All posts by nagaraj11081993

ಬೇಸಿಗೆಯಲ್ಲೂ ಕಾಶ್ಮೀರದಂತೆ ಕಂಡ ಕೊಪ್ಪಳ: ಥೇಟ್​​ ಮಲೆನಾಡಿನ ವೆದರ್​ ಎಂದ ಸಾರ್ವಕನಿಕರು

ಬೇಸಿಗೆಯಲ್ಲೂ ಕಾಶ್ಮೀರದಂತೆ ಕಂಡ ಕೊಪ್ಪಳ: ಥೇಟ್​​ ಮಲೆನಾಡಿನ ವೆದರ್​ ಎಂದ ಸಾರ್ವಕನಿಕರು

ಕೊಪ್ಪಳ, ಮಾರ್ಚ್​​ 08: ಜಿಲ್ಲೆಯ ಹಲವೆಡೆ ಬೇಸಿಗೆಯಲ್ಲೂ ಕಾಶ್ಮೀರವನ್ನು ನೆನಪಿಸುವಂತಹ ದಟ್ಟ ಮಂಜು ಕಂಡುಬಂದಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ 36 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕೊಪ್ಪಳದಲ್ಲಿ, ಕಂಡುಬಂದ ಚಳಿಯ ವಾತಾವರಣ ಜನರಿಗೆ ಮುದ ನೀಡಿದೆ. ಬೆಳಗ್ಗೆ ಗವಿಮಠದ ಪ್ರದೇಶಕ್ಕೆ ವಾಕಿಂಗ್ ಬಂದ ಜನರು ಮಂಜು ಮುಸುಕಿದ ವಾತಾವರಣದಲ್ಲಿಯೇ ಹೆಜ್ಜೆ ಹಾಕಿದ್ದು, ದಟ್ಟ ಮಂಜಿನಿಂದಾಗಿ ರಸ್ತೆಗಳು ಕಾಣದೆ ವಾಹನ ಸವಾರರು ಪರದಾಡಿದ ಪ್ರಸಂಗವೂ ವರದಿಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೋಲಿನ ಪಾಠ… ಫೈನಲ್ ಪಂದ್ಯಕ್ಕೆ ಕೆಂಪು ಮತ್ತು ಕಪ್ಪು ಮಣ್ಣಿನ ಪಿಚ್​!

T20 World Cup 2026: ಟಿ20 ವಿಶ್ವಕಪ್​ನ ಫೈನಲ್ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಿಚ್ ರೆಡಿಯಾಗಿದೆ. ಅದು ಸಹ 70% ಕೆಂಪು ಮಣ್ಣು ಮತ್ತು 30% ಕಪ್ಪು ಮಣ್ಣಿನಿಂದ ಕೂಡಿದ ಪಿಚ್ ಎಂಬುದು ವಿಶೇಷ. ಅಂದರೆ ಈ ಬಾರಿ ಮಿಶ್ರ ಮಣ್ಣಿನ ಪಿಚ್​ನಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ಐಸಿಸಿ ನಿರ್ಧರಿಸಿದೆ. ಅದರಂತೆ ಇದೀಗ ಮಿಶ್ರಿತ ಮಣ್ಣಿನ ಪಿಚ್ ಸಿದ್ಧವಾಗಿದ್ದು, ಈ ಪಿಚ್​ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ.

ಮಿಶ್ರ ಮಣ್ಣಿನ ಪಿಚ್: ಈ ಪಂದ್ಯಕ್ಕಾಗಿ ಅಹಮದಾಬಾದ್​ನ ಮೈದಾನದ 6ನೇ ಪಿಚ್​ ಅನ್ನು ಬಳಸಲಾಗುತ್ತಿದೆ. ಈ ಪಿಚ್​ ಅನ್ನು ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣದಿಂದ (70% ಕೆಂಪು ಮತ್ತು 30% ಕಪ್ಪು ಮಣ್ಣು) ನಿರ್ಮಿಸಲಾಗಿದೆ.

ವೇಗ ಮತ್ತು ಬೌನ್ಸ್: ಈ ಪಿಚ್​ನಲ್ಲಿ ಶೇ.70 ರಷ್ಟು ಕೆಂಪು ಮಣ್ಣು ಇರುವುದರಿಂದ ಪಿಚ್ ಗಟ್ಟಿಯಾಗಿರುತ್ತದೆ. ಇದರಿಂದ ಚೆಂಡು ವೇಗವಾಗಿ ಮತ್ತು ನಿಖರವಾದ ಬೌನ್ಸ್‌ನೊಂದಿಗೆ ಬ್ಯಾಟ್‌ಗೆ ಬರುತ್ತದೆ. ಇದು ಬ್ಯಾಟರ್‌ಗಳಿಗೆ ಶಾಟ್‌ಗಳನ್ನು ಆಡಲು ತುಂಬಾ ಸುಲಭ ಮಾಡಿಕೊಡುತ್ತದೆ.

ಬ್ಯಾಟಿಂಗ್ ಸ್ವರ್ಗ: ಈ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್‌ಗೆ ಪೂರಕವಾಗಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಂತೆ ಹೈ-ಸ್ಕೋರಿಂಗ್ ಪಂದ್ಯ ನಿರೀಕ್ಷಿಸಲಾಗಿದೆ.

ಪಿಚ್ ಸ್ಥಿರತೆ: ಈ ಪಿಚ್​ನಲ್ಲಿ ಶೇ.30 ರಷ್ಟು ಕಪ್ಪು ಮಣ್ಣು ಬಳಸಿರುವುದರಿಂದ ಪಿಚ್ ಬೇಗನೆ ಬಿರುಕು ಬಿಡುವುದಿಲ್ಲ. ಇದು ಪಂದ್ಯದ ಉದ್ದಕ್ಕೂ ಪಿಚ್ ಒಂದೇ ಸಮನಾಗಿ ಇರುವಂತೆ ನೋಡಿಕೊಳ್ಳುತ್ತದೆ, ಇದರಿಂದ ಬ್ಯಾಟಿಂಗ್ ಮಾಡುವುದು ಎರಡೂ ಇನ್ನಿಂಗ್ಸ್‌ಗಳಲ್ಲಿ ಸುಲಭವಾಗುತ್ತದೆ.

ವೇಗದ ಬೌಲರ್‌ಗಳಿಗೆ ಸಹಕಾರಿ: ಕೆಂಪು ಮಣ್ಣಿನ ಕಾರಣದಿಂದಾಗಿ ಆರಂಭಿಕ ಓವರ್‌ಗಳಲ್ಲಿ ವೇಗದ ಬೌಲರ್‌ಗಳಿಗೆ ಉತ್ತಮ ಸ್ವಿಂಗ್ ಮತ್ತು ಕ್ಯಾರಿ ಸಿಗಲಿದೆ.

ಸ್ಪಿನ್ನರ್‌ಗಳಿಗೆ ಸವಾಲು: ಈ ರೀತಿಯ ಮಿಶ್ರಿತ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಸ್ಪಿನ್ ಆಗುವುದಿಲ್ಲ. ಹಾಗಾಗಿ ಸ್ಪಿನ್ನರ್‌ಗಳು ವಿಕೆಟ್ ಪಡೆಯಲು ಹೆಚ್ಚು ಶ್ರಮಪಡಬೇಕಾಗುತ್ತದೆ.

ಹೈ-ಸ್ಕೋರಿಂಗ್ ಪಂದ್ಯ: ಫೈನಲ್ ಪಂದ್ಯಕ್ಕೆ ಬ್ಯಾಟ್ಸ್​ಮನ್​ಗಳಿಗೆ ಸಹಕಾರಿಯಾಗುವಂತಹ ಪಿಚ್ ಅನ್ನೇ ನಿರ್ಮಿಸಲಾಗಿದೆ. ಹೀಗಾಗಿ ಈ ಮ್ಯಾಚ್​ನಲ್ಲಿ ರನ್​ ಮಳೆ ನಿರೀಕ್ಷಿಸಬಹುದು. ಅದರಲ್ಳೂ 200+ ಸ್ಕೋರ್​ ಗಳಿಸುವುದು ಇಲ್ಲಿ ಕಷ್ಟವೇನಲ್ಲ.

ಟಾಸ್ ನಿರ್ಣಾಯಕ: ಇಬ್ಬನಿಯ ಪ್ರಭಾವದಿಂದಾಗಿ ಟಾಸ್ ಗೆದ್ದ ತಂಡವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹಿಂದಿನ ದಾಖಲೆ: ಅಹಮದಾಬಾದ್​ನಲ್ಲಿ ಆಡಲಾದ ಕೊನೆಯ ಪಂದ್ಯದಲ್ಲಿ ಕೆನಡಾ ವಿರುದ್ಧ ಸೌತ್ ಆಫ್ರಿಕಾ 213 ರನ್ ಗಳನ್ನು ಕಲೆಹಾಕಿದ್ದರು. ಹೀಗಾಗಿ ಮಿಶ್ರಿತ ಮಣ್ಣಿನ ಪಿಚ್​ನಲ್ಲಿ ಈ ಬಾರಿ ಕೂಡ ಬೃಹತ್ ಸ್ಕೋರ್​ ನಿರೀಕ್ಷಿಸಬಹುದು.

ಇದನ್ನೂ ಓದಿ: ಸದ್ದಡಗಿಸುವುದೇ ನಮ್ಮ ಗುರಿ: ಮಿಚೆಲ್ ಸ್ಯಾಂಟ್ನರ್

ಸೋಲಿನ ಪಾಠ: 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಬಳಸಿದ ನಿಧಾನಗತಿಯ ಕಪ್ಪು ಮಣ್ಣಿನ ಪಿಚ್‌ಗಿಂತ ಇದು ಭಿನ್ನವಾಗಿದೆ. ಭಾರತೀಯ ಬ್ಯಾಟರ್‌ಗಳ ಆಕ್ರಮಣಕಾರಿ ಆಟಕ್ಕೆ ಪೂರಕವಾಗಲೆಂದೇ ಈ ಬಾರಿ ಕೆಂಪು ಮಣ್ಣಿನ ಮಿಶ್ರಣವನ್ನು ಬಳಸಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ಆಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.

Source link

ಜಿಬಿಎಯ 5 ಪಾಲಿಕೆಗಳ ಚುನಾವಣೆ: ವಾರ್ಡ್ ವಾರು ಅಂತಿಮ ಮೀಸಲಾತಿ ಪ್ರಕಟ

ಬೆಂಗಳೂರು, ಮಾರ್ಚ್​​ 08: ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಭರದಿಂದ ನಡೆದಿದ್ದು, ವಾರ್ಡ್ ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 369 ವಾರ್ಡ್​​ಗಳಿಗೆ ನಗರಾಭಿವೃದ್ದಿ ಇಲಾಖೆ ಮೀಸಲಾತಿ ಅಂತಿಮಗೊಳಿಸಿದ್ದು, ಈ ಪೈಕಿ 176 ವಾರ್ಡ್​​ಗಳು ಮಹಿಳೆಯರಿಗೆ ಮೀಸಲಾಗಿವೆ. ಕರಡು ಪಟ್ಟಿಗೆ ಸಾರ್ವಜನಿಕರಿಂದ ವ್ಯಕ್ತವಾಗಿದ್ದ ಸಲಹೆ ಮತ್ತು ಸೂಚನೆಗಳ ಜೊತೆಗೆ ಸರ್ಕಾರದ ಜೊತೆಗೂ ಕೆಲ ವಿಚಾರಗಳನ್ನು ಚರ್ಚಿಸಿ, ಸೂಕ್ತವಾದವುಗಳನ್ನು ಆಯ್ದುಕೊಂಡು ಈ ಅಂತಿಮ ಮೀಸಲಾತಿಯನ್ನು ನಿಗದಿ ಮಾಡಲಾಗಿದೆ.

ಮೀಸಲಾತಿ ವಿವರ

ಬೆಂಗಳೂರು ಕೇಂದ್ರ ನಗರ ಪಾಲಿಕೆ

  • ಒಟ್ಟು ವಾರ್ಡ್​​ಗಳ ಸಂಖ್ಯೆ – 63
  • SC – 11 (5 ಮಹಿಳೆ)
  • ST – 1
  • ಹಿಂದುಳಿದ ವರ್ಗ(A) – 15 (ಮಹಿಳೆ 7)
  • ಹಿಂದುಳಿದ ವರ್ಗ(B) – 4 (ಮಹಿಳೆ 2)
  • ಸಾಮಾನ್ಯ – 32 (ಮಹಿಳೆ 16)
  • ಮಹಿಳೆಯರಿಗೆ ಒಟ್ಟು 30 ವಾರ್ಡ್​​ಗಳು ಮೀಸಲು

ಇದನ್ನೂ ಓದಿ: ಮೈತ್ರಿ ಪಕ್ಷಗಳ ನಡುವೆ ಲಯ ತಪ್ಪಿದ ತಾಳ ಮೇಳ; ನಾಯಕರ ನಡುವೆ ಇಲ್ವಂತೆ ಸಮನ್ವಯತೆ!

ಬೆಂಗಳೂರು ಪೂರ್ವ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 50
  • SC – 7 (ಮಹಿಳೆ 3)
  • ST – 1
  • ಹಿಂದುಳಿದ ವರ್ಗ (A) – 14 (ಮಹಿಳೆ 7)
  • ಹಿಂದುಳಿದ ವರ್ಗ (B) – 3 (ಮಹಿಳೆ 1)
  • ಸಾಮಾನ್ಯ – 25 (ಮಹಿಳೆ 12)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 23

ಬೆಂಗಳೂರು ಪಶ್ಚಿಮ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 112
  • SC – 9 (ಮಹಿಳೆ 4)
  • ST – 2 (ಮಹಿಳೆ 1)
  • ಹಿಂದುಳಿದ ವರ್ಗ (A) – 30 (ಮಹಿಳೆ 15)
  • ಹಿಂದುಳಿದ ವರ್ಗ (B) – 7 (ಮಹಿಳೆ 3)
  • ಸಾಮಾನ್ಯ – 64 (ಮಹಿಳೆ 32)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 55

ಬೆಂಗಳೂರು ಉತ್ತರ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 72
  • SC – 9 (ಮಹಿಳೆ 4)
  • ST – 2 (ಮಹಿಳೆ 1)
  • ಹಿಂದುಳಿದ ವರ್ಗ (A) – 19(ಮಹಿಳೆ 9)
  • ಹಿಂದುಳಿದ ವರ್ಗ (B) – 5(ಮಹಿಳೆ 2)
  • ಸಾಮಾನ್ಯ – 37 (ಮಹಿಳೆ 18)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು – 34

ಬೆಂಗಳೂರು ದಕ್ಷಿಣ ನಗರ ಪಾಲಿಕೆ

  • ಒಟ್ಟು ವಾರ್ಡ್ ಗಳ ಸಂಖ್ಯೆ – 72
  • SC – 7 (ಮಹಿಳೆ 3)
  • ST – 1
  • ಹಿಂದುಳಿದ ವರ್ಗ (A) – 19 ( =ಮಹಿಳೆ 9)
  • ಹಿಂದುಳಿದ ವರ್ಗ (B) – 5 (ಮಹಿಳೆ 2)
  • ಸಾಮಾನ್ಯ – 40 (ಮಹಿಳೆ 20)
  • ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್​​ಗಳು- 34

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಕೊನೆಗೂ ಹಿಮೋಫಿಲಿಯಾ ಫೀಡಿತರಿಗೆ ಅಂಗವಿಕಲತೆಯಿಂದ ಮುಕ್ತಿ; 57 ಸಾವಿರ ರೂ. ಇಂಜೆಕ್ಷನ್ ಉಚಿತ!

ದಾವಣಗೆರೆ, ಮಾರ್ಚ್​ 08: ಹಿಮೋಫಿಲಿಯಾ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಲಭ್ಯವಾಗಿದೆ. ಸುಮಾರು 57 ಸಾವಿರ ರೂ. ಮೌಲ್ಯದ ಎಮಿಸಿಜುಮ್ಯಾಬ್ (ಹೆಮ್ಲಿಬ್ರಾ) ಎಂಬ ಇಂಜೆಕ್ಷನ್ ಅನ್ನು ಇದೀಗ ಉಚಿತವಾಗಿ ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಈ ಯೋಜನೆಗೆ ಚಾಲನೆ ನೀಡಿದರು. ರಕ್ತ ಹೆಪ್ಪುಗಟ್ಟದ ಸಮಸ್ಯೆಯಿಂದ ಗಾಯವಾದಾಗ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಹಿಂದಿನ ವ್ಯವಸ್ಥೆಗೆ ಬದಲಾಗಿ, ಇದೀಗ ಗಾಯವಾಗುವ ಮೊದಲುಲೇ ತಿಂಗಳಿಗೆ ಒಮ್ಮೆ ಈ ಇಂಜೆಕ್ಷನ್ ನೀಡಲಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಸುಧಾರಿಸಿ ಅನಾವಶ್ಯಕ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ. ಹಿಮೋಫಿಲಿಯಾ ರೋಗಿಗಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವಲ್ಲಿ ಈ ಕ್ರಮ ಮಹತ್ವದ್ದಾಗಿದೆ. ಹಲವು ವರ್ಷಗಳ ಹೋರಾಟದ ನಂತರ ಸರ್ಕಾರದ ಈ ನಿರ್ಧಾರಕ್ಕೆ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೈತ್ರಿ ಪಕ್ಷಗಳ ನಡುವೆ ಲಯ ತಪ್ಪಿದ ತಾಳ ಮೇಳ: ನಾಯಕರ ನಡುವೆ ಇಲ್ವಂತೆ ಸಮನ್ವಯತೆ!

ಬೆಂಗಳೂರು, ಮಾರ್ಚ್​​ 08: ಮೈತ್ರಿ ಪಕ್ಷಗಳಾಗಿರು ಬಿಜೆಪಿ ಮತ್ತು ಜೆಡಿಎಸ್​​ ನಡುವೆ ಹಲವು ವಿಚಾರಗಳಲ್ಲಿ ಸಾಬೀತಾಗಿದ್ದ ಸಮನ್ವಯದ ಕೊರತೆ ಮತ್ತೆ ಸದ್ದು ಮಾಡಿದೆ. ನಿನ್ನೆ ಬಜೆಟ್ ಖಂಡಿಸಿ ಸರ್ಕಾರದ ವಿರುದ್ಧ ಹೋರಾಟದ ವಿಚಾರದಲ್ಲೂ ಉಭಯ ಪಕ್ಷಗಳ ನಾಯಕರ ನಡುವೆ ಒಮ್ಮತ ಇರಲಿಲ್ಲ. ಬಿಜೆಪಿ ಪ್ರತ್ಯೇಕವಾಗಿ ಹೋರಾಟ ನಡೆಸಿರುವ ಬಗ್ಗೆ ಜೆಡಿಎಸ್ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಬಜೆಟ್ ಖಂಡಿಸಿ ನಿನ್ನೆ ವಿಧಾನಸೌಧದಲ್ಲಿ ಚೊಂಬು ಹಿಡಿದು ಬಿಜೆಪಿ ಪ್ರತಿಭಟನೆ ನಡೆಸಿದ್ದರೆ, ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಬಿಜೆಪಿ ನಾಯಕರು ಯಾವುದೇ ಮಾಹಿತಿ ನೀಡಲಿಲ್ಲ. ಎಲ್ಲವನ್ನೂ ಪ್ಲ್ಯಾನ್​​ ಮಾಡಿ ಕೊನೆ ಕ್ಷಣದಲ್ಲಿ ಹೋರಾಟಕ್ಕೆ ಬನ್ನಿ ಎಂದು ನಾಮಕವಸ್ಥೆಗೆ ಕರೆಯುತ್ತಾರೆ. ಹೀಗಾಗಿ ನಾವು ಪ್ರತಿಭಟನೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಜೆಡಿಎಸ್ ನಾಯಕರಿಗೆ ದಳ ಶಾಸಕರು ದೂರು ನೀಡಿದ್ದಾರೆ. ಬಳಿಕ ಬಿಜೆಪಿ ಹೋರಾಟದಿಂದ ಅಂತರ ಕಾಯ್ದುಕೊಂಡ ಪ್ರಸಂಗ ನಡೆದಿದೆ.

ಮೈತ್ರಿ ನಾಯಕರ ಮುನಿಸಿನ ನಡುವೆ ಚರ್ಚೆ ಶಾಸಕ ಶರಣಗೌಡ ಕಂದಕೂರು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಹೆಚ್​​.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ರೆ 140-150 ಸ್ಥಾನ ಬರುತ್ತೆ. ಮೈತ್ರಿ ಇದ್ದರೂ ಇಲ್ಲದಿದ್ದರೂ ನಮ್ಮ ಸಿಎಂ ಅಭ್ಯರ್ಥಿ ಕುಮಾರಸ್ವಾಮಿ ಎಂದು ಹೇಳಿದ್ದಾರೆ. ಅಲ್ಲದೆ ಬಿಜೆಪಿಯವರು ನಿಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿ. ನಮ್ಮದು ಒಂದು ಸೈಡ್ ಲವ್ ಆಗಿದೆ. ನಾವು BJPಯವರನ್ನು ಪ್ರೀತಿಸುತ್ತೇವೆ, ಆದರೆ ಅವರು ನಮ್ಮನ್ನ ಪ್ರೀತಿಸ್ತಿಲ್ಲ. ಸಮನ್ವಯತೆಯಿಂದ ಹೋಗಿದ್ದಕ್ಕೆ MP ಚುನಾವಣೆಯಲ್ಲಿ 19 ಸ್ಥಾನ ಗೆದ್ವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: 10.15ಕ್ಕೇ ಸಿದ್ದರಾಮಯ್ಯ ಬಜೆಟ್ ಮಂಡನೆ ಏಕೆ? ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೊಟ್ಟರು ಅಚ್ಚರಿಯ ಕಾರಣ! ನಿಜವಿರಬಹುದೇ?

ಇನ್ನು ಅಧಿವೇಶನದ ವೇಳೆ ಸಮನ್ವಯ ಸಭೆ ಮಾಡಿಕೊಂಡು ಬರುತ್ತಿದ್ದೆವು. ಆದರೆ ನಿನ್ನೆಬಿಜೆಪಿ ಕಡೆಯಿಂದ ಸಮನ್ವಯ ಸಭೆ ಮಾಡುವ ಬಗ್ಗೆ ಏನೂ ಬಂದಿಲ್ಲ. ಅರ್ಧ ಗಂಟೆ ಮುಂಚಿತವಾಗಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ರು. ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನಮ್ಮ ಮೇಲೆ ಪ್ರೀತಿ, ಒಲವು ಇದೆ. ಕೆಲ ಬಿಜೆಪಿ ನಾಯಕರಿಂದ ಅವರೇ ಚಿವುಟಿ, ತೊಟ್ಟಿಲು ತೂಗುವಂತ ಕೆಲಸ ಆಗುತ್ತಿದೆ. ಕುಮಾರಸ್ವಾಮಿ ಸಿಎಂ ಆಗಲಿ ಎಂದು ರಾಜ್ಯದ ಜನ ಬಯಸುತ್ತಿದ್ದಾರೆ. ಅವರನ್ನು ನೋಡಿ ನಮ್ಮ ಪಕ್ಷಕ್ಕೆ ಮತ ಹಾಕುತ್ತಾರೆ. ಸಿಎಂ ಬಗ್ಗೆ ಮೋದಿ ತೀರ್ಮಾನ ಮಾಡ್ತಾರೆಂದು ದೇವೇಗೌಡರು ಹೇಳಿದ್ದಾರೆ. ಆದರೆ ನಾವು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುತ್ತೇವೆ. ಸಿಎಂ ಅಭ್ಯರ್ಥಿ ಬಗ್ಗೆ ಸರ್ವೆ ಮಾಡಿಸಿ ಬಿಜೆಪಿಯವರು ತೀರ್ಮಾನಿಸಲಿ ಎಂದು ಶಾಸಕ ಶರಣಗೌಡ ಕಂದಕೂರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಮಾರ್ಚ್ ಎರಡನೇ ವಾರದ ಭವಿಷ್ಯ ತಿಳಿಯಿರಿ

ಇದು 2026ರ ಮಾರ್ಚ್ ನ ಎರಡನೇ ವಾರ. ಕೆಲವು ಗ್ರಹಗಳ ಸಣ್ಣ ಸ್ಥಾನ ಬದಲಾವಣೆಯಿಂದ ಹಾಗೂ ಶುಕ್ರನ ರಾಶಿ ಪರಿವರ್ತನೆಯಿಂದ ಅನೇಕ ಶುಭಗಳು ನಮ್ಮದಾಗಲಿದೆ. ಒತ್ತಡದ ಸ್ಥಿತಿಗಳನ್ನು ನಿರ್ಮಾಣ ಮಾಡಿಕೊಳ್ಳದೇ ಇರುವವಂತೆ ನೋಡಿಕೊಳ್ಳಿ.

​ಮೇಷ:

ಈ ವಾರ ನಿಮಗೆ ಮಿಶ್ರಫಲ. ವೃತ್ತಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು, ಆದರೆ ಧೈರ್ಯಗೆಡಬೇಡಿ. ಆರ್ಥಿಕವಾಗಿ ಸಾಧಾರಣ ಸುಧಾರಣೆ ಕಂಡುಬರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಸ್ನೇಹಿತರ ಬೆಂಬಲ ಸಿಗಲಿದೆ. ಕೋಪ ನಿಯಂತ್ರಿಸುವುದು ಉತ್ತಮ.

​ವೃಷಭ:

ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಬರಬೇಕಾದ ಬಾಕಿ ಹಣ ಕೈಸೇರಲಿದೆ. ಭೂಮಿ ಅಥವಾ ವಾಹನ ಖರೀದಿಯ ಚಿಂತನೆ ನಡೆಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಸಮಯ ಕಳೆಯಲು ಇದು ಸಕಾಲ.

​ಮಿಥುನ:

ಕೆಲಸದ ಒತ್ತಡ ಹೆಚ್ಚಾಗಬಹುದು, ಸಂಘಟಿತರಾಗಿರುವುದು ಮುಖ್ಯ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಶತ್ರುಗಳ ಬಗ್ಗೆ ಜಾಗರೂಕರಾಗಿರಿ. ವಿದೇಶ ಪ್ರಯಾಣದ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆಯಿದೆ.

ಕರ್ಕಾಟಕ:

ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇದು ಶುಭ ಸಮಯ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಪ್ರೇಮ ಜೀವನದಲ್ಲಿ ಮಧುರತೆ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ನಿಮ್ಮ ಮಾತಿನ ಮೇಲೆ ಹತೋಟಿ ಇರಲಿ.

​ಸಿಂಹ:

ವ್ಯವಹಾರದಲ್ಲಿ ಸ್ವಲ್ಪ ಏರಿಳಿತಗಳಿರಬಹುದು, ಎಚ್ಚರಿಕೆ ಅಗತ್ಯ. ಅನಗತ್ಯ ವಾದ-ವಿವಾದಗಳಿಂದ ದೂರವಿರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಕ್ಕಳ ಪ್ರಗತಿಯಿಂದ ನೆಮ್ಮದಿ ಸಿಗಲಿದೆ. ದೂರದ ಪ್ರಯಾಣವನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ. ಹೂಡಿಕೆಯ ವಿಷಯದಲ್ಲಿ ತಜ್ಞರ ಸಲಹೆ ಪಡೆಯಿರಿ.

​ಕನ್ಯಾ:

ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕ್ರಿಯಾತ್ಮಕ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಂಭವವಿದೆ. ಆಹಾರದ ವಿಚಾರದಲ್ಲಿ ಜಾಗ್ರತೆ ಇರಲಿ. ಆರ್ಥಿಕ ಪರಿಸ್ಥಿತಿ ಸದೃಢವಾಗಿರುತ್ತದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.

​ತುಲಾ:

ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಂಗಾತಿಯ ಬೆಂಬಲದಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹೂಡಿಕೆಯಿಂದ ಲಾಭವಾಗಲಿದೆ. ಹೊಸ ವ್ಯಕ್ತಿಗಳ ಪರಿಚಯ ವೃತ್ತಿಜೀವನಕ್ಕೆ ಸಹಕಾರಿ. ಕಣ್ಣಿನ ಸಮಸ್ಯೆ ಕಾಡಬಹುದು, ನಿರ್ಲಕ್ಷಿಸಬೇಡಿ. ಸಾಲ ನೀಡುವ ಮುನ್ನ ಆಲೋಚಿಸಿ. ಮನಸ್ಸಿಗೆ ಶಾಂತಿ ದೊರೆಯುವ ವಾರವಿದು.

​ವೃಶ್ಚಿಕ:

ಈ ವಾರ ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಹೆಗಲಿಗೇರಲಿವೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಾಲಬಾಧೆಯಿಂದ ಮುಕ್ತಿ ಪಡೆಯಲು ಹಾದಿ ಸುಗಮವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ದೈವಿಕ ಚಿಂತನೆಯಿಂದ ಮಾನಸಿಕ ಧೈರ್ಯ ಹೆಚ್ಚಲಿದೆ.

​ಧನು:

ಅದೃಷ್ಟ ನಿಮ್ಮ ಪರವಾಗಿದ್ದು, ಸ್ಥಗಿತಗೊಂಡ ಕೆಲಸಗಳು ಪುನರಾರಂಭಗೊಳ್ಳಲಿವೆ. ಆದಾಯದ ಹೊಸ ಮೂಲಗಳು ಗೋಚರಿಸುತ್ತವೆ. ಉನ್ನತ ವ್ಯಾಸಂಗ ಮಾಡುವವರಿಗೆ ಶುಭ ಕಾಲ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ನಿಮ್ಮ ಯೋಜನೆಗಳನ್ನು ಗೌಪ್ಯವಾಗಿಡಿ. ಪ್ರಯಾಣದಿಂದ ಲಾಭ ಉಂಟಾಗಲಿದೆ. ದಾನಧರ್ಮಗಳಲ್ಲಿ ಆಸಕ್ತಿ ತೋರುವಿರಿ.

​ಮಕರ:

ಕಠಿಣ ಪರಿಶ್ರಮದಿಂದ ಲಾಭ ಗಳಿಸುವಿರಿ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಆತುರದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮೋಜು-ಮಸ್ತಿಗಾಗಿ ಹಣ ವ್ಯಯ ಮಾಡುವಿರಿ. ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಯೋಗ ಮತ್ತು ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

​ಕುಂಭ:

ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರುತ್ತದೆ. ಹೊಸ ಉದ್ಯಮ ಆರಂಭಿಸಲು ತಜ್ಞರ ಮಾರ್ಗದರ್ಶನ ಪಡೆಯಿರಿ. ಹಳೆ ಬಾಕಿ ವಸೂಲಿಯಾಗಲಿದೆ. ಸ್ತ್ರೀಯರಿಗೆ ಹೆಚ್ಚಿನ ಗೌರವ ಸಿಗಲಿದೆ. ಸಂವಹನದಲ್ಲಿ ಸ್ಪಷ್ಟತೆ ಇರಲಿ. ಬೆನ್ನು ನೋವು ಅಥವಾ ಕೀಲು ನೋವು ಕಾಣಿಸಿಕೊಳ್ಳಬಹುದು. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ.

​ಮೀನ:

ಮಾನಸಿಕವಾಗಿ ಸ್ವಲ್ಪ ಗೊಂದಲವಿರಬಹುದು, ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ನೆರೆಹೊರೆಯವರೊಂದಿಗೆ ಸೌಹಾರ್ದತೆಯಿಂದಿರಿ. ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ. ಶುಭ ವಾರ್ತೆ ಕೇಳುವ ಸಾಧ್ಯತೆ ಇದೆ. ದೇವತಾ ದರ್ಶನ ಭಾಗ್ಯ ಕೂಡಿಬರಲಿದೆ. ತಾಳ್ಮೆಯಿಂದ ಕೆಲಸ ನಿರ್ವಹಿಸಿ.

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಉತ್ತರಾಖಂಡ್: ಮಹಿಳಾ ಟೂರಿಸ್ಟ್​ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಟ್ಯಾಕ್ಸಿ ಡ್ರೈವರ್, ಹೆದರಿ ಕಾಡಿನಲ್ಲಿ ರಾತ್ರಿ ಕಳೆದ ಯುವತಿ

ಉತ್ತರಾಖಂಡ, ಮಾರ್ಚ್ 08: ನೈನಿತಾಲ್​ಗೆ ಪ್ರವಾಸ(Tourism)ಕ್ಕೆಂದು ಬಂದಿದ್ದ ದೆಹಲಿಯ ಯುವತಿ ಮೇಲೆ ಟ್ಯಾಕ್ಸಿ ಡ್ರೈವರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಮಹಿಳೆ ನೈನಿತಾಲ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಹೋಗಬೇಕಿದ್ದ ಪ್ರದೇಶದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಬಲ್ದಿಯಾಖಾನ್ ಬಳಿ, ಟ್ಯಾಕ್ಸಿ ಚಾಲಕನೊಬ್ಬ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಮಹಿಳೆ ವಿರೋಧಿಸಿದಾಗ, ಚಾಲಕ ಆಕೆಯ ವಸ್ತುಗಳು ಮತ್ತು ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದಾನೆ. ಈ ಭೀಕರ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ, ಸ್ಥಳೀಯ ಪೊಲೀಸರು ರಕ್ಷಿಸುವವರೆಗೂ ಹತ್ತಿರದ ಕಾಡಿನಲ್ಲಿ ರಾತ್ರಿ ಕಳೆದಿದ್ದಾರೆ.

ಘಟನೆ ನಡೆದ 10 ಗಂಟೆಗಳಲ್ಲಿ ಆರೋಪಿಯನ್ನು ಉತ್ತರಾಖಂಡದ ಹಲ್ದ್ವಾನಿ ನಿವಾಸಿ ದೀಪಕ್ ಸಿಂಗ್ ಬೋರಾ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಪೊಲೀಸರು ಆತನ ವಿರುದ್ಧ ಅತ್ಯಾಚಾರ ಯತ್ನ ಸೇರಿದಂತೆ ಕಾನೂನಿನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ ಜೈಲಿನಲ್ಲೇ ಕೊಳೆಯುವ ಶಿಕ್ಷೆ ವಿಧಿಸಿದ ಕೋರ್ಟ್

ಪೊಲೀಸರು ಬಲಿಪಶುವಿನ ಕದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಘಟನೆಯಲ್ಲಿ ಬಳಸಲಾದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಏತನ್ಮಧ್ಯೆ, ಶನಿವಾರ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ದೆಹಲಿಯವರಾದ ಯುವತಿ ರಾತ್ರಿ ಕಥ್ಗೋಡಮ್ ನಿಂದ ನೈನಿತಾಲ್ ಗೆ ಟ್ಯಾಕ್ಸಿಯಲ್ಲಿ ಹೊರಟಿದ್ದರು. ಬಾಲ್ಡಿಯಾಖಾನ್ ಬಳಿ, ಟ್ಯಾಕ್ಸಿ ಚಾಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅತ್ಯಾಚಾರ ಮತ್ತು ಹಲ್ಲೆಗೆ ಯತ್ನಿಸಿದ್ದಾನೆ. ಯುವತಿ ತಪ್ಪಿಸಿಕೊಂಡು ಕಾಡಿಗೆ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ನೈನಿತಾಲ್ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿಸಿ ತಿಳಿಸಿದ್ದಾರೆ.

ಮಹಿಳೆಯರು ಮತ್ತು ಪ್ರವಾಸಿಗರ ಸುರಕ್ಷತೆ ನಮ್ಮ ಆದ್ಯತೆಯಾಗಿದ್ದು, ಅಂತಹ ಅಪರಾಧಗಳನ್ನು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link

ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿ ಸ್ನೇಹಾಗೆ 4 ಕೋಟಿ ರೂ. ಕಾರು ಕೊಟ್ಟ ಅಲ್ಲು ಅರ್ಜುನ್

ಅಲ್ಲು ಅರ್ಜುನ್ (Allu Arjun) ಸಹೋದರ ಮತ್ತು ನಾಯಕ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ವಿವಾಹ ಸಮಾರಂಭವು ಅದ್ಧೂರಿಯಾಗಿ ನಡೆಯಿತು. ಶುಕ್ರವಾರ (ಮಾರ್ಚ್ 05) ಹೈದರಾಬಾದ್‌ನಲ್ಲಿ ನಡೆದ ಈ ಅದ್ದೂರಿ ವಿವಾಹದಲ್ಲಿ ಎರಡೂ ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರು ಮತ್ತು ಅನೇಕ ಚಲನಚಿತ್ರ ಗಣ್ಯರು ಭಾಗವಹಿಸಿದ್ದರು. ವಿಶೇಷವಾಗಿ ಇಡೀ ಮೆಗಾ ಕುಟುಂಬ ಅಲ್ಲು ಸಿರೀಶ್ ಅವರ ಅದ್ದೂರಿ ವಿವಾಹದಲ್ಲಿ ಸಡಗರದಿಂದ ಭಾಗವಹಿಸಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಮಧ್ಯೆ ಮತ್ತೊಂದು ವಿಶೇಷ ಘಟನೆ ನಡೆದಿದೆ.

ಅಲ್ಲು ಅರ್ಜುನ್ ಅವರ ವಿವಾಹದ ದಿನದಂದು ಅಲ್ಲು ಸಿರೀಶ್ ಕೂಡ ಮದುವೆ ಮಂಟಪವನ್ನು ಪ್ರವೇಶಿಸಿದ್ದು ಗಮನಾರ್ಹ. ಇದರೊಂದಿಗೆ, ಅಲ್ಲು ಸಿರೀಶ್ ಮತ್ತು ಅಲ್ಲು ಅರ್ಜುನ್ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳು ಮತ್ತು ಅಭಿನಂದನೆಗಳ ಸುರಿಮಳೆಯಾಯಿತು. 2011ರಲ್ಲಿ ವಿವಾಹವಾದ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಶುಕ್ರವಾರ ತಮ್ಮ 15 ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.

ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಜೊತೆ ವಿವಾಹ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್

ಈ ಸಂದರ್ಭದಲ್ಲಿ, ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾ ರೆಡ್ಡಿಗೆ ಮರೆಯಲಾಗದ ಉಡುಗೊರೆಯನ್ನು ನೀಡಿದರು. ಅಲ್ಲು ಅರ್ಜುನ್ ತಮ್ಮ ಪತ್ನಿಯ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು ಮತ್ತು ಅವರಿಗೆ ಮರ್ಸಿಡಿಸ್-ಎಎಂಜಿ ಮಾದರಿಯ ಕಾರನ್ನು ಉಡುಗೊರೆಯಾಗಿ ನೀಡಿದರು. ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಬೆಂಜ್ ಎಎಂಜಿ ಮಾಡೆಲ್ ಕಾರಿನ ಪ್ರಸ್ತುತ ಮಾರುಕಟ್ಟೆ ಬೆಲೆ ಸುಮಾರು 4-5 ಕೋಟಿ ರೂ. ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಪ್ರೇಮ ವಿವಾಹ ಆದರು. ಅವರು 2011ರಲ್ಲಿ ವಿವಾಹವಾದರು. ಈಗ ಅವರಿಗೆ ಅಯಾನ್ ಮತ್ತು ಅರ್ಹಾ ಎಂಬ ಮಕ್ಕಳಿದ್ದಾರೆ. ಸಿನಿಮಾಗಳ ವಿಷಯಕ್ಕೆ ಬಂದರೆ, ಅಲ್ಲು ಅರ್ಜುನ್ ಪ್ರಸ್ತುತ ಅಟ್ಲೀ ಕುಮಾರ್ ನಿರ್ದೇಶನದ ಪ್ಯಾನ್ ವರ್ಲ್ಡ್ ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಲೋಕೇಶ್ ಕನಕರಾಜ್ ಜೊತೆ ಒಂದು ಸಿನಿಮಾಕ್ಕೂ ಅವರು ಕಮಿಟ್ ಆಗಿದ್ದಾರೆ. ಪ್ರಸ್ತುತ, ಅದರ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾಗಳಿಂದ ಹೆಚ್ಚಿನ ಅಪ್‌ಡೇಟ್‌ಗಳು ಶೀಘ್ರದಲ್ಲೇ ಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ 2 ದಿನಗಳಲ್ಲಿ 16 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ

ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಕಳಪೆ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 198 ರನ್​ಗಳಿಸಿ ಆಲೌಟ್ ಆಗಿತ್ತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ 323 ರನ್​ಗಳಿಸಿ ಆಲೌಟ್ ಆಯಿತು. 125 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 105 ರನ್​ಗಳಿಸಿದೆ.

ಅಂದರೆ ಮೊದಲ ಇನಿಂಗ್ಸ್​ನ ಹಿನ್ನಡೆಯನ್ನು ಸರಿದೂಗಿಸುವ ಮುನ್ನವೇ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಅತ್ತ ಇದೀಗ ಇಡೀ ಪಂದ್ಯದ ಮೇಲೆ ಆಸ್ಟ್ರೇಲಿಯಾ ತಂಡವು ಹಿಡಿತ ಸಾಧಿಸಿದ್ದು. ಮೂರನೇ ದಿನದಾಟದಲ್ಲೇ ಟೀಮ್ ಇಂಡಿಯಾವನ್ನು ಆಲೌಟ್ ಮಾಡುವ ವಿಶ್ವಾಸದಲ್ಲಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಅಲಿಸಾ ಹೀಲಿ (ನಾಯಕಿ), ಫೋಬೆ ಲಿಚ್‌ಫೀಲ್ಡ್, ಜಾರ್ಜಿಯಾ ವೋಲ್, ಎಲಿಸ್ ಪೆರ್ರಿ, ಅನ್ನಾಬೆಲ್ ಸದರ್ಲ್ಯಾಂಡ್,  ಬೆತ್ ಮೂನಿ (ವಿಕೆಟ್ ಕೀಪರ್), ಆಶ್ಲೀ ಗಾರ್ಡ್ನರ್, ತಹ್ಲಿಯಾ ಮೆಕ್‌ಗ್ರಾತ್,  ಅಲಾನಾ ಕಿಂಗ್,  ಲೂಸಿ ಹ್ಯಾಮಿಲ್ಟನ್, ಡಾರ್ಸಿ ಬ್ರೌನ್.

ಭಾರತ ಪ್ಲೇಯಿಂಗ್ 11: ಹರ್ಮನ್​ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಪ್ರತೀಕಾ ರಾವಲ್, ಜೆಮಿಮಾ ರೊಡ್ರಿಗಸ್,  ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸಯಾಲಿ ಸತ್ಘರೆ, ಕ್ರಾಂತಿ ಗೌಡ್.

Source link

‘ಧುರಂಧರ್ 2’ ಅಡ್ವಾನ್ಸ್ ಬುಕ್ಕಿಂಗ್‌: 24 ಗಂಟೆಯಲ್ಲಿ 8 ಕೋಟಿ ರೂ. ಬೆಲೆಯ ಟಿಕೆಟ್ ಸೇಲ್

ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧಾರ್ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಧುರಂಧರ್ 2’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಲು ಸಿದ್ಧವಾಗಿದೆ. ಮಾರ್ಚ್ 19ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಮಾರ್ಚ್ 18ರಂದೇ ಪೇಯ್ಡ್ ಪ್ರೀಮಿಯರ್ ಶೋಗಳು (Dhurandhar 2 Paid Premiere) ನಡೆಯಲಿವೆ. ಶನಿವಾರ (ಮಾರ್ಚ್ 7) ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಆರಂಭವಾದ ಮುಂಗಡ ಟಿಕೆಟ್ ಬುಕ್ಕಿಂಗ್‌ನಲ್ಲಿ ಈ ಸಿನಿಮಾ ಅಬ್ಬರದ ಸಾಧನೆ ಮಾಡಿದೆ. ಬುಕ್ಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ 87,000 ಟಿಕೆಟ್‌ಗಳು ಮಾರಾಟವಾಗಿವೆ.

ಪ್ರಮುಖ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಆದ ‘ಬುಕ್‌ ಮೈ ಶೋ’ ಒಂದರಲ್ಲೇ 87.81 ಸಾವಿರ ಟಿಕೆಟ್‌ಗಳು ಮಾರಾಟ ಆಗಿರುವುದು ಚಿತ್ರದ ಮೇಲಿರುವ ನಿರೀಕ್ಷೆಯನ್ನು ತೋರಿಸುತ್ತದೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಪ್ರತಿ ಗಂಟೆಗೆ ಸರಾಸರಿ 7,500 ಟಿಕೆಟ್‌ಗಳು ಮಾರಾಟವಾಗುತ್ತಿವೆ. ಇದರಿಂದಾಗಿ ಬುಕಿಂಗ್ ಶುರುವಾದ ಮೊದಲ ಎರಡು ಗಂಟೆಯಲ್ಲೇ 4 ಕೋಟಿ ಕಲೆಕ್ಷನ್ ಆಗಿದೆ.

Sacnilk ವರದಿಯ ಪ್ರಕಾರ, ಬುಕ್ಕಿಂಗ್ ಆರಂಭವಾದ ಕೇವಲ ಎರಡು ಗಂಟೆಗಳಲ್ಲಿ ಚಿತ್ರವು ವಿಶ್ವದಾದ್ಯಂತ 4 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಪಿವಿಆರ್, ಐನಾಕ್ಸ್ ಮತ್ತು ಸಿನಿಪೊಲಿಸ್‌ನಂತಹ ದೊಡ್ಡ ಮಲ್ಟಿಪ್ಲೆಕ್ಸ್ಗಳಿಂದಲೇ 2.50 ಕೋಟಿ ರೂಪಾಯಿ ಹರಿದುಬಂದಿದೆ. ದೆಹಲಿ-ಎನ್‌ಸಿಆರ್‌ನಂತಹ ನಗರಗಳಲ್ಲಿ ‘ಸೂಪರ್ ಬ್ಲಾಕ್‌ಬಸ್ಟರ್ ಪ್ಲಸ್’ ಎಂಬ ಹೊಸ ಪ್ರೀಮಿಯಂ ಕೆಟಗರಿ ಪರಿಚಯಿಸಲಾಗಿದ್ದು, ಅಲ್ಲಿ ಟಿಕೆಟ್ ದರ 2,500 ರೂಪಾಯಿ ವರೆಗೂ ಇದೆ.

ಮಾರ್ಚ್ 18ರಂದು ನಡೆಯಲಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಈಗಾಗಲೇ ಚಿತ್ರವು 8.06 ಕೋಟಿ ರೂಪಾಯಿ ಸಂಗ್ರಹಿಸಿದೆ. ಹಿಂದಿ ವರ್ಷನ್​ನಿಂದ 7 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ತೆಲುಗಿನಿಂದ 5 ಲಕ್ಷ ರೂ., ತಮಿಳಿನಿಂದ 4 ಲಕ್ಷ ರೂ. ಹಾಗೂ ಕನ್ನಡದಿಂದ 28,000 ರೂಪಾಯಿ ಕಲೆಕ್ಷನ್ ಆಗಿದೆ. ಇದು ಪೇಯ್ಡ್ ಪ್ರೀಮಿಯರ್​ಗೆ ಈವರೆಗೂ ಆಗಿರುವ ಕಲೆಕ್ಷನ್ ಲೆಕ್ಕ ಮಾತ್ರ. ಮೊದಲ ದಿನದ ಕಲೆಕ್ಷನ್ ಇನ್ನೂ ಜಾಸ್ತಿ ಆಗಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರಕ್ಕೆ ಮಾತ್ರ ಯುದ್ಧದ ಬಿಸಿ: ‘ಧುರಂಧರ್ 2’ ಸಿನಿಮಾಗೆ ಚಿಂತೆ ಇಲ್ಲ ಯಾಕೆ?

‘ಧುರಂಧರ್’ ಮೊದಲ ಭಾಗವು ಭಾರತದಲ್ಲಿ 28 ಕೋಟಿ ರೂಪಾಯಿಗಳ ಭರ್ಜರಿ ಓಪನಿಂಗ್ ಪಡೆದಿತ್ತು ಮತ್ತು ಒಟ್ಟಾರೆ ವಿಶ್ವದಾದ್ಯಂತ 1303.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿತ್ತು. ಈಗ ಎರಡನೇ ಭಾಗವು ಆ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುವ ಮುನ್ಸೂಚನೆ ನೀಡಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link