ಬೆಂಗಳೂರು, ಮಾರ್ಚ್ 13: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಹೆಚ್ಚಾದ ತಾಪಮಾನದೊಂದಿಗೆ ಒಣ ಹವೆ (Weather Forecast) ಆವರಿಸಿದ್ದು, ಇಂದೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನ ಇದೇ ರೀತಿಯ ಶುಷ್ಕ ವಾತಾವರಣ ಇರಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಒಣ ಹವೆ?
ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾರ್ಚ್ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ
ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.
ಬೆಂಗಳೂರು, ಮಾರ್ಚ್ 13: ಬೆಂಗಳೂರಿನ (Bangalore) ಅತ್ಯಂತ ದಟ್ಟಣೆಯ ಮತ್ತು ಟ್ರಾಫಿಕ್ ಸಮಸ್ಯೆಗೆ ಕುಪ್ರಸಿದ್ಧವಾದ ಪ್ರದೇಶಗಳಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರಮುಖವಾಗಿದೆ. ಈ ಭಾಗದಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವುದು ಸಾಮಾನ್ಯವಾಗಿದೆ. ಆದರೆ ಈಗ ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆ ಇದ್ದು, ಈ ಭಾಗದ ಸವಾರರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಶುಭ ಸುದ್ದಿ ನೀಡಿದೆ. ಸಿಲ್ಕ್ ಬೋರ್ಡ್ ಭಾಗದ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್‌ನ ಇನ್ನೊಂದು ಭಾಗವನ್ನು ಸಂಚಾರಕ್ಕೆ ತೆರೆಯಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಈ ಮಾರ್ಗವನ್ನು ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.
ಸುಮಾರು 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಡಬಲ್ ಡೆಕ್ಕರ್ ಫ್ಲೈಓವರ್ 3.36 ಕಿಲೋಮೀಟರ್ ಉದ್ದ ಹೊಂದಿದ್ದು, ಲೂಪ್ ಮತ್ತು ಇಳಿಜಾರುಗಳನ್ನು ಸೇರಿಸಿ ಒಟ್ಟು 5.12 ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.
2024ರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಗಿಗುಡ್ಡದಿಂದ ಎಚ್‌ಎಸ್‌ಆರ್ ಲೇಔಟ್, ಹೊಸೂರು ರಸ್ತೆ ಮತ್ತು ಬೊಮ್ಮನಹಳ್ಳಿ ಮಾರ್ಗದ ಡಬಲ್ ಡೆಕ್ಕರ್ ಫ್ಲೈಓವರ್‌ನ ಒಂದು ಭಾಗವನ್ನು ಪ್ರಾಯೋಗಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಇದರಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹೆಚ್ಚಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಕೆಲ ಮಟ್ಟಿಗೆ ಕಡಿಮೆಯಾಗಿತ್ತು.
ಡಬಲ್ ಡೆಕ್ಕರ್ ಫ್ಲೈಓವರ್ ಮತ್ತೊಂದು ಭಾಗದ ಕಾಮಗಾರಿ ಬಹುತೇಕ ಪೂರ್ಣ
ಆದರೆ ಫ್ಲೈಓವರ್‌ನ ಇನ್ನೊಂದು ಭಾಗದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಾರ್ಗವನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗಿರಲಿಲ್ಲ. ಇದರ ಪರಿಣಾಮವಾಗಿ ಎಚ್‌ಎಸ್‌ಆರ್ ಲೇಔಟ್ ಕಡೆಯಿಂದ ರಾಗಿಗುಡ್ಡ ಮಾರ್ಗಕ್ಕೆ ಸಂಚರಿಸುವ ವಾಹನ ಸವಾರರು ಇನ್ನೂ ಸಿಲ್ಕ್ ಬೋರ್ಡ್ ಜಂಕ್ಷನ್, ಬಿಟಿಎಂ ಲೇಔಟ್ ಜಂಕ್ಷನ್ ಸೇರಿದಂತೆ ಹಲವು ಸ್ಥಳಗಳಲ್ಲಿ ಟ್ರಾಫಿಕ್ ದಟ್ಟಣೆಯನ್ನು ಎದುರಿಸುತ್ತಿದ್ದರು. ಪ್ರಸ್ತುತ ಫ್ಲೈಓವರ್‌ನ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪೇಂಟಿಂಗ್ ಮತ್ತು ಎಲೆಕ್ಟ್ರಿಕಲ್ ಕೆಲಸಗಳು ಮಾತ್ರ ಬಾಕಿಯಿವೆ. ಈ ಕಾರ್ಯಗಳು ಈ ತಿಂಗಳ ಕೊನೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಮಾರ್ಗ ಸಂಚಾರಕ್ಕೆ ತೆರೆಯಲಾದ ನಂತರ ಔಟರ್ ರಿಂಗ್ ರೋಡ್ ಹಾಗೂ ಎಚ್‌ಎಸ್‌ಆರ್ ಲೇಔಟ್ ಭಾಗದಿಂದ ಬರುವ ವಾಹನ ಸವಾರರು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಹಿಂಭಾಗದಲ್ಲೇ ಫ್ಲೈಓವರ್ ಮೂಲಕ ನೇರವಾಗಿ ಸಾಗುವ ಅವಕಾಶ ದೊರೆಯಲಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆ ಸುಮಾರು ಅರ್ಧದಷ್ಟು ಕಡಿಮೆಯಾಗಬಹುದು ಎಂದು ವಾಹನ ಸವಾರರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಹಲವು ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿದ್ದ ಸಿಲ್ಕ್ ಬೋರ್ಡ್ ಭಾಗದ ಜನರಿಗೆ ಮತ್ತು ವಾಹನ ಸವಾರರಿಗೆ ಶೀಘ್ರದಲ್ಲೇ ದೊಡ್ಡ ಮಟ್ಟದ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಈ ಮಾರ್ಗ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪುನೀತ್ ರಾಜ್ಕುಮಾರ್ (Puneeth) ಹುಟ್ಟಿದ್ದು ಮಾರ್ಚ್ 17ರಂದು. ಅವರು ಇಂದು ನಮ್ಮ ಜೊತೆ ಇಲ್ಲ ಅಂಬ ನೋವು ಅಭಿಮಾನಿಗಳನ್ನು ಕಾಡಿದೆ. ಅವರು ಅನೇಕರಿಗೆ ಮಾದರಿ. ಕನ್ನಡದವರಿಗೆ ಮಾತ್ರವಲ್ಲ, ಪರಭಾಷೆಯವರಿಗೂ ಪುನೀತ್ ಅವರು ಇಷ್ಟು. ಅನುಪಮಾ ಪರಮೇಶ್ವರನ್, ಅದಾ ಶರ್ಮಾ ಸೇರಿದಂತೆ ಅನೇಕರು ಪುನೀತ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದನ್ನು ನೀವು ಕಾಣಬಹುದು. ಈಗ ಸಾಯಿ ಪಲ್ಲವಿ ಅವರ ಹೊಸ ವಿಡಿಯೋ ವೈರಲ್ ಆಗಿದೆ.
ಸಾಯಿ ಪಲ್ಲವಿ ಅವರು ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡಿದರು. ಸಂದರ್ಶನ ಒಂದರಲ್ಲಿ ಈ ಬಗ್ಗೆ ವಿವರಿಸಿದ್ದರು. ‘ಈ ಇಂಡಸ್ಟ್ರಿಯಿಂದ ಮೊದಲು ಭೇಟಿ ಮಾಡಿದ್ದು ಅಂದರೆ ಅದು ಪುನೀತ್ ರಾಜ್ಕುಮಾರ್. ನಾನು, ಫಿಲ್ಮ್ ಫೇರ್ ಅವಾರ್ಡ್ನಲ್ಲಿ ಅವರು ಭೇಟಿ ಮಾಡಿದ್ದೆ. ನಾನು ಆಗತಾನೇ ಇಂಡಸ್ಟ್ರಿಗೆ ಬಂದಿದ್ದೆ. ಪ್ರೇಮಂ ಮಾಡಿದ್ದೆ’ ಎಂದು ಅವರು ಹೇಳಿದ್ದರು.
‘ನಾನು ಅವಾರ್ಡ್ ಫಂಕ್ಷನ್ನಿಂದ ತೆರಳುತ್ತಿದ್ದೆ. ಆಗ ಅವರು ಕರೆದು ಮಾತನಾಡಿಸಿದರು. ನಿಮ್ಮನ್ ಸಿನಿಮಾ ನೋಡಿದೆ. ಸಿನಿಮಾ ಚೆನ್ನಾಗಿದೆ ಎಂದು ಅವರು ನನಗೆ ಹೇಳಿದ್ದರು’ ಎಂಬುದಾಗಿ ಸಾಯಿ ಪಲ್ಲವಿ ವಿವರಿಸಿದ್ದರು. ಸಾಯಿ ಪಲ್ಲವಿ ಅವರ ಈ ವಿಡಿಯೋ ಗಮನ ಸೆಳೆಯುತ್ತಿದೆ. ಎಲ್ಲರೂ ಸಾಯಿ ಪಲ್ಲವಿ ಅವರನ್ನು ಹೊಗಳುತ್ತಿದ್ದಾರೆ. ಪುನೀತ್ ಬಗ್ಗೆ ಇಷ್ಟೊಳ್ಳೆಯ ಮಾತನ್ನು ಆಡಿದ ಅವರಿಗೆ ಧನ್ಯವಾದ ಹೇಳಿದ್ದಾರೆ ಸಾಯಿ ಪಲ್ಲವಿ.
ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿದ್ದು, ಅನೇಕರಿಗೆ ಬೇಸರ ಇದೆ. ಈ ವಿಷಯದಲ್ಲಿ ಅಭಿಮಾನಿಗಳಿಗೆ ಯಾವಾಗಲೂ ಬೇಸರ ಇದೆ. ಅವರು ಇದ್ದಿದ್ದರೆ ಹಲವು ಚಿತ್ರಗಳನ್ನು ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈಗ ಬರ್ತ್ಡೇಗೆ ಅವರ ಹೊಸ ಸಿನಿಮಾ ಕೂಡ ರಿಲೀಸ್ ಆಗುವ ಸಾಧ್ಯತೆ ಇದೆ. ಇದಕ್ಕಾಗಿ ಅವರು ಕಾಯುತ್ತಿದ್ದಾರೆ.
ಬೆಂಗಳೂರು, ಮಾರ್ಚ್ 1 3: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಇಂದಿನಿಂದ ಶನಿ ಅಸ್ತಂಗತ, ಯಾವ ರಾಶಿ ಮೇಲೆ ಪರಿಣಾಮ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸೂರ್ಯನಿಗೆ ಹತ್ತಿರ ಬಂದಾಗ ಶನಿ ಗ್ರಹವು ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳುವುದನ್ನು “ಅಸ್ತಂಗತ” ಎಂದು ಕರೆಯಲಾಗುತ್ತದೆ. ಸುಮಾರು 40 ದಿನಗಳ ಈ ಅವಧಿಯಲ್ಲಿ ಶನಿ ಗ್ರಹದ ಪ್ರಭಾವ ಕಡಿಮೆಯಾಗಿರುತ್ತದೆ.
ಈ ಶನಿ ಅಸ್ತಂಗತವು ಭೂಗೋಳದ ಮೇಲೆ ಹಾಗೂ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಜಾಗತಿಕವಾಗಿ ಯುದ್ಧಗಳು, ಗ್ಯಾಸ್ ಸಿಲಿಂಡರ್‌ಗಳ ಕೊರತೆ, ಉದ್ಯೋಗ, ವ್ಯಾಪಾರ, ವ್ಯವಹಾರಗಳಲ್ಲಿ ಬದಲಾವಣೆಗಳು, ಆರೋಗ್ಯ ಸಮಸ್ಯೆಗಳು ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆ ಇದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ಟಾಲಿವುಡ್ ಸ್ಟಾರ್ ಹೀರೋಗಳು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ಗಳನ್ನು ಹೊಂದುತ್ತಿದ್ದಾರೆ. ವಿಜಯ್ ದೇವರಕೊಂಡ, ಮಹೇಶ್ ಬಾಬು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಹೊಂದಿದ್ದಾರೆ. ಈಗ ಅಲ್ಲು ಅರ್ಜುನ್ (Allu Arjun) ಕೂಡ ಈ ಉದ್ಯಮದಲ್ಲಿ ಹೊಸ ಹೆಜ್ಜೆ ಇಟ್ಟಿದ್ದು, ಹೈದರಾಬಾದ್ ಅಲ್ಲಿ ಅಲ್ಲು ಸಿನಿಮಾಸ್ ಆರಂಭಿಸಿದ್ದಾರೆ. ಗುರುವಾರ (ಮಾರ್ಚ್ 12) ಇದರ ಉದ್ಘಾಟನೆ ಆಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಅಲ್ಲು ಅರ್ಜುನ್ ಅವರನ್ನು ಸಿಎಂ ಹೊಗಳಿದ್ದಾರೆ.
‘ಅಲ್ಲು ಅರ್ಜುನ್ ಭವಿಷ್ಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಮಿಂಚಬೇಕು. ತೆಲುಗು ನಟರ ಪ್ರತಿಭೆ ಅಲ್ಲಿಗೂ ತಲುಪಬೇಕು. ಇಲ್ಲಿಯವರೆಗೆ, ನಾವು ನಮ್ಮ ತೆಲುಗು ಸಿನಿಮಾಗಳನ್ನು ಬಾಲಿವುಡ್‌ನೊಂದಿಗೆ ಹೋಲಿಸುತ್ತಿದ್ದುದು ಕಲೆಕ್ಷನ್ ವಿಷಯದಲ್ಲಿ ಮಾತ್ರ’ ಎಂದು ರೇವಂತ್ ರೆಡ್ಡಿ ಹೇಳಿದರು.
ವರ್ಷಗಳು ಕಳೆದಂತೆ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇನ್ನುಮುಂದೆ ಎಲ್ಲಾ ಭಾಷೆಯ ಸಿನಿಮಾಗಳು, ಎಲ್ಲರನ್ನೂ ತಲುಪುತ್ತವೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಕಥೆ ಚೆನ್ನಾಗಿದ್ದರೆ ಯಾವುದೇ ದೇಶದ ಜನ ಇರಲಿ, ಯಾವುದೇ ರಾಜ್ಯದ ಜನ ಇರಲಿ ಸಿನಿಮಾನ ನೋಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
Chief Minister @revanth_anumula opened the doors to the brand-new Allu Cinemas at Kokapet. Surrounded by leaders like @Bhatti_Mallu and the Allu family, the CM spoke about his personal love for movies and the rapid tech evolution in the world of entertainment.
Kokapet just got a… pic.twitter.com/keprCgXWtz
‘ಹಾಲಿವುಡ್‌ನೊಂದಿಗೆ ಟಾಲಿವುಡ್ ಸ್ಪರ್ಧಿಬೇಕೆ ಹೊರತು, ನೆರೆಯ ರಾಜ್ಯಗಳು ಅಥವಾ ಬಾಲಿವುಡ್‌ನೊಂದಿಗೆ ಇನ್ನು ಮುಂದೆ ಸ್ಪರ್ಧಿಸಬಾರದು’ ಎಂದು ಅವರು ಹೇಳಿದ್ದಾರೆ. ಚಿತ್ರರಂಗಕ್ಕೆ ಸಂಪೂರ್ಣ ಬೆಂಬಲ ನೀಡೋದಾಗಿ ಅವರು ಭರವಸೆ ನೀಡಿದ್ದಾರೆ.
ಅಲ್ಲು ಅರ್ಜುನ್ ಅವರು ವಿವಿಧ ಉದ್ಯಮಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ತಮ್ಮದೇ ಕ್ಷೇತ್ರದಲ್ಲೂ ಅವರು ಬಿಸ್ನೆಸ್ ಆರಂಭಿಸಿದ್ದಾರೆ. ಅಲ್ಲು ಸಿನಿಮಾಸ್ ನಿರ್ಮಾಣ ಮಾಡುವ ಮೂಲಕ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಅವರು AA22xA6 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅಟ್ಲೀ ಇದರ ನಿರ್ದೇಶಕ. ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ನಾಯಕಿ.
ಶಿಕ್ಷಣವೆಂಬ ಕನಸಿನ ಬೆನ್ನೇರಿದಾಗ ಅಡ್ಡ ಬರುವ ಕಷ್ಟಗಳೆಲ್ಲಾ ನಗಣ್ಯ, ಹಿಂದಿನ ಕಾಲದವರು ಹೇಳಿದಂತೆ ಮಳೆ ಬರಲಿ, ಹೊಳೆ ಕಟ್ಟಲಿ ಸಾಧಿಸುವ ಛಲ ಬಿಡಬಾರದು. ಹಾಗೆಯೇ ಮಂಡಿಯಲ್ಲಿ ಬಾಲಕನೊಬ್ಬ ತನ್ನ ಕನಸನ್ನು ಸಾಕಾರ ಮಾಡಿಕೊಳ್ಳಲು ಬಸ್ಸಿನ ಹಿಂಭಾಗದಲ್ಲಿ ನೇತಾಡುತ್ತಾ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಒಂದು ಸಣ್ಣ ತಪ್ಪು ಸಂಭವಿಸಿದರೂ, ಸರ್ಕಾರ, ಶಾಲೆ , ಬಸ್ ಚಾಲಕ, ವ್ಯವಸ್ಥೆ ಯಾರು ಹೊಣೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 13, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ದಶಮಿ, ಪೂರ್ವಾಷಾಢ ನಕ್ಷತ್ರ, ವ್ಯತೀಪಾತ ಯೋಗ ಮತ್ತು ವಣಿಜ ಕರಣದ ವಿಶೇಷತೆಗಳನ್ನು ತಿಳಿಸಲಾಗಿದೆ.
ಇಂದು ಸಂಜೆ 7:13 ರಿಂದ ಶನಿ ಗ್ರಹವು 40 ದಿನಗಳ ಕಾಲ ಅಸ್ತಂಗತ ಸ್ಥಿತಿಗೆ ಪ್ರವೇಶಿಸಲಿದೆ. ಏಪ್ರಿಲ್ 22 ರವರೆಗೆ ಈ ಸ್ಥಿತಿ ಮುಂದುವರಿಯಲಿದ್ದು, ಶನಿಯ ಶಕ್ತಿ ಕೊಂಚ ಕಡಿಮೆಯಾಗಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನಸ್ಸು ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಅವಧಿಯಲ್ಲಿ ಶ್ರೀ ಮಹಾಲಕ್ಷ್ಮಿ, ಆಂಜನೇಯ ಸ್ವಾಮಿ, ಮತ್ತು ಮಲ್ಲಿಕಾರ್ಜುನ ಸ್ವಾಮಿಗಳ ರಥೋತ್ಸವಗಳು ನಡೆಯಲಿವೆ. ಡಾ. ಬಸವರಾಜ ಗುರೂಜಿ ಅವರು ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿಗಳಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಸಂಬಂಧಗಳು, ಪ್ರಯಾಣ, ಅದೃಷ್ಟ ಸಂಖ್ಯೆ, ಅದೃಷ್ಟ ಬಣ್ಣ ಮತ್ತು ದೈನಂದಿನ ಜಪ ಮಂತ್ರಗಳ ಕುರಿತು ವಿವರವಾದ ಭವಿಷ್ಯವನ್ನು ನೀಡಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾ ತುಂಬಾನೇ ವೇಗ ಪಡೆದುಕೊಂಡಿದೆ. ಒಂದು ಸಣ್ಣ ಫೋಟೋದಿಂದ ದೊಡ್ಡ ವಿವಾದ ಹಾಗೂ ಗುಲ್ಲು ಹಬ್ಬಿ ಬಿಡುತ್ತದೆ. ಈಗ ನೀನಾ ಗುಪ್ತಾಗೂ (Neena Gupta) ಹಾಗೆಯೇ ಆಗಿದೆ. ಅವರು ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಾಗ, ಹೊಟ್ಟೆ ಹಿಡಿದುಕೊಂಡಿದ್ದರು. ಹೊಟ್ಟೆ ದೊಡ್ಡದಾಗಿ ಕಾಣಿಸುತ್ತಾ ಇತ್ತು. ಈ ಕಾರಣದಿಂದ ಅವರು ಪ್ರೆಗ್ನೆಂಟ್ ಎಂಬ ವಿಷಯ ಹಬ್ಬಿತ್ತು. ಇದಕ್ಕೆ ಉತ್ತರಿಸಿರೋ ಅವರು, ‘ನನಗೆ ಬೇಕಾಗಿರಿದೋ ಇಷ್ಟೇ, ನಿಜ ಜೀವನದ ಬಧಾಯಿ ಹೋ’ ಎಂದಿದ್ದಾರೆ.
‘ಯಾವುದೇ ಖುಷಿ ಸುದ್ದಿ ಇಲ್ಲ. ನಾನು ಪ್ರೆಗ್ನೆಂಟ್ ಅಲ್ಲ. ಅಸಲಿ ವಿಷಯ ಏನೆಂದರೆ ಸೀರೆಯ ಮಟೀರಿಯಲ್ ದಪ್ಪವಾಗಿತ್ತು. ಈ ಕಾರಣಕ್ಕೆ ಹೊಟ್ಟೆ ದಪ್ಪವಾಗಿ ಕಾಣಿಸುತ್ತಿತ್ತು. ಈ ವಯಸ್ಸಿನಲ್ಲಿ ನಾನು ಪ್ರೆಗ್ನೆಂಟ್ ಎಂಬ ವದಂತಿ ಹರಿದಾಡುತ್ತಿರುವುದನ್ನು ಕೇಳುತ್ತಿದ್ದರೆ ಖುಷಿಯಾಗುತ್ತಿದೆ. ನಾವು ಒಂದು ರಾಷ್ಟ್ರವಾಗಿ ವಿಕಸನಗೊಳ್ಳುತ್ತಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ’ ಎಂದಿದ್ದಾರೆ ನೀನಾ.
ನೀನಾ ಗುಪ್ತಾ ಅವರು ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಹೈದರಾಬಾದ್ ರಿಸೆಪ್ಶನ್ ಅಲ್ಲಿ ಭಾಗಿ ಆಗಿದ್ದರು. ಅವರು ಈವೆಂಟ್ಗೆ ಬಂದು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದರು. ಈ ಸಂದರ್ಭದ ವಿಡಿಯೋ ಇದಾಗಿದೆ. ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಯಿತು. ಕೆಲವರು, ನಟಿಗೆ ಬೇಬಿ ಬಂಪ್ ಬಂದಿದೆ ಎಂದೆಲ್ಲ ಹೇಳಿದರು. ಈ ವಿಷಯ ನೀನಾ ಕಿವಿಗೂ ಬಿದ್ದಂತೆ ಇದೆ. ಹೀಗಾಗಿ, ಸ್ಪಷ್ಟನೆ ಕೊಟ್ಟಿದ್ದಾರೆ.
Is this for real? Pregnant at 66!
Seeing news since two days about her pregnancy at the age of 66! Don’t know if it’s real or fake but her tummy doesn’t look normal ! pic.twitter.com/EyX7KWS38s
ನೀನಾ ಗುಪ್ತಾ ಅವರು ವಿವಾಹ ಆಗದೆ ಮಗು ಪಡೆದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. 1980ರಲ್ಲಿ ನೀನಾ ಗುಪ್ತಾ ಅವರು ವೆಸ್ಟ್ ಇಂಡೀಸ್ನ ಅಂದಿನ ಸ್ಟಾರ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಜೊತೆ ರಿಲೇಶನ್ಶಿಪ್ನಲ್ಲಿದ್ದರು. ಇದರಿಂದ ಮಗು ಕೂಡ ಜನಿಸಿತು. ಆದರೆ, ರಿಚರ್ಡ್ ವಿವಾಹ ಆಗಲು ನಿರಾಕರಿಸಿದರು. ಮಗುವನ್ನು ದೂರ ಮಾಡದೇ ನೀನಾ ಸಾಕಲು ನಿರ್ಧರಿಸಿದರು. ಆಗಿನ ಸಮಾಜ ಇದನ್ನು ಅಷ್ಟಾಗಿ ಒಪ್ಪುತ್ತಿರಲಿಲ್ಲ. ಆದರೂ ನೀನಾ ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಮಗುವನ್ನು ಸಾಕಿದರು.
ಬೆಂಗಳೂರು, ಮಾರ್ಚ್ 13: ಒಡಿಶಾದಲ್ಲಿ (Odisha) ನಡೆಯಲಿರುವ ರಾಜ್ಯಸಭಾ ಚುನಾವಣೆಯ (Rajyasabha Election) ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಹೆಚ್ಚಾಗಿರುವ ನಡುವೆ ಕಾಂಗ್ರೆಸ್ (Congress) ತನ್ನ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ರೆಸಾರ್ಟ್ ರಾಜಕೀಯಕ್ಕೆ ಮುಂದಾಗಿದೆ. ಈ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಗುರುವಾರ ರಾತ್ರಿ ಭುವನೇಶ್ವರದಿಂದ ಇಂಡಿಗೋ ವಿಮಾನದ ಮೂಲಕ ಒಡಿಶಾದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಬೆಂಗಳೂರಿಗೆ ಆಗಮಿಸಿದರು. ರಾತ್ರಿ ಸುಮಾರು 11 ಗಂಟೆ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಬಿ) ಬಂದ ಶಾಸಕರನ್ನು ಡಿಕೆ ಶಿವಕುಮಾರ್ ಆಪ್ತರು ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರಿಗೆ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ.
ಈ ತಂಡದಲ್ಲಿ ಶಾಸಕರಾದ ಮಂಗು ಖಿಲಾ, ಅಪ್ಪಲ ಸ್ವಾಮಿ, ರಾಜನ್ ಎಕ್ಕಾ, ಅಶೋಕ್ ಕುಮಾರ್ ಸೇರಿದಂತೆ ಹಲವು ನಾಯಕರು ಇದ್ದಾರೆ. ಜೊತೆಗೆ ಮಾಜಿ ಸಂಸದ ಭಕ್ತ ಚರಣ್ ದಾಸ್ ಹಾಗೂ ಕಾಂಗ್ರೆಸ್ ವಕ್ತಾರ ದುರ್ಗಾ ಪ್ರಸಾದ್ ಪಾಂಡಾ ಸೇರಿ ಒಟ್ಟು ಸುಮಾರು 14 ಮಂದಿ ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಸಭೆ ಚುನಾವಣೆ: ಅಖಾಡಕ್ಕಿಳಿದ ಟ್ರಬಲ್ ಶೂಟರ್ ಡಿಕೆಶಿ
ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನವನ್ನು ತಡೆಯಲು ಈ ತಂತ್ರ ರೂಪಿಸಲಾಗಿದೆ.
ಒಡಿಶಾ ವಿಧಾನಸಭೆ ಬಲಾಬಲ ಹೀಗಿದೆ
147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಡಿ 50 ಸ್ಥಾನಗಳನ್ನು ಹೊಂದಿದ್ದರೆ, ಕಾಂಗ್ರೆಸ್ ಬಳಿ 14 ಶಾಸಕರು ಇದ್ದಾರೆ. ಬಿಜೆಡಿ ಅಧಿಕೃತ ಅಭ್ಯರ್ಥಿಯಾಗಿ ಡಾ. ಸ್ಯಾಂಟ್ರಪ್ಟ್ ಮಿಶ್ರಾ ಅವರನ್ನು ನಾಮನಿರ್ದೇಶನ ಮಾಡಿದೆ ಮತ್ತು ನಾಲ್ಕನೇ ರಾಜ್ಯಸಭಾ ಸ್ಥಾನಕ್ಕೆ ಡಾ. ದತ್ತೇಶ್ವರ್ ಹೋಟಾ ಅವರನ್ನು ಸಾಮಾನ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ, ಕಾಂಗ್ರೆಸ್ ಅವರ ಉಮೇದುವಾರಿಕೆಗೆ ಬೆಂಬಲ ನೀಡಿದೆ. ಮತ್ತೊಂದೆಡೆ, ಆಡಳಿತಾರೂಢ ಬಿಜೆಪಿ 79 ಶಾಸಕರ ಬೆಂಬಲ ಹೊಂದಿದ್ದು, ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೊತೆಗೆ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಸಹ ಬೆಂಬಲ ನೀಡಿದೆ.
ಅಡ್ಡ ಮತದಾನ ನಿರ್ಣಾಯಕವೇಕೆ?
ರಾಜ್ಯಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 30 ಪ್ರಥಮ ಪ್ರಾಶಸ್ತ್ಯದ ಮತಗಳು ಅಗತ್ಯವಿದೆ. ಬಿಜೆಡಿ ತನ್ನ ಅಧಿಕೃತ ಅಭ್ಯರ್ಥಿ ಡಾ. ಸಂತ್ರಪ್ಟ್ ಮಿಶ್ರಾ ಗೆಲುವನ್ನು ಖಚಿತಪಡಿಸಿಕೊಳ್ಳಲು ಅನುಕೂಲಕರ ಸ್ಥಾನದಲ್ಲಿದೆ. ಆದಾಗ್ಯೂ, ಡಾ. ದತ್ತೇಶ್ವರ್ ಹೋಟಾ ಗೆಲುವು ಕಾಂಗ್ರೆಸ್ ಶಾಸಕರ ಬೆಂಬಲವನ್ನು ಅವಲಂಬಿಸಿರುತ್ತದೆ. ಮತ್ತೊಂದೆಡೆ, ಬಿಜೆಪಿ ಬೆಂಬಲಿಸಿರುವ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ, ಎದುರಾಳಿಗಳಿಂದ ಕನಿಷ್ಠ ಎಂಟು ಶಾಸಕರ ಬೆಂಬಲವನ್ನು ಪಡೆದರೆ ಮಾತ್ರ ಗೆಲುವು ಸಾಧಿಸಬಹುದು. ಇದು ಸ್ಪರ್ಧೆಯಲ್ಲಿ ಅಡ್ಡ ಮತದಾನವನ್ನು ನಿರ್ಣಾಯಕ ಅಂಶವಾಗಿಸುತ್ತದೆ.
ಈ ಹಿನ್ನೆಲೆ ಕಾಂಗ್ರೆಸ್ ತನ್ನ ಶಾಸಕರನ್ನು ಒಟ್ಟಿಗೆ ಇರಿಸಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗುವಂತೆ ಮಾಡಲು ಬೆಂಗಳೂರಿಗೆ ಕರೆಸಿಕೊಂಡಿದೆ ಎಂದು ತಿಳಿದುಬಂದಿದೆ. ಇದರಿಂದ ರಾಜ್ಯಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂದು ನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗುವುದು. ಶಾಂತಿಯುತ ಪರಿಹಾರವನ್ನು ಕಂಡುಹಿಡಿಯುವುದು ಮುಖ್ಯ. ವ್ಯಾಪಾರ ಚಟುವಟಿಕೆಗಳು ಸುಗಮವಾಗಿ ನಡೆಯಲಿವೆ. ತಂಡವಾಗಿ ಕೆಲಸ ಮಾಡಿದರೆ ಗೆಲವು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಅಶಿಸ್ತಿನ ಕಾರ್ಯಕ್ಕೆ ಅಪಹಾಸ್ಯ ಮಾಡಬಹುದು. ನೌಕರರನ್ನು ಯೋಗ್ಯ ರೀತಿಯಲ್ಲಿ ಕಂಡುಕೊಂಡು ಬೇಕಾದುದನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ಬಗ್ಗೆ ಯಾರು ಏನೇ ಎಂದರೂ ಸ್ವಭಾವವನ್ನು ಬದಲಿಸಲಾರಿರಿ.
ವೃಷಭ ರಾಶಿ:
ಇಂದು ಸಂಗಾತಿಯು ನಿಮ್ಮ ನಿಜವಾದ ಭಾವನೆಯನ್ನು ಅರ್ಥಮಾಡಿಕೊಳ್ಳಬಹುದು. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಬಯಕೆಗಳಿಗೆ ಅಲ್ಪವಿರಾಮ ಹಾಕಿ. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ಇಂದು ನಿಮ್ಮ ಬಗ್ಗೆಯೇ ನಿಮಗೆ ಅಸಮಾಧಾನವಿರಬಹುದು. ಬರಬೇಕಿದ್ದ ಹಣವು ಬಹಳ ದಿನವಾದರೂ ಬಾರದೇ ಚಿಂತೆಯಾಗುವುದು. ಅದಕ್ಕಾಗಿ ಖರೀದಿಯನ್ನು ಮುಂದೂಡುವಿರಿ.
ಮಿಥುನ ರಾಶಿ:
ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಸಂಗಾತಿಯ ಸಹಕಾರವನ್ನು ಪಡೆಯಬಹುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಪ್ರಯಾಣದ ಅನಿವಾರ್ಯತೆ ಇದ್ದರೆ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಿ. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾಗಿ ತಿಳಿಯಿರಿ. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನ ಮಾಡುವುದು. ಇಂದು ಎಲ್ಲರ ಜೊತೆ ಹೊಂದಾಣಿಕೆಯ ಸ್ವಭಾವವನ್ನು ಬಿಡಬಹುದು.
ಕರ್ಕಾಟಕ ರಾಶಿ:
ಕೆಲವು ಪ್ರಶ್ನೆಗೆ ಮೌನವೂ ಉತ್ತರವಾದೀತು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು. ಅಪವಾದ ಸುತ್ತಿಕೊಂಡು ಕೆಲ ಕಾಲ ಸಂಕಟಪಡುವಿರಿ. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ಇಂದು ನಿಮ್ಮ ಮಾರ್ಗಗಳು ಎಲ್ಲವೂ ಮುಚ್ಚಿದಂತೆ ಅನ್ನಿಸಬಹುದು. ಅವಿವಾಹಿತರು ವಿವಾಹದ ಬಗ್ಗೆ ಚಿಂತೆ ಮಾಡುವರು. ದೈವದ ಮೇಲಿನ ಶ್ರದ್ಧೆಯು ಕಡಿಮೆಯಾಗದು. ಉದ್ಯೋಗದಲ್ಲಿ ಪ್ರಾಮಾಣಿಕರಾಗಿದ್ದರೂ ಅಪವಾದವು ಬರಬಹುದು. ಎಲ್ಲದಕ್ಕೂ ಕೋಪವೊಂದೇ ಪರಿಹಾರವಾಗದು.
ಸಿಂಹ ರಾಶಿ:
ಇಂದು ನಿಮ್ಮ ಉತ್ಪಾದನೆ ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ನಕಾರಾತ್ಮಕ ಚಟುವಟಿಕೆಯನ್ನು ಕೋಪದ ಬದಲು ಶಾಂತವಾಗಿ ಪರಿಹರಿಸಲು ಪ್ರಯತ್ನಿಸಿ. ಪಾಲುದಾರಿಕೆ ವ್ಯವಹಾರವು ಯಶಸ್ವಿಯಾಗಬಹುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ಕಾರ್ಯದ ಒತ್ತಡ ಹೆಚ್ಚಿರುವುದು.
ಕನ್ಯಾ ರಾಶಿ:
ಒತ್ತಡದ ಕಾರಣದ ದೈನಂದಿನ ಕ್ರಿಯೆಯಲ್ಲಿ ಅಸ್ತವ್ಯಸ್ತತೆ. ಉದ್ಯೋಗದಲ್ಲಿ ರಾಜಕೀಯ ಪ್ರವೇಶ ಮಾಡಲಿದೆ. ವಿವಾಹ ಸಂಬಂಧವನ್ನು ಚೆನ್ನಾಗಿ ಇಡುವ ಯೋಚಿಸಿ. ಜವಾಬ್ದಾರಿಯ ಮಾತುಗಳಿಂದ ಅಚ್ಚರಿಯಾದೀತು. ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ.
ತುಲಾ ರಾಶಿ:
ಸಂಬಂಧದಲ್ಲಿ ಸ್ನೇಹಭಾವವನ್ನು ಕಾಪಾಡಿಕೊಳ್ಳಿ. ಕೆಲವು ಕಾರಣಗಳಿಗಾಗಿ ನೀವು ವ್ಯಾಪಾರದ ಮೇಲೆ ಗಮನ ಆಗದು. ಅತಿಯಾದ ಕೆಲಸದ ಕಾರಣದಿಂದಾಗಿ ಸಂಗಾತಿಯ ಜೊತೆ ಸಮಯವನ್ನು ನೀಡಲು ಸಾಧ್ಯವಾಗದು. ಚರಾಸ್ತಿಯು ಅನ್ಯರ ಪಾಲಾಗಬಹುದು. ಇಂದು ಪುರುಷ ಪ್ರಯತ್ನವು ಹೆಚ್ಚಿರಬೇಕಾಗುವುದು. ತಪ್ಪನ್ನು ಸಮರ್ಥಿಸಿ ಒಪ್ಪಿಕೊಳ್ಳುವುದು ಬೇಡ. ಇನ್ನೊಬ್ಬರಿಗೆ ನೋವಾದೀತು. ಹೇಳಬೇಕಾದ್ದನ್ನು ಹೇಳದೇ ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ.
ವೃಶ್ಚಿಕ ರಾಶಿ:
ಕೃಷಿಯ ವ್ಯಾಪಾರದಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ ಸಹಕಾರವು ನಿಮಗೆ ಸಿಗಲಿದೆ. ಖಾಸಗಿ ಸಂಸ್ಥೆಯು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸಬಹುದು. ವಿದೇಶೀಯ ಹಣವನ್ನು ಪಡೆದುಕೊಳ್ಳುವಾಗ ಎಚ್ಚರ. ವಹಿಸಿಕೊಂಡ ಕಾಮಗಾರಿಯನ್ನು ಮುಗಿಸುವಿರಿ.
ಧನು ರಾಶಿ:
ನಿಮ್ಮ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಹುದು. ಅಂತಹ ಜನರ ಸಂಪರ್ಕವನ್ನು ಮಾಡದಿರುವುದು ಉತ್ತಮ. ಆಸ್ತಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಕಬ್ಬಿಣ ಮುಂತಾದ ವ್ಯಾಪಾರವನ್ನು ಮಾಡುವವರಿಗೆ ಆದಾಯವು ಹೆಚ್ಚಾಗುವುದು. ಹಲವು ದಿನಗಳ ನಿಮ್ಮ ಋಣವು ಮುಕ್ತಾಯವಾಗಿದ್ದು ಸಂತಸದ ವಿಚಾರವಾಗಿದೆ. ಸಣ್ಣ ವ್ಯಾಪರಿಗಳಿಗೆ ಉತ್ತಮ ಲಾಭವಿರಲುದೆ. ಇಂದು ನಿಮ್ಮ ಕಾರ್ಯಗಳನ್ನು ಇನ್ನೊಬ್ಬರು ಮಾಡಬಹುದು.
ಮಕರ ರಾಶಿ:
ಇಂದು ವ್ಯಾಪಾರದಲ್ಲಿ ಹೆಚ್ಚಿನ ತೊಡಗಿಸಿಕೊಳ್ಳುವಿರಿ. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ. ತಂದೆ ಹಾಗೂ ತಾಯಿಯರ ಜೊತೆ ಬಹಳ ದಿನಗಳ ಅನಂತರ ಹರಟೆ ಹೊಡೆಯುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಕ್ಕಳ ಜೊತೆ ಮಾಡುವಿರಿ.
ಕುಂಭ ರಾಶಿ:
ಚಂಚಲವಾದ ಸಮಯದಲ್ಲಿ ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಕುಟುಂಬದ ಬಗ್ಗೆ ಹೆಚ್ಚು ಗಮನ ಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ ನಿಮ್ಮ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಬರಬಹುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು. ಸ್ನೇಹಿತರಿಗೋಸ್ಕರ ನೀವು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ ವಸ್ತುಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ.
ಮೀನ ರಾಶಿ:
ವ್ಯಾಪಾರ ಚಟುವಟಿಕೆಗಳನ್ನು ಸುಧಾರಿಸಬಹುದು. ಹಿರಿಯರ ವಿಚಾರಕ್ಕೆ ದಾಂಪತ್ಯದ ನಡುವೆ ಕೆಲವು ವಿವಾದಗಳು ಉಂಟಾಗಬಹುದು. ಶತ್ರುಗಳು ಅನ್ಯ ಕಾರ್ಯದಲ್ಲಿ ತೊಡಗಿರುವ ಕಾರಣ ನಿಮಗೆ ಬಾಧೆ ಇರದು. ಇಂದು ನಿಮಗೆ ಕೆಲಸವು ಆಗಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗುವುದು. ಒಂದೇ ಸಾರಿ ಖರ್ಚಿನ ಎಲ್ಲ ಅವಕಾಶಗಳನ್ನು ಇಟ್ಟುಕೊಳ್ಳಬೇಡಿ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರವುದು. ಬಂಧುಗಳ ಮನೊಲಿಸುವುದು ವ್ಯರ್ಥವೆನಿಸಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ವಣಿಜ, ಸೂರ್ಯೋದಯ – 06 – 34 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:44 – 12:34, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:04 – 09:34