Headlines

nagaraj11081993

‘ಟಾಕ್ಸಿಕ್’ ಎಫೆಕ್ಟ್: ರಿಲೀಸ್ ದಿನಾಂಕ ಬದಲಾಯಿಸಿಕೊಂಡ ಬಾಲಿವುಡ್ ಸ್ಟಾರ್ ಹೀರೋ

ಬಾಲಿವುಡ್ ನಟ ವರುಣ್ ಧವನ್ (Varun Dhawan) ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರುಣ್ ಧವನ್ ನಟನೆಯ ಚಿತ್ರವು ಈ ಮೊದಲು ಜೂನ್ 5ರಂದು ಬಿಡುಗಡೆ ಆಗುವುದಾಗಿ ಘೋಷಿಸಿತ್ತು. ಆದರೆ, ಈಗ ಒಂದು ವಾರ ತಡವಾಗಿ ಅಂದರೆ ಜೂನ್ 12ರಂದು…

Read More

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥ

ನವದೆಹಲಿ, ಮಾರ್ಚ್ 10: ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ಏರ್ಲೈನ್ಸ್ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ (Pieter Elbers) ರಾಜೀನಾಮೆ ನೀಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಪೈಲಟ್​ಗಳಿಲ್ಲದೇ ಹಲವಾರು ಫ್ಲೈಟ್​​ಗಳು ಸ್ಥಗಿತಗೊಂಡ ಬಳಿಕ ಸಿಇಒ ತಲೆದಂಡವಾಗಬಹುದು ಎನ್ನುವ ನಿರೀಕ್ಷೆ ಇತ್ತು. ಅಂತೆಯೇ ಪೀಟರ್ಸ್ ರಾಜೀನಾಮೆ ಕೊಟ್ಟಿದ್ದಾರೆ. ಇಂದು ಮಂಗಳವಾರ ಅವರ ರಾಜೀನಾಮೆ ನಿರ್ಧಾರವನ್ನು ಇಂಡಿಗೋ ಸಂಸ್ಥೆ ಪ್ರಕಟಿಸಿದೆ. ಸಂಸ್ಥೆಯ ನಿರ್ವಾಹಕ ನಿರ್ದೇಶಕ ರಾಹುಲ್ ಭಾಟಿಯಾ ಅವರು ಹಂಗಾಮಿ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇಂಡಿಗೋದ ಮಾಲಕಸಂಸ್ಥೆಯಾದ ಇಂಟರ್​ಗ್ಲೋಬ್ ಏವಿಯೇಶನ್​ನ ಪ್ರೊಮೋಟರ್…

Read More

ನಾವ್ಯಾಕೆ ತೈಲ ನೀಡಬೇಕು? ಬಿಕ್ಕಟ್ಟಿಗೆ ಕಾರಣರಾದವರು ಜವಾಬ್ದಾರರು: ಐಇಎಗೆ ಭಾರತದ ಉತ್ತರ

ನವದೆಹಲಿ, ಮಾರ್ಚ್ 10: ಆಂತರಿಕ ಬಳಕೆಗೆಂದು ಇಡಲಾಗಿರುವ ತೈಲ ಸಂಗ್ರಹವನ್ನು (Strategic Oil Reserves) ಬಿಡುಗಡೆ ಮಾಡಬೇಕೆಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಾದ ಐಇಎ ಮಾಡಿರುವ ಪ್ಲಾನ್​ಗೆ ಭಾರತ ನಕಾರ ತೋರಿದೆ. ಜಾಗತಿಕವಾಗಿ ತೈಲ ಬೆಲೆ ಕಡಿಮೆಗೊಳಿಸಲು ಐಇಎ ತೈಲ ಸಂಗ್ರಹ ಬಿಡುಗಡೆ ಮಾಡುವಂತೆ ಎಲ್ಲಾ ದೇಶಗಳಿಗೂ ನೀಡಿರುವ ಕರೆಗೆ ಭಾರತ ಓಗೊಟ್ಟಿಲ್ಲ. ಈ ಬಿಕ್ಕಟ್ಟು ಸೃಷ್ಟಿಸಿದವರು ತಾವಲ್ಲ. ನಮ್ಮಿಂದ ಈ ಕೆಲಸ ಆಗಲ್ಲ ಎಂದು ಭಾರತ ಹೇಳೀದೆ. ‘ತೈಲ ಸಂಗ್ರಹವನ್ನು ಭಾರತ ಬಿಡುಗಡೆ ಮಾಡುವುದಿಲ್ಲ. ಈ ಬಿಕ್ಕಟ್ಟು…

Read More

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೇಮಿಸಲು ಹೊರಟ ಸರ್ಕಾರ: ಹೊರಟ್ಟಿ ಆಕ್ರೋಶ

ಬೆಂಗಳೂರು, ಮಾರ್ಚ್​ 10: ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರದ ಬಗ್ಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಈಗಾಗಲೇ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಹಾಲು-ಮೊಟ್ಟೆ ವಿತರಣೆಯಂತಹ ಬೋಧಕೇತರ ಕೆಲಸಗಳಲ್ಲಿಯೂ ನಿರತರಾಗಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ಶಿಕ್ಷಕರ ಕೊರತೆ ಇದ್ದು, ಇಂತಹ ಸಂದರ್ಭದಲ್ಲಿ ನಾಯಿ ಕಾಯುವ ಜವಾಬ್ದಾರಿ ನೀಡುವುದು ಹಾಸ್ಯಾಸ್ಪದ. ಶಿಕ್ಷಕ ಸಮುದಾಯಕ್ಕೆ ಮಾಡುವ ಅವಮಾನ ಎಂದು ಶಿಕ್ಷಣ ಸಚಿವ…

Read More

Team India: ಕಳೆದ 21 ತಿಂಗಳಲ್ಲಿ 365 ಕೋಟಿ ರೂ. ಬಹುಮಾನ ಗೆದ್ದ ಟೀಂ ಇಂಡಿಯಾ

2026 ರ ಟಿ20 ವಿಶ್ವಕಪ್‌ ಚಾಂಪಿಯನ್ ಟೀಮ್ ಇಂಡಿಯಾಗೆ ಬಿಸಿಸಿಐ 131 ಕೋಟಿ ರೂ. ಬಹುಮಾನ ನೀಡಿದೆ. ಇದರ ಜೊತೆಗೆ ಐಸಿಸಿಯಿಂದಲೂ ಭಾರತ ತಂಡಕ್ಕೆ ಹಣ ಸಿಕ್ಕಿದೆ. ಕಳೆದ ಎರಡು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ನಿರಂತರವಾಗಿ ಯಶಸ್ಸು ಸಾಧಿಸುತ್ತಿರುವ ಟೀಂ ಇಂಡಿಯಾದ ಆಟಗಾರರ ಮೇಲೆ ಬಿಸಿಸಿಐ ಹಣದ ಮಳೆಯನ್ನೇ ಹರಿಸಿದೆ. ಕಳೆದ 21 ತಿಂಗಳುಗಳಲ್ಲಿ ಬಿಸಿಸಿಐ, ಟೀಂ ಇಂಡಿಯಾಗೆ 365 ಕೋಟಿ ರೂ. ಬಹುಮಾನ ನೀಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ. 2026 ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ…

Read More

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೇಮಿಸಲು ಹೊರಟ ಸರ್ಕಾರ: ಹೊರಟ್ಟಿ ಆಕ್ರೋಶ

ಬೆಂಗಳೂರು, ಮಾರ್ಚ್​ 10: ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರದ ಬಗ್ಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಈಗಾಗಲೇ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಹಾಲು-ಮೊಟ್ಟೆ ವಿತರಣೆಯಂತಹ ಬೋಧಕೇತರ ಕೆಲಸಗಳಲ್ಲಿಯೂ ನಿರತರಾಗಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ಶಿಕ್ಷಕರ ಕೊರತೆ ಇದ್ದು, ಇಂತಹ ಸಂದರ್ಭದಲ್ಲಿ ನಾಯಿ ಕಾಯುವ ಜವಾಬ್ದಾರಿ ನೀಡುವುದು ಹಾಸ್ಯಾಸ್ಪದ. ಶಿಕ್ಷಕ ಸಮುದಾಯಕ್ಕೆ ಮಾಡುವ ಅವಮಾನ ಎಂದು ಶಿಕ್ಷಣ ಸಚಿವ…

Read More

ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ

ಬೆಂಗಳೂರು, ಮಾರ್ಚ್​ 10: ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್​​. ಅಶೋಕ್ ರಾಜ್ಯ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬ ಮತ್ತು ಆದ್ಯತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಭಿಕ್ಷಾಟನೆ ನಿರ್ಮೂಲನೆಗಾಗಿ ಸಂಗ್ರಹಿಸಲಾದ 3% ಸೆಸ್‌ನಿಂದ ಕೇಂದ್ರ ಪರಿಹಾರ ಸಮಿತಿಗೆ ನೀಡಬೇಕಾದ 23.43 ಕೋಟಿ ರೂ. ಬಾಕಿ ಉಳಿದಿದೆ ಎಂದು ಸದನದ ಗಮನ ಸೆಳೆದರು. ಅಲ್ಲದೆ, ಕೋವಿಡ್‌ ಅಥವಾ ಇತರೆ ದುರಂತಗಳಿಂದ ಪೋಷಕರನ್ನು ಕಳೆದುಕೊಂಡ 26 ಸಾವಿರ ಅನಾಥ ಮಕ್ಕಳಿಗೆ ಕಳೆದ ಏಳು ತಿಂಗಳಿಂದ…

Read More

ಮೂತ್ರಕ್ಕೆ ಹೋಗದೆ ಹೆಚ್ಚು ಸಮಯ ಕಟ್ಟಿಕೊಂಡಿರುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಾಗುತ್ತೆ ಗೊತ್ತೆ?

ಇಂದಿನ ವೇಗದ ಜೀವನಶೈಲಿಯಲ್ಲಿ ಕೆಲಸ, ಪ್ರಯಾಣ ಅಥವಾ ವ್ಯಸ್ತ ದಿನಚರಿಯ ಕಾರಣದಿಂದ ಹಲವರು ಮೂತ್ರವನ್ನು ದೀರ್ಘ ಕಾಲ ಹಿಡಿದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಈ ಅಭ್ಯಾಸ ದೇಹದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಏಕೆಂದರೆ ಮೂತ್ರದ ಮೂಲಕ ದೇಹದಲ್ಲಿರುವ ಹೆಚ್ಚುವರಿ ನೀರು ಮತ್ತು ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಇದು ದೇಹದ ಸಮತೋಲನವನ್ನು ಕಾಪಾಡಲು ಅಗತ್ಯವಾದ ಪ್ರಕ್ರಿಯೆ. ಆದರೆ ದೀರ್ಘ ಕಾಲ ಮೂತ್ರವನ್ನು (Urine) ಹಿಡಿದುಕೊಳ್ಳುವುದರಿಂದ ಈ ಸಹಜ ಪ್ರಕ್ರಿಯೆಯ ಮೇಲೆ ಪರಿಣಾಮ…

Read More

ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಜೆಡಿಎಸ್​​ಗೆ 1 ಸೀಟು!

ಬೆಂಗಳೂರು, (ಮಾರ್ಚ್ 10): ಕರ್ನಾಟಕ ವಿಧಾನಪರಿಷತ್ (Karnataka Legislative Council) ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಿಗೆ ಬಿಜೆಪಿ (BJP)  ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಒಟ್ಟು ನಾಲ್ಕು ಸೀಟುಗಳ ಪೈಕಿ ಒಂದು ಸ್ಥಾನವನ್ನು ಮಿತ್ರ ಪಕ್ಷ ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದು, ಇನ್ನುಳಿದ ಮೂರು ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ.  ಇನ್ನುಳಿದ 1  ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟಿದೆ. ಇದರೊಂದಿಗೆ ಲೋಕಸಭಾ…

Read More

IPL 2026: ಭಾರತದಲ್ಲಿ ಎಲ್​ಪಿಜಿ ಬಿಕ್ಕಟ್ಟು; ಐಪಿಎಲ್ ಆರಂಭಕ್ಕೆ ವಿಘ್ನ

ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ (Middle East Conflict) ಭಾರತದ ಮೇಲೆ ಗಾಢ ಪರಿಣಾಮ ಬೀರುತ್ತಿದೆ. ಇಂಧನ ಪೂರೈಕೆ ಮೇಲಿನ ನಿರ್ಬಂಧಗಳಿಂದಾಗಿ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿರುವ ಎಲ್​ಪಿಜಿ (LPG) ಬಿಕ್ಕಟ್ಟು ಮಧ್ಯಮ ವರ್ಗಕ್ಕೆ ದೊಡ್ಡ ಹೊಡೆತ ನೀಡಿದೆ. ಕಮರ್ಷಿಯಲ್ ಸಿಲಿಂಡರ್​​ ಬೆಲೆ 115 ರೂ ಏರಿಕೆ ಆಗಿದ್ದು, ಇದು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಾತ್ರವಲ್ಲದೆ ಬೆಲೆ ಏರಿಕೆ ಜನಜೀವನದ ಮೇಲೂ ಪರಿಣಾಮ…

Read More