Headlines

nagaraj11081993

ಆ್ಯಕ್ಷನ್, ಆ್ಯಕ್ಷನ್, ಆ್ಯಕ್ಷನ್; ಬೀಸ್ಟ್​ ಮೋಡ್​​​ನಲ್ಲಿ ರಿವೇಂಜ್​ಗೆ ಇಳಿದ ರಣವೀರ್

‘ಧುರಂಧರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ರಿಲೀಸ್​​ಗೆ ರೆಡಿ ಆಗುತ್ತಿದೆ. ಮಾರ್ಚ್​ 19ರಂದು ಸಿನಿಮಾ ವಿಶ್ವ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದ ಟ್ರೇಲರ್​​ಗಾಗಿ ಫ್ಯಾನ್ಸ್ ಕಾದಿದ್ದರು. ಇಂದು (ಮಾರ್ಚ್ 7) ಬೆಳಿಗ್ಗೆ 11.1ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಕಂಡಿದೆ. ಈ ಟ್ರೇಲರ್ ನೋಡಿದ ಬಳಿಕ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿದೆ. ‘ಧುರಂಧರ್’ ಚಿತ್ರವನ್ನು ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಸಾವಿರಾರು…

Read More

Hindu Devotional Tips: ಮಹಿಳೆಯರು ಶನಿವಾರದಂದು ತವರು ಮನೆಗೆ ಯಾಕೆ ಹೋಗಬಾರದು? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮಹಿಳೆಯರು ಶನಿವಾರದಂದು ತವರು ಮನೆಗೆ ಬರುವುದು ಶುಭವೇ ಅಥವಾ ಅಶುಭವೇ? ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ, ಹೆಣ್ಣುಮಕ್ಕಳನ್ನು ಅತ್ತೆಯ ಮನೆಗೆ ಕಳುಹಿಸುವಾಗ ಭಾನುವಾರ ಅಥವಾ ಮಂಗಳವಾರದಂತಹ ದಿನಗಳನ್ನು ಪೋಷಕರು ಅಷ್ಟು ಸೂಕ್ತವೆಂದು ಪರಿಗಣಿಸುವುದಿಲ್ಲ. ಅದೇ ರೀತಿ, ಶನಿವಾರದಂದು ಅತ್ತೆಯ ಮನೆಯಿಂದ ತವರು ಮನೆಗೆ ಹೋಗುವ ಪ್ರಯಾಣವನ್ನು ಅಷ್ಟು ಪ್ರಾಶಸ್ತ್ಯವಲ್ಲ ಎಂದು ಭಾವಿಸಲಾಗುತ್ತದೆ. ಶನಿವಾರವು ಕೆಟ್ಟ ದಿನವಲ್ಲ. ಇದು ಶನಿ ಭಗವಾನ್,…

Read More

ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್ ! ಗೂಗಲ್ ಸೇರಿ ಹಲವು ಟೆಕ್ ಕಂಪನಿಗಳಿಗೆ ನೋಟಿಸ್ ಜಾರಿ

ಬೆಂಗಳೂರು, ಮಾರ್ಚ್​ 07: ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್‌ಎಂಡಿ ನವಾಜ್ ( Justice A.H.M.D. Nawaz) ತಮ್ಮ ವಿರುದ್ಧ ಆನ್‌ಲೈನ್‌ನಲ್ಲಿ ಪ್ರಕಟವಾಗಿರುವ ಮಾನಹಾನಿಕರ ಬರಹಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸಬೇಕೆಂದು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ, ಗೂಗಲ್ ಇಂಕ್, ಕೊಲಂಬೋ ಟೆಲಿಗ್ರಾಫ್ ಹಾಗೂ ಲಂಕಾ ಇ-ನ್ಯೂಸ್‌ಗೆ…

Read More

ಸಚಿನ್ ತೆಂಡೂಲ್ಕರ್ ಸೊಸೆ ಸಾನಿಯಾ ಎಷ್ಟು ಶ್ರೀಮಂತೆ ಗೊತ್ತಾ?

ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾದರು. ಅರ್ಜುನ್ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮದುವೆಯ ನಂತರ ಅರ್ಜುನ್ ಮತ್ತು ಸಾನಿಯಾ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಹಾಗಾದರೆ ಸಚಿನ್ ತೆಂಡೂಲ್ಕರ್ ಅವರ ಸೊಸೆ ಎಷ್ಟು ಕೋಟಿ ಮಾಲೀಕರು ಗೊತ್ತಾ? ಆ ಬಗ್ಗೆ ಇಲ್ಲಿದೆ ವಿವರ. ಅರ್ಜುನ್ ಪ್ರಸ್ತುತ ಈಗಷ್ಟೇ ಬೌಲರ್ ಆಗಿ…

Read More

ಇಸ್ರೇಲ್-ಇರಾನ್ ಯುದ್ಧ, ಜಾಗತಿಕ ಅನಿಶ್ಚಿತತೆ ನಡುವೆಯೂ ಭಾರತಕ್ಕಿಲ್ಲ ಇಂಧನ ಆತಂಕ: ಈ ಅಂಕಿಅಂಶಗಳೇ ಸಾಕ್ಷಿ

ನವದೆಹಲಿ, ಮಾರ್ಚ್ 7: ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿದ್ದರೂ ಭಾರತದಲ್ಲಿ ಇಂಧನ ವಿಚಾರದಲ್ಲಿ ಯಾವುದೇ ಸಮಸ್ಯೆ ಎದುರಾಗದು. ಭಾರತ ಸದ್ಯ ಇಂಧನ ವಿಚಾರದಲ್ಲಿ ಭದ್ರವಾಗಿದೆ ಎಂಬುದು ಕೇಂದ್ರ ಸರ್ಕಾರದ ಅಧೀನದ ‘ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸಿಸ್ ಸೆಲ್ (PPAC)’ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆ, ಸಮುದ್ರ ಮಾರ್ಗಗಳ ಅಡಚಣೆಗಳು ಮತ್ತು ಜಾಗತಿಕ ಬೆಲೆ ಏರಿಳಿತಗಳ ನಡುವೆಯೂ ಭಾರತದಲ್ಲಿ ಇಂಧನ ಪೂರೈಕೆ ಸ್ಥಿರವಾಗಿರುವುದಕ್ಕೆ ಕಳೆದ ದಶಕದಲ್ಲಿ ರೂಪಿಸಿದ ದೀರ್ಘಕಾಲಿಕ ನೀತಿಗಳೇ ಪ್ರಮುಖ…

Read More

ಇರಾನ್ ಜತೆಗೂಡಿ ಟ್ರಂಪ್, ಅಮೆರಿಕ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿತ್ತಾ ಪಾಕ್? ನ್ಯೂಯಾರ್ಕ್ ಕೋರ್ಟ್ ಮಹತ್ವದ ಮಾಹಿತಿ ಬಯಲು

ಬ್ರೂಕ್ಲಿನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅಮೆರಿಕದ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ, ಪಾಕಿಸ್ತಾನಿ ಪ್ರಜೆ ಆಸಿಫ್ ರಾಜಾ ಮರ್ಚೆಂಟ್ (47) ದೋಷಿ ಎಂದು ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯ ತೀರ್ಪು ನೀಡಿದೆ. 2020ರಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ ಕಮಾಂಡರ್ ಖಾಸೆಮ್ ಸೊಲೈಮಾನಿಯ ಸಾವಿಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಗುರಿಯಲ್ಲಿದ್ದ ಪ್ರಮುಖ ನಾಯಕರು: ವಿಚಾರಣೆಯ ಸಂದರ್ಭದಲ್ಲಿ ಮರ್ಚೆಂಟ್, ಟೆಹ್ರಾನ್‌ನಲ್ಲಿರುವ ತನ್ನ ಕುಟುಂಬವನ್ನು…

Read More

ವಿಜಯ್-ರಶ್ಮಿಕಾ ಒಂದಾಗಲು ಕಾರಣವಾಯ್ತು ಕನ್ನಡದ ಆ ನಟಿ ತೆಗೆದುಕೊಂಡ ನಿರ್ಧಾರ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Devarakonda) ವಿವಾಹ ಆಗಿದ್ದಾರೆ. ಈ ಮದುವೆ ಸಾಕಷ್ಟು ಅದ್ದೂರಿಯಾಗಿ ನಡೆಯಿತು. ರಶ್ಮಿಕಾ ಹಾಗೂ ವಿಜಯ್ ಜೋಡಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇವರು ಮೊದಲು ನಟಿಸಿದ್ದು, ‘ಗೀತ ಗೋವಿಂದಂ’ ಚಿತ್ರದಲ್ಲಿ. ಇವರಿಬ್ಬರು ಒಂದಾಗಲು ಕನ್ನಡದ ನಟಿಯೊಬ್ಬರು ಕಾರಣ ಎಂಬ ಮಾಹಿತಿ ರಿವೀಲ್ ಆಗಿದೆ. ಈ ವಿಷಯ ಇತ್ತೀಚೆಗೆ ರಿವೀಲ್ ಆಗಿದೆ. ‘ಗೀತ ಗೋವಿಂದಂ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಕೆಮಿಸ್ಟ್ರಿ ಸಾಕಷ್ಟು ಗಮನ ಸೆಳೆಯಿತು. ರಶ್ಮಿಕಾ ಮಂದಣ್ಣ ಪಾತ್ರವೇ…

Read More

Tomato price down: ಟೊಮ್ಯೊಟೋ ಮಾರ್ಕೆಟ್​ನಲ್ಲಿ ಬೆಲೆ ತೀವ್ರ ಕುಸಿತ! ರೈತರು ಕಂಗಾಲು

ಚಿಕ್ಕಬಳ್ಳಾಪುರ, ಮಾರ್ಚ್​ 07: ಕೋಲಾರ–ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳು ಅತ್ಯುತ್ತಮ ಗುಣಮಟ್ಟದ ಟೊಮ್ಯಾಟೊ ಬೆಳೆಗೆ ಖ್ಯಾತಿಯಾಗಿದ್ದರೂ, ಇದೀಗ ಕೇಂಪು ಸುಂದರಿ ಟೊಮ್ಯಾಟೊ ಬೆಲೆ ತೀವ್ರ ಕುಸಿತ ಕಂಡಿದೆ. ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ ಟೊಮ್ಯಾಟೊ ಬಾಕ್ಸ್ ಕೇವಲ 110 ರೂಪಾಯಿಗೆ ಮಾರಾಟವಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅಂತರ್ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾದ ಹಿನ್ನೆಲೆ ಬೆಲೆ ಇಳಿಕೆ ಕಂಡಿದ್ದು, ಮತ್ತೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು 5 ಕೆ.ಜಿ ಟೊಮ್ಯಾಟೊವನ್ನು 100 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ ಸಿಹಿಯಾಗಿರುವ ಬೆಲೆ ಕುಸಿತ…

Read More

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು; 200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿಗೆ ಗೇಟ್​​​ಪಾಸ್!

ಬೆಂಗಳೂರು, ಮಾರ್ಚ್​ 07: ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ (Illegal Immigrants) ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ನಗರದ 11 ಡಿಸಿಪಿ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗುತ್ತಿದೆ. ಒಂದೇ…

Read More

ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್​ ಮಾಲೀಕರಲ್ಲಿ ಆತಂಕ, ಗ್ರಾಹಕರಿಗೆ ತಿಂಡಿಗಳ ಬೆಲೆ ಏರಿಕೆ ಟೆನ್ಶನ್

ಮೈಸೂರು, ಮಾರ್ಚ್ 7: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪ್ರತಿಕೂಲ ಪರಿಣಾಮ ಭಾರತದ ಮೇಲೆ ಬೀರಲು ಪ್ರಾರಂಭವಾಗಿದೆ. ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ವಿಶೇಷವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ 115 ರೂಪಾಯಿ ಹೆಚ್ಚಳವಾಗಿದೆ. ಈ ಬೆಲೆ ಏರಿಕೆ ಮತ್ತು ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯ ಮೈಸೂರಿನ ಹೋಟೆಲ್ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ದಿಢೀರ್ ಹೆಚ್ಚಳವಾಗಿದ್ದು, ಜೊತೆಗೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಸಹ ಆಗುತ್ತಿಲ್ಲ ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ….

Read More