ಉತ್ತರಾಖಂಡ್: ಮಹಿಳಾ ಟೂರಿಸ್ಟ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಟ್ಯಾಕ್ಸಿ ಡ್ರೈವರ್, ಹೆದರಿ ಕಾಡಿನಲ್ಲಿ ರಾತ್ರಿ ಕಳೆದ ಯುವತಿ
ಉತ್ತರಾಖಂಡ, ಮಾರ್ಚ್ 08: ನೈನಿತಾಲ್‌ಗೆ ಪ್ರವಾಸ(Tourism)ಕ್ಕೆಂದು ಬಂದಿದ್ದ ದೆಹಲಿಯ ಯುವತಿ ಮೇಲೆ ಟ್ಯಾಕ್ಸಿ ಡ್ರೈವರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಮಹಿಳೆ ನೈನಿತಾಲ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಹೋಗಬೇಕಿದ್ದ ಪ್ರದೇಶದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಬಲ್ದಿಯಾಖಾನ್ ಬಳಿ, ಟ್ಯಾಕ್ಸಿ ಚಾಲಕನೊಬ್ಬ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ವಿರೋಧಿಸಿದಾಗ, ಚಾಲಕ ಆಕೆಯ ವಸ್ತುಗಳು ಮತ್ತು ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದಾನೆ. ಈ ಭೀಕರ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ, ಸ್ಥಳೀಯ ಪೊಲೀಸರು…