All posts by nagaraj11081993

ಐಪಿಎಲ್ ನಡುವೆ 2ನೇ ಮದುವೆಗೆ ರೆಡಿಯಾದ ಹಾರ್ದಿಕ್ ಪಾಂಡ್ಯ – Kannada News | Hardik Pandya’s Viral Marriage Post: Mahika Sharma Wedding on May 22?

ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ (Hardik Pandya) ವೃತ್ತಿಜೀವನದಲ್ಲಿ ಯಾವುದು ಅಂದುಕೊಂಡಂತೆ ಆಗುತ್ತಿಲ್ಲ. ಪ್ರಸ್ತುತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಪಾಂಡ್ಯ ನಾಯಕನಾಗಿ ಮತ್ತು ಆಟಗಾರನಾಗಿ ಎರಡರಲ್ಲೂ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದಾರೆ. ಗಾಯದಿಂದಾಗಿ ತಂಡದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅದೆನೆಂದರೆ ಪಾಂಡ್ಯ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದು, ಇದೇ ಮೇ 22 ರಂದು ತಮ್ಮ ಬಹುದಿನಗಳ ಗೆಳತಿ ಮಹಿಕಾ ಶರ್ಮಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ಪೋಸ್ಟ್​ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೇಲೆ ಹೇಳಿದಂತೆ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದಾಗಿ ಕಳೆದ ಕೆಲವು ಪಂದ್ಯಗಳಿಂದ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ. ಏತನ್ಮಧ್ಯೆ, ಹಾರ್ದಿಕ್ ಪಾಂಡ್ಯ ತನ್ನ ಗೆಳತಿ ಮಹಿಕಾ ಶರ್ಮಾ ಅವರನ್ನು ಮದುವೆಯಾಗಲಿದ್ದಾರೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜುಲೈ 8, 2024 ರಂದು ತಮ್ಮ ಮೊದಲ ಮಡದಿ ನತಾಶಾ ಸ್ಟಾಂಕೋವಿಕ್ ಅವರಿಂದ ವಿಚ್ಛೇದನ ಪಡೆದಿದ್ದ ಹಾರ್ದಿಕ್ ಅಂದಿನಿಂದ ಮಹಿಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

ಎರಡನೇ ಬಾರಿಗೆ ಮದುವೆ?

ವೈರಲ್ ಪೋಸ್ಟ್ ಪ್ರಕಾರ, ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಮೇ 22 ರಂದು ವಿವಾಹವಾಗಲಿದ್ದಾರೆ. ಆದಾಗ್ಯೂ, ಹಾರ್ದಿಕ್ ಪಾಂಡ್ಯ ಅಥವಾ ಅವರ ಕುಟುಂಬದವರಿಂದ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ವಾಸ್ತವವಾಗಿ ಮುಂಬೈ ಇಂಡಿಯನ್ಸ್ ಪಂದ್ಯಗಳ ಸಮಯದಲ್ಲಿ ಮಹಿಕಾ ಶರ್ಮಾ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಾಗೆಯೇ ಇವರಿಬ್ಬರು ಜೊತೆಯಾಗಿ ಸುತ್ತಾಟ ನಡೆಸುತ್ತಿರುವ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಇವರಿಬ್ಬರ ಮದುವೆ ಮೇ 22 ರಂದೇ ನಡೆಯಲಿದೆಯಾ ಎಂಬುದು ಅಂದೇ ತಿಳಿಯಲಿದೆ.

ಹಾರ್ದಿಕ್ ವೃತ್ತಿಜೀವನ

ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ. ಹಾರ್ದಿಕ್ ನಾಯಕತ್ವದಲ್ಲಿ ತಂಡ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿತು. ಹೀಗಾಗಿ ಪ್ಲೇಆಫ್ ರೇಸ್​ನಿಂದಲೂ ಹೊರಗಬಿದ್ದಿತು. ಇತ್ತ ಆಟಗಾರನಾಗಿಯೂ ಹಾರ್ದಿಕ್ ಆಡಿದ ಎಂಟು ಪಂದ್ಯಗಳಲ್ಲಿ 107 ರನ್ ಗಳಿಸಲಷ್ಟೇ ಶಕ್ತರಾಗಿದ್ದು ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ. ಅವರ ಫಾರ್ಮ್ ಮತ್ತು ತಂಡದ ಪ್ರದರ್ಶನ ಎರಡೂ ನಿರಾಶಾದಾಯಕವಾಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ? ವಿವರಿಸಿದ ಹಿರಿಯ ವಕೀಲರು – Kannada News | Senior lawyer Balan explains why Darshan is not getting Bail in Renukaswamy Murder Case

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ (Darshan) ಅವರು ಜಾಮೀನು ಪಡೆಯಲು ಮಾಡುತ್ತಿರುವ ಎಲ್ಲ ಪ್ರಯತ್ನಗಳು ವಿಫಲ ಆಗುತ್ತಿವೆ. ದರ್ಶನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ದರ್ಶನ್ ಅವರು ಜೈಲು ವಾಸ ಮುಂದುವರಿಸುವುದು ಅನಿವಾರ್ಯ ಆಗಿದೆ. ಬೇರೆ ಪ್ರಕರಣದಲ್ಲಿ ಇರುವ ಅನೇಕರಿಗೆ ಜಾಮೀನು (Bail) ಸಿಕ್ಕಿದೆ. ಆದರೆ ದರ್ಶನ್ ಅವರಿಗೆ ಮಾತ್ರ ಜಾಮೀನು ಸಿಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ ಹಿರಿಯ ವಕೀಲ ಬಾಲನ್ ಅವರು ಉತ್ತರ ನೀಡಿದ್ದಾರೆ. ‘ಕೊಲೆ ಪ್ರಕರಣ ಆಗಿದ್ದರೂ ಪ್ರತಿ ಕೇಸ್ ಕೂಡ ಭಿನ್ನವಾಗಿರುತ್ತದೆ. ಕೆಲವು ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿ ಇರುವುದಿಲ್ಲ. ಪೊಲೀಸರಿಗೆ ಕಾನೂನಿನ ಅರಿವು ಇದೆ. 90 ದಿನದ ಒಳಗೆ ಯಾಕೆ ಚಾರ್ಜ್​ಶೀಟ್ ಹಾಕಿಲ್ಲ ಎಂದರೆ ಏನೋ ಆಗಿರಬಹುದು. ಕೆಲವು ಕಡೆ ಕೊಲೆ ಆದರೂ ಬಂಧನ ಆಗುವುದಿಲ್ಲ. ಇದು ಪ್ರಜಾಪ್ರಭುತ್ವ’ ಎಂದು ಬಾಲನ್ (Lawyer Balan) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ; 70ನೇ ವರ್ಷಕ್ಕೆ ಕಾಲಿಟ್ಟ ರವಿಶಂಕರ್ ಗುರೂಜಿಗೆ ಸಿಎಂಗಳು, ರಾಜ್ಯಪಾಲರು, ಸಚಿವರಿಂದ ಅಭಿನಂದನೆ – Kannada News | Sri Sri Ravi Shankar turns 70 Global Leaders, Governors, Ministers gathers at Bengaluru Art Of Living

ಬೆಂಗಳೂರು, ಮೇ 15: ಆಧ್ಯಾತ್ಮಿಕ ಗುರು, ಆರ್ಟ್ ಆಫ್ ಲಿವಿಂಗ್​ನ ಗುರುದೇವ ಶ್ರೀ ಶ್ರೀ ರವಿಶಂಕರ್ (Sri Sri Ravi Shankar) ಅವರು 70ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಆರ್ಟ್ ಆಫ್ ಲಿವಿಂಗ್ 45 ವರ್ಷಗಳ ಜಾಗತಿಕ ಸೇವೆ, ಮಾನವೀಯ ಸಂಪರ್ಕ ಮತ್ತು ಆಧ್ಯಾತ್ಮಿಕ ಪಯಣವನ್ನು ಕೂಡ ಮುಗಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಆಧ್ಯಾತ್ಮಿಕ ನಾಯಕರು, ನೀತಿ ನಿರೂಪಕರು, ಕಲಾವಿದರು, ಕೈಗಾರಿಕೋದ್ಯಮಿಗಳು, ಶಿಕ್ಷಣತಜ್ಞರು, ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದ ವಿಶೇಷವಾಗಿತ್ತು.

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ 1 ತಿಂಗಳ ಕಾಲ ನಡೆದ ಆಚರಣೆಗಳು ಆಡಳಿತ, ಸಂಸ್ಕೃತಿ, ಆಧ್ಯಾತ್ಮಿಕತೆ, ವ್ಯವಹಾರ ಮತ್ತು ಸಾರ್ವಜನಿಕ ಜೀವನದ ವಿವಿಧ ಕ್ಷೇತ್ರಗಳ ಗಣ್ಯರನ್ನು ಒಟ್ಟುಗೂಡಿಸಿದವು. ಒತ್ತಡರಹಿತ, ಹಿಂಸಾಚಾರ ಮುಕ್ತ ಸಮಾಜವನ್ನು ಸೃಷ್ಟಿಸುವ ದೃಷ್ಟಿಕೋನದಿಂದ 1981ರಲ್ಲಿ ಗುರುದೇವ ರವಿಶಂಕರ್ ಅವರು ಸ್ಥಾಪಿಸಿದ ಆರ್ಟ್ ಆಫ್ ಲಿವಿಂಗ್​ ಇದೀಗ ಜಗತ್ತನ್ನೇ ಆಧ್ಯಾತ್ಮದತ್ತ ಸೆಳೆಯುವಂತೆ ಮಾಡಿದೆ.

ಈ ಆಶ್ರಮಕ್ಕೆ ಭೇಟಿ ನೀಡಿದವರಲ್ಲಿ ಮಹಾರಾಷ್ಟ್ರದ ಗೌರವಾನ್ವಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹರಿಯಾಣದ ಗೌರವಾನ್ವಿತ ರಾಜ್ಯಪಾಲ ಪ್ರೊಫೆಸರ್ ಆಶಿಮ್ ಕುಮಾರ್ ಘೋಷ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, 5 ಬಾರಿ ರಾಷ್ಟ್ರೀಯ ಮಹಿಳಾ ಹೆವಿವೇಯ್ಟ್ ಚಾಂಪಿಯನ್ ನೂಪುರ್ ಶಿಯೋರೆನ್; ಗೌರವಾನ್ವಿತ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಸಂಸದರು, ಸಚಿವರು, ಕಲಾವಿದರು, ಉದ್ಯಮಿಗಳು ಮತ್ತು ಸಾಮಾಜಿಕ ಮುಖಂಡರು ಸೇರಿದ್ದಾರೆ.

ಇದನ್ನೂ ಓದಿ: ಸೇವೆಯೇ ಪರಮ ಧರ್ಮ, ಆರ್ಟ್ ಆಫ್ ಲಿವಿಂಗ್‌ ಧ್ಯಾನ ಮಂದಿರ ವಿಶ್ವ ಶಾಂತಿಯ ಕೇಂದ್ರವಾಗಲಿದೆ: ಪ್ರಧಾನಿ ಮೋದಿ ಆಶಯ

ಆರ್ಟ್ ಆಫ್ ಲಿವಿಂಗ್​ನಲ್ಲಿ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್, ಗುರುದೇವ ರವಿಶಂಕರ್ ಅವರು ಇಡೀ ಜಗತ್ತಿಗೆ ಭಾರತದ ಅತಿದೊಡ್ಡ ಆಧ್ಯಾತ್ಮಿಕ ರಾಯಭಾರಿ ಎಂದು ಬಣ್ಣಿಸಿದರು. “ವಿಶ್ವಗುರುವಾಗಿ ನಾವು ಭಾರತವನ್ನು ನೋಡುವ ದೃಷ್ಟಿಕೋನ ಕೇವಲ ಆರ್ಥಿಕ ಅಥವಾ ಮಿಲಿಟರಿ ಶಕ್ತಿಯಲ್ಲಿ ಬೇರೂರಿಲ್ಲ. ಅದು ಆಧ್ಯಾತ್ಮಿಕ ಶಕ್ತಿಯಲ್ಲಿಯೂ ಇದೆ. ಭಾರತ ಆಧ್ಯಾತ್ಮಿಕ ಮಹಾಶಕ್ತಿಯಾಗುವ ಮಾರ್ಗಕ್ಕೆ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಮಾರ್ಗದರ್ಶನ ಮಾಡುತ್ತಾರೆ” ಎಂದು ಫಡ್ನವೀಸ್ ಹೇಳಿದ್ದಾರೆ.

Dattatreya Hosabale With Ravi Shankar Guruji

ಇದೇ ವೇಳೆ ಮಾತನಾಡಿದ ಹರಿಯಾಣದ ರಾಜ್ಯಪಾಲ ಪ್ರೊಫೆಸರ್ ಆಶಿಮ್ ಕುಮಾರ್ ಘೋಷ್, ಗುರುದೇವ ರವಿಶಂಕರ್ ಅವರ ಜಾಗತಿಕ ಆಧ್ಯಾತ್ಮಿಕ ಪ್ರಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 45 ವರ್ಷಗಳ ಹಿಂದೆ, ಗುರುದೇವ ರವಿಶಂಕರ್ ಕರ್ನಾಟಕದ ಈ ಜಾಗದಲ್ಲಿ ಜಾಗೃತಿ ಮತ್ತು ಕರುಣೆಯ ದೀಪವನ್ನು ಬೆಳಗಿಸಿದರು. ಇಂದು ಆ ದೀಪವು 182ಕ್ಕೂ ಹೆಚ್ಚು ದೇಶಗಳನ್ನು ಬೆಳಗಿಸುತ್ತಿದೆ. ಆ ದೀಪ 1 ಬಿಲಿಯನ್‌ಗಿಂತಲೂ ಹೆಚ್ಚು ಮನಸುಗಳನ್ನು ಮುಟ್ಟಿದೆ. ಗುರುದೇವ ರವಿಶಂಕರ್ ಅವರು ಜಗತ್ತಿಗೆ ಕೇವಲ ಜ್ಞಾನವನ್ನು ನೀಡಿಲ್ಲ ಒಂದು ಮಾರ್ಗವನ್ನು ಕೂಡ ನೀಡಿದ್ದಾರೆ ಎಂದರು.

ಇದನ್ನೂ ಓದಿ: Modi Visit Art Of Living: ರವಿಶಂಕರ್ ಗುರೂಜಿಯ 100ನೇ ಹುಟ್ಟುಹಬ್ಬಕ್ಕೂ ಬರುತ್ತೇನೆ ಎಂದ ಪ್ರಧಾನಿ ಮೋದಿ

ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೃಹತ್ ಧ್ಯಾನ ಮಂದಿರದಲ್ಲಿ ವಿಶೇಷ ಸತ್ಸಂಗ ಮತ್ತು ಧ್ಯಾನವನ್ನು ಆಯೋಜಿಸಲಾಗಿತ್ತು. ಈ ವೇಳೆ ಹಲವು ಗಣ್ಯರು ಗುರುದೇವ ರವಿಶಂಕರ್ ಅವರೊಂದಿಗೆ ಸೇರಿಕೊಂಡರು. ಈ ವಾರದ ಆರಂಭದಲ್ಲಿ, 182 ದೇಶಗಳಾದ್ಯಂತ ಕೋಟ್ಯಂತರ ಜನರು ಜಾಗತಿಕ ಶಾಂತಿಗಾಗಿ ಗುರುದೇವರೊಂದಿಗೆ ಧ್ಯಾನ ಕಾರ್ಯಕ್ರಮದಲ್ಲಿ ಆನ್‌ಲೈನ್‌ನಲ್ಲಿ ಮತ್ತು ವೈಯಕ್ತಿಕವಾಗಿ ಸೇರಿಕೊಂಡರು. ಇದು ವಿಶ್ವದ ಅತಿದೊಡ್ಡ ಸಾಮೂಹಿಕ ಧ್ಯಾನ ಸಭೆಗಳಲ್ಲಿ ಒಂದಾಗಿದೆ.

ಸತ್ಸಂಗದ ಸಮಯದಲ್ಲಿ ಮಾತನಾಡಿದ ಗುರುದೇವ ರವಿಶಂಕರ್ ಅವರು ಧ್ಯಾನ, ಸಂತೋಷ, ಆಂತರಿಕ ಶಾಂತಿ ಮತ್ತು ಜೀವನದ ಆಳವಾದ ಅರ್ಥದ ಬಗ್ಗೆ ಮಾತನಾಡಿದರು. ನಮ್ಮ ಜೀವನವೇ ಒಂದು ಆಚರಣೆ. ಈ ಜೀವನದಲ್ಲಿ ನಾವು ಏನನ್ನು ಪಡೆದುಕೊಂಡಿದ್ದೇವೆಯೋ ಅದು ದೇವರ ಅನುಗ್ರಹವಾಗಿದೆ. ಮನಸ್ಸು ಶಾಂತಿಯುತವಾಗಿದ್ದಾಗ ಬುದ್ಧಿಶಕ್ತಿ ತೀಕ್ಷ್ಣವಾಗುತ್ತದೆ, ಮನಸ್ಸು ಅರಳುತ್ತದೆ, ದೇಹವು ಶಕ್ತಿಯನ್ನು ಪಡೆಯುತ್ತದೆ. ಇದರಿಂದ ನಮ್ಮ ಮೂಲಕ ಒಳ್ಳೆಯ ಕಾರ್ಯಗಳು ನಡೆಯುತ್ತವೆ ಎಂದು ಹೇಳಿದರು.

ನಮ್ಮ ಮನಸ್ಸನ್ನು ಯಾವಾಗಲೂ ಸಂತೋಷವಾಗಿಡುವ ಮಾರ್ಗವೆಂದರೆ ನಂಬಿಕೆ. ದೇವರು ನಮ್ಮೊಂದಿಗಿದ್ದಾನೆ ಮತ್ತು ನಮಗೆ ಯಾವುದು ಉತ್ತಮವೋ ಅದನ್ನು ಅವನು ಖಂಡಿತವಾಗಿಯೂ ನಮಗೆ ನೀಡುತ್ತಾನೆ ಎಂಬ ನಂಬಿಕೆಯನ್ನು ನಾವು ಇಟ್ಟುಕೊಳ್ಳಬೇಕು ಎಂದು ರವಿಶಂಕರ್ ಗುರೂಜಿ ಹೇಳಿದರು.

ಕಳೆದ 45 ವರ್ಷಗಳಲ್ಲಿ ಆರ್ಟ್ ಆಫ್ ಲಿವಿಂಗ್ ಧ್ಯಾನ, ಶಿಕ್ಷಣ, ಆಘಾತ ಪರಿಹಾರ, ಪರಿಸರ ಕ್ರಿಯೆ, ಮಹಿಳಾ ಸಬಲೀಕರಣ, ಯುವ ನಾಯಕತ್ವ ಮತ್ತು ವಿಪತ್ತು ನಿರ್ವಹಣೆ ಉಪಕ್ರಮಗಳ ಮೂಲಕ 182 ದೇಶಗಳಲ್ಲಿ 1 ಶತಕೋಟಿಗೂ ಹೆಚ್ಚು ಜನರನ್ನು ಮುಟ್ಟಿದೆ. ಈ ಕಾಯಕ ಮುಂದೆಯೂ ಮುಂದುವರಿಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಕರ್ನಾಟಕ ರಾಜ್ಯಸಭಾ ಸದಸ್ಯನ ಕುಟುಂಬ: ಎಲೆಕ್ಟ್ರಿಕ್ ಸ್ಟವ್ ಬಳಕೆ, ಸೈಕಲ್ ಸವಾರಿ – Kannada News | Karnataka Rajya Sabha MP Narayanasa Bandage Family Heeds PM Modi’s Call: Uses Electric Stove, Rides Bicycle

ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ

ಬಾಗಲಕೋಟೆ, ಮೇ 15: ಅಗತ್ಯ ವಸ್ತುಗಳ ಮಿತವ್ಯಯ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿದ್ದ ಕರೆಗೆ ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಆದರೆ, ಈ ಮಧ್ಯೆ ಬಾಗಲಕೋಟೆಯ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ (Narayansa Bhandage) ಕುಟುಂಬ ಪ್ರಧಾನಿಯವರ ಕರೆಯನ್ನು ಅಕ್ಷರಶಃ ಪಾಲಿಸುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಿದೆ. ಇಂಧನ, ಗ್ಯಾಸ್ ಹಾಗೂ ಆರ್ಥಿಕ ಮಿತವ್ಯಯಕ್ಕಾಗಿ ಈ ಕುಟುಂಬ ಕೈಗೊಂಡಿರುವ ನಿರ್ಧಾರಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.

ಮುಖ್ಯಾಂಶಗಳು

  • ಇಂಧನ ಉಳಿತಾಯ: ಗ್ಯಾಸ್‌ನಿಂದ ಎಲೆಕ್ಟ್ರಿಕ್ ಸ್ಟೋವ್‌ಗೆ ಬದಲಾವಣೆ
  • ಆರ್ಥಿಕ ಮಿತವ್ಯಯ: ಚಿನ್ನಾಭರಣ ಖರೀದಿಗೆ ತಾತ್ಕಾಲಿಕ ಬ್ರೇಕ್​​
  • ಸೈಕಲ್ ಸವಾರಿ: ಪರಿಸರ ಸ್ನೇಹಿ ಪ್ರಯಾಣದ ಮೂಲಕ ಇಂಧನ ಉಳಿತಾಯ

ಇಂಧನ, ಅಡುಗೆ ಅನಿಲ ಉಳಿತಾಯ ಸೇರಿದಂತೆ ಆರ್ಥಿಕ ಸಂಪತ್ತಿನ ಮಿತವ್ಯಯ ಬಳಕೆಗೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಈ ಕರೆಗೆ ಓಗೊಟ್ಟು, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರ ಕುಟುಂಬ ಅದರ ಪಾಲನೆಗೆ ಮುಂದಾಗಿದೆ. ನಾರಾಯಣಸಾ ಬಾಂಡಗೆಯವರ ಮನೆಯಲ್ಲಿ ಸದ್ಯ ಗ್ಯಾಸ್ ಬಳಕೆ ನಿಲ್ಲಿಸಲಾಗಿದ್ದು, ಸಂಪೂರ್ಣವಾಗಿ ಎಲೆಕ್ಟ್ರಿಕ್ ಸ್ಟೋವ್‌ನಲ್ಲಿ ಅಡುಗೆ ಮಾಡಲಾಗುತ್ತಿದೆ. ಅತಿ ಅವಶ್ಯಕತೆ ಇದ್ದರೆ ಮಾತ್ರ ಸಿಲಿಂಡರ್ ಬಳಸಲು ನಿರ್ಧರಿಸಲಾಗಿದೆ.

ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಕುಟುಂಬ

ಇಷ್ಟೇ ಅಲ್ಲದೆ, ಪ್ರಧಾನಿ ಕರೆಯಂತೆ ದೇಶದ ಆರ್ಥಿಕ ಹಿತದೃಷ್ಟಿಯಿಂದ ಕನಿಷ್ಠ ಒಂದು ವರ್ಷದವರೆಗೆ ಯಾವುದೇ ಚಿನ್ನಾಭರಣಗಳನ್ನು ಖರೀದಿಸದಿರಲು ಮನೆಯ ಮಹಿಳೆಯರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಇದನ್ನೂ ಓದಿ: ನಾನು ಸಿಎಂ ಆಗ್ಲಾ? ಎಂದವನ ಬಂಡವಾಳ ಬಯಲು: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್

ಇಷ್ಟಕ್ಕೆ ಈ ಕುಟುಂಬದ ಮಿತವ್ಯಯದ ನಿರ್ಧಾರ ಮುಗಿಯುವುದಿಲ್ಲ. ಇಂಧನ ಉಳಿತಾಯದ ಹಿನ್ನೆಲೆಯಲ್ಲಿ ಕಾರು ಸಂಚಾರಕ್ಕೂ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ. ಹೌದು, ಮೋದಿ ಕರೆಗೆ ಗೌರವ ಕೊಟ್ಟು ಈ ಕುಟುಂಬ ಈಗ ಸೈಕಲ್ ಸವಾರಿಗೆ ಮೊರೆ ಹೋಗಿದೆ. ಅತಿ ಜರೂರಿ ಕೆಲಸಗಳಿದ್ದರೆ ಮಾತ್ರ ಕಾರು ಮುಟ್ಟುವ ಕುಟುಂಬಸ್ಥರು, ನಿತ್ಯದ ಮನೆಗೆಲಸ ಹಾಗೂ ವ್ಯವಹಾರಗಳಿಗಾಗಿ ಸೈಕಲ್ ಮೂಲಕವೇ ಸಂಚರಿಸುತ್ತಿದ್ದಾರೆ.

ಯಾರು ಏನಾದರೂ ಹೇಳಲಿ ನಾವು ಮೋದಿ ಕರೆ ಪಾಲಿಸುತ್ತೇವೆ: ಗಿರೀಶ್ ಬಾಂಡಗೆ

ನಾರಾಯಣಸಾ ಬಾಂಡಗೆ ಅವರ ಪುತ್ರ ಗಿರೀಶ್ ಬಾಂಡಗೆ ನಿತ್ಯ ಸೈಕಲ್ ಮೇಲೆಯೇ ತಮ್ಮ ಅಂಗಡಿ ಮತ್ತು ವ್ಯವಹಾರಗಳಿಗೆ ತೆರಳುತ್ತಿದ್ದಾರೆ. ನಗರದಾದ್ಯಂತ ಸೈಕಲ್‌ನಲ್ಲೇ ಸಂಚರಿಸಲು ನಿರ್ಧರಿಸಿರುವ ಇವರು, ದೂರದ ಊರುಗಳಿಗೆ ಹೋಗಲು ಮಾತ್ರ ಕಾರು ಬಳಸುತ್ತಿದ್ದಾರೆ. ವಿಶೇಷವೆಂದರೆ, ಸ್ವತಃ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರು ಕೂಡ ಕುಟುಂಬ ಸಮೇತ ದೇಶಾದ್ಯಂತ ಪ್ರವಾಸಕ್ಕೆ ತೆರಳಿದ್ದು, ಎಲ್ಲೂ ಕಾರು ಬಳಸದೆ ರೈಲಿನಲ್ಲೇ ಪ್ರಯಾಣಿಸುತ್ತಿದ್ದಾರೆ. ಇದು ದೇಶದ ಹಿತ ಹಾಗೂ ದೇಹದ ಆರೋಗ್ಯಕ್ಕೂ ಒಳ್ಳೆಯದು. ಯಾರು ಏನಾದರೂ ಹೇಳಲಿ ನಾವು ಮೋದಿ ಕರೆ ಪಾಲಿಸುತ್ತೇವೆ ಎಂದು ಗಿರೀಶ್ ಬಾಂಡಗೆ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಇಂಧನ ಮಿತವ್ಯಯದ ಕರೆ: ಬೆಂಗಾವಲು ವಾಹನ ತ್ಯಜಿಸಿದ ಕೇಂದ್ರ ಸಚಿವ ವಿ. ಸೋಮಣ್ಣ

ಒಟ್ಟಿನಲ್ಲಿ, ಪ್ರಧಾನಿ ಮೋದಿಯವರ ಮಿತವ್ಯಯದ ಕರೆಗೆ ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ಪರ-ವಿರೋಧದ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಆದರೆ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಕುಟುಂಬ ಮಾತ್ರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಪ್ರಧಾನಿ ಕರೆಯನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು? – Kannada News | A Friend Killed In Joke for mobile at Bengaluru, here Is Details What happened

ಬೆಂಗಳೂರು, ಮೇ 15): ಬೆಂಗಳೂರಿನ (Bengaluru) ಮಾರತ್ ಹಳ್ಳಿಯ ಮನೆಯೊಂದರಲ್ಲಿ ಗೆಳೆಯನ ಮೊಬೈಲ್ (Mobile Phone) ಬಚ್ಚಿಟ್ಟು ತಮಾಷೆ (Joke) ಮಾಡಲಾಗಿದ್ದು, ಕೊನೆಗೆ ಈ ಮಜಾಕ್ ಸ್ನೇಹಿತನ ಜೀವ ಬಲಿಪಡೆದುಕೊಂಡಿದೆ. ಹೌದು….ಮೊಬೈಲ್ ಬಚ್ಚಿಟ್ಟ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ತಮಾಷೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮುಚ್ಚಿಟ್ಟ ವಿಚಾರಕ್ಕೆ ಕೊಲೆ ಮಾಡಿದ್ದ ಕೇಸ್ ನಲ್ಲಿ ಆರೋಪಿ ರಾಮು ಎಂಬಾತನನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ತಾನು ಕೊಲೆ ಮಾಡಿದ್ದೇನೆ ಎಂಬೂದು ಸಹ ಗೊತ್ತಿಲ್ಲದೇ ಅಲೆಯುತಿದ್ದ ರಾಮು ಎನ್ನುವಾತನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಗೊತ್ತಾಗಿದೆ.

ಕೊಲೆ ನಡದ ದಿನ ಆರೋಪಿ ರಾಮು ಮೊಬೈಲ್ ಅನ್ನು ಕೊಲೆಯಾದ ಪರುಶುರಾಮ್ ಮುಚ್ಚಿಟ್ಟು ಆಟವಾಡಿಸಿದ್ದ. ಎಷ್ಟು ಬೇಡಿಕೊಂಡರೂ ಕೊಟ್ಟಿರಲಿಲ್ಲ.ಕೊನೆಗೆ ಈ ತಮಾಷೆ ಹೋಗಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನ್ನ ಮೊಬೈಲ್ ಕೊಡು ಎಂದು ಪರುಶುರಾಮ್ ಸಿರಿಯಸ್ ಆಗಿ ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡ ರಾಮು, ಅಡುಗೆ ಮನೆಯಲ್ಲಿದ್ದ ಚಾಕು ತಂದು ಪರುಶುರಾಮ್ ಪರಶುರಾಮ್​​​ ಗೆ ಚುಚ್ಚಿ ಏನಾಗಲ್ಲ ಬಿಡು ಎಂದು ಎಸ್ಕೇಪ್ ಆಗಿದ್ದಾನೆ. ಆದರೆ, ತೀವ್ರ ರಕ್ತಸ್ರವಾಗಿ ಪರಶುರಾಮ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್ಲೋಡ್‌: ಹುಡುಕಿ ಇಬ್ಬರನ್ನ ಬಂಧಿಸಿದ ರಾಮನಗರ ಪೊಲೀಸ್ರು

ಅಷ್ಟಕ್ಕೂ ಆಗಿದ್ದೇನು?

ಕೊಲೆಯಾದ ಪರುಶುರಾಮ್, ಕೆಲಸ ಮುಗಿಸಿಕೊಂಡು ರಾಮು ಮನೆಗೆ ಹೋಗಿದ್ದ.ಬಳಿಕ ಫೋನ್ ಇಟ್ಟು ಬಾತ್ ರೂಮ್​​ಗೆ ಹೋಗಿದ್ದ. ಆದ್ರೆ, ವಾಶ್​​ ರೂಮಿಗೆ ಹೋಗಿ ಬರುವಷ್ಟರಲ್ಲೇ ಸ್ಥಳದಲ್ಲಿ ಮೊಬೈಲ್ ನಾಪತ್ತೆಯಾಗಿತ್ತು. ಬಳಿಕ ಪರಶುರಾಮ್, ತನ್ನ ಸ್ನೇಹಿತ ರಾಮು ಬಳಿ ಮೊಬೈಲ್ ಕೇಳಿದ್ದಾನೆ. ಆದ್ರೆ, ರಾಮು ತಮಾಷೆ ಮಾಡಲಿಕ್ಕೆ ಎಂದು ಮೊಬೈಲ್ ತೆಗೆದು ಇಟ್ಟುಕೊಂಡಿದ್ದರೂ ಸಹ ತನಗೆ ಗೊತ್ತಿಲ್ಲ ಎಂದು ಕಾಮಿಡಿ ಮಾಡಿದ್ದಾನೆ. ಆದರೂ ಬಿಡದ ಪರಶುರಾಮ್ ಫೋನ್ ಕೊಡು ಎಂದು ಬೆನ್ನುಬಿದ್ದಿದ್ದ. ಬಳಿಕ ತಮಾಷೆಯಾಗಿ ತೆಗೆದುಕೊಳ್ಳದ ಆರೋಪಿ ರಾಮು, ಕೋಪಗೊಂಡು ಗಲಾಟೆ ಮಾಡಿದ್ದಾನೆ. ಈ ವೇಳೆ ಪರುಶುರಾಮ್ ರಾಮುಗೆ ಹೊಡೆದಿದ್ದನಂತೆ .ನನಗೆ ಹೊಡೆಯುತ್ತಿಯಾ ಎಂದು ನೇರವಾಗಿ ಅಡುಗೆ ಮನೆಗೆ ಹೋಗಿ ಚಾಕು ತಂದು ಒಂದೇ ಬಾರಿ ಚುಚ್ಚಿ ಪರಶುರಾಮ್ ಫೋನ್ ಸಮೇತ ಮನೆಯಿಂದ ಹೋಗಿದ್ದ.

ತಮಾಷೆಯಲ್ಲೇ ಹೋಯ್ತು ಗೆಳೆಯನ ಜೀವ

ಮತ್ತೊಂದು ವಿಚಾರ ಅಂದ್ರೆ ಮಾರತ್ ಹಳ್ಳಿ ಪೊಲೀಸರು ಆರೋಪಿ ರಾಮುನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ರಾಮು, ಸಾರ್ ಸುಮ್ಮನೇ ಸುಳ್ಳು ಹೇಳಬೇಡಿ. ನಾನು ಸಣ್ಣ ಗಾಯ ಮಾಡಿದ್ದೆ ಅಷ್ಟೇ. ಅದಕ್ಕೆ ಅವನು ಸತ್ತಿಲ್ಲ. ಅವನು ಹುಡುಕಿಕೊಂಡು ಬರಲಿ ಎಂದು ನಾನು ಮೊಬೈಲ್ ತಗೊಂಡು ಹೋಗಿದ್ದೆ. ಆದ್ರೆ, ಜಗಳ ನಡೆದ ಎರಡು ದಿನವಾದರೂ ಅವನು ಬಂದಿಲ್ಲ. ಹೀಗಾಗಿ ರೂಮ್ ಹತ್ರ ಬಂದು ನೋಡಿದೆ ಆದ್ರೆ ಬೀಗ ಹಾಕಿತ್ತು ಎಂದು ಹೇಳಿದ್ದಾನೆ. ಅಂದರೆ ಇದುವರೆಗೂ ಕೊಲೆ ಮಾಡಿದ ರಾಮು ಇದೊಂದು ತಮಾಷೆ ಜಗಳ ಎಂದುಕೊಂಡಿದ್ದನಂತೆ.ಆದ್ರೆ ಹೊಟ್ಟೆಗೆ ಆಗಿದ್ದ ತೀವ್ರ ಸ್ವರೂಪದ ಗಾಯ ಹಾಗೂ ರಕ್ತ ಸ್ರಾವದಿಂದ ಪರುಶುರಾಮ್ ಸಾವನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಣ್ಣ ಪುಟ್ಟ ತಮಾಷೆ ವಿಚಾರ ಆಗಿದ್ರೂ ಪರವಾಗಿಲ್ಲ, ಅದು ಜಸ್ಟ್ ಮಾತಿನಲ್ಲೆ ಇರಲಿ, ಅದರ ಬದಲು ಜಗಳದಲ್ಲಿ ಸಣ್ಣ ಆಯುಧಗಳ ಬಳಕೆ ಆದ್ರೆ ಹೀಗೆ ಆಗೋದು.

Source link

ಕೊನೆಗೂ ಸಿಕ್ಕಿಬಿದ್ದ ನೀಟ್ ಹಗರಣದ ಕಿಂಗ್​ಪಿನ್; ಕೋಚಿಂಗ್​ ಕ್ಲಾಸ್​ನಲ್ಲಿ ಪ್ರಶ್ನೆ ಪತ್ರಿಕೆ ಹಂಚಿದ್ದ ಪ್ರೊಫೆಸರ್ ಬಂಧನ – Kannada News | NEET UG paper leak kingpin arrested Chemistry Professor PV Kulkarni leaked paper in tuition class

ನವದೆಹಲಿ, ಮೇ 15: ನೀಟ್ ಯುಜಿ (NEET UG 2026) ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ಹಿಂದಿನ ಕಿಂಗ್‌ಪಿನ್ ಯಾರೆಂದು ಕೊನೆಗೂ ಕೇಂದ್ರ ತನಿಖಾ ದಳ (ಸಿಬಿಐ) ಪತ್ತೆಹಚ್ಚಿದೆ. ಪುಣೆಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದ ಕೆಮಿಸ್ಟ್ರಿ ಪ್ರೊಫೆಸರ್ ಪಿ.ವಿ ಕುಲಕರ್ಣಿ ಎಂಬುವವರೇ ಈ ಹಗರಣದ ರೂವಾರಿ ಎಂಬುದು ಬಯಲಾಗಿದೆ. ಅವರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪ್ರಶ್ನೆ ಪತ್ರಿಕೆ ತಯಾರಿಕೆ ಪ್ರಕ್ರಿಯೆಯಲ್ಲಿ ಹಲವು ವರ್ಷಗಳಿಂದ ಭಾಗಿಯಾಗಿದ್ದರು. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಸುವ ತಂಡದಲ್ಲಿಯೂ ಅವರಿದ್ದರು. ಅವರು ತಮ್ಮದೇ ಖಾಸಗಿ ಕೋಚಿಂಗ್ ಕ್ಲಾಸ್ ಕೂಡ ನಡೆಸುತ್ತಿದ್ದರು. ಅಲ್ಲಿಯೇ ಅವರು ನೀಟ್ ಪ್ರಶ್ನೆ ಪತ್ರಿಕೆಗಳನ್ನು ಹಂಚಿದ್ದಾರೆ ಎನ್ನಲಾಗಿದೆ.

ಹಾಗೇ, ಏಜೆಂಟ್​​ಗಳಿಬ್ಬರಿಗೆ ಅವರು ಭಾರೀ ಮೊತ್ತಕ್ಕೆ ನೀಟ್ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಿದ್ದರು. ಅವರು ಮಹಾರಾಷ್ಟ್ರದಾದ್ಯಂತ ಅದನ್ನು ಹಂಚಿದ್ದರು. ಸಿಬಿಐ ಪೊಲೀಸರು ಒಬ್ಬೊಬ್ಬರೇ ಆರೋಪಿಗಳನ್ನು ಹಿಡಿಯುತ್ತಾ ಹೋದಾಗ ಕೊನೆಗೂ ಪ್ರಮುಖ ಆರೋಪಿಯ ಹೆಸರು ಬಯಲಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಪಿ.ವಿ ಕುಲಕರ್ಣಿ ಮತ್ತೊಬ್ಬ ಆರೋಪಿ ಮನೀಶಾ ವಾಘ್ಮಾರೆ ಸಹಾಯದಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು. ಅವರು ಮಹಾರಾಷ್ಟ್ರದ ಪುಣೆಯಲ್ಲಿರುವ ತನ್ನ ನಿವಾಸದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿಗಳನ್ನು ನಡೆಸಿದ್ದರು ಎನ್ನಲಾಗಿದೆ. ಅದಕ್ಕೆ ಸಾಕಷ್ಟು ಹೆಚ್ಚಿನ ಹಣವನ್ನೂ ಪಡೆದಿದ್ದರು.

ಇದನ್ನೂ ಓದಿ: NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಒಂದು ವಾಟ್ಸಾಪ್ ಮೆಸೇಜಿನಿಂದ ರದ್ದಾಯ್ತು ಯುಜಿ ಪರೀಕ್ಷೆ

ಕುಲಕರ್ಣಿ ಮೂಲತಃ ಲಾತೂರ್ ಜಿಲ್ಲೆಯವರು. ಮೇ 3 ರಂದು ನಡೆಸಲಾಗಿದ್ದ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಪತ್ರಿಕೆ ಸೋರಿಕೆ ಆರೋಪದ ನಂತರ ಮೇ 12 ರಂದು ರದ್ದುಗೊಳಿಸಲಾಗಿತ್ತು. ಇದಾದ ನಂತರ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತು. ಈ ನೀಟ್ ಯುಜಿ ಪ್ರಶ್ನೆ ಪತ್ರಿಕೆಯನ್ನು ತಾವು ಕೋಚಿಂಗ್ ನೀಡುವ ವಿದ್ಯಾರ್ಥಿಗಳಿಗೆ ಕುಲಕರ್ಣಿ ನೀಡಿದ್ದರು.

ಈ ತರಗತಿಗಳ ಸಮಯದಲ್ಲಿ, ಕುಲಕರ್ಣಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಉತ್ತರದ ಆಯ್ಕೆಗಳು ಮತ್ತು ಸರಿಯಾದ ಉತ್ತರಗಳನ್ನು ಡಿಕ್ಟೇಟ್ ಮಾಡುತ್ತಿದ್ದರು. ಅವರು ಅದನ್ನು ತಮ್ಮ ನೋಟ್‌ಬುಕ್‌ಗಳಲ್ಲಿ ಬರೆದುಕೊಂಡಿದ್ದರು. ಸಿಬಿಐ ಪ್ರಕಾರ, ಆ ಕೈಬರಹದ ಪ್ರಶ್ನೆಗಳು ಮತ್ತು ಉತ್ತರಗಳು ಮೇ 3ರಂದು ನಡೆಸಲಾದ ನಿಜವಾದ ನೀಟ್ ಯುಜಿ 2026 ಪ್ರಶ್ನೆ ಪತ್ರಿಕೆಗೆ ನಿಖರವಾಗಿ ಹೊಂದಿಕೆಯಾಗಿವೆ.

ಇದನ್ನೂ ಓದಿ: NEET Exam 2026 Cancelled: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ ಮತ್ತು ಅಹಲ್ಯಾನಗರದಿಂದ ಇದುವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಪಿ.ವಿ. ಕುಲಕರ್ಣಿ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿಸಲಾದ ಒಟ್ಟು ಆರೋಪಿಗಳ ಸಂಖ್ಯೆ 8ಕ್ಕೆ ತಲುಪಿದೆ.

ಈ ಹಿಂದೆ ಬಂಧಿಸಲಾದ 7 ಜನರಲ್ಲಿ, 5 ಆರೋಪಿಗಳನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅವರನ್ನು ವಿವರವಾದ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಗುರುವಾರ ಬಂಧಿಸಲಾದ ಉಳಿದ ಇಬ್ಬರು ಆರೋಪಿಗಳನ್ನು ಪುಣೆಯ ನ್ಯಾಯಾಲಯಕ್ಕೆ ಟ್ರಾನ್ಸಿಟ್ ರಿಮಾಂಡ್‌ಗಾಗಿ ಹಾಜರುಪಡಿಸಲಾಗುತ್ತಿದೆ. ಇದಾದ ನಂತರ ಮುಂದಿನ ವಿಚಾರಣೆಗಾಗಿ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಔಟರ್ ರಿಂಗ್ ರಸ್ತೆಯಲ್ಲಿ ಶೀಘ್ರದಲ್ಲೇ ಆದ್ಯತಾ ಪಥ: ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ – Kannada News | BMTC Bus Lane Returns to Bengaluru’s ORR: Solution to Ease IT Corridor Traffic Congestion

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 15: ಬೆಂಗಳೂರಿನ (Bangaluru) ಹೊರವರ್ತುಲ ರಸ್ತೆಯಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಬಸ್ ಪಥವನ್ನ ಹೊಸ ರೂಪದಲ್ಲಿ ಅಂದರೆ ಆದ್ಯತಾ ಪಥವನ್ನಾಗಿ ಮತ್ತೆ ಅನುಷ್ಠಾನ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ಮೂಲಕ ಐಟಿಬಿಟಿ ಕಂಪನಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಟ್ರಾಫಿಕ್ (traffic) ದಟ್ಟಣೆ ನಿಯಂತ್ರಣ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಸಿದ್ಥತೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಹೊರವರ್ತುಲ ರಸ್ತೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ
  • ಬಿಎಂಟಿಸಿ ಆದ್ಯತಾ ಪಥ ಮರು ಅನುಷ್ಠಾನಕ್ಕೆ ಸಿದ್ಧತೆ
  • ಐಟಿ ಕಾರಿಡಾರ್‌ಗಳಲ್ಲಿ ಸುಗಮ ಸಂಚಾರಕ್ಕೆ ಮಾಸ್ಟರ್ ಪ್ಲಾನ್

ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್​​ಗಳ ಸಂಚಾರಕ್ಕಾಗಿಯೇ ಬಸ್ ಲೇನ್​ಗಳನ್ನ ಪರಿಚಯಿಸಲಾಗಿತ್ತು. ಈ ವೇಳೆ ಬಿಎಂಟಿಸಿ ಬಳಸುವವರ ಸಂಖ್ಯೆ ಕೂಡ ಈ ಭಾಗದಲ್ಲಿ ಹೆಚ್ಚಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತವಾಗಿತ್ತು. ಈಗ ಮತ್ತೆ ಬಸ್ ಪಥವನ್ನ ಆದ್ಯತಾ ಪಥವನ್ನಾಗಿ ಹೊಸ ರೂಪದಲ್ಲಿ ಪರಿಚಯಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮತ್ತು ಜಿಬಿಎ ಅಧಿಕಾರಿಗಳು ಮುಂದಾಗಿದ್ದಾರೆ.

ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಳ

ಇಬ್ಬಲೂರು, ಬೆಳ್ಳಂದೂರು, ಮಾರತಹಳ್ಳಿ ಭಾಗದ ಔಟರ್ ರಿಂಗ್ ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಾಗಿದೆ. ಹೀಗಾಗಿ ಬಿಎಂಟಿಸಿ ಬಸ್ ಸೇರಿ ಸಮೂಹ ಸಾರಿಗೆ ವ್ಯವಸ್ಥೆಯ ವಾಹನಗಳಿಗೆ ಆದ್ಯತಾ ಪಥವನ್ನ ನಿರ್ಮಿಸುವ ಆಲೋಚನೆ ಇದೆ. ಈ ಕುರಿತಾಗಿ ಬಿಎಂಟಿಸಿ, ಜಿಬಿಎ ಅಧಿಕಾರಿಗಳ ಜೊತೆ ಟ್ರಾಫಿಕ್ ಪೊಲೀಸರು ಈಗಾಗಲೇ ಸಭೆ ಕೂಡ ಮಾಡಿದ್ದಾರೆ. ಇನ್ನು ಆದ್ಯತಾ ಪಥ ಮಾಡುವುದರ ಬಗ್ಗೆ ಪ್ರಯಾಣಿಕರು ಸಹಮತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಈ ಮಾರ್ಗದ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

ಒಟ್ಟಾರೆಯಾಗಿ, ಈ ಆದ್ಯತಾ ಪಥವು ಆದಷ್ಟು ಬೇಗ ನಿರ್ಮಾಣಗೊಂಡು, ಜನರು ಖಾಸಗಿ ವಾಹನಗಳ ವ್ಯಾಮೋಹ ಬಿಟ್ಟು ಬಿಎಂಟಿಸಿ ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತಾಗಲಿ ಮತ್ತು ಹೊರವರ್ತುಲ ರಸ್ತೆಯ ಸಂಚಾರ ಸುಗಮವಾಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟ್ರ್ಯಾಕ್ಟರ್ ಬಿದ್ದು 6 ಜನರ ದುರಂತ ಅಂತ್ಯ: ದುರ್ಘಟನೆ ಸಂಭವಿಸಿದ್ಹೇಗೆ? ಎಳೆ ಎಳೆಯಾಗಿ ಬಿಚ್ಚಿಟ್ಟ ಐಜಿಪಿ

ವಿಜಯನಗರ, (ಮೇ 15): ಭೀಕರ ರಸ್ತೆ ಅಪಘಾತದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಕನಿಷ್ಠ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ಟಿಬಿ ಡ್ಯಾಂ ಬಳಿಯ ಮುನಿರಾಬಾದ್‌ ನಲ್ಲಿ ಸಂಭವಿಸಿದೆ. ಹುಲಿಗಿ ಜಾತ್ರೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್​​​ ಹಿಂಬದಿಗೆ ಕ್ಯಾಂಟರ್ ಗುದ್ದಿದೆ. ಪರಿಣಾಮ ಟ್ರ್ಯಾಕ್ಟರ್ ಸೇತುವೆ ಮೇಲಿಂದ ಕೆಳಕ್ಕೆ ಬಿದ್ದಿದೆ. ಇನ್ನು ಗಾಯಾಳುಗಳನ್ನ ಹೊಸಪೇಟೆ ಹಾಗೂ ಕೊಪ್ಪಳ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಐಜಿಪಿ ಹರ್ಷ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಬಳಿಕ ದುರ್ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಇದನ್ನೂ ಓದಿ: ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್: 6 ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ

Source link

ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್ – Kannada News | Actress Trisha Krishnan blushes as fan mentions CM Vijay at Karuppu screening

ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಇತ್ತೀಚಿನ ದಿನಗಳಲ್ಲಿ ಸಖತ್ ಸುದ್ದಿ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಟ ವಿಜಯ್ (Thalapathy Vijay) ಮತ್ತು ತ್ರಿಶಾ ನಡುವೆ ಆಪ್ತ ಗೆಳತನವಿದೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ದಟ್ಟವಾಗಿವೆ. ಈ ನಡುವೆ, ಅಭಿಮಾನಿಯೊಬ್ಬರು ವಿಜಯ್ ಹೆಸರು ಎತ್ತುತ್ತಿದ್ದಂತೆ ತ್ರಿಶಾ ಸಿಕ್ಕಾಪಟ್ಟೆ ನಾಚಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಶುಕ್ರವಾರ (ಮೇ 15) ಚೆನ್ನೈನ ಪ್ರಖ್ಯಾತ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಚಿತ್ರಮಂದಿರದಲ್ಲಿ ತ್ರಿಶಾ ಮತ್ತು ಸೂರ್ಯ ನಟನೆಯ ಬಿಗ್ ಬಜೆಟ್ ಸಿನಿಮಾ ‘ಕರುಪ್ಪು’ ಚಿತ್ರದ ಮೊದಲ ಪ್ರದರ್ಶನ ಇತ್ತು. ಈ ವೇಳೆ ಚಿತ್ರಮಂದಿರದಿಂದ ಹೊರಬಂದ ತ್ರಿಶಾ ಅವರನ್ನು ಅಭಿಮಾನಿಗಳು ಸುತ್ತುವರಿದರು. ತ್ರಿಶಾ ಅವರು ತಮ್ಮ ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದಂತೆಯೇ ಫೋಟೋ ಮತ್ತು ವಿಡಿಯೋಗಳಿಗಾಗಿ ಅಭಿಮಾನಿಗಳು ಮುಗಿಬಿದ್ದರು.

ಈ ವೇಳೆ ಕಾರಿನ ಬಳಿ ಬಂದ ಅಭಿಮಾನಿಯೊಬ್ಬರು, ‘ದಳಪತಿಯನ್ನು ಕೇಳಿದೆ ಅಂತ ಹೇಳಿ’ ಎಂದು ನಗುತ್ತಾ ಹೇಳಿದರು. ಇದನ್ನು ಕೇಳಿದ ತಕ್ಷಣ ತ್ರಿಶಾ ಮುಖದಲ್ಲಿ ದೊಡ್ಡ ನಗು ಮೂಡಿತು. ಅವರು ನಗುತ್ತಲೇ ‘ಖಂಡಿತವಾಗಿ’ ಎಂದು ಉತ್ತರಿಸಿ, ನಾಚಿಕೆಯಿಂದ ತಲೆ ತಗ್ಗಿಸಿದರು. ಕಾರಿನಲ್ಲಿ ಕುಳಿತು ಯಾರಿಗೋ ಮೆಸೇಜ್ ಕಳುಹಿಸುತ್ತಾ ಅವರು ನಿರಂತರವಾಗಿ ಮುಗುಳ್ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ತಮ್ಮ ಹೆಸರು ಕೂಗುತ್ತಿದ್ದ ಅಭಿಮಾನಿಗಳತ್ತ ಕೈ ಬೀಸಿದರು.

ತ್ರಿಶಾ ವೈರಲ್ ವಿಡಿಯೋ:

ಮೇ 10ರಂದು ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಭವ್ಯ ಸಮಾರಂಭದಲ್ಲಿ ತ್ರಿಶಾ ಅವರು ಎಲ್ಲರ ಗಮನ ಸೆಳೆದಿದ್ದರು. ಅತ್ಯಾಕರ್ಷಕ ನೀಲಿ ಮತ್ತು ಬಂಗಾರದ ಬಣ್ಣದ ಸೀರೆಯನ್ನು ಉಟ್ಟು, ಮಲ್ಲಿಗೆ ಮುಡಿದು ಬಂದಿದ್ದ ಅವರು ವಿಜಯ್ ತಾಯಿ ಶೋಭಾ ಅವರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿದ್ದರು. ಅಲ್ಲದೆ, ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ತಾಯಿಯ ಜೊತೆಗೇ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ತ್ರಿಶಾ ಅವರಿಗೆ 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಆಗಿತ್ತಾದರೂ ಅದೇ ವರ್ಷ ಆ ಸಂಬಂಧ ಮುರಿದುಬಿದ್ದಿತ್ತು. ಇತ್ತ ನಟ ವಿಜಯ್ ಅವರು 1999ರಲ್ಲಿ ತಮ್ಮ ಅಭಿಮಾನಿ ಸಂಗೀತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಸುಮಾರು ಮೂರು ದಶಕಗಳ ದಾಂಪತ್ಯ ಜೀವನದ ನಂತರ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರು ಖ್ಯಾತ ನಟಿಯೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಯಾಬಿಟಿಸ್ ಇರುವವರು ಮಾತ್ರವಲ್ಲ, ನಿಮಗೆ ಈ ಆರೋಗ್ಯ ಸಮಸ್ಯೆ ಇದ್ರೂ ಐಸ್‌ಕ್ರೀಂ ತಿನ್ನುವುದು ಒಳ್ಳೆಯದಲ್ಲ! – Kannada News | Is Ice Cream Bad For You? Medical Reasons To Avoid It

ಬೇಸಿಗೆಯಲ್ಲಿ ಐಸ್‌ಕ್ರೀಂ (Ice Cream) ತಿನ್ನುವುದು ಬಹುತೇಕರಿಗೆ ಇಷ್ಟವಾದರೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ತಿನ್ನದಿರುವುದೇ ಉತ್ತಮ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಕಾರಣವಿಷ್ಟೇ, ಐಸ್‌ಕ್ರೀಂನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿಗಳು ಇರುವುದರಿಂದ ಇದು ಕೆಲ ರೋಗಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಸಾಮಾನ್ಯವಾಗಿ ಮಧುಮೇಹ ಇರುವವರಿಗೆ ಐಸ್‌ಕ್ರೀಂ ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಡಯಾಬಿಟಿಸ್ ಇರುವವರು ಮಾತ್ರವಲ್ಲದೆ ಇನ್ನಿತರ ಆರೋಗ್ಯ ಸಮಸ್ಯೆ ಇದ್ದಾಗಲೂ ಕೂಡ ಐಸ್‌ಕ್ರೀಂ ತಿನ್ನಬಾರದು. ಹಾಗಾದರೆ ಯಾವ ಆರೋಗ್ಯ ಸಮಸ್ಯೆ ಇದ್ದಾಗ ಐಸ್‌ಕ್ರೀಂ ತಿನ್ನುವುದು ಒಳ್ಳೆಯದಲ್ಲ, ಐಸ್‌ಕ್ರೀಂ ಬದಲು ಯಾವ ಆಹಾರವನ್ನು ಪರ್ಯಾಯವಾಗಿ ಸೇವನೆ ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ರೀತಿಯ ಆರೋಗ್ಯ ಸಮಸ್ಯೆ ಇದ್ದಾಗ ಐಸ್‌ಕ್ರೀಂ ತಿನ್ನಬಾರದು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಫ್ಯಾಟಿ ಲಿವರ್, ಅತಿಯಾದ ತೂಕ, ಹೈ ಕೊಲೆಸ್ಟ್ರಾಲ್, ಲ್ಯಾಕ್ಟೋಸ್ ಇಂಟಾಲರೆನ್ಸ್ ಹಾಗೂ ಅಜೀರ್ಣ ಸಮಸ್ಯೆಗಳಿರುವವರೂ ಐಸ್‌ಕ್ರೀಂ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಏಕೆಂದರೆ ಫ್ಯಾಟಿ ಲಿವರ್ ಇರುವವರಲ್ಲಿ ಹೆಚ್ಚು ಸಕ್ಕರೆ ಮತ್ತು ಕೊಬ್ಬಿನ ಆಹಾರ ಲಿವರ್ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಅತಿಯಾದ ತೂಕ ಹೊಂದಿರುವವರಲ್ಲಿ ಐಸ್‌ಕ್ರೀಂನ ಹೆಚ್ಚುವರಿ ಕ್ಯಾಲೊರಿಗಳು ತೂಕವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಹೈ ಕೊಲೆಸ್ಟ್ರಾಲ್ ಇರುವವರಿಗೆ ಹೆಚ್ಚು ಫ್ಯಾಟ್ ಇರುವ ಆಹಾರ ಹೃದಯದ ಆರೋಗ್ಯಕ್ಕೂ ಹಾನಿಕಾರಕವಾಗಬಹುದು. ಲ್ಯಾಕ್ಟೋಸ್ ಇಂಟಾಲರೆನ್ಸ್ ಇರುವವರು ಐಸ್‌ಕ್ರೀಂ ಸೇವಿಸಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಜಜ್ಜು ಸಮಸ್ಯೆ ಕಾಣಿಸಬಹುದು. ಅಜೀರ್ಣ ಅಥವಾ ಆಸಿಡಿಟಿ ಸಮಸ್ಯೆ ಇರುವವರಲ್ಲಿ ತಣ್ಣನೆಯ ಮತ್ತು ಭಾರವಾದ ಆಹಾರ ಅಸ್ವಸ್ಥತೆಯನ್ನು ಹೆಚ್ಚಿಸಬಹುದು. ಐಸ್‌ಕ್ರೀಂ ಹೆಚ್ಚು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದು, ತೂಕ ಏರಿಕೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ಹೊಟ್ಟೆನೋವು, ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ದೇಹ ತಂಪಾಗುತ್ತಾ? ಡಾ. ಸಂದೀಪ್ ಈ ಬಗ್ಗೆ ಏನ್ ಹೇಳ್ತಾರೆ ನೋಡಿ

ಉತ್ತಮ ಪರ್ಯಾಯಗಳು ಯಾವುವು?

ಐಸ್‌ಕ್ರೀಂ ಬದಲು ಮನೆಯಲ್ಲೇ ತಯಾರಿಸಿದ ಮೊಸರು, ಸಕ್ಕರೆ ರಹಿತ ಸ್ಮೂದಿ, ತಾಜಾ ಹಣ್ಣು ಅಥವಾ ಫ್ರೋಜನ್ ಯೋಗರ್ಟ್ ಉತ್ತಮ ಆಯ್ಕೆಯಾಗಬಹುದು. ಜೊತೆಗೆ ಎಳೆನೀರು, ಮಜ್ಜಿಗೆ ಮತ್ತು ಹಣ್ಣಿನ ತಂಪು ಪಾನೀಯಗಳು ಬೇಸಿಗೆಯಲ್ಲಿ ದೇಹಕ್ಕೆ ತಂಪು ಹಾಗೂ ಹೈಡ್ರೇಶನ್ ನೀಡಲು ಸಹಾಯಕವಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link