆಲ್ಲಬೇಕಾದರೆ ಸಿಗುವ ಅವಕಾಶಗಳನ್ನೂ ಬಳಸಿಕೊಳ್ಳಬೇಕು. ಆದರೆ, ಈ ಪಂದ್ಯದಲ್ಲೂ ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟಿದ್ದರಿಂದ, ಪಂದ್ಯದುದ್ದಕ್ಕೂ ಎದುರಾಳಿ ತಂಡವನ್ನು ಬೆನ್ನಟ್ಟುವ ಪರಿಸ್ಥಿತಿ ನಿರ್ಮಾಣವಾಯಿತು. ಫೀಲ್ಡಿಂಗ್ ತಪ್ಪುಗಳಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.
ನಮ್ಮ ತಂಡ ಈ ಬಾರಿಯ ಹೆಚ್ಚಿನ ಪಂದ್ಯಗಳನ್ನು ಸೋತಿರುವುದು ಬ್ಯಾಟಿಂಗ್ ವೈಫಲ್ಯ ಮತ್ತು ಕಳಪೆ ಫೀಲ್ಡಿಂಗ್ನಿಂದ. ಅದು ಈ ಪಂದ್ಯದಲ್ಲೂ ಮುಂದುವರೆದಿದೆ. ಅಂದರೆ ನಮ್ಮ ಸೋಲಿನ ಕಾರಣ ಬದಲಾಗಿಲ್ಲ. ಇದನ್ನು ಒಪ್ಪಿಕೊಳ್ಳಲೇಬೇಕು ಎಂದು ಹಾರ್ದಿಕ್ ಪಾಂಡ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಕೊನೆಯ ಪಂದ್ಯ ಗೆಲ್ಲಲೇಬೇಕು:
ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಮ್ಯಾಚ್ನಲ್ಲಿ ಗೆದ್ದು, ಗೆಲುವಿನೊಂ ಸೀಸನ್ ಮುಗಿಸಲು ಬಯಸಿದೆ. ಮುಂದಿನ ಪಂದ್ಯವು’ESA – Education and Sports for All ಯೋಜನೆಯಡಿ ನಡೆಯಲಿದ್ದು, ಕ್ರೀಡಾಂಗಣಕ್ಕೆ ಬರಲಿರುವ 25,000 ಬಡ ಮತ್ತು ವಿಶೇಷ ಮಕ್ಕಳಿಗೆ ಉತ್ತಮ ಮನರಂಜನೆ ನೀಡುವುದು ನಮ್ಮ ಗುರಿಯಾಗಿದೆ. ಅವರ ಮುಖದಲ್ಲಿ ನಗು ಮೂಡಿಸಿ, ಅವರಿಗೊಂದು ಜೀವಮಾನದ ನೆನಪು ನೀಡುವುದಾಗಿ ಹಾರ್ದಿಕ್ ಪಾಂಡ್ಯ ಭರವಸೆ ನೀಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ತಂಡದ ಈ ಸೀಸನ್‌ನ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬುದನ್ನು ನಾಯಕ ಹಾರ್ದಿಕ್ ಪಾಂಡ್ಯ ಅವರ ಮಾತುಗಳೇ ಸ್ಪಷ್ಟಪಡಿಸುತ್ತವೆ. ಪವರ್‌ಪ್ಲೇನಲ್ಲಿನ ವಿಕೆಟ್ ಕುಸಿತ, ನಿರಂತರ ಕ್ಯಾಚ್ ಕೈಚೆಲ್ಲುವಿಕೆ ಮತ್ತು ಪ್ರಮುಖ ಸಂದರ್ಭಗಳಲ್ಲಿ ಜೊತೆಯಾಟದ ಕೊರತೆಯೇ ತಂಡದ ಹಿನ್ನಡೆಗೆ ಮುಖ್ಯ ಕಾರಣಗಳಾಗಿವೆ.
ಅಲ್ಲದೆ ಈ ಹಿಂದಿನತಪ್ಪುಗಳಿಂದ ಪಾಠ ಕಲಿತು ಮುನ್ನಡೆಯುವ ಭರವಸೆ ಹೊಂದಿರುವ ಮುಂಬೈ ತಂಡ, ತನ್ನ ಮುಂದಿನ ಇಎಸ್‌ಎ (ESA) ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ಬರಲಿರುವ ಸಾವಿರಾರು ಮಕ್ಕಳನ್ನು ರಂಜಿಸಿ, ಸೀಸನ್ ಅನ್ನು ಸಕಾರಾತ್ಮಕವಾಗಿ ಮತ್ತು ಗೆಲುವಿನೊಂದಿಗೆ ಮುಗಿಸುವ ತವಕದಲ್ಲಿದೆ.
ಬಾಲಿವುಡ್ ಖ್ಯಾತ ನಟ ಆಮಿರ್ ಖಾನ್ ಸದ್ಯ ತೀವ್ರ ಹತಾಶೆಯಲ್ಲಿದ್ದಾರೆ. ತಮ್ಮ ಸಿನಿಮಾಗಳಿಗಾಗಿ ಅಪಾರ ಶ್ರಮ ಹಾಕುವ ಆಮಿರ್ ಖಾನ್, ಚಿತ್ರಗಳು ಸೋತಾಗ ಆ ದುಃಖದಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ತಮ್ಮ ನಿರ್ಮಾಣದ, ಮಗ ಜುನೈದ್ ಖಾನ್ ನಟನೆಯ ‘ಏಕ್ ದಿನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿರುವುದು ಆಮಿರ್ ಖಾನ್ ಅವರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಈ ಚಿತ್ರದ ಬಗ್ಗೆ ಆಮಿರ್ ಖಾನ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಮಗನ ಸಿನಿಮಾದ ಕಥೆ ಇಷ್ಟವಾಗಿ ತಾವೇ ಸ್ವತಃ ಭಾವನಾತ್ಮಕ ನಿರ್ಧಾರ ಕೈಗೊಂಡು ಚಿತ್ರವನ್ನು ನಿರ್ಮಿಸಿದ್ದರು. ಆದರೆ ಸಿನಿಮಾ ಅಂದುಕೊಂಡಂತೆ ಯಶಸ್ಸು ಕಾಣಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮಿರ್, ಸಿನಿಮಾ ಸೋತಾಗ ತಾವು 2-3 ತಿಂಗಳುಗಳ ಕಾಲ ತೀವ್ರ ಬೇಸರ ಅಥವಾ ಖಿನ್ನತೆಯ ಸ್ಥಿತಿಗೆ ಜಾರುವುದಾಗಿ ಹೇಳಿಕೊಂಡಿದ್ದಾರೆ.
‘ನನ್ನ ಸಿನಿಮಾ ಸೋತಾಗ ಹೃದಯ ಒಡೆದಂತಾಗುತ್ತದೆ. ಚಿತ್ರ ಎಂಬುದು ನಮಗೆ ಸ್ವಂತ ಮಗುವಿನಂತೆ. ಅದು ವಿಫಲವಾದಾಗ ಅಥವಾ ಪ್ರೇಕ್ಷಕರಿಂದ ತಿರಸ್ಕೃತಗೊಂಡಾಗ ಅತಿಯಾದ ನೋವಾಗುತ್ತದೆ. ಆ ಸೋಲಿನ ದುಃಖವನ್ನು ಅನುಭವಿಸುವುದು ಕಷ್ಟ. ಅದು ಮಗುವನ್ನು ಕಳೆದುಕೊಂಡಷ್ಟೇ ನೋವು ನೀಡುತ್ತದೆ. ಅದನ್ನು ಸಂಪೂರ್ಣವಾಗಿ ಅತ್ತು ಹೊರಹಾಕಿದಾಗ ಮಾತ್ರ ನಮಗೆ ಮುಂದಿನ ಕೆಲಸದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ’ ಎಂದು ಆಮಿರ್ ಖಾನ್ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಇತ್ತ ಮಗ ಜುನೈದ್ ಖಾನ್ ಕೂಡ ತಂದೆಯ ಸ್ಥಿತಿಯ ಬಗ್ಗೆ ಮಾತನಾಡಿದ್ದು, ‘ಇಷ್ಟೆಲ್ಲಾ ವರ್ಷಗಳ ಅನುಭವದ ನಂತರವೂ ತಂದೆಗೆ ಸಿನಿಮಾದ ಸೋಲುಗಳು ಇಂದಿಗೂ ತುಂಬಾ ಕಾಡುತ್ತವೆ. ‘ಏಕ್ ದಿನ್’ ಚಿತ್ರದ ಕಥೆ ಕೇಳಿ ಭಾವುಕರಾಗಿದ್ದ ಅವರು, ನನಗಾಗಿ ತಾವೇ ನಿರ್ಮಾಣ ಮಾಡುವುದಾಗಿ ಹಠ ಹಿಡಿದಿದ್ದರು. ಆದರೆ ಸಿನಿಮಾ ಸೋತಿದೆ’ ಎಂದಿದ್ದಾರೆ. ಈ ಸೋಲಿನ ನಡುವೆಯೂ ಆಮಿರ್ ಖಾನ್ ಮುಂದಿನ ದಿನಗಳಲ್ಲಿ ಮತ್ತೆ ಯಶಸ್ಸು ಕಾಣುವ ಭರವಸೆಯಲ್ಲಿದ್ದಾರೆ. ಸದ್ಯ ಅವರು ನಟನೆಗಿಂತ ಸಿನಿಮಾ ಬಗ್ಗೆ ಗಮನ ಹರಿಸುತ್ತಿದ್ದಾರೆ.
ರಾಯಚೂರು, ಮೇ.21: ವಕ್ಫ್ ಬೋರ್ಡ್ ಅನುದಾನ ದುರ್ಬಳಕೆ ಬಗ್ಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂಬ ದ್ವೇಷಕ್ಕೆ ದೂರುದಾರ ಹಾಗೂ ಆತನ ಕಡೆಯವರ ಮೇಲೆ ಸುಮಾರು 30 ಜನ ಕಿರಾತಕರು ಸಿನಿಮೀಯ ಶೈಲಿಯಲ್ಲಿ ಚಾಕು, ಭರ್ಜಿ ಹಾಗೂ ಕಲ್ಲುಗಳಿಂದ ಭೀಕರ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ರಾಯಚೂರು ನಗರದ ತಹಶಿಲ್ದಾರ್ ಕಚೇರಿ ಬಳಿಯೇ ನಡೆದಿದೆ.
ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಮಸೀದಿ, ಖಬರಸ್ತಾನ ಹಾಗೂ ಈದ್ಗಾ ಮೈದಾನದ ಅಭಿವೃದ್ಧಿಗಾಗಿ 2017-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಬ್ ಹಾಗೂ ವಕ್ಫ್ ಮಂಡಳಿಯಿಂದ ಒಟ್ಟು 26 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯಲ್ಲಿ ಭಾರಿ ಅನುದಾನ ದುರ್ಬಳಕೆಯಾಗಿದೆ ಎಂದು ಆರೋಪಿಸಿ ತಲಮಾರಿ ಗ್ರಾಮದ ಸನಾವುಲ್ಲಾ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇತ್ತೀಚೆಗಷ್ಟೇ ಲೋಕಾಯುಕ್ತ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿತ್ತು.
ತನಿಖೆ ನಡೆಸಿದ ಬೆನ್ನಲೇ, ಲೋಕಾಯುಕ್ತ ತನಿಖೆಯಿಂದ ತೀವ್ರ ಆಕ್ರೋಶಗೊಂಡಿದ್ದ ಎದುರಾಳಿಗಳು, ಪ್ರಕರಣವನ್ನು ಕಾಂಪ್ರಮೈಸ್ (ರಾಜಿ) ಮಾಡಿಕೊಳ್ಳುವ ನೆಪದಲ್ಲಿ ದೂರುದಾರ ಸನಾವುಲ್ಲಾನನ್ನು ರಾಯಚೂರಿನ ತಹಶಿಲ್ದಾರ್ ಕಚೇರಿ ಬಳಿ ಕರೆಸಿಕೊಂಡಿದ್ದಾರೆ. ಮಾತುಕತೆ ನಡೆಸುವಾಗಲೇ ಏಕಾಏಕಿ ಸಂಚು ರೂಪಿಸಿ ಬಂದಿದ್ದ ಸುಮಾರು 30 ಜನರ ಗುಂಪು ಚಾಕು, ಭರ್ಜಿ ಹಾಗೂ ಮಾರಕಾಸ್ತ್ರಗಳಿಂದ ಸನಾವುಲ್ಲಾ ಮತ್ತು ಆತನ ಸ್ನೇಹಿತರ ಮೇಲೆ ಮನಸ್ಸೋಇಚ್ಛೆ ದಾಳಿ ಮಾಡಿದ್ದಾರೆ. ನಡುರಸ್ತೆಯಲ್ಲೇ ನಡೆದ ಈ ರಕ್ತಪಾತದಿಂದಾಗಿ ಸನಾವುಲ್ಲಾ ಮೈತುಂಬಾ ಗಂಭೀರ ಗಾಯಗಳಾಗಿದ್ದು, ಬರೋಬ್ಬರಿ 24 ಸ್ಟಿಚ್‌ಗಳನ್ನು (ಹೊಲಿಗೆ) ಹಾಕಿದ್ದಾರೆ.
ಪ್ರಸ್ತುತ ಗಾಯಾಳು ಸನಾವುಲ್ಲಾಗೆ ರಾಯಚೂರಿನ ಓಪೆಕ್ (OPEC) ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಅಶುಪಟೇಲ್, ನಿಜಾಮ್ ಪಟೇಲ್, ಇರ್ಫಾನ್ ಸೇರಿದಂತೆ 15ಕ್ಕೂ ಹೆಚ್ಚು ಜನರ ವಿರುದ್ಧ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಇತ್ತ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಕಡೆಯವರೂ ಸಹ ಗಾಯಾಳು ಸನಾವುಲ್ಲಾ ಮತ್ತು ಆತನ ಕಡೆಯವರ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹಿಂದೂ ಸಂಪ್ರದಾಯಗಳಲ್ಲಿ ತೆಂಗಿನಕಾಯಿಗೆ ಅತ್ಯುನ್ನತ ಸ್ಥಾನವಿದೆ. ಇದನ್ನು ಶುದ್ಧತೆ, ಸಂಪೂರ್ಣತೆ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವಾಲಯಗಳಲ್ಲಿ ಅಥವಾ ಮನೆಯ ಪೂಜೆಗಳ ಸಮಯದಲ್ಲಿ ತೆಂಗಿನಕಾಯಿಯನ್ನು ಒಡೆದಾಗ, ಕೆಲವೊಮ್ಮೆ ಅದರೊಳಗೆ ಬಿಳಿ, ಸ್ಪಂಜಿನಂತಹ “ಹೂವು” ಅಥವಾ ‘ಮೊಳಕೆ’ ಕಂಡುಬರುತ್ತದೆ. ಹಲವರು ಇದನ್ನು ಕೇವಲ ಆಧ್ಯಾತ್ಮಿಕ ಸಂಕೇತವೆಂದು ಭಾವಿಸಿದರೆ, ವಿಜ್ಞಾನವು ಇದನ್ನು ನೈಸರ್ಗಿಕ ಪ್ರಕ್ರಿಯೆ ಎನ್ನುತ್ತದೆ. ಹಾಗಾದರೆ, ಇದರ ಹಿಂದಿರುವ ನಿಜವಾದ ನಂಬಿಕೆಗಳು ಮತ್ತು ಜ್ಯೋತಿಷ್ಯದ ಅರ್ಥವೇನು ಎಂಬುದನ್ನು ಇಲ್ಲಿ ತಿಳಿಯೋಣ.
ಆಧ್ಯಾತ್ಮಿಕ ನಂಬಿಕೆಗಳು ಮತ್ತು ದೈವಿಕ ಸಂಕೇತ:
ವಿದ್ವಾಂಸರು ಮತ್ತು ಪೌರಾಣಿಕ ನಂಬಿಕೆಗಳ ಪ್ರಕಾರ, ತೆಂಗಿನಕಾಯಿಯಲ್ಲಿ ಹೂವು ಕಾಣಿಸಿಕೊಳ್ಳುವುದು ಅತ್ಯಂತ ಶುಭ ಸಂಕೇತವಾಗಿದೆ. ವಿಶೇಷವಾಗಿ ದೇವಾಲಯಗಳಲ್ಲಿ ವ್ರತ ಪೂರೈಸುವ ಸಮಾರಂಭ ಅಥವಾ ವಿಶೇಷ ಪೂಜೆಯ ಸಮಯದಲ್ಲಿ ಇಂತಹ ತೆಂಗಿನಕಾಯಿ ಕಂಡುಬಂದರೆ ಅದನ್ನು “ದೈವಿಕ ಆಶೀರ್ವಾದ” ಎಂದು ಪರಿಗಣಿಸಲಾಗುತ್ತದೆ. ಇದು ದೇವರ ಸಂಪೂರ್ಣ ಅನುಗ್ರಹ ನಮಗೆ ಲಭಿಸಿದೆ ಎಂಬುದರ ಸಂಕೇತವಾಗಿದೆ.
ನಂಬಿಕೆಗಳು ಹೀಗಿವೆ:
ತೆಂಗಿನಕಾಯಿಯಲ್ಲಿ ‘ಹೂವು’ ಕಾಣಿಸಿಕೊಂಡರೆ ಮನೆಯಲ್ಲಿ ಆರ್ಥಿಕ ಪ್ರಗತಿಯಾಗಿ, ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಇದನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಕೃಪೆಯ ಸಂಕೇತವೆಂದು ಕೆಲವರು ಭಾವಿಸುತ್ತಾರೆ. ನಾವು ಪ್ರಾರಂಭಿಸಿದ ಅಥವಾ ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತವೆ. ಇದಲ್ಲದೇ ಇದು ಇಡೀ ಕುಟುಂಬಕ್ಕೆ ಶಾಂತಿ, ನೆಮ್ಮದಿ ಮತ್ತು ಸಂತೋಷವನ್ನು ತರುತ್ತದೆ. ಅಲ್ಲದೆ, ಮಕ್ಕಳ ಪಾಲಿಗೆ ಇದು ಅದೃಷ್ಟದ ಸಂಕೇತ ಎನ್ನಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತೆಂಗಿನಕಾಯಿಯಲ್ಲಿ ಹೂವು ಬರುವುದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ಮುನ್ಸೂಚನೆಯಾಗಿದೆ. ಕೆಲವು ಪ್ರಮುಖ ಜ್ಯೋತಿಷಿಗಳ ಪ್ರಕಾರ ಇದರ ಫಲಗಳು ಹೀಗಿವೆ:
ದೀರ್ಘಕಾಲದಿಂದ ಬಾಕಿ ಉಳಿದಿರುವ ಅಥವಾ ಅರ್ಧಕ್ಕೆ ನಿಂತಿರುವ ಕಾರ್ಯಗಳು ಶೀಘ್ರದಲ್ಲೇ ಪೂರ್ಣಗೊಳ್ಳುತ್ತವೆ.
ಕೌಟುಂಬಿಕ ಕಲಹಗಳು ಮತ್ತು ಮನಸ್ತಾಪಗಳು ಕಡಿಮೆಯಾಗಿ, ಸಂಬಂಧಗಳು ಸುಧಾರಿಸುತ್ತವೆ.
ಆರ್ಥಿಕ ತೊಂದರೆಗಳು ನಿವಾರಣೆಯಾಗುವ ಸುವರ್ಣ ಕಾಲ ಪ್ರಾರಂಭವಾಗುತ್ತದೆ.
ವೃತ್ತಿ ಅಥವಾ ವ್ಯವಹಾರದಲ್ಲಿ ಹೊಸ ಮತ್ತು ಉತ್ತಮ ಅವಕಾಶಗಳು ಒದಗಿಬರುತ್ತವೆ.
ದೇವಾಲಯದ ಸಂಪ್ರದಾಯ: ಹಿಂದೂ ಸಂಪ್ರದಾಯದ ಪ್ರಕಾರ, ತೆಂಗಿನಕಾಯಿಯನ್ನು ಒಡೆಯುವುದು ಎಂದರೆ ನಮ್ಮೊಳಗಿನ ‘ಅಹಂಕಾರ’ವನ್ನು ಬಿಟ್ಟು ದೇವರಿಗೆ ಶರಣಾಗುವುದು ಎಂದರ್ಥ. ಅದರೊಳಗೆ ಹೂವು ಇರುವುದು ನಮ್ಮ “ಆಂತರಿಕ ಶುದ್ಧತೆಯ” ಸಂಕೇತವಾಗಿದೆ.
ಇದರ ಹಿಂದಿರುವ ವೈಜ್ಞಾನಿಕ ಕಾರಣವೇನು?
ಆಧ್ಯಾತ್ಮಿಕ ನಂಬಿಕೆಗಳು ಏನೇ ಇದ್ದರೂ, ವೈಜ್ಞಾನಿಕವಾಗಿ ಇದು ತೆಂಗಿನಕಾಯಿ ಮೊಳಕೆಯೊಡೆಯುವ ಪ್ರಕ್ರಿಯೆಯಲ್ಲಿ ರೂಪುಗೊಂಡ ಒಂದು ನೈಸರ್ಗಿಕ ರಚನೆಯಾಗಿದೆ. ತೆಂಗಿನಕಾಯಿ ಪಕ್ವವಾದಾಗ ಅಥವಾ ಮೊಳಕೆಯೊಡೆಯುವ ಹಂತವನ್ನು ತಲುಪಿದಾಗ, ಅದರೊಳಗಿನ ನೀರು ಸ್ಪಂಜಿನಂಥ ಭಾಗವಾಗಿ ಬದಲಾಗುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ “ಕೋಕನಟ್ ಆಪಲ್” (Coconut Apple) ಎನ್ನುತ್ತಾರೆ. ಇದು ತೆಂಗಿನ ಸಸಿ ಬೆಳೆಯಲು ಬೇಕಾದ ಆಹಾರ ಸಂಗ್ರಹಾಗಾರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಂಪೂರ್ಣವಾಗಿ ಖಾದ್ಯವಾಗಿದ್ದು, ಸಿಹಿ ರುಚಿಯನ್ನು ಹೊಂದಿರುತ್ತದೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಇದನ್ನು ಹಣ್ಣಿನಂತೆ ಇಷ್ಟಪಟ್ಟು ತಿನ್ನುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಟಾಲಿವುಡ್ ಸ್ಟಾರ್ ಜೂನಿಯರ್ ಎನ್ಟಿಆರ್ ತಮ್ಮ 43ನೇ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದ ನಟ, ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಜೂನಿಯರ್ ಎನ್ಟಿಆರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಎರಡು ಸಾಕು ಗಿಳಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಹಕ್ಕಿಗಳಿಗೆ ‘ಅಸಾಹಿ’ ಮತ್ತು ‘ಯೂಹಿ’ ಎಂದು ನಾಮಕರಣ ಮಾಡಲಾಗಿದ್ದು, ಇವುಗಳ ಹೆಸರಿನ ಹಿಂದೆ ಒಂದು ವಿಶೇಷವಾದ ಜಪಾನ್ ಕನೆಕ್ಷನ್ ಇದೆ.
‘ನನ್ನ ಮುದ್ದಿನ ಹಕ್ಕಿಗಳಾದ ಅಸಾಹಿ ಮತ್ತು ಯೂಹಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಇದು ಜಪಾನ್ ದೇಶದ ಮೇಲಿನ ನನ್ನ ಪ್ರೀತಿಯ ಸಂಕೇತ’ ಎಂದು ಎನ್ಟಿಆರ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾ ಜಪಾನ್‌ನಲ್ಲಿ ಬಿಡುಗಡೆಯಾದ ದಿನದಿಂದಲೂ ಜೂನಿಯರ್ ಎನ್ಟಿಆರ್ ಅವರಿಗೆ ಅಲ್ಲಿ ಅಪಾರ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ‘ದೇವರ’ ಚಿತ್ರದ ಪ್ರಚಾರಕ್ಕಾಗಿ ಅವರು ಜಪಾನ್‌ಗೆ ಭೇಟಿ ನೀಡಿದ್ದಾಗ ಸಿಕ್ಕ ಅಭೂತಪೂರ್ವ ಸ್ಪಂದನೆ ಅವರ ಮನ ಗೆದ್ದಿತ್ತು. ಇದೇ ಕಾರಣಕ್ಕೆ ತಮ್ಮ ಹೊಸ ಸಾಕುಪ್ರಾಣಿಗಳಿಗೆ ಜಪಾನಿ ಮೂಲದ ಹೆಸರುಗಳನ್ನು ಇಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಜೂನಿಯರ್ ಎನ್ಟಿಆರ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ‘ಡ್ರ್ಯಾಗನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಅದರಲ್ಲಿ ಎನ್ಟಿಆರ್ ಅಫ್ಘಾನಿಸ್ತಾನ ಮೂಲದ ‘ಅಸ್ಯಾಸಿನ್’ (ಹಂತಕ) ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಜನ್ಮದಿನದಂದೇ ಇತ್ತ ಸಿನಿಮಾದ ಅಪ್ಡೇಟ್ ಹಾಗೂ ಅತ್ತ ಮನೆಗೆ ಹೊಸ ಹಕ್ಕಿಗಳ ಆಗಮನವಾಗಿರುವುದು ನಟನ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಮೊಹಾಲಿ, ಮೇ 21: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಕುರಾಲಿಯಲ್ಲಿ ಇಡೀ ಸಮಾಜವೇ ಬೆಚ್ಚಿಬೀಳುವಂತಹ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಾಲ್ಕೂವರೆ ವರ್ಷದ ಹೆಣ್ಣು ಮಗುವನ್ನು ಹಗಲು ಹೊತ್ತಿನಲ್ಲೇ ನಡುರಸ್ತೆಯಲ್ಲಿ ಅಪಹರಿಸಲಾಗಿದೆ. ಈ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ. ವರದಿಗಳ ಪ್ರಕಾರ, ಮಗು ತನ್ನ ಅಜ್ಜ-ಅಜ್ಜಿಯೊಂದಿಗೆ ಬೈಕ್ನಲ್ಲಿ ಮನೆಯ ಸಮೀಪ ಬಂದಿದೆ. ಅಜ್ಜಿ ಬೈಕ್ನಿಂದ ಇಳಿದು ಮನೆಯ ಗೇಟ್ ತೆರೆಯಲು ಹೋಗಿದ್ದಾರೆ, ಆಗ ದುಷ್ಕರ್ಮಿಗಳು ಮಗುವನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಕಾರಿನೊಳಗೆ ತಳ್ಳಿದ್ದಾರೆ.
ಕಣ್ಣೆದುರೇ ಮೊಮ್ಮಗಳನ್ನು ಅಪಹರಿಸುತ್ತಿರುವುದನ್ನು ಕಂಡು ಆತಂಕಗೊಂಡ ವೃದ್ಧ ದಂಪತಿ, ಕಾರನ್ನು ತಡೆಯಲು ಅದರ ಮುಂದೆ ನಿಂತು ಶಕ್ತಿಮೀರಿ ಯತ್ನಿಸಿದ್ದಾರೆ. ಆದರೆ, ವಿಕೃತ ಮನಸ್ಸಿನ ಆ ಕಾರು ಚಾಲಕ ವೃದ್ಧ ದಂಪತಿಗಳ ಮೇಲೆಯೇ ಕಾರನ್ನು ಚಲಾಯಿಸಲು ಯತ್ನಿಸಿ, ಅಲ್ಲಿಂದ ಮಗುವಿನೊಂದಿಗೆ ಜಾಗ ಖಾಲಿ ಮಾಡಿದ್ದಾನೆ.
ಈ ಘಟನೆಯಿಂದ ಇಡೀ ವಸತಿ ಪ್ರದೇಶದಲ್ಲಿ ಭಯ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಆರಂಭಿಸಿದ್ದಾರೆ. ಅಪಹರಣಕಾರರ ಕರಾಳ ಜಾಲವನ್ನು ಪತ್ತೆಹಚ್ಚಲು ಮತ್ತು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ.
ಮಾನವನ ಬದುಕಿನಲ್ಲಿ ಸಮಸ್ಯೆಗಳು ನಿರಂತರ. ಹಳೆಯ ಸಮಸ್ಯೆಗಳು, ಹೊಸ ಸಮಸ್ಯೆಗಳು, ಮತ್ತು ಭವಿಷ್ಯದಲ್ಲಿ ಬರಬಹುದಾದ ಕಷ್ಟಗಳು ಜೀವನದ ಭಾಗವಾಗಿವೆ. ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಈ ಸಮಸ್ಯೆಗಳಿಗೆ ಭಗವಂತನೇ ಪರಿಹಾರಗಳನ್ನೂ ನೀಡಿದ್ದಾನೆ ಎನ್ನುವುದು ಆಧ್ಯಾತ್ಮಿಕ ನಂಬಿಕೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಇಂದು ತಿಳಿಸಲಾಗುವ ಪರಿಹಾರವು ಯಾವುದೇ ಖರ್ಚಿಲ್ಲದೆ, ಯಾರನ್ನೂ ಅವಲಂಬಿಸದೆ, ಎಲ್ಲರೂ ಆಚರಿಸಬಹುದಾದ ಒಂದು ಪುಟ್ಟ ತಂತ್ರವಾಗಿದೆ. ಇದು ಶಕ್ತಿವಂತ ಮತ್ತು ಸರ್ವರಿಗೂ ಅನ್ವಯಿಸುವ ಪರಿಹಾರ. ಇದಕ್ಕೆ ಯಾವುದೇ ಜಾತಿ, ಮತ, ಭೇದ, ಅರ್ಹತೆ ಅಥವಾ ನಿರ್ದಿಷ್ಟ ಪರಿಕರಗಳ ಅಗತ್ಯವಿಲ್ಲ. ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ, ವಿದ್ಯೆಯ ಸಮಸ್ಯೆ, ವಿವಾಹದ ಸಮಸ್ಯೆ, ಮನೆ ಕಟ್ಟಿಕೊಳ್ಳುವ ಸಮಸ್ಯೆ, ಪ್ರಯಾಣಕ್ಕೆ ಅಡ್ಡಿಗಳು, ಶತ್ರು ಕಾಟ ಹೀಗೆ ನೂರಾರು ಸಮಸ್ಯೆಗಳಿಗೆ ಈ ಪರಿಹಾರವು ಅನ್ವಯಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಕಷ್ಟಗಳಿಗೆ ಶೀಘ್ರವಾಗಿ ಮತ್ತು ವೆಚ್ಚರಹಿತವಾಗಿ ಪರಿಹಾರವನ್ನು ಬಯಸುತ್ತಾರೆ.
ನಮ್ಮ ಸಮಸ್ಯೆಗಳಿಗೆ ಕರ್ಮಫಲವೂ ಒಂದು ಕಾರಣವೆಂದು ಶಾಸ್ತ್ರಗಳು ಹೇಳುತ್ತವೆ. ಪೂರ್ವಜನ್ಮದ ಕರ್ಮಗಳು ನಮ್ಮನ್ನು ಈಗ ಕಾಡಿಸುತ್ತಿರಬಹುದು. ಆದರೆ, ಈ ಕರ್ಮಫಲವನ್ನೂ ನಿವಾರಿಸುವ ಶಕ್ತಿ ಈ ಪರಿಹಾರಕ್ಕಿದೆ. ಪರಶಿವನು ಬೋಳಾಶಂಕರ. ಅವರು ಲಯಕಾರಕ ಮತ್ತು ಮನಸ್ಸು ಮಾಡಿದರೆ ಏನು ಬೇಕಾದರೂ ಕೊಡಬಲ್ಲರು. ಶಿವನು ಯಾರಿಗಾಗಿಯೂ ಕಾಯುವುದಿಲ್ಲ; ಸ್ವಇಚ್ಛೆಯಿಂದ ಬೇಗ ಆಶೀರ್ವಾದವನ್ನು ನೀಡುವವನು.
ಈ ಪರಿಹಾರವು “ಓಂ ನಮಃ ಶಿವಾಯ” ಮಂತ್ರದ ಶಕ್ತಿಯ ಮೇಲೆ ಆಧಾರಿತವಾಗಿದೆ. ಕೇವಲ ಮೂರು ಸೋಮವಾರಗಳ ಕಾಲ ಈ ವಿಧಾನವನ್ನು ಅನುಸರಿಸಬೇಕು. ಪುರುಷರು, ಸ್ತ್ರೀಯರು, ವೃದ್ಧರು ಅಥವಾ ಮಕ್ಕಳು ಯಾರಾದರೂ ಇದನ್ನು ಆಚರಿಸಬಹುದು. ಯಾವುದೇ ನಿರ್ದಿಷ್ಟ ಆಹಾರ ಪದ್ಧತಿಯ ನಿಯಮಗಳಿಲ್ಲ, ಆದರೆ ಮನಸ್ಸಿನ ಶುದ್ಧತೆ ಮುಖ್ಯ.
ಮೂರು ಸೋಮವಾರಗಳಂದು ಸಂಧ್ಯಾಕಾಲದಲ್ಲಿ, ಅಂದರೆ ಸಾಯಂಕಾಲ 6 ಗಂಟೆ 5 ನಿಮಿಷದಿಂದ 8 ಗಂಟೆ 30 ನಿಮಿಷದೊಳಗೆ ಈ ಪರಿಹಾರವನ್ನು ಮಾಡಬೇಕು. ಮೊದಲು ಶುದ್ಧವಾಗಿ ಕೈ ಕಾಲು ಮುಖ ತೊಳೆದು ಅಥವಾ ಸ್ನಾನ ಮಾಡಿ. ನಂತರ, 2 ಇಂಚು ಅಳತೆಯ ಸಣ್ಣ ಶಿವಲಿಂಗವನ್ನು ತೆಗೆದುಕೊಳ್ಳಿ. ಈ ಶಿವಲಿಂಗವು ಸ್ಪಟಿಕದ್ದಾಗಿರಲಿ ಅಥವಾ ಮಣ್ಣಿನದ್ದಾಗಿರಲಿ, ಸ್ವತಃ ತಯಾರಿಸಿದ ಮಣ್ಣಿನ ಲಿಂಗವೂ ಉತ್ತಮ ಎಂದು ಹೇಳಲಾಗುತ್ತದೆ. ಪೂರ್ವಾಭಿಮುಖವಾಗಿ ಕುಳಿತು, ಶಿವಲಿಂಗಕ್ಕೆ ಭಸ್ಮಾಭಿಷೇಕ ಮಾಡಿ. ಅಂಗಡಿಗಳಲ್ಲಿ ಸಿಗುವ ವಿಭೂತಿ ಪುಡಿಯನ್ನು ತಂದು, ಅದನ್ನು ಬೆರಳಿನಿಂದ ಸ್ಪರ್ಶಿಸದೆ, ಇನ್ನೊಂದು ವಿಧಾನದಿಂದ ಲಿಂಗದ ಮೇಲೆ ಅರ್ಪಿಸಿ ಅಭಿಷೇಕ ಮಾಡಬೇಕು. ಭಸ್ಮವನ್ನು ಅರ್ಪಿಸುವಾಗ ನಿರಂತರವಾಗಿ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಬೇಕು.
ಈ ಮೂರು ಸೋಮವಾರಗಳಂದು ಮಾಂಸಾಹಾರ ಅಥವಾ ಮಧ್ಯಪಾನವನ್ನು ತ್ಯಜಿಸುವುದು ಮನಸ್ಸಿನ ಶುದ್ಧತೆಗೆ ಉತ್ತಮ. ಈ ಪರಿಹಾರವನ್ನು ನಂಬಿಕೆಯಿಂದ ಆಚರಿಸಿದಲ್ಲಿ, ಮೊದಲ ಸೋಮವಾರದ ನಂತರವೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲು ಪ್ರಾರಂಭಿಸುತ್ತದೆ. ಎರಡನೇ ಸೋಮವಾರಕ್ಕೆ ಹೆಚ್ಚಿನ ಪರಿಹಾರ ಕಂಡುಬಂದು, ಮೂರನೇ ಸೋಮವಾರದ ವೇಳೆಗೆ ಕಷ್ಟಕರವಾದ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ. ಆದರೆ, ಈ ಪರಿಹಾರವು ಧರ್ಮಬದ್ಧವಾಗಿರಬೇಕು ಎಂಬುದನ್ನು ನೆನಪಿಡಿ. ಕೇವಲ “ಓಂ ನಮಃ ಶಿವಾಯ” ಮಂತ್ರ, ವಿಭೂತಿ ಮತ್ತು 2 ಇಂಚಿನ ಶಿವಲಿಂಗ – ಇಷ್ಟೇ ಇದಕ್ಕೆ ಬೇಕಾಗಿರುವುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ