ಹರೀಶ್ ರಾಣಾ ದಯಾಮರಣದ ತೀರ್ಪಿಗೆ ಅಡಿಪಾಯ ಹಾಕಿತ್ತು ಅರುಣಾ ಶಾನಭಾಗ್ ಕೇಸ್; ಏನಿದು ಪ್ರಕರಣ?
ನವದೆಹಲಿ, ಮಾರ್ಚ್ 11: ಆತ ಉತ್ತರ ಪ್ರದೇಶದ ಸ್ಪುರದ್ರೂಪಿ ಯುವಕ. ಹೆಸರು ಹರೀಶ್ ರಾಣಾ. ಎಂಜಿನಿಯರಿಂಗ್ ಓದುತ್ತಿದ್ದ ಅವರು 2003ರಲ್ಲಿ 4ನೇ ಅಂತಸ್ತಿನಿಂದ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಗಾಯವಾಗಿ ಕೋಮಾದಲ್ಲಿದ್ದರು. 13 ವರ್ಷಗಳಿಂದ ಕೋಮಾದಲ್ಲಿದ್ದ ಅವರು ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಇರಲಿಲ್ಲ. ಹೀಗಾಗಿ, ಅವರ ತಂದೆ-ತಾಯಿ ತಮ್ಮ ಮಗನಿಗೆ ದಯಾಮರಣ ನೀಡಬೇಕೆಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ದಯಾಮರಣವೆಂದರೆ ಆ ವ್ಯಕ್ತಿಯ ಜೀವ ಉಳಿಸಲು ನೀಡಲಾಗುತ್ತಿರುವ ಎಲ್ಲ ಚಿಕಿತ್ಸೆ, ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದುಹಾಕುವುದು. ಕೊನೆಗೂ ಹರೀಶ್ ರಾಣಾ…