Inspirational Story: 61ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸ್; 650ಕ್ಕೆ 500 ಅಂಕ ಪಡೆದ ಮಹಿಳೆ – Kannada News | 61 Year Old Narender Kaur Passes 10th Grade with 77%: Age is No Barrier to Education
ಜಲಂಧರ್: “ಓದಿಗೆ ವಯಸ್ಸಿನ ಮಿತಿ ಇಲ್ಲ, ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ” ಎಂಬುದನ್ನು ಪಂಜಾಬ್ನ 61 ವರ್ಷದ ನರೇಂದ್ರ ಕೌರ್ ಅವರು ಸಾಬೀತುಪಡಿಸಿದ್ದಾರೆ. ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ ಪುಸ್ತಕ ಹಿಡಿದು ಪರೀಕ್ಷೆಗೆ ಕುಳಿತಿದ್ದ ಈ ಅಜ್ಜಿ, ಈಗ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ (PSEB) 10ನೇ ತರಗತಿ ಪರೀಕ್ಷೆಯಲ್ಲಿ ಭರ್ಜರಿ ಅಂಕಗಳೊಂದಿಗೆ ತೇರ್ಗಡೆಯಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 650ಕ್ಕೆ 500 ಅಂಕಗಳ ಸಾಧನೆ: ನರೇಂದ್ರ ಕೌರ್ ಅವರು ಕೇವಲ ಪಾಸಾಗುವುದಷ್ಟೇ ಅಲ್ಲದೆ, ಶೇ. 77 ರಷ್ಟು ಅಂಕಗಳನ್ನು…