All posts by nagaraj11081993

ಅತಿಯಾಗಿ ಯೋಚಿಸುವವರಲ್ಲಿ ನೀವು ಒಬ್ಬರಾ? ಇದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತಾ?

ಅತಿಯಾಗಿ ಯೋಚಿಸುವವರಲ್ಲಿ ನೀವು ಒಬ್ಬರಾ? ಇದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತಾ?

ಇತ್ತೀಚಿನ ದಿನಗಳಲ್ಲಿ, ಅತಿಯಾಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಕೂಡ ಕಂಡುಬರುತ್ತಿದೆ. ಕೆಲಸದ ಒತ್ತಡ (Stress), ಭವಿಷ್ಯದ ಬಗ್ಗೆ ಚಿಂತೆ, ಕುಟುಂಬದ ಜವಾಬ್ದಾರಿಗಳು ಮತ್ತು ದೈನಂದಿನ ಸಮಸ್ಯೆಗಳು ಜನರನ್ನು ಅಗತ್ಯಕ್ಕಿಂತ ಹೆಚ್ಚು ಯೋಚಿಸುವಂತೆ ಮಾಡುತ್ತಿದೆ. ಸಣ್ಣ ಪುಟ್ಟ ವಿಷಯಗಳನ್ನು ಕೂಡ ಬಹಳ ಸಮಯದ ವರೆಗೆ ಯೋಚಿಸುವುದರಿಂದ ಮೆದುಳಿಗೆ ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿ ಸಿಗುವುದಿಲ್ಲ. ಕ್ರಮೇಣ, ಈ ಅಭ್ಯಾಸವು ವ್ಯಕ್ತಿಯ ದೈನಂದಿನ ದಿನಚರಿಯ ಭಾಗವಾಗಿ ಆರೋಗ್ಯವನ್ನು ಹಾಳು ಮಾಡಬಹುದು. ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ನಿರಂತರವಾಗಿ ಯೋಚಿಸುವುದು ಮನಸ್ಸಿನ ಮೇಲೆ ಮಾತ್ರವಲ್ಲದೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ನೀವು ಅತಿಯಾಗಿ ಯೋಚನೆ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ, ಇದನ್ನು ನಿಯಂತ್ರಿಸಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ದೆಹಲಿ ನಗರದ ನ್ಯೂರಾಲಜಿಸ್ಟ್ ಡಾ. ರಾಜೇಶ್ ಕುಮಾರ್ ಅವರ ಪ್ರಕಾರ, ಅತಿಯಾಗಿ ಯೋಚಿಸುವುದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದು ನಿರಂತರವಾಗಿ ಮುಂದುವರೆದರೆ ದೇಹದಲ್ಲಿ ಹಾರ್ಮೋನ್ ಸಮತೋಲನದ ಮೇಲೂ ಪರಿಣಾಮ ಬೀಳಬಹುದು. ಪರಿಣಾಮವಾಗಿ ತಲೆನೋವು, ದಣಿವು ಮತ್ತು ದುರ್ಬಲತೆ ಕಾಣಿಸಬಹುದು. ಕೆಲವರಿಗೆ ನಿದ್ರೆಯ ಸಮಸ್ಯೆಗಳೂ ಕೂಡ ಉಂಟಾಗಬಹುದು. ಉದಾಹರಣೆಗೆ ತಡವಾಗಿ ನಿದ್ರೆ ಬರುವುದು ಅಥವಾ ಮಧ್ಯರಾತ್ರಿ ಹಲವು ಬಾರಿ ಎಚ್ಚರವಾಗುವುದು. ಅಷ್ಟೇ ಅಲ್ಲ, ಹೆಚ್ಚಾಗಿ ಯೋಚಿಸುವ ಅಭ್ಯಾಸದಿಂದ ವ್ಯಕ್ತಿಯ ಗಮನ ಕೆಲಸ ಅಥವಾ ಓದಿನ ಕಡೆಗೆ ಕಡಿಮೆಯಾಗಬಹುದು. ಜೊತೆಗೆ ಕೆಲವರಲ್ಲಿ ಅಶಾಂತಿ, ಆತಂಕ ಮತ್ತು ಚಿಡಿಚಿಡಿಯಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಕಾಲದ ಒತ್ತಡದಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ಕೂಡ ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ಮಾನಸಿಕವಾಗಿ ದಣಿಯಬಹುದು ಮತ್ತು ದೈನಂದಿನ ಕೆಲಸಗಳನ್ನೂ ಮಾಡಲು ಕಷ್ಟವಾಗಬಹುದು.

ಇದನ್ನೂ ಓದಿ: ಒತ್ತಡದಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ? ತಿಳಿದ್ರೆ ಶಾಕ್ ಆಗ್ತೀರಾ!

ಲಕ್ಷಣಗಳು ಹೇಗಿರುತ್ತವೆ?

ಹೆಚ್ಚಾಗಿ ಯೋಚಿಸುವವರಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ. ಅವುಗಳಲ್ಲಿ ಸಣ್ಣ ವಿಷಯಗಳಿಗೂ ಹೆಚ್ಚು ಚಿಂತೆ ಮಾಡುವುದು, ಮನಸ್ಸನ್ನು ಶಾಂತವಾಗಿಡಲು ಕಷ್ಟವಾಗುವುದು, ರಾತ್ರಿ ಸರಿಯಾಗಿ ನಿದ್ರೆ ಬರದಿರುವುದು ಅಥವಾ ನಿದ್ರೆ ಮಧ್ಯದಲ್ಲಿ ಪದೇ ಪದೇ ಎಚ್ಚರವಾಗುವುದು ಸೇರಿದಂತೆ ನಾನಾ ರೀತಿಯ ಲಕ್ಷಣಗಳು ಕಂಡುಬರಬಹುದು. ಜೊತೆಗೆ ದಣಿವು, ಕೆಲಸದ ಮೇಲೆ ಗಮನ ಕೊಡಲು ಸಾಧ್ಯವಾಗದಿರುವುದು ಮತ್ತು ನಿರಂತರ ಚಿಂತೆ ಕೂಡ ಅನುಭವಕ್ಕೆ ಬರಬಹುದು.

ಹೇಗೆ ನಿಯಂತ್ರಿಸಬಹುದು?

ಹೆಚ್ಚಾಗಿ ಯೋಚಿಸುವ ಅಭ್ಯಾಸವನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಸಹಾಯಕ. ನಿಯಮಿತ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರಲು ಸಹಾಯವಾಗುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಮತ್ತು ಸಮತೋಲನಯುತ ದಿನಚರಿಯನ್ನು ಪಾಲಿಸುವುದು ಕೂಡ ಮುಖ್ಯ. ಒತ್ತಡ ಅಥವಾ ಆತಂಕ ದೀರ್ಘಕಾಲ ಮುಂದುವರೆದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊನಾಲಿಸಾ ಮದುವೆ ಆದ ಮೊಹಮ್ಮದ್ ಫರ್ಮಾನ್ ಯಾರು? ಲವ್ ಆಗಿದ್ದು ಹೇಗೆ?

ಕುಂಬಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ (Monalisa Bhosle) ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇಂಟರ್​ನೆಟ್​​ನಲ್ಲಿ ಅವರು ಆ ಪರಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಈಗ ಅವರ ಮದುವೆಯ (Monalisa Bhosle Marriage) ವಿಷಯ ಸಖತ್ ಚರ್ಚೆ ಆಗುತ್ತಿದೆ. ಯಾವುದೇ ಸೂಚನೆ ನೀಡಿದೇ ಸಡನ್ ಆಗಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಮೊಹಮ್ಮದ್ ಫರ್ಮಾನ್ ಜೊತೆ ಮೊನಾಲಿಸಾ ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅಷ್ಟಕ್ಕೂ ಈ ಮೊಹಮ್ಮದ್ ಫರ್ಮಾನ್ (Muhammad Farman) ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ರುದ್ರಾಕ್ಷಿ ಮಾಲೆ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಮೊನಾಲಿಸಾ ಭೋಸ್ಲೆ ಅವರಿಗೆ ಚಿತ್ರರಂಗದಿಂದ ಅವಕಾಶ ಸಿಕ್ಕಿದ್ದು ಗೊತ್ತೇ ಇದೆ. ನಟಿಯಾಗಿ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡಿದ ಬಳಿಕ ಅವರಿಗೆ ಮೊಹಮ್ಮದ್ ಫರ್ಮಾನ್ ಪರಿಚಯ ಆಯಿತು. ಮೊಹಮ್ಮದ್ ಫರ್ಮಾನ್ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ವ್ಯಕ್ತಿ. ಅವರು ನಟನಾಗಿ ಮತ್ತು ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಉತ್ತರ ಪ್ರದೇಶ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

ಮೊಹಮ್ಮದ್ ಫರ್ಮಾನ್ ಮತ್ತು ಮೊನಾಲಿಸಾ ಭೋಸ್ಲೆ ನಡುವೆ ಪರಿಚಯ ಬೆಳೆದಿದ್ದು ಸೋಶಿಯಲ್ ಮೀಡಿಯಾ ಮೂಲಕ. ನಂತರ ಅವರು ಶೂಟಿಂಗ್ ಸೆಟ್​​ನಲ್ಲಿ ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಬೆಳೆಯಿತು. 6 ತಿಂಗಳ ಕಾಲ ಡೇಟಿಂಗ್ ಮಾಡಿದ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. ಬೇರೆ ಬೇರೆ ಧರ್ಮದವರಾದ ಕಾರಣ ಅವರ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಅವರು ಮದುವೆ ಆಗಿದ್ದಾರೆ.

ವಿಶೇಷ ಏನೆಂದರೆ, ಮೊಹಮ್ಮದ್ ಫರ್ಮಾನ್​​ಗೆ ಮೊದಲು ಪ್ರೊಪೋಸ್ ಮಾಡಿದ್ದೇ ಮೊನಾಲಿಸಾ ಭೋಸ್ಲೆ! ಮದುವೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಮೊನಾಲಿನಾ ಪ್ರೊಪೋಸ್ ಮಾಡಿದಳು. ನಾನು ಮೊದಲು ಒಪ್ಪಿಕೊಳ್ಳಲಿಲ್ಲ. ಆಮೇಲೆ ಆಕೆ ನನ್ನ ಮನವೊಲಿಸಿದಳು’ ಎಂದು ಮೊಹಮ್ಮದ್ ಫರ್ಮಾನ್ ಹೇಳಿದ್ದಾರೆ.

ಇದನ್ನೂ ಓದಿ: ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ ಮೊನಾಲಿಸಾ

ಕಳೆದ 6 ತಿಂಗಳಿಂದ ಮೊನಾಲಿಸಾ ಹಾಗೂ ಮೊಹಮ್ಮದ್ ಫರ್ಮಾನ್ ಪ್ರೀತಿಸುತ್ತಿದ್ದರು. ಅದರ ಬಗ್ಗೆ ಫರ್ಮಾನ್ ಮಾತನಾಡಿದ್ದಾರೆ. ‘ಈ ಆರು ತಿಂಗಳುಗಳು ನಮಗೆ 60 ವರ್ಷದ ಪ್ರೀತಿಯ ಹಾಗೆ ಅನಿಸಿತು. ಆದಕ್ಕಾಗಿಯೇ ನಾವು ಮದುವೆ ಆಗಲು ನಿರ್ಧರಿಸಿದೆವು’ ಎಂದು ಅವರು ಹೇಳಿದ್ದಾರೆ. ಕೇರಳದ ದೇವಸ್ಥಾನವೊಂದರಲ್ಲಿ ಹಿಂದೂ ಧರ್ಮದ ಪ್ರಕಾರ ಈ ಮದುವೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಉಳಿದ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಯಾವಾಗ ಪ್ರಕಟ?

Source link

ಬಸ್ನಲ್ಲಿ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ, ಊಟಕ್ಕೆ ನಿಲ್ಲಿಸಿದಾಗ ಕೃತ್ಯ

ಕೊಪ್ಪಳ (ಮಾರ್ಚ್ 12): ಮಂತ್ರಾಲಯದಿಂದ (Mantralaya) ಮಂಗಳೂರಿಗೆ (Mangaluru) ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಲ್ಲಿ (Sleeper Coach Bus) 90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣವಿದ್ದ (gold And diamond) ಬ್ಯಾಗ್ ದರೋಡೆಯಾಗಿದೆ. ಕೊಪ್ಪಳ (Koppal) ಹೊರಹೊಲಯದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಿದಾಗ ಮಂಗಳೂರಿನ ಮೊಹಮ್ಮದ್, ಇರ್ಷಾದ್​ ಎಂಬುವರಿಗೆ ಸೇರಿದ ಚಿನ್ನ, ವಜ್ರಾಭರಣವಿದ್ದ ಚೀಲವನ್ನು ಕದ್ದು ಪರಾರಿಯಾಗಿದ್ದಾರೆ. ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕನೋರ್ವ ಚಿನ್ನ ಬ್ಯಾಗ್​ ಹಿಡಿದು ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಪೊಲೀಸರು ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಸ್ ಊಟಕ್ಕೆ ನಿಲ್ಲಿಸಿದಾಗ ಕೃತ್ಯ

ಈ ದರೋಡೆ ಘಟನೆ ಕೊಪ್ಪಳ ಹೊರವಲಯದಲ್ಲಿರುವ Tawa Punjab Hotel ಮುಂಭಾಗದಲ್ಲಿ ನಡೆದಿದೆ. ಮಂತ್ರಾಲಯದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್, ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡ ತವ ಪಂಜಾಬ್ ಹೊಟೇಲ್​​ ಬಳಿ ನಿಲ್ಲಿಸಿದೆ. ಆ ವೇಳೆ ಬಸ್‌ನಲ್ಲೇ ಮಲಗಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬ ಪ್ರಯಾಣಿಕರ ಬಳಿಯಿದ್ದ ಬಂಗಾರದ ಚೀಲವನ್ನು ಖದೀಮ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಇದನ್ನೂ ಓದಿ: KSRTC ಬಸ್​​ನಲ್ಲಿದ್ದ ಅರ್ಧ ಕೋಟಿ ಹಣ ಕಳವು: ಸಿನೆಮಾ ಸ್ಟೈಲ್​ನಲ್ಲಿ ಆರೋಪಿ ಅರೆಸ್ಟ್​​

ಪ್ರಾಥಮಿಕ ತನಿಖೆಯ ಪ್ರಕಾರ, ಈ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಸಿಂಧನೂರಿನಿಂದ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸಿ ಕೊಪ್ಪಳಕ್ಕೆ ಬಂದಿದ್ದಾನೆ. ಅದೇ ವೇಳೆ ಇನ್ನೂ ಮೂವರು ಖದೀಮರು ಬೇರೆ ವಾಹನದಲ್ಲಿ ಬಸ್‌ನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಒಟ್ಟು ನಾಲ್ವರು ಸೇರಿಕೊಂಡು ಈ ದರೋಡೆ ಕೃತ್ಯವನ್ನು ಸಂಚು ರೂಪಿಸಿ ನಡೆಸಿದ್ದಾರೆ.

ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಹೋಟೆಲ್ ಮುಂಭಾಗದಲ್ಲಿದ್ದ ಸಿಸಿ ಕ್ಯಾಮರದಲ್ಲಿ ಈ ದರೋಡೆ ಕೃತ್ಯದ ಸಂಪೂರ್ಣ ದೃಶ್ಯ ದಾಖಲಾಗಿದ್ದು, ಆರೋಪಿಗಳು ಹೇಗೆ ಬಸ್‌ಗೆ ಹತ್ತಿ ಬಂಗಾರದ ಚೀಲವನ್ನು ಕದ್ದುಕೊಂಡು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅವರದ್ದೇ ಆಗ ಸಿಗ್ನಲ್‌ಗಳು ಒಬ್ಬೊಬ್ಬರಂತೆ ಬಂದು ಕಾಯುತ್ತಿರುವುದು ಕಂಡುಬಂದಿದೆ. ಈ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಬಸ್ ಪ್ರಯಾಣಿಕರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದರೋಡೆ ನಡೆಸಿದ ನಾಲ್ವರು ಖದೀಮರು ಯಾವ ದಿಕ್ಕಿಗೆ ಪರಾರಿಯಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ನಾಲ್ವರು ಸೇರಿಕೊಂಡು ದರೋಡೆ

ಖದೀಮರ ಪೈಕಿ ಓರ್ವ ಅದೇ ಬಸ್​​ನಲ್ಲಿ ಇದ್ದರೆ ಇನ್ನುಳಿದ ದರೋಡೆಕೋರರು ಬೊಲೆರೋ ವಾಹನದಲ್ಲಿ ಬಸ್ ಹಿಂಬಾಲಿಸಿಕೊಂಡು ಬಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಮ್ಮದ್ ಮತ್ತು ಇರ್ಷಾದ್ ಚಿನ್ನಾಭರಣದ ಚೀಲವನ್ನು ಎಲ್ಲಿಂದ ತಂದಿದ್ದಾರೆ ಎನ್ನುವುದನ್ನು ಮೊದಲೇ ನೋಡಿದ್ದಾರೆ. ಹೀಗಾಗಿ ಅವರು ಇದ್ದ ಬಸ್ ಫಾಲೋ ಮಾಡಿಕೊಂಡು ಬಂದಿದ್ದು, ಬಳಿಕ ಸಿಂಧನೂರಿನಲ್ಲಿ ಓರ್ವ ಖದೀಮ ಬಸ್ ಏರಿದ್ದು, ಇನ್ನುಳಿದವರು ಬಸ್ ಫಾಲೋ ಮಾಡಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ. ಇನ್ನು ಮಂತ್ರಾಲಯದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಮ್ಮದ್ ಮತ್ತು ಇರ್ಷಾದ್ ಎಂಬವರು ಚಿನ್ನದ ಚೀಲದ ಮೇಲೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಇಷ್ಟೊಂದು ಮೌಲ್ಯದ ಚಿನ್ನ, ವಜ್ರಾಭರಣವನ್ನು ಎಲ್ಲಿಂದ ತೆಗೆದುಕೊಂಡು ಹೋಗುತ್ತಿದ್ದರು? ಅಸಲಿಗೆ ಮಾಲು ಯಾರಿಗೆ ಸೇರಿದ್ದು ಎಂದು ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಾರಾಷ್ಟ್ರದ ವರ್ಷದ 3 ದಿನ ಈ ಗ್ರಾಮದಲ್ಲಿ ಆತ್ಮಗಳ ದರ್ಬಾರ್, ಮನುಷ್ಯರಿಗೆ ಪ್ರವೇಶವಿಲ್ಲ!

ಮುಂಬೈ, ಮಾರ್ಚ್ 12: ಭಾರತವು ಅಗಾಧವಾದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ದೇಶ. ಈ ದೇಶದಲ್ಲಿ ಕೆಲವು ಹಳ್ಳಿಗಳಿಗೆ ವಿಶಿಷ್ಟ ಇತಿಹಾಸವಿದೆ. ಕೆಲವು ಹಳ್ಳಿಗಳು ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿವೆ. ಈ ಸಂಪ್ರದಾಯಗಳು ಶತಮಾನಗಳಿಂದ ನಡೆದುಕೊಂಡು ಬರುತ್ತಿವೆ. ಈ ಶತಮಾನದಲ್ಲಿಯೂ ಜನರು ಈ ಸಂಪ್ರದಾಯಗಳನ್ನು ಅದೇ ಭಕ್ತಿಯಿಂದ ಅನುಸರಿಸುತ್ತಾರೆ. ಮಹಾರಾಷ್ಟ್ರದ (Maharashtra) ಹಳ್ಳಿಯೊಂದರಲ್ಲಿ ಮೂರು ದಿನ ಇಡೀ ಗ್ರಾಮಕ್ಕೆ ಗ್ರಾಮವೇ ಊರನ್ನು ಖಾಲಿ ಮಾಡುತ್ತದೆ. ಈ 3 ದಿನಗಳು ಇಲ್ಲಿ ದೆವ್ವಗಳು ವಾಸ ಮಾಡುತ್ತವೆ ಎಂಬ ನಂಬಿಕೆಯಿದೆ.

ಮಹಾರಾಷ್ಟ್ರದಲ್ಲಿರುವ ಈ ಗ್ರಾಮದ ಹೆಸರು ಚಿಂದಾರ್. ಈ ಗ್ರಾಮದ ವಿಶೇಷತೆಯೆಂದರೆ ವರ್ಷದಲ್ಲಿ ಮೂರು ದಿನಗಳ ಕಾಲ ಈ ಗ್ರಾಮದ ಎಲ್ಲಾ ಗ್ರಾಮಸ್ಥರು ಊರು ಬಿಟ್ಟು ಹೋಗುತ್ತಾರೆ. ಯಾರೂ ಈ ಗ್ರಾಮದಲ್ಲಿ ಉಳಿಯುವುದಿಲ್ಲ. ಈ ಪದ್ಧತಿಯನ್ನು ಅಲ್ಲಿ ಗ್ರಾಮ ನಿರ್ವಹಣೆ ಎಂದೂ ಕರೆಯುತ್ತಾರೆ. ಈ ಗ್ರಾಮದಲ್ಲಿ ಮೂರು ದಿನಗಳ ಕಾಲ ಎಲ್ಲಾ ಜನರು ಗ್ರಾಮವನ್ನು ಬಿಟ್ಟು ಬೇರೆಡೆ ವಾಸಿಸುತ್ತಾರೆ. ಎಲ್ಲಾ ಅಂಗಡಿಗಳು, ಮನೆಗಳು, ಎಲ್ಲವೂ ಮುಚ್ಚಲ್ಪಟ್ಟಿರುತ್ತವೆ. ಈ ಸಮಯದಲ್ಲಿ ಈ ಗ್ರಾಮದಲ್ಲಿ ನಾಯಿಗಳು ಸಹ ಕಾಣುವುದಿಲ್ಲ.

ಇದನ್ನೂ ಓದಿ: ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ

ಈ ಮೂರು ದಿನಗಳ ಕಾಲ ದೇವರು ಮತ್ತು ಆತ್ಮಗಳು ಈ ಗ್ರಾಮದಲ್ಲಿ ವಾಸಿಸುತ್ತವೆ ಎಂದು ಗ್ರಾಮಸ್ಥರು ನಂಬುತ್ತಾರೆ. ಈ ಅವಧಿಯಲ್ಲಿ, ಕೆಲವು ದೈವಿಕ ಶಕ್ತಿಗಳು ಈ ಗ್ರಾಮದಲ್ಲಿ ವಾಸಿಸುತ್ತವೆ ಎಂಬ ನಂಬಿಕೆಯಿದೆ. ಈ ಅವಧಿಯಲ್ಲಿ, ದೇವರುಗಳು ಮತ್ತು ಈ ಆತ್ಮಗಳು ಶಾಂತಿಯಿಂದ ಬದುಕಲು ಎಲ್ಲರೂ ಈ ಗ್ರಾಮವನ್ನು ತೊರೆಯುತ್ತಾರೆ.

ಈ ಸಂಪ್ರದಾಯ ಪ್ರಾರಂಭವಾದಾಗ, ಗ್ರಾಮಸ್ಥರು ತಮ್ಮ ಎಲ್ಲಾ ಅಗತ್ಯ ವಸ್ತುಗಳು, ಪ್ರಾಣಿಗಳು ಮತ್ತು ಆಹಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಗ್ರಾಮದ ಹೊರಗೆ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸುತ್ತಾರೆ. ಈ ಮೂರು ದಿನಗಳನ್ನು ಭಯಾನಕವೆಂದು ಪರಿಗಣಿಸಲಾಗುತ್ತದೆ. ಈ ಹಳ್ಳಿಯ ಎಲ್ಲಾ ಮನೆಗಳು ಮುಚ್ಚಲ್ಪಟ್ಟಿರುತ್ತವೆ, ತೆಂಗಿನ ಗರಿಗಳನ್ನು ಬಾಗಿಲುಗಳ ಮೇಲೆ ಇಡಲಾಗುತ್ತದೆ. ಬೀದಿಗಳು ಮತ್ತು ದೇವಾಲಯಗಳು ನಿರ್ಜನವಾಗಿರುತ್ತವೆ. ಈ ಮೂರು ದಿನಗಳಲ್ಲಿ ಗ್ರಾಮದಲ್ಲಿ ಯಾವುದೇ ಮನುಷ್ಯರು ವಾಸಿಸುವುದಿಲ್ಲ. ಇದು ದೈವ ಹಾಗೂ ದೆವ್ವಗಳ ಸಮಯ ಎಂದು ಜನರು ಹೇಳುತ್ತಾರೆ.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ! ಮಹಾರಾಷ್ಟ್ರ, ಗೋವಾದಿಂದಲೂ ಬಂದ ಲಕ್ಷಾಂತರ ಭಕ್ತರು

ಮೂರು ದಿನಗಳ ನಂತರ, ಗ್ರಾಮದ ಅರ್ಚಕರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದೇವರ ಅನುಮತಿ ಪಡೆದು ಗ್ರಾಮಕ್ಕೆ ಹಿಂತಿರುಗುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ದೇವ್-ಪಾಲನ್ ಎಂದೂ ಕರೆಯುತ್ತಾರೆ. ಇದು ಕೇವಲ ಒಂದು ಸಂಪ್ರದಾಯವಲ್ಲ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಕೂಡ ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Indian Navy Recruitment: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುವ ಕನಸು ಕಾಣುತ್ತಿರುವ ದೇಶದ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶ. ನೌಕಾಪಡೆಯು 2027ನೇ ಸಾಲಿನ ‘ಅಗ್ನಿವೀರ್’ ಯೋಜನೆಯಡಿ ಅಗ್ನಿವೀರ್ SSR, ಅಗ್ನಿವೀರ್ MR ಮತ್ತು SSR (ವೈದ್ಯಕೀಯ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಮಾರ್ಚ್ 14 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 6 ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಏಪ್ರಿಲ್ 10 ಮತ್ತು 11 ರಂದು ಅರ್ಜಿ ತಿದ್ದುಪಡಿ ವಿಂಡೋವನ್ನು ಸಹ ತೆರೆಯಲಾಗುತ್ತದೆ, ಇದು ಯಾವುದೇ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಗಳು ಹುದ್ದೆಗೆ ಅನುಗುಣವಾಗಿ ಬದಲಾಗುತ್ತವೆ. ಅಗ್ನಿವೀರ್ MR ಹುದ್ದೆಗೆ 10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಗ್ನಿವೀರ್ SSR ಹುದ್ದೆಗೆ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ 12ನೇ ತರಗತಿ ಪೂರ್ಣಗೊಳಿಸಿರಬೇಕು ಅಥವಾ ಡಿಪ್ಲೊಮಾ ಹೊಂದಿರಬೇಕು. ಇನ್ನು SSR (ವೈದ್ಯಕೀಯ) ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು. ಲಿಖಿತ ಪರೀಕ್ಷೆಯು ತಾತ್ಕಾಲಿಕವಾಗಿ ಮೇ 2026 ರಲ್ಲಿ ನಡೆಯಲಿದ್ದು, ಇದರ ಫಲಿತಾಂಶಗಳನ್ನು ಜೂನ್ 2026 ರಲ್ಲಿ ನಿರೀಕ್ಷಿಸಲಾಗಿದೆ. ಲಿಖಿತ ಪರೀಕ್ಷೆಯ ನಂತರ ದೈಹಿಕ ದಕ್ಷತೆ ಪರೀಕ್ಷೆಯು (PFT) ನಡೆಯಲಿದ್ದು, ಇದರಲ್ಲಿ ಓಟ, ಪುಷ್-ಅಪ್‌ಗಳು, ಸ್ಕ್ವಾಟ್‌ಗಳು ಮತ್ತು ಸಿಟ್-ಅಪ್‌ಗಳನ್ನು ಒಳಗೊಂಡಿರುವ ದೈಹಿಕ ವ್ಯಾಯಾಮಗಳನ್ನು ಪರೀಕ್ಷಿಸಲಾಗುತ್ತದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು 550 ರೂ. ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇಬ್ಬರೂ ಈ ಹುದ್ದೆಗಳಿಗೆ ಅರ್ಹರಾಗಿದ್ದು, ವಯಸ್ಸಿನ ಮಿತಿ ಮತ್ತು ಇತರ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ನೌಕಾಪಡೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಉತ್ತಮ. ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಕೊನೆಯ ದಿನಾಂಕದ ತನಕ ಕಾಯದೆ, ಆದಷ್ಟು ಬೇಗ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ನೌಕಾಪಡೆಯ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು

ವಿಜಯಪುರ, ಮಾರ್ಚ್​ 12: ಜಗತ್ತಿಗೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣ (Basavanna) ಹಾಗೂ ವೈರಾಗ್ಯಮೂರ್ತಿ, ವಚನಗಾರ್ತಿ ಅಕ್ಕಮಹಾದೇವಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕವಾದ ಹಾಗೂ ಅಶ್ಲೀಲ ಪದಗಳ ಸಹಿತ ಬರವಣಿಗೆ ಪೋಸ್ಟ್ ಮಾಡಿ ಹರಿಬಿಡಲಾಗಿದೆ. ಫೇಸ್ಬುಕ್​​ನಲ್ಲಿ ಹರಿ ಬಿಟ್ಟವರ ವಿರುದ್ದ ಬಸವ ಅನುಯಾಯಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ನಿಂದನೆ ಪೋಸ್ಟ್​​

ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಬಸವಾದಿ ಶರಣರ ಅನುಯಾಯಿಗಳ ಆಕ್ರೋಶಗೊಂಡಿದ್ಧಾರೆ. ನ್ಯಾಯಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿ ಘೋಷಣೆ ಕೂಗಿ ಆಕ್ರೋಶದ ಕಿಡಿ ಹೊತ್ತಿಸಿದ್ದಾರೆ. ಇಷ್ಟೆಕ್ಕೆಲ್ಲಾ ಕಾರಣ ಸೋಷಿಯಲ್ ಮೀಡಿಯಾದಲ್ಲಿ ವಿಶ್ವಗುರು ಬಸವಣ್ಣ ಹಾಗೂ ಮಹಾಶರಣೆ ಅಕ್ಕಮಹಾದೇವಿ ಅವರ ಕುರಿತು ನಿಂದನಾತ್ಮಕ ಹಾಗೂ ಅಶ್ಲೀಲ ಶಬ್ದಗಳ ಬಳಕೆ ಮಾಡಿ ಹರಿಬಿಟ್ಟಿರುವ ಪೋಸ್ಟ್.

ಇದನ್ನೂ ಓದಿ: ಬಬಲಾದಿ ಕಾಲಜ್ಞಾನ ನಿಜವಾಯಿತೇ?: ಯುದ್ಧ ಆಯಿತು, ಮುಂದೆ ಪ್ರವಾಹ, ಭಾರತಕ್ಕೆ ಗಡಿ ಆತಂಕ!

ರಮಾಕಾಂತ ಎಂ ಎಂಬ ಹೆಸರಿನ ಖಾತೆಯ ಫೇಸ್ಬುಕ್​​ನಲ್ಲಿ ಈ ಪೋಸ್ಟ್​​ ಹರಿಬಿಡಲಾಗಿದೆ. ಇದಕ್ಕೆ ಬಸವ ಅನುಯಾಯಿಗಳು ತೀವ್ರವಾಗಿ ವಿರೋಧಿಸಿ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದಾರೆ. ಬಸವಣ್ಣ ಹಾಗೂ ಅಕ್ಕಮಹಾದೇವಿಯವರಿಗೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಜೊತೆಗೆ ರಮಾಕಾಂತ ಎಂ ಎಂಬುವವರ ವಿರುದ್ದ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ಧಾರೆ.

ರಮಾಕಾಂತ ಎಂ ಎಂಬುವರ ಫೆಸ್​​ಬುಕ್​ನಲ್ಲಿ ಬಸವಣ್ಣನವರ ಹಾಗೂ ಅಕ್ಕಮಹಾದೇವಿಯರ ಕುರಿತು ಹಾಕಿರುವ ಆಕ್ಷೇಪಾರ್ಹ ಪೋಸ್ಟ್​​ ಎಲ್ಲೆಡೆ ವೈರಲ್ ಆಗಿದೆ. ಪೋಸ್ಟ್ ಖಂಡಿಸಿ ಕೆಲ ಬಸವವಾದಿ ಶರಣ ಅನುಯಾಯಿಗಳು ಪೋಸ್ಟ್ ವಿರುದ್ದ ಕಮೆಂಟ್​ ಹಾಕಿ ವಿರೋಧಿಸಿದ್ದಾರೆ. ಸದ್ಯ ಪೋಸ್ಟ್ ಹಾಕಿದ್ದವರ ಕುರಿತು ಬಸವನಬಾಗೇವಾಡಿ ಪೊಲೀಸರು ತನಿಖೆ ನಡೆಸಿದ್ದಾರೆ. ನಕಲಿ ಖಾತೆ ಮೂಲಕ ಈ ಪೋಸ್ಟ್​​ ಹಾಕಿರುವ ಸಂಶಯವೂ ವ್ಯಕ್ತವಾಗಿದೆ. ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಗಲಭೆ, ಗಲಾಟೆ ಆಗಬೇಕೆಂಬ ದುರುದ್ದೇಶದಿಂದ ಈ ಪೋಸ್ಟ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಉಗ್ರ ಹೋರಾಟದ ಎಚ್ಚರಿಕೆ

ಒಟ್ಟಿನಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳಕಾರಿಯಾಗಿ, ನಿಂದನಾತ್ಮಕವಾಗಿ ಪೋಸ್ಟ್ ಮಾಡಿರುವ ರಮಾಕಾಂತ ಎಂ ಹಾಗೂ ಆತನನ್ನ ಬೆಂಬಲಿಸಿದ್ದರೆ ಅವರೆಲ್ಲರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಬಂಧಿಸಬೇಕು. ಇಲ್ಲವಾದರೆ ಬಸವಾದಿ ಶರಣರ ಅನುಯಾಯಿಗಳು ಬಸವ ಭಕ್ತರು ಉಗ್ರ ಹೋರಾಟ ಪ್ರತಿಭಟನೆ ನಡೆಸುತ್ತೇವೆಂದು ಬಸವ ಅನುಯಾಯಿ ಪ್ರಭಗೌಡ ಪಾಟೀಲ್​​​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿಚಿತ್ರ ಸಮಸ್ಯೆಗೆ ನಲುಗಿದ ಕುಟುಂಬ: ಇದಕ್ಕಿಂದಂತೆ ರಕ್ತ ಜಿನುಗುವುದು, ಚಿನ್ನ ಮಾಯ, ಬಟ್ಟೆಗಳಿಗೆ ಬೆಂಕಿ

ಬಸವಾದಿ ಶರಣರ ಅನುಯಾಯಿಗಳು ನೀಡಿರುವ ಮನವಿ ಪತ್ರವನ್ನು ಸ್ವೀಕಾರ ಮಾಡಿರುವ ಜಿಲ್ಲಾಡಳಿತ ಸೂಕ್ತ ಕ್ರಮದ ಭರವಸೆ ನೀಡಿದೆ. ಘಟನೆ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಿ ಪೋಸ್ಟ್ ಮಾಡಿದವನ ಪತ್ತೆ ಹಾಗೂ ಬಂಧನಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ಚಾಮರಾಜನಗರ, ಮಾರ್ಚ್​ 12: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಿರಂತರವಾಗಿ ದುಷ್ಕರ್ಮಿಗಳು ಕಳ್ಳತನ ಎಸಗುತ್ತಿದ್ದಾರೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನವಾಗಿತ್ತು (Temple Theft). ಆ ಘಟನೆ ಮಾಸುವ ಮುನ್ನವೇ ಇದೀಗ ಕಳ್ಳರು ಮತ್ತೆ ಕೈಚಳಕ ತೋರಿಸಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಹಬ್ಬ ಮುಗಿದ ಮೂರೇ ದಿನಕ್ಕೆ ದೇವಸ್ಥಾನದ ಬಾಗಿಲೂ ಮೀಟಿ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ.

ನಡೆದಿದ್ದೇನು?

ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಕೈಚಳಕ ಮುಂದುವರೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಬಸವೇಶ್ವರ ಮತ್ತು ಮಾರಮ್ಮ ದೇವಸ್ಥಾನದ ಬಾಗಿಲುಗಳನ್ನು ಮೀಟಿ ಕಳ್ಳತನ ಮಾಡಲಾಗಿದೆ. ಹಬ್ಬ ಮುಗಿದು ಮೂರೇ ದಿನಕ್ಕೆ ದೇಗುಲದಲ್ಲಿದ್ದ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಮಂತ್ರಾಲಯಕ್ಕೆ ಹೋಗುವುದು ಅವರ ಕನಸಾಗಿತ್ತು: ಹರಕೆ ತೀರಿಸಿ ರಾಯರ ದರ್ಶನ ಪಡೆಯಲು ಹೋದ ವ್ಯಕ್ತಿ ನಾಪತ್ತೆ

ಕಳ್ಳರು ದೋಚುವ ಮುಂಚೆ ಮೊದಲು ಸಿಸಿಟಿವಿ ಕ್ಯಾಮೆರಾದ ಹಾರ್ಡಿಸ್ಕ್ ಎಗರಿಸಿದ್ದಾರೆ. ಕಳ್ಳತನ ಸುಳಿವಿಲ್ಲದಂತೆ ಖದೀಮರು ಕೃತ್ಯವೆಸಗಿದ್ದಾರೆ. ಸದ್ಯ ಗ್ರಾಮಸ್ಥರು ಕೃತ್ಯ ಪೂರ್ವ ನಿಯೋಜಿತ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿದ್ದು, ಜೊತೆಗೆ ಡಾಗ್ ಸ್ಕೋಡ್, ಬೆಳರಚ್ಚು ತಜ್ಞರಿಂದ ತೀವ್ರ ಪರಿಶೀಲನೆ ಮಾಡಲಾಗಿದೆ.

ಬೀದರ್ ಜಿಲ್ಲೆಯಲ್ಲಿ ವಿವಿಧ ಕಡೆ ಕಳ್ಳತನ

ಬೀದರ್ ಜಿಲ್ಲೆಯಲ್ಲಿ ವಿವಿಧ ಕಡೆ ಕಳ್ಳತನ ಪ್ರಕರಣಗಳು ನಡೆದಿವೆ. ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ನಡೆದಿವೆ. ಚಿಟಗುಪ್ಪಾ ತಾಲೂಕಿನ ಮಂಗಲಗಿ, ಮುಸ್ತರಿವಾಡಿ ಹಾಗೂ ಮುತ್ತಂಗಿ ಗ್ರಾಮಗಳಲ್ಲಿ ಕಳ್ಳರು ಕೈಚಳಕ ತೋರಿದ್ದರು. ಮಂಗಲಗಿ ಗ್ರಾಮದ ಲಕ್ಷ್ಮೀ ದೇವಸ್ಥಾನ ಹಾಗೂ ಮುಸ್ತರಿವಾಡಿಯ ಭವಾನಿ ದೇವಸ್ಥಾನಗಳಲ್ಲಿ ಕಳ್ಳರು ನುಗ್ಗಿ ದೇವಿಯ ಕೊರಳಲ್ಲಿದ್ದ ತಾಳಿ ಕದ್ದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಈಡೇರಲಿಲ್ಲ ಚಂಗಡಿ ಗ್ರಾಮಸ್ಥರ ಕನಸು: ಕಲ್ಲು-ಮುಳ್ಳಿನ ಹಾದಿ, 23 ಕಿಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ

ಇದೇ ವೇಳೆ ಮುತ್ತಂಗಿ ಗ್ರಾಮದ ಡಿಸಿಸಿ ಬ್ಯಾಂಕ್ ಶಾಖೆಯ ಕೀ ಮುರಿದು ಬ್ಯಾಂಕ್ ದರೋಡೆಗೆ ಕಳ್ಳರು ಯತ್ನಿಸಿದ್ದರು. ಆದರೆ ಯತ್ನ ವಿಫಲವಾಗಿತ್ತು. ಮಂಗಲಗಿ ಗ್ರಾಮದಲ್ಲಿ ಮೂರು ಮನೆಗಳು ಹಾಗೂ ಒಂದು ಕಿರಾಣಿ ಅಂಗಡಿಯಲ್ಲಿ ಕೂಡ ಕಳ್ಳತನ ನಡೆದಿತ್ತು. ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನ ಮಾಡಿದ್ದಾರೆ. ಈ ಕುರಿತಾಗಿ ಮನ್ನಾಏಖೆಳ್ಳಿ ಹಾಗೂ ಚಿಟಗುಪ್ಪಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚೆನ್ನೈನ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ

ಚೆನ್ನೈ, ಮಾರ್ಚ್ 12: ತಮಿಳುನಾಡಿನ ತಿರುಚ್ಚಿಯಿಂದ ಪ್ರಾಜೆಕ್ಟ್‌ಗಾಗಿ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿದ ಗ್ಯಾಂಗ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಯುವತಿ ಅಭಿರಾಮಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಆರಂಭವಾಗಿದೆ.

ಆ ವಿದ್ಯಾರ್ಥಿನಿ ಫೆಬ್ರವರಿ 14ರಂದು ತಿರುಚ್ಚಿಯಿಂದ ಪ್ರಾಜೆಕ್ಟ್‌ಗಾಗಿ ಚೆನ್ನೈಗೆ ಬಂದಿದ್ದರು. ಬಂದ ಕೆಲವೇ ದಿನಗಳಲ್ಲಿ, ಕೆಲವು ವ್ಯಕ್ತಿಗಳು ಆಕೆಯ ಫೋಟೋವನ್ನು ಮಾರ್ಫ್ ಮಾಡಿ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಬಳಿಕ, 4 ಜನರ ತಂಡ ಆಕೆಯನ್ನು ಅಡ್ಯಾರ್‌ನ ಖಾಸಗಿ ಹಾಸ್ಟೆಲ್‌ನಿಂದ ಅಪಹರಿಸಿದ್ದರು. ಅವರು ಆ ವಿದ್ಯಾರ್ಥಿನಿಯ ಮುಖಕ್ಕೆ ನಿದ್ರಾಜನಕ ಪುಡಿಯನ್ನು ಹಚ್ಚಿ, ಪ್ರಜ್ಞೆ ತಪ್ಪಿಸಿ ಒಂದು ಗಂಟೆಯ ನಂತರ ಬೇರೆ ಸ್ಥಳದಲ್ಲಿ ಬಿಟ್ಟು ಹೋಗಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು

ಕಾಲೇಜು ವಿದ್ಯಾರ್ಥಿನಿಯ ದೂರಿನ ನಂತರ ಅಭಿರಾಮಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯ ನಂತರ, ವಿದ್ಯಾರ್ಥಿನಿ ತನ್ನ ಆರೋಗ್ಯದಲ್ಲಿ ಬದಲಾವಣೆಗಳನ್ನು ಗಮನಿಸಿದರು. ಮಾರ್ಚ್ 10ರ ಸಂಜೆ ಚಿಕಿತ್ಸೆಗಾಗಿ ಅಡ್ಯಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟರು. ಆಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಆ ಗ್ಯಾಂಗ್ ಆಕೆಯನ್ನು ಮತ್ತೆ ಕಾರಿನಲ್ಲಿ ಅಪಹರಿಸಿತು. ಪೊಲೀಸರಿಗೆ ಮಾಹಿತಿ ನೀಡಿದರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಬಳಿಕ ಅವರು ಆಕೆಯ ಮೇಲೆ ಅತ್ಯಾಚಾರ ನಡೆಸಿದರು.

ಇದನ್ನೂ ಓದಿ: ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್​​: ತನಿಖೆ ವೇಳೆ ಸಿಸಿಟಿವಿ ರಹಸ್ಯ ಬಯಲು

ಸೋಮವಾರ ಸಂಜೆ ಕೊಟ್ಟೂರುಪುರಂ ಪೊಲೀಸ್ ವ್ಯಾಪ್ತಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಗ್ಯಾಂಗ್ ಒಂದು ಆಕೆಯನ್ನು ಕಾರಿನಲ್ಲಿ ಅಪಹರಿಸಿದೆ ಎಂದು ಆರೋಪಿಸಲಾಗಿದೆ. ದೂರು ನೀಡಿದ ಯುವತಿ ತಾನು ಪ್ರಜ್ಞೆ ಕಳೆದುಕೊಂಡು ಸುಮಾರು 1 ಗಂಟೆಯ ನಂತರ ಬಿಟ್ಟು ಹೋಗಿರುವುದಾಗಿ ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ವಿರುದ್ಧದ ಅಪರಾಧ (CAWC) ವಿಭಾಗವು ದೂರಿನ ತನಿಖೆ ನಡೆಸುತ್ತಿದೆ. “ಮಹಿಳೆ ಅಪಹರಣಕ್ಕೊಳಗಾಗಿರುವುದಾಗಿ ಹೇಳಿರುವ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಕ್ಷಪಾತ ಮಾಡಿಲ್ಲ, ಸದನಕ್ಕಿಂತ ವಿಪಕ್ಷ ನಾಯಕ ಮೇಲಲ್ಲ; ರಾಹುಲ್ ಗಾಂಧಿಗೆ ಸ್ಪೀಕರ್ ಓಂ ಬಿರ್ಲಾ ತಿರುಗೇಟು

ನವದೆಹಲಿ, ಮಾರ್ಚ್ 12: ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಸದನದಲ್ಲಿ ಸೋತ ನಂತರ ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ. ನಾನು ಯಾವುದೇ ಪಕ್ಷಪಾತ ಮಾಡಿಲ್ಲ ಎಂದಿರುವ ಓಂ ಬಿರ್ಲಾ, ಪ್ರತಿ ಸಂಸದರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ. ವಿರೋಧ ಪಕ್ಷದ ನಾಯಕರು ಸದನಕ್ಕಿಂತಲೂ ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ.

ನಿನ್ನೆ ವಿಪಕ್ಷದ ಅವಿಶ್ವಾಸ ನಿರ್ಣಯವು ಲೋಕಸಭೆಯಲ್ಲಿ ಸೋತಿತ್ತು. ಇದಾದ ಒಂದು ದಿನದ ನಂತರ, ಸ್ಪೀಕರ್ ಓಂ ಬಿರ್ಲಾ ಇಂದು (ಮಾರ್ಚ್ 12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಥವಾ ಇತರ ಸದಸ್ಯರನ್ನು ಸದನದಲ್ಲಿ ಮಾತನಾಡದಂತೆ ತಡೆಯಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. “ಪ್ರತಿಯೊಬ್ಬ ಸಂಸದರಿಗೂ ನಿಯಮಗಳ ಪ್ರಕಾರ ಮಾತನಾಡುವ ಹಕ್ಕಿದೆ. ನಾನು ಆ ಅವಕಾಶ ನೀಡಿದ್ದೇನೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಫೆ. 4ರಂದು ಅಧಿವೇಶನದಲ್ಲಿ ನಡೆದಿದ್ದೇನು? ಕಾಂಗ್ರೆಸ್ ಮಹಿಳಾ ಸಂಸದರ 2 ವಿಡಿಯೋ ರಿಲೀಸ್ ಮಾಡಿದ ಬಿಜೆಪಿ

ಫೆಬ್ರವರಿ 13ರಂದು ಕೊನೆಗೊಂಡ ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿದ ನಂತರ ಇಂದು ಓಂ ಬಿರ್ಲಾ ಮೊದಲ ಬಾರಿಗೆ ಸದನಕ್ಕೆ ಬಂದರು. ಅಧಿವೇಶನದ ಎರಡನೇ ಭಾಗ ಮಾರ್ಚ್ 9ರಂದು ಪ್ರಾರಂಭವಾಯಿತು.

ವಿರೋಧ ಪಕ್ಷಕ್ಕೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಸದನವು ಸ್ಥಾಪಿತ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಸದಸ್ಯರು ಸದನವನ್ನು ಉದ್ದೇಶಿಸಿ ಮಾತನಾಡುವ ಮೊದಲು ಸ್ಪೀಕರ್​ರಿಂದ ಅನುಮತಿ ಪಡೆಯಬೇಕು. ಲೋಕಸಭೆಯ ನಿಯಮಗಳಿಗಿಂತ ಯಾರೂ ಮೇಲಲ್ಲ ಎಂದು ಅವರು ಒತ್ತಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link