IND vs NZ: 18 ಎಸೆತಗಳಲ್ಲಿ ಅರ್ಧಶತಕ; ಫೈನಲ್‌ನಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ
ಇಡೀ ಟಿ20 ವಿಶ್ವಕಪ್ನಲ್ಲಿ ಮೌನಕ್ಕೆ ಶರಣಾಗಿದ್ದ ಅಭಿಷೇಕ್ ಶರ್ಮಾ ಅವರ ಬ್ಯಾಟ್ ಕೊನೆಗೂ ಸದ್ದು ಮಾಡಿದೆ. ಲೀಗ್ ಹಂತದಿಂದ ಹಿಡಿದು ಫೈನಲ್ವರೆಗೂ ಅಭಿಷೇಕ್ ಶರ್ಮಾ ಬ್ಯಾಟ್ನಿಂದ ಸಿಡಿದಿದ್ದು, ಕೇವಲ ಒಂದೇ ಒಂದು ಅರ್ಧಶತಕ ಮಾತ್ರ. ಹೀಗಾಗಿ ಅಭಿಷೇಕ್ ಮೇಲೆ ಇಡೀ ಭಾರತದ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಹೀಗಿದ್ದರೂ ಅಭಿಷೇಕ್ಗೆ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು. ನಾಯಕ ಹಾಗೂ ಆಯ್ಕೆ ಮಂಡಳಿಯ ನಂಬಿಕೆ ಉಳಿಸಿಕೊಳ್ಳಲು ಕೊನೆಯ ಅವಕಾಶ ಪಡೆದಿದ್ದ ಅಭಿಷೇಕ್ ಶರ್ಮಾ ಅವಶ್ಯಕ ಸಮಯದಲ್ಲಿ ಲಯ ಕಂಡುಕೊಂಡಿದ್ದಾರೆ. ನರೇಂದ್ರ…