All posts by nagaraj11081993

ಕೊಲ್ಲಿ ದೇಶಗಳ ಮೇಲೆ ಇರಾನ್​ನಿಂದ ಮುಂದುವರಿದ ದಾಳಿ; ಕುವೇತ್ ಏರ್​ಪೋರ್ಟ್ ಮೇಲೂ ದಾಳಿ

ಕೊಲ್ಲಿ ದೇಶಗಳ ಮೇಲೆ ಇರಾನ್​ನಿಂದ ಮುಂದುವರಿದ ದಾಳಿ; ಕುವೇತ್ ಏರ್​ಪೋರ್ಟ್ ಮೇಲೂ ದಾಳಿ

ನವದೆಹಲಿ, ಮಾರ್ಚ್ 8: ಅಮೆರಿಕದ ನೆಲೆಗಳನ್ನು ಹೊಂದಿರುವ ವಿವಿಧ ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ವೈಮಾನಿಕ ದಾಳಿಗಳನ್ನು (Iran Attacks) ಮುಂದುವರಿಸಿದೆ. ಕುವೇತ್, ಬಹರೇನ್, ಕತಾರ್, ಸೌದಿ ಅರೇಬಿಯಾ, ಯುಎಇ, ಲೆಬನಾನ್ ದೇಶಗಳ ಮೇಲೆ ಇರಾನ್​ನಿಂದ ಡ್ರೋನ್, ಮಿಸೈಲ್​ಗಳಿಂದ ದಾಳಿಗಳಾಗಿವೆ. ನೆರೆಯ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್​ಕಿಯನ್ ಭರವವಸೆ ನೀಡಿದ ಒಂದೇ ದಿನದಲ್ಲಿ ಈ ಸಾಲು ಸಾಲು ದಾಳಿಗಳಾಗಿರುವುದು ಗಮನಾರ್ಹ.

ಕುವೇತ್ ಏರ್​ಪೋರ್ಟ್​ನಲ್ಲಿರುವ ಇಂಧನ ಟ್ಯಾಂಕ್​ಗಳನ್ನು ಗುರಿಯಾಗಿಸಿ ಇರಾನ್​ನಿಂದ ಡ್ರೋನ್ ದಾಳಿಯಾಗಿದೆ. ಇದರಿಂದ ಫುಯೆಲ್ ಟ್ಯಾಂಕ್ ಹೊತ್ತಿ ಉರಿಯುತ್ತಿದೆ. ಕುವೇತ್​ನ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಯತ್ನಿಸುತ್ತಿದೆ. ಇದೇ ವೇಳೆ, ಕುವೇತ್​ನಲ್ಲಿ ಮುನ್ನೆಚ್ಚರಿಕೆಯಾಗಿ ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅಲ್ಲಿನ ತೈಲ ಕಂಪನಿ ಹೇಳಿದೆ.

ಇದನ್ನೂ ಓದಿ: “ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ”: ಇಂದೇ ಆಗುತ್ತ ಇರಾನ್​​​ನ ಸರ್ವನಾಶ? ಮಹತ್ವದ ಹೇಳಿಕೆ ನೀಡಿದ ಟ್ರಂಪ್

ಕತಾರ್ ಮೇಲೆ 10ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಿಂದ ದಾಳಿಯಾಗಿದೆ. ಆದರೆ, ಈ ಮಿಸೈಲ್​ನಗಳನ್ನು ಕತಾರ್​ನ ಡಿಫೆನ್ಸ್ ಸಿಸ್ಟಂಗಳು ತಡೆಯಲು ಯಶಸ್ವಿಯಾಗಿವೆ. ಸೌದಿ ಅರೇಬಿಯಾ ಹಾಗೂ ಇತರ ಗಲ್ಫ್ ದೇಶಗಳೂ ಕೂಡ ಇರಾನ್​ನಿಂದ ಕ್ಷಿಪಣಿ ಮತ್ತು ಡ್ರೋನ್​ಗಳ ದಾಳಿ ಎದುರಿಸಿವೆ.

ಬಹಳಷ್ಟು ವಿದೇಶಿಗರು ಇರುವ ದುಬೈನಲ್ಲಿ ಹಲವೆಡೆ ಸ್ಫೋಟಗಳಾಗಿರುವುದು ವರದಿಯಾಗಿದೆ. ಫೆಬ್ರುವರಿ 28ರಂದು ಯುದ್ಧ ಶುರುವಾದಾಗಿನಿಂದ ದುಬೈ ಹಾಗೂ ಯುಎಇಯ ಇತರ ನಗರಗಳಲ್ಲಿ 221 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 1,300ಕ್ಕೂ ಅಧಿಕ ಡ್ರೋನ್​ಗಳು ಪತ್ತೆಯಾಗಿವೆ.

ಇದನ್ನೂ ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಇರಾನ್​ನ ಇಂಧನ ಪೂರೈಕೆ ಸ್ಥಗಿತಗೊಳಿಸಲು ಇಸ್ರೇಲ್ ಯತ್ನ

ಇಸ್ರೇಲ್ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಇರಾನ್​ನ ಹಲವು ತೈಲ ಸಂಗ್ರಹಗಾರಗಳನ್ನು ಗುರಿ ಮಾಡಿ ಈ ವಾರ ದಾಳಿ ಮಾಡಿವೆ. ಇರಾನ್​ನ ದೇಶೀಯ ಇಂಧನ ಪೂರೈಕೆ ಸರಪಳಿಗೆ ಭಂಗ ತರುವುದು ಇದರ ಉದ್ದೇಶ. ಮಿಲಿಟರಿ ಸರಕು ಸಾಗಣೆ, ನಾಗರಿಕ ಸಾರಿಗೆ, ವಿದ್ಯುತ್ ಉತ್ಪಾದನೆಗೆ ಅಡ್ಡಿ ಪಡಿಸುವುದು ಗುರಿ. ಇರಾನ್​ನ ಆಡಳಿತವನ್ನು ಕೆಳಗಿಸುವುದು ಅಂತಿಮ ಗುರಿ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ವ್ಯಕ್ತಿಗೆ ಮಹಿಳೆ ಬ್ಲ್ಯಾಕ್​​ಮೇಲ್​​: ದೂರು ದಾಖಲು

ಬೆಂಗಳೂರು, ಮಾರ್ಚ್​​ 08: 78 ವರ್ಷದ ವ್ಯಕ್ತಿಯೋರ್ವರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಅವರ ಜೊತೆ ಸ್ನೇಹ ಬೆಳೆಸಿ, ಈಗ ಬ್ಲ್ಯಾಕ್​​ಮೇಲ್​​ ಮಾಡುತ್ತಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಸಂತ್ರಸ್ತ ವ್ಯಕ್ತಿಯ ಸೊಸೆ ಈ ಬಗ್ಗೆ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಾರ್ಚ್​​ 3ರಂದೇ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿತ ಮಹಿಳೆ ಮೊದಲು ಫೇಸ್‌ಬುಕ್‌ನಲ್ಲಿ 78 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಬಳಿಕ ತನ್ನ ವಾಟ್ಸ್ಆಪ್ ಸಂಖ್ಯೆಯನ್ನು ನೀಡಿ ಅಲ್ಲಿ ಸಂಭಾಷಣೆಯನ್ನು ಮುಂದುವರಿಸಿದ್ದಾಳೆ. ಮಾಹಿತಿ ಪ್ರಕಾರ, ಆರಂಭದಲ್ಲಿ ಸ್ನೇಹಪೂರ್ಣವಾಗಿ ನಡೆದ ಮಾತುಕತೆ ನಂತರ ಆತ್ಮೀಯ ವಿಡಿಯೋ ಕರೆಗಳಿಗೆ ತಿರುಗಿದೆ ಎಂದು ಹೇಳಲಾಗಿದೆ. ಬಳಿಕ ಆರೋಪಿತ ಮಹಿಳೆ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದು, ಮೊದಲಿಗೆ 2 ಲಕ್ಷ ರೂ. ಹಣವನ್ನು ಬೇಡಿಕೆ ಇಟ್ಟು, ನಂತರ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್​​ ಮಾಡಿರೋದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಕುಟುಂಬಕ್ಕೆ ತೀವ್ರ ಮಾನಸಿಕ ಒತ್ತಡ ಉಂಟುಮಾಡಿದ್ದು, ವಯಸ್ಸಿನ ಕಾರಣದಿಂದ ಮಾವ ಸ್ವತಃ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಗೃಹಿಣಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 90 ವರ್ಷದ ವೃದ್ಧೆ ಮೇಲೆ ನಾಲ್ವರು ಮುಸುಕುಧಾರಿಗಳಿಂದ ಸಾಮೂಹಿಕ ಅತ್ಯಾಚಾರ

ಈ ಸಂಬಂಧ ಸೈಬರ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (C), ಸೆಕ್ಷನ್ 67 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿದ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಫೋನ್ ಸಂಖ್ಯೆಗಳ ಪರಿಶೀಲನೆ ಕಾರ್ಯವನ್ನು ಆರಂಭಿಸಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ. ಇದಲ್ಲದೆ, ಆರೋಪಿತ ಮಹಿಳೆ ವ್ಯಕ್ತಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿದ್ದಾಳೆ ಎಂದು ಆರೋಪಿಸಲಾಗಿದ್ದು, ಕುಟುಂಬದ ಸದಸ್ಯರನ್ನು ಆ ಖಾತೆಗೆ ಸೇರಿಸಿ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್​​ ಮಾಡಿ ಅವಮಾನ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಡಾರ್ಜಿಲಿಂಗ್​​ನಲ್ಲಿ ರಾಷ್ಟ್ರಪತಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ, ವರದಿ ಕೇಳಿದ ಗೃಹ ಕಾರ್ಯದರ್ಶಿ

ಕೋಲ್ಕತ್ತಾ, ಮಾರ್ಚ್​ 08: ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi murmu) ಅವರನ್ನು ಸ್ವಾಗತಿಸುವ ಶಿಷ್ಟಾಚಾರದಲ್ಲಿನ ಲೋಪಗಳು, ಡಾರ್ಜಿಲಿಂಗ್​​ನಲ್ಲಿ ನಡೆದ ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನದ ಸ್ಥಳ ಬದಲಾವಣೆ ಮತ್ತು ಸಂಬಂಧಿತ ವ್ಯವಸ್ಥೆಗಳ ಕುರಿತು ಇಂದು(ಮಾರ್ಚ್​8) ಸಂಜೆ 5 ಗಂಟೆಯ ಒಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರವು ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ಬದಲಾಯಿಸಿದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಉತ್ತರ ಬಂಗಾಳದಲ್ಲಿ ನಡೆದ ಅಂತರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿಗಳಿಗೆ ಸ್ವಾಗತ ಕೋರಲು ಮುಖ್ಯಮಂತ್ರಿಯಾಗಲಿ ಅಥವಾ ಅವರ ಸಂಪುಟದ ಯಾವುದೇ ಸಚಿವರಾಗಲಿ ಬಂದಿರಲಿಲ್ಲ.

ಇದನ್ನು ಪ್ರಶ್ನಿಸಿದ ರಾಷ್ಟ್ರಪತಿ ಮಮತಾ ಬ್ಯಾನರ್ಜಿ ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಥವಾ ಅವರ ಸಚಿವರು ಬರಲಿಲ್ಲವೇ? ನಾನು ಕೂಡ ಬಂಗಾಳದ ಮಗಳು, ಮಮತಾ ನನಗೆ ತಂಗಿಯಂತೆ. ಕಾರ್ಯಕ್ರಮದ ಸ್ಥಳವನ್ನು ಕೂಡ ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ, ಇದು ಯಾಕೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಮತ್ತಷ್ಟು ಓದಿ: ಮಮತಾ ನನ್ನ ಮೇಲೆ ಕೋಪಗೊಂಡಿದ್ದಾರೋ ಏನೋ..ಕಾರ್ಯಕ್ರಮಕ್ಕೆ ಬಾರದ ಬ್ಯಾನರ್ಜಿ ಬಗ್ಗೆ ದ್ರೌಪದಿ ಮುರ್ಮು ಬೇಸರ

ರಾಷ್ಟ್ರಪತಿಗಳ ಈ ಹೇಳಿಕೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಟಿಎಂಸಿ ಸರ್ಕಾರವು ಸಂತಾಲ್ ಸಂಸ್ಕೃತಿಯನ್ನು ಅತ್ಯಂತ ಹಗುರವಾಗಿ ಕಾಣುತ್ತಿದೆ ಮತ್ತು ರಾಷ್ಟ್ರಪತಿಗಳಿಗೆ ಅವಮಾನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದರು. ಗೃಹ ಸಚಿವ ಅಮಿತ್ ಶಾ ಕೂಡ, ಟಿಎಂಸಿ ವರ್ತನೆಯು ಅರಾಜಕತೆಯ ಹೊಸ ಕೀಳುಮಟ್ಟವನ್ನು ತಲುಪಿದೆ ಎಂದು ಟೀಕಿಸಿದ್ದಾರೆ.

ಸಮಾವೇಶ ನಡೆದ ಗೋಸೈನ್‌ಪುರದಲ್ಲಿ ಹೆಚ್ಚಿನ ಕುರ್ಚಿಗಳು ಖಾಲಿ ಇದ್ದವು. ಇಲ್ಲಿ ಅಂತಾರಾಷ್ಟ್ರೀಯ ಸಂತಾಲ್ ಸಮಾವೇಶ ನಡೆಯುತ್ತಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಖಾಲಿ ಇರುವ ಪ್ರೇಕ್ಷಕರನ್ನು ನೋಡಿದರೆ, ಸಂತಾಲ್ ಸಮುದಾಯಕ್ಕೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುತ್ತವೆಯೇ ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ರಾಷ್ಟ್ರಪತಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಲ್ಲಿನ ವಿಳಂಬ, ಸ್ಥಳ ಬದಲಾವಣೆ ಮತ್ತು ಪ್ರೋಟೋಕಾಲ್ ಪಾಲನೆಯಲ್ಲಿನ ಲೋಪಗಳ ಬಗ್ಗೆ ರಾಷ್ಟ್ರಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುರ್ಮು ಭಾಷಣ ಮಾಡುವಾಗ ಹಾಜರಿದ್ದ ಸ್ಥಳೀಯ ಬಿಜೆಪಿ ಸಂಸದ ರಾಜು ಬಿಸ್ತಾ, ರಾಜ್ಯ ಸರ್ಕಾರ ಕಾರ್ಯಕ್ರಮಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನ್ಯೂಝಿಲೆಂಡ್ ತಂಡದ ಬಲ, ಭಾರತ ತಂಡದ ಚಿಂತೆ

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಮ್ಯಾಚ್​ಗೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಅತ್ತ ಅಹಮದಾಬಾದ್​ನಲ್ಲಿ ಬ್ಯಾಟಿಂಗ್​ಗೆ ಪೂರಕವಾಗಿರುವ ಪಿಚ್​ ನಿರ್ಮಿಸಿರುವುದು ಬಹಿರಂಗವಾಗಿದೆ. ಹೀಗಾಗಿ ಈ ಮ್ಯಾಚ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸಬಹುದು.

ಈ ನಿರೀಕ್ಷೆಯ ನಡುವೆ ಮತ್ತೊಂದು ಅಂಕಿ ಅಂಶಗಳು ಕೂಡ ಬಹಿರಂಗವಾಗಿದೆ. ಈ ಅಂಕಿ ಅಂಶಗಳು ನ್ಯೂಝಿಲೆಂಡ್ ತಂಡದ ಬಲವಾಗಿದ್ದರೆ, ಭಾರತ ತಂಡದ ಅತೀ ದೊಡ್ಡ ಚಿಂತೆ ಎಂಬುದು ವಿಶೇಷ.

ಇಲ್ಲಿ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿರುವುದು ಆರಂಭಿಕರ ಪ್ರದರ್ಶನ. ಅಂದರೆ ಭಾರತ ತಂಡವು ಈ ಬಾರಿಯ ವಿಶ್ವಕಪ್​ನಲ್ಲಿ ಆರಂಭಿಕರಿಬ್ಬರಿಂದ ಉತ್ತಮ ಜೊತೆಯಾಟದ ಆರಂಭವನ್ನೇ ಪಡೆದಿಲ್ಲ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು…

  • ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತದ ಆರಂಭಿಕ ಜೋಡಿಯ ಸರಾಸರಿ ಕೇವಲ 16.37 ರಷ್ಟಿದೆ. ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಜೋಡಿಯು ಈ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ.
  • ಸಂಜು ಸ್ಯಾಮ್ಸನ್ ಆರಂಭಿಕನಾಗಿ ಯಶಸ್ಸು ಸಾಧಿಸಿದರೂ ಅಭಿಷೇಕ್ ಶರ್ಮಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ.
  • ಟೀಮ್ ಇಂಡಿಯಾದ ಆರಂಭಿಕ ಜೋಡಿಯು ಬೇಗನೆ ಬೇರ್ಪಡುತ್ತಿರುವುದೇ ಇದೀಗ ಭಾರತ ತಂಡದ ಚಿಂತೆಗೆ ಕಾರಣವಾಗಿದೆ.

ಇದೇ ವೇಳೆ ನ್ಯೂಝಿಲೆಂಡ್ ತಂಡದ ಬಲವೇ ಅವರ ಆರಂಭಿಕ ಜೋಡಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಜೋಡಿಯು ಟೂರ್ನಿಯುದ್ದಕ್ಕೂ ಪ್ರಚಂಡ ಜೊತೆಯಾಟ ಪ್ರದರ್ಶಿಸಿದ್ದಾರೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್ ಅವರ ಸರಾಸರಿ ನೋಡುವುದಾದರೆ…

  • ಈ ಟೂರ್ನಿಯಲ್ಲಿ ಕಿವೀಸ್ ಆರಂಭಿಕ ಜೋಡಿಯ  77.16 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಂದರೆ ಮೊದಲ ವಿಕೆಟ್​ಗೆ ಫಿನ್ ಅಲೆನ್ ಮತ್ತು ಟಿಮ್ ಸೈಫರ್ಟ್​ ಅರ್ಧಶತಕದ ಜೊತೆಯಾಟವಾಡುತ್ತಾ ಬಂದಿದ್ದಾರೆ.
  • ಈ ಜೋಡಿಯು ಪವರ್​ಪ್ಲೇನಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿ ನ್ಯೂಝಿಲೆಂಡ್‌ಗೆ ಬಲಿಷ್ಠ ಅಡಿಪಾಯ ಹಾಕಿಕೊಟ್ಟಿದೆ.
  • ಫೈನಲ್ ಪಂದ್ಯದಲ್ಲಿ ಈ ಇಬ್ಬರಲ್ಲಿ ಒಬ್ಬರು ಕ್ರೀಸ್ ಕಚ್ಚಿ ನಿಂತರೂ ಟೀಮ್ ಇಂಡಿಯಾಗೆ ಅಪಾಯ ಕಟ್ಟಿಟ್ಟ ಬುತ್ತಿ.

ಇತ್ತೀಚಿನ ಪ್ರಮುಖ ಅಂಕಿಅಂಶಗಳು:

  • ಫಿನ್ ಅಲೆನ್ ಟೀಮ್ ಇಂಡಿಯಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ 80.00 ಸರಾಸರಿಯಲ್ಲಿ ರನ್​ಗಳಿಸಿದ್ದಾರೆ.
  • ಇಶಾನ್ ಕಿಶನ್ ನ್ಯೂಝಿಲೆಂಡ್ ವಿರುದ್ಧ 53.75 ಸರಾಸರಿ ಹೊಂದಿದ್ದಾರೆ.
  • ಅಭಿಷೇಕ್ ಶರ್ಮಾ ನ್ಯೂಝಿಲೆಂಡ್​ ವಿರುದ್ಧ 45.50 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
  • ಸಂಜು ಸ್ಯಾಮ್ಸನ್ ನ್ಯೂಝಿಲೆಂಡ್​ ವಿರುದ್ಧ 39.00 ಸರಾಸರಿ ಮಾತ್ರ ಹೊಂದಿದ್ದಾರೆ.

ಇದನ್ನೂ ಓದಿ: ಸೋಲಿನ ಪಾಠ… ಫೈನಲ್ ಪಂದ್ಯಕ್ಕೆ ಕೆಂಪು ಮತ್ತು ಕಪ್ಪು ಮಣ್ಣಿನ ಪಿಚ್​!

ಅಂದರೆ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದಲ್ಲಿ ಫಿನ್ ಅಲೆನ್ ಕಡೆಯಿಂದ ಪ್ರಚಂಡ ಪ್ರದರ್ಶನವನ್ನು ನಿರೀಕ್ಷಿಸಬಹುದು. ಇತ್ತ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕೂಡ ಕಿವೀಸ್ ವಿರುದ್ಧ ಉತ್ತಮ ಸರಾಸರಿ ಹೊಂದಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಯಾರು ಅಬ್ಬರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

Source link

‘ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ’: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋಗೆ ‘ಮಾರ್ಕ್’ ಸಿನಿಮಾದ ಹಾಡು ಬಳಸಿದ್ದಕ್ಕೆ ಡಾಗ್ ಸತೀಶ್ (Dog Satish) ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿನಯ್ ಗೌಡ, ರಜತ್ ಮುಂತಾದವರು ಸತೀಶ್ ಮೇಲೆ ಗರಂ ಆಗಿದ್ದರು. ಈ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆ ಬಗ್ಗೆ ಸತೀಶ್ ಮಾತಾಡಿದ್ದಾರೆ. ‘ಸತ್ರೂ ನಾನು ವಿಡಿಯೋ ಡಿಲೀಟ್ ಮಾಡಲ್ಲ. ನಾನು ಇರುವುದೇ ಹೀಗೆ. ತಪ್ಪು ಮಾಡಲ್ಲ. ತಪ್ಪು ಮಾಡಿದ್ದರೆ ನಾನು ಕ್ಷಮೆ ಕೇಳೋಕೆ ರೆಡಿ. ತಪ್ಪು ಮಾಡಿಲ್ಲ ಎಂದರೆ ಅದನ್ನು ಎಲ್ಲಿಯವರೆಗೆ ತೆಗೆದುಕೊಂಡು ಹೋಗಲು ನಾನು ಸಿದ್ಧ. ಎಫ್​ಐಆರ್ ಆಗುತ್ತಿದ್ದಂತೆಯೇ ವಿನಯ್ ಗೌಡ (Vinay Gowda) ರಾಜಿ ಅಂತ ಮಸೇಜ್ ಮಾಡಿದ್ದಾರೆ. ನನ್ನನ್ನು ಕೆಣಕುವಾಗ ಅವರು ಯೋಚನೆ ಮಾಡಬೇಕಿತ್ತು’ ಎಂದು ಡಾಗ್ ಸತೀಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯೆಲ್ ನಿವಾಸದಲ್ಲಿ ಹೋಳಿ ಸಂಭ್ರಮ ಹೇಗಿತ್ತು ನೋಡಿ!

ಬಾಗಲಕೋಟೆ, ಮಾರ್ಚ್​ 08: ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯೆಲ್ ಅವರ ನಿವಾಸದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮನೆಯ ಆವರಣದಲ್ಲಿ ರೇನ್ ಡ್ಯಾನ್ಸ್ ವ್ಯವಸ್ಥೆ ಮಾಡಲಾಗಿದ್ದು, ಅಧಿಕಾರಿಗಳು ಬಣ್ಣದ ಓಕುಳಿ ಆಡುತ್ತಾ ಕುಣಿದು ಕುಪ್ಪಳಿಸಿದರು. ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಶಶಿಧರ ಕುರೇರ, ಡಿವೈಎಸ್‌ಪಿ ಗಜಾನನ ಸುತಾರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಡ್ಯಾನ್ಸ್ ಮಾಡಿ ಹಬ್ಬದ ಸಂಭ್ರಮವನ್ನು ಎಂಜಾಯ್ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಮುಸ್ಲಿಂ ವಿರೋಧಿ ಪ್ರತಿಭಟನೆ, ನ್ಯೂಯಾರ್ಕ್ ಮೇಯರ್​ ಮಮ್ದಾನಿ ಮನೆ ಎದುರು ಸ್ಫೋಟಕಗಳ ಎಸೆದ ಪ್ರತಿಭಟನಾಕಾರರು

ನ್ಯೂಯಾರ್ಕ್​, ಮಾರ್ಚ್​ 08: ನ್ಯೂಯಾರ್ಕ್​ ಮೇಯರ್ ಜೋಹ್ರಾನ್ ಮಮ್ದಾನಿ ಮನೆ ಎದುರು ಪ್ರತಿಭಟನಾಕಾರರು ಸ್ಫೋಟಕಗಳನ್ನು ಎಸೆದಿರುವ ಘಟನೆ ನಡೆದಿದೆ. ಮುಸ್ಲಿಂ ವಿರೋಧಿ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ. ಈ ಘಟನೆಯು ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ ಯಾವುದೇ ಸೂಚನೆಗಳಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇಯರ್ ಜೊಹ್ರಾನ್ ಮಮ್ದಾನಿ ಅವರ ನಿವಾಸವಾದ ಗ್ರೇಸಿ ಮ್ಯಾನ್ಷನ್ ಮುಂದೆ ಸಾರ್ವಜನಿಕ ಮುಸ್ಲಿಂ ಪ್ರಾರ್ಥನೆ ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯಲ್ಲಿ 20 ಮಂದಿ ಭಾಗವಹಿಸಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಿಳಾ ದಿನಾಚರಣೆಗೆ ರಂಗೋಲಿ ಸ್ಪರ್ಧೆ! ಮಹಿಳಾ ಪೊಲೀಸರ ಕೈಯಿಂದ ಮೂಡಿದ ಚಿತ್ತಾರ ನೋಡಿ!

Source link

ಮಧ್ಯಪ್ರದೇಶ: 90 ವರ್ಷದ ವೃದ್ಧೆ ಮೇಲೆ ನಾಲ್ವರು ಮುಸುಕುಧಾರಿಗಳಿಂದ ಸಾಮೂಹಿಕ ಅತ್ಯಾಚಾರ

ಖಾಂಡ್ವಾ, ಮಾರ್ಚ್​ 08: 90 ವರ್ಷದ ವೃದ್ಧೆ ಮೇಲೆ ನಾಲ್ವರು ಮುಸುಕುಧಾರಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಆರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಸಮಯದಲ್ಲಿ ಗಾಯಗೊಂಡಿರುವ ಮಹಿಳೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ತನ್ನ ಹಳ್ಳಿಯ ಕೃಷಿ ಹೊಲದಲ್ಲಿ ಗುರುವಾರ ಸಂಜೆ ಮಹಿಳೆ ಒಬ್ಬಂಟಿಯಾಗಿದ್ದಾಗ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಸಂತ್ರಸ್ತ ಮಹಿಳೆ ಮರುದಿನ ಬೆಳಗ್ಗೆ ಬೇರೆ ಹಳ್ಳಿಯಲ್ಲಿ ವಾಸಿಸುವ ತನ್ನ ಮಗಳಿಗೆ ಘಟನೆಯ ಬಗ್ಗೆ ತಿಳಿಸಿದ್ದಾರೆ. ನಂತರ ಅವರು ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಮಹಿಳೆ ಮತ್ತು ಅವರ ಮಗಳಿಗೆ ಪೊಲೀಸರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ ಎಂದು ಖಾಂಡ್ವಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರೈ ಪಿಟಿಐಗೆ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ನಂತರ, ಪೊಲೀಸರು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 70 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ರೈ ಹೇಳಿದರು.

ಮತ್ತಷ್ಟು ಓದಿ: ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ ಜೈಲಿನಲ್ಲೇ ಕೊಳೆಯುವ ಶಿಕ್ಷೆ ವಿಧಿಸಿದ ಕೋರ್ಟ್

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 10,000 ರೂ. ಬಹುಮಾನ ನೀಡುವುದಾಗಿಯೂ ಪೊಲೀಸರು ಘೋಷಿಸಿದ್ದಾರೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತೆವಳುತ್ತಾ ಸಾಗಿದ ‘ದಿ ಕೇರಳ ಸ್ಟೋರಿ 2’ ಕಲೆಕ್ಷನ್; ವೀಕೆಂಡ್​ನಲ್ಲೂ ಏರಿಕೆ ಇಲ್ಲ

ಭಾರಿ ವಿವಾದದ ಮೂಲಕ ಸುದ್ದಿ ಆಗಿದ್ದ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ದೊಡ್ಡ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ. ಫೆಬ್ರವರಿ 27ರಂದು ಬಿಡುಗಡೆ ಆದ ಈ ಸಿನಿಮಾಗೆ ಹೇಳಿಕೊಳ್ಳುವಂತಹ ಓಪನಿಂಗ್ ಸಿಗಲಿಲ್ಲ. ಬಿಡುಗಡೆಯಾಗಿ 9 ದಿನಗಳು ಕಳೆದಿವೆ. ಮಾಡಿದ ವಿವಾದಕ್ಕೆ ಹೋಲಿಸಿದರೆ ಈವರೆಗೂ ಆಗಿರುವ ಕಲೆಕ್ಷನ್ ಕಡಿಮೆ. 9 ದಿನಗಳಲ್ಲಿ ಈ ಚಿತ್ರಕ್ಕೆ 30 ಕೋಟಿ ರೂಪಾಯಿ ಕಲೆಕ್ಷನ್ (The Kerala Story 2 Collection) ಆಗಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಕುಸಿಯುವ ಸೂಚನೆ ಸಿಕ್ಕಿದೆ.

2023ರಲ್ಲಿ ಬಂದಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಅದರ ಮುಂದುವರಿದ ಭಾಗವಾಗಿ ‘ದಿ ಕೇರಳ ಸ್ಟೋರಿ 2’ ಈಗ ರಿಲೀಸ್ ಆಗಿದೆ. ಈ ಚಿತ್ರಕ್ಕೆ ವಿಪುಲ್ ಅಮೃತ್​ಲಾಲ್ ಶಾ ಅವರು ಬಂಡವಾಳ ಹೂಡಿದ್ದಾರೆ. ಕಾಮ್ಯಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ರಿಲೀಸ್ ಆದಾಗ ವಿವಾದ ಶುರುವಾಗಿತ್ತು. ಚಿತ್ರದ ವಿರುದ್ಧ ಅನೇಕರು ಕೋರ್ಟ್​ ಮೆಟ್ಟಿಲು ಏರಿದ್ದರು.

ಮೊದಲ ದಿನ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದರಿಂದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಅಂದು ಕೇವಲ 75 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನ 4.65 ಕೋಟಿ ರೂಪಾಯಿ ಆದಾಯ ಬಂತು. ಮೂರನೇ ದಿನ 4.74 ಕೋಟಿ ರೂಪಾಯಿ ಆಯಿತು. ಆದರೆ ಮೊದಲ ಸೋಮವಾರ ಬರುತ್ತಿದ್ದಂತೆಯೇ ಈ ಸಿನಿಮಾದ ಕಲೆಕ್ಷನ್ ಮತ್ತೆ ಕುಸಿಯುತು.

2ನೇ ವೀಕೆಂಡ್​​ನಲ್ಲಿ ಕಲೆಕ್ಷನ್ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಕೂಡ ಸಾಧ್ಯವಾಗಿಲ್ಲ. 2ನೇ ಶನಿವಾರ ಅಂದಾಜು 3.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಷ್ಟೇ ಪ್ರಚಾರ ಸಿಕ್ಕಿದ್ದರೂ ಒಂದು ದಿನ ಕೂಡ ಈ ಸಿನಿಮಾದ ಕಲೆಕ್ಷನ್ 5 ಕೋಟಿ ರೂಪಾಯಿ ದಾಟಲು ಸಾಧ್ಯವಾಗಿಲ್ಲ. ತೆವಳುತ್ತಾ ಸಾಗುತ್ತಿರುವ ಈ ಸಿನಿಮಾಗೆ ಈವರೆಗೂ ಒಟ್ಟು 30 ಕೋಟಿ ರೂಪಾಯಿ ಆದಾಯ ಬಂದಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾದ ಶೀರ್ಷಿಕೆ ಬಗ್ಗೆ ತಕರಾರು; ರಾಜ್ಯದ ಹೆಸರು ಕೈಬಿಡಲು ಆಗ್ರಹ

ಈ ಸಿನಿಮಾದಿಂದ ಕೇರಳದ ಪ್ರತಿಷ್ಠೆಗೆ ಧಕ್ಕೆ ಆಗಿದೆ ಎಂಬ ಕಾರಣಕ್ಕೆ ಶೀರ್ಷಿಕೆಯನ್ನು ವಿರೋಧಿಸಲಾಗಿದೆ. ಕೇರಳದಲ್ಲಿ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕಾಗಿ ಜನರು ಕಾದಿದ್ದಾರೆ. ‘ಧುರಂಧರ್ 2’ ಬಿಡುಗಡೆ ಆದರೆ ‘ದಿ ಕೇರಳ ಸ್ಟೋರಿ 2’ ಸಿನಿಮಾ ಹೇಳ ಹೆಸರಿಲ್ಲದಂತೆ ಅಖಾಡದಿಂದ ಹೊರಬೀಳುವುದು ಖಚಿತ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link