All posts by nagaraj11081993

‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’: ವಿಜಯಪುರ ದುರಂತ, ತಾಯಿಯ ಕಣ್ಣೀರ ಮಾತು – Kannada News | Vijayapura Tragedy: Minister MB Patil Announces 5 Lakh Compensation for Family Killed in House Collapse

ವಿಜಯಪುರ, ಮೇ 15: ಭಾರಿ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಸಂಭವಿಸಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗುರುನಾಥ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13) ಹಾಗೂ ಕೀರ್ತಿ ಬಡಿಗೇರ (9) ಮೃತಪಟ್ಟಿದ್ದು, ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಮೃತ ಗುರುನಾಥ ಬಡಿಗೇರ ತಾಯಿ ‘ಟಿವಿ9’ ಜತೆ ಮಾತನಾಡಿದ್ದು, ‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’ ಎಂದು ಕಣ್ಣೀರು ಹಾಕಿದ್ದಾರೆ.

ಏತನ್ಮಧ್ಯೆ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ ಸಚಿವರು, ಮೃತರ ಕುಟುಂಬಕ್ಕೆ ದೈರ್ಯ ತುಂಬ ಕೆಲಸ ಮಾಡಲಾಗುತ್ತದೆ. ಸರ್ಕಾರದಿಂದ ಮೃತರ ಕುಟುಂಬದವರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದರು. ಅಲ್ಲದೆ, ವೈಯುಕ್ತಿಕವಾಗಿಯೂ ನಾನೂ ಸಹಾಯ ಮಾಡುವೆ ಎಂದು ಭರವಸೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಕ್ಕಸ ಹೊಟ್ಟೆಗೆ ಅರೆಕಾಸು ಮಜ್ಜಿಗೆ; ದಿನಕ್ಕೆ 1,600 ಕೋಟಿ ನಷ್ಟವಿರುವ ತೈಲ ಕಂಪನಿಗಳಿಗೆ 3 ರೂ ಪೆಟ್ರೋಲ್ ಬೆಲೆ ಏರಿಕೆ ಸಾಲುತ್ತಾ? – Kannada News | Fuel Price Hike: Indian Oil Companies Face Huge Losses, Why Hikes Are Coming

ನವದೆಹಲಿ, ಮೇ 15: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಿದ್ದರೂ, ಭಾರತದಲ್ಲಿ ಪೆಟ್ರೋಲ್ (Petrol) ಮತ್ತು ಡೀಸೆಲ್ ಬೆಲೆಗಳನ್ನು ಸ್ಥಿರವಾಗಿಟ್ಟಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (HPCL, BPCL, IOCL) ಭಾರಿ ನಷ್ಟ ಅನುಭವಿಸುತ್ತಿವೆ ಎಂದು ವರದಿಯೊಂದು ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮಾಡದ ಕಾರಣ ತೈಲ ಕಂಪನಿಗಳು ಪ್ರತಿದಿನ ಸುಮಾರು 1,600 ಕೋಟಿ ರೂಗಳಿಗೂ ಹೆಚ್ಚು ನಷ್ಟ ಅನುಭವಿಸುತ್ತಿವೆ.

ಈ ನಷ್ಟವನ್ನು ಸರಿದೂಗಿಸಲು ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 3 ರೂ ಹೆಚ್ಚಿಸಲಾಗಿದೆ. ಆದರೆ, ತಜ್ಞರ ಪ್ರಕಾರ ಕಂಪನಿಗಳು ಅನುಭವಿಸುತ್ತಿರುವ ಒಟ್ಟಾರೆ ನಷ್ಟಕ್ಕೆ ಹೋಲಿಸಿದರೆ ಈ ಏರಿಕೆ ತುಂಬಾ ಸಣ್ಣದು.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪರಿಣಾಮದಿಂದ ತೈಲ ಬೆಲೆ ಏರಿಕೆ

ಇರಾನ್ ಮತ್ತು ಇಸ್ರೇಲ್/ಅಮೆರಿಕ ನಡುವಿನ ಯುದ್ಧದಂತಹ ಪರಿಸ್ಥಿತಿಯಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೂಲಕ ನಡೆಯುವ ತೈಲ ಸಾಗಾಟಕ್ಕೆ ಅಡ್ಡಿಯಾಗಿರುವುದು ಕಚ್ಚಾ ತೈಲದ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣ, ಬೆಂಗಳೂರು ಸೇರಿ ಹಲವೆಡೆ ದಾಳಿ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕಾರಣದಿಂದಾಗಿ ತೈಲ ಬೆಲೆ ಏರಿಕೆಯನ್ನು ತಡೆಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿತ್ತು. ಕಾಕತಾಳೀಯವೆಂಬಂತೆ, ಚುನಾವಣೆ ಮುಗಿದ ಬೆನ್ನಲ್ಲೇ ಈಗ ಬೆಲೆ ಏರಿಕೆಯ ಪ್ರಕ್ರಿಯೆ ಆರಂಭವಾಗಿದೆ.

ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈ ಬೆಲೆ ಏರಿಕೆ ಮತ್ತಷ್ಟು ಹೊರೆಯಾಗಲಿದೆ. ಸರಕು ಸಾಗಣೆ ವೆಚ್ಚ ಹೆಚ್ಚಾಗುವುದರಿಂದ ದಿನಬಳಕೆ ವಸ್ತುಗಳ ಬೆಲೆಯೂ ಏರುವ ಸಾಧ್ಯತೆಯಿದೆ.

ಮುಂದಿನ ದಿನಗಳಲ್ಲಿ 32 ರೂ ಬೆಲೆ ಏರಿಕೆ ಸಾಧ್ಯತೆ?

ತೈಲ ಕಂಪನಿಗಳ ನಷ್ಟವನ್ನು ಸಂಪೂರ್ಣವಾಗಿ ನೀಗಿಸಲು ಪೆಟ್ರೋಲ್ ಮೇಲೆ ಸುಮಾರು 28 ರೂ. ಮತ್ತು ಡೀಸೆಲ್ ಮೇಲೆ 32 ರೂ. ಗಳಷ್ಟು ಬೆಲೆ ಏರಿಕೆಯ ಅಗತ್ಯವಿದೆ ಎಂದು ಕೆಲವು ವರದಿಗಳು ಹೇಳಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ

ಒಟ್ಟಾರೆಯಾಗಿ, ಜಾಗತಿಕ ರಾಜಕೀಯ ಬೆಳವಣಿಗೆಗಳು ಮತ್ತು ತೈಲ ಕಂಪನಿಗಳ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಸರ್ಕಾರವು ಬೆಲೆ ಏರಿಕೆಯ ಕಠಿಣ ನಿರ್ಧಾರಕ್ಕೆ ಮುಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ಜಾಮೀನು ಅರ್ಜಿ ನಿರಾಕರಣೆಯಾಗಿದ್ದು ಒಳ್ಳೆಯದು: ವಕೀಲ ವಿಶ್ಲೇಷಣೆ – Kannada News | Lawyer Balan analyze Darshan’s bail rejection by Supreme Court

ನಟ ದರ್ಶನ್ (Darshan), ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ನಿರಾಕರಣೆಯಾಗಿದೆ. ಇದರಿಂದಾಗಿ ಕನಿಷ್ಟ ಒಂದು ವರ್ಷದ ವರೆಗೆ ನಟ ದರ್ಶನ್ ಜೈಲಿನಲ್ಲೇ ಇರಬೇಕಿದೆ. ಒಂದೊಮ್ಮೆ ಒಂದು ವರ್ಷದ ಒಳಗೆ 60 ಸಾಕ್ಷ್ಯಗಳ ವಿಚಾರಣೆ ನಡೆಸಲಿಲ್ಲವಾದರೆ ಜಾಮೀನು ಅರ್ಜಿಯನ್ನು ಪರಿಗಣಿಸಬಹುದಾಗಿ ಸುಪ್ರೀಂ ಹೇಳಿದೆ. ಇದೀಗ ವಕೀಲ ಬಾಲನ್ ಅವರು ಸುಪ್ರೀಂನ ತೀರ್ಪನ್ನು ವಿಶ್ಲೇಷಿಸಿದ್ದು, ಟಿವಿ9 ಜೊತೆಗೆ ಮಾತನಾಡಿರುವ ಅವರು, ಸುಪ್ರೀಂನ ಇಂದಿನ ತೀರ್ಪಿನಿಂದ ದರ್ಶನ್​​ಗೆ ಒಳ್ಳೆಯದೇ ಆಗಿದೆ. ಒಂದು ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ಅಸಾಧ್ಯ ಎಂದಿದ್ದಾರೆ. ವಕೀಲ ಬಾಲನ್ ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

3,500 ರೂಪಾಯಿಗೆ ಮನೆಗೆಲಸದವರು ಬೇಕಂತೆ! ಬೆಂಗಳೂರು ಹೆಚ್.ಆರ್ ಕನ್ಸಲ್ಟೆಂಟ್‌ಗೆ ಸರಿಯಾಗಿ ಚಳಿ ಬಿಡಿಸಿದ ನೆಟ್ಟಿಗರು – Kannada News | Maid Salary Controversy: Bengaluru HR Consultant Faces Backlash Over Low Pay

ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಫ್ರೀಲ್ಯಾನ್ಸ್ ಹೆಚ್.ಆರ್ ಕನ್ಸಲ್ಟೆಂಟ್ ಒಬ್ಬರು ಮನೆಗೆಲಸದವರ ಸಂಬಳದ ಬಗ್ಗೆ ನೀಡಿದ “ಅಮಾನವೀಯ” ಹೇಳಿಕೆಯೊಂದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಮನೆಗೆಲಸದವರಿಗೆ ನೀಡುವ ಸಂಬಳವನ್ನು “ಎಂಜಿನಿಯರಿಂಗ್ ಪದವೀಧರರ” ಸಂಬಳಕ್ಕೆ ಹೋಲಿಸಿದ ಇವರ ಪೋಸ್ಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ತಮ್ಮ ವಸತಿ ಸಮುಚ್ಚಯದ (Apartment) ಆ್ಯಪ್‌ನಲ್ಲಿ ಪೋಸ್ಟ್ ಹಾಕಿದ್ದ ಈ ವ್ಯಕ್ತಿ, ಬೆಳಿಗ್ಗೆ ಮತ್ತು ಸಂಜೆ ಕೆಲಸಕ್ಕೆ ಬರಲು ಮನೆಗೆಲಸದವರು ಬೇಕಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ, ಎರಡು ಬಾರಿ ಕೆಲಸಕ್ಕೆ ಬರುವವರಿಗೆ ತಾವು ಕೇವಲ 3,500 ರೂ. ನೀಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೆ, “ಒಂದು ಹೊತ್ತಿನ ಕೆಲಸಕ್ಕೆ 3,500 ರೂ. ಕೇಳುವವರನ್ನು ನನ್ನ ಬಳಿ ಕಳುಹಿಸಬೇಡಿ, 2,500 ರೂ. ಸರಿಯಾದ ದರ” ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದೆ.

ಈ ಕಮ್ಮಿ ಸಂಬಳದ ದರವನ್ನು ಸಮರ್ಥಿಸಿಕೊಳ್ಳಲು ಅವರು ವಿಚಿತ್ರ ಲೆಕ್ಕಾಚಾರ ನೀಡಿದ್ದರು. “ಒಂದು ವೇಳೆ ಮನೆಗೆಲಸದವರು ದಿನಕ್ಕೆ 10 ಮನೆಗಳಲ್ಲಿ ಕೆಲಸ ಮಾಡಿದರೆ ಅವರಿಗೆ ತಿಂಗಳಿಗೆ 25,000 ರೂ. ಸಿಗುತ್ತದೆ. ಇದು ಬಿಪಿಒ (BPO) ನೌಕರರು ಅಥವಾ ಎಂಜಿನಿಯರಿಂಗ್ ಪದವೀಧರರು ಪಡೆಯುವ ಸಂಬಳಕ್ಕಿಂತ ಹೆಚ್ಚು. ಆದ್ದರಿಂದ ನಾವು ರೇಟ್ ಕಂಟ್ರೋಲ್ ಮಾಡಬೇಕು,” ಎಂದು ನಿವಾಸಿಗಳಿಗೆ ಕರೆ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರು, ಮಂಗಳೂರಿನಲ್ಲಿ ಡ್ರಗ್ಸ್ ಬೇಟೆ, ಒಟ್ಟೂ 16 ಕೆಜಿಗೂ ಹೆಚ್ಚು ಗಾಂಜಾ ಸೀಜ್!

ಈ ಪೋಸ್ಟ್ ರೆಡಿಟ್ (Reddit) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಜನರು ಇವರ ನಡೆಯನ್ನು “ಕೀಳುಮಟ್ಟದ್ದು” ಎಂದು ಟೀಕಿಸಿದ್ದಾರೆ. “70 ಸಾವಿರ ಬಾಡಿಗೆ ಇರುವ ಫ್ಲಾಟ್‌ನಲ್ಲಿ ವಾಸಿಸುವ ಇವರು, ಬಡವರ ಹೊಟ್ಟೆ ಮೇಲೆ ಹೊಡೆಯುವ ಲೆಕ್ಕಾಚಾರ ಮಾಡುತ್ತಿದ್ದಾರೆ” ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:51 pm, Fri, 15 May 26

Source link

ಬೆಂಗಳೂರು ಪ್ರಯಾಣಿಕರೇ ಎಚ್ಚರ! ಬಸ್ಸಿನಲ್ಲಿ ಮೊಬೈಲ್ ಕಳವು ತಡೆಯಲು ಈ ಯುವಕನ ಐಡಿಯಾ ಫಾಲೋ ಮಾಡಿ – Kannada News | Bangalore BMTC: Prevent Mobile Theft on Buses with These Smart Security Measures

ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಯುವಕನೊಬ್ಬ ಸ್ವಯಂಪ್ರೇರಿತನಾಗಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬಸ್ಸಿನ ಒಳಗೆ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ ಆತ, ಮೊಬೈಲ್ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಸುರಕ್ಷತಾ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಮೊಬೈಲ್ ಫೋನ್ ಅನ್ನು ಡ್ರೆಸ್‌ನ ಜೇಬಿನಲ್ಲಿ ಇಡುವ ಬದಲು, ಹ್ಯಾಂಡ್‌ಬ್ಯಾಗ್‌ನಲ್ಲಿ ಸುರಕ್ಷಿತವಾಗಿ ಇರಿಸಿ. ಬ್ಯಾಗ್‌ನ ಜಿಪ್ ಲಾಕ್ ಬಗ್ಗೆ ಗಮನವಿರಲಿ. ಬಸ್ಸಿನಲ್ಲಿ ಪ್ರಯಾಣಿಸುವಾಗ ಅಥವಾ ಹತ್ತುವಾಗ ಮೊಬೈಲ್ ಅನ್ನು ಕೈಯಲ್ಲೇ ಗಟ್ಟಿಯಾಗಿ ಹಿಡಿದುಕೊಳ್ಳಿ. ಪ್ಯಾಂಟ್‌ನ ಹಿಂಬದಿಯ ಜೇಬಿನಲ್ಲಿ ಫೋನ್ ಇಡುವುದು ಅಪಾಯಕಾರಿ. ನಿಮ್ಮ ಫೋನ್‌ಗೆ ಕಡ್ಡಾಯವಾಗಿ ಸ್ಟ್ರಾಂಗ್ ಪಾಸ್‌ವರ್ಡ್, ಪಿನ್ (PIN) ಅಥವಾ ಪ್ಯಾಟರ್ನ್ ಲಾಕ್ ಅಳವಡಿಸಿ. ಇದು ಕಳ್ಳರಿಗೆ ಫೋನ್ ಬಳಸಲು ಅಡ್ಡಿಯಾಗುತ್ತದೆ. ನಿಮ್ಮ ಮಕ್ಕಳು ಅಥವಾ ಮನೆಯವರ ಸಹಾಯದಿಂದ ಫೋನ್‌ಗೆ ಸೆಕ್ಯೂರ್ ಲಾಕ್ ಮಾಡಿಸಿಕೊಳ್ಳಿ. ಪಾಸ್‌ವರ್ಡ್ ಅನ್ನು ಯಾರಿಗೂ ತಿಳಿಸಬೇಡಿ. ಫೋನಿನಲ್ಲಿ ಯಾವಾಗಲೂ Gmail Location Tracking (Find My Device) ಆನ್ ಇರಲಿ. ಒಂದು ವೇಳೆ ಫೋನ್ ಕಳ್ಳತನವಾದರೆ ಅದನ್ನು ಪತ್ತೆಹಚ್ಚಲು ಇದು ಸಹಕಾರಿಯಾಗುತ್ತದೆ. ಕಿಕ್ಕಿರಿದು ತುಂಬಿರುವ ಬಸ್ಸುಗಳಲ್ಲಿ ಸಣ್ಣ ಎಚ್ಚರಿಕೆ ಕೂಡ ನಿಮ್ಮನ್ನು ದೊಡ್ಡ ನಷ್ಟದಿಂದ ರಕ್ಷಿಸುತ್ತದೆ. ಈ ಜವಾಬ್ದಾರಿಯುತ ಯುವಕನ ಸಾಮಾಜಿಕ ಕಾಳಜಿಗೆ ಪ್ರಯಾಣಿಕರು ‘ಹ್ಯಾಟ್ಸ್ ಆಫ್’ ಎಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

44ನೇ ವಯಸ್ಸಿಗೆ ಹೊಸ ಕ್ರಿಕೆಟ್ ಲೀಗ್ ಸೇರಿದ ಯುವರಾಜ್ ಸಿಂಗ್ – Kannada News | Dunes T20 League: Yuvraj Singh Joins Saudi Arabia’s New Cricket Extravaganza

ವಿಶ್ವದಾದ್ಯಂತ ಐಪಿಎಲ್ ಮಾದರಿಯ ಟಿ20 ಲೀಗ್‌ಗಳ ಅಬ್ಬರ ಜೋರಾಗಿದೆ. ಭಾರತ, ಆಸ್ಟ್ರೇಲಿಯಾ, ಅಮೆರಿಕದ ಬೆನ್ನಲ್ಲೇ ಇದೀಗ ಸೌದಿ ಅರೇಬಿಯಾ ಕೂಡ ಕ್ರಿಕೆಟ್ ಲೀಗ್ ಆರಂಭಿಸಲು ಮುಂದಾಗಿದೆ. ‘ಡ್ಯೂನ್ಸ್ ಟಿ20 ಲೀಗ್’ ಎಂದು ಈ ಲೀಗ್​​ಗೆ ಹೆಸರು ಇಡಲಾಗಿದ್ದು, ಪ್ರಸಕ್ತ ವರ್ಷದ ಅಕ್ಟೋಬರ್ ಎರಡನೇ ವಾರದಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಯುವರಾಜ್​ ಸಿಂಗ್ ಅವರು (Yuvaraj Singh) ಈ ಲೀಗ್ ಸೇರಿದ್ದಾರೆ.

ಯುವರಾಜ್ ಸಿಂಗ್ ಅವರು ಈ ಲೀಗ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಸೌದಿ ಅರೇಬಿಯಾ ಕ್ರಿಕೆಟ್ ಅಸೋಸಿಯೇಷನ್ ಈ ಲೀಗ್‌ಗೆ ಹಸಿರು ನಿಶಾನೆ ತೋರಿಸಿದ್ದು, ಯುವರಾಜ್ ಅವರು ಮೆಂಟರ್ ಆಗಿರೋ ‘ಯುನಿಕ್ ಸ್ಪೋರ್ಟ್ಸ್ ಗ್ರೂಪ್’ ಮತ್ತು ‘ಪ್ರೋಲಿಥಿಕ್ ಟ್ಯಾಲೆಂಟ್ ಏಜೆನ್ಸಿ’ಯೊಂದಿಗೆ ಸೌತ್ ಏಷ್ಯಾ ನೆಟ್‌ವರ್ಕ್ ಲಿಮಿಟೆಡ್ ಕೈಜೋಡಿಸಿದೆ.

ಡ್ಯೂನ್ಸ್ ಟಿ20 ಲೀಗ್‌ನಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಜಾಗತಿಕ ಮಟ್ಟದ ಕ್ರಿಕೆಟ್ ದಿಗ್ಗಜರು ಮತ್ತು ಸೌದಿ ಅರೇಬಿಯಾದ ಉದಯೋನ್ಮುಖ ಆಟಗಾರರು ಒಂದೇ ವೇದಿಕೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಇದು ಕೇವಲ ಕ್ರೀಡೆಯಲ್ಲದೆ, ಜಾಗತಿಕ ಪ್ರೇಕ್ಷಕರಿಗೆ ವಿಶ್ವದರ್ಜೆಯ ಮನರಂಜನೆಯನ್ನು ನೀಡುವ ಉದ್ದೇಶವನ್ನು ಹೊಂದಿದೆ.

ತಮ್ಮ ಹೊಸ ಜವಾಬ್ದಾರಿಯ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್, ‘ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಬೆಳೆಯುತ್ತಿರುವ ಈ ಸಮಯದಲ್ಲಿ ಡ್ಯೂನ್ಸ್ ಟಿ20 ಲೀಗ್‌ನ ರಾಯಭಾರಿಯಾಗಿ ಸೇರಿಕೊಳ್ಳುತ್ತಿರುವುದು ನನಗೆ ತುಂಬಾ ಸಂತಸ ತಂದಿದೆ. ಹೊಸ ಮಾರುಕಟ್ಟೆಯಲ್ಲಿ ಕ್ರಿಕೆಟ್ ಬೆಳೆಸುವ ಮತ್ತು ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವ ಈ ದೃಷ್ಟಿಕೋನ ನನಗೆ ಇಷ್ಟವಾಯಿತು. ಅಂತರಾಷ್ಟ್ರೀಯ ದಂತಕಥೆಗಳು ಮತ್ತು ಯುವ ಪ್ರತಿಭೆಗಳು ಒಟ್ಟಾಗಿ ಆಡುವುದನ್ನು ನೋಡಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯುವರಾಜ್​ ಸಿಂಗ್​ಗೆ ಮಹತ್ವದ ಜವಾಬ್ದಾರಿ ವಹಿಸಿದ ಐಸಿಸಿ..!

ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಅನ್ನು ವೃತ್ತಿಪರ ಮಟ್ಟಕ್ಕೆ ಕೊಂಡೊಯ್ಯಲು ಈ ಲೀಗ್ ಭದ್ರ ಬುನಾದಿ ಹಾಕಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಜಗತ್ತಿನಾದ್ಯಂತ ವಿವಿಧ ದೇಶಗಳು ತಮ್ಮದೇ ಆದ ಲೀಗ್‌ಗಳನ್ನು ಹೊಂದಿರುವಾಗ, ಸೌದಿ ಅರೇಬಿಯಾದ ಈ ಪ್ರಯತ್ನವು ಕ್ರಿಕೆಟ್ ಭೂಪಟದಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಅನುಮಾನವಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್: 27 ಸಾವಿರ ಕೋಟಿ ರೂ. ವಂಚನೆ ಪ್ರಕರಣ, ಬೆಂಗಳೂರು ಸೇರಿ ಹಲವೆಡೆ ದಾಳಿ! – Kannada News | CBI Raids Anil Ambani’s Reliance Group: Rs 27,337 Crore Fraud Probe in Bengaluru, Mumbai

ಅನಿಲ್ ಅಂಬಾನಿ ಕಂಪನಿಗಳಿಗೆ ಸಿಬಿಐ ಶಾಕ್

ಬೆಂಗಳೂರು, ಮೇ 15: ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ಎಲ್‌ಐಸಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಅನಿಲ್ ಅಂಬಾನಿ (Anil Ambani) ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಮೇ 14) ಬೆಂಗಳೂರು, ಮುಂಬೈ ಮತ್ತು ಗುರುಗ್ರಾಮದ ಏಳು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ಶೋಧ ನಡೆಸಿದ್ದಾರೆ.

ಮುಖ್ಯಾಂಶಗಳು

  • ರಿಲಯನ್ಸ್ ಸಂಸ್ಥೆಯ ಮಾಜಿ ಸಿಇಒ ಮತ್ತು ನಿರ್ದೇಶಕರ ನಿವಾಸಗಳ ಮೇಲೆ ಸಿಬಿಐ ದಾಳಿ.
  • ಬ್ಯಾಂಕ್​ಗಳಿಗೆ 27,337 ಕೋಟಿ ವಂಚಿಸಿದ ಆರೋಪದ ಮೇಲೆ ಏಳು ಪ್ರಕರಣಗಳು ದಾಖಲು.
  • ಬೆಂಗಳೂರು ಸೇರಿ ಏಳು ಕಡೆ ಶೋಧ; ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು.

ಪ್ರಮುಖರ ನಿವಾಸಗಳ ಮೇಲೆ ದಾಳಿ

ರಿಲಯನ್ಸ್ ಕಮ್ಯುನಿಕೇಷನ್ಸ್‌ನಲ್ಲಿ 2015 ರಿಂದ 2017ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಸಿಇಒ (CEO), ಸಿಎಫ್‌ಒ (CFO) ಮತ್ತು ನಿರ್ದೇಶಕರ ವಸತಿ ಆವರಣಗಳ ಮೇಲೆ ಈ ದಾಳಿ ನಡೆದಿದೆ. ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ಸರ್ಚ್ ವಾರಂಟ್ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ದಾಳಿಯ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

27 ಸಾವಿರ ಕೋಟಿಗೂ ಅಧಿಕ ವಂಚನೆ

ಅನಿಲ್ ಅಂಬಾನಿ ನೇತೃತ್ವದ ಸಮೂಹ ಸಂಸ್ಥೆಗಳ ವಿರುದ್ಧ ಕಳೆದ ಕೆಲವು ತಿಂಗಳುಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ. ವಿವಿಧ ಬ್ಯಾಂಕ್​ಗಳು ಮತ್ತು ಎಲ್‌ಐಸಿ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು ವಂಚನೆಯ ಮೊತ್ತ ಬರೋಬ್ಬರಿ 27,337 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಹಗರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ಇದನ್ನೂ ಓದಿ ಅನಿಲ್ ಅಂಬಾನಿಗೆ ಇನ್ನಷ್ಟು ಸಂಕಷ್ಟ; ನಿನ್ನೆ 3,716 ಕೋಟಿ ರೂ ಆಸ್ತಿ ಮುಟ್ಟುಗೋಲು; ಈಗ ಸಿಬಿಐನಿಂದ ಹೊಸ ಕೇಸ್ ದಾಖಲು

ಈಗಾಗಲೇ ಇಬ್ಬರ ಬಂಧನ

ಈ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 20ರಂದು ರಿಲಯನ್ಸ್ ಕಮ್ಯುನಿಕೇಷನ್ಸ್‌ನ ಜಂಟಿ ಅಧ್ಯಕ್ಷ ಡಿ. ವಿಶ್ವನಾಥ್ ಮತ್ತು ಉಪಾಧ್ಯಕ್ಷ ಅನಿಲ್ ಕಲ್ಯಾ ಅವರನ್ನು ಸಿಬಿಐ ಬಂಧಿಸಿತ್ತು. ಬ್ಯಾಂಕಿಂಗ್ ಕಾರ್ಯಾಚರಣೆ ಮತ್ತು ಹಣದ ದುರುಪಯೋಗದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪವಿದ್ದು, ಪ್ರಸ್ತುತ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಒಟ್ಟು 31 ಸ್ಥಳಗಳಲ್ಲಿ ತಪಾಸಣೆ ನಡೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒರಾಕಲ್ ಲೇಆಫ್; 32,000 ಜನರನ್ನು ಕೆಲಸದಿಂದ ತೆಗೆದಿದ್ದಾಯ್ತು; ಕ್ಯಾಂಪಸ್ ಪ್ಲೇಸ್ಮೆಂಟ್ ನೇಮಕಾತಿಗಳಿಗೆ ಆಫರ್ ವಾಪಸ್ – Kannada News | Oracle Withdraws IIT/NIT Offers After Layoffs: Future of Tech Graduates at Risk

ಒರಾಕಲ್ ಉದ್ಯೋಗ ರದ್ದುImage Credit source: AI/Mediaforge/TV9

ನವದೆಹಲಿ, ಮೇ 15: ಇತ್ತೀಚೆಗಷ್ಟೇ 30,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೆರಿಕ ಮೂಲದ ಒರಾಕಲ್ ಸಂಸ್ಥೆ (Oracle) ಇದೀಗ ಹೊಸ ನೇಮಕಾತಿಗಳನ್ನು ರದ್ದುಗೊಳಿಸುವ ಕ್ರಮ ತೆಗೆದುಕೊಂಡಿದೆ. ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ (IIT Hyderabad, Kanpur, Kharagpur) ಮತ್ತು ಎನ್‌ಐಟಿ (NIT Warangal ಸೇರಿದಂತೆ) ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ನೀಡಿದ್ದ ಫುಲ್-ಟೈಮ್ ಉದ್ಯೋಗದ ಆಫರ್‌ಗಳನ್ನು ಕೊನೆಯ ಕ್ಷಣದಲ್ಲಿ ವಾಪಸ್ ಪಡೆದಿದೆ.

ಸುಮಾರು 50ಕ್ಕೂ ಹೆಚ್ಚು ಐಐಟಿ ವಿದ್ಯಾರ್ಥಿಗಳು ಮತ್ತು ಹಲವಾರು ಎನ್‌ಐಟಿ ವಿದ್ಯಾರ್ಥಿಗಳು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿದ್ಯಾರ್ಥಿಗಳು ಈಗಾಗಲೇ ‘ಒಂದು ವಿದ್ಯಾರ್ಥಿ – ಒಂದು ಆಫರ್’ (one student-one offer) ನೀತಿಯ ಅಡಿಯಲ್ಲಿ ಇತರ ಕಂಪನಿಗಳ ಅವಕಾಶಗಳನ್ನು ನಿರಾಕರಿಸಿದ್ದರು. ಈಗ ಪದವಿ ಮುಗಿಯುವ ಹಂತದಲ್ಲಿ ಆಫರ್ ರದ್ದಾಗಿರುವುದು ಅವರ ವೃತ್ತಿಜೀವನದ ಮೇಲೆ ದೊಡ್ಡ ಹೊಡೆತ ನೀಡಿದೆ.

ಈ ವಿದ್ಯಾರ್ಥಿಗಳಿಗೆ ವಾರ್ಷಿಕ ಸುಮಾರು 35 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ (35+ LPA) ವೇತನದ ಪ್ಯಾಕೇಜ್ ಆಫರ್ ಮಾಡಲಾಗಿತ್ತು.

ಇದನ್ನೂ ಓದಿ: CNG Price Hike: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಿಎನ್​ಜಿ ಕೆಜಿಗೆ 2 ರೂಪಾಯಿ ಹೆಚ್ಚಳ

ಒರಾಕಲ್ ನೇಮಕಾತಿ ಹಿಂಪಡೆಯಲು ಏನು ಕಾರಣ?

ಕಂಪನಿಯ ಆಂತರಿಕ ಪುನರ್ರಚನೆ (internal restructuring) ಮತ್ತು ಬದಲಾಗುತ್ತಿರುವ ವ್ಯಾಪಾರ ಅಗತ್ಯಗಳ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

30,000 ಲೇ-ಆಫ್: ಈ ಘಟನೆಗಿಂತ ಕೆಲವು ವಾರಗಳ ಮುಂಚೆ, ಒರಾಕಲ್ ಜಾಗತಿಕವಾಗಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದರಲ್ಲಿ ಭಾರತದ 12,000 ಉದ್ಯೋಗಿಗಳು ಸೇರಿದ್ದಾರೆ ಎನ್ನಲಾಗಿದೆ.

ಲಿಂಕ್ಡ್‌ಇನ್ ಮತ್ತು ರೆಡ್ಡಿಟ್‌ನಲ್ಲಿ ಚರ್ಚೆ: ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಎನ್‌ಐಟಿ ವಾರಂಗಲ್‌ನ ಪ್ಲೇಸ್‌ಮೆಂಟ್ ಕೋ-ಆರ್ಡಿನೇಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಇತರ ಕಂಪನಿಗಳಿಗೆ ವಿನಂತಿಸಿದ್ದಾರೆ.

ಇದನ್ನೂ ಓದಿ: ಮೋದಿ ಅವರ ಯುಎಇ-ಯೂರೋಪ್ ಪ್ರವಾಸ; 70 ಬಿಲಿಯನ್ ಡಾಲರ್ ವ್ಯಾಪಾರ ಪುಷ್ಟಿ ನಿರೀಕ್ಷೆ

ವರದಿಗಳ ಪ್ರಕಾರ, ಕೆಲವು ಐಐಟಿಗಳು ಇಂತಹ ವಿಶ್ವಾಸದ್ರೋಹದ ಕ್ರಮಕ್ಕಾಗಿ ಒರಾಕಲ್ ಕಂಪನಿಯನ್ನು ಮುಂದಿನ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳಿಂದ ಕಪ್ಪುಪಟ್ಟಿಗೆ ಸೇರಿಸುವ (Ban) ಕುರಿತು ಚರ್ಚಿಸುತ್ತಿವೆ.

ಒಟ್ಟಾರೆಯಾಗಿ, ಐಟಿ ಕ್ಷೇತ್ರದಲ್ಲಿನ ಅಸ್ಥಿರತೆಯು ಈಗ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಮೇಲೆಯೂ ಪರಿಣಾಮ ಬೀರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಎಂ ಹುಟ್ಟುಹಬ್ಬಕ್ಕೆ ಸ್ಪೆಷಲ್​​ ಗಿಫ್ಟ್​: 4 ಸಾವಿರ ಕೆಜಿ ರಂಗೋಲಿಯಲ್ಲಿ ಮೂಡಿದ ಡಿ.ಕೆ. ಶಿವಕುಮಾರ್​​ – Kannada News | Rangoli Portrait of D. K. Shivakumar Created in Mysuru on the Occasion of His Birthday

ಮೈಸೂರು, ಮೇ 15: ಡಿಸಿಎಂ ಡಿ.‌ಕೆ‌. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸಿಎಂ ಸಿದ್ದರಾಮಯ್ಯ ಅವರ ತವರಲ್ಲಿ ವಿನೂತನವಾಗಿ ಆಚರಿಸಲಾಗಿದೆ. ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವಾಲಯದ ಮುಂಭಾಗ 8,125 ಚದರಡಿ ಜಾಗದಲ್ಲಿ ಡಿಕೆಶಿ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ರಚಿಸಲಾಗಿದೆ. 60 ಅಡಿ ಅಗಲ, 135 ಅಡಿ ಉದ್ದವಿರುವ ಈ ಚಿತ್ರವನ್ನು 4 ಸಾವಿರ ಕೆ.ಜಿ. ರಂಗೋಲಿ ಬಳಸಿ ಕಲಾವಿದ ಪುನೀತ್ ಬಿಡಿಸಿದ್ದಾರೆ. ಕನ್ನಡ ಭಾವುಟದ ಒಳಭಾಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾವಚಿತ್ರ ಮೂಡಿಬಂದಿರೋದು ನೋಡುಗರ ಗಮನ ಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇರಳ ಸಿಎಂ ಆಯ್ಕೆಯ ಕಗ್ಗಂಟು ಬಿಡಿಸಿದ ಸೋನಿಯಾ-ಆಂಟನಿ ‘ಮಾಸ್ಟರ್ ಪ್ಲಾನ್’! ರಟ್ಟಾಯ್ತು ವಿಡಿ ಸತೀಶನ್ ಆಯ್ಕೆ ಹಿಂದಿನ ಗುಟ್ಟು – Kannada News | Inside Story: How Sonia Gandhi and AK Antony Resolved Kerala CM Selection Crisis

ಎಕೆ ಆಂಟನಿ, ವಿಡಿ ಸತೀಶನ್ ಹಾಗೂ ಸೋನಿಯಾ ಗಾಂಧಿImage Credit source: tv9

ತಿರುವನಂತಪುರ, ಮೇ 15: ಕೇರಳ (Kerala) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್​​ (UDF) ಭರ್ಜರಿ ಗೆಲುವಿನ ಬಳಿಕ ಎದುರಾಗಿದ್ದ ‘ಮುಖ್ಯಮಂತ್ರಿ ಆಯ್ಕೆ’ಯ ಬಿಕ್ಕಟ್ಟನ್ನು ಹೈಕಮಾಂಡ್ ಅಂತಿಮವಾಗಿ ಯಶಸ್ವಿಯಾಗಿ ಬಗೆಹರಿಸಿದೆ. ಈ ಕಗ್ಗಂಟನ್ನು ಬಿಡಿಸಲು ಯುಪಿಎ ಹಿರಿಯ ನಾಯಕ ಮತ್ತು ಸೋನಿಯಾ ಗಾಂಧಿ (Sonia Gandhi) ಪರಮಾಪ್ತ ಎಕೆ ಆಂಟನಿ (AK Antony) ಸಲಹೆಗಳು ಪ್ರಮುಖ ಪಾತ್ರ ವಹಿಸಿವೆ ಎಂಬ ಕುತೂಹಲಕಾರಿ ಮಾಹಿತಿ ಈಗ ತಿಳಿದುಬಂದಿದೆ. ಕೇರಳದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಮತ್ತು ವಿಡಿ ಸತೀಶನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಹೈಕಮಾಂಡ್ ನಾಯಕರು ಸತತ ಒಂಬತ್ತು ದಿನಗಳ ಕಾಲ ಸಮಾಲೋಚನೆಗಳನ್ನು ನಡೆಸಿದರೂ ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.  ಇಂಥ ಪರಿಸ್ಥಿತಿಯಲ್ಲಿ ಬಿಕ್ಕಟ್ಟು ಬಗೆಹರಿಸಲು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಖುದ್ದು ಅಖಾಡಕ್ಕಿಳಿಯಬೇಕಾಯಿತು!

ಆಂಟನಿ ನೀಡಿದ ಆ ಒಂದು ಫೋನ್ ಕರೆಯ ಸಲಹೆ!

ಸೋನಿಯಾ ಗಾಂಧಿ ಅವರು ಕೇರಳ ರಾಜಕಾರಣದ ನಾಡಿಮಿಡಿತ ಬಲ್ಲ ತಮ್ಮ ಹಳೆಯ ಮಿತ್ರ ಎಕೆ ಆಂಟನಿ ಅವರಿಗೆ ಕರೆ ಮಾಡಿ ಚರ್ಚಿಸಿದರು. ಈ ವೇಳೆ ಆಂಟನಿ ಅವರು ನೀಡಿದ ಪ್ರಾಯೋಗಿಕ ಸಲಹೆಗಳು ಇಡೀ ಚಿತ್ರಣವನ್ನೇ ಬದಲಿಸಿದವು ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ಬಳಿ ಆಂಟನಿ ಹೇಳಿದ್ದೇನಂತೆ ಗೊತ್ತಾ?

ಕೆಸಿ ವೇಣುಗೋಪಾಲ್​ರನ್ನು ಸಿಎಂ ಮಾಡಿದರೆ, ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅಲ್ಲದೆ, ಕೇರಳದ ಯಾರಾದರೊಬ್ಬ ಶಾಸಕರು ಅವರಿಗಾಗಿ ಕ್ಷೇತ್ರ ಬಿಟ್ಟುಕೊಡಬೇಕಾಗುತ್ತದೆ. ಆ ವಿಧಾನಸಭಾ ಕ್ಷತ್ರಕ್ಕೆ ಹಾಗೂ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಾಗುತ್ತದೆ. ವಿಧಾನಸಭೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಎರಡು ಉಪಚುನಾವಣೆಗಳನ್ನು ಎದುರಿಸುವುದು ಪಕ್ಷಕ್ಕೆ ರಿಸ್ಕ್ ಎಂದು ಆಂಟನಿ ಎಚ್ಚರಿಕೆಯ ಮಾತುಗಳನ್ನಾಡಿದ್ದರು ಎಂಬುದು ತಿಳಿದುಬಂದಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜನರು ವಿಡಿ ಸತೀಶನ್ ಅವರ ನಾಯಕತ್ವ ಮತ್ತು ಕಳೆದ ಐದು ವರ್ಷಗಳ ಅವರ ಹೋರಾಟವನ್ನು ಮೆಚ್ಚಿ ಮತ ನೀಡಿದ್ದಾರೆ. ಮೈತ್ರಿಕೂಟದ ಮಿತ್ರಪಕ್ಷಗಳೂ ಕೂಡ ಸತೀಶನ್ ಪರವಾಗಿಯೇ ಇವೆ. ಹೀಗಾಗಿ ದೆಹಲಿಯಿಂದ ಅಭ್ಯರ್ಥಿಯನ್ನು ಹೇರುವುದು ಸರಿಯಲ್ಲ ಎಂದು ಸೋನಿಯಾ ಗಾಂಧಿ ಬಳಿ ಆಂಟನಿ ತಿಳಿಸಿದ್ದರು ಎಂಬುದು ಉನ್ನತ ಮೂಲಗಳಿಂದ ಗೊತ್ತಾಗಿದೆ.

ರಾಹುಲ್-ಪ್ರಿಯಾಂಕಾ ಸಂಧಾನ

ಆಂಟನಿ ಅವರ ಈ ತರ್ಕಬದ್ಧ ಸಲಹೆಯನ್ನು ಒಪ್ಪಿದ ಸೋನಿಯಾ ಗಾಂಧಿ, ಅಂತಿಮ ನಿರ್ಧಾರಕ್ಕೆ ಬಂದರು. ನಂತರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಕೆಸಿ ವೇಣುಗೋಪಾಲ್ ಅವರೊಂದಿಗೆ ಮಾತನಾಡಿ, ರಾಷ್ಟ್ರ ರಾಜಕಾರಣದಲ್ಲಿ ಅವರ ಅಗತ್ಯವ ಇರುವುದನ್ನು ಮನವರಿಕೆ ಮಾಡಿಕೊಟ್ಟರು. ವೇಣುಗೋಪಾಲ್ ದೆಹಲಿಯಲ್ಲೇ ಮುಂದುವರಿಯಲು ಒಪ್ಪಿದ ನಂತರ, ವಿಡಿ ಸತೀಶನ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

ತೆರೆಮರೆಯಲ್ಲೇ ಕೆಲಸ ಮಾಡಿ ಸೈ ಎನಿಸಿಕೊಂಡ ಸೋನಿಯಾ ಭಂಟ

ಈ ಇಡೀ ಪ್ರಕ್ರಿಯೆಯಲ್ಲಿ ತೆರೆಯ ಮರೆಯಿಂದಲೇ ಸೋನಿಯಾಗೆ ನೆರವಾದ ಎಕೆ ಆಂಟನಿಯ ಪ್ರಾಮಾಣಿಕತೆ ಮತ್ತು ರಾಜಕೀಯ ಚಾಣಾಕ್ಷತೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರವಾಗಿದೆ. ಮೂರು ಬಾರಿ ಕೇರಳದ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಆಂಟನಿ ಹೈಕಮಾಂಡ್​ಗೆ ಸದಾ ನಿಷ್ಠರಾಗಿದ್ದುದಲ್ಲದೆ, ಸರಳತೆಯಿಂದಲೇ ಗುರುತಿಸಿಕೊಂಡಿದ್ದವರು. ಇದೀಗ ಕಷ್ಟಕಾಲದಲ್ಲಿ ಮತ್ತೆ ಹೈಕಮಾಂಡ್​ಗೆ, ಅದರಲ್ಲೂ ಸೋನಿಯಾಗೆ ನೆರವಾಗುವ ಮೂಲಕ ಕೇರಳ ಕಾಂಗ್ರೆಸ್​​ನ ಬಲು ದೊಡ್ಡ ಬಿಕ್ಕಟ್ಟನ್ನು ಸಲೀಸಾಗಿ ಬಗೆಹರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link