nagaraj11081993

19 ವರ್ಷಗಳಲ್ಲೇ ಮೊದಲ ಬಾರಿ… CSK ಪಾಲಿಗೆ ಇದು ಅಂತಿಂಥ ಸೋಲಲ್ಲ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೋಲನುಭವಿಸಿದೆ. ಆದರೆ ಇದು ಅಂತಿಂಥ ಸೋಲಲ್ಲ. ಬದಲಾಗಿ 19 ವರ್ಷಗಳ ಕಂಡಂತಹ ಅತ್ಯಂತ ಹೀನಾಯ ಸೋಲು. ಗುವಾಹಟಿಯ ಬರ್ಸಪಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಆರ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು.  ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್​ಗಳಲ್ಲಿ 127 ರನ್​ಗಳಿಸಿ ಆಲೌಟ್…

Read More

KHPT Recruitment 2026: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ನೇಮಕಾತಿ; ಪದವೀಧರರು ಅರ್ಹರು

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಉದ್ಯೋಗಾವಕಾಶಗಳನ್ನು ಘೋಷಿಸಿದೆ. ರಾಜ್ಯದ ಚಾಮರಾಜನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 18 ಕ್ಷೇತ್ರ ತನಿಖಾಧಿಕಾರಿ (Field Investigator) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸುವುದು ಅಗತ್ಯ. ಏಕೆಂದರೆ ಇಂದೇ (ಮಾರ್ಚ್ 31) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ. ಈ ಹುದ್ದೆಗಳಿಗೆ…

Read More

3 ಮದುವೆ, ಸಾಕಷ್ಟು ಅಫೇರ್: ಮೇಕಪ್ ಆರ್ಟಿಸ್ಟ್​​ ನವರಂಗಿ ಆಟಕ್ಕೆ ಉದ್ಯಮಿಯ ಬಲಿ?

ಮಂಗಳೂರು, ಮಾರ್ಚ್​​ 31: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು. ಈ ಪ್ರಕರಣಕ್ಕೀಗ ಸ್ಫೋಟಕ ತಿರುವು ಸಿಕ್ಕಿದ್ದು ಪತ್ನಿ ಸೌಮ್ಯಾಳ ನವರಂಗಿ ಆಟವೇ ಸುದೀಪ್ ಸಾವಿಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯ ಸರಣಿ ಮ್ಯಾರೇಜ್ ಕಹಾನಿ ಬಯಲಾಗಿತ್ತು. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ ಹಣ ಒಡವೆ…

Read More

Video: ಯಮನನ್ನೇ ಯಾಮಾರಿಸಿ ಸಾವು ಗೆದ್ದ ಅಣ್ಣ-ತಂಗಿ

ಮುಜಾಫರ್​ನಗರ, ಮಾರ್ಚ್​ 31: ಮುಜಾಫರ್​ನಗರದಲ್ಲಿ ನಡೆದ ಅಪಘಾತವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಮರಳು ತುಂಬಿದ್ದ ಟ್ರಕ್ ಒಂದು ಅಣ್ಣ ತಂಗಿ ಹೋಗುತ್ತಿದ್ದ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ, ಸವಾರ ನಿಯಂತ್ರಣ ತಪ್ಪಿ ತಂಗಿ ಜತೆ ನಡು ರಸ್ತೆಗೆ ಬಿದ್ದಿದ್ದಾರೆ. ಆಗ ಟ್ರಕ್ ಬೈಕ್ ಮೇಲೆ ಹರಿದಿದೆ. ಅವರಿಬ್ಬರು ಬೈಕ್ ಬಿಟ್ಟು ರಸ್ತೆಗೆ ಬಿದ್ದ ಪರಿಣಾಮ ಸ್ವಲ್ಪದರಲ್ಲೇ ಅಪಘಾತ ತಪ್ಪಿದೆ. ಕೆಲವು ದಿನಗಳ ಹಿಂದೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ನ್ಯೂ ಮಂಡಿ ಕೊತ್ವಾಲಿ ಪ್ರದೇಶದಲ್ಲಿ ಈ…

Read More

ದಳಪತಿ ವಿಜಯ್ ಆಸ್ತಿ ವಿವರದಿಂದ ಬಹಿರಂಗವಾಯ್ತು ದೊಡ್ಡ ಸುಳ್ಳು

ದಳಪತಿ ವಿಜಯ್ (Thalapathy Vijay) ಭಾರತದ ಹಾಲಿ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶದ ನಾನಾ ರಾಜ್ಯಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ದಳಪತಿ ವಿಜಯ್ ಹೊಂದಿದ್ದಾರೆ. ವಿಜಯ್ ಅವರ ಸಿನಿಮಾಗಳು ನೂರಾರು ಕೋಟಿ ಬಾಕ್ಸ್ ಆಫೀಸ್​​ನಲ್ಲಿ ಕಲೆಕ್ಷನ್ ಮಾಡುತ್ತವೆ. ಇದರ ಜೊತೆಗೆ ವಿಜಯ್, ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎಂದು ಸಹ ಹೇಳಲಾಗುತ್ತಿತ್ತು. ಆದರೆ ಇದೀಗ ದಳಪತಿ ವಿಜಯ್ ಚುನಾವಣೆಗೆ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರದಲ್ಲಿ ತಮ್ಮ ಆಸ್ತಿ ವಿವರವನ್ನು ಸಹ…

Read More

ತಾಹಿರ್ ಅನ್ವರ್ ಯಾರು? ಪಾಕಿಸ್ತಾನದಲ್ಲಿ ಮಸೂದ್ ಅಜರ್ ಸಹೋದರ ಅನುಮಾನಾಸ್ಪದವಾಗಿ ಸಾವು

ಇಸ್ಲಾಮಾಬಾದ್, ಮಾರ್ಚ್​ 31: ಪಾಕಿಸ್ತಾನ(Pakistan) ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನಾಯಕ ಮಸೂದ್ ಅಜರ್​ನ ಸಹೋದರ ಮೊಹಮ್ಮದ್ ತಾಹಿರ್ ಅನ್ವರ್ ಮೃತಪಟ್ಟಿದ್ದಾನೆ. ಬಹಾವಲ್ಪುರದಲ್ಲಿ ಆತನ ಅಂತ್ಯಕ್ರಿಯೆ ನಡೆದಿದೆ ಎಂದು ವರದಿಯಾಗಿದೆ. ಅವನ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಸಂಘಟನೆ ಬಹಿರಂಗಗೊಳಿಸಿಲ್ಲ. ತಾಹಿರ್ ಅನ್ವರ್ ತನ್ನ ಸಹೋದರನ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‌ನೊಂದಿಗೆ ಸಹ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಸೋಮವಾರ ತಡರಾತ್ರಿ ಬಹಾವಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ವಾಲಿ ಬಳಿ ತಾರಿಕ್​ನನ್ನು ಸಮಾಧಿ ಮಾಡಲಾಗಿದೆ ಎಂದು ಸಂಘಟನೆಯ ಅಧಿಕೃತ…

Read More

NHAI Summer Internship 2026: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಇಂಟರ್ನ್‌ಶಿಪ್; ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ, ತಿಂಗಳಿಗೆ 20,000ರೂ. ಸ್ಟೈಫಂಡ್!

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗಾಗಿ ಸಮ್ಮರ್ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಘೋಷಿಸಿದೆ. ದೇಶಾದ್ಯಂತ ನಡೆಯುತ್ತಿರುವ ಬೃಹತ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಬಯಸುವ ವಿವಿಧ ವಿಭಾಗಗಳ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಎರಡು ತಿಂಗಳ ಅವಧಿಯ ಈ ಇಂಟರ್ನ್‌ಶಿಪ್ ಕಾರ್ಯಕ್ರಮವು ಮೇ 4 ರಿಂದ ಜುಲೈ 5 ರವರೆಗೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 20,000 ರೂಪಾಯಿ…

Read More

ಆನ್​ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೂ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್

ನವದೆಹಲಿ, ಮಾರ್ಚ್ 31: ಕೇಂದ್ರ ಸರ್ಕಾರ 2021ರ ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿ ಮತ್ತು ಡಿಜಿಟಲ್ ಮೀಡಿಯಾ ನೈತಿಕ ಸಂಹಿತೆ ನಿಯಮಗಳನ್ನು ಪರಿಷ್ಕರಿಸುತ್ತಿದೆ. ಈ ಸಂಬಂಧ ತಿದ್ದುಪಡಿ ತರುತ್ತಿದ್ದು ಅದರ ಕರಡು ನಿಯಮಗಳನ್ನು ನಿನ್ನೆ ಸೋಮವಾರ ಬಹಿರಂಗಪಡಿಸಿದೆ. ಸಾಮಾನ್ಯ ಸೋಷಿಯಲ್ ಮೀಡಿಯಾ ಬಳಕೆದಾರನ (social media user) ಮೇಲೆ ಪರಿಣಾಮ ಬೀರಲಿರುವುದು ಸೇರಿದಂತೆ ಕೆಲ ಪ್ರಮುಖ ಸಂಗತಿಗಳು ಈ ಪ್ರಸ್ತಾವಿತ ನಿಯಮಗಳಲ್ಲಿವೆ. ಗಮನಿಸಬೇಕಾದ ಹೊಸ ಐಟಿ ನಿಯಮಗಳಿವು… ಆನ್​ಲೈನ್​ನಲ್ಲಿ ಸಾಮಾನ್ಯ ಬಳಕೆದಾರರು ಹಾಕುವ ಪೋಸ್ಟ್​ಗಳು ಸೂಕ್ಷ್ಮವಿದ್ದರೆ, ಅವರಿಗೆ ಸರ್ಕಾರದಿಂದಲೇ…

Read More

ವೇಗವಾಗಿ ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಿಂದ ಹೊರಗೆಸೆಯಲ್ಪಟ್ಟ ವಿದ್ಯಾರ್ಥಿನಿಯರು! ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು, ಮಾರ್ಚ್ 31: ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರು ವಿದ್ಯಾರ್ಥಿನಿಯರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ: ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಗೇರುಕಟ್ಟೆ ಎಂಬಲ್ಲಿ ಅಕ್ಕ-ತಂಗಿ ಹತ್ತಿದ್ದರು. ಬಸ್ ಕಳಿಯ ಗ್ರಾಮದ ರೇಷ್ಮೆರೋಡ್ ಎಂಬಲ್ಲಿನ ತಿರುವಿನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಬಸ್ಸಿನ ಬಾಗಿಲು…

Read More

ಹುಬ್ಬಳ್ಳಿ, ರಾಯಚೂರಲ್ಲಿ ಕುಡಿಯುವ ನೀರಿಗೂ ಪರದಾಟ: ರಸ್ತೆ ತಡೆದು ಪ್ರತಿಭಟನೆ

ಹುಬ್ಬಳ್ಳಿ/ರಾಯಚೂರು, ಮಾರ್ಚ್​​ 31: ಬೇಸಿಗೆ ಆರಂಭವಾಗುತ್ತಿದ್ದಂತೆ ಕರ್ನಾಟಕದ ಹಲವೆಡೆ ನೀರಿನ ಸಮಸ್ಯೆ ತಲೆದೋರಿದ್ದು, ಹುಬ್ಬಳ್ಳಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ. ಹುಬ್ಬಳ್ಳಿಯ ಕಿಲ್ಲೆ ವಾರ್ಡ್‌ನಲ್ಲಿ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಸ್ಥಳೀಯರು ಪ್ರತಿದಿನವೂ ನೀರಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ರಸ್ತೆ ತಡೆದು ಸಾರ್ವಜನಿಕರು ಪ್ರತಿಭಟನೆ ನಡೆಸಿರುವ ಪ್ರಸಂಗ ನಡೆದಿದೆ. ಅತ್ತ ರಾಯಚೂರು ಜಿಲ್ಲೆಯ ಹಲವು ಭಾಗಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆ, ಜಿಲ್ಲಾಧಿಕಾರಿಗಳು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಹತ್ವದ…

Read More