All posts by nagaraj11081993

ನಾನು ಸಿಎಂ ಆಗ್ಲಾ? ಎಂದವನ ಬಂಡವಾಳ ಬಯಲು: 4500 ಕೋಟಿ ವಂಚಿಸಿದ ಶಿವಂ ಅಸೋಸಿಯೇಟ್ಸ್ ಮಾಲೀಕನ ಮನೆ, ಕಚೇರಿ ಸೀಜ್ – Kannada News | Investment Scam: Shivanand Neelannavar Accused in 4,500 Crore Fraud; House and Office Seized

ಶಿವಾನಂದ ನೀಲಣ್ಣವರ್Image Credit source: tv9 kannada

ಬೆಳಗಾವಿ, ಮೇ 15: ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಕೋಟ್ಯಂತರ ರೂ ಹಣ ದುರಪಯೋಗವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಶಿವಂ ಅಸೋಸಿಯೇಟ್ಸ್ (Shivam Associates) ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್​​ ಎಂಬಾತ ಯಾವುದೇ ನಿಯಮಗಳನ್ನು ಪಾಲಿಸದೆ, ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಬರೋಬ್ಬರಿ 40 ರಿಂದ 45 ಸಾವಿರ ಜನರಿಂದ ಅಂದಾಜು 4,500 ಕೋಟಿ ರೂ ಹೂಡಿಕೆ ಮಾಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದ್ದು, ಸದ್ಯ ಶಿವಾನಂದ ನೀಲಣ್ಣವರ್​​ ಮನೆ ಸೇರಿದಂತೆ ಕಚೇರಿ ಕೂಡ ಸೀಜ್​ ಮಾಡಲಾಗಿದ್ದು, ಡಿಸಿಗೆ ವರದಿ ಸಲ್ಲಿಕೆ ಮಾಡಲಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ₹4,500 ಕೋಟಿ ವಂಚನೆ ಆರೋಪ ಕೇಸ್​​
  • ಶಿವಾನಂದ ನೀಲಣ್ಣವರ್​​ ಮನೆ, ಕಚೇರಿ ಸೀಜ್​
  • ಸಿಐಡಿ ತನಿಖೆಗೆ ಒತ್ತಾಯ

ಪ್ರಕರಣದ ಗಾಂಭೀರ್ಯವನ್ನು ಅರಿತು ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯಡಿ ತನಿಖೆಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಬೆಳಗಾವಿಯ ಶಿವಬಸವನಗರದಲ್ಲಿರುವ ಕಚೇರಿ, ಮನೆ ಹಾಗೂ ಅಪಾರ್ಟ್‌ಮೆಂಟ್‌ ಸೇರಿದಂತೆ ಹಲವು ಕಡೆಗಳಲ್ಲಿ ಎಸಿ ಶ್ರವಣ್ ಕುಮಾರ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೆ 24 ಗಂಟೆಗಳ ಕಾಲ ಸುದೀರ್ಘ ಜಾಲಾಡಿದ್ದು, ಸದ್ಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

ದಾಖಲೆಗಳಿಲ್ಲದ ಸಾವಿರಾರು ಕೋಟಿ ವ್ಯವಹಾರ: ಆರ್​ಬಿಐ ನಿಯಮಗಳ ಉಲ್ಲಂಘನೆ

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅತಿರೇಕದ ಭಾಷಣಗಳ ಮೂಲಕ ವೈರಲ್ ಆಗಿದ್ದ ಶಿವಾನಂದ ನೀಲಣ್ಣವರ್ ಹಿನ್ನೆಲೆಯನ್ನು ಕೆದಕಿದಾಗ ಈ ಬೃಹತ್ ಜಾಲ ಪತ್ತೆಯಾಗಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಯಾವುದೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳನ್ನು ಪಾಲಿಸಿಲ್ಲ ಹಾಗೂ ಹೂಡಿಕೆ ಮಾಡಿದ ಸಾರ್ವಜನಿಕರ ಹಣಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ನಿರ್ವಹಿಸಿಲ್ಲ ಎನ್ನಲಾಗಿದೆ. ಆನ್‌ಲೈನ್ ಮೂಲಕವೇ ಇಷ್ಟೊಂದು ಕೋಟ್ಯಂತರ ರೂ ವ್ಯವಹಾರ ನಡೆದಿದ್ದರೂ ಆದಾಯ ತೆರಿಗೆ ಇಲಾಖೆ ಅಥವಾ ಜಾರಿ ನಿರ್ದೇಶನಾಲಯದ ಗಮನಕ್ಕೆ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯ ವೇಳೆ ವ್ಯಕ್ತಿಯೊಬ್ಬರು ಯಾವುದೇ ದಾಖಲೆಯಿಲ್ಲದೆ 5 ಲಕ್ಷ ರೂ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.

ಧೈರ್ಯವಾಗಿರಿ: ಆಡಿಯೋ ಬಿಡುಗಡೆ ಮಾಡಿದ ಶಿವಾನಂದ ನೀಲಣ್ಣವರ್​​

ದಾಳಿಯ ಬೆನ್ನಲ್ಲೇ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿರುವ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ಆಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ. ‘ನನ್ನ ಮೊಬೈಲ್ ಬಂದ್ ಇದೆ, ಆದರೆ ನಾನು ಮನೆಯಲ್ಲೇ ಇದ್ದೇನೆ ಮತ್ತು ಸೆಕ್ಯೂರಿಟಿಯಲ್ಲಿದ್ದೇನೆ. ಇನ್ನು ಎರಡು ಮೂರು ದಿನಗಳಲ್ಲಿ ಎಂದಿನಂತೆ ಎಲ್ಲವೂ ಸರಿಯಾಗಲಿದೆ. ಹೂಡಿಕೆದಾರರು ಯಾರೂ ಹೆದರಬೇಡಿ, ವಿಶೇಷವಾಗಿ ಮಹಿಳೆಯರು ಧೈರ್ಯವಾಗಿರಿ’ ಎಂಬ ಸಂದೇಶ ನೀಡಿದ್ದಾರೆ.

ಬಂಧನದ ಭೀತಿ: ಸಿಐಡಿ ತನಿಖೆಗೆ ಒತ್ತಾಯ

ಮೂಲತಃ ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದವರಾದ ಶಿವಾನಂದ, ಬೆಳಗಾವಿಯ ಮಹಿಳೆಯನ್ನು ಮದುವೆಯಾಗಿ ಇಲ್ಲೇ ನೆಲೆಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ನಾನು ಸಿಎಂ ಆಗ್ಲಾ?, ನಾನು ಪಕ್ಕಾ ಗಂಡ್ಸು’ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಹವಾ ಸೃಷ್ಟಿಸಲು ಯತ್ನಿಸುತ್ತಿದ್ದರು. ಸದ್ಯ ಇವರ ವಿರುದ್ಧ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಮುಂದಿನ ಕ್ರಮವೇನು?

ದಾಳಿ ವೇಳೆಯಲ್ಲಿ ಸಿಕ್ಕ ದಾಖಲೆಗಳು, ಪರಿಶೀಲನೆ ವೇಳೆಯಲ್ಲಿ ಕಂಡು ಬಂದ ವಿಷಯಗಳ ಬಗ್ಗೆ ಸದ್ಯ ಎಸಿ ಶ್ರವಣಕುಮಾರ್ ಅವರು ದಾಳಿಯ ಸಂಪೂರ್ಣ ವರದಿಯನ್ನು ಡಿಸಿ ಮೊಹಮ್ಮದ್ ರೋಷನ್‌ಗೆ ಸಲ್ಲಿಸಲಿದ್ದು, ಜಿಲ್ಲಾಡಳಿತ ಶಿವಾನಂದನ ಬಂಧನಕ್ಕೆ ಆದೇಶಿಸುತ್ತದೆಯೇ ಅಥವಾ ತನಿಖೆಯನ್ನು ಮುಂದುವರಿಸುತ್ತದೆಯೇ ಎಂದು ಕಾದು ನೋಡಬೇಕಿದೆ. ಈ ಹಗರಣದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾವಿರಾರು ಗ್ರಾಹಕರು ಹಣ ಹೂಡಿರುವುದರಿಂದ, ಪ್ರಕರಣವನ್ನು ಉನ್ನತ ಮಟ್ಟದ ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಸಾಮಾಜಿಕ ಹೋರಾಟಗಾರ ರಾಜು ಟೋಪಣ್ಣವರ್ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಲಾರಿ ಡಿಕ್ಕಿ; ಇಬ್ಬರು ಪವಾಡಸದೃಶ ಪಾರು

ಕೊಪ್ಪಳ, ಮೇ 15: ಟ್ಯಾಂಕರ್​​ ಗುದ್ದಿದ ಪರಿಣಾಮ ಸೇತುವೆಯಿಂದ ಟ್ರ್ಯಾಕ್ಟರ್​​ ಬಿದ್ದು ಮಗು ಸೇರಿ 6 ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಅದೇ ತುಂಗಭದ್ರಾ ಸೇತುವೆ ಮೇಲೆ ಮತ್ತೊಂದು ಅಪಘಾತ ನಡೆದಿದೆ. ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್​​ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ಸಂಬಂಧ ಲಾರಿ ಚಾಲಕನನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇವಲ ಹಾಲು, ತರಕಾರಿಗಾಗಿ ಪ್ರಾಣದ ಹಂಗು ತೊರೆದು ಕಳ್ಳರೊಂದಿಗೆ ಹೋರಾಡಿದ ಮಹಿಳೆ – Kannada News | Viral: Woman’s Brave Fight for Milk Exposes India’s Deep Economic Hardship

ಸಮಾಜದಲ್ಲಿ ಆರ್ಥಿಕ ಸಂಕಷ್ಟ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಈ ಘಟನೆ ಸಾಕ್ಷಿಯಾಗಿದೆ. ಕೇವಲ ಒಂದು ಲೀಟರ್ ಹಾಲು, ಕೆಲವು ತರಕಾರಿಗಳು ಮತ್ತು ಜೇಬಿನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಬೈಕ್‌ನಲ್ಲಿ ಬಂದ ಸರಗಳ್ಳರೊಂದಿಗೆ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮಹಿಳೆಯು ಮಾರುಕಟ್ಟೆಯಿಂದ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಆ ಬ್ಯಾಗ್‌ನಲ್ಲಿ ಕೇವಲ ದಿನನಿತ್ಯದ ಆಹಾರ ಪದಾರ್ಥಗಳಿದ್ದರೂ, ಆಕೆಗೆ ಅದು ಅತ್ಯಂತ ಮೌಲ್ಯಯುತವಾಗಿತ್ತು. ಆರ್ಥಿಕ ಸಂಕಷ್ಟದ ಈ ದಿನಗಳಲ್ಲಿ ಒಂದು ಹೊತ್ತಿನ ಹಾಲಿನ ಪ್ಯಾಕೆಟ್ ಕೂಡ ಎಷ್ಟು ಮುಖ್ಯ ಎಂಬುದನ್ನು ತೋರಿಸುವಂತೆ, ಆಕೆ ಕಳ್ಳರಿಗೆ ಬ್ಯಾಗ್ ಬಿಟ್ಟುಕೊಡದೆ ಹಠಾತ್ತನೆ ಎದುರಿಸಿದ್ದಾರೆ. ಈ ಹೋರಾಟದಲ್ಲಿ ಅವರು ರಸ್ತೆಯ ಮೇಲೆ ಬಿದ್ದರೂ ಬ್ಯಾಗ್ ಮಾತ್ರ ಬಿಡಲಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಧೈರ್ಯವನ್ನು ಮೆಚ್ಚುವುದರ ಜೊತೆಗೆ, ದೇಶದಲ್ಲಿನ ಆರ್ಥಿಕ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಒಂದು ಲೀಟರ್ ಹಾಲಿಗಾಗಿ ಪ್ರಾಣದ ಹಂಗು ತೊರೆಯಬೇಕಾದ ಪರಿಸ್ಥಿತಿ ಬಂದಿದೆಯಲ್ಲ” ಎಂಬ ಕಾಮೆಂಟ್‌ಗಳು ಜನರ ನೋವನ್ನು ಪ್ರತಿಬಿಂಬಿಸುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೋಜಶಾಲಾ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಲಿದೆ; ಓವೈಸಿ ವಿಶ್ವಾಸ – Kannada News | Owaisi calls Bhojshala Temple verdict similar to Babri Mosque judgment

ನವದೆಹಲಿ, ಮೇ 15: ಮಧ್ಯಪ್ರದೇಶ ಹೈಕೋರ್ಟ್ ಭೋಜಶಾಲಾ ವಿವಾದಿತ ಪ್ರದೇಶವನ್ನು ಸರಸ್ವತಿ ದೇವಿಯ ದೇವಾಲಯವೆಂದು ಘೋಷಿಸಿದ್ದಕ್ಕೆ AIMIM ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಬಾಬ್ರಿ ಮಸೀದಿ ತೀರ್ಪಿನಂತೆಯೇ ಇದೆ ಎಂದು ಹೇಳಿರುವ ಅವರು ಸುಪ್ರೀಂ ಕೋರ್ಟ್ ಈ ತೀರ್ಪನ್ನು ರದ್ದುಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ಭೋಜಶಾಲಾ ತೀರ್ಪು ಮತ್ತು ರಾಮ ಜನ್ಮಭೂಮಿ ಮಂದಿರ-ಬಾಬ್ರಿ ಮಸೀದಿ ಪ್ರಕರಣದ ತೀರ್ಪಿನ ನಡುವೆ ಸ್ಪಷ್ಟವಾದ ಹೋಲಿಕೆಗಳು ಇವೆ ಎಂದು ಹೇಳಿದ್ದಾರೆ.

“ಸುಪ್ರೀಂ ಕೋರ್ಟ್ ಈ ಆದೇಶವನ್ನು ರದ್ದುಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಈ ತೀರ್ಪಿಗೆ ಬಾಬ್ರಿ ಮಸೀದಿ ತೀರ್ಪಿನೊಂದಿಗೆ ಸ್ಪಷ್ಟ ಹೋಲಿಕೆಗಳಿವೆ” ಎಂದು ಓವೈಸಿ ಎಕ್ಸ್​​ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪ್ರಕರಣವನ್ನು ಪ್ರಶ್ನಿಸಿರುವ ಮುಸ್ಲಿಂ ಕಡೆಯವರು ಸಹ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದ ಬೆಂಬಲವಿಲ್ಲದಿದ್ದರೆ ಪಾಕಿಸ್ತಾನ ಏನೂ ಇಲ್ಲ; ಓವೈಸಿ ತೀವ್ರ ವಾಗ್ದಾಳಿ

“ನಮ್ಮ ವಿರುದ್ಧ ತೆಗೆದುಕೊಂಡ ನಿರ್ಧಾರವನ್ನು ನಾವು ಪರಿಶೀಲಿಸುತ್ತೇವೆ. ನಾವು ಸುಪ್ರೀಂ ಕೋರ್ಟ್‌ನಲ್ಲಿ ಈ ತೀರ್ಪನ್ನು ಪ್ರಶ್ನಿಸುತ್ತೇವೆ” ಎಂದು ಧಾರ್ ಶಹರ್ ಖಾಜಿ ವಕಾರ್ ಸಾದಿಕ್ ANIಗೆ ತಿಳಿಸಿದ್ದಾರೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ ಸಂಕೀರ್ಣವು ಸರಸ್ವತಿ ದೇವಿಗೆ ಮೀಸಲಾಗಿರುವ ದೇವಾಲಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮುಸ್ಲಿಂ ಸಮುದಾಯವು ಈ ಜಿಲ್ಲೆಯಲ್ಲಿ ಮಸೀದಿ ನಿರ್ಮಿಸಲು ಪ್ರತ್ಯೇಕ ಭೂಮಿಯನ್ನು ಪಡೆಯಲು ರಾಜ್ಯ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈದ್ಯೋ ನಾರಾಯಣೋ ಹರಿಃ: ನವಜಾತ ಶಿಶುವಿಗೆ ಮರುಜೀವ ನೀಡಿದ ವೈದ್ಯೆ – Kannada News | Life Returns in Saharanpur: How a Doctor’s Instinct and Bravery Saved a Dying Baby

ಸಹಾರನ್‌ಪುರ, ಮೇ,15 : ಉತ್ತರ ಪ್ರದೇಶದ ಸಹಾರನ್‌ಪುರದ ನಾನೋಟಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪವಾಡವೊಂದು ನಡೆದಿದೆ. ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಉಸಿರಾಟ ನಿಲ್ಲಿಸಿ ಸಾವಿನ ಅಂಚಿನಲ್ಲಿದ್ದ ನವಜಾತ ಶಿಶುವಿಗೆ ವೈದ್ಯೆಯೊಬ್ಬರು ತಮ್ಮ ಉಸಿರನ್ನೇ ನೀಡಿ ಮರುಜೀವ ಕೊಟ್ಟಿದ್ದಾರೆ. ನಾನೋಟಾ ಕೇಂದ್ರದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹುಟ್ಟಿದ ತಕ್ಷಣ ಮಗು ಉಸಿರಾಡುತ್ತಿರಲಿಲ್ಲ. ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ಯಂತ್ರ (Oxygen Machine) ಕೆಲಸ ಮಾಡದಿದ್ದಾಗ ಅಲ್ಲಿನ ವಾತಾವರಣದಲ್ಲಿ ಗಾಬರಿ ಮತ್ತು ನಿಶ್ಯಬ್ದ ಆವರಿಸಿತು. ಇಂತಹ ಕ್ಲಿಷ್ಟ ಸಮಯದಲ್ಲಿ ಡಾ. ರುಮಾ ಅವರು ಧೃತಿಗೆಡದೆ ತಕ್ಷಣ ಕಾರ್ಯಪ್ರವೃತ್ತರಾದರು. ಯಂತ್ರ ವೈಫಲ್ಯವಾದಾಗ ಡಾ. ರುಮಾ ಅವರು ಪ್ರೊಟೊಕಾಲ್‌ಗಳಿಗಿಂತ ಮಾನವೀಯತೆಗೆ ಒತ್ತು ನೀಡಿದರು. ಮಗುವಿನ ಎದೆಯ ಮೇಲೆ ಒತ್ತಡ ಹಾಕುತ್ತಾ (Chest Compressions), ಸ್ವತಃ ತಮ್ಮ ಬಾಯಿಯಿಂದ ಮಗುವಿಗೆ ಕೃತಕ ಉಸಿರಾಟ ನೀಡಲು ಆರಂಭಿಸಿದರು. ಸತತ ಪ್ರಯತ್ನದ ನಂತರ ಮಗು ಅಳಲು ಆರಂಭಿಸಿತು. ಆ ಒಂದು ಅಳುವಿನ ಶಬ್ದ ಇಡೀ ಕೊಠಡಿಯಲ್ಲಿದ್ದವರ ಕಣ್ಣಲ್ಲಿ ಆನಂದಬಾಷ್ಪ ತರಿಸಿತು. ವೈದ್ಯಕೀಯ ತರಬೇತಿಗಿಂತ ಮಿಗಿಲಾಗಿ ವೈದ್ಯೆಯಲ್ಲಿದ್ದ ತಾಯ್ತನದ ತುಡಿತ ಒಂದು ಜೀವವನ್ನು ಉಳಿಸಿದೆ. ಇಂದು ಡಾ. ರುಮಾ ಅವರ ಈ ಧೀರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಆರ್​ಸಿಬಿಗೆ ಎಂಟ್ರಿಕೊಟ್ಟ ಇಂಗ್ಲೆಂಡ್ ವೇಗಿ; ಸಿಎಸ್​ಕೆ ತಂಡಕ್ಕೆ ಕುಲ್ದೀಪ್‌ ಯಾದವ್ ಸೇರ್ಪಡೆ – Kannada News | IPL 2026 Player Changes: Kuldeep Yadav Joins CSK, Richard Gleeson Boosts RCB

2026 ರ ಐಪಿಎಲ್‌ನ (IPL 2026) ಲೀಗ್ ಹಂತಕ್ಕೆ ಇನ್ನೇನು ತೆರೆ ಬೀಳಲಿದೆ. ಅದಾದ ಬಳಿಕ ಪ್ಲೇಆಫ್ ಸುತ್ತು ಶುರುವಾಗಲಿದೆ. ಆದಾಗ್ಯೂ ಈವರೆಗೆ ಯಾವ ತಂಡಕ್ಕೂ ಪ್ಲೇಆಫ್ ಟಿಕೆಟ್ ಸಿಕ್ಕಿಲ್ಲ. ಕೆಲವು ತಂಡಗಳ ಸ್ಥಾನ ಖಚಿತವಾದರೂ ಇನ್ನು ಕೆಲವು ತಂಡಗಳು ತೀವ್ರಪೈಪೋಟಿ ನಡೆಸುತ್ತಿವೆ. ಅಂತಹ ತಂಡಗಳಲ್ಲಿ ಆರ್​ಸಿಬಿಗೆ (RCB) ಪ್ಲೇಆಫ್ ಸ್ಥಾನ ಭಾಗಶಃ ಖಚಿತವಾಗಿದ್ದರೆ, ಇತ್ತ ಸಿಎಸ್​ಕೆಗೂ (CSK) ಪ್ಲೇಆಫ್​ಗೇರುವ ಅವಕಾಶವಿದೆ. ಇದೀಗ ಈ ಎರಡೂ ತಂಡಗಳಿಗೆ ಹೊಸ ಆಟಗಾರರ ಆಗಮನವಾಗಿದೆ.

ವಾಸ್ತವವಾಗಿ ಈ ಸೀಸನ್​ನಲ್ಲಿ ಆಟಗಾರರ ಇಂಜುರಿಯಿಂದ ಅತಿ ಹೆಚ್ಚು ಸಮಸ್ಯೆಗೆ ಗುರಿಯಾದ ತಂಡಗಳಲ್ಲಿ ಸಿಎಸ್​ಕೆ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸಿಎಸ್​ಕೆ ತಂಡದ ಐದರಿಂದ ಆರು ಆಟಗಾರರು ಗಾಯದ ಕಾರಣದಿಂದಾಗಿ ಇಡೀ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಫ್ರಾಂಚೈಸಿ ಅವರ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಅದರಂತೆ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಬದಲಿಗೆ ಸಿಎಸ್‌ಕೆ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಏತನ್ಮಧ್ಯೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಇಂಗ್ಲೆಂಡ್​ನ ರಿಚರ್ಡ್ ಗ್ಲೀಸನ್ ಅವರನ್ನು ನುವಾನ್ ತುಷಾರ ಬದಲಿಗೆ ತಂಡಕ್ಕೆ ಸೇರಿಸಿಕೊಂಡಿದೆ.

ಖಲೀಲ್ ಬದಲಿಗೆ ಕುಲ್ದೀಪ್‌

ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಎರಡೂ ತಂಡಗಳಲ್ಲಿ ಮಾಡಲಾದ ಬದಲಾವಣೆಗಳನ್ನು ವಿವರಿಸಲಾಗಿದೆ. ಪ್ರಕಟಣೆಯ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಖಲೀಲ್ ಬದಲಿಗೆ ದೆಹಲಿ ವೇಗದ ಬೌಲರ್ ಕುಲದೀಪ್ ಯಾದವ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ತಂಡಕ್ಕೆ ಕರತಂದಿದೆ. ಸಿಎಸ್​ಕೆ ಪರ ಆರಂಭಿಕ ಐದು ಪಂದ್ಯಗಳನ್ನಾಡಿದ ಬಳಿಕ ಖಲೀಲ್, ಗಾಯಗೊಂಡು ಇಡೀ ಐಪಿಎಲ್​ನಿಂದ ಹೊರಗುಳಿದಿದ್ದರು. ಇದೀಗ ಅವರ ಬದಲಿಗೆ ಬಂದ ಕುಲ್ದೀಪ್ ಈ ಹಿಂದೆ 2021 ಮತ್ತು 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದರು, ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.

ಆರ್‌ಸಿಬಿ ಸೇರಿದ 38 ವರ್ಷದ ಬೌಲರ್

ಮತ್ತೊಂದೆಡೆ, ಹಾಲಿ ಚಾಂಪಿಯನ್ ಆರ್​ಸಿಬಿ ಕೂಡ, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಈ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲಿಯವರೆಗೆ 12 ಲೀಗ್ ಪಂದ್ಯಗಳನ್ನು ಆಡಿರುವ ಆರ್‌ಸಿಬಿ, 38 ವರ್ಷದ ಇಂಗ್ಲಿಷ್ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಗ್ಲೀಸನ್, ಈ ಹಿಂದೆ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದು, ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸಭ್ಯ ಮೆಸೇಜ್ ಮಾಡಿದ ಪೊಲೀಸಪ್ಪನ ವಿರುದ್ಧ ಪೊಲೀಸರಿಗೆ ಚೈತ್ರಾ ದೂರು – Kannada News | Chaithra J Achar calls out a policeman who trash messaged her

ನಟಿಯರು ಸಾಮಾಜಿಕ ಜಾಲತಾಣದಲ್ಲಿ (Social Media) ತೀವ್ರ ಕಿರುಕುಳ ಅನುಭಿವಿಸುತ್ತಾರೆ. ಕೀಳು ಮಟ್ಟದ ಕಮೆಂಟ್​​ಗಳು, ಅಸಭ್ಯ ಚಿತ್ರಗಳನ್ನು ಕಳಿಸುವುದು, ನಿಂದನೆ, ಕೆಟ್ಟ ಟೀಕೆ, ವೇಶ್ಯೆಯರಿಗೆ ಹೋಲಿಕೆ ಹೀಗೆ ತೀರಾ ಕೀಳು ಮಟ್ಟದ ಟ್ರೋಲಿಂಗ್ ಅನ್ನು ನಟಿಯರು ಎದುರಿಸುತ್ತಿದ್ದಾರೆ. ಕೆಲವು ನಟಿಯರು ಮಾತ್ರ ಈ ಆನ್​ಲೈನ್ ದೌರ್ಜನ್ಯದ ವಿರುದ್ಧ ಗಟ್ಟಿ ದನಿ ಎತ್ತಿ ಮಾತನಾಡುತ್ತಾರೆ. ಅವರಲ್ಲಿ ಕನ್ನಡದ ಪ್ರತಿಭಾವಂತ ನಟಿ ಚೈತ್ರಾ ಆಚಾರ್ ಸಹ ಒಬ್ಬರು. ಚೈತ್ರಾ ಅದೆಷ್ಟು ಗಟ್ಟಿಗಿತ್ತಿಯೆಂದರೆ ತಮಗೆ ಕೆಟ್ಟ ಸಂದೇಶ ಕಳಿಸಿದ ಪೊಲೀಸ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆಯರ ರಕ್ಷಣೆಯ ಪ್ರತಿಜ್ಞೆ ಮಾಡಿರುವ ಪೊಲೀಸಪ್ಪನೇ ಒಬ್ಬ ನಟಿ ಚೈತ್ರಾ ಆಚಾರ್ ಅವರಿಗೆ ಅತ್ಯಂತ ಕೀಳು ಮಟ್ಟದ ಸಂದೇಶವನ್ನು ಕಳಿಸಿದ್ದ. ಸಾಮಾನ್ಯ ಮಹಿಳೆಯರು, ನಟಿಯರಾದರೆ ಪೊಲೀಸ್ ಸಮವಸ್ತ್ರ ನೋಡಿ ಅಂಜುತ್ತಿದ್ದರೇನೋ ಆದರೆ ಚೈತ್ರಾ ಆಚಾರ್, ಆ ವ್ಯಕ್ತಿ ಕಳಿಸಿದ್ದ ಸಂದೇಶದ ಸ್ಕ್ರೀನ್ ಶಾಟ್ ತೆಗೆದು, ಆ ವ್ಯಕ್ತಿಯ ಫೋಟೊದ ಸಮೇತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಈ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದಿದ್ದಾರೆ.

ಬಳಿಕ, ಚೈತ್ರಾ ಅವರಿಗೆ ಕೀಳು ಸಂದೇಶ ಕಳಿಸಿದ್ದ ಹೊಸಮನಿ ಎಂಬ ಪೊಲೀಸ್ ಇಲಾಖೆಗೆ ಸೇರಿದ ವ್ಯಕ್ತಿ, ‘ತಪ್ಪಾಯಿತು, ನಿಮ್ಮ ಮೇಲಿನ ಕಾಳಜಿಯಿಂದಲೇ ಆ ಸಂದೇಶ ಕಳಿಸಿದೆ, ನೀವು ಹಂಚಿಕೊಂಡಿರುವ ಪೋಸ್ಟ್ ಅನ್ನು ಡಿಲೀಟ್ ಮಾಡಿ, ಅದು ನನ್ನ ಕೆಲಸಕ್ಕೆ ತೊಂದರೆ ಕೊಡುತ್ತದೆ’ ಎಂದು ಗೋಗರೆದಿದ್ದಾನೆ. ಆದರೆ ಚೈತ್ರಾ ಆಚಾರ್, ಅದಕ್ಕೆಲ್ಲ ಕರಗದೆ, ಆ ಸಂದೇಶದ ಸ್ಕ್ರೀನ್ ಶಾಟ್ ಅನ್ನೂ ಹಂಚಿಕೊಂಡಿದ್ದು, ‘ನನ್ನ ವೃತ್ತಿಯ ಬಗ್ಗೆ ಮಾತನಾಡುವಾಗ ಇದು ಅರಿವಾಗಲಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಂದೇಶವನ್ನೂ ಸಹ ಅವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:ವೀಕೆಂಡ್​ನಲ್ಲೂ ವರ್ಕೌಟ್ ತಪ್ಪಿಸಿಲ್ಲ ಚೈತ್ರಾ ಆಚಾರ್

ಚೈತ್ರಾ ಆಚಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ತಮ್ಮ ಫೋಟೊಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಚಿತ್ರಗಳಿಗೆ ನಾನಾ ಜನ ನಾನಾ ರೀತಿಯ ಕಮೆಂಟುಗಳನ್ನು ಮಾಡುತ್ತಿರುತ್ತಾರೆ. ತೀರ ಅಸಭ್ಯ, ಕೀಳು ಅಭಿರುಚಿಯ ಕಮೆಂಟುಗಳ ಬಂದಾಗ ನಟಿ ಚೈತ್ರಾ ಆಚಾರ್, ಹಿಂದೆ-ಮುಂದೆ ನೋಡದೆ ಅಂಥಹವರ ಚಳಿ ಬಿಡಿಸುತ್ತಾರೆ.

ಚೈತ್ರಾ ಆಚಾರ್ ಇದೀಗ ಕನ್ನಡ ಮಾತ್ರವಲ್ಲದೆ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾನಲ್ಲೂ ಚೈತ್ರಾ ಆಚಾರ್ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಕೆಲ ಸಿನಿಮಾಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಸ್ಟ್ರಾಬೆರ್ರಿ’, ‘ಲೈಲಾಸ್ ಸ್ವೀಟ್ ಡ್ರೀಮ್ಸ್’, ತಮಿಳಿನ ‘ಮೀಸೆಯಾ ಮುರುಕ್ಕು 2’ ಸಿನಿಮಾಗಳಲ್ಲಿ ಚೈತ್ರಾ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮುಂದಿನ 3 ದಿನ ಮಳೆ ಅಬ್ಬರ, ಮುಕ್ಕಾಲು ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​​ – Kannada News | India meteorological department warns of 3 day rain spell yellow alert across three fourths of karnataka

ಬೆಂಗಳೂರು, ಮೇ 15: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಮಿಂಚು, ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. IMD ಪ್ರಕಾರ, ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ 17ರವರೆಗೆ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮಿಂಚು ಹಾಗೂ ಬಿರುಗಾಳಿಯಿಂದ ಕೆಲ ಪ್ರದೇಶಗಳಲ್ಲಿ ಅಪಾಯದ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಮಳೆ
  • ಗುಡುಗು-ಮಿಂಚು ಮತ್ತು ಗಾಳಿ ಸಹಿತ ವರುಣನ ಅಬ್ಬರದ ನಿರೀಕ್ಷೆ
  • ಮುಕ್ಕಾಲು ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​​ ಘೋಷಿಸಿದ ಇಲಾಖೆ

ವಾಯುಭಾರ ಕುಸಿತದ ಎಫೆಕ್ಟ್​​

ಮೇ 18ರಂದು ಗಾಳಿಯ ವೇಗ ಸ್ವಲ್ಪ ಕಡಿಮೆಯಾಗಬಹುದಾದರೂ, ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಗಂಟೆಗೆ 30-40 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಮಳೆಯಾಗುವ ಸಾಧ್ಯತೆ ಮುಂದುವರಿಯಲಿದೆ. ಉತ್ತರ ಕರ್ನಾಟಕ ಮಾತ್ರವಲ್ಲದೆ, ದಕ್ಷಿಣ ಒಳನಾಡು ಕರ್ನಾಟಕದಲ್ಲೂ ಈ ಅವಧಿಯಲ್ಲಿ ಗಂಟೆಗೆ 40-50 ಕಿಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪ್ರಭಾವದ ಪರಿಣಾಮ ಭಾರಿ ಮಳೆಯನ್ನು ಅಂದಾಜಿಸಲಾಗಿದೆ. ರಾಜ್ಯದ ಶೇ.50ಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚಿನ ಸಮೇತ ವರುಣ ಅಬ್ಬರಿಸಲಿದ್ದಾನೆ. ಹೀಗಾಗಿ ಮುಕ್ಕಾಲು ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ ಎಂದು ಹವಾಮಾನ ತಜ್ಞ ಸಿ.ಎಸ್​​. ಪಾಟೀಲ್​​ ತಿಳಿಸಿದ್ದಾರೆ.

ಇದನ್ನೂ ಓದಿ: ವಾಯುಭಾರ ಕುಸಿತ; ಕರ್ನಾಟಕದಲ್ಲಿ 3 ದಿನ ಭಾರೀ ಮಳೆ, ಎಲ್ಲೆಲ್ಲಿ?

ಎಲ್ಲೆಲ್ಲಿ ಯೆಲ್ಲೋ ಅಲರ್ಟ್​​?

ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಾಸಕರಾದ ಬಳಿಕ ಮೊದಲ ಸಭೆಗೆ ಲ್ಯಾಪ್​​ಟಾಪ್ ಹಿಡಿದು ಬಂದ ಸಮರ್ಥ್, ಕುಡಿಯುವ ನೀರಿಗೆ ಹೊತ್ತು – Kannada News | Samarth Shamanur First Meeting With Officer after MLA at Davanagere

ದಾವಣಗೆರೆ, (ಮೇ 15): ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಮರ್ಥ್ ಶಾಮನೂರು (Samarth Shamanur) ಮೊದಲ ಬಾರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಿನ್ನೆ (ಮೇ 14) ವಿಧಾನಸೌಧಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಮರ್ಥ್ ಮರುದಿನವೇ ಅಂದರೆ ಇಂದು (ಮೇ 15) ಅಧಿಕಾರಿಗಳ ಸಭೆ ನಡೆಸಿ ಗಮನಸೆಳೆದಿದ್ದಾರೆ. ದಾವಣಗೆರೆ (Davanagere) ನಗರದ ಅರುಣಾ ಸರ್ಕಲ್ ಬಳಿ ಇರುವ ಪಶುಸಂಗೋಪನೆ ಇಲಾಖೆ ಸಭಾಂಗಣದಲ್ಲಿ ಸಭೆ ನಡೆದಿದ್ದು, ಅಧಿಕಾರಿಗಳು ನೀಡಿದ ಮಾಹಿತಿಯನ್ನು ಲ್ಯಾಪ್​ಟಾಪ್​​ನಲ್ಲಿ ದಾಖಲು ಮಾಡಿಕೊಂಡರು. ಇನ್ನು ಸಭೆಯಲ್ಲೇ ಪ್ರಮುಖವಾಗಿ ಕುಡಿಯುವ ನೀರಿಗೆ ಹೊತ್ತು ಕೊಟ್ಟಿರುವುದು ವಿಶೇಷವಾಗಿದೆ.

ಹೌದು..ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನುವ ಬಗ್ಗೆ ಚರ್ಚಿಸಿದ್ದು,‌   ತಕ್ಷಣಕ್ಕೆ ನಾಲ್ಕು ಕಡೆ ಬೋರ್ ವೆಲ್ ಕೊರೆಯಿಸಲು ನಿರ್ಧರಿಸಲಾಗಿದೆ. ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಸಮರ್ಥ್, ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ನೀಡುವ ಮಾಹಿತಿ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ತಂತ್ರ ಬಳಸಿದರೆ, 12 ಲಕ್ಷ ಮಾತ್ರವಲ್ಲ, 15 ಲಕ್ಷ ರೂವರೆಗೆ ಆದಾಯಕ್ಕೆ ಶೂನ್ಯ ತೆರಿಗೆ – Kannada News | Tips and tricks to get zero tax liablity for upto Rs 15 lakh annual income

ಹೊಸ ಟ್ಯಾಕ್ಸ್ ವ್ಯವಸ್ಥೆಯಲ್ಲಿ (New Income Tax Regime) 12,00,000 ರೂವರೆಗಿನ ವಾರ್ಷಿಕ ಆದಾಯ ಇರುವವರಿಗೆ ಟ್ಯಾಕ್ಸ್ ಮನ್ನಾ ಮಾಡಲಾಗಿದೆ. ಸಂಬಳದಾರರಿಗೆ 75,000 ರೂ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿದರೆ 12.75 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಕೆಲವು ಭತ್ಯೆಗಳು (Allowances) ಮತ್ತು ಸೌಲಭ್ಯಗಳನ್ನು (Perks) ಸರಿಯಾಗಿ ಬಳಸಿಕೊಳ್ಳುವ ಮೂಲಕ 15 ಲಕ್ಷ ರೂಪಾಯಿ ವಾರ್ಷಿಕ ಆದಾಯ (CTC) ಹೊಂದಿರುವವರು ಕೂಡ ಶೂನ್ಯ ತೆರಿಗೆ ಅವಕಾಶ ಹೊಂದಬಹುದು. ಇಲ್ಲಿವೆ ಆ ತಂತ್ರಗಳು:

ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಲಭ್ಯವಿರುವ ಕೆಲವು ಪ್ರಮುಖ ಮಾರ್ಗಗಳು ಇಲ್ಲಿವೆ:

  • ಊಟದ ಕೂಪನ್‌ಗಳು (Meal Coupons): ಸೋಡೆಕ್ಸೊ (Sodexo) ನಂತಹ ಮೀಲ್ ಕೂಪನ್‌ಗಳ ಮಿತಿಯನ್ನು ಪ್ರತಿ ಊಟಕ್ಕೆ 50 ರೂ. ನಿಂದ 200 ರೂ. ಗೆ ಹೆಚ್ಚಿಸಲಾಗಿದೆ. ಇದರಿಂದ ವಾರ್ಷಿಕವಾಗಿ ಸುಮಾರು 1 ಲಕ್ಷ ರೂ. ವರೆಗೆ ತೆರಿಗೆ ಉಳಿಸಬಹುದು.
  • ಗ್ಯಾಜೆಟ್ ಭತ್ಯೆ (Gadget Allowance): ಕಚೇರಿ ಕೆಲಸಕ್ಕಾಗಿ ಕಂಪನಿಯು ನೀಡುವ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನ್‌ಗಳ ವೆಚ್ಚದ ಮರುಪಾವತಿಯ ಮೇಲೆ ತೆರಿಗೆ ಇರುವುದಿಲ್ಲ.
  • ದೂರವಾಣಿ ಮತ್ತು ಇಂಟರ್ನೆಟ್ ಮರುಪಾವತಿ: ಅಧಿಕೃತ ಕೆಲಸಕ್ಕಾಗಿ ಬಳಸುವ ಫೋನ್ ಮತ್ತು ಇಂಟರ್ನೆಟ್ ಬಿಲ್‌ಗಳ ಮರುಪಾವತಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
  • ವಾಹನ ಮತ್ತು ಚಾಲಕನ ಭತ್ಯೆ (Car & Driver Reimbursement): ಅಧಿಕೃತ ಕೆಲಸಗಳಿಗಾಗಿ ಕಂಪನಿಯ ಕಾರು ಅಥವಾ ಇಂಧನ ವೆಚ್ಚ ಮತ್ತು ಚಾಲಕನ ಸಂಬಳದ ಮರುಪಾವತಿಯನ್ನು ಪಡೆದರೆ ಅದು ತೆರಿಗೆಗೆ ಒಳಪಡುವುದಿಲ್ಲ.
  • ಆರೋಗ್ಯ ಮತ್ತು ಜಿಮ್ ಸೌಲಭ್ಯ: ಕಂಪನಿಯು ಎಲ್ಲಾ ಉದ್ಯೋಗಿಗಳಿಗೆ ಸಮಾನವಾಗಿ ನೀಡುವ ಜಿಮ್ ಸದಸ್ಯತ್ವ ಅಥವಾ ಆರೋಗ್ಯ ತಪಾಸಣೆಯ ಸೌಲಭ್ಯಗಳು ತೆರಿಗೆ ಮುಕ್ತವಾಗಿರುತ್ತವೆ.
  • ಸ್ಟಾಂಡರ್ಡ್ ಡಿಡಕ್ಷನ್ (Standard Deduction): ಸಂಬಳ ಪಡೆಯುವ ಉದ್ಯೋಗಿಗಳಿಗೆ ಸಿಗುವ 75,000 ರೂ. (ಇತ್ತೀಚಿನ ಬದಲಾವಣೆಯಂತೆ) ಸ್ಟಾಂಡರ್ಡ್ ಡಿಡಕ್ಷನ್ ಇಲ್ಲಿ ಅನ್ವಯಿಸುತ್ತದೆ.

ಇದನ್ನೂ ಓದಿ: 18 ಮಿಲಿಯನ್ ಡಾಲರ್ ದಂಡ ಪಾವತಿಸುವ ಎಸ್​​ಇಸಿ ಪ್ರಸ್ತಾವಕ್ಕೆ ಅದಾನಿ ಒಪ್ಪಿಗೆ

ಒಬ್ಬ ವ್ಯಕ್ತಿಯ 15 ಲಕ್ಷ ರೂ. ಆದಾಯದಲ್ಲಿ ಈ ಮೇಲಿನ ಭತ್ಯೆಗಳನ್ನು (ಸುಮಾರು 7.5 ಲಕ್ಷ ರೂವರೆಗೆ) ಕಡಿತಗೊಳಿಸಿದಾಗ, ಅವರ ತೆರಿಗೆಗೆ ಒಳಪಡುವ ಆದಾಯವು 7.5 ಲಕ್ಷ ರೂ.ಗಿಂತ ಕೆಳಗೆ ಬರುತ್ತದೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ವರೆಗೆ (ರಿಬೇಟ್ ಸೇರಿ ಪ್ರಾಯೋಗಿಕವಾಗಿ 12.75 ಲಕ್ಷ ರೂ.ವರೆಗೆ) ಆದಾಯವಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. 60,000 ರೂ ಟ್ಯಾಕ್ಸ್ ರಿಬೇಟ್ ಇರುವುದರಿಂದ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇರುವುದಿಲ್ಲ.

ಮೇಲಿನ ಅಂಶಗಳಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಈ ಸೌಲಭ್ಯಗಳನ್ನು ಪಡೆಯಲು ನಿಮ್ಮ ಕಂಪನಿಯ ಸಂಬಳದ ರಚನೆ (Salary Structure) ಅದಕ್ಕೆ ಪೂರಕವಾಗಿರಬೇಕು ಮತ್ತು ನೀವು ಸರಿಯಾದ ಬಿಲ್‌ಗಳನ್ನು ಸಲ್ಲಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link