ಮಂತ್ರಾಲಯದ ಕರ್ನಾಟಕ ಅತಿಥಿ ಗೃಹದಲ್ಲಿ ಭ್ರಷ್ಟಾಚಾರದ ಹೊಗೆ: ಅಸ್ವಚ್ಛತೆ, ದುರಾಡಳಿತ ವಿರುದ್ಧ ಉಪಲೋಕಾಯುಕ್ತರ ಗರಂ!
ರಾಯಚೂರು, ಮಾ.31: ಮಂತ್ರಾಲಯಕ್ಕೆ ಭೇಟಿ ನೀಡುವ ಕನ್ನಡಿಗರಿಗಾಗಿ ನಿರ್ಮಿಸಲಾದ ‘ಕರ್ನಾಟಕ ಅತಿಥಿ ಗೃಹ’ವು ಈಗ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಅತಿಥಿ ಗೃಹದ ದುರವಸ್ಥೆಯನ್ನು ಕಂಡು ಆಘಾತಕ್ಕೊಳಗಾದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಸೂಚನೆಯಂತೆ, ರಾಯಚೂರು ಲೋಕಾಯುಕ್ತ ಡಿವೈಎಸ್‌ಪಿ ರವಿ ಪುರುಷೋತ್ತಮ್ ಅವರು ನೀಡಿದ ವರದಿಯ ಆಧಾರದ ಮೇಲೆ ಇದೀಗ ಸ್ವಯಂಪ್ರೇರಿತ ದೂರು ದಾಖಲಾಗಿದೆ. 2022ರ ಆಗಸ್ಟ್‌ನಲ್ಲಿ ಲೋಕಾರ್ಪಣೆಗೊಂಡ ಈ ಸುಸಜ್ಜಿತ ಅತಿಥಿ ಗೃಹವು ಕೇವಲ ಮೂರೇ ವರ್ಷಗಳಲ್ಲಿ ಪಾಳುಬಿದ್ದಂತಾಗಿದೆ. ಲೋಕಾಯುಕ್ತರ ತನಿಖಾ ವರದಿಯಲ್ಲಿ ಈ ಕೆಳಗಿನ ಗಂಭೀರ…