nagaraj11081993

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ನವದೆಹಲಿ, ಮಾರ್ಚ್ 31: ನಾಳೆ ಹೊಸ ಹಣಕಾಸು ವರ್ಷದ ಆರಂಭ. ಏಪ್ರಿಲ್ 1ರಿಂದ ಡಿಜಿಟಲ್ ಪೇಮೆಂಟ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎಟಿಎಂ ಬಳಕೆ ಇತ್ಯಾದಿ ಕೆಲ ನಿಯಮಗಳಲ್ಲಿ ಬದಲಾವಣೆ ಇರಲಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿತ್​ಡ್ರಾಯಲ್, ಲಾಕರ್, ಎಫ್​ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್​ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆ ಇದೆ. ಏಪ್ರಿಲ್ 1ರಿಂದ ಕೆಲ ಮಹತ್ವದ ಹಣಕಾಸು ನಿಯಮಗಳ (Financial Rules) ಬದಲಾವಣೆ ಏನೇನು ಎನ್ನುವ…

Read More

TV9-Sensodyne Campaign |ಈ ಅಭಿಯಾನದ ಮೂಲಕ ನಿಮ್ಮ ದಂತ ವಯಸ್ಸನ್ನು ತಿಳಿಯಿರಿ: ಉತ್ತಮ ಬಾಯಿ ಆರೋಗ್ಯಕ್ಕೆ ಮೊದಲ ಹೆಜ್ಜೆ

ಬೆಂಗಳೂರು. ಮಾ.31: ಬಾಯಿ ಆರೋಗ್ಯ ಸಮಸ್ಯೆಗಳು ಸಾರ್ವತ್ರಿಕವಾಗಿ ಹೆಚ್ಚುತ್ತಿರುವ ಸವಾಲಾಗಿದೆ. ಹಿಂದಿನ ಅಂದಾಜಿಗಿಂತಲೂ ಆರೋಗ್ಯ ರಕ್ಷಣೆಯು ಇಂದು ದೊಡ್ಡ ಸವಾಲಾಗಿರುವುದರಿಂದ, ತಡೆಗಟ್ಟುವ ಆರೋಗ್ಯ ರಕ್ಷಣೆಯು ಎಲ್ಲರ ಮಿಷನ್ ಆಗಿದೆ. ಈ ನಿಟ್ಟಿನಲ್ಲಿ, TV9 ನೆಟ್‌ವರ್ಕ್ ಮತ್ತು ಸೆನ್ಸೋಡೈನ್‌ನಂತಹ ಸಂಸ್ಥೆಗಳು, ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸವಾಲನ್ನು ಎದುರಿಸಲು ಮುಂದಾಗಿವೆ. ನಿಮ್ಮ ದಂತ ವಯಸ್ಸನ್ನು ತಿಳಿದುಕೊಳ್ಳುವುದು ಮತ್ತು ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು ಬಾಯಿ ಆರೋಗ್ಯದ ಕಡೆಗೆ ತೆಗೆದುಕೊಳ್ಳುವ ಪ್ರಮುಖ ಮೊದಲ ಹೆಜ್ಜೆಯಾಗಿದೆ. ಬಾಯಿ ಆರೋಗ್ಯವಿಲ್ಲದೆ…

Read More

ಕೆಲಸದಿಂದ ತೆಗೆದ ಸಿಟ್ಟಿಗೆ ಮ್ಯಾನೇಜರ್​​​ಗೆ ಚಾಕುವಿನಿಂದ 10 ಬಾರಿ ಇರಿದ, ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಕೃತ್ಯ

ಬೆಂಗಳೂರು, (ಮಾರ್ಚ್ 31): ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೋರ್ವ, ಕಂಪನಿಯ ಮ್ಯಾನೇಜರ್​​​ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ (Bengaluru) ತಿಗಳರಪಾಳ್ಯದಲ್ಲಿ ನಡೆದಿದೆ.  ತಿಗಳರಪಾಳ್ಯದ ಪವರ್ ಪ್ಲಾಸ್ಟಿಕ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮ್ಯಾನೇಜರ್ ರಾಹುಲ್(38) ಹತ್ಯೆಯಾದ ವ್ಯಕ್ತಿ. ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡ ಉದ್ಯೋಗಿ ಯಾದಗಿರಿ ಮೂಲದ ಹನುಮಂತಪ್ಪ, ನಿನ್ನೆ (ಮಾರ್ಚ್ 30) ಮ್ಯಾನೇಜರ್ ರಾಹುಲ್ ಗೆ ಚಾಕುವಿನಿಂದ ಇರಿದಿದ್ದ. ಇದರಿಂದ ಗಾಯಗೊಂಡ ರಾಹುಲ್​ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮ್ಯಾನೇಜರ್ ರಾಹುಲ್ ಆಸ್ಪತ್ರೆಯಲ್ಲಿ…

Read More

ಬಸ್​​ಗೆ ಬೈಕ್​​ ಡಿಕ್ಕಿಯಾಗಿ ಯುವಕ ಸಾವು: ಇದು ಅಪಘಾತವೋ? ಆತ್ಮಹತ್ಯೆಯೋ? ಎಂಬುದೇ ಈಗ ಅನುಮಾನ

ವಿಜಯಪುರ, ಮಾರ್ಚ್​​ 31: ಸಾರಿಗೆ ಬಸ್​, ಬೈಕ್​ ನಡುವೆ ಡಿಕ್ಕಿಯಾದ ಪರಿಣಾಮ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್​​ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್‌ಗೇಟ್ ಬಳಿ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಮೂಲದ ಅಭಿಷೇಕ ನಾಗರಾಳ (25) ಮೃತ ಯುವಕನಾಗಿದ್ದು, ಬಸ್​​ನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್​​ನಿಂದ ಕೆಳಗೆ ಇಳಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಬಸ್​​ ಕೂಡ…

Read More

ವಿದೇಶಿ ಪ್ರೇಕ್ಷಕರಿಗೆ ಮೊದಲು ‘ರಾಮಾಯಣ’ ಟೀಸರ್ ದರ್ಶನ: ರಾಮನ ಪಾತ್ರಕ್ಕೆ ಫಿದಾ

ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ರಾಮಾಯಣ’ (Ramayana) ಬಗ್ಗೆ ಈಗ ವಿದೇಶದಲ್ಲೂ ಚರ್ಚೆ ಶುರುವಾಗಿದೆ. ಚಿತ್ರತಂಡವು ಇತ್ತೀಚೆಗೆ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಚಿತ್ರದ ಟೀಸರ್ ಪ್ರದರ್ಶಿಸಿದೆ. ಈ ಮೂಲಕ ಚಿತ್ರದ ದೃಶ್ಯ ವೈಭವವನ್ನು ಮೊದಲ ಬಾರಿಗೆ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಟೀಸರ್ ಪ್ರದರ್ಶನದ ಬಳಿಕ ಮಾತನಾಡಿದ ನಟ…

Read More

ಮೈಸೂರು: ಖರ್ಚಿಗೆ ಹಣ ಕೊಡದ್ದಕ್ಕೆ ಮಂಗಳಮುಖಿಯ ಮುಖವನ್ನೇ ಕೊಚ್ಚಿ ಹಾಕಿದ ಯುವಕರ ಗುಂಪು

ಮೈಸೂರು, ಮಾ. 31: ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಯುವಕರ ತಂಡವೊಂದು ಮಂಗಳಮುಖಿಯರ ಮೇಲೆ ತಲ್ವಾರ್ ಮತ್ತು ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ. ಅಮೃತ ಬಡಾವಣೆ ನಿವಾಸಿಯಾದ ಆನಮ್ ಎಂಬ ಮಂಗಳಮುಖಿಯ ಬಳಿ ಕೆಲವು ಯುವಕರು ತಮ್ಮ ವೈಯಕ್ತಿಕ ಖರ್ಚಿಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಆನಮ್ ಹಣ ನೀಡಲು ನಿರಾಕರಿಸಿದಾಗ ಯುವಕರು ಗಲಾಟೆ ಆರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡು ಆನಮ್ ತನ್ನ ಸ್ನೇಹಿತೆ ಪಾರಿ…

Read More

MI vs KRR ಪಂದ್ಯದ ಬಳಿಕ ಐಪಿಎಲ್ ಬ್ರಾಡ್​ಕಾಸ್ಟ್ ಇಂಜಿನಿಯರ್ ಸಾವು

ಐಪಿಎಲ್ 2026ರ ಪಂದ್ಯಗಳ ನೇರ ಪ್ರಸಾರ ತಂಡದ ಭಾಗವಾಗಿದ್ದ ಬ್ರಿಟನ್ ಮೂಲದ ಹಿರಿಯ ಬ್ರಾಡ್​ಕಾಸ್ಟ್ ಇಂಜಿನಿಯರ್ ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ (76) ಅವರು ಮೃತಪಟ್ಟಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯದ ಬಳಿಕ ಮುಂಬೈನ ಹೋಟೆಲ್ ಕೊಠಡಿಗೆ ಮರಳಿದ್ದ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಹಿನ್ನೆಲೆ: ಇಯಾನ್ ವಿಲಿಯಮ್ಸ್ ಅವರು ಬಿಸಿಸಿಐ ಪರವಾಗಿ ಐಪಿಎಲ್ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮಾರ್ಚ್ 29ರ ಭಾನುವಾರ…

Read More

ಒಂದು ಪೈರಸಿ ಲಿಂಕ್​​ನಿಂದ ಬಾಲಿವುಡ್​​ಗೆ ಆಯ್ತು ಸಾವಿರಾರು ಕೋಟಿ ಲಾಭ

ಚಿತ್ರರಂಗದವರ ಮೊದಲ ಶತ್ರು ಎಂದರೆ ಪೈರಸಿ (Piracy), ಅದರಿಂದ ಸಾವಿರಾರು ಕೋಟಿ ನಷ್ಟವಾಗುತ್ತಿದೆ ಎಂದು ದೂರುತ್ತಲೇ ಇರುತ್ತಾರೆ ಚಿತ್ರರಂಗದವರು. ಆದರೆ ಅದೇ ಒಂದು ಪೈರಸಿ ಲಿಂಕಿನಿಂದಾಗಿ ಭಾರತೀಯ ಚಿತ್ರರಂಗಕ್ಕೆ ವಿಶೇಷವಾಗಿ ಬಾಲಿವುಡ್​​ಗೆ ಈ ವರೆಗೆ ಸುಮಾರು 5000 ಕೋಟಿ ಲಾಭ ಆಗಿದೆ. ಲಕ್ಷಾಂತರ ಕೋಟಿ ಲಾಭದ ಅವಕಾಶ ತೆರೆದುಕೊಂಡಿದೆ ಎಂಬುದು ಗೊತ್ತೆ? ಅದು ಹೇಗೆ ಸಾಧ್ಯ? ವಿವರ ಇಲ್ಲಿದೆ ನೋಡಿ… ಚೀನಾ, ವಿಶ್ವದ ಅತಿ ದೊಡ್ಡ ಸಿನಿಮಾ ಮಾರುಕಟ್ಟೆಗಳಲ್ಲಿ ಒಂದು. ಚೀನಾ ಒಂದರಲ್ಲೇ 90 ಸಾವಿರಕ್ಕೂ ಹೆಚ್ಚು…

Read More

Hanuman Jayanti 2026: ಏಪ್ರಿಲ್ 02 ಹನುಮ ಜಯಂತಿ; ಈ ದಿನ ತಪ್ಪದೇ ಈ ಸರಳ ಪರಿಹಾರ ಅನುಸರಿಸಿ!

ಹಿಂದೂ ಧರ್ಮದಲ್ಲಿ ಚೈತ್ರ ಮಾಸದ ಹುಣ್ಣಿಮೆಗೆ ಅಪಾರ ಪ್ರಾಮುಖ್ಯತೆಯಿದೆ. ಪುರಾಣಗಳ ಪ್ರಕಾರ, ಶ್ರೀರಾಮನ ಪರಮ ಭಕ್ತ ಹನುಮಂತನು ಜನಿಸಿದ ಈ ಪವಿತ್ರ ದಿನವನ್ನು ‘ಹನುಮ ಜಯಂತಿ‘ ಅಥವಾ ‘ಹನುಮಾನ್ ಜನ್ಮೋತ್ಸವ’ ಎಂದು ದೇಶಾದ್ಯಂತ ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 2 ರಂದು ಹನುಮಾನ್ ಜಯಂತಿ ಬಂದಿದ್ದು, ಈ ದಿನದಂದು ಬಜರಂಗಬಲಿಯನ್ನು ಆರಾಧಿಸುವುದರಿಂದ ಜೀವನದ ಸಕಲ ಭಯ ಹಾಗೂ ಕಷ್ಟಗಳು ದೂರವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ. ವಿಶೇಷವಾಗಿ ಜಾತಕದಲ್ಲಿರುವ ಮಂಗಳ ದೋಷದ ಪ್ರಭಾವವನ್ನು ತಗ್ಗಿಸಲು ಈ…

Read More

ಐವರು ಮಹಿಳೆಯರಿಂದ ಥಿಯೇಟರ್‌ ಮಾಲೀಕನ ಸುಲಿಗೆ: ಬ್ಲ್ಯಾಕ್​​ಮೇಲ್​​ ಮಾಡಿ ಪೀಕಿದ್ದು 25 ಲಕ್ಷ ರೂ.!

ರಾಮನಗರ, ಮಾರ್ಚ್​​ 31:  ಐದು ಮಹಿಳೆಯರ ಗುಂಪೊಂದು ಬೆದರಿಸಿ ಚಿತ್ರಮಂದಿರದ ಮಾಲೀಕರೊಬ್ಬರಿಂದ 25 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಬಗ್ಗೆ ಪಟ್ಟಣದ ಅಗ್ರಹಾರ ಬಡಾವಣೆ ನಿವಾಸಿಯಾಗಿರುವ 52 ವರ್ಷದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಏಳು ವರ್ಷಗಳ ಹಿಂದೆ ಪತ್ನಿ ದೂರವಾದ ಬಳಿಕ ಅವರು ಒಬ್ಬರೇ ವಾಸವಾಗಿದ್ದರು. ತಾಯಿ-ತಂದೆ ಅಥವಾ ಮಕ್ಕಳು ಯಾರೂ ಅವರಿಗೆ ಇಲ್ಲ. ಈ ನಡುವೆ ಆರೋಪಿಗಳ ಪೈಕಿ ಓರ್ವಳು ಮೊದಲು ಮದುವೆಯಾಗುವ ಆಸೆ ವ್ಯಕ್ತಪಡಿಸಿ ಸಂತ್ರಸ್ತರನ್ನು…

Read More