‘ಟಾಕ್ಸಿಕ್’ ಸಿನಿಮಾ: ‘ರಾಯ’ನ ಕಿಕ್ ಕೊಡೋ ಸ್ಟೈಲ್ – Kannada News | Toxic movie Yash’s Raya character photos released
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್’. ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೆ ಹೋಗಿದೆ. ಆದರೂ ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ‘ಟಾಕ್ಸಿಕ್’ ಸಿನಿಮಾದ ಕ್ಯಾರೆಕ್ಟರ್ ಪೋಸ್ಟರ್ ಹಾಗೂ ಎರಡು ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಇದೀಗ ‘ಟಾಕ್ಸಿಕ್’ ತಂಡವು ಸಿನಿಮಾದಲ್ಲಿನ ಯಶ್ ಪಾತ್ರವಾದ ‘ರಾಯ’ನ ಆಕರ್ಷಕ ಫೋಟೊಗಳನ್ನು ಹಂಚಿಕೊಂಡಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ನಲ್ಲಿ ಯಶ್…