Headlines

nagaraj11081993

ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ನವದೆಹಲಿ, ಮಾರ್ಚ್ 12: ಪಶ್ಚಿಮ ಏಷ್ಯಾದಲ್ಲಿ (West Asia crisis) ನಡೆಯುತ್ತಿರುವ ಯುದ್ಧ ನಿರೀಕ್ಷೆಮೀರಿ ಮುಂದುವರಿಯುತ್ತಿದೆ. ಇಸ್ರೇಲ್, ಅಮೆರಿಕದ ಜಂಟಿ ದಾಳಿಗಳಿಗೆ ಇರಾನ್ ಪ್ರತಿರೋಧ ಮುಂದುವರಿದಿದೆ. ಪ್ರತಿರೋಧ ಮಾತ್ರವಲ್ಲ, ಇರಾನ್​ನಿಂದ ಮಾರಕವಾದ ಪ್ರತಿದಾಳಿಗಳೂ ಆಗುತ್ತಿವೆ. ಜಾಗತಿಕ ತೈಲ ಮಾರುಕಟ್ಟೆ ಭಾರೀ ವ್ಯತ್ಯಯ ಕಾಣುತ್ತಿದೆ. ಇಡೀ ಜಗತ್ತಿಗೆ ಮಾರಕವಾದ ಈ ಯುದ್ಧವನ್ನು ಆರಂಭಿಸಿದಷ್ಟು ಸುಲಭವಾಗಿ ನಿಲ್ಲಿಸಲು ಆಗುತ್ತಿಲ್ಲ. ಇರಾನ್ ಈ ಯುದ್ಧ ನಿಲ್ಲಿಸುವ ಅವಕಾಶಕ್ಕೆ ಸಿದ್ಧ ಇದೆ. ಆದರೆ, ಮೂರು ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳು ಹೀಗಿವೆ: ಅಮೆರಿಕ…

Read More

ಎಲ್​ಪಿಜಿ ಬುಕಿಂಗ್ ಬಗ್ಗೆ ನಿಮಗೂ ಈ ರೀತಿ ಮೆಸೇಜ್ ಬರುತ್ತಾ? ತಪ್ಪಿಯೂ ಯಾಮಾರಬೇಡಿ

ಬೆಂಗಳೂರು, ಮಾರ್ಚ್ 12: ಇರಾನ್- ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಮೂರು ದೇಶಗಳ ನಡುವಿನ ಸಂಘರ್ಷದಿಂದ ಗಲ್ಫ್ ರಾಷ್ಟ್ರಗಳ ಮೇಲೆ ಕೂಡ ದಾಳಿ ಮುಂದುವರೆದಿದ್ದು, ಇದರ ಪರಿಣಾಮವಾಗಿ ಹಲವು ದೇಶಗಳಲ್ಲಿ ತೈಲ, ಗ್ಯಾಸ್ ಮುಂತಾದ ಸೌಕರ್ಯಗಳ ಬಿಕ್ಕಟ್ಟು ಎದುರಾಗಿದೆ. ಬೆಂಗಳೂರು ಸೇರಿದಂತೆ ಭಾರತದ ಅನೇಕ ಪ್ರಮುಖ ನಗರಗಳ ಹೋಟೆಲ್​, ರೆಸ್ಟೋರೆಂಟ್, ಹಾಸ್ಟೆಲ್​ಗಳಲ್ಲಿ ಎಲ್​ಪಿಜಿ ಕೊರತೆ (LPG Crisis) ಎದುರಾಗಿದ್ದು, ಅವುಗಳ ಬಾಗಿಲು ಮುಚ್ಚಲಾಗುತ್ತಿದೆ. ಇಂಧನ ಪೂರೈಕೆಯಲ್ಲಿನ ಕೊರತೆಯ ಭಯದ…

Read More

‘ಟಾಕ್ಸಿಕ್’ಗೆ ಟಾಂಗ್ ಕೊಟ್ಟ ‘ಧುರಂಧರ್ 2’ ನಟ: ಹೇಳಿದ್ದೇನು?

ರಣವೀರ್ ಸಿಂಗ್ (Ranveer Singh) ನಟನೆಯ ಆಕ್ಷನ್ ಥ್ರಿಲ್ಲರ್ ‘ಧುರಂಧರ್ 2’ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಅದೇ ದಿನ ಯಶ್ ಅವರ ‘ಟಾಕ್ಸಿಕ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸಬೇಕಿತ್ತು. ಎರಡೂ ಚಿತ್ರಗಳು ಮಾರ್ಚ್ 19 ರಂದು ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಆದರೆ ‘ಟಾಕ್ಸಿಕ್’ ತಂಡವು ಚಿತ್ರದ ಬಿಡುಗಡೆಯನ್ನು ಜೂನ್ 4 ಕ್ಕೆ ಮುಂದೂಡಿತು. ಇದಕ್ಕೆ ಕಾರಣವಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಘರ್ಷಣೆಯಿಂದಾಗಿ ಚಿತ್ರದ ವ್ಯವಹಾರಕ್ಕೆ ತೊಂದರೆಯಾಗಬಹುದು ಎಂಬ ಕಾರಣವನ್ನು ಚಿತ್ರತಂಡ ನೀಡಿದೆ….

Read More

‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್

ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ‘ರಾಮಾಯಣ’ ಕೂಡ ಒಂದು. ಈ ಚಿತ್ರವನ್ನು ಯಾವ ರೀತಿ ಮಾಡಿರಬಹುದು ಎಂಬ ಕುತೂಹಲ ಮೂಡಿದೆ. ಈ ವರ್ಷದ ದೀಪಾವಳಿಗೆ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಡಬ್ಬಿಂಗ್ ಕೆಲಸಗಳನ್ನು ಯಶ್ ಇತ್ತೀಚೆಗೆ ಪೂರೈಸಿದ್ದರು. ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಹೀಗಿರುವಾಗಲೇ ಚಿತ್ರದ ಸೀಕ್ವೆಲ್ ಶೂಟಿಂಗ್ ಶುರುವಾಗಿದೆ. ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2026ರ ದೀಪಾವಳಿಗೆ ಒಂದು ಭಾಗ ಹಾಗೂ 2027ರ ದೀಪಾವಳಿಗೆ ಎರಡನೇ ಭಾಗವನ್ನು…

Read More

ವಾಣಿಜ್ಯ ಸಿಲಿಂಡರ್ ಕೊರತೆ: ಹುಬ್ಬಳ್ಳಿಯಲ್ಲಿ ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​

ಹುಬ್ಬಳ್ಳಿ, ಮಾರ್ಚ್​​ 12: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ಹುಬ್ಬಳ್ಳಿಯ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಿಲಿಂಡರ್‌ಗಳು ಸಿಗದೆ ಹಲವು ಹೋಟೆಲ್‌ಗಳು ತಮ್ಮ ಕಾರ್ಯಚಟುವಟಿಕೆ ನಿಲ್ಲಿಸುವ ಭೀತಿ ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ಎದುರಿಸಲು, ಹೋಟೆಲ್ ಮಾಲೀಕರು ಪರ್ಯಾಯ ಮಾರ್ಗವಾಗಿ ಕಟ್ಟಿಗೆ ಒಲೆಗಳತ್ತ ಮುಖ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ನಗರದ ಎಂಜಿ ಮಾರ್ಕೆಟ್‌ನಲ್ಲಿ ಕಟ್ಟಿಗೆ ಒಲೆಗಳ ಬೇಡಿಕೆ ಅನಿರೀಕ್ಷಿತವಾಗಿ ಏರಿಕೆಯಾಗಿದೆ. ಈ ಹಿಂದೆ ಯಾರೂ ಖರೀದಿಸದ ಕಟ್ಟಿಗೆ ಒಲೆಗಳಿಗೆ ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು,…

Read More

Video: ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ಹರಸಾಹಸ

ಕೆಲವರಂತೂ ಎಂತೆಂಥಾ ಸಾಹಸಗಳನ್ನು ಮಾಡ್ತಾರಪ್ಪ, ರೈಲಿನ ಮೆಟ್ಟಿಲುಗಳ ಮೇಲೆ ನಿಲ್ಲುವುದು, ರೈಲಿನ ಮೇಲೆ ಹತ್ತಿ ಅಲ್ಲಿ ವಿಡಿಯೋ ಮಾಡುವುದು, ದುಸ್ಸಾಹಸಗಳೇ ಹೆಚ್ಚು. ಆದರೆ ಈ ವಿಡಿಯೋ ಅಂತಾ ಅಪಾಯಕಾರಿಸಾಹಸವೇನಲ್ಲ. ರೈಲಿನ ಕಿಟಕಿಯಿಂದ ಎಳನೀರು ಒಳಗೆಳೆಯಲು ವ್ಯಕ್ತಿಯೊಬ್ಬ ಹರಸಾಹಸಪಟ್ಟಿರುವ ವಿಡಿಯೋ ವೈರಲ್ ಆಗಿದೆ. ಸೀಟಿನಲ್ಲಿ ವ್ಯಕ್ತಿ ಮತ್ತೆ ಅವರ ಪತ್ನಿ ಕುಳಿತಿದ್ದಾರೆ, ರೈಲಿನ ಕಿಟಕಿಯ ಹೊರಭಾಗದಿಂದ ಸ್ಟ್ರಾ ಹಾಕಿರುವ ಎಳನೀರನ್ನು ಕಿಟಕಿಯ ಸರಳುಗಳ ಮಧ್ಯೆ ಒಳಗೆಳೆದುಕೊಳ್ಳುವ ಭಾರಿ ಸಾಹಸ ಮಾಡಿ ಗೆದ್ದಿದ್ದಾರೆ. ಆದರೆ ಸ್ಟ್ರಾ ಇದ್ದ ಕಾರಣ ಅಲ್ಲಿಂದಲೇ…

Read More

ಪ್ರತ್ಯೇಕ ರಸ್ತೆ ಅಪಘಾತ: ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಸಾವು; ಮತ್ತೋರ್ವಳ ಸ್ಥಿತಿ ಗಂಭೀರ

ಯಾದಗಿರಿ/ಬೆಂಗಳೂರು, ಮಾರ್ಚ್​​ 12: ರಾಜ್ಯದ ಯಾದಗಿರಿ ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಮೃತಪಟ್ಟಿದ್ದು, ಮತ್ತೋರ್ವಳು ಗಂಭೀರ ಗಾಯಗೊಂಡಿದ್ದಾಳೆ. ಯಾದಗಿರಿಯಲ್ಲಿ ಕ್ರೂಸರ್​ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್​​ ಸವಾರರು ಮೃತಪಟ್ಟಿದ್ದರೆ, ಇತ್ತ ಬೆಂಗಳೂರಲ್ಲಿ ಟಿಪ್ಪರ್​ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಓರ್ವ ಯುವತಿ ಮೃತಪಟ್ಟಿದ್ದಾಳೆ. ಸಹ ಸವಾರಳ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೈಕ್​​ಗೆ ಡಿಕ್ಕಿಯಾಗಿ ಕ್ರೂಸರ್​​…

Read More

Ugadi 2026: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಹಿಂದೂ ಧರ್ಮದ ನಂಬಿಕೆಯಂತೆ ಯುಗಾದಿಯು ಸೃಷ್ಟಿಯ ಆರಂಭದ ದಿನ ಹಾಗೂ ಹೊಸ ವರ್ಷದ ಮುನ್ನುಡಿ. ಈ ಬಾರಿ ಅಂದರೆ 2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರದಂದು ಆಚರಿಸಲಾಗುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಹುತೇಕ ಭಾಗಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಅಂದು ಮುಂಜಾನೆಯ ಶುಭ ಮುಹೂರ್ತಗಳಾದ ಬೆಳಿಗ್ಗೆ 5:00 ರಿಂದ 7:30 ಅಥವಾ 9:00 ರಿಂದ 11:30 ರ ಅವಧಿಯಲ್ಲಿ ದೈವಿಕ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ. ಯುಗಾದಿ ಹಬ್ಬದಂದು ಏನು ಮಾಡಬೇಕು? ಈ…

Read More

ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು: 3 ವರ್ಷದ ಜೈಲು ಶಿಕ್ಷೆ ಭೀತಿ

ಟೀಮ್ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ.  ಮಾರ್ಚ್ 8 ರಂದು  ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಷ್ಟ್ರಧ್ವಜವನ್ನು ಬಳಸಿದ ರೀತಿ ವಿವಾದಕ್ಕೆ ಕಾರಣವಾಗಿದೆ. ದೂರು ನೀಡಿದ್ದು ಯಾರು? ಫೈನಲ್​ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ. ಈ ಹಿನ್ನಲೆಯಲ್ಲಿ  ಪುಣೆಯ…

Read More

ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಮಾದರಿಯ ರೋಗದ ಸೋಂಕು! ಬಚಾವಾಗೋದು ಹೇಗೆ?

ಬೆಂಗಳೂರು, ಮಾರ್ಚ್​ 12: ರಾಜ್ಯದಲ್ಲಿ ಲೆಪ್ಟೋಸ್ಪೈರೋಸಿಸ್ (Leptospirosis) ಸೋಂಕಿನ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷವೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಯಲ್ಲಿ ಆತಂಕ ಎಬ್ಬಿಸಿದೆ. ವರ್ಷವಾರು ಅಂಕಿಅಂಶಗಳನ್ನು ಗಮನಿಸಿದರೆ 2020ರಲ್ಲಿ 544 ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 906 ಪ್ರಕರಣಗಳು ಕಂಡುಬಂದಿವೆ. ಬಳಿಕ 2022ರಲ್ಲಿ 3,174 ಪ್ರಕರಣಗಳು, 2023ರಲ್ಲಿ 5,404 ಪ್ರಕರಣಗಳು…

Read More