All posts by nagaraj11081993

ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ತೆಲುಗು ರಾಜ್ಯಗಳಲ್ಲಿ ಫ್ಯಾನ್ಸ್ ವಾರ್​​ಗಳು ಸಾಮಾನ್ಯ. ಕರ್ನಾಟಕಕ್ಕೆ ಹೋಲಿಸಿದರೆ ತುಸು ಹೆಚ್ಚೇ ಎನ್ನಬಹುದು. ಮೆಗಾಸ್ಟಾರ್ ಅಭಿಮಾನಿಗಳು ಮತ್ತು ನಂದಮೂರಿ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್​​ಗೆ ದಶಕಗಳ ಇತಿಹಾಸವಿದೆ. ಇವುಗಳ ನಡುವೆ ಜೂ ಎನ್​​ಟಿಆರ್ vs ಪವನ್ ಕಲ್ಯಾಣ್, ಪವನ್ ಕಲ್ಯಾಣ್ (Pawan Kalyan) vs ಮಹೇಶ್ ಬಾಬು ಹೀಗೆ ಬೇರೆ ಬೇರೆ ಫ್ಯಾನ್ಸ್ ವಾರ್​​ಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಮ್ಮೆ ಪವನ್ ಕಲ್ಯಾಣ್ ಮತ್ತು ಮಹೇಶ್ ಬಾಬು ಅಭಿಮಾನಿಗಳ ನಡುವೆ ಕಿರಿಕ್ ಶುರುವಾಗಿದೆ. ಇದಕ್ಕೆ ಕಾರಣ ಆಗಿರುವುದು ಪವನ್ ಕಲ್ಯಾಣ್ ಅವರ ಆಪ್ತ ನಿರ್ದೇಶಕರೊಬ್ಬರ ಟ್ವೀಟ್.

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19 ರಂದು ‘ಧುರಂಧರ್ 2’ ಸಿನಿಮಾದ ಎದುರು ಅದು ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಪವನ್ ಕಲ್ಯಾಣ್​​ರ ಆಪ್ತ ನಿರ್ದೇಶಕರುಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಸಹಜವಾಗಿಯೇ ಪವನ್ ಕಲ್ಯಾಣ್ ಅಭಿಮಾನಿಗಳು ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

ಇತ್ತೀಚೆಗೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿ, ಮಹೇಶ್ ಬಾಬು ಸಿನಿಮಾಗಳ ರೆಕಾರ್ಡ್ ಅನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬ್ರೇಕ್ ಮಾಡಬೇಕು ಎಂದಿದ್ದ. ಮಹೇಶ್ ಬಾಬು ಎಂದು ನೇರವಾಗಿ ಹೆಸರು ಬಳಸುವ ಬದಲಿಗೆ ಮಹೇಶ್ ಬಾಬು ಅಡ್ಡ ಹೆಸರಾದ ‘ಬಾಬ್’ ಎಂದು ಬರೆದಿದ್ದ. ಆ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿದ್ದ ಹರೀಶ್ ಶಂಕರ್ ‘ತಥಾಸ್ತು’ ಎಂದಿದ್ದರು. ಆ ಮೂಲಕ ಮಹೇಶ್ ಬಾಬು ರೆಕಾರ್ಡ್​​ಗಳನ್ನು ಬ್ರೇಕ್ ಮಾಡುತ್ತೇನೆ ಎಂದಿದ್ದರು. ಹರೀಶ್ ಶಂಕರ್ ಅವರ ಈ ಟ್ವೀಟ್ ಮಹೇಶ್ ಅಭಿಮಾನಿಗಳನ್ನು ಕೆರಳಿಸಿದೆ.

ಆದರೆ ಶೀಘ್ರವೇ ತಮ್ಮ ತಪ್ಪು ತಿಳಿದುಕೊಂಡ ಹರೀಶ್ ಶಂಕರ್ ಕೂಡಲೇ ತಮ್ಮ ‘ತಥಾಸ್ತು’ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಲ್ಲದೆ, ತಾವು ಟ್ವೀಟ್​​ ಅನ್ನು ಪೂರ್ಣವಾಗಿ ಓದದೆ ಹಾಗೂ ಸರಿಯಾಗಿ ಅರ್ಥೈಸಿಕೊಳ್ಳದೆ ಪ್ರತಿಕ್ರಿಯೆ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಟ್ವೀಟ್​​ನಿಂದ ಮಹೇಶ್ ಬಾಬು ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದರೆ ಕ್ಷಮೆ ಕೇಳುವುದಾಗಿ ಸಹ ಹರೀಶ್ ಶಂಕರ್ ಹೇಳಿದ್ದಾರೆ.

ಇದನ್ನೂ ಓದಿ:ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

ಟಾಲಿವುಡ್ ಖ್ಯಾತ ನಿರ್ದೇಶಕ ಹರೀಶ್ ಶಂಕರ್ ಅವರು ತಮ್ಮ ಮುಂಬರುವ ಚಿತ್ರ ‘ಉಸ್ತಾದ್ ಭಗತ್ ಸಿಂಗ್’ (ಪವನ್ ಕಲ್ಯಾಣ್ ನಟನೆಯ ಸಿನಿಮಾ) ಪ್ರಚಾರದ ಸಂದರ್ಭದಲ್ಲಿ ಮಾಡಿದ್ದ ಒಂದು ಟ್ವೀಟ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಅವರು ಮಹೇಶ್ ಬಾಬು ಮತ್ತು ಅವರ ಅಭಿಮಾನಿಗಳಿಗೆ ಬೇಷರತ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಟ್ವೀಟ್ ಮಾಡಿರುವ ಹರೀಶ್ ಶಂಕರ್, ‘ಸೆನ್ಸಾರ್ ಮಂಡಳಿ ಅಧಿಕಾರಿಗಳ ಭೇಟಿ, ಪೆದ್ದಮ್ಮ ದೇವಸ್ಥಾನದ ದರ್ಶನ ಮತ್ತು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತಾನು ತುಂಬಾ ಬ್ಯುಸಿಯಾಗಿದ್ದೆ. ಆ ಹಡಬಡಿಕೆಯಲ್ಲಿ ಅಭಿಮಾನಿಗಳ ಶುಭಾಶಯಗಳಿಗೆ ಪ್ರತಿಕ್ರಿಯಿಸುವಾಗ, ಟ್ವೀಟ್ ಅನ್ನು ಪೂರ್ತಿಯಾಗಿ ಓದದೆ ಕೇವಲ ಮೊದಲ ಅರ್ಧ ಭಾಗವನ್ನು ನೋಡಿ ‘ತಥಾಸ್ತು’ ಎಂದು ಉತ್ತರಿಸಿದ್ದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮೇಲೆ ನನಗೆ ಅಪಾರ ಗೌರವವಿದೆ. ರಾಜಮೌಳಿ-ಮಹೇಶ್ ಬಾಬು ಅವರ ‘ವಾರಣಾಸಿ’ ಸಿನಿಮಾ ದೊಡ್ಡ ದಾಖಲೆ ಬರೆಯಲಿದೆ ಎಂಬ ನಂಬಿಕೆ ನನಗಿದೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಸಿನಿಮಾ ಬಿಡುಗಡೆಗೆ ಕೇವಲ 10 ದಿನಗಳಿರುವಾಗ ಉದ್ದೇಶಪೂರ್ವಕವಾಗಿ ಇಂತಹ ತಪ್ಪು ಮಾಡುವಷ್ಟು ಅಜ್ಞಾನಿ ನಾನಲ್ಲ. ತಿಳಿಯದೇ ಮಾಡಿದ ಈ ತಪ್ಪಿಗೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್​​: ತನಿಖೆ ವೇಳೆ ಸಿಸಿಟಿವಿ ರಹಸ್ಯ ಬಯಲು

ಬೆಂಗಳೂರು, ಮಾರ್ಚ್​​ 11: ನಗರದ ಅಮೃತಹಳ್ಳಿಯ ವಿಲ್ಲಾದಲ್ಲಿ ಕಾಲೇಜು ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಪೊಲೀಸ್​​ ತನಿಖೆ ವೇಳೆ ಬಗೆದಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಲೇ ಇವೆ. ಬೆಂಗಳೂರಿನ ಬೇರೆ ಬೇರೆ ಕಡೆ, ಗೋವಾ ಮತ್ತು ವಿದೇಶದಲ್ಲಿಯೂ ಆರೋಪಿಗಳು ಪಾರ್ಟಿ ನಡೆಸಿದ್ದು, ಈ ವೇಳೆ ಡ್ರಗ್ಸ್​​ ಬಳಸಿರೋದು ದೃಢಪಟ್ಟಿದೆ. ಆರೋಪಿಗಳ ಮೆಡಿಕಲ್ ಟೆಸ್ಟ್ ವರದಿಯೂ ಪಾಸಿಟಿವ್​​ ಬಂದಿದ್ದು, ಗೋವಾದಿಂದ ಇವರಿಗೆ ಮಾದಕ ವಸ್ತು ಸರಬರಾಜಾಗಿತ್ತು ಎಂಬ ವಿಷಯವೂ ಪೊಲೀಸರಿಗೆ ಗೊತ್ತಾಗಿದೆ.

ಸಿಸಿಟಿವಿ ದೃಶ್ಯಗಳು ಪತ್ತೆ

ಗ್ಯಾಂಗ್​​ ರೇಪ್​​ ನಡೆದಿರುವ ಅಮೃತಹಳ್ಳಿಯ ವಿಲ್ಲಾಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಡಿವಿಆರ್​​ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪಾರ್ಟಿಯಲ್ಲೇ ಇದ್ದರು ಎಂಬುದು ದೃಢಪಟ್ಟಿದ್ದು, ಸದ್ಯ ಆರೋಪಿಗಳ ಚಹರೆ ಮ್ಯಾಚ್ ಮಾಡಲು ಸಿಸಿಟಿವಿ ದೃಶ್ಯವಳಿಗಳನ್ನು FSLಗೆ ರವಾನೆ ಮಾಡಲಾಗಿದೆ. ಇನ್ನು ಈ ವಿಲ್ಲಾದಲ್ಲಿ ಎಷ್ಟು ದಿನ ಪಾರ್ಟಿ ನಡೆದಿತ್ತು? ಪಾರ್ಟಿಗೆ ಯಾರು ಯಾರು ಬಂದಿದ್ದರು? ಎಂಬ ಬಗ್ಗೆಯೂ ತನಿಖೆ ನಡೆದಿದೆ. ಗುತ್ತಿಗೆದಾರನಾಗಿದ್ದ ಆರೋಪಿ ಅನಿರುದ್​​ ಪಾರ್ಟಿಗೆ ತಗಲುವ ವೆಚ್ಚವನ್ನು ಭರಿಸಿದ್ದ. ಆತನೇ ವಿಲ್ಲಾ ಬುಕ್​​ ಮಾಡಿದ್ದ ಎಂಬುದು ಪತ್ತೆಯಾಗಿರುವ ಹಿನ್ನೆಲೆ ಆತ ಈ ಹಿಂದೆ ಯಾವೆಲ್ಲ ವಿಲ್ಲಾಗಳನ್ನು ಬುಕ್​​ ಮಾಡಿದ್ದ ಎಂಬ ಪರಿಶೀಲನೆಗೆ ಖಾಕಿ ಮುಂದಾಗಿದೆ.

ಇದನ್ನೂ ಓದಿ: ಕೊಲೆ ಆರೋಪಿಯನ್ನು 68 ಬಾರಿ ಮಾರಕಾಸ್ತ್ರಗಳಿಂದ ಕೊಚ್ಚಿದ ಪುಂಡರು; ವ್ಯಕ್ತಿ ಬದುಕಿದ್ದೇ ಪವಾಡ!

ಆರೋಪಿಗಳನ್ನು ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದು, ಆರೋಪಿಗಳ ಆದಾಯದ ಮೂಲ ಪತ್ತೆಗೂ ಪೊಲೀಸರು ಮುಂದಾಗಿದ್ದಾರೆ. ಡಿಕ್ಸನ್ ಮತ್ತು ಶ್ರವಣ್ ಹುಡುಗಿಯರನ್ನು ಪಟಾಯಿಸಿ ಪಾರ್ಟಿಗೆ ಕರೆಸುತ್ತಿದ್ದರು. ಇವರಿಬ್ಬರಿಗೂ ಕಾಲೇಜು ಹುಡುಗಿಯರ ಪಟಾಯಿಸಲು ಖರ್ಚಾಗುವ ಹಣವನ್ನು ನಿಖಿಲ್ ಮತ್ತು ಅನಿರುದ್ ನೀಡುತ್ತಿದ್ದರು ಎನ್ನಲಾಗಿದೆ. ಬಳಿಕ ಯುವತಿಯರನ್ನು ವಿಲ್ಲಾಗೆ ಕರೆತಂದು ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಗೋವಾದಿಂದ ಎಕ್ಸ್‌ಟೆಸಿ ಮಾತ್ರೆಗಳನ್ನು ತರಿಸಿಕೊಂಡು, ಅವುಗಳನ್ನು ಯುವತಿಯರಿಗೆ ನೀಡಿ ಮತ್ತು ಬರುವಂತೆ ಮಾಡುತ್ತಿದ್ದರು. ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯರ ಮೇಲೆ ಈ ಗ್ಯಾಂಗ್ ಅತ್ಯಾಚಾರ ಎಸಗುತ್ತಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಲೈಕಾ ಫೋಟೋ ವೈರಲ್: ‘ನಮ್ಮ ಸಂಬಂಧ ಆ ರೀತಿ ಇಲ್ಲ’ ಎಂದ ಸೋರಬ್ ಬೇಡಿ

ಬಾಲಿವುಡ್‌ನ ಗ್ಲಾಮರಸ್ ನಟಿ ಮಲೈಕಾ ಅರೋರಾ (Malaika Arora)  ಮತ್ತು Splitsvilla X6 ಸ್ಪರ್ಧಿ ಸೋರಬ್ ಬೇಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿತ್ತು. ಇತ್ತೀಚೆಗೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಈ ಚರ್ಚೆ ಶುರುವಾಗಿತ್ತು. ಈಗ ಈ ಎಲ್ಲಾ ವದಂತಿಗಳಿಗೆ ಸೋರಬ್ ಬೇಡಿ (Sorab Bedi) ತೆರೆ ಎಳೆದಿದ್ದಾರೆ. ‘ನಾವಿಬ್ಬರೂ ಕೇವಲ ಸ್ನೇಹಿತರು’ ಎಂದು ಅವರು ಹೇಳಿದ್ದಾರೆ. ಟ್ರೋಲ್ ಮಾಡುವವರ ವಿರುದ್ಧ ಸೋರಬ್ ಬೇಡಿ ಗರಂ ಆಗಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಸೋರಬ್ ಬೇಡಿ, ‘ನಾವಿಬ್ಬರೂ ಕೇವಲ ಸ್ನೇಹಿತರು ಅಷ್ಟೇ. ಜನರು ಯಾವುದನ್ನಾದರೂ ಕಾಮೆಂಟ್ ಮಾಡುವ ಮೊದಲು ಯೋಚಿಸಬೇಕು. ನಮಗೆ ಕಳೆದ 4 ವರ್ಷಗಳಿಂದ ಪರಿಚಯವಿದೆ. 2022ರಲ್ಲಿ ನನ್ನ ಮಾಡೆಲಿಂಗ್ ದಿನಗಳಲ್ಲಿ ನಾನು ಮೊದಲ ಬಾರಿಗೆ ಮಲೈಕಾರನ್ನು ಭೇಟಿಯಾಗಿದ್ದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಸಭ್ಯ ಕಾಮೆಂಟ್‌ಗಳ ಬಗ್ಗೆ ಸೋರಬ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಜನರು ತಮಗೆ ಅನಿಸಿದ್ದೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ. ನಾವು ಈ ಹಿಂದೆಯೂ ಹಲವು ಬಾರಿ ಪಾರ್ಟಿ ಮಾಡಿದ್ದೇವೆ. ನಾನು ಅವರ ಜೊತೆಗಿನ ಫೋಟೋ-ವಿಡಿಯೋಗಳನ್ನು ಈ ಮೊದಲೇ ಹಂಚಿಕೊಂಡಿದ್ದೆ. ಆಗ ನಾನು ಯಾರಿಗೂ ಪರಿಚಯವಿರಲಿಲ್ಲ. ಆದರೆ ಇಂದು ಜನರು ನನ್ನನ್ನು ಗುರುತಿಸುತ್ತಿದ್ದಾರೆ ಅಷ್ಟೇ ವ್ಯತ್ಯಾಸ’ ಎಂದಿದ್ದಾರೆ.

‘ನಮ್ಮ ಬಗ್ಗೆ ಮತ್ತು ಮಲೈಕಾ ಬಗ್ಗೆ ಬರುತ್ತಿರುವ ಕೀಳುಮಟ್ಟದ ಕಾಮೆಂಟ್‌ಗಳನ್ನು ಓದಿದಾಗ ನೋವಾಗುತ್ತದೆ. ಅವರೊಬ್ಬ ಮಹಿಳೆ, ಅವರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಲು ಹೇಗೆ ಸಾಧ್ಯ? ನಿಮ್ಮ ಮನೆಯಲ್ಲೂ ಸಹೋದರಿ ಅಥವಾ ಮಗಳು ಇರುತ್ತಾರೆ ಅಲ್ವೇ? ಸತ್ಯ ತಿಳಿಯದೆ ಮಾತನಾಡುವುದು ಸರಿಯಲ್ಲ’ ಎಂದು ಸೋರಬ್ ಬೇಡಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: 52ರ ವಯಸ್ಸಲ್ಲೂ ಮಲೈಕಾ ಅರೋರಾ ಫಿಟ್ ಆಗಿರುವುದು ಹೇಗೆ? ಡಯಟ್ ಏನು?

ಸೋರಬ್ ಬೇಡಿ ಪ್ರಸಿದ್ಧ ಮಾಡೆಲ್ ಮತ್ತು ನಟ. ಇವರು ‘ದಿಲ್ವಾಲಿ ದುಲ್ಹಾ ಲೇ ಜಾಯೇಗಿ’ ಮತ್ತು ‘ಚಾಂದ್ ಜಲ್ನೇ ಲಗಾ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16ರಲ್ಲಿ ಸ್ಪರ್ಧಿಯಾಗಿದ್ದಾರೆ. ಈ ಹಿಂದೆ ಅಪೂರ್ವ ರಾಮ್​ಪಾಲ್ ಅವರೊಂದಿಗೆ 9 ವರ್ಷಗಳ ಕಾಲ ರಿಲೇಷನ್​ಶೀಪ್​ನಲ್ಲಿ ಇದ್ದರು. ಬಳಿಕ ಬ್ರೇಕಪ್​ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚೀನಾ ಲಿಂಕ್ ಹೊಂದಿರುವ ಮಂಗಳೂರಿನ ಸೈಬರ್ ವಂಚಕರ ಬಂಧನ

ಬೆಂಗಳೂರು, ಮಾರ್ಚ್​ 11: ಮ್ಯೂಲ್ ಅಕೌಂಟ್​ಗಳ ವಿರುದ್ಧದ ಕಾರ್ಯಾಚರಣೆ ವೇಳೆ ಚೀನಾ ಲಿಂಕ್ ಹೊಂದಿದ್ದ ಮಂಗಳೂರಿನ ಸೈಬರ್ ವಂಚಕರಿಬ್ಬರನ್ನು (cyber fraud) ರಾಜ್ಯ ಸೈಬರ್ ಕಮಾಂಡ್ ಯೂನಿಟ್​​ ಬಂಧಿಸಿದೆ. ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಮೊಹಮ್ಮದ್ ಅನೀಸ್ ಮತ್ತು ಸಲೀತ್ ಅಹ್ಮದ್​​​ರನ್ನ ಬಂಧಿಸಲಾಗಿದೆ.

ಬಂಧಿತ ವಂಚಕರು ಟ್ರೇಡಿಂಗ್ ಬಿಸಿನೆಸ್ ಹೆಸರಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿದ್ದರು. ಬಳಿಕ ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳ ವಿವರ ಬಳಕೆ ಮಾಡುತ್ತಿದ್ದರು. ನಿಖರ ಮಾಹಿತಿ‌ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ಮೊಬೈಲ್ ಫೋನ್‌ಗಳು, 18 ಬಿಟ್ ಕಾರ್ಡ್‌ಗಳು, 17 ಬ್ಯಾಂಕ್ ಪಾಸ್‌ಬುಕ್‌ಗಳು, 6 ಚೆಕ್ ಪುಸ್ತಕಗಳು, 1,479.31 USDT (ಕ್ರಿಪ್ಟೋಕರೆನ್ಸಿ) 1 ಕಾರನ್ನು ವಶಕ್ಕೆ ಪಡೆಯಲಾಗಿದೆ.

ಚೀನಾ ಲಿಂಕ್ ಮ್ಯೂಲ್ ಅಕೌಂಟ್ ದಂಧೆ ಹೇಗೆ ನಡೆಯುತ್ತಿತ್ತು?

ಚೀನಾ ಲಿಂಕ್ ಮ್ಯೂಲ್ ಅಕೌಂಟ್ ದಂಧೆ ಒಂದು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಚೀನಾದ ಸೈಬರ್ ವಂಚಕರಿಗೆ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿ ಬೇಕಾಗಿದ್ದರಿಂದ, ಬಂಧಿತ ಆರೋಪಿಗಳು ಭಾರತೀಯರಿಂದ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿಯನ್ನು ಖರೀದಿ ಮಾಡುತ್ತಿದ್ದರು. ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಅವರು ಚೀನಾದ ಸೈಬರ್ ವಂಚಕರೊಂದಿಗೆ ಸಂಪರ್ಕದಲ್ಲಿದ್ದು, ಬಳಿಕ ಅದೇ ಕ್ರಿಪ್ಟೋಕರೆನ್ಸಿಯನ್ನು ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕ್ರಿಪ್ಟೊ ವ್ಯವಹಾರದ ಬದಲಾಗಿ ಆರೋಪಿಗಳು ರೂಪಾಯಿ ರೂಪದಲ್ಲಿ ಹಣವನ್ನು ವಾಪಸ್ ಪಡೆಯುತ್ತಿದ್ದರು. ಇದಕ್ಕಾಗಿ ಮಂಗಳೂರು ನಗರದ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸುತ್ತಿದ್ದರು.

ಸುಮಾರು 70ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸಿ ಚೀನಾದವರಿಗೆ ನೀಡಲಾಗಿತ್ತು. ನಂತರ ಚೀನಾದ ಸೈಬರ್ ವಂಚಕರು ಆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು. ಆದರೆ ಆ ಹಣ ಸೈಬರ್ ವಂಚನೆಯ ಮೂಲಕ ಪಡೆದದ್ದಾಗಿತ್ತು ಎಂದು ತಿಳಿದುಬಂದಿದೆ. ಚೀನಾದವರ ಸೈಬರ್ ವಂಚನೆ ಬಗ್ಗೆ ಆರೋಪಿಗಳಿಗೆ ತಿಳಿದಿದ್ದರೂ ಸಹ, ಹಣದ ಆಸೆಗೆ ಅವರು ಅವರಿಗೆ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು

ಇನ್ನು ಈ ಪ್ರಕರಣದಲ್ಲಿ ಬಳಸಲಾಗಿದ್ದ 37 ಬ್ಯಾಂಕ್ ಖಾತೆಗಳ ವಿರುದ್ಧ ದೇಶದಾದ್ಯಂತ 88ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸದ್ಯ ಈ ಖಾತೆಗಳ ಮೂಲಕ ನಡೆದಿರುವ ಹಣಕಾಸು ವಹಿವಾಟುಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ

2026ರ ಪರಾಭವನಾಮ ಸಂವತ್ಸರದ ಯುಗಾದಿಯು ಕುಂಭ ರಾಶಿಯವರಿಗೆ ಉತ್ಸಾಹ ಮತ್ತು ಪ್ರಗತಿಯ ವರ್ಷ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಭವಿಷ್ಯ ನುಡಿದಿದ್ದಾರೆ. ಧನಿಷ್ಠ, ಶತಭಿಷಾ, ಪೂರ್ವಾಭಾದ್ರ ನಕ್ಷತ್ರಗಳನ್ನೊಳಗೊಂಡ ಈ ರಾಶಿಗೆ ಗುರುವು ಐದರಿಂದ ಆರನೇ ಮನೆಗೆ, ಶನಿ ಎರಡನೇ ಮನೆಯಲ್ಲಿ, ರಾಹು ವ್ಯಯ ಸ್ಥಾನಕ್ಕೆ ಹಾಗೂ ಕೇತು ಆರನೇ ಮನೆಗೆ ಸಾಗಲಿದೆ.

ಸಾಡೆ ಸಾತಿಯ ಕಟ್ಟ ಕಡೆಯ ಭಾಗದಲ್ಲಿದ್ದರೂ, ಈ ವರ್ಷ ಆದಾಯ 6, ವ್ಯಯ 4; ಆರೋಗ್ಯ 8, ಅನಾರೋಗ್ಯ 3; ಸುಖ 7, ದುಃಖ 3ರ ಅನುಪಾತದಲ್ಲಿರುತ್ತವೆ. ಕುಟುಂಬದಲ್ಲಿ ಪ್ರಗತಿ, ಅಣ್ಣತಮ್ಮಂದಿರ ಬೆಂಬಲ, ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಅಧಿಕಾರ ಪ್ರಾಪ್ತಿಯ ಯೋಗವಿದೆ. ಹೊಸ ಉದ್ಯೋಗಾವಕಾಶಗಳು, ವಿಶೇಷವಾಗಿ ರೈಲ್ವೆ, ಎಲೆಕ್ಟ್ರಾನಿಕ್, ಸಾಫ್ಟ್‌ವೇರ್, ವಿದ್ಯುತ್ ಮತ್ತು ನೀರಾವರಿ ಇಲಾಖೆಗಳಲ್ಲಿ ಹೊಸ ಅನುಭವಗಳು ಸಿಗಬಹುದು. ರೈತರು, ಗುತ್ತಿಗೆದಾರರು ಮತ್ತು ವ್ಯಾಪಾರಸ್ಥರಿಗೆ ಉತ್ತಮ ಲಾಭ ದೊರೆಯಲಿದೆ. ವಿವಾಹ ಯೋಗ ಚೆನ್ನಾಗಿದ್ದರೂ, ಪ್ರೇಮ ವ್ಯವಹಾರಗಳಿಗೆ ಈ ವರ್ಷ ಅಷ್ಟು ಅನುಕೂಲಕರವಾಗಿಲ್ಲ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಸರ್ಕಾರಿ ನೌಕರರಿಗೆ ಹಳೆ ಬಾಕಿ ವಸೂಲಿ ಹಾಗೂ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದ ಕೀರ್ತಿ ಪ್ರತಿಷ್ಠೆಗಳು ಲಭಿಸಲಿವೆ. ಒಟ್ಟಾರೆ, ಈ ವರ್ಷ ಶೇ. 70 ಶುಭ ಫಲಗಳನ್ನು ನೀಡಲಿದೆ. ಬುಧವಾರ ಮತ್ತು ಶುಕ್ರವಾರ ಅದೃಷ್ಟದ ದಿನಗಳಾಗಿದ್ದು, ಕೇಸರಿ, ಬೂದು ಮತ್ತು ತಿಳಿ ಬಣ್ಣಗಳು ಮಂಗಳಕರವಾಗಿವೆ. ನಾಗರ ದರ್ಶನ, ನವನಾಗ ಸ್ತೋತ್ರ ಪಠಣ ಮತ್ತು ಅನ್ನದಾನ ಮಾಡುವುದು ಶುಭ ಫಲಗಳನ್ನು ಹೆಚ್ಚಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Video: ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ, ಫುಕೆಟ್​ನ ರನ್​ವೇನಲ್ಲಿ ಸಿಲುಕಿದ ಏರ್ ಇಂಡಿಯಾ

ಫುಕೆಟ್, ಮಾರ್ಚ್​ 11:ಹೈದರಾಬಾದ್‌ನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂದು ಥೈಲ್ಯಾಂಡ್‌ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಮಾಡಿದೆ. ಇದರ ಪರಿಣಾಮವಾಗಿ ಚಕ್ರ ಪುಡಿ ಪುಡಿಯಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳೀಯ ಸಮಯ ಸಂಜೆ 6 ಗಂಟೆಯವರೆಗೆ ರನ್‌ವೇ ಮುಚ್ಚುವಂತೆ NOTAM (ವಾಯು ಕಾರ್ಯಾಚರಣೆಗೆ ಸೂಚನೆ) ಹೊರಡಿಸಿದ್ದಾರೆ. ಬೋಯಿಂಗ್ 737 MAX 8 ವಿಮಾನದಲ್ಲಿ 133 ಪ್ರಯಾಣಿಕರಿದ್ದರು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಪ್ರಯಾಣಿಕರ ಕಾಯುವ ಪ್ರದೇಶಕ್ಕೆ ಕರೆದೊಯ್ಯಲಾಯಿತು.

ವಿಮಾನವು ಲ್ಯಾಂಡಿಂಗ್ ಮಾಡುವಾಗ ಸಮಸ್ಯೆ ಎದುರಾಗಿದ್ದು, ನೋಸ್ ಲ್ಯಾಂಡಿಂಗ್ ಗೇರ್ ಮುರಿದು ವಿಮಾನವು ರನ್‌ವೇ ಉದ್ದಕ್ಕೂ ಜಾರಿದೆ ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳದ ಛಾಯಾಚಿತ್ರಗಳು ಮುರಿದ ನೋಸ್ ವೀಲ್ ರನ್‌ವೇ ಮೇಲೆ ಬಿದ್ದಿರುವುದನ್ನು ತೋರಿಸುತ್ತವೆ. ವಿಮಾನ IX 938 ಹೈದರಾಬಾದ್‌ನಿಂದ ಬೆಳಗ್ಗೆ 6.20 ಕ್ಕೆ ಬದಲಾಗಿ ಬೆಳಗ್ಗೆ 6.42 ಕ್ಕೆ ಹೊರಟಿತ್ತು ಮತ್ತು ಸ್ಥಳೀಯ ಸಮಯ ಬೆಳಗ್ಗೆ 11.40 ಕ್ಕೆ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ನಿಂತಲ್ಲೇ ನಿಂತ ಆಟೋಗಳು

ಬೆಂಗಳೂರು, (ಮಾರ್ಚ್ 11): ಅಮೆರಿಕ –ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದ್ದರಿಂದ, ವಾಣಿಜ್ಯ ಬಳಕೆಯ ಅಡುಗೆ ಅನಿಲ ಪೂರೈಕೆ ಗಣನೀಯವಾಗಿ ಇಳಿಕೆ ಕಂಡಿದೆ. ಇದರಿಂದ ಭಾರತದಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನು ಹೋಟೆಲ್ ಉದ್ಯಮಕ್ಕೆ ಭಾರಿ ಸಮಸ್ಯೆಯಾಗುತ್ತಿದೆ. ಇನ್ನು ಎಲ್​​ಪಿಜಿ ಗ್ಯಾಸ್ ಆಟೋಗೂ ಸಹ ಇದರ ಬಿಸಿ ತಟ್ಟಿದ್ದು, ಬೆಂಗಳೂರಿನ ಹಲವು ಗ್ಯಾಸ್ ಬಂಕ್​ಗಳು ಬಂದ್ ಆಗಿವೆ. ಇನ್ನೊಂದೆಡೆ ಗ್ಯಾಸ್ ಇಲ್ಲಿದೆ ಆಟೋಗಳು ಸಹ ನಿಂತಲ್ಲೇ ನಿಂತುಕೊಂಡಿವೆ.

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ

2026ರ ಪರಾಭವ ನಾಮ ಸಂವತ್ಸರದ ಯುಗಾದಿಯು ಮಕರ ರಾಶಿಯವರಿಗೆ ಹಲವು ಶುಭ ಫಲಗಳನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ. ಶನಿ ಗ್ರಹವು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಶ್ರಮಕ್ಕೆ ತಕ್ಕ ಫಲ ಹಾಗೂ ನ್ಯಾಯ, ನೀತಿ, ಧರ್ಮಕ್ಕೆ ಪ್ರಾಶಸ್ತ್ಯ ಸಿಗಲಿದೆ. ಈ ರಾಶಿಯವರ ಆದಾಯ ಖರ್ಚಿಗಿಂತ ಹೆಚ್ಚಾಗಲಿದ್ದು, ಆರ್ಥಿಕವಾಗಿ ಲಾಭವಾಗಲಿದೆ. ತಾಳ್ಮೆ, ಸಹನೆ, ಒಳ್ಳೆಯತನ ಮತ್ತು ಕರುಣೆ ಹೆಚ್ಚಾಗಿರುತ್ತದೆ.

ಈ ವರ್ಷ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುತ್ತದೆ ಮತ್ತು ಸ್ವಲ್ಪ ಹಣ ಉಳಿತಾಯವಾಗಲಿದೆ. ಮಹಿಳೆಯರಿಗೆ ರಾಜಕೀಯವಾಗಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಹಾಗೂ ಹೊಸ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ. ರಿಯಲ್ ಎಸ್ಟೇಟ್, ಕಟ್ಟಡ ವ್ಯಾಪಾರ, ಕಬ್ಬಿಣ ಮತ್ತು ಹಾರ್ಡ್‌ವೇರ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಶಿಕ್ಷಣ ಕ್ಷೇತ್ರ ಮತ್ತು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಶುಭ ಯೋಗವಿದೆ. ಆದಾಗ್ಯೂ, ವಿವಾಹ ವಿಷಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಉತ್ತಮ. ದುರಾಸೆಗೆ ಹೂಡಿಕೆ ಮಾಡುವುದನ್ನು ತಪ್ಪಿಸಿ ಎಂದು ಗುರೂಜಿ ಎಚ್ಚರಿಸಿದ್ದಾರೆ.

 

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಯಾರೂ ಸಹ ನನಗೆ ಕರೆ ಮಾಡಿಲ್ಲ… ಗೌತಮ್ ಗಂಭೀರ್ ಬೇಸರ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಚಾಂಪಿಯನ್ ಪಟ್ಟದ ಹಿಂದಿನ ರೂವಾರಿ ಕೋಚ್ ಗೌತಮ್ ಗಂಭೀರ್. ಚಾಂಪಿಯನ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್​ಗಾಗಿ ಹೊಸ ಪಡೆ ಕಟ್ಟಿದ್ದ ಗಂಭೀರ್ ಇದೀಗ ತಮ್ಮ ರಣತಂತ್ರದೊಂದಿಗೆ ಭಾರತ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಈ ವಿಶ್ವಕಪ್ ಗೆಲುವಿನ ಖುಷಿಯಲ್ಲಿರುವ ಗಂಭೀರ್ ಈ ಹಿಂದಿನ ಸೋಲುಗಳ ಬಗ್ಗೆ ಮಾತನಾಡಿದ್ದಾರೆ. ಈ ಸೋಲುಗಳ ನಡುವೆ ತನ್ನ ಜೊತೆ ನಿಂತ ಏಕೈಕ ವ್ಯಕ್ತಿ ಜಯ್​ ಶಾ ಎಂದಿದ್ದಾರೆ.

ಟೀಮ್ ಇಂಡಿಯಾ ಗೆಲುವಿನ ನಂತರ ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೌತಮ್ ಗಂಭೀರ್, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ನನ್ನ ಕಾರ್ಯಾವಧಿಯ ಕೆಟ್ಟ ಘಳಿಗೆ.

ತವರಿನಲ್ಲಿನ ಎರಡು ಸೋಲುಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಹೀನಾಯ ಸೋಲಿನ ಬಳಿಕ ನನಗೆ ಯಾರೂ ಸಹ ಕರೆ ಮಾಡಿರಲಿಲ್ಲ. ಆದರೆ ಜಯ್ ಶಾ ಒಬ್ಬರು ಮಾತ್ರ ಕರೆ ಮಾಡಿ ಮಾತನಾಡಿದ್ದರು.

ಮುಂಬೈನಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತ ಬಳಿಕ ಜಯ್​ ಶಾ ಕರೆ ಮಾಡಿದ್ದರು. ನಾನು ಸೋಲಿನಿಂದ ಸಂಪೂರ್ಣ ಕುಗ್ಗಿದ್ದ ಸಮಯ ಅದು. ಈ ವೇಳೆ ಅವರು ಕರೆ ಮಾಡಿ ನೀಡಿದ ಬೆಂಬಲ ನಿಜಕ್ಕೂ ಸ್ಮರಣೀಯ. ಧೈರ್ಯವಾಗಿರಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಅವರು ಬೆಂಬಲ ಸೂಚಿಸಿದ್ದರು.

ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ಧ ಕೂಡ ಸೋತಾಗ ಜಯ್​ ಶಾ ಕರೆ ಮಾಡಿ ಸಮಾಧಾನ ಪಡಿಸಿದ್ದರು. ಅಷ್ಟೇ ಅಲ್ಲದೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಹೊಸ ಉತ್ಸಾಹ ತುಂಬಿದ್ದರು. ಇದನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ.

ಏಕೆಂದರೆ ಇಂದು ಟಿ20 ವಿಶ್ವಕಪ್ ಗೆಲ್ಲಲು ಅಥವಾ ಕೋಚ್ ಆಗಿ ಮುಂದುವರೆಯಲು ಜಯ್ ಶಾ ನೀಡಿದ ಬೆಂಬಲವೇ ಕಾರಣ. ಅಷ್ಟೇ ಅಲ್ಲದೆ ನಾನು ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆ ಅಲಂಕರಿಸಲು ಕೂಡ ಅವರೇ ಕಾರಣಕರ್ತರು.

ಐಪಿಎಲ್ (2024) ನಲ್ಲಿ ಮುಂಬೈ vs ಕೆಕೆಆರ್ ಪಂದ್ಯದ ಸಮಯದಲ್ಲಿ ಜಯ್ ಭಾಯ್ (ಜಯ್ ಶಾ) ಅವರಿಂದ ನನಗೆ ಕರೆ ಬಂದಿತ್ತು. ಹೀಗೆ ಕರೆ ಮಾಡಿ ಅವರು ಹೇಳಿದ್ದು,  ‘ನಾನು ನಿಮಗೆ ಒಂದು ಆಫರ್ ನೀಡಲು ಬಯಸುತ್ತೇನೆ, ಆದರೆ ನೀವು ನಿರಾಕರಿಸುಂತಿಲ್ಲ. ಇದಾದ ಬಳಿಕ ಅವರು ನೀವು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಬೇಕು’ ಎಂದರು.

ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಏಕೆಂದರೆ ಆ ಸಮಯದಲ್ಲಿ ನಾನು ಅದಕ್ಕೆ ಸಿದ್ಧನಾಗಿರಲಿಲ್ಲ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗುವುದು ನನಗೆ ದೊಡ್ಡ ಗೌರವವಾಗಿತ್ತು. ಏಕೆಂದರೆ ಕೆಲವೇ ಕೆಲವು ಮಾಜಿ ಆಟಗಾರರಿಗೆ ಮಾತ್ರ ಡ್ರೆಸ್ಸಿಂಗ್ ಕೋಣೆಗೆ ಕೋಚ್ ಆಗಿ ಮರಳುವ ಅವಕಾಶ ದೊರೆಯುತ್ತದೆ.

ಅಂತಹದೊಂದು ಅವಕಾಶ ನನ್ನ ಮುಂದಿತ್ತು. ಆದರೆ ನನ್ನಲ್ಲಿ ಮುಖ್ಯ ಕೋಚ್ ಅನುಭವ ಇರಲಿಲ್ಲ. ಇದಾಗ್ಯೂ ಜಯ್ ಶಾ ಅವರು ನನ್ನ ಮೇಲೆ ನಂಬಿಕೆ ಇರಿಸಿದ್ದರು. ಈ ನಂಬಿಕೆಗೆ ನಾನು ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕು. ಏಕೆಂದರೆ ಇದೀಗ ಟಿ20 ವಿಶ್ವಕಪ್ ಗೆದ್ದಿದ್ದೇವೆ.

ಇದನ್ನೂ ಓದಿ: ಭಾರತ ತಂಡ ಸೂರ್ಯಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ!

ಆದರೆ ಅಂದು ನನ್ನನ್ನು ನಂಬಿದ್ದು ಜಯ್ ಶಾ ಮಾತ್ರ. ನ್ಯೂಝಿಲೆಂಡ್, ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತಾಗಲೂ ಅವರು ಮಾತ್ರ ನನ್ನ ಮೇಲೆ ನಂಬಿಕೆಯಿಟ್ಟಿದ್ದರು. ಹೀಗಾಗಿ ಜಯ್ ಶಾ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು ಎಂದು ಗೌತಮ್ ಗಂಭೀರ್ ಹಳೆಯ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.

 

Source link

NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

ನವದೆಹಲಿ, ಮಾರ್ಚ್ 11: 8ನೇ ತರಗತಿಯ NCERT ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ (NCERT Row) ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಕುರಿತು ಅಧ್ಯಾಯವನ್ನು ಬರೆದ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಮಹತ್ವದ ಆದೇಶ ಹೊರಡಿಸಲಾಗಿದ್ದು, ಈ ರೀತಿಯ ವಿವಾದಾತ್ಮಕ ವಿಷಯವನ್ನು ಸಿದ್ಧಪಡಿಸುವಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಂದ ದೂರವಿರಲು ಕೇಂದ್ರ, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕವಾಗಿ ಅನುದಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅಧ್ಯಾಯದ ಲೇಖಕರು ಮುಂದಿನ ಪೀಳಿಗೆಗೆ ಎಂದಿಗೂ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಂಗ ಅಧ್ಯಾಯದ ಕುರಿತು 8ನೇ ತರಗತಿಯ NCERT ಪಠ್ಯಪುಸ್ತಕಕ್ಕೆ ಸಂಬಂಧಿಸಿದ ಸುಮೋಟು ಪ್ರಕರಣದಲ್ಲಿ ನ್ಯಾಯಾಲಯದ ಹಿಂದಿನ ಆದೇಶದ ನಂತರ ಬೇಜವಾಬ್ದಾರಿಯಿಂದ ಪೋಸ್ಟ್ ಮಾಡಿದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧವೂ ಸುಪ್ರೀಂ ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ: ನ್ಯಾಯಾಂಗಕ್ಕೆ ಅಗೌರವ ತೋರುವ ಉದ್ದೇಶವಿಲ್ಲ; NCERT ಪಠ್ಯಪುಸ್ತಕ ವಿವಾದದ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ಬೇರೆ ಎಲ್ಲಾ ತರಗತಿಗಳ ಪಠ್ಯಪುಸ್ತಕಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವು NCERTಗೆ ನಿರ್ದೇಶನ ನೀಡಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. “ಉಂಟಾದ ಅನಾನುಕೂಲತೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಶೈಕ್ಷಣಿಕ ವಿಷಯದಲ್ಲಿ ನಿಖರತೆ, ಸೂಕ್ಷ್ಮತೆ ಮತ್ತು ಜವಾಬ್ದಾರಿಯ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳಲು NCERT ಬದ್ಧವಾಗಿದೆ” ಎಂದು NCERT ತಿಳಿಸಿದೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್ ! ಗೂಗಲ್ ಸೇರಿ ಹಲವು ಟೆಕ್ ಕಂಪನಿಗಳಿಗೆ ನೋಟಿಸ್ ಜಾರಿ

ಹಾಗೇ, NCERT ಅಧ್ಯಾಯದ ವಿಷಯವನ್ನು ಹೊಂದಿರುವ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಕರೆ ನೀಡಿತು. ಸುಪ್ರೀಂ ಕೋರ್ಟ್ ಸಮಾಜ ವಿಜ್ಞಾನ ಪುಸ್ತಕದ ಮೇಲೆ ನಿಷೇಧ ಹೇರಿದ ನಂತರ, ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯಗಳಿಗೆ ಪತ್ರ ಬರೆದಿದ್ದು, ವಿವಾದಾತ್ಮಕ NCERT ಪಠ್ಯಪುಸ್ತಕವನ್ನು ಡಿಜಿಟಲ್ ವೇದಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link