ನೀಟ್-ಯುಜಿ ಪೇಪರ್ ಲೀಕ್ ಹಗರಣ: ಸಿಬಿಐ ತನಿಖೆಯಲ್ಲಿ ಬಿಗ್ ಟ್ವಿಸ್ಟ್; ಬ್ಯೂಟಿಷಿಯನ್ ಬಿಚ್ಚಿಟ್ಟ ಸ್ಫೋಟಕ ರಹಸ್ಯವೇನು? – Kannada News | NEET UG Paper Leak Case: CBI Probe Points to Key Role of Beautician
ಪುಣೆ, ಮೇ 18: ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ(NEET – UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಬೆಚ್ಚಿಬೀಳಿಸುವ ಮಾಹಿತಿಗಳು ಲಭ್ಯವಾಗಿವೆ. ಪುಣೆಯ 46 ವರ್ಷದ ಬ್ಯೂಟಿಷಿಯನ್ ಒಬ್ಬರು ಈ ಇಡೀ ಜಾಲದ “ಪ್ರಮುಖ ಕೊಂಡಿ”ಯಾಗಿ ಕೆಲಸ ಮಾಡಿರುವುದು ಪತ್ತೆಯಾಗಿದೆ. ಈ ಮೂಲಕ ಪರೀಕ್ಷಾ ಮಂಡಳಿಯ (NTA) ಉನ್ನತ ಮಟ್ಟದ ಅಧಿಕಾರಿಯೇ ಈ ಸೋರಿಕೆಯ ಮಾಸ್ಟರ್‌ಮೈಂಡ್ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ. ಎನ್‌ಟಿಎ (NTA) ಸಮಿತಿಯ ತಜ್ಞೆಯೇ ಸೂತ್ರಧಾರಿ ನ್ಯಾಷನಲ್ ಟೆಸ್ಟಿಂಗ್…