Headlines

nagaraj11081993

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಶಾಕ್: ಇನ್ನೂ ಹೆಚ್ಚಾಗುತ್ತಾ ತೈಲ ಬೆಲೆ? ತಜ್ಞರು ಹೇಳೋದೇನು ನೋಡಿ – Kannada News | Will Fuel Prices Rise Further? Experts Predict Petrol and Diesel May Surge by Rs 10 to 15 Soon

ಬೆಂಗಳೂರು, ಮೇ 15: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 3 ರೂ.ನಷ್ಟು ಹೆಚ್ಚಳವಾಗಿದೆ. ಇದು ನಾಲ್ಕು ವರ್ಷಗಳ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕೈಗೊಂಡ ಮೊದಲ ದರ ಪರಿಷ್ಕರಣೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಕಚ್ಚಾತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಭಾರತವು ತನ್ನ ಕಚ್ಚಾತೈಲದ ಶೇ 85-91 ಭಾಗವನ್ನು ಆಮದು ಮಾಡಿಕೊಳ್ಳುವುದರಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತ ನೇರವಾಗಿ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಕಳೆದ 11 ವಾರಗಳಿಂದ ಕಚ್ಚಾತೈಲ ಬೆಲೆ…

Read More

ಬೆಲೆ ಏರಿಕೆ ಅಬ್ಬರದ ನಡುವೆ ಗ್ರಾಹಕರಿಗೆ ಮತ್ತೊಂದು ಶಾಕ್​​: ಖಾಸಗಿ ಬಸ್​​ಗಳ ಟಿಕೆಟ್​​ ದರವೂ ಹೆಚ್ಚಳ – Kannada News | Karnataka private bus fares jump 20 30 percent amid fuel price surge

ಬೆಂಗಳೂರು, ಮೇ 15: ಇಂಧನ, ಅಗತ್ಯ ಸಾಮಾಗ್ರಿಗಳ ಬೆಲೆಯೇರಿಕೆಯಿಂದ (Price Hike) ಈಗಾಗಲೇ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್​​ ಮಾಲೀಕರು ಮತ್ತೊಂದು ಶಾಕ್​​ ಕೊಟ್ಟಿದ್ದಾರೆ. ಪೆಟ್ರೋಲ್, ಡಿಸೇಲ್ ದರ ಏರಿಕೆ ಹಿನ್ನೆಲೆ ಇಂದು ಮಧ್ಯರಾತ್ರಿಯಿಂದಲೇ ಖಾಸಗಿ ಬಸ್‌ ಟಿಕೆಟ್ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಶೇ.20-30ರಷ್ಟು ದರ ಏರಿಕೆಯಾಗಲಿದ್ದು, ಬೆಲೆ ಏರಿಕೆ ಅಬ್ಬರದ ಪರಿಣಾಮ ಈಗಾಗಲೇ ಸೋತು ಸುಣ್ಣವಾಗಿರುವ ಜನರಿಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ. ಮುಖ್ಯಾಂಶಗಳು ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್​​ ಇಂದು ಮಧ್ಯರಾತ್ರಿಯಿಂದ…

Read More

‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’: ವಿಜಯಪುರ ದುರಂತ, ತಾಯಿಯ ಕಣ್ಣೀರ ಮಾತು – Kannada News | Vijayapura Tragedy: Minister MB Patil Announces 5 Lakh Compensation for Family Killed in House Collapse

ವಿಜಯಪುರ, ಮೇ 15: ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಸಂಭವಿಸಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟಿದ್ದು, ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಮೃತ ಗುರುನಾಥ ಬಡಿಗೇರ ತಾಯಿ ‘ಟಿವಿ9’ ಜತೆ ಮಾತನಾಡಿದ್ದು, ‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’ ಎಂದು ಕಣ್ಣೀರು…

Read More

ರಕ್ಕಸ ಹೊಟ್ಟೆಗೆ ಅರೆಕಾಸು ಮಜ್ಜಿಗೆ; ದಿನಕ್ಕೆ 1,600 ಕೋಟಿ ನಷ್ಟವಿರುವ ತೈಲ ಕಂಪನಿಗಳಿಗೆ 3 ರೂ ಪೆಟ್ರೋಲ್ ಬೆಲೆ ಏರಿಕೆ ಸಾಲುತ್ತಾ? – Kannada News | Fuel Price Hike: Indian Oil Companies Face Huge Losses, Why Hikes Are Coming

ನವದೆಹಲಿ, ಮೇ 15: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿದ್ದರೂ, ಭಾರತದಲ್ಲಿ ಪೆಟ್ರೋಲ್ (Petrol) ಮತ್ತು ಡೀಸೆಲ್ ಬೆಲೆಗಳನ್ನು ಸ್ಥಿರವಾಗಿಟ್ಟಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (HPCL, BPCL, IOCL) ಭಾರಿ ನಷ್ಟ ಅನುಭವಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮಾಡದ ಕಾರಣ ತೈಲ ಕಂಪನಿಗಳು ಪ್ರತಿದಿನ ಸುಮಾರು 1,600 ಕೋಟಿ ರೂಗಳಿಗೂ ಹೆಚ್ಚು ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಸರಿದೂಗಿಸಲು ಇತ್ತೀಚೆಗೆ…

Read More

ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲ ವಿಶ್ಲೇಷಣೆ – Kannada News | Lawyer Balan analyze Darshan’s bail rejection by Supreme Court

ನಟ ದರ್ಶನ್ (Darshan), ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ನಿರಾಕರಣೆಯಾಗಿದೆ. ಇದರಿಂದಾಗಿ ಕನಿಷ್ಟ ಒಂದು ವರ್ಷದ ವರೆಗೆ ನಟ ದರ್ಶನ್ ಜೈಲಿನಲ್ಲೇ ಇರಬೇಕಿದೆ. ಒಂದೊಮ್ಮೆ ಒಂದು ವರ್ಷದ ಒಳಗೆ 60 ಸಾಕ್ಷ್ಯಗಳ ವಿಚಾರಣೆ ನಡೆಸಲಿಲ್ಲವಾದರೆ ಜಾಮೀನು ಅರ್ಜಿಯನ್ನು ಪರಿಗಣಿಸಬಹುದಾಗಿ ಸುಪ್ರೀಂ ಹೇಳಿದೆ. ಇದೀಗ ವಕೀಲ ಬಾಲನ್ ಅವರು ಸುಪ್ರೀಂನ ತೀರ್ಪನ್ನು ವಿಶ್ಲೇಷಿಸಿದ್ದು, ಟಿವಿ9 ಜೊತೆಗೆ ಮಾತನಾಡಿರುವ ಅವರು, ಸುಪ್ರೀಂನ ಇಂದಿನ ತೀರ್ಪಿನಿಂದ ದರ್ಶನ್​​ಗೆ ಒಳ್ಳೆಯದೇ ಆಗಿದೆ. ಒಂದು ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ಅಸಾಧ್ಯ ಎಂದಿದ್ದಾರೆ. ವಕೀಲ…

Read More

3,500 ರೂಪಾಯಿಗೆ ಮನೆಗೆಲಸದವರು ಬೇಕಂತೆ! ಬೆಂಗಳೂರು ಹೆಚ್.ಆರ್ ಕನ್ಸಲ್ಟೆಂಟ್‌ಗೆ ಸರಿಯಾಗಿ ಚಳಿ ಬಿಡಿಸಿದ ನೆಟ್ಟಿಗರು – Kannada News | Maid Salary Controversy: Bengaluru HR Consultant Faces Backlash Over Low Pay

ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಫ್ರೀಲ್ಯಾನ್ಸ್ ಹೆಚ್.ಆರ್ ಕನ್ಸಲ್ಟೆಂಟ್ ಒಬ್ಬರು ಮನೆಗೆಲಸದವರ ಸಂಬಳದ ಬಗ್ಗೆ ನೀಡಿದ “ಅಮಾನವೀಯ” ಹೇಳಿಕೆಯೊಂದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಮನೆಗೆಲಸದವರಿಗೆ ನೀಡುವ ಸಂಬಳವನ್ನು “ಎಂಜಿನಿಯರಿಂಗ್ ಪದವೀಧರರ” ಸಂಬಳಕ್ಕೆ ಹೋಲಿಸಿದ ಇವರ ಪೋಸ್ಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ವಸತಿ ಸಮುಚ್ಚಯದ (Apartment) ಆ್ಯಪ್‌ನಲ್ಲಿ ಪೋಸ್ಟ್ ಹಾಕಿದ್ದ ಈ ವ್ಯಕ್ತಿ, ಬೆಳಿಗ್ಗೆ ಮತ್ತು ಸಂಜೆ ಕೆಲಸಕ್ಕೆ ಬರಲು ಮನೆಗೆಲಸದವರು ಬೇಕಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ, ಎರಡು ಬಾರಿ ಕೆಲಸಕ್ಕೆ ಬರುವವರಿಗೆ ತಾವು…

Read More

ಬೆಂಗಳೂರು ಪ್ರಯಾಣಿಕರೇ ಎಚ್ಚರ! ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ – Kannada News | Bangalore BMTC: Prevent Mobile Theft on Buses with These Smart Security Measures

ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಯುವಕನೊಬ್ಬ ಸ್ವಯಂಪ್ರೇರಿತನಾಗಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಸ್ಸಿನ ಒಳಗೆ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ ಆತ, ಮೊಬೈಲ್ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಸುರಕ್ಷತಾ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಮೊಬೈಲ್ ಫೋನ್ ಅನ್ನು ಡ್ರೆಸ್‌ನ ಜೇಬಿನಲ್ಲಿ ಇಡುವ ಬದಲು, ಹ್ಯಾಂಡ್‌ಬ್ಯಾಗ್‌ನಲ್ಲಿ ಸುರಕ್ಷಿತವಾಗಿ ಇರಿಸಿ. ಬ್ಯಾಗ್‌ನ ಜಿಪ್ ಲಾಕ್ ಬಗ್ಗೆ ಗಮನವಿರಲಿ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಥವಾ ಹತ್ತುವಾಗ ಮೊಬೈಲ್ ಅನ್ನು ಕೈಯಲ್ಲೇ…

Read More

44ನೇ ವಯಸ್ಸಿಗೆ ಹೊಸ ಕ್ರಿಕೆಟ್ ಲೀಗ್ ಸೇರಿದ ಯುವರಾಜ್ ಸಿಂಗ್ – Kannada News | Dunes T20 League: Yuvraj Singh Joins Saudi Arabia’s New Cricket Extravaganza

ವಿಶ್ವದಾದ್ಯಂತ ಐಪಿಎಲ್ ಮಾದರಿಯ ಟಿ20 ಲೀಗ್‌ಗಳ ಅಬ್ಬರ ಜೋರಾಗಿದೆ. ಭಾರತ, ಆಸ್ಟ್ರೇಲಿಯಾ, ಅಮೆರಿಕದ ಬೆನ್ನಲ್ಲೇ ಇದೀಗ ಸೌದಿ ಅರೇಬಿಯಾ ಕೂಡ ಕ್ರಿಕೆಟ್ ಲೀಗ್ ಆರಂಭಿಸಲು ಮುಂದಾಗಿದೆ. ‘ಡ್ಯೂನ್ಸ್ ಟಿ20 ಲೀಗ್’ ಎಂದು ಈ ಲೀಗ್​​ಗೆ ಹೆಸರು ಇಡಲಾಗಿದ್ದು, ಪ್ರಸಕ್ತ ವರ್ಷದ ಅಕ್ಟೋಬರ್ ಎರಡನೇ ವಾರದಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಯುವರಾಜ್​ ಸಿಂಗ್ ಅವರು (Yuvaraj Singh) ಈ ಲೀಗ್ ಸೇರಿದ್ದಾರೆ. ಯುವರಾಜ್ ಸಿಂಗ್ ಅವರು ಈ ಲೀಗ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ….

Read More

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣ, ಬೆಂಗಳೂರು ಸೇರಿ ಹಲವೆಡೆ ದಾಳಿ! – Kannada News | CBI Raids Anil Ambani’s Reliance Group: Rs 27,337 Crore Fraud Probe in Bengaluru, Mumbai

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್ ಬೆಂಗಳೂರು, ಮೇ 15: ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ಎಲ್‌ಐಸಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಅನಿಲ್ ಅಂಬಾನಿ (Anil Ambani) ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಮೇ 14) ಬೆಂಗಳೂರು, ಮುಂಬೈ ಮತ್ತು ಗುರುಗ್ರಾಮದ ಏಳು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ಶೋಧ ನಡೆಸಿದ್ದಾರೆ. ಮುಖ್ಯಾಂಶಗಳು ರಿಲಯನ್ಸ್…

Read More

ಒರಾಕಲ್ ಲೇಆಫ್; 32,000 ಜನರನ್ನು ಕೆಲಸದಿಂದ ತೆಗೆದಿದ್ದಾಯ್ತು; ಕ್ಯಾಂಪಸ್ ಪ್ಲೇಸ್ಮೆಂಟ್ ನೇಮಕಾತಿಗಳಿಗೆ ಆಫರ್ ವಾಪಸ್ – Kannada News | Oracle Withdraws IIT/NIT Offers After Layoffs: Future of Tech Graduates at Risk

ಒರಾಕಲ್ ಉದ್ಯೋಗ ರದ್ದುImage Credit source: AI/Mediaforge/TV9 ನವದೆಹಲಿ, ಮೇ 15: ಇತ್ತೀಚೆಗಷ್ಟೇ 30,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೆರಿಕ ಮೂಲದ ಒರಾಕಲ್ ಸಂಸ್ಥೆ (Oracle) ಇದೀಗ ಹೊಸ ನೇಮಕಾತಿಗಳನ್ನು ರದ್ದುಗೊಳಿಸುವ ಕ್ರಮ ತೆಗೆದುಕೊಂಡಿದೆ. ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ (IIT Hyderabad, Kanpur, Kharagpur) ಮತ್ತು ಎನ್‌ಐಟಿ (NIT Warangal ಸೇರಿದಂತೆ) ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ನೀಡಿದ್ದ ಫುಲ್-ಟೈಮ್ ಉದ್ಯೋಗದ ಆಫರ್‌ಗಳನ್ನು ಕೊನೆಯ ಕ್ಷಣದಲ್ಲಿ ವಾಪಸ್ ಪಡೆದಿದೆ. ಸುಮಾರು 50ಕ್ಕೂ…

Read More