All posts by nagaraj11081993

ಪಕ್ಕದ ಮನೆಯ ವಿವಾಹಿತ ಮಹಿಳೆ ಮೇಲೆ ಯುವಕನಿಗೆ ಕಣ್ಣು, ಕದ್ದು ಮುಚ್ಚಿ ಆಕೆಯ ಒಳ ಉಡುಪುಗಳ ಕದ್ದು ಸಿಕ್ಕಿಬಿದ್ದ

ಪಕ್ಕದ ಮನೆಯ ವಿವಾಹಿತ ಮಹಿಳೆ ಮೇಲೆ ಯುವಕನಿಗೆ ಕಣ್ಣು, ಕದ್ದು ಮುಚ್ಚಿ ಆಕೆಯ ಒಳ ಉಡುಪುಗಳ ಕದ್ದು ಸಿಕ್ಕಿಬಿದ್ದ

ಉಜ್ಜಯಿನಿ, ಮಾರ್ಚ್​ 14: ಯುವಕನೊಬ್ಬನಿಗೆ ಪಕ್ಕದ ಮನೆಯ ವಿವಾಹಿತ ಮಹಿಳೆ ಮೇಲೆ ಕಣ್ಣು ಬಿದ್ದಿತ್ತು, ಆಕೆಯ ಒಳ ಉಡುಪುಗಳನ್ನು ಕದಿಯುತ್ತಿದ್ದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಈ ಘಟನೆಯು ಸಿಸಿಟವಿಯಲ್ಲಿ ಸೆರೆಯಾಗಿದ್ದು, ಈ ವಿಚಿತ್ರ ಪ್ರಕರಣವು ಪ್ರದೇಶದ ನಿವಾಸಿಗಳನ್ನು ಆಘಾತಕ್ಕೀಡು ಮಾಡಿದೆ. ಚಿಮನ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಹೊರಗೆ ಒಣಗಲು ಇಟ್ಟಿದ್ದ ಮಹಿಳೆಯ ಒಳ ಉಡುಪುಗಳು ಕಾಣೆಯಾಗುತ್ತಿವೆ ಎಂದು ಕುಟುಂಬವೊಂದು ದೂರು(Complaint) ನೀಡಿತ್ತು.

ಪೊಲೀಸರ ಪ್ರಕಾರ, ಧಂಚ ಭವನ ಪ್ರದೇಶದಲ್ಲಿ ವಾಸಿಸುವ ಕುಟುಂಬ ದೂರು ಕೊಟ್ಟಿದೆ. ತಮ್ಮ ಮನೆಯ ಹೊರಗೆ ಒಗೆದು ಹಗ್ಗದಲ್ಲಿ ನೇತುಹಾಕಿದ ಬಟ್ಟೆಗಳನ್ನು ರಾತ್ರಿ ಹೊತ್ತು ಕದಿಯುತ್ತಿದ್ದಾರೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಅನುಮಾನಗೊಂಡ ಕುಟುಂಬವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು ಮತ್ತು ನಂತರ ಅದನ್ನು ಪೊಲೀಸರಿಗೆ ಹಸ್ತಾಂತರಿಸಿತು.

ಆ ವಿಡಿಯೋದಲ್ಲಿ ತಡರಾತ್ರಿಯಲ್ಲಿ ಯುವಕನೊಬ್ಬ ಮನೆ ಬಳಿ ಸಮೀಪಿಸುತ್ತಿರುವುದನ್ನು ತೋರಿಸಲಾಗಿದೆ. ಯಾರೂ ನೋಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸುತ್ತಲೂ ನೋಡಿದ ನಂತರ, ಅವನು ಮಹಿಳೆಯ ಒಳ ಉಡುಪುಗಳನ್ನು ಬಟ್ಟೆಯ ಹಗ್ಗದಿಂದ ತೆಗೆದು ಬೇಗನೆ ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ.

ಮತ್ತಷ್ಟು ಓದಿ: ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ

ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ, ಪೊಲೀಸರು ಅದೇ ಪ್ರದೇಶದಲ್ಲಿ ವಾಸಿಸುವ ಮತ್ತು ದೂರುದಾರರ ಪಕ್ಕದ ಮನೆಯವರಾದ 25 ವರ್ಷದ ಅಂಕಿತ್ ಮಾಳವೀಯ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಆರೋಪಿಯು ವಿವಾಹಿತ ಮಹಿಳೆಯ ಮೇಲೆ ಪ್ರೀತಿ ಹೊಂದಿದ್ದ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆ ಗೀಳಿನಿಂದ ಒಳ ಉಡುಪುಗಳನ್ನು ಕದ್ದಿದ್ದಾಗಿ ಅವನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಮಯದಲ್ಲಿ ಆರೋಪಿಯು ಮಹಿಳೆಯ ಹೆಸರನ್ನು ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದು ಪೊಲೀಸರಿಗೆ ಕಂಡುಬಂದಿದೆ. ಪ್ರಸ್ತುತ ಆತನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ಘಟನೆಯು ನೆರೆಹೊರೆಯ ನಿವಾಸಿಗಳಲ್ಲಿ ಆಶ್ಚರ್ಯ ಮತ್ತು ಕಳವಳವನ್ನು ಹುಟ್ಟುಹಾಕಿದ್ದು, ವಸತಿ ಪ್ರದೇಶಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ವರದಿ ಮಾಡುವಂತೆ ಪೊಲೀಸರು ಜನರ ಬಳಿ ಮನವಿ ಮಾಡಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಗಂಭೀರ್ ನೀಡಿದ ಎಚ್ಚರಿಕೆ..!

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದ ನಂತರ, ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಆಟಗಾರರ ವೈಯಕ್ತಿಕ ಮೈಲಿಗಲ್ಲುಗಳ (ಶತಕ, ಅರ್ಧಶತಕ) ಕುರಿತು ಕಟುವಾದ ಮಾತುಗಳನ್ನಾಡಿದ್ದರು. ಭಾರತೀಯ ಕ್ರಿಕೆಟ್‌ನಲ್ಲಿ ಬಹಳ ಕಾಲದಿಂದ ನಾವು ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆಯೇ ಮಾತನಾಡುತ್ತಿದ್ದೇವೆ. ಇನ್ಮುಂದೆ ವೈಯಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿ, ಟ್ರೋಫಿ ಗೆಲುವುದನ್ನು ಆಚರಿಸಬೇಕೆಂದು ಎಂದು ಗಂಭೀರ್ ಹೇಳಿಕೆ ನೀಡಿದ್ದರು.

ಗೌತಮ್ ಗಂಭೀರ್ ಅವರ ಈ ಹೇಳಿಕೆಯು ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ನೀಡಿದ ಎಚ್ಚರಿಕೆ ಎಂದು ಇಂಗ್ಲೆಂಡ್‌ನ ಮಾಜಿ ವೇಗಿ ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜರು. ಅತಿ ಹೆಚ್ಚು ಶತಕ ಮತ್ತು ದಾಖಲೆಗಳನ್ನು ಹೊಂದಿರುವವರು ಅವರೇ. ಆದ್ದರಿಂದ ಗಂಭೀರ್ ಅವರ ಮಾತುಗಳು ನೇರವಾಗಿ ಇವರಿಬ್ಬರಿಗೇ ಅನ್ವಯಿಸುತ್ತವೆ ಎಂದು ಹಾರ್ಮಿಸನ್ ಹೇಳಿದ್ದಾರೆ.

ಇಲ್ಲಿ ಒಂದು ಗೆಲುವಿನ ಬಳಿಕ ಇಂತಹ ಹೇಳಿಕೆ ನೀಡಬೇಕಾದ ಅವಶ್ಯಕತೆ ಇರಲಿಲ್ಲ. ಅದರಲ್ಲೂ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ದಾಖಲೆಗಳಿಗಾಗಿ ಆಡಿಲ್ಲ ಎಂಬುದು ಗಂಭೀರ್​ಗೆ ಗೊತ್ತಿತ್ತು. ಇದಾಗ್ಯೂ ಅವರು ಇನ್ಮುಂದೆ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಹೇಳಿರುವುದು ಯಾರಿಗೆ? ಎಂಬ ಪ್ರಶ್ನೆ ಮೂಡುತ್ತದೆ.

ಈ ಪ್ರಶ್ನೆಗೆ ಉತ್ತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಈ ಇಬ್ಬರನ್ನು ಗುರಿಯಾಗಿಸಿ ಗಂಭೀರ್ ಪರೋಕ್ಷ ಟಾಂಗ್ ನೀಡಿದ್ದಾರೆ. ಏಕೆಂದರೆ ರೋಹಿತ್ ಹಾಗೂ ಕೊಹ್ಲಿ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಇದೀಗ ಅವರು ತಂಡದಲ್ಲಿಲ್ಲ. ಮುಂದೆ ಏಕದಿನ ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಇಬ್ಬರಿಗೆ ದಾಖಲೆಗಳನ್ನು ಬದಿಗಿರಿಸಿ ಟ್ರೋಫಿ ಗೆಲ್ಲಲು ನೋಡಬೇಕು ಎಂದು ಗೌತಮ್ ಗಂಭೀರ್ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ ಎಂದು ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮುಂದಿನ ಏಕದಿನ ಸರಣಿಗಳಿಗೆ ಈ ಇಬ್ಬರು ಹಿರಿಯ ಆಟಗಾರರು ಮರಳಿದಾಗ ಗೌತಮ್ ಗಂಭೀರ್ ಅವರ ಈ ಕಠಿಣ ನಿಲುವು ತಂಡದ ಒಳಗಿನ ವಾತಾವರಣದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂದು ಸಹ ಹಾರ್ಮಿಸನ್ ಆಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತವನ್ನು ಹೊರಹಾಕಬಹುದಿತ್ತು, ಸೌತ್ ಆಫ್ರಿಕನ್ನರು ದಡ್ಡರು..!

ಒಟ್ಟಾರೆಯಾಗಿ, ಗಂಭೀರ್ ಅವರು “ತಂಡ ಮೊದಲು, ವೈಯಕ್ತಿಕ ದಾಖಲೆ ಆಮೇಲೆ” ಎಂಬ ಹೊಸ ಸಂಸ್ಕೃತಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಇದರ ನಡುವೆ ಅವರು ನೀಡಿದ ಹೇಳಿಕೆಯು ನೇರವಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿದೆ. ಗಂಭೀರ್ ಅವರ ನಡೆಯು ಉತ್ತಮವಾಗಿದ್ದರೂ ಇಂತಹ ಹೇಳಿಕೆಗಳು ತಂಡದ ಡ್ರೆಸ್ಸಿಂಗ್ ರೂಮ್​ನ ವಾತಾವರಣದ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೀವ್ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

 

Source link

ಗಾಂಜಾ ಅಮಲಿನಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ

ಹಾಸನ, ಮಾ.14: ನಗರದ ರಸ್ತೆಗಳಲ್ಲಿ ಅಮಲಿನಲ್ಲಿ ಆಟೋ ಚಲಾಯಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪುಂಡ ಯುವಕರಿಗೆ  ಸಾರ್ವಜನಿಕರು ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಅಟ್ಟಹಾಸ ಮೆರೆದ ಯುವಕರನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಹಾಸನ ನಗರದಲ್ಲಿ ನಿನ್ನೆ ಸಂಜೆ ಆಟೋವೊಂದನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಯುವಕರ ತಂಡ, ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಆತಂಕ ಮೂಡಿಸಿದ್ದಾರೆ. ಈ ಪುಂಡರ ಹುಚ್ಚಾಟದಿಂದಾಗಿ ಮೂರು ಬೈಕ್‌ಗಳು ಜಖಂಗೊಂಡಿದ್ದು, ನಾಲ್ವರು ಸಾರ್ವಜನಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಕರು ಗಾಂಜಾ ಅಥವಾ ಇನ್ನಾವುದೇ ಮಾದಕ ದ್ರವ್ಯ ಸೇವಿಸಿ ಆಟೋ ಚಾಲನೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಅವರ ಅಸಹಜ ನಡವಳಿಕೆಯಿಂದ ಜನರು ಬೆಚ್ಚಿಬಿದ್ದಿದ್ದರು. ಯುವಕರ ಪುಂಡಾಟಿಕೆಯಿಂದ ತಾಳ್ಮೆ ಕಳೆದುಕೊಂಡ ಸಾರ್ವಜನಿಕರು, ಆಟೋವನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಮೂವರು ಯುವಕರಿಗೆ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿ (ಗೂಸಾ ನೀಡಿ) ಹಾಸನ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಹಾಸನ ನಗರ ಠಾಣೆಯ ಪೊಲೀಸರು ಪುಂಡರನ್ನು ವಶಕ್ಕೆ ಪಡೆದಿದ್ದಾರೆ. ಆಟೋವನ್ನು ಜಪ್ತಿ ಮಾಡಲಾಗಿದ್ದು, ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆಯೇ ಎಂಬ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Video: ದೆಹಲಿ ಬೀದಿಯ ಕಸದ ರಾಶಿಯಲ್ಲಿ ಅಸ್ಥಿಪಂಜರ ಪತ್ತೆ

ದೆಹಲಿ, ಮಾರ್ಚ್ 14: ದೆಹಲಿಯ ಬೀದಿಯಲ್ಲಿ ಕಸವನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು ಆತಂಕ ವ್ಯಕ್ತವಾಗಿದೆ. ನಿತ್ಯ ನೈರ್ಮಲ್ಯ ಅಭಿಯಾನ ನಡೆಸುತ್ತಿದ್ದಾಗ ವೃಕ್ಷಿತ್ ಫೌಂಡೇಶನ್ ಸದಸ್ಯರಿಗೆ ಇದು ಸಿಕ್ಕಿತ್ತು, ಕಸ ಕುಡಿಸುವಾಗ ಕಸದ ರಾಶಿಯೊಳಗೆ ಅಸ್ಥಿಪಂಜರ ಪತ್ತೆಯಾಗಿದೆ. ಅನುಮಾನಾಸ್ಪದ ಅವಶೇಷಗಳು ಕಂಡುಬಂದ ತಕ್ಷಣ ತಂಡವು ಶುಚಿಗೊಳಿಸುವ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಿತು. ಪ್ರದೇಶವನ್ನು ಸುರಕ್ಷಿತಗೊಳಿಸಲಾಯಿತು ಮತ್ತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಯಿತು.ನಂತರ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳ ಮೂಲವನ್ನು ನಿರ್ಧರಿಸಲು ಪರೀಕ್ಷೆಗಾಗಿ ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು

ಕ್ಯಾಲಿಫೋರ್ನಿಯಾ, ಮಾರ್ಚ್​ 14: ನೋಡ ನೋಡುತ್ತಿದ್ದಂತೆ 8 ರಿಂದ 10 ಮಂದಿ ದರೋಡೆಕೋರರು ಆಭರಣದಂಗಡಿಗೆ ನುಗ್ಗಿ 15 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಭಾರತೀಯ ಒಡೆತನದ ಕುಮಾರ್ ಜ್ಯುವೆಲ್ಲರ್ಸ್‌ನಿಂದ ಸುಮಾರು ಒಂದು ನಿಮಿಷದಲ್ಲಿ 1.7 ಮಿಲಿಯನ್ ಡಾಲರ್‌ಗಳ ಆಭರಣವನ್ನು ದುಷ್ಕರ್ಮಿಗಳು ಕದಿಯುವ ದೃಶ್ಯಗಳು ಇಲ್ಲಿವೆ. ಈ ಘಟನೆ 2025ರ ಜೂನ್ 18ರಂದು ನಡೆದಿದೆ. ಆಭರಣದಂಗಡಿಯ ಶೇ.75ರಷ್ಟು ಆಭರಣಗಳನ್ನು ಕಳವು ಮಾಡಲಾಗಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್; ‘ಹಯಗ್ರೀವ’ ಬಗ್ಗೆ ಚರ್ಚೆ?

ಧನ್ವೀರ್ ಅವರು ಮಾರ್ಚ್ 13ರಂದು ಜೈಲಿಗೆ ತೆರಳಿದ್ದಾರೆ. ಈ ವೇಳೆ ದರ್ಶನ್ ಅವರನ್ನು ಭೇಟಿ ಮಾಡಿ ಹೊರ ಬಂದಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಧನ್ವೀರ್​​ಗೆ ದರ್ಶನ್ ಮೇಲೆ ವಿಶೇಷ ಪ್ರೀತಿ ಇದೆ. ಸದಾ ದರ್ಶನ್​​ಗೆ ಕಾವಲಾಗಿ ನಿಂತಿದ್ದಾರೆ ಧನ್ವೀರ್. ಧನ್ವೀರ್ ಅಭಿನಯದ ‘ಹಯಗ್ರೀವ’ ಚಿತ್ರ ಕೆಲವರಿಂದ ಮೆಚ್ಚುಗೆ ಪಡೆದಿದೆ. ಈ ಬಗ್ಗೆ ದರ್ಶನ್ ಜೊತೆ ಅವರು ಚರ್ಚಿಸಿರಬಹುದು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಮ್ರಾನ್ ಜೊತೆ ನಟಿಸಿದ ಸ್ಟಾರ್ ನಟಿ ಈಗ ಕ್ರಿಕೆಟರ್​ ಪತ್ನಿ

ಬಾಲಿವುಡ್ ಹೀರೋ ಇಮ್ರಾನ್ ಹಶ್ಮಿ ಬಗ್ಗೆ ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಅವರು ರೊಮ್ಯಾನ್ಸ್ ಚಿತ್ರಗಳಿಗೆ ಮನೆಮಾತಾಗಿದ್ದರು. ಹಿಂದಿಯಲ್ಲಿ ಅನೇಕ ಹಿಟ್ ಚಿತ್ರಗಳೊಂದಿಗೆ ನಟನಾಗಿ ತಮ್ಮ ಛಾಪು ಮೂಡಿಸಿದರು. ಇಮ್ರಾನ್ ಹಶ್ಮಿಯನ್ನು ಒಂದು ಕಾಲದಲ್ಲಿ ಸೀರಿಯಲ್ ಕಿಸ್ಸರ್ ಎಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ಅವರು ತಮ್ಮ ಚಿತ್ರಗಳಿಂದ ಬಹಳ ಜನಪ್ರಿಯರಾದರು. ಈಗ ಅವರು ಕಥೆ ಇಷ್ಟವಾದರೆ ಖಳನಾಯಕನ ಪಾತ್ರಗಳನ್ನು ಮಾಡಲು ಸಿದ್ಧರಾಗಿದ್ದಾರೆ. ವಿಶೇಷವಾಗಿ ಈ ನಾಯಕನೊಂದಿಗೆ ನಟಿಸಿದ ನಂತರ ರಾತ್ರೋರಾತ್ರಿ ಸೆನ್ಸೇಷನ್ ಆಗಿರುವ ಅನೇಕ ನಾಯಕಿಯರಿದ್ದಾರೆ. ಕೆಲವರು ಇನ್ನೂ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದರೆ. ಇನ್ನು ಕೆಲವರು ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ. ಇಮ್ರಾನ್ ಹಶ್ಮಿಯೊಂದಿಗೆ ಪರದೆಯನ್ನು ಹಂಚಿಕೊಂಡ ನಟಿ, ಟೀಮ್ ಇಂಡಿಯಾದ ಬೌಲರ್‌ನ ಪತ್ನಿ. ಅವರ ಹೆಸರು ಗೀತಾ ಬಸ್ರಾ.

2006ರಲ್ಲಿ, ಅವರು ಇಮ್ರಾನ್ ಹಶ್ಮಿ ಅವರೊಂದಿಗೆ ‘ಸೋ ದಿಲ್ ದಿಯಾ ಹೈ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರದೊಂದಿಗೆ ಅವರು ರಾತ್ರೋರಾತ್ರಿ ಜನಪ್ರಿಯರಾದರು. ಗೀತಾ ಮಾರ್ಚ್ 13, 1984ರಂದು ಇಂಗ್ಲೆಂಡ್‌ನ ಪೋರ್ಟ್ಸ್‌ಮೌತ್‌ನಲ್ಲಿರುವ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಭಾರತಕ್ಕೆ ಬರುವ ಮೊದಲು, ಅವರು ಕ್ರಿಮಿನಲ್ ಮನಶ್ಶಾಸ್ತ್ರಜ್ಞರಾಗಲು ಬಯಸಿದ್ದರು. ಆದರೆ ಅವರು ಆಕಸ್ಮಿಕವಾಗಿ ಸಿನಿಮಾ ಪ್ರವೇಶಿಸಿದರು.

ಅವರು ‘ದಿ ಟ್ರೈನ್’ (2007), ‘ಜಿಲ್ಲಾ ಘಜಿಯಾಬಾದ್’ (2013), ‘ಮಿಸ್ಟರ್ ಜೋ ಬಿ. ಕಾರ್ವಾಲ್ಹೋ’ (2014) ನಂತಹ ಹಿಂದಿ ಚಿತ್ರಗಳಲ್ಲಿ ನಟಿಸಿದರು. ಆದರೆ ಅವರು ಇಮ್ರಾನ್ ಅವರ ಚಿತ್ರದಿಂದ ಜನಪ್ರಿಯರಾದರು.

ಇದನ್ನೂ ಓದಿ: ಇಮ್ರಾನ್ ಹಶ್ಮಿ ಜೊತೆಗೆ ದಿಶಾ ಪಟಾನಿ ಸಿನಿಮಾ, ತಾಳಲಿದ್ದಾರೆ ಹಾಟ್ ಅವತಾರ

ಗೀತಾ ಬಸ್ರಾ ಅವರು ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ವಿವಾಹವಾದರು. ದಿ ಟ್ರೈನ್ ಚಿತ್ರದ ವೋ ಅಜ್ನಬಿ ಹಾಡಿನಲ್ಲಿ ಗೀತಾರನ್ನು ನೋಡಿದಾಗ ಹರ್ಭಜನ್ ಇಂಪ್ರೆಸ್ ಆಗುತ್ತಿದ್ದರು. ಯುವರಾಜ್ ಸಿಂಗ್ ಮೂಲಕ ಅವರಿಗೆ ಸಂದೇಶ ಕಳುಹಿಸಿದರು. ಮೊದಲಿಗೆ, ಗೀತಾ ಅವರು ಹರ್ಭಜನ್ ಸಿಂಗ್​ರನ್ನ ನಿರ್ಲಕ್ಷಿಸಿದರು. ಆದರೆ ನಂತರ, ಅವರ ಪರಿಚಯವು ಸ್ನೇಹಕ್ಕೆ ತಿರುಗಿತು.. ಮತ್ತು ನಂತರ ಅದು ಪ್ರೀತಿಗೆ ತಿರುಗಿ ಮದುವೆಯ ಹಂತವನ್ನು ತಲುಪಿತು. ಈಗ ಗೀತಾ ಚಲನಚಿತ್ರಗಳಿಂದ ದೂರವಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತವನ್ನು ಹೊರಹಾಕಬಹುದಿತ್ತು, ಸೌತ್ ಆಫ್ರಿಕನ್ನರು ದಡ್ಡರು..!

ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಟಿ20 ವಿಶ್ವಕಪ್ ಕಳೆದು ವಾರವಾದರೂ ಅದರ ಬಗ್ಗೆ ಚರ್ಚೆಗಳು ಮಾತ್ರ ಮುಂದುವರೆದಿದೆ. ಆದರೆ ಈ ಬಾರಿ ಚರ್ಚೆಯ ನಡುವೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪ್ರಸ್ತಾಪಿಸಿರುವ ವಿಷಯವೇ ದೊಡ್ಡ ಚರ್ಚೆಯಾಗಿ ಮಾರ್ಪಟ್ಟಿದೆ. ಅದು ಸಹ ಟೀಮ್ ಇಂಡಿಯಾವನ್ನು ಟೂರ್ನಿಯಿಂದ ಹೊರಹಾಕಬಹುದಾಗಿದ್ದ ಕುತಂತ್ರವನ್ನು ಪ್ರಸ್ತಾಪಿಸಿ ಮಾತನಾಡಿ ವಾನ್ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ಪಾಡ್​ಕಾಸ್ಟ್​ವೊಂದರಲ್ಲಿ ಮಾತನಾಡಿದ ಮೈಕಲ್ ವಾನ್, ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದರೆ, ಭಾರತ ತಂಡ ಟೂರ್ನಿಯಿಂದ ಹೊರಬೀಳುತ್ತಿತ್ತು ಎಂಬ ವಾದ ಮುಂದಿಟ್ಟಿದ್ದಾರೆ.

ಸೂಪರ್ 8 ಹಂತದ ಆರಂಭದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭಾರತ ಭಾರಿ ಅಂತರದ ಸೋಲು ಕಂಡಿತ್ತು. ಇದರಿಂದ ಟೀಮ್ ಇಂಡಿಯಾದ ‘ನೆಟ್ ರನ್ ರೇಟ್’ ಕುಸಿದಿತ್ತು.

ಒಂದು ವೇಳೆ ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಉದ್ದೇಶಪೂರ್ವಕವಾಗಿ ಸೋತಿದ್ದರೆ, ಅಂಕಪಟ್ಟಿಯ ಲೆಕ್ಕಾಚಾರದಲ್ಲಿ ಭಾರತ ತಂಡಕ್ಕೆ ಸೆಮಿಫೈನಲ್ ತಲುಪಲು ಸಾಧ್ಯವಾಗುತ್ತಿರಲಿಲ್ಲ.

ಭಾರತದಂತಹ ಬಲಿಷ್ಠ ತಂಡವನ್ನು ಟೂರ್ನಿಯಿಂದ ಹೊರಹಾಕುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳದ ಸೌತ್ ಆಫ್ರಿಕಾವನ್ನು ಮೈಕಲ್ ವಾನ್ “ಮುಠ್ಠಾಳರ ತಂಡ” ಎಂದು ಕರೆದಿದ್ದಾರೆ.

ಸೌತ್ ಆಫ್ರಿಕಾ ಆ ಪಂದ್ಯವನ್ನು ಗೆದ್ದಿದ್ದರಿಂದ ಭಾರತಕ್ಕೆ ಸೆಮಿಫೈನಲ್ ತಲುಪಲು ದಾರಿ ಸುಲಭವಾಯಿತು. ಅಂತಿಮವಾಗಿ ಭಾರತ ವಿಶ್ವಕಪ್ ಗೆದ್ದರೆ, ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತು.

ವಿಶ್ವಕಪ್ ಗೆಲ್ಲಲು ಬಲಿಷ್ಠ ತಂಡಗಳನ್ನು ಮೊದಲೇ ಟೂರ್ನಿಯಿಂದ ಹೊರಹಾಕಬೇಕು ಎನ್ನುವುದು ವಾನ್ ಅವರ ವಾದ. ಒಂದು ವೇಳೆ ಸೌತ್ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದರೆ, ಟೀಮ್ ಇಂಡಿಯಾಗೆ ಕೊನೆಯ ಮ್ಯಾಚ್​ನಲ್ಲಿ ನೆಟ್ ರನ್ ರೇಟ್​ ಮೂಲಕ ಗೆಲ್ಲಬೇಕಾದ ಅವಶ್ಯಕತೆ ಎದುರಾಗುತ್ತಿತ್ತು.

ಇತ್ತ ಸೌತ್ ಆಫ್ರಿಕಾ ತಂಡ ಝಿಂಬಾಬ್ವೆ ವಿರುದ್ಧ ಗೆದ್ದು ಸೆಮಿಫೈನಲ್​ಗೇರಬಹುದಿತ್ತು. ಅತ್ತ ವೆಸ್ಟ್ ಇಂಡೀಸ್ ತಂಡಕ್ಕೂ ಸೆಮಿಫೈನಲ್​ಗೇರುವ ಅವಕಾಶ ದೊರೆಯುತ್ತಿತ್ತು. ಇಲ್ಲಿ ನೆಟ್ ರನ್ ರೇಟ್ ಆಧಾರದ ಮೇಲೆ ಟೀಮ್ ಇಂಡಿಯಾ ಗೆಲ್ಲಬೇಕಾದ ಅನಿವಾರ್ಯ ಎದುರಾಗುವುದರಿಂದ ಅವರು ಟೂರ್ನಿಯಿಂದ ಹೊರಬೀಳುತ್ತಿದ್ದರು.

ಆದರೆ ಸೌತ್ ಆಫ್ರಿಕಾ ಇಡೀ ಟೂರ್ನಿಯ ದಡ್ಡರ ತಂಡ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರು. ಇದರಿಂದ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಲಭವಾಯಿತು. ಆ ಬಳಿಕ ಸೌತ್ ಆಫ್ರಿಕಾ ಸೆಮಿಫೈನಲ್​ನಲ್ಲಿ ಸೋತರು. ಅತ್ತ ಸೆಮಿಫೈನಲ್​ನಲ್ಲಿ ಗೆದ್ದು ಭಾರತ ತಂಡವು ಇದೀಗ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಒಂದು ವೇಳೆ ಸೌತ್ ಆಫ್ರಿಕಾ ತಂಡ ಸ್ವಲ್ಪ ಬುದ್ಧಿ ಉಪಯೋಗಿಸಿದ್ದರೆ ಟೀಮ್ ಇಂಡಿಯಾವನ್ನು ಹೊರಹಾಕಬಹುದಿತ್ತು ಎಂದು ಮೈಕಲ್ ವಾನ್ ಹೇಳಿದ್ದಾರೆ.

ಕ್ರೀಡಾ ಸ್ಫೂರ್ತಿ ವಿರುದ್ಧ:

ಮೈಕಲ್ ವಾನ್ ಅವರ ಈ ಹೇಳಿಕೆಯು ಕ್ರೀಡಾ ಸ್ಫೂರ್ತಿಗೆ  ವಿರುದ್ಧ. ಏಕೆಂದರೆ  ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವ ಉದ್ದೇಶದಿಂದಲೇ ಆಡುವುದು ಕ್ರೀಡೆಯ ಮೂಲ ನಿಯಮ. ಉದ್ದೇಶಪೂರ್ವಕವಾಗಿ ಸೋಲುವುದು ಅಭಿಮಾನಿಗಳಿಗೆ ಮತ್ತು ಕ್ರೀಡೆಗೆ ಮಾಡುವ ಅಪಚಾರವೆಂದು ಪರಿಗಣಿಸಲಾಗುತ್ತದೆ.

ಇನ್ನು ಐಸಿಸಿ ನಿಯಮಾವಳಿಗಳ ಪ್ರಕಾರ, ಪಂದ್ಯದ ಫಲಿತಾಂಶವನ್ನು ಮ್ಯಾನಿಪುಲೇಟ್ ಮಾಡುವುದು ಅಥವಾ ಉದ್ದೇಶಪೂರ್ವಕವಾಗಿ ಕಳಪೆ ಪ್ರದರ್ಶನ ನೀಡುವುದು ಶಿಕ್ಷಾರ್ಹ ಅಪರಾಧ. ಹೀಗೆ ಮಾಡಿದರೆ ತಂಡದ ನಾಯಕನಿಗೆ ನಿಷೇಧ ಹೇರುವ ಅವಕಾಶವೂ ಇರುತ್ತದೆ.

ಇದನ್ನೂ ಓದಿ: ಯಾರೂ ಸಹ ಈ ರೀತಿ ರನೌಟ್ ಮಾಡಬೇಡಿ: ಕೈಫ್ ಕಿವಿಮಾತು

ಇತ್ತ ಕ್ರೀಡಾ ಸ್ಫೂರ್ತಿಯಿಂದಲೇ ಆಡಿ ಗೆದ್ದ ಸೌತ್ ಆಫ್ರಿಕಾ ತಂಡವನ್ನು ಮೈಕಲ್ ವಾನ್ ದಡ್ಡರು ಎಂದು ಕರೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ಸಲಹೆ ನೀಡಿರುವುದು ಕೂಡ ಇದೀಗ ಚರ್ಚೆಗೆ ಗ್ರಾಸವಾಗಿದೆ.

 

 

Source link

ಫಾರಂಹೌಸ್‌ಗೆ ನುಗ್ಗಿ ನಾಯಿ ಮೇಲೆ ಚಿರತೆ ಅಟ್ಯಾಕ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ನಂಜನಗೂಡು, ಮಾ.14: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊರಳವಾಡಿ ಗೇಟ್ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಜನವಸತಿ ಪ್ರದೇಶಕ್ಕೆ ನುಗ್ಗಿ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಮಧ್ಯರಾತ್ರಿ ಫಾರಂಹೌಸ್‌ವೊಂದಕ್ಕೆ ನುಗ್ಗಿದ ಚಿರತೆ ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದ ಘಟನೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಹೊರಳವಾಡಿ ಗೇಟ್ ಸಮೀಪವಿರುವ ಗಿರೀಶ್ ಎಂಬುವರಿಗೆ ಸೇರಿದ ‘ಅಭಿ ಫಾರಂ ಹೌಸ್’ಗೆ ಮಧ್ಯರಾತ್ರಿ ಚಿರತೆ ನುಗ್ಗಿದೆ. ಅವರು ಸಾಕಿರುವ ನಾಯಿಯ ಮೇಲೆ ಏಕಾಏಕಿ ದಾಳಿ ನಡೆಸಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ಫಾರಂಹೌಸ್ ಮಾಲೀಕರು ಮತ್ತು ಸಿಬ್ಬಂದಿ ಜೋರಾಗಿ ಕೂಗಾಡಿದ್ದಾರೆ. ಕಿರುಚಾಟ ಮತ್ತು ಶಬ್ದಕ್ಕೆ ಹೆದರಿದ ಚಿರತೆ ನಾಯಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದೆ. ಚಿರತೆಯು ಫಾರಂಹೌಸ್ ಆವರಣದಲ್ಲಿ ಓಡಾಡುತ್ತಿರುವ ಮತ್ತು ನಾಯಿಯ ಮೇಲೆ ದಾಳಿ ನಡೆಸುತ್ತಿರುವ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಹೊರಳವಾಡಿ ಗ್ರಾಮದ ಸುತ್ತಮುತ್ತ ಕಳೆದ ಹಲವು ದಿನಗಳಿಂದ ಚಿರತೆ ಓಡಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿ, ಬೋನು ಇಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾರಾದರೂ ಪ್ರಾಣ ಕಳೆದುಕೊಂಡ ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ರೋಗಿಗಳ ಪಾಲಿಗೆ ನರಕಯಾತನೆಯ ತಾಣ: ಬೆಡ್‌ ಇಲ್ಲವೆಂದು ಗಾಯಾಳನ್ನು ಹೊರಗೇ ನಿಲ್ಲಿಸಿದ ಸಿಬ್ಬಂದಿ

ಹುಬ್ಬಳ್ಳಿ, ಮಾ.14: ಉತ್ತರ ಕರ್ನಾಟಕದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಈಗ ರೋಗಿಗಳ ಪಾಲಿಗೆ ನರಕಯಾತನೆಯ ತಾಣವಾಗಿ ಮಾರ್ಪಡುತ್ತಿದೆಯೇ ಎಂಬ ಅನುಮಾನ ಮೂಡಿದೆ. ಧಾರವಾಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರಿಗೆ ಬೆಡ್‌ ಇಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ. ಧಾರವಾಡದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಾಣಾಪಾಯದಲ್ಲಿದ್ದ ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರಲಾಯಿತು. ಗಾಯಾಳುವನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದರೂ, ಆಸ್ಪತ್ರೆಯ ಸಿಬ್ಬಂದಿ “ಬೆಡ್‌ಗಳು ಖಾಲಿ ಇಲ್ಲ” ಎಂದು ಹೇಳಿ ಆಂಬ್ಯುಲೆನ್ಸ್‌ನಿಂದ ಕೆಳಗೆ ಇಳಿಸಿಕೊಳ್ಳಲು ನಿರಾಕರಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಾಯಾಳು ಆಂಬ್ಯುಲೆನ್ಸ್‌ನಲ್ಲೇ ಸಾವು-ಬದುಕಿನ ನಡುವೆ ಹೋರಾಡಬೇಕಾಯಿತು. ಕೊನೆಗೆ ಯಾವುದೇ ದಾರಿ ಕಾಣದೆ, ಗಾಯಾಳುವಿನ ಸಂಬಂಧಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯ ಈ ಬೇಜವಾಬ್ದಾರಿತನವನ್ನು ಆಂಬ್ಯುಲೆನ್ಸ್ ಚಾಲಕ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬೆಡ್‌ ಇಲ್ಲ ಎಂದು ನಿರ್ಲಕ್ಷ್ಯದ ಉತ್ತರ ನೀಡುವ ಸಿಬ್ಬಂದಿಯ ನಡೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link