‘ರಾಜಾ ಶಿವಾಜಿ’ ಪಾತ್ರದಲ್ಲಿ ಅಬ್ಬರಿಸಿದ ರಿತೇಶ್ ದೇಶ್‌ಮುಖ್; ಟೀಸರ್ ಹೇಗಿದೆ ನೋಡಿ
ಮರಾಠ ಸಾಮ್ರಾಜ್ಯದ ಸಂಸ್ಥಾಪಕ, ಭಾರತದ ಶ್ರೇಷ್ಠ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಆಧಾರಿತ ಬಹುನಿರೀಕ್ಷಿತ ‘ರಾಜಾ ಶಿವಾಜಿ’ (Raja Shivaji) ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ರಿತೇಶ್ ದೇಶ್‌ಮುಖ್ (Riteish Deshmukh) ಅವರು ಈ ಐತಿಹಾಸಿಕ ಕಥಾಹಂದರದ, ಸಾಹಸ ಪ್ರಧಾನ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಮುಖ್ಯ ಭೂಮಿಕೆಯಲ್ಲಿ ಅವರೇ ನಟಿಸುತ್ತಿದ್ದಾರೆ. 2 ನಿಮಿಷ 31 ಸೆಕೆಂಡುಗಳ ಈ ಟೀಸರ್ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿದೆ. ಸಂಜಯ್ ದತ್ ಈ ಸಿನಿಮಾದಲ್ಲಿ ಕ್ರೂರ ಅಫ್ಜಲ್ ಖಾನ್…