ಟಿ20 ವಿಶ್ವಕಪ್ ಗೆದ್ದು ಅಗಲಿದ ಅಪ್ಪನಿಗೆ ರಿಂಕು ಸಿಂಗ್ ಭಾವುಕ ಸಂದೇಶ
ಟಿ20 ವಿಶ್ವಕಪ್ ಸಮಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಸಾವನ್ನಪ್ಪಿದ್ದು ಎಲ್ಲರಿಗೂ ತಿಳಿದಿರುವಂತದ್ದೆ. ಸೂಪರ್ 8 ಸುತ್ತು ನಡೆಯುವ ಸಂದರ್ಭದಲ್ಲಿ ರಿಂಕು ಸಿಂಗ್ ಇದ್ದಕ್ಕಿದ್ದಂತೆ ತಂಡ ತೊರೆದಿದ್ದರು. ರಿಂಕು ಅವರ ತಂದೆಯ ಸ್ಥಿತಿ ಗಂಭೀರವಾಗಿದ್ದರಿಂದ ರಿಂಕು ತಂಡವನ್ನು ತೊರೆದು ಮನೆಗೆ ಮರಳಿದ್ದರು. ಆದರೆ ಕ್ಯಾನ್ಸರ್ನಿಂದ ಬಳಲುತ್ತಿದ್ದ ರಿಂಕು ಅವರ ತಂದೆ ಬದುಕುಳಿಯಲಿಲ್ಲ. ಈ ನೋವಿನ ನಡುವೆಯ ರಾಷ್ಟ್ರೀಯ ಕರ್ತವ್ಯಕ್ಕಾಗಿ ರಿಂಕು ಸಿಂಗ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಟಿ20 ವಿಶ್ವಕಪ್ ಗೆದ್ದು ತನ್ನ…