All posts by nagaraj11081993

ಭಾರತದಲ್ಲಿ ‘ಧುರಂಧರ್ 2’ ಯಾವಾಗ ನೋಡಬಹುದು? ಇಲ್ಲಿದೆ ಮಾಹಿತಿ – Kannada News | Dhurandhar 2 movie to be released on Jio Hotstar on June 4

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. ‘ಧುರಂಧರ್ 2’ ಸಿನಿಮಾದ ಅಬ್ಬರಕ್ಕೆ ಹಲವು ಹಳೆಯ ದಾಖಲೆಗಳೆಲ್ಲ ದೂಳಿಪಟವಾಗಿವೆ. ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗುತ್ತಾ ಬಂದಿದ್ದು, ಇದೀಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಆದರೆ ಭಾರತೀಯರಿಗಲ್ಲ ಬದಲಿಗೆ ವಿದೇಶಿಗರಿಗೆ ಮಾತ್ರ. ‘ಧುರಂಧರ್ 2’ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ, ಆದರೆ ಭಾರತದಲ್ಲಿ ಅಲ್ಲ. ಇದೀಗ ಸಿನಿಮಾವನ್ನು ಭಾರತದಲ್ಲಿ ಯಾವಾಗ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಕಳೆದೊಂದು ತಿಂಗಳಿನಿಂದಲೂ ‘ಧುರಂಧರ್ 2’ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಸಿನಿಮಾ ಯಾವ ಒಟಿಟಿಯಲ್ಲಿ ಬರುತ್ತದೆ ಎಂಬ ಬಗ್ಗೆ ಖಾತ್ರಿ ಇರಲಿಲ್ಲ. ಏಕೆಂದರೆ ‘ಧುರಂಧರ್’ ಮೊದಲ ಭಾಗ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿತ್ತು. ಆದರೆ ಎರಡನೇ ಭಾಗಕ್ಕೆ ಹಲವು ಒಟಿಟಿಗಳಿಂದ ಭಾರಿ ಬೇಡಿಕೆ ಬಂದಿತ್ತು. ಇದೀಗ ಚಿತ್ರತಂಡವು ಭಾರತದ ಹೊರಗೆ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇದೇ ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

‘ಧುರಂಧರ್ 2’ ನೆಟ್​​ಫ್ಲಿಕ್ಸ್​ನಲ್ಲಿ ಈಗಾಗಲೇ ಬಿಡುಗಡೆ ಆಗಿದೆ. ಆದರೆ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗುವ ದಿನಾಂಕ ಖಾತ್ರಿ ಆಗಿರಲಿಲ್ಲ. ಇದೀಗ ಜಿಯೋ ಹಾಟ್​​ಸ್ಟಾರ್ ‘ಧುರಂಧರ್ 2’ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ‘ಧುರಂಧರ್ 2’ ಸಿನಿಮಾ ಜೂನ್ 04 ರಂದು ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದೆ. ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರಸ್ತುತ ಐಪಿಎಲ್ ನೇರ ಪ್ರಸಾರ ನಡೆಯುತ್ತಿದ್ದು, ಐಪಿಎಲ್ ಮುಗಿದ ಬಳಿಕ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಒಟಿಟಿ ವೇದಿಕೆಯದ್ದು.

ಇದನ್ನೂ ಓದಿ:‘ಧುರಂಧರ್ 2’ ಒಟಿಟಿ ಬಿಡುಗಡೆ ದಿನಾಂಕ ನಿಗದಿ, ಇರಲಿದೆ ಟ್ವಿಸ್ಟ್

ಗಮನಿಸಬೇಕಾದ ಅಂಶವೆಂದರೆ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಯ್ತು. ಅದೇ ದಿನ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಬೇಕಿತ್ತು ಆದರೆ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಲಾಯ್ತು. ಬಳಿಕ ಜೂನ್ 4 ರ ದಿನಾಂಕ ಪ್ರಕಟಿಸಲಾಯ್ತು. ಈಗ ಅದನ್ನೂ ಮುಂದಕ್ಕೆ ಹಾಕಲಾಗಿದೆ. ಇದೀಗ ‘ಧುರಂಧರ್ 2’ ಸಿನಿಮಾ ಜೂನ್ 4 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಭಾರತದ ಗೂಢಚಾರಿಯ ಕತೆ ಒಳಗೊಂಡಿರುವ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 1800 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಆರ್ ಮಾಧವನ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್ ಇನ್ನೂ ಕೆಲವು ಪ್ರಮುಖ ನಟರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇವೇಗೌಡರ ಭೇಟಿ ಬಳಿಕ ಜಿಟಿಡಿ ಸ್ಫೋಟಕ ಹೇಳಿಕೆ: ಎಲ್ಲಾ ಅಂತೆ-ಕಂತೆಗಳಿಗೆ ತೆರೆ! – Kannada News | Will Contest From JDS In 2025 Assembly Election clarified By GT Devegowda after Met HD Devegowda at Bengaluru

ಬೆಂಗಳೂರು, (ಮೇ 15): ಜೆಡಿಎಸ್​​ನಿಂದ (JDS) ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರು ದಿಢೀರ್ ಅಂತ ಪಕ್ಷದ ವರಿಷ್ಠ ಎಚ್​​ಡಿ ದೇವೇಗೌಡ (HD Devegowda) ಅವರನ್ನು ಭೇಟಿ ಮಾಡಿದ್ದಾರೆ. ಬಹಳ ದಿನಗಳ ಬಳಿಕ ಇಂದು (ಮೇ 15) ಬೆಂಗಳೂರಿನ (Bengaluru) ಬೆಂಗಳೂರಿನ ಪದ್ಮನಾಭನಗರ ನಿವಾಸಕ್ಕೆ ತೆರಳಿ ದೇವೇಗೌಡರ ಭೇಟಿ ಮಾಡಿದರು. ಕೆಲ ಕಾರಣಾಂತರಗಳಿಂದ ಜಿಟಿ ದೇವೇಗೌಡ ಅವರು ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಆದ್ರೆ ಇದೀಗ ಏಕಾಏಕಿ ದೇವೇಗೌಡ್ರನ್ನ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಇನ್ನು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಮಧ್ಯೆ  2025ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​​ನಿಂದಲೇ ಸ್ಪರ್ಧಿಸುವುದಾಗಿ ಜಿಟಿ ದೇವೇಗೌಡ ಜಿಟಿಸ್ಪಷ್ಟಪಡಿಸಿದ್ದಾರೆ.

  • H.D.ದೇವೇಗೌಡರ ಭೇಟಿಯಾದ ಶಾಸಕ ಜಿ.ಟಿ.ದೇವೇಗೌಡ
  • ಬೆಂಗಳೂರಿನ ಪದ್ಮನಾಭನಗರದ HDD ನಿವಾಸದಲ್ಲಿ ಭೇಟಿ
  • ಬಹಳ ದಿನಗಳ ಬಳಿಕ ದೇವೇಗೌಡರ ಭೇಟಿಯಾದ ಜಿಟಿಡಿ
  • ಬಳಿಕ ಮುಂದಿನ ಚುನಾವಣೆಯಲ್ಲಿ ಜೆಡಿಎಸ್​​ನಿಂದಲೇ ಸರ್ಧೆ ಎಂದ ಜಿಟಿ ದೇವೇಗೌಡ
  • ಈ ಮೂಲಕ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಅಂತೆ ಕಂತೆಗಳಿಗೆ ಜಿಟಿಡಿ ತೆರೆ

ಇನ್ನು ದೇವೇಗೌಡರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿ ದೇವೇಗೌಡ, ಇವತ್ತು ಮಾಜಿ ಪ್ರಧಾನಿ ದೇವೇಗೌಡರನ್ನ ಭೇಟಿ ಮಾಡಿದ್ದೆ. ಇಡೀ ದೇಶದಲ್ಲಿ ಪ್ರಧಾನಿಯಾಗಿ ಪ್ರಖ್ಯಾತಿ ಪಡೆದವರು. ರೈತರ ಪರ ನಿಂತು ದುಡಿದವರು. ಹೀಗಾಗಿ ಮೋದಿಯವರೇ ಅವರನ್ನ ಗುಣಗಾನ ಮಾಡಿದ್ದಾರೆ. ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಅವರ ಬಗ್ಗೆ ಅಪಾರ ಗೌರವ ಇದೆ ಎಂದರು.

ಇದನ್ನೂ ಓದಿ: ಜೆಡಿಎಸ್ 25ರ ಸಂಭ್ರಮದಲೇ ಜಿಟಿ ದೇವೇಗೌಡಗೆ ಶಾಕ್ ಕೊಟ್ಟ ಕುಮಾರಸ್ವಾಮಿ

2025ಲ್ಲಿ ಜೆಡಿಎಸ್​​ನಿಂದಲೇ ಸ್ಪರ್ಧೆ ಎಂದ ಜಿಟಿಡಿ


ಇನ್ನು ಇದೇ ವೇಳೆ ಪಕ್ಷದಿಂದ ಅಂತರ ಕಾಯ್ದುಕೊಂಡ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಟಿಡಿ, ದೇವೇಗೌಡ್ರು ರಾಜಕೀಯ ಮಾತಾಡಿಲ್ಲ. ನಾನು ಮಾತಾಡಿಲ್ಲ. ಚೆನ್ನಾಗಿರು, ಒಳ್ಳೆದಾಗಲಿ ಅಂತ ಅಶೀರ್ವಾದ ಮಾಡಿದ್ದಾರೆ. ನಾನು ಎಷ್ಟು ಪ್ರಮಾಣಿಕವಾಗಿ ದುಡಿದ್ದೇನೆ ಅಂತ ಅವರಿಗೆ ಗೊತ್ತಿದೆ. ಕ್ಷೇತ್ರ ದೊಡ್ಡದಿದೆ. ಹಾಗಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ . ನಾನು ಇನ್ನೂ ಜನತಾದಳದಲ್ಲೆ ಇದ್ದೇನೆ. 2025 ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದರೊಂದಿಗೆ ಜಿಟಿ ದೇವೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದರು.

ಜಿಟಿಡಿ-ಎಚ್​​ಡಿಕೆ ಮಧ್ಯೆ ಮುಸುಕಿನ ಗುದ್ದಾಟ

ಇನ್ನು ಜಿಟಿ ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​​ಡಿ ಕುಮಾರಸ್ವಾಮಿ ಮಧ್ಯೆ ಯಾವುದು ಸರಿ ಇಲ್ಲ. ಇಬ್ಬರು ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇನ್ನು ಜಿಟಿಡಿ ವಿರುದ್ಧ ಕುಮಾರಸ್ವಾಮಿ ಬಹಿರಂಗವಾಗಿಯೇ ಕಿಡಿಕಾರಿದ್ದರು. ಅವರು ನಮ್ಮ ಜತೆ ಇಲ್ಲ, ಅವರ ಬಗ್ಗೆ ಪದೇ ಪದೇ ಮಾತನಾಡಬೇಡಿ ಎಂದಿದ್ದಾರೆ. ನಮ್ಮ ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಅವರಿಗೆ ಇಲ್ಲ. ಅಂತಹವರನ್ನು ನಮ್ಮ ಜತೆ ಇಟ್ಟುಕೊಳ್ಳಬೇಕಾ ಎಂದು ಕುಮಾರಸ್ವಾಮಿ ಖಾರವಾಗಿ ಹೇಳಿದ್ದರು.

ಇನ್ನು ಜೆಡಿಎಸ್​ ಹಿರಿಯ ನಾಯಕ ಜಿಟಿ ದೇವೇಗೌಡ ಅವರು ಸಹ ಆಗಾಗ ಪರೋಕ್ಷವಾಗಿ ಪಕ್ಷದಿಂದ ದೂರ ಸರಿಯುವ ಮಾತಾಡಿದ್ದು ಉಂಟು. ಹಾಗೇ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಕೋರ್‌ ಕಮಿಟಿ ಅಧ್ಯಕ್ಷರ ಬದಲಾವಣೆ. ಕೋರ್‌ ಕಮಿಟಿಗೆ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡ ಅವರನ್ನು ಬದಲಿಸಿ ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿಗೆ ಕಮಿಟಿಯ ಸಾರಥ್ಯವನ್ನು ನೀಡಲಾಗಿದೆ.

ಈ ಹಿಂದೆಯೇ ಸಮಾಧಾನಪಡಿಸಿದ್ದ ಎಚ್​​ಡಿಡಿ

ಕುಮಾರಸ್ವಾಮಿ ನಡೆಗೆ ಬೇಸರಗೊಂಡು ಪಕ್ಷದಿಂದ ದೂರ ಉಳಿದಿದ್ದ ಜಿಟಿ ದೇವೇಗೌಡ ಅವರನ್ನ ಸ್ವತಃ ಎಚ್​​ಡಿ ದೇವೇಗೌಡ್ರೆ ಸಮಾಧಾನಪಡಿಸಿದ್ದರು. ಅವರ ನಿವಾಸಕ್ಕೆ ತೆರಳಿ ಜಿಟಿ ದೇವೇಗೌಡರನ್ನ ಮನವೊಲಿಸಿದ್ದರು. ಬಳಿಕ ಎಲ್ಲವೂ ಕೂಲ್ ಆಗಿತ್ತು. ತದನಂತರ  ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಗೇಟ್ ಪಾಸ್ ನೀಡಿದ್ದು ಜಿಟಿಡಿ ಆಕ್ರೋಶಕ್ಕೆ ಕಾರಣವಾಗಿತ್ತು. ಏನು ಹೇಳದೇ ಕೇಳದೇ ಕಿತ್ತಾಕಿದ್ದಾರೆ ಎಂದು ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದರು. ಇದೀಗ ಏಕಾಏಕಿ ಜಿಟಿಡಿ, ದೇವೇಗೌಡ ಅವರನ್ನ ಭೇಟಿ ಮಾಡಿ ಜೆಡಿಎಸ್​​ನಲ್ಲೇ ಇರುತ್ತೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್​​ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದರೊಂದಿಗೆ ಜಿಟಿಡಿಗಿದ್ದ ಮುನಿಸು ತಣ್ಣಗಾದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:26 pm, Fri, 15 May 26

Source link

ಅಮೆರಿಕವನ್ನು ನಂಬುವುದಿಲ್ಲ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸಲು ಭಾರತಕ್ಕೆ ಸಾಧ್ಯ; ಇರಾನ್​ ವಿದೇಶಾಂಗ ಸಚಿವ ಅರಘ್ಚಿ – Kannada News | We Dont have trust in Americans India can play bigger role for peace in West Asia Iran FM Araghchi says

Iran Ministrer Araghchi With Indian Minister S JaishankarImage Credit source: PTI

ನವದೆಹಲಿ, ಮೇ 15: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಭಾರತಕ್ಕೆ ಸಾಧ್ಯವಿದೆ ಎಂದು ಇರಾನ್​ನ (Iran War) ವಿದೇಶಾಂಗ ಸಚಿವ ಅಭಿಪ್ರಾಯಪಟ್ಟಿದ್ದಾರೆ. ಭಾರತಕ್ಕೆ ಎಲ್ಲೆಡೆ ಬಹಳ ಉತ್ತಮ ಹೆಸರಿದೆ. ಹೀಗಾಗಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಭಾರತ ಬಹಳ ಪ್ರಮುಖ ಪಾತ್ರ ವಹಿಸಲು ಸಾಧ್ಯವಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.

ಬ್ರಿಕ್ಸ್ ಸಭೆಗಾಗಿ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಘ್ಚಿ, ಇರಾನ್ ಮತ್ತು ಪಶ್ಚಿಮ ಏಷ್ಯಾದ ಬಿಕ್ಕಟ್ಟನ್ನು ಒಳಗೊಂಡ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯೊಂದೇ ಏಕೈಕ ಮಾರ್ಗವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕ ನಂಬಿಕೆಗೆ ಯೋಗ್ಯವಲ್ಲ, ಮತ್ತೆ ಯುದ್ಧ ಆರಂಭವಾಗಬಹುದು; ಇರಾನ್ ಸ್ಫೋಟಕ ಹೇಳಿಕೆ

ಇರಾನ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮಿಲಿಟರಿ ಸಂಘರ್ಷದ ಮೂಲಕ ಪರಿಹಾರ ಸಿಗಲು ಸಾಧ್ಯವಿಲ್ಲ ಎಂಬುದು ನಮಗೂ ಗೊತ್ತಾಗಿದೆ. ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಭಾರತದ ಎಲ್ಲ ರೀತಿಯ ಪ್ರಯತ್ನವನ್ನು ನಾವು ಬೆಂಬಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇರಾನಿನ ಸಚಿವರು ಹಾರ್ಮುಜ್ ಜಲಸಂಧಿಯ ಸುತ್ತಲಿನ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. ಹಾರ್ಮುಜ್ ಜಲಸಂಧಿ ತುಂಬಾ ಸಂಕೀರ್ಣವಾದುದು. ಜಾಗತಿಕ ತೈಲ ವ್ಯಾಪಾರಕ್ಕೆ ನಿರ್ಣಾಯಕವಾದ ಈ ಜಲಮಾರ್ಗದ ಮೂಲಕ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಇರಾನ್ ಸಹಾಯ ಮಾಡಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುದ್ಧ ಕೊನೆಗೊಳಿಸಲು ಇರಾನ್ ಮುಂದೆ ಹೊಸ ಕದನವಿರಾಮದ ಪ್ರಸ್ತಾಪವಿಟ್ಟ ಟ್ರಂಪ್

ನಮಗೆ ಅಮೆರಿಕದ ಮೇಲೆ ನಂಬಿಕೆಯಿಲ್ಲ. ವಿಶ್ವಾಸದ ಕೊರತೆಯಿಂದಾಗಿ ಅಮೆರಿಕದೊಂದಿಗೆ ಮಾತುಕತೆಗಳು ಇನ್ನೂ ಅಂತಿಮ ಹಂತಕ್ಕೆ ತಲುಪಿಲ್ಲ. “ಯುದ್ಧ ಆರಂಭವಾಗಿ 40 ದಿನಗಳಾಗಿವೆ. ಈ ಸಮಯದಲ್ಲಿ ಇರಾನ್ ವಿರುದ್ಧದ ಆಕ್ರಮಣದಲ್ಲಿ ಯಾವುದೇ ಗುರಿಯನ್ನು ಸಾಧಿಸಲು ಅಮೆರಿಕ ವಿಫಲವಾಗಿದೆ. ನಮಗೆ ಅಮೆರಿಕನ್ನರ ಮೇಲೆ ನಂಬಿಕೆಯಿಲ್ಲ. ಯಾವುದೇ ರಾಜತಾಂತ್ರಿಕ ಪ್ರಯತ್ನದ ದಾರಿಯಲ್ಲಿ ಇದು ಮುಖ್ಯ ಅಡಚಣೆಯಾಗಿದೆ. ಅಮೆರಿಕನ್ನರನ್ನು ನಂಬದಿರಲು ನಮಗೆ ಹಲವು ಕಾರಣಗಳಿವೆ. ಆದರೆ ಅವರು ನಮ್ಮನ್ನು ನಂಬದಿರಲು ಯಾವುದೇ ಕಾರಣವಿಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಕ್ಕಳ ಬದಲು ನಾಯಿಗಳನ್ನು ಸಾಕಿ’: ಮದುವೆ ಬಗ್ಗೆ ನಟಿ ಶೆಫಾಲಿ ಶಾ ಅಚ್ಚರಿಯ ಹೇಳಿಕೆ – Kannada News | Bollywood Actress Shefali Shah says have Dogs instead Of having kids

ಬಾಲಿವುಡ್‌ನ ಖ್ಯಾತ ನಟಿ ಶೆಫಾಲಿ ಶಾ (Shefali Shah) ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆ, ರಿಲೇಷನ್​ಶಿಪ್ ಮತ್ತು ಮಕ್ಕಳ ಬಗ್ಗೆ ಮುಕ್ತವಾದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇಂದಿನ ಯುವ ಪೀಳಿಗೆಗೆ ಮದುವೆ (Marriage) ಮತ್ತು ಪೋಷಕರಾಗುವ ಬಗ್ಗೆ ಇರುವ ಸಾಮಾಜಿಕ ಒತ್ತಡಗಳ ಕುರಿತು ಮಾತನಾಡಿದ ಅವರು, ‘ಯುವಕರು ತಮ್ಮನ್ನು ತಾವು ಸರಿಯಾಗಿ ಅರ್ಥಮಾಡಿಕೊಳ್ಳುವ ಮೊದಲು ಜೀವನದ ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಸರ ಪಡಬಾರದು’ ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ತಮಾಷೆಯಾಗಿ, ‘ಮಕ್ಕಳನ್ನು ಹೆರುವ ಬದಲು ನಾಯಿಗಳನ್ನು (Dogs) ಸಾಕಿ, ಏಕೆಂದರೆ ಅವು ಯಾವುದೇ ಸ್ವಾರ್ಥವಿಲ್ಲದ ನಿಜವಾದ ಪ್ರೀತಿಯನ್ನು ನೀಡುತ್ತವೆ’ ಎಂದು ಹೇಳಿದ್ದಾರೆ.

ಲಿಲ್ಲಿ ಸಿಂಗ್ ಅವರೊಂದಿಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಶೆಫಾಲಿ ಶಾ, ಯುವತಿಯರಿಗೆ ಬೇಗ ಮದುವೆ ಆಗದಂತೆ ಕಿವಿಮಾತು ಹೇಳಿದ್ದಾರೆ. ‘ನೀವಿನ್ನೂ ಮಕ್ಕಳಾಗಿದ್ದಾಗ ಮದುವೆಯ ನಿರ್ಧಾರ ತೆಗೆದುಕೊಳ್ಳಬೇಡಿ. ಆ ವಯಸ್ಸಿನಲ್ಲಿ ನಿಮಗೆ ನಿಮ್ಮ ಬಗ್ಗೆಯೇ ಸರಿಯಾದ ತಿಳುವಳಿಕೆ ಇರುವುದಿಲ್ಲ. ಹಾಗಾಗಿ ದಯವಿಟ್ಟು ನಿಧಾನಿಸಿ. ಜೀವನದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜನರನ್ನ ಭೇಟಿಯಾಗಿ, ಅವರನ್ನು ಅರ್ಥಮಾಡಿಕೊಳ್ಳಿ. ನೀವು ಮದುವೆ ಎಂಬ ವ್ಯವಸ್ಥೆಯನ್ನು ನಂಬದಿದ್ದರೆ, ದಯವಿಟ್ಟು ಆ ಸಾಹಸಕ್ಕೆ ಕೈಹಾಕಬೇಡಿ. ಏಕೆಂದರೆ ಸಂಸಾರ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ’ ಎಂದು ಅವರು ಹೇಳಿದ್ದಾರೆ.

ಭಾವನಾತ್ಮಕವಾಗಿ ಪ್ರಬುದ್ಧರಾಗುವ ಮುನ್ನ, ಜೀವನ ಹಾಗೂ ಸಂಬಂಧಗಳಿಂದ ತಮಗೇನು ಬೇಕು ಎಂಬುದು ಸಂಪೂರ್ಣವಾಗಿ ಖಚಿತವಾಗುವ ಮುನ್ನ ಯಾರೂ ಮದುವೆಯ ನಿರ್ಧಾರವನ್ನು ಸಾಧಾರಣವಾಗಿ ತೆಗೆದುಕೊಳ್ಳಬಾರದು ಎಂದು ಶೆಫಾಲಿ ಶಾ ಅವರು ಒತ್ತಿ ಹೇಳಿದ್ದಾರೆ. ಅವರು ಕೂಡ ಖಾಸಗಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ.

ಇದೇ ಸಂದರ್ಶನದ ವೇಳೆ ತಮಗೆ 37 ವರ್ಷ ವಯಸ್ಸಾಗಿದ್ದರೂ ಇನ್ನೂ ಮದುವೆಯಾಗಿಲ್ಲ ಎಂದು ಲಿಲ್ಲಿ ಸಿಂಗ್ ಬಹಿರಂಗಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆಫಾಲಿ, ‘ನಾನೊಂದು ಮಾತು ಹೇಳಲೇ? ಇದಕ್ಕಾಗಿ ನನ್ನನ್ನು ಜನ ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಬಹುದು. ಆದರೂ ಪರವಾಗಿಲ್ಲ, ಮಕ್ಕಳನ್ನು ಮಾಡಿಕೊಳ್ಳಬೇಡಿ. ಅದರ ಬದಲು ನಾಯಿಗಳನ್ನು ಸಾಕಿ. ಕೇವಲ ನಾಯಿಗಳನ್ನು ತಂದುಕೊಳ್ಳಿ’ ಎಂದಿದ್ದಾರೆ. ಮನುಷ್ಯನ ಜೀವನದಲ್ಲಿ ನಾಯಿಗಳು ಮಾತ್ರವೇ ಬೇಷರತ್ ಪ್ರೀತಿ ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೊನಾಲಿಸಾ ವಯಸ್ಸು ಕೇವಲ 16: ಗಂಡ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್

ಶೆಫಾಲಿ ಶಾ ಅವರು ಈ ಹಿಂದೆ ಕಿರುತೆರೆ ನಟ ಹರ್ಷ್ ಛಾಯಾ ಅವರನ್ನು ವಿವಾಹವಾಗಿದ್ದರು. ಆದರೆ, ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ ಈ ದಂಪತಿ ದೂರಾಗಿದ್ದರು. ನಂತರ, 2000ನೇ ಇಸವಿಯಲ್ಲಿ ಶೆಫಾಲಿ ಅವರು ಚಲನಚಿತ್ರ ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ ಅವರನ್ನು ಆಪ್ತರ ಸಮ್ಮುಖದಲ್ಲಿ ಮದುವೆಯಾದರು. ಈ ದಂಪತಿಗೆ ಆರ್ಯಮನ್ ಮತ್ತು ಮೌರ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅರೇ ಇದೇನಿದು! ರೈತರ ಭೂಮಿಯನ್ನೇ ಒತ್ತುವರಿ ಮಾಡಿದ ಅರಣ್ಯ ಇಲಾಖೆ; ಅಚ್ಚರಿ ಎನ್ನಿಸಿದ್ರೂ ಸತ್ಯ – Kannada News | Land Grab Twist: Forest Dept Illegally Encroached Farmers’ 180 Acres, Joint Survey Reveals

ರೈತರ ಭೂಮಿ ಒತ್ತುವರಿ Image Credit source: tv9 kannada

ಕೋಲಾರ, ಮೇ 15: ಕಳೆದ ನಾಲ್ಕೈದು ವರ್ಷಗಳಿಂದ ಕೋಲಾರ (kolar) ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಮತ್ತು ರೈತರ ನಡುವೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಅರಣ್ಯ ಭೂಮಿ ಒತ್ತುವರಿ (Land encroachment) ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇಷ್ಟು ದಿನ ರೈತರೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ, ಈಗ ಉಲ್ಟಾ ಅರಣ್ಯ ಇಲಾಖೆಯೇ ರೈತರ ನೂರಾರು ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ ಎಂಬ ಆಘಾತಕಾರಿ ಸತ್ಯ ಜಂಟಿ ಸರ್ವೆಯಿಂದ ಬಯಲಾಗಿದೆ ಎಂದು ರೈತರು ದಾಖಲೆ ಸಮೇತ ಆರೋಪಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಕೋಲಾರ ಅರಣ್ಯ ಭೂಮಿ ವಿವಾದಕ್ಕೆ ಭಾರೀ ಟ್ವಿಸ್ಟ್​​
  • ಜಂಟಿ ಸರ್ವೆಯಲ್ಲಿ ಬಯಲಾಯ್ತು ಅರಣ್ಯ ಇಲಾಖೆಯ ಕಳ್ಳಾಟ
  • ಮರಳಿ ಭೂಮಿ ಮರುಪಡೆಯಲು ಮುಂದಾದ ರೈತರು

ಜಿಲ್ಲೆಯ ಶ್ರೀನಿವಾಸಪುರ, ಮಾಲೂರು, ಕೋಲಾರ ಮತ್ತು ಮುಳಬಾಗಿಲು ತಾಲೂಕುಗಳಲ್ಲಿ ಅರಣ್ಯ ಇಲಾಖೆ ಈ ಹಿಂದೆ ದೊಡ್ಡ ಮಟ್ಟದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತ್ತು. ಆದರೆ, ಸೆಪ್ಟೆಂಬರ್ 2025ರಲ್ಲಿ ಕೋಲಾರ ತಾಲೂಕಿನ ಹರಟಿ ಗ್ರಾಮದ ಬಳಿಯಿರುವ ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿ ನಡೆದ ತೆರವು ಕಾರ್ಯಾಚರಣೆ ಈಗ ತೀವ್ರ ವಿವಾದಕ್ಕೆ ಈಡುಮಾಡಿದೆ. ಅರಣ್ಯ ಇಲಾಖೆ ತನ್ನ ವ್ಯಾಪ್ತಿಯನ್ನು ಮೀರಿ, ರೈತರಿಗೆ ಸೇರಿದ ಸುಮಾರು 180 ಎಕರೆಯಷ್ಟು ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ರೈತ ಮುಖಂಡರು ದೂರಿದ್ದಾರೆ.

ಜಂಟಿ ಸರ್ವೆಯಲ್ಲಿ ಬಯಲಾಯ್ತು ಅರಣ್ಯ ಇಲಾಖೆಯ ಅಕ್ರಮ

ಸೆಪ್ಟೆಂಬರ್ 2025ರ ಕಾರ್ಯಾಚರಣೆಯ ಸಂದರ್ಭದಲ್ಲಿ ಅರಣ್ಯ ಇಲಾಖೆಯು ಜೆಸಿಬಿಗಳನ್ನು ಬಳಸಿ ರೈತರು ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ರೂ ಮೌಲ್ಯದ ಬೆಳೆಗಳು, ಮನೆಗಳು ಹಾಗೂ ಬೋರ್‌ವೆಲ್ ಪಂಪ್ ಮೋಟಾರ್‌ಗಳನ್ನು ಧ್ವಂಸಗೊಳಿಸಲಾಗಿತ್ತು. ಈ ದಬ್ಬಾಳಿಕೆಯ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರು ಜಂಟಿ ಸರ್ವೆಗೆ ಆದೇಶಿಸಿದ್ದರು. ಅದರಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಡೆಸಿದ ಭೂ ಸರ್ವೆ ಕಾರ್ಯ ಮುಕ್ತಾಯಗೊಂಡಿದ್ದು, ಕಂದಾಯ ಇಲಾಖೆಯ ಭೂದಾಖಲೆಗಳ ಅಧಿಕಾರಿಗಳು ನೀಡಿರುವ ನಕ್ಷೆಯು ರೈತರ ಆರೋಪಕ್ಕೆ ಪುಷ್ಟಿ ನೀಡಿದೆ.

ದಾಖಲೆಗಳು ಏನು ಹೇಳುತ್ತವೆ?

ಲಭ್ಯವಿರುವ ಅಧಿಕೃತ ದಾಖಲೆಗಳ ಪ್ರಕಾರ, 1941ರ ಸೆಟಲ್‌ಮೆಂಟ್ ಅನ್ವಯ ಅರಣ್ಯ ಇಲಾಖೆಗೆ ಸೇರಿರುವುದು ಕೇವಲ 409.35 ಎಕರೆ ಪ್ರದೇಶ ಮಾತ್ರ. ಆದರೆ ಅರಣ್ಯ ಇಲಾಖೆಯೂ ಈ ನಿಗದಿತ ಗಡಿಯನ್ನು ಮೀರಿ ಹೆಚ್ಚುವರಿಯಾಗಿ ರೈತರಿಗೆ ಸೇರಿದ 180 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ. ಅಲ್ಲದೆ, ಸುಮಾರು 200 ಎಕರೆಯಲ್ಲಿದ್ದ ರೈತರ ವಿವಿಧ ಬೆಳೆಗಳನ್ನು ಕಾನೂನುಬಾಹಿರವಾಗಿ ತೆರವುಗೊಳಿಸಿದೆ ಎಂಬ ಅಂಶ ಜಂಟಿ ಸರ್ವೆ ವೇಳೆ ಬಹಿರಂಗವಾಗಿದೆ.

ಜಂಟಿ ಸರ್ವೆಯ ನಕ್ಷೆಯಿಂದ ಸತ್ಯ ಹೊರಬರುತ್ತಿದ್ದಂತೆ ಎಚ್ಚೆತ್ತಿರುವ ಹರಟಿ ಗ್ರಾಮದ ರೈತರು ಹಾಗೂ ರೈತ ಮುಖಂಡ ಗೋಪಾಲ್ ಮತ್ತು ಜಮೀನು ಕಳೆದುಕೊಂಡಿರುವ ಶ್ರೀನಿವಾಸ್, ‘ಅರಣ್ಯ ಇಲಾಖೆ ತಕ್ಷಣವೇ ತನ್ನ ಹಠಮಾರಿ ಧೋರಣೆ ಬಿಟ್ಟು, ವಶಪಡಿಸಿಕೊಂಡಿರುವ ರೈತರ ಭೂಮಿಯನ್ನು ಮರಳಿ ಬಿಟ್ಟುಕೊಡಬೇಕು. ಕಂದಾಯ ಇಲಾಖೆಯು ತಕ್ಷಣವೇ ರೈತರಿಗೆ ಅಧಿಕೃತ ನಕ್ಷೆಯನ್ನು ಸಿದ್ಧಪಡಿಸಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ ಜಾಗಕ್ಕೆ ರೈತರು ಮರುಪ್ರವೇಶ ಮಾಡಿ ಮತ್ತೆ ಗಿಡಗಳನ್ನು ನೆಟ್ಟು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಎರಡೇ ವರ್ಷಗಳಲ್ಲಿ 90 ಸಾವಿರ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ!

ಒಟ್ಟಾರೆಯಾಗಿ ರೈತರು ಹಾಗೂ ಅರಣ್ಯ ಇಲಾಖೆ ನಡುವಿನ ಸಂಘರ್ಷಕ್ಕೆ ಈಗ ಹೊಸ ತಿರುವು ಸಿಕ್ಕಿದ್ದು, ಜಂಟಿ ಸರ್ವೆಯ ನಕ್ಷೆ ಸಿದ್ಧವಾದ ಮೇಲೆ ಅರಣ್ಯ ಇಲಾಖೆ ದಾಖಲಾತಿಗಳನ್ನು ಒಪ್ಪದೆ ಹೋದಲ್ಲಿ ಮುಂದಿನ ದಿನಗಳಲ್ಲಿ ರೈತರು ಹಾಗೂ ಅರಣ್ಯ ಇಲಾಖೆಯ ನಡುವಿನ ಎರಡನೇ ಹಂತದ ಸಂಘರ್ಷ ಶುರುವಾಗುವುದರಲ್ಲಿ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: 10 ತಂಡಗಳಿಂದಲೂ ಶತಕ; ಇತಿಹಾಸ ಸೃಷ್ಟಿಸಿದ 19ನೇ ಸೀಸನ್ – Kannada News | IPL 2026 Record: All 10 Teams Score Centuries, A Historic Season of Batting Brilliance

19ನೇ ಆವೃತ್ತಿಯ ಐಪಿಎಲ್​ನ (IPL 2026) ಲೀಗ್ ಹಂತ ಮುಗಿಯಲು ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇದಾದ ಬಳಿಕ ಪ್ಲೇಆಫ್ ಸುತ್ತು ಆರಂಭವಾಗಲಿದೆ. ಕಳೆದೆರಡು ಆವೃತ್ತಿಗಳಂತೆ ಈ ಆವೃತ್ತಿಯಲ್ಲೂ ಬ್ಯಾಟ್ಸ್‌ಮನ್​ಗಳ ಅಬ್ಬರವೇ ಹೆಚ್ಚಿತ್ತು. ಇದರಿಂದಾಗಿ ಸಾಕಷ್ಟು ಪಂದ್ಯಗಳಲ್ಲಿ 200 ಕ್ಕೂ ಅಧಿಕ ಮೊತ್ತವನ್ನು ಕಲೆಹಾಕಲಾಯಿತು. ಹಾಗೆಯೇ 200 ಕ್ಕೂ ಅಧಿಕ ಮೊತ್ತವನ್ನು ಬೆನ್ನಟ್ಟಿ ಗೆದ್ದ ದಾಖಲೆಯೂ ಸೃಷ್ಟಿಯಾಯಿತು. ರನ್ ಮಳೆಯೇ ಹರಿದ ಈ ಆವೃತ್ತಿಯಲ್ಲಿ ಶತಕಗಳ ಮೇಲೆ ಶತಕಗಳು ಸಿಡಿದವು. ಈ ಮೂಲಕ 2026 ರ ಐಪಿಎಲ್ ಹೊಸ ಇತಿಹಾಸವನ್ನು ಸೃಷ್ಟಿಸಿತು. ವಾಸ್ತವವಾಗಿ 2026 ರ ಐಪಿಎಲ್‌ನಲ್ಲಿ ಪ್ರತಿಯೊಂದು ತಂಡದಿಂದಲೂ ಶತಕಗಳು ಸಿಡಿದಿವೆ. ಇದು ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ.

ಎಲ್ಲಾ ತಂಡಗಳಿಂದಲ್ಲೂ ಶತಕ

ಆರ್​ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅದ್ಭುತ ಶತಕ ಬಾರಿಸಿದರು. ಇದು ಕೊಹ್ಲಿ ಅವರ ಒಂಬತ್ತನೇ ಐಪಿಎಲ್ ಶತಕವಾಗಿದ್ದು, ಈ ಶತಕ ಆರ್​ಸಿಬಿ ಭರ್ಜರಿ ಗೆಲುವು ದಾಖಲಿಸಲು ಸಹಾಯ ಮಾಡಿತು. ಕೊಹ್ಲಿ ತಮ್ಮ ಶತಕದೊಂದಿಗೆ ದಾಖಲೆ ನಿರ್ಮಿಸಿದ್ದಲ್ಲದೆ, ಐಪಿಎಲ್ 2026 ಕ್ಕೆ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎಲ್ಲಾ 10 ತಂಡಗಳು ಶತಕ ಬಾರಿಸಿದ್ದು ಇದೇ ಮೊದಲು.

ಯಾವ ತಂಡದಿಂದ ಯಾವ ಆಟಗಾರ ಶತಕ ಬಾರಿಸಿದ್ದಾರೆ?

  • ಚೆನ್ನೈ ಸೂಪರ್ ಕಿಂಗ್ಸ್: ಸಂಜು ಸ್ಯಾಮ್ಸನ್ ಸಿಎಸ್​ಕೆ ಪರ ಇದುವರೆಗೆ ಎರಡು ಶತಕಗಳನ್ನು ಬಾರಿಸಿದ್ದಾರೆ.
  • ಮುಂಬೈ ಇಂಡಿಯನ್ಸ್: ಆರಂಭಿಕ ಕ್ವಿಂಟನ್ ಡಿ ಕಾಕ್, ತಿಲಕ್ ವರ್ಮಾ ಮತ್ತು ರಯಾನ್ ರಿಕಲ್ಟನ್ ಮುಂಬೈ ಇಂಡಿಯನ್ಸ್ ಪರ ಶತಕಗಳನ್ನು ಸಿಡಿಸಿದ್ದಾರೆ.
  • ಗುಜರಾತ್ ಟೈಟಾನ್ಸ್: ಆರಂಭಿಕ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ಪರ ಶತಕ ಸಿಡಿಸಿದ್ದಾರೆ.
  • ಸನ್​ರೈಸರ್ಸ್​ ಹೈದರಾಬಾದ್: ಆರಂಭಿಕ ಅಭಿಷೇಕ್ ಶರ್ಮಾ ಸನ್‌ರೈಸರ್ಸ್ ಹೈದರಾಬಾದ್ ಪರ ಶತಕದ ಇನ್ನಿಂಗ್ಸ್ ಆಡಿದ್ದಾರೆ.
  • ರಾಜಸ್ಥಾನ್ ರಾಯಲ್ಸ್‌: ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಬಿರುಗಾಳಿಯ ಇನ್ನಿಂಗ್ಸ್ ಆಡಿ 36 ಎಸೆತಗಳಲ್ಲಿ ಶತಕ ಬಾರಿಸಿದರು.
  • ಲಕ್ನೋ ಸೂಪರ್ ಜೈಂಟ್ಸ್: ಲಕ್ನೋ ತಂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರಬಹುದು, ಆದರೆ ಈ ತಂಡದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ತಂಡದ ಪರ ಶತಕ ಬಾರಿಸಿದ್ದಾರೆ.
  • ದೆಹಲಿ ಕ್ಯಾಪಿಟಲ್ಸ್: ಪ್ಲೇಆಫ್​ ರೇಸ್​​ನಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿರುವ ದೆಹಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಶತಕ ಬಾರಿಸಿದ್ದಾರೆ.
  • ಪಂಜಾಬ್ ಕಿಂಗ್ಸ್: ಆಸ್ಟ್ರೇಲಿಯಾದ ಯುವ ಬ್ಯಾಟರ್ ಕೂಪರ್ ಕೊನೊಲಿ ಪಂಜಾಬ್ ಕಿಂಗ್ಸ್ ಪರ ಅದ್ಭುತ ಶತಕ ಸಿಡಿಸಿದ್ದಾರೆ.
  • ಕೋಲ್ಕತ್ತಾ ನೈಟ್ ರೈಡರ್ಸ್​: ಪ್ಲೇಆಫ್​ನಿಂದ ಹೊರಬಿದ್ದಿರುವ ಕೆಕೆಆರ್ ಪರ ಆರಂಭಿಕ ಫಿನ್ ಅಲೆನ್ ಶತಕದ ಇನ್ನಿಂಗ್ಸ್ ಆಡಿದರು.
  • ರಾಯಲ್ ಚಾಲೆಂಜರ್ಸ್ ಬೆಂಗಳೂರು: ಇನ್ನು ಕೆಕೆಆರ್ ವಿರುದ್ಧ ಆರ್​ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಶತಕದ ಇನ್ನಿಂಗ್ಸ್ ಆಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್ – Kannada News | Lawyer Balan said Pavithra Gowda have higher chance of getting bail

ನಟ ದರ್ಶನ್ (Darshan), ಸುಪ್ರೀಂಕೋರ್ಟ್​​ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ನಿರಾಕರಣೆಗೊಂಡಿದೆ. ಸಾಕ್ಷ್ಯಗಳ ವಿಚಾರಣೆ ಬೇಗ ಮುಗಿಸಿ, ಒಂದೊಮ್ಮೆ ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ಮುಗಿದಿಲ್ಲವಾದರೆ ಜಾಮೀನು ಅರ್ಜಿಯನ್ನು ಪರಿಶೀಲಿಸಬಹುದು ಎಂದಿದೆ ಸುಪ್ರೀಂಕೋರ್ಟ್. ಇಂದಿನ ಸುಪ್ರೀಂ ತೀರ್ಪಿನ ವಿಶ್ಲೇಷಣೆ ಮಾಡಿರುವ ವಕೀಲ ಬಾಲನ್ ಅವರು, ದರ್ಶನ್ ಅವರಿಗಿಂತಲೂ ಪವಿತ್ರಾ ಗೌಡ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಿದೆ. ಮಹಿಳೆ ಮತ್ತು ಸಿಂಗಲ್ ಪೇರೆಂಟ್ ಆಗಿರುವ ಅವರು ಜಾಮೀನಿಗೆ ಪ್ರಯತ್ನಿಸಿದರೆ ಜಾಮೀನು ಸಿಗಬಹುದು ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಳೆಯ ನೋವು ಮುಂದೆ ಆರ್ಥ್ರೈಟಿಸ್‌ಗೆ ಕಾರಣವಾಗುತ್ತದೆಯೇ? ಏನ್ ಹೇಳ್ತಾರೆ ತಜ್ಞರು – Kannada News | Preventing Arthritis After Injury: Orthopedic Tips For Long Term Joint Health

ಎಲುಬಿಗಾದ ಹಳೆಯ ನೋವು ಅಥವಾ ಗಾಯವನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಿದರೆ ಮುಂದೆ ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹೌದು, ಆರೋಗ್ಯ ತಜ್ಞರ ಪ್ರಕಾರ ಫ್ರ್ಯಾಕ್ಚರ್ (Fracture), ಲಿಗಮೆಂಟ್ ಹಾನಿ (Ligament injury) ಅಥವಾ ಜಾಯಿಂಟ್ ಇಂಜುರಿ (Joint injury) ಆದಾಗ ಸರಿಯಾದ ಚಿಕಿತ್ಸೆ ಪಡೆಯದೇ ಇದ್ದರೆ, ಮುಂದಿನ ದಿನಗಳಲ್ಲಿ ಆರ್ಥ್ರೈಟಿಸ್‌ (Arthritis) ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲಿಯೂ ಹಲವರು ಗಾಯವಾದ ನಂತರ ಕೆಲ ದಿನ ವಿಶ್ರಾಂತಿ ಪಡೆದು ಮತ್ತೆ ಸಾಮಾನ್ಯ ಚಟುವಟಿಕೆಗೆ ಮರಳುತ್ತಾರೆ. ಆದರೆ ಒಳಗಿರುವ ಹಾನಿ ಸಂಪೂರ್ಣವಾಗಿ ಗುಣವಾಗದಿದ್ದರೆ, ಸಂಧಿಗಳಲ್ಲಿ ನಿಧಾನವಾಗಿ ಘರ್ಷಣೆ ಹೆಚ್ಚಾಗಿ ನೋವು ಮತ್ತು ಊತ ಉಂಟಾಗಬಹುದು. ಕಾಲಕ್ರಮೇಣ ಇದು ಆರ್ಥ್ರೈಟಿಸ್‌ಗೆ ಕಾರಣವಾಗುವ ಅಪಾಯವಿರುತ್ತದೆ.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಹಳೆಯ ಗಾಯ ಅಥವಾ ನೋವಾಗಿದ್ದ ಭಾಗದಲ್ಲಿ ಪದೇಪದೇ ನೋವು ಕಾಣಿಸಿಕೊಳ್ಳುವುದು, ಊತ ಕಡಿಮೆಯಾಗದೇ ಇರುವುದು ಅಥವಾ ಬೆಳಗ್ಗೆ ಎದ್ದಾಗ ಕೀಲಿನ ಸಂಧಿಗಳು ಗಟ್ಟಿಯಾಗಿರುವ ಅನುಭವವಾಗುವುದು ಪ್ರಮುಖ ಲಕ್ಷಣಗಳಾಗಿವೆ. ನಡೆಯುವಾಗ, ಮೆಟ್ಟಿಲೇರುವಾಗ ಅಥವಾ ಕಾಲು, ಕೈಗಳನ್ನು ಮಡಚುವಾಗ ನೋವು ಹೆಚ್ಚಾದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಕೆಲವರಿಗೆ ಕೀಲುಗಳ ಮಧ್ಯದಿಂದ ಶಬ್ದ ಬರುವುದು, ಭಾರವಾದ ಅನುಭವ ಅಥವಾ ಹೆಚ್ಚು ಸಮಯ ಕೂತ ಬಳಿಕ ಚಲನೆ ಮಾಡಲು ತೊಂದರೆ ಕಾಣಿಸಬಹುದು. ಇಂತಹ ಲಕ್ಷಣಗಳು ಸಂಧಿಗಳ ಘರ್ಷಣೆಯ ಸೂಚನೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಕೀಲು ನೋವು ಬರಬಾರದು ಎಂದರೆ ತಪ್ಪದೆ ಈ ಆಹಾರಗಳ ಸೇವನೆ ಮಾಡಿ

ಸಮಯಕ್ಕೆ ಚಿಕಿತ್ಸೆ ಯಾಕೆ ಅಗತ್ಯ?

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಕೀಲುಗಳ ಮಧ್ಯೆ ಆಗುವ ಹಾನಿಯನ್ನು ಕಡಿಮೆ ಮಾಡಬಹುದು. ಎಕ್ಸ್‌ರೇ ಅಥವಾ ಸ್ಕ್ಯಾನ್ ಮೂಲಕ ಎಲುಬು ಮತ್ತು ಕೀಲುಗಳು ಸಂಪೂರ್ಣವಾಗಿ ಗುಣಮುಖವಾಗಿದೆಯೇ ಎಂಬುದನ್ನು ವೈದ್ಯರು ಪರಿಶೀಲಿಸುತ್ತಾರೆ. ಫಿಜಿಯೋಥೆರಪಿ, ಔಷಧೋಪಚಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದರಿಂದ ನೋವು ಹಾಗೂ ಊತ ನಿಯಂತ್ರಣಕ್ಕೆ ಬರುತ್ತದೆ. ಚಿಕಿತ್ಸೆ ವಿಳಂಬವಾದರೆ ನಡೆಯುವಲ್ಲಿ ತೊಂದರೆ ಹೆಚ್ಚಾಗುವ ಸಾಧ್ಯತೆ ಇದೆ. ಜಾಯಿಂಟ್ ಗಳು ಆರೋಗ್ಯವಾಗಿರಲು ತೂಕ ನಿಯಂತ್ರಣದಲ್ಲಿ ಇಡುವುದು, ನಿಯಮಿತವಾಗಿ ಲಘು ವ್ಯಾಯಾಮ ಮಾಡುವುದು ಮತ್ತು ಗಾಯವಾದ ಭಾಗದ ಮೇಲೆ ಹೆಚ್ಚು ಒತ್ತಡ ಹಾಕದಿರುವುದು ಮುಖ್ಯ. ಕ್ಯಾಲ್ಸಿಯಂ, ವಿಟಮಿನ್ D ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇವಿಸುವುದರಿಂದ ಎಲುಬುಗಳು ಬಲವಾಗಿರುತ್ತವೆ. ದೀರ್ಘಕಾಲ ನೋವು ಅಥವಾ ಗಟ್ಟಿತನ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿಯ ಬೆಂಗಾವಲು ಪಡೆಯನ್ನು ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ ಸಮಂತ್ ಗೋಯಲ್ – Kannada News | Not right to reduce PM Modi’s security amid austerity measures Former RAW chief Samant Goel says

ನವದೆಹಲಿ, ಮೇ 15: ಭಾರತದಲ್ಲಿ ಉಂಟಾಗಿರುವ ಇಂಧನದ ಬಿಕ್ಕಟ್ಟನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ವಾಹನಗಳ ಬಳಕೆಯನ್ನು ಕಡಿಮೆಗೊಳಿಸಲು ಸೂಚಿಸಿದ್ದರು. ಪ್ರಧಾನಿ ಮೋದಿ ಕೂಡ ತಮ್ಮ ಬೆಂಗಾವಲು ಪಡೆಯ ಪ್ರಮಾಣವನ್ನು ಕಡಿಮೆಗೊಳಿಸಿದ್ದರು. ಈ ಬಗ್ಗೆ ಭಾರತದ ಮಾಜಿ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW) ಮುಖ್ಯಸ್ಥ ಸಮಂತ್ ಗೋಯಲ್ ಪ್ರತಿಕ್ರಿಯೆ ನೀಡಿದ್ದಾರೆ.

“ಪ್ರಸ್ತುತ ಅಂತಾರಾಷ್ಟ್ರೀಯ ಭದ್ರತಾ ಪರಿಸ್ಥಿತಿ ಅಸ್ಥಿರವಾಗಿದೆ. ಅಮೆರಿಕವನ್ನು ಸುರಕ್ಷಿತ ದೇಶವೆಂದು ಪರಿಗಣಿಸಿದ್ದರೂ ಅದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ 3 ದಾಳಿಗಳು ನಡೆದಿವೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಲೇ ಇವೆ. ಪಕ್ಕದ ದೇಶದಿಂದಲೇ ಭಾರತಕ್ಕೆ ಭದ್ರತಾ ಆತಂಕವಿದೆ. ಹೀಗಾಗಿ, ನಾವು ಪ್ರಧಾನಿಯವರ ಭದ್ರತೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇಂತಹ ಸಂದರ್ಭದಲ್ಲಿ ನಾವು ಅವರ ಭದ್ರತೆಯನ್ನು ಕಡಿಮೆ ಮಾಡುವ ಬದಲು ಬಲಪಡಿಸಬೇಕು. ಈ ರೀತಿ ಬೆಂಗಾವಲು ಪಡೆಯನ್ನು ಕಡಿಮೆ ಮಾಡುವುದು ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ.” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈನಾನ್ಸ್ ಸೆಕ್ಯೂರಿಟಿ ಗೈಡ್: ಹ್ಯಾಕರ್‌ಗಳಿಂದ ನಿಮ್ಮ ಕ್ರಿಪ್ಟೋ ರಕ್ಷಿಸಲು 7 ಸಲಹೆಗಳು – Kannada News | Secure the Crypto trading in Binance using these 7 tools

ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ (Crypto currency trading) ಸುರಕ್ಷತೆಯು ಅತ್ಯಂತ ಮುಖ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಹ್ಯಾಕಿಂಗ್ ನಡೆಯುವುದು ಪ್ಲಾಟ್‌ಫಾರ್ಮ್‌ನ ತಪ್ಪಿನಿಂದಲ್ಲ, ಬದಲಿಗೆ ಬಳಕೆದಾರರ ನಿರ್ಲಕ್ಷ್ಯದಿಂದ. ಬೈನಾನ್ಸ್‌ನಲ್ಲಿ (Binance) ಸುರಕ್ಷಿತವಾಗಿರಲು ಹೆಚ್ಚಿನ ಮಂದಿಗೆ ತಿಳಿಯದ ಕೆಲ ಟ್ರಿಕ್ಸ್​ಗಳಿವೆ. ಈ ಕೆಳಗಿನ 7 ಸೆಕ್ಯೂರಿಟಿ ಟೂಲ್‌ಗಳನ್ನು ಬಳಸಿದರೆ ಕ್ರಿಪ್ಟೋ ವ್ಯವಹಾರ ಸುರಕ್ಷಿತವಾಗಿರುತ್ತದೆ.

  1. ಬೈನಾನ್ಸ್ ಅಥೆಂಟಿಕೇಟರ್ (Binance Authenticator): ಕೇವಲ SMS OTP ಮೇಲೆ ಅವಲಂಬಿತರಾಗಬೇಡಿ, ಏಕೆಂದರೆ ‘ಸಿಮ್ ಸ್ವಾಪ್’ ಹಗರಣಗಳು ನಡೆಯುತ್ತಿವೆ. ಅಥೆಂಟಿಕೇಟರ್ ಆಪ್ ಬಳಸುವುದು ಹೆಚ್ಚು ಸುರಕ್ಷಿತ.
  2. ಆಂಟಿ-ಫಿಶಿಂಗ್ ಕೋಡ್ (Anti-Phishing Code): ಇದನ್ನು ಸೆಟ್ ಮಾಡುವುದರಿಂದ ಬೈನಾನ್ಸ್‌ನಿಂದ ಬರುವ ಪ್ರತಿಯೊಂದು ಇಮೇಲ್‌ನಲ್ಲಿ ನಿಮ್ಮದೇ ಆದ ರಹಸ್ಯ ಕೋಡ್ ಇರುತ್ತದೆ. ಇದು ನಕಲಿ ಇಮೇಲ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
  3. ವಿತ್‌ಡ್ರಾವಲ್ ವೈಟ್‌ಲಿಸ್ಟ್ (Withdrawal Whitelist): ಈ ಫೀಚರ್ ಆನ್ ಮಾಡಿದರೆ, ನಿಮ್ಮ ಹಣವನ್ನು ನೀವು ಮೊದಲೇ ಅನುಮೋದಿಸಿದ ವಿಳಾಸಗಳಿಗೆ ಮಾತ್ರ ಕಳುಹಿಸಲು ಸಾಧ್ಯವಾಗುತ್ತದೆ. ಇದರಿಂದ ಹ್ಯಾಕರ್‌ಗಳು ಹಣವನ್ನು ಬೇರೆ ಕಡೆಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
  4. ಡಿವೈಸ್ ಮ್ಯಾನೇಜ್‌ಮೆಂಟ್ (Device Management): ನಿಮ್ಮ ಅಕೌಂಟ್ ಯಾವ ಯಾವ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಲಾಗಿನ್ ಆಗಿದೆ ಎಂದು ಗಮನಿಸಿ ಮತ್ತು ಅಪರಿಚಿತ ಸಾಧನಗಳನ್ನು ತಕ್ಷಣವೇ ತೆಗೆದುಹಾಕಿ.
  5. ಪ್ರತ್ಯೇಕ ಇಮೇಲ್ ಮತ್ತು ಬಲವಾದ ಪಾಸ್‌ವರ್ಡ್: ನಿಮ್ಮ ವೈಯಕ್ತಿಕ ಇಮೇಲ್ ಬದಲಿಗೆ ಟ್ರೇಡಿಂಗ್‌ಗೆಂದೇ ಪ್ರತ್ಯೇಕ ಇಮೇಲ್ ಬಳಸಿ ಮತ್ತು ಯಾರೂ ಊಹಿಸಲು ಸಾಧ್ಯವಾಗದಂತಹ ಕಠಿಣ ಪಾಸ್‌ವರ್ಡ್ ಇರಿಸಿ.
  6. ಬೈನಾನ್ಸ್ ವೆರಿಫೈ (Binance Verify): ಯಾವುದೇ ಸಾಮಾಜಿಕ ಜಾಲತಾಣದ ಲಿಂಕ್ ಅಥವಾ ಫೋನ್ ನಂಬರ್ ಅಧಿಕೃತವೇ ಎಂದು ಪರೀಕ್ಷಿಸಲು ಬೈನಾನ್ಸ್‌ನ ಅಧಿಕೃತ ಸೈಟ್‌ನಲ್ಲಿರುವ ಈ ಟೂಲ್ ಬಳಸಿ.
  7. ತುರ್ತು ಸಂದರ್ಭದಲ್ಲಿ ಏನು ಮಾಡಬೇಕು?: ಒಂದು ವೇಳೆ ನಿಮ್ಮ ಅಕೌಂಟ್ ಹ್ಯಾಕ್ ಆಗಿದ್ದರೆ, ತಕ್ಷಣವೇ ಪಾಸ್‌ವರ್ಡ್ ಬದಲಿಸಿ, ಎಲ್ಲಾ ಸಾಧನಗಳಿಂದ ಲಾಗ್-ಔಟ್ ಆಗಿ ಮತ್ತು ಬೈನಾನ್ಸ್ ಸಪೋರ್ಟ್ ತಂಡವನ್ನು ಸಂಪರ್ಕಿಸಿ. ಸೈಬರ್ ಕ್ರೈಮ್ ಹೆಲ್ಪ್‌ಲೈನ್ 1930ಕ್ಕೆ ಕರೆ ಮಾಡಿ ದೂರು ನೀಡಿ.

ಇದನ್ನೂ ಓದಿ: ಈ ತಂತ್ರ ಬಳಸಿದರೆ, 12 ಲಕ್ಷ ಮಾತ್ರವಲ್ಲ, 15 ಲಕ್ಷ ರೂವರೆಗೆ ಆದಾಯಕ್ಕೆ ಶೂನ್ಯ ತೆರಿಗೆ

ಸಂಶೋಧನೆಯ ಪ್ರಕಾರ 65% ಬಳಕೆದಾರರು ‘ನಮಗೆ ಏನೂ ಆಗುವುದಿಲ್ಲ’ ಎಂಬ ಅಸಡ್ಡೆಯಿಂದ ಈ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಆದರೆ ಇವುಗಳನ್ನು ಸಕ್ರಿಯಗೊಳಿಸಲು ಕೇವಲ 30-45 ನಿಮಿಷಗಳು ಬೇಕಾಗುತ್ತವೆ, ಇದು ನಿಮ್ಮ ಜೀವನದ ಉಳಿತಾಯವನ್ನು ಕಾಪಾಡಬಲ್ಲದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:39 pm, Fri, 15 May 26

Source link