All posts by nagaraj11081993

Video: ದುಡಿಮೆಯಲ್ಲಿ ಖುಷಿ ಕಾಣುವ ಹಿರಿಜೀವಕ್ಕೆ ಹೆಗಲಾದ ಶ್ವಾನ

Video: ದುಡಿಮೆಯಲ್ಲಿ ಖುಷಿ ಕಾಣುವ ಹಿರಿಜೀವಕ್ಕೆ ಹೆಗಲಾದ ಶ್ವಾನ

ನಿಯತ್ತು ಎಂದರೆ ಮೊದಲು ನೆನಪಾಗುವುದೇ ಈ ಶ್ವಾನ (dog). ಮನುಷ್ಯರಿಗೆ ನಾಯಿಗಿಂತ ಹೆಚ್ಚು ಆಪ್ತರು ಬೇರಾರೂ ಇರಲಿಕ್ಕೆ ಸಾಧ್ಯವಿಲ್ಲ. ಶ್ವಾನಗಳು ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದ ಪ್ರಾಣಿ. ಮನೆಯ ಸದಸ್ಯರಂತೆ ಇರುವ ಈ ಶ್ವಾನವು ಒಂದು ತುತ್ತು ಹಾಕಿದ್ರೆ ಸಾಕು, ಜೀವನ ಪರ್ಯಂತ ಮಾಲೀಕನಿಗೆ ಋಣಿಯಾಗಿರುತ್ತದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ತನ್ನ ಮೇಲೆ ಕಾಳಜಿ ತೋರುವ ವ್ಯಕ್ತಿ ಹೂವಿನ ಮಾಲೆ ಮಾರುತ್ತಿದ್ದರೆ, ಶ್ವಾನವು ಆ ಹಿರಿಜೀವಕ್ಕೆ ಸಹಾಯ ಮಾಡಿದೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಕಣ್ಣಂಚಲಿ ನೀರು ತರಿಸಿದೆ.

Somanath kanrar ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಶ್ವಾನ ಹಾಗೂ ವ್ಯಕ್ತಿಯ ನಡುವಿನ ಬಾಂಧವ್ಯವನ್ನು ನೋಡಬಹುದು. ಹಿರಿಯ ವ್ಯಕ್ತಿಯೊಬ್ಬರು ಹೂವಿನ ಮಾಲೆಯನ್ನು ಮಾರಾಟ ಮಾಡುತ್ತಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗೆ ಕೈಯಲ್ಲಿದ್ದ ಮಾಲೆಯನ್ನು ಕೊಡುತ್ತಿದ್ದರೆ, ಇತ್ತ ಶ್ವಾನವು ತನ್ನ ಬಾಯಲ್ಲಿ ಹೂವಿನ ಮಾಲೆಯೊಂದನ್ನು ಹಿಡಿದು ಪಕ್ಕದಲ್ಲಿ ನಿಂತುಕೊಂಡಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಮಗುವಿನಂತೆ ಮನೆಮಾಲೀಕನನ್ನು ಹಿಂಬಾಲಿಸಿದ ಬಾತುಕೋಳಿ

ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಪ್ರಾಣಿಗಳಿಗೆ ಅನ್ನ ಹಾಕಿ, ಅವುಗಳು ನಿಮ್ಮ ಕಷ್ಟ ಸುಖಕ್ಕೆ ಹೆಗಲಾಗುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಂತಹ ದೃಶ್ಯಗಳನ್ನು ನೋಡಲು ಖುಷಿಯೆನಿಸುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಗ್ಲಾಮರ್ ಕ್ವೀನ್ ತಮನ್ನಾ ಈಗ ಅಪ್ಪಟ ಗೃಹಿಣಿ: 11 ವರ್ಷದ ಬಳಿಕ ರವಿತೇಜ ಜೊತೆ

ತಮನ್ನಾ ಭಾಟಿಯಾ (Tamannah Bhatia), ಪ್ರಸ್ತುತ ಭಾರತೀಯ ಚಿತ್ರರಂಗದ ನಂಬರ್ 1 ‘ಐಟಂ ಗರ್ಲ್’. ತಮನ್ನಾ ಭಾಟಿಯಾ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದರೆಂದರೆ ಆ ಸಿನಿಮಾ ಸೂಪರ್ ಹಿಟ್, ಆ ಹಾಡು ಸಹ ಸೂಪರ್ ಹಿಟ್ ಆಗಿಯೇ ತೀರುತ್ತದೆ ಎಂಬುದು ನಿರ್ಮಾಪಕ, ನಿರ್ದೇಶಕರುಗಳ ನಂಬಿಕೆ. ಇದೇ ಕಾರಣಕ್ಕೆ ತಮನ್ನಾಗೆ ಈಗ ಸಿನಿಮಾಗಳಿಗಿಂತಲೂ ಐಟಂ ಹಾಡುಗಳ ಆಫರ್ ಹೆಚ್ಚು ಬರುತ್ತಿದೆ. ಅದು ಮಾತ್ರವೇ ಅಲ್ಲ, ತಮನ್ನಾ ಭಾಟಿಯಾ ಈಗ ಐಟಂ ಹಾಡಿಗೆ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಸಹ ಹೌದು.

ಗ್ಲಾಮರ್ ಕ್ವೀನ್ ಎಂದೇ ಖ್ಯಾತವಾಗಿರುವ ತಮನ್ನಾ ಭಾಟಿಯಾಗೆ ಇದೀಗ ಅವರ ಟ್ರೆಂಡ್​ಗೆ ವಿರುದ್ಧವಾದ ಪಾತ್ರ ದೊರೆತಿದೆ. ತಮನ್ನಾ ಭಾಟಿಯಾ ಅಪ್ಪಟ ಗೃಹಿಣಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಅದೂ ಪೌರಾಣಿಕ ಮಾದರಿಯ ಕತೆ ಹೊಂದಿರುವ ಸಿನಿಮಾನಲ್ಲಿ. ನಟಿ ತಮನ್ನಾ ಭಾಟಿಯಾ ಸ್ವತಃ ಮಹಾನ್ ದೈವ ಭಕ್ತೆ. ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ಮಾಡುತ್ತಲೇ ಇರುತ್ತಾರೆ. ಇದೀಗ ಅವರಿಗೆ ದೇವರ ಮಹಿಮೆಯ ಕತೆಯುಳ್ಳ ಸಿನಿಮಾನಲ್ಲಿ ನಾಯಕಿ ಪಾತ್ರ ದೊರೆತಿದೆ.

ಇದನ್ನೂ ಓದಿ:ಮತ್ತೊಮ್ಮೆ ರವಿತೇಜ ಜೊತೆಗೆ ನಟಿಸಲಿದ್ದಾರೆ ಶ್ರೀಲೀಲಾ: ಇದು ಮೂರನೇ ಸಿನಿಮಾ

ರವಿತೇಜ ನಟಿಸುತ್ತಿರುವ ‘ಇರುಮುಡಿ’ ಸಿನಿಮಾನಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ‘ಇರುಮುಡಿ’ ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಈ ಸಿನಿಮಾ ಅಯ್ಯಪ್ಪ ಸ್ವಾಮಿಯ ಮಹಿಮೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರವಿತೇಜ ನಾಯಕ, ನಾಯಕಿಯ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟಿಸಿದ್ದು, ಅವರದ್ದು ತುಸುವೂ ಗ್ಲಾಮರ್​​ಗೆ ಅವಕಾಶ ಇಲ್ಲದ ಅಪ್ಪಟ ಗೃಹಿಣಿಯ ಪಾತ್ರವಂತೆ. ಜೊತೆಗೆ ಈ ಪಾತ್ರ ಸವಾಲಿನದ್ದೂ ಆಗಿರಲಿದೆ.

2015 ರಲ್ಲಿ ಬಿಡುಗಡೆ ಆಗಿದ್ದ ರವಿತೇಜ ನಟನೆಯ ‘ಬೆಂಗಾಲ್ ಟೈಗರ್’ ಸಿನಿಮಾನಲ್ಲಿ ರವಿತೇಜ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ನಟಿಸಿದ್ದರು. ಇದೀಗ 11 ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ಇದೀಗ ಚಿತ್ರೀಕರಣಗೊಳ್ಳುತ್ತಿರುವ ‘ಇರುಮುಡಿ’ ಸಿನಿಮಾವನ್ನು ಶಿವ ನಿರ್ವಾನ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ ಮಲಾಸ ಆಕ್ಷನ್ ಕಾಮಿಡಿ ಸಿನಿಮಾಗಳಲ್ಲೇ ನಟಿಸುತ್ತಿದ್ದ ರವಿತೇಜ ಅವರಿಗೂ ಸಹ ಈ ಸಿನಿಮಾ ಭಿನ್ನವಾದ ಸಿನಿಮಾ ಆಗಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾಕ್‌ ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ; ಗಲ್ಫ್ ಯುದ್ಧಕ್ಕೆ ಮತ್ತೋರ್ವ ಭಾರತೀಯ ಬಲಿ

ಟೆಹ್ರಾನ್, ಮಾರ್ಚ್ 12: ಇರಾಕ್‌ನ ಖೋರ್ ಅಲ್ ಜುಬೈರ್ ಬಂದರಿನ ಬಳಿ ಇರಾನ್​ನ ಹಡಗು ಅಮೆರಿಕದ ಒಡೆತನದ ಕಚ್ಚಾ ತೈಲ ಟ್ಯಾಂಕರ್ (Oil Tanker) ಸಫೀಯಾ ವಿಷ್ಣುವನ್ನು (Safesea Vishnu) ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರ ಜೊತೆಗೆ ಮಾಲ್ಡೀವ್ಸ್​​ನ ಇನ್ನೊಂದು ಟ್ಯಾಂಕರ್ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಮತ್ತೋರ್ವ ಭಾರತೀಯನನ್ನು ಬಲಿ ತೆಗೆದುಕೊಂಡಿದೆ. ಈ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದು, ಹಡಗಿನಲ್ಲಿದ್ದ ಉಳಿದ 27 ಸಿಬ್ಬಂದಿಯನ್ನು ರಕ್ಷಿಸಿ ಬಸ್ರಾಗೆ ಸ್ಥಳಾಂತರಿಸಲಾಗಿದೆ.

ಜಾಗತಿಕ ಕಡಲ ಕಾರ್ಯಪಡೆಯ ಶೇ. 15ಕ್ಕಿಂತ ಹೆಚ್ಚು ಜನರು ಭಾರತೀಯರು ಇರುವುದರಿಂದ, ಮುಂದಿನ ಯಾವುದೇ ದಾಳಿಯಲ್ಲಿ ಇನ್ನಷ್ಟು ಭಾರತೀಯ ಪ್ರಜೆಗಳು ಅಪಾಯಗಳಿವೆ ಎಂದು ಮೂಲಗಳು ಎಚ್ಚರಿಸಿವೆ.

ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು

ಮೂಲಗಳ ಪ್ರಕಾರ, ಸಫೆಸಿಯಾ ವಿಷ್ಣು 2007ರಲ್ಲಿ ನಿರ್ಮಿಸಲಾದ ಕಚ್ಚಾ ತೈಲ ಟ್ಯಾಂಕರ್ ಆಗಿದೆ. ಈ ಹಡಗು 228.6 ಮೀಟರ್ ಉದ್ದ, 32.57 ಮೀಟರ್ ಅಗಲವಿದ್ದು, ಮಾರ್ಷಲ್ ದ್ವೀಪಗಳ ಧ್ವಜದ ಅಡಿಯಲ್ಲಿ ಸಾಗುತ್ತದೆ. ಇದು 42,010 ಒಟ್ಟು ಟನ್ ಮತ್ತು 73,976 ಡೆಡ್‌ವೈಟ್ ಟನ್ ಹೊಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ನಾನು 25 ಬಿ-ಗ್ರೇಡ್ ಚಿತ್ರಗಳಲ್ಲಿ ನಟಿಸಿದ್ದೇನೆ’; ನೊಂದುಕೊಂಡ ನಟಿ

ನಟ-ನಟಿಯರ ಜೀವನ ತುಂಬಾ ಐಷಾರಾಮಿ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಅನೇಕರು ಹೋರಾಟಗಳನ್ನು ಎದುರಿಸುತ್ತಾರೆ. ಕೆಲವು ನಟರು ಈ ಹೋರಾಟಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ. ಆದರೆ ಇತರರು ಅವುಗಳ ಬಗ್ಗೆ ಮಾತನಾಡುವುದಿಲ್ಲ. ಪ್ರಸಿದ್ಧ ಭೋಜ್‌ಪುರಿ ನಟಿ ಮೊನಾಲಿಸಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಮೊನಾಲಿಸಾ ಅವರ (Monasalisa) ಖ್ಯಾತಿ ಮತ್ತು ಜೀವನಶೈಲಿಯನ್ನು ನೋಡಿ, ಅವರಿಗೆ ಏನೂ ಕೊರತೆಯಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಅವರು ಹಣಕ್ಕಾಗಿ 25 ಬಿ-ಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಒಪ್ಪಿಕೊಂಡರು.

ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಮೊನಾಲಿಸಾ, ‘ನನಗೆ ತೌಬಾ ತೌಬಾ ಚಿತ್ರದ ಆಫರ್ ಬಂದಿತು. ಈ ಚಿತ್ರದ ಬಜೆಟ್ ತುಂಬಾ ಕಡಿಮೆಯಾಗಿತ್ತು. ಈ ಚಿತ್ರದಲ್ಲಿ ಪಾಯಲ್ ರೋಹತ್ಗಿ ಪ್ರಮುಖ ಪಾತ್ರದಲ್ಲಿ ನಟಿಸಿದರು ಮತ್ತು ನಾನು ಅವರೊಂದಿಗೆ ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದೆ. ಈ ಚಿತ್ರದ ನಂತರ, ನಾನು ಬೆಳಕಿಗೆ ಬಂದೆ. ಅದರ ನಂತರ, ನನಗೆ ಒಂದರ ನಂತರ ಒಂದರಂತೆ ಚಿತ್ರಗಳಿಗೆ ಆಫರ್‌ಗಳು ಬರಲು ಪ್ರಾರಂಭಿಸಿದವು’ ಎಂದಿದ್ದಾರೆ ಅವರು.

‘ನಾನು ಸುಮಾರು 25 ಬಿ-ಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲ. ವಾಸ್ತವವಾಗಿ, ಅವು ಬಿಡುಗಡೆಯಾಗದಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಆದರೆ ಪರದೆಯ ಮೇಲೆ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವಲ್ಲಿ ನನಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ’ ಎಂದಿದ್ದಾರೆ ಅವರು.

‘ನನ್ನ ಪತಿ ವಿಕ್ರಾಂತ್ ಮತ್ತು ನಾನು ಇನ್ನೂ ಆರ್ಥಿಕವಾಗಿ ಸ್ಥಿರವಾಗಿಲ್ಲ. ಏಕೆಂದರೆ ನಮ್ಮಿಬ್ಬರ ಹೆತ್ತವರಿಗೂ ಆರೋಗ್ಯ ಸಮಸ್ಯೆಗಳಿವೆ. ಆದ್ದರಿಂದ, ನಾವು ಎಷ್ಟೇ ಹಣ ಸಂಪಾದಿಸಿದರೂ, ಆ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡುತ್ತೇವೆ. ಆದರೆ ಅದೃಷ್ಟವಶಾತ್, ನಮಗೆ ವಾಸಿಸಲು ದೊಡ್ಡ ಮನೆ ಇದೆ ಮತ್ತು ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ವಿಷಯಗಳಿಗೆ ನಾವು ಕಷ್ಟಪಡಬೇಕಾಗಿಲ್ಲ. ಏಕೆಂದರೆ ನಾವು ಕೂಡ ಒಂದು ಕಾಲದಲ್ಲಿ ಈ ಸಮಸ್ಯೆಗಳನ್ನು ಎದುರಿಸಿದ್ದೇವೆ. ಆದ್ದರಿಂದ, ಆ ಪರಿಸ್ಥಿತಿಯಲ್ಲಿ, ನನಗೆ ಸಿಗುವ ಯಾವುದೇ ಕೆಲಸವನ್ನು ನಾನು ಮಾಡಿದ್ದೇನೆ. ನನಗೆ ವಿಷಾದವಿಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಉತ್ತರದವರಾದರೂ ಮೊನಾಲಿಸಾ ಕೇರಳದಲ್ಲಿ ಮದುವೆ ಆಗಿದ್ದೇಕೆ? ಮೊಹಮ್ಮದ್ ಫರ್ಮಾನ್ ಹಿನ್ನೆಲೆ ಏನು?

ಮೊನಾಲಿಸಾ ಇಂದು ದೊಡ್ಡ ಮತ್ತು ಪ್ರಸಿದ್ಧ ತಾರೆಯಾಗಿದ್ದರೂ, ಅವರು ಸಣ್ಣ ಪಾತ್ರಗಳಿಗೆ ತೃಪ್ತರಾಗಬೇಕಾದ ಕಾಲವಿತ್ತು. ಅವರು ಬಂಗಾಳಿ ಚಿತ್ರಗಳಿಂದ ಪ್ರಾರಂಭಿಸಿ ನಂತರ ಭೋಜ್‌ಪುರಿ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಳ ಉಡುಪಿನಲ್ಲಿ ಗಾಂಜಾ ತಂದು ಕೈದಿಗಳಿಗೆ ಸಪ್ಲೈ! ಪರಪ್ಪನ ಅಗ್ರಹಾರದಲ್ಲಿ ವಾರ್ಡನ್​ನಿಂದಲೇ ಕಳ್ಳಾಟ

ಬೆಂಗಳೂರು, ಮಾರ್ಚ್​ 12: ಹಲವು ತಿಂಗಳುಗಳಿಂದ ಒಂದಲ್ಲಾ ಒಂದು ರೀತಿಯ ಅಕ್ರಮಗಳಿಂದ ಸುದ್ದಿಯಾಗುತ್ತಿರುವ ನಗರದ ಪರಪ್ಪನ ಅಗ್ರಹಾರ (Parappana Agrahara)ಕೇಂದ್ರ ಕಾರಾಗೃಹ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಗಾಂಜಾ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದ್ದು, ಜೈಲಿನಲ್ಲಿರುವ ಆರೋಪಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ.

ಗಾಂಜಾ ತಂದರೆ 10 ಸಾವಿರ ಕೊಡ್ತೀನಿ ಎಂದಿದ್ದ ಕೈದಿ

ಮಾರ್ಚ್ 9 ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ನಿಯೋಜನೆಗೊಂಡಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗ–2ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಅವನ ಒಳಉಡುಪಿನಲ್ಲಿ ಹಣ ಮತ್ತು ಕಪ್ಪು ಟೇಪ್‌ನಿಂದ ಸುತ್ತಿದ ಒಂದು ಪೊಟ್ಟಣ ಪತ್ತೆಯಾಯಿತು. ಅನುಮಾನಗೊಂಡ ಸಿಬ್ಬಂದಿ ಅದನ್ನು ತೆರಳಿ ಪರಿಶೀಲಿಸಿದಾಗ ಅದರೊಳಗೆ ಗಾಂಜಾ ಇರುವುದನ್ನು ಕಂಡುಬಂದಿದೆ.

ಪ್ರಕಾಶ್ ಗಾವಡೆ ಕೆಎಸ್‌ಐಎಸ್‌ಎಫ್ ಸಿಬ್ಬಂದಿಯ ಕಣ್ಣು ತಪ್ಪಿಸಿ ಗಾಂಜಾ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಅವನನ್ನು ವಶಕ್ಕೆ ಪಡೆದ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಜೈಲಿನಲ್ಲಿರುವ ಕೊಲೆ ಪ್ರಕರಣದ ಆರೋಪಿಯೊಬ್ಬನು ಪ್ರಕಾಶ್‌ಗೆ ಕರೆ ಮಾಡಿ ಗಾಂಜಾ ತಂದುಕೊಡಲು ಸೂಚಿಸಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಹೊರಗಿನಿಂದ ಗಾಂಜಾ ತಂದು ಜೈಲಿನೊಳಗೆ ತಲುಪಿಸಿದರೆ ಹತ್ತು ಸಾವಿರ ರೂಪಾಯಿ ನೀಡುವುದಾಗಿ ಆ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ ಮೊದಲ ಭೇಟಿಯಲ್ಲೇ ಪರಪ್ಪನ ಅಗ್ರಹಾರದಲ್ಲಿ ಎಲ್ಲರ ಬೆವರಿಳಿಸಿದ ನೂತನ ಡಿಜಿಪಿ ಅಲೋಕ್ ಕುಮಾರ್

ಈ ಹಿಂದೆಯೂ ವಾರ್ನ್​ ಮಾಡಿದ್ರು ಡಿಜಿಪಿ

ಕಳೆದ ಡಿಸೆಂಬರ್​ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಿಂಚಿನ ಸಂಚಾರ ನಡೆಸಿದ್ದ ಡಿಜಿಪಿ, ಅಡುಗೆ ಮನೆ, ಆಸ್ಪತ್ರೆಗೂ ವಿಸಿಟ್ ಮಾಡಿದ್ದರು. ವೈದ್ಯರು ಚಿಕಿತ್ಸೆ ಮಾತ್ರ ಕೋಡಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಾಣೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ನೇರವಾಗಿ ಹೇಳಿದ್ದರು. ಅಡುಗೆ ಮನೆಯ ಸಿಬ್ಬಂದಿಗೂ ಎಚ್ಚರಿಸಿದ್ದ ಅವರು, ಎಡಿಷನಲ್​​ ಆ್ಯಕ್ಟಿವಿಟಿಗಳು ಬಂದ್​​ ಆಗಬೇಕು ಎಂದಿದ್ದರು. ಜೈಲಿನ ಬೇಕರಿಗೂ ಡಿಜಿಪಿ ಭೇಟಿ ನೀಡಿದ್ದು, ಯೀಸ್ಟ್ನಿಂದ ವೈನ್ ತಯಾರಿಸಿದ್ರೆ ವೈಲೆಂಟ್ ಆಗಬೇಕಾಗುತ್ತೆ ಎಂದು ಎಚ್ಚರಿಸಿದ್ದರು. ಇವೆಲ್ಲದರ ನಡುವೆ ಮತ್ತೊಮ್ಮೆ ಇಂತಹ ಅಕ್ರಮಗಳು ಜೈಲಿನಲ್ಲಿ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿಗೆ ಆಗಾಗ ಯಶ್ ಬಂದು ಹೋಗ್ತಿದ್ರು ಯಾರಿಗೂ ಕಾಣಿಸಿಕೊಳ್ಳದೆ ಇದ್ದಿದ್ದು ಹೇಗೆ?

ನಟ ರಾಕಿಂಗ್ ಸ್ಟಾರ್ ಯಶ್ (Yash) ಅವರು ಸದ್ಯ ಬೆಂಗಳೂರು ಹಾಗೂ ಮುಂಬೈ ಮಧ್ಯೆ ಓಡಾಟ ನಡೆಸುತ್ತಿದ್ದಾರೆ. ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾ ಹಾಗೂ ‘ರಾಮಾಯಣ’ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಈ ಕಾರಣದಿಂದ ಅವರು ಮುಂಬೈಗೆ ತೆರಳುತ್ತಿದದಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದ್ದು, ಅವರು ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ.

‘ಕೆಜಿಎಫ್’ ಚಿತ್ರಕ್ಕಾಗಿ ಯಶ್ ಅವರು ಉದ್ದನೆಯ ಕೂದಲು ಹಾಗೂ ಗಡ್ಡ ಬಿಟ್ಟಿದ್ದರು. ಮೊದಲ ಭಾಗ ರಿಲೀಸ್ ಆಗುತ್ತಿದ್ದಂತೆ ಇದಕ್ಕೆ ಕತ್ತರಿ ಹಾಕಿದರು. ಆ ಬಳಿಕ ಎರಡನೇ ಭಾಗದ ಶೂಟಿಂಗ್ ಸಮಯದಲ್ಲಿ ಅವರು ಮತ್ತೆ ಉದ್ದ ಕೂದಲು ಹಾಗೂ ಗಡ್ಡ ಬಿಟ್ಟರು. ನಂತರ ಅದೇ ಲುಕ್​​ನಲ್ಲಿ ಹಲವು ವರ್ಷ ಇದ್ದರು. ‘ಟಾಕ್ಸಿಕ್’ ಚಿತ್ರದಲ್ಲೂ ಯಶ್ ಉದ್ದ ಕೂದಲಲ್ಲಿ ಮಿಂಚಿದ್ದಾರೆ.

ವಿಶೇಷ ಎಂದರೆ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರದ್ದು ದ್ವಿಪಾತ್ರ. ಒಂದು ಪಾತ್ರದ ಲುಕ್​​ಗಾಗಿ ಉದ್ದ ಕೂದಲು ಬಿಟ್ಟರೆ, ಮತ್ತೊಂದು ಪಾತ್ರಕ್ಕಾಗಿ ಅವರು ಗಡ್ಡ ಹಾಗೂ ಕೂದಲ ಬೋಳಿಸಿದ್ದರು. ಈಗ ಎಲ್ಲ ಕಡೆಗಳಲ್ಲೂ ಅವರು ಹೊಸ ಹೇರ್​​ಸ್ಟೈಲ್​​ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಯಶ್ ಕೊಟ್ಟ ಉಡುಗೊರೆಯೇನು? ರಾಧಿಕಾ ಪಂಡಿತ್ ಉತ್ತರ ಕೇಳಿ

ಇತ್ತೀಚೆಗೆ ಮುಂಬೈನ ಕಾಲಿನಾ ಟರ್ಮಿನಲ್​​ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ, ಈ ಟರ್ಮಿನಲ್ ಅಲ್ಲಿ, ಪ್ರೈವೆಟ್ ಜೆಟ್​​​ಗಳು ಲ್ಯಾಂಡ್ ಆಗುತ್ತವೆ. ಅಂದರೆ ಯಶ್ ಅವರು ಖಾಸಗಿ ಜೆಟ್ ಮೂಲಕ ಬೆಂಗಳೂರು ಹಾಗೂ ಮುಂಬೈ ಮಧ್ಯೆ ಓಡಾಟ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಕಾರಣದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿಲ್ಲ. ಅವರ ಲುಕ್ ಯಾರಿಗೂ ಕಾಣಿಸದೆ ಇರುವಂತೆ ನೋಡಿಕೊಳ್ಳುವ ಚಾಲೆಂಜ್ ಅವರಿಗೆ ಇತ್ತು. ಅಲ್ಲದೆ, ಕೆಲಸಗಳು ಅಂದುಕೊಂಡ ಸಮಯಕ್ಕೆ ಮುಗಿಯೋದಿಲ್ಲ. ಹೀಗಾಗಿ, ಓಡಾಟಕ್ಕೆ ಖಾಸಗಿ ಜೆಟ್ ಬಳಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ದ್ವಿಚಕ್ರ ವಾಹನಗಳಿಗೆ ನೈಸ್​​ ರಸ್ತೆ ಶೀಘ್ರ ಟೋಲ್​​ ಮುಕ್ತ?

ಬೆಂಗಳೂರು, ಮಾರ್ಚ್​​ 12: ನಗರದ ಪ್ರಮುಖ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಆಗಿರುವ ನೈಸ್​​ ರಸ್ತೆಯು, ಸಂಚಾರ ದಟ್ಟಣೆಯನ್ನು ತಪ್ಪಿಸಲು ಮತ್ತು ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಬಹಳ ಉಪಯುಕ್ತ ಎಂದೇ ಭಾವಿಸಲಾಗಿದೆ. ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿಯ PES ಕಾಲೇಜು ಬಳಿ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ರೋಡ್​​ ಶೀಘ್ರದಲ್ಲೇ ಉದ್ಘಾಟನೆಯಾಗುವ ನಿರೀಕ್ಷೆ ಇರುವ ನಡುವೆ ರಾಜ್ಯ ಸರ್ಕಾರ ಮತ್ತೊಂದು ಗುಡ್​​ ನ್ಯೂಸ್​​ ನೀಡಿದೆ. ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಂದ ಟೋಲ್ ವಸೂಲಿ ಮಾಡುವುದನ್ನು ರದ್ದುಪಡಿಸುವ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ರಾಮೋಜಿ ಗೌಡ ಅವರು ನೈಸ್ ರಸ್ತೆ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ವಿಷಯವನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ. ನೈಸ್ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತು ಅಪಘಾತಗಳು ಹೆಚ್ಚುತ್ತಿವೆ, ಜೊತೆಗೆ ರಸ್ತೆ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ರಾಮೋಜಿ ಗೌಡ ಆರೋಪಿಸಿದ್ದು, ರಾಜ್ಯ ಸರ್ಕಾರ ಮತ್ತು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ನಡುವೆ ಮಾಡಿಕೊಂಡಿರುವ ಒಪ್ಪಂದ ಅವಧಿ ಮುಕ್ತಾಯವಾಗುತ್ತಿದೆ. ಹೀಗಿದ್ದರೂ ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಒಪ್ಪಂದದಲ್ಲಿ ಯಾವ ಯಾವ ಷರತ್ತುಗಳನ್ನು ವಿಧಿಸಲಾಗಿತ್ತು ಮತ್ತು ಅದನ್ನು ನವೀಕರಿಸಲಾಗಿದೆಯೇ ಎಂಬುದರ ಕುರಿತು ಮಾಹಿತಿ ನೀಡುವಂತೆಯೂ ಅವರು ಕೇಳಿದ್ದರು. ಜೊತೆಗೆ ಟೋಲ್ ದರ ಹೆಚ್ಚಳಕ್ಕೆ ಕಂಪನಿಗೆ ಸರ್ಕಾರದ ಅನುಮೋದನೆ ಪಡೆದಿದೆಯೇ ಹಾಗೂ ನೈಸ್ ರಸ್ತೆಯನ್ನು ಸರ್ಕಾರದ ವ್ಯಾಪ್ತಿಗೆ ತರಲು ಸರ್ಕಾರ ಯೋಚಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಕೇಳಿದ್ದರು.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ; ಫ್ರೀಡಂ ಪಾರ್ಕ್​​ ಸುತ್ತಮುತ್ತ ಇಂದು ಸಂಚಾರ ಮಾರ್ಗ ಬದಲಾವಣೆ

ಇದಕ್ಕೆ ಉತ್ತರಿಸಿದ ಸಚಿವ ಸತೀಶ್ ಜಾರಕಿಹೊಳಿ, ಗೃಹ ಸಚಿವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಚಿವ ಸಂಪುಟದ ಉಪ ಸಮಿತಿ ಯೋಜನೆಯ ಸ್ಥಿತಿ, ಒಪ್ಪಂದದ ಷರತ್ತುಗಳು, ಟೋಲ್ ವಸೂಲಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿಶೀಲಿಸಲಿದೆ. ಉಪ ಸಮಿತಿ ತನ್ನ ವರದಿ ಸಲ್ಲಿಸಿದ ಬಳಿಕ ದ್ವಿಚಕ್ರ ವಾಹನಗಳಿಗೆ ಟೋಲ್ ರದ್ದುಪಡಿಸುವ ಯೋಜನೆ ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಿ… ಗಂಭೀರ್ ಖಡಕ್ ಸೂಚನೆ

ಟೀಮ್ ಇಂಡಿಯಾ ಟಿ20 ವಿಶ್ವಕಪ್​ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಈ ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿರುವ ಗಂಭೀರ್, ಭಾರತ ತಂಡದಲ್ಲಿರುವ ಆಟಗಾರರು ವೈಯುಕ್ತಿಕ ದಾಖಲೆಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಖಡಕ್ ಸೂಚನೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ಮೈಲಿಗಲ್ಲುಗಳ ಯುಗ ಮುಗಿದಿದೆ. ತಮ್ಮ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕು.
ಶತಕ ಅಥವಾ ಅರ್ಧಶತಕಕ್ಕಾಗಿ ಆಡಿ ಸಂಭ್ರಮಿಸುವುದನ್ನು ನಿಲ್ಲಿಸಿ, ಟ್ರೋಫಿಗಳನ್ನು ಗೆದ್ದು ಸಂಭ್ರಮಿಸಬೇಕೆಂದು ಗಂಭೀರ್ ಸೂಚಿಸಿದ್ದಾರೆ.

ತಂಡದ  ಮುಖ್ಯ ಉದ್ದೇಶ ಟ್ರೋಫಿ ಗೆಲ್ಲುವುದೇ ಆಗಿರಬೇಕು. ಇದರ ಹೊರತಾಗಿ ವೈಯಕ್ತಿಕ ರನ್ ಗಳಿಸುವುದಲ್ಲ. ಆಟಗಾರರು ತಮ್ಮ ವೈಯಕ್ತಿಕ ಸ್ಕೋರ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ತಂಡದ ಮೊತ್ತವನ್ನು ಹೆಚ್ಚಿಸಲು ಆಡಬೇಕು ಎಂಬುದನ್ನು ಗೌತಮ್ ಗಂಭೀರ್ ಒತ್ತಿ ಹೇಳಿದ್ದಾರೆ.

ಇದಕ್ಕೆ ಸಂಜು ಸ್ಯಾಮ್ಸನ್ ಅವರ ಉದಾಹರಣೆಯನ್ನು ಗಂಭೀರ್ ಮುಂದಿಟ್ಟಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಸಂಜು ಸ್ಯಾಮ್ಸನ್ ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ 97*, 89 ಮತ್ತು 89 ರನ್ ಗಳಿಸಿದ್ದರು.

ಸಂಜು ತಮ್ಮ ಶತಕಕ್ಕಾಗಿ ನಿಧಾನವಾಗಿ ಆಡಿದ್ದರೆ ತಂಡದ ಮೊತ್ತ 250 ದಾಟುತ್ತಿರಲಿಲ್ಲ.  ವೈಯಕ್ತಿಕ ದಾಖಲೆಗಿಂತ ತಂಡದ ವೇಗಕ್ಕೆ ಆದ್ಯತೆ ನೀಡಿದ್ದರಿಂದಲೇ ಭಾರತ ಗೆಲ್ಲಲು ಸಾಧ್ಯವಾಯಿತು. ಎಲ್ಲರಲ್ಲೂ ಇಂತಹ ಮನಸ್ಥಿತಿ ಮೂಡಬೇಕು.

ಸ್ವಾರ್ಥಕ್ಕಾಗಿ ಆಡುವುದನ್ನು ನಿಲ್ಲಿಸಿ ತಂಡದ ಗೆಲುವಿಗಾಗಿ ಶ್ರಮಿಸಬೇಕು. ಅಲ್ಲದೆ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಲೇಬೇಕು. ನನ್ನ ಕೆಲಸ ಬಲಿಷ್ಠ ತಂಡವನ್ನು ರೂಪಿಸುವುದಾಗಿದೆ. ಬದಲಾಗಿ ಸೂಪರ್ ಸ್ಟಾರ್​​ಗಳನ್ನು ಹುಟ್ಟು ಹಾಕುವುದಲ್ಲ ಎಂದು ಗೌತಮ್ ಗಂಭೀರ್ ಪುನರುಚ್ಚರಿಸಿದ್ದಾರೆ.

ನನ್ನ ಉದ್ದೇಶ ಸೂಪರ್ ಟೀಮ್ ರೂಪಿಸುವುದು. ಬದಲಾಗಿ ಸೂಪರ್ ಸ್ಟಾರ್​ಗಳನ್ನು ಹುಟ್ಟುಹಾಕುವುದಲ್ಲ. ಹೀಗಾಗಿ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಿ, ತಂಡದ ಹಿತಾಸಕ್ತಿಗಾಗಿ ಆಡಬೇಕು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಖಡಕ್ ಸೂಚನೆ ನೀಡಿದ್ದಾರೆ.

ಇಲ್ಲಿ ಗೌತಮ್ ಗಂಭೀರ್ ವೈಯುಕ್ತಿಕ ದಾಖಲೆಗಳಿಗಾಗಿ ಆಡುವುದನ್ನು ನಿಲ್ಲಿಸಬೇಕೆಂದು ಒತ್ತಿ ಒತ್ತಿ ಹೇಳಿರುವ ಉದ್ದೇಶವೇನು? ಇದನ್ನು ಯಾರಿಗಾಗಿ ಹೇಳಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಮುಂಬರುವ ಏಕದಿನ ವಿಶ್ವಕಪ್​​ಗೂ ಮುನ್ನ ಗಂಭೀರ್ ಇಂತಹದೊಂದು ಖಡಕ್ ಸೂಚನೆಗಳನ್ನು ಯಾರಿಗೆ ನೀಡಿದ್ದಾರೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.

ಇದನ್ನೂ ಓದಿ: ICC T20I Rankings: ಐಸಿಸಿ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್‌ ಪ್ರಕಟ

ಒಟ್ಟಿನಲ್ಲಿ ಟಿ20 ವಿಶ್ವಕಪ್​ ಗೆದ್ದ ಬಳಿಕ ಗೌತಮ್ ಗಂಭೀರ್ ಹೊಸ ಉತ್ಸಾಹದಲ್ಲಿದ್ದು, ಈ ಉತ್ಸಾಹದೊಂದಿಗೆ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದ್ದಾರೆ.

 

Source link

Horoscope Today 12​​​​​​th​​ March​: ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 12​​​​​​​, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದಲ್ಲಿ, ಮೂಲಾ ನಕ್ಷತ್ರ, ಸಿದ್ಧಿ ಯೋಗ ಇರತಕ್ಕಂತಹ ಈ ದಿನದ ಗ್ರಹಗಳ ಸ್ಥಾನ ಮತ್ತು ಅವುಗಳ ಪ್ರಭಾವದ ಬಗ್ಗೆ ವಿವರಿಸಲಾಗಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನು ರಾಶಿಯಲ್ಲಿ ಸಂಚಾರ ಮಾಡಲಿದ್ದಾನೆ.

ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೂ ಆರ್ಥಿಕ ಸ್ಥಿತಿ, ಉದ್ಯೋಗ, ಕುಟುಂಬ, ಆರೋಗ್ಯ, ಪ್ರೇಮ ವ್ಯವಹಾರಗಳು, ವಿದ್ಯಾರ್ಥಿ ಜೀವನ, ಪ್ರಯಾಣ ಯೋಗ ಮತ್ತು ಶುಭ-ಅಶುಭ ಘಟನೆಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ, ಪ್ರತಿ ರಾಶಿಯವರಿಗೆ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಪಠಿಸಬೇಕಾದ ವಿಶೇಷ ಮಂತ್ರಗಳನ್ನು ಸಹ ಸೂಚಿಸಲಾಗಿದೆ.

 

 

 

Source link

ಮದುವೆಯಾಗಿ 3 ತಿಂಗಳೊಳಗೆ ಪತಿಗೆ ಮುಹೂರ್ತ ಇಟ್ಟ ಪತ್ನಿ: ಪ್ರಿಯಕರನ ಜೊತೆ ಸೇರಿ ಕೊಲೆ

ತುಮಕೂರು, ಮಾರ್ಚ್​​ 12: ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​ ಸಿಕ್ಕಿದೆ. ಮದುವೆಯಾಗಿ ಮೂರು ತಿಂಗಳು ಕಳೆಯುವುದರ ಒಳಗೆ ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಶಾಕಿಂಗ್​​ ವಿಚಾರ ತನಿಖೆ ವೇಳೆ ಬಯಲಾಗಿದೆ. ಪ್ರಕರಣ ಸಂಬಂಧ ಫರ್ಜಾನ (31), ಧನರಾಜ್ (24) ವೆಂಕಟೇಶ್ (24) ಮತ್ತು ದರ್ಶನ್ (24) ಸೇರಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಏನು?

ಗುಜರಿ ವ್ಯಾಪಾರಿಯಾಗಿದ್ದ ಮನ್ಸೂರ್ ಪಾಷ ಕುಟುಂಬದವರ ನಿಶ್ಚಯದಂತೆ ಇದೇ ವರ್ಷ ಜನವರಿಯಲ್ಲಿ ಫರ್ಜಾನ ಎಂಬಾಕೆಯನ್ನ ವಿವಾಹವಾಗಿದ್ದ. ತಿಪಟೂರು ಪಟ್ಟಣದಲ್ಲಿ ವಾಸವಾಗಿದ್ದ ಮನ್ಸೂರ್ ಮಾರ್ಚ್ 4ರಂದು ಗುಜರಿ ಸಾಮಗ್ರಿ ತರಲೆಂದು ಹೋದವ ನಾಪತ್ತೆಯಾಗಿದ್ದ. ಆ ಬಳಿಕ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದಾಗ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟವೊಂದರಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಚಿಕ್ಕಮಗಳೂರಿನ ಯುವಕರ ಗ್ಯಾಂಗ್ ಕೃತ್ಯ ಎಸಗಿರೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಟೆಕ್ನಿಕಲ್ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಆರಂಭದಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

ಇದನ್ನೂ ಓದಿ: ಮದ್ಯದ ನಶೆಯಲ್ಲಿದ್ದವ ಹರಿಸಿದ್ದು ರಕ್ತದಕೋಡಿ; ಡಬಲ್​​ ಮರ್ಡರ್​​ಗೆ ಬೆಚ್ಚಿಬಿದ್ದ ಭಾಗಮಂಡಲ

ಆರೋಪಿಗಳ ಪೈಕಿ ಧನರಾಜ್​​ ಎಂಬಾತನ ಜೊತೆ ಕೊಲೆಯಾದ ಮನ್ಸೂರ್​​ ಪತ್ನಿ ಫರ್ಜಾನ್ ಪ್ರೇಮ ಸಂಬಂಧ ಹೊಂದಿದ್ದಳು. ಕಳೆದ ಏಳು ತಿಂಗಳಿನಿಂದ ಇದು ನಡೆಯುತ್ತಿತ್ತು ಎನ್ನಲಾಗಿದೆ. ಅಸಲಿಗೆ ಈ ಮೊದಲು ಫರ್ಜಾನಗೆ ನಾಲ್ಕು ವರ್ಷದ ಹಿಂದೆ ಪೊಷಕರ ನಿಶ್ಚಿಯದಂತೆ ವಿವಾಹವಾಗಿತ್ತು.ಆದರೆ ಅನಾರೋಗ್ಯದಿಂದಾಗಿ ಈಕೆಯ ಗಂಡ ಮೃತಪಟ್ಟಿದ್ದ. ಆ ಬಳಿಕ ಒಂಟಿಯಾಗಿದ್ದ ಫರ್ಜಾನ ಅಕ್ಕನ ಭೇಟಿಗೆಂದು ಚಿಕ್ಕಮಗಳೂರಿಗೆ ತೆರಳುತ್ತಿದ್ದಳು. ಈಕೆಯ ಸಹೋದರಿ ವೆಂಕಟೇಶ್​​ ಜೊತೆ ಸಂಬಂಧ ಹೊಂದಿದ್ದು, ಆತನ ಮೂಲಕ ಕ್ಯಾಟರಿಂಗ್ ಕೆಲಸಗಾರನಾಗಿದ್ದ ಧನರಾಜ್ ಪರಿಚಯವಾಗಿತ್ತು. ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಲವ್​​ನಲ್ಲಿ ಬಿದ್ದಿದ್ದ ಜೋಡಿ ಚಿಕ್ಕಮಗಳೂರಿನ ತುಂಬ ಓಡಾಡಿದ್ದು, ಒಮ್ಮೆ ತಿಪಟೂರಿನ ರೈಲು ನಿಲ್ದಾಣದ ಬಳಿ ಸಿಕ್ಕಿಬಿದ್ದಿದ್ದರು. ಬಳಿಕ ತರಾತುರಿಯಲ್ಲಿ ಮನ್ಸೂರ್​​ ಜೊತೆ ಫರ್ಜಾನ ವಿವಾಹವನ್ನು ಕುಟುಂಬಸ್ಥರು ನೆರವೇರಿಸಿದ್ದರು ಎನ್ನಲಾಗಿದೆ.

ಇನ್ನು ವಿವಾಹದ ಬಳಿಕ ಧನರಾಜ್​​ ಜೊತೆ ಫರ್ಜಾನಗೆ ಇದ್ದ ಸಂಪರ್ಕ ಕಡಿತಗೊಂಡಿತ್ತು. ಆದರೆ ಆತನಿಗಾಗಿ ಹೊಸ ಸಿಮ್ ಖರೀದಿ ಮಾಡಿದ್ದ ಫರ್ಜಾನ ಮತ್ತೆ ಧನರಾಜ್​​ನನ್ನು ಫೋನ್​​ ಮೂಲಕ ಸಂಪರ್ಕಿಸಿದ್ದಳು. ಮತ್ತೆ ತಾವು ಒಂದಾಗಬೇಕೆಂದು ಬಯಸಿ ಮನ್ಸೂರ್​​ ಕೊಲೆಗೆ ಪ್ಲ್ಯಾನ್​​ ಮಾಡಿದ್ದರು. ಅದರಂತೆ ದರ್ಶನ್ ಮುಖಾಂತರ ಮಾರ್ಚ್ 4ರಂದು ಗುಜರಿ ವಸ್ತುಗಳು ಇರೋದಾಗಿ ಹೇಳಿ ಮನ್ಸೂರ್​​ಗೆ ಕರೆ ಮಾಡಿ ಆರೋಪಿಗಳು ಕರೆಸಿಕೊಂಡಿದ್ದರು. ಆತ ಬರುತಿದ್ದಂತೆ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಕೊಲೆ ಬಳಿಕ ಆರೋಪಿಗಳು ಪರಾರಿಯಾಗಿದ್ದರೂ, ಮನ್ಸೂರ್​​ಗೆ ದರ್ಶನ್​​ ಮಾಡಿದ್ದ ಕರೆಯಿಂದ ಎಲ್ಲರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link