ಮಗಳ ಮದುವೆಯಲ್ಲಿ ಕನ್ಯಾದಾನ ಮಾಡುವಾಗಲೇ ಹೃದಯಾಘಾತದಿಂದ ಅಪ್ಪ ಸಾವು! – Kannada News | Father dies of heart attack during daughters Kanyadan Wedding Ritual in Buldhana
ನವದೆಹಲಿ, ಮೇ 15: ಮದುವೆ ಮನೆಯ ತುಂಬ ಸಂತೋಷದ ವಾತಾವರಣವಿತ್ತು. ಮನೆ ಮಗಳ ಮದುವೆಯಾದ್ದರಿಂದ ಕುಟುಂಬದವರೆಲ್ಲ ಸಂಭ್ರಮದಲ್ಲಿದ್ದರು. ಆದರೆ, ಕಣ್ಮುಚ್ಚಿ ಬಿಡುವಷ್ಟರಲ್ಲಿ ಆ ಮದುವೆ (Wedding) ಮನೆ ಸೂತಕದ ಮನೆಯಾಗಿಹೋಯಿತು. ಮಹಾರಾಷ್ಟ್ರದ ಸಿಂಧ್‌ಖೇಡ್ ರಾಜಾ ತಾಲ್ಲೂಕಿನ ವರ್ದಾದಿಯಲ್ಲಿ ವಧುವಿನ ಕನ್ಯಾದಾನ ಮಾಡಿದ ತಂದೆ ತಂದೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವರ್ದಾದಿಯ ಕುರುಮದಾಸ್ ಭೂತೇಕರ್ ಅವರ ಪುತ್ರಿ ನಂದಿನಿ, ಜಲ್ನಾ ಜಿಲ್ಲೆಯ ಮಾಂಥಾದ ಪ್ರದೀಪ್ ನಾನೋಟೆ ಅವರನ್ನು ವಿವಾಹವಾದರು. ಗುರುವಾರ ಸಂಜೆ ಮುಖ್ಯ ವಿವಾಹ ಸಮಾರಂಭ ಪ್ರಾರಂಭವಾಯಿತು. ಅದ್ದೂರಿಯಾಗಿ…