Headlines

nagaraj11081993

ಮನೆಯೊಳಗೆ ಅಕ್ಕ-ತಂಗಿಯರ ನಿಗೂಢ ಸಾವು; ಹೆತ್ತಮ್ಮನೇ ಮುಖ್ಯ ಆರೋಪಿ!

ನವದೆಹಲಿ, ಮಾರ್ಚ್ 6: ದಕ್ಷಿಣ ದೆಹಲಿಯಲ್ಲಿ 33 ಮತ್ತು 28 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ನಿಗೂಢವಾಗಿ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಮಾಲ್ವಿಯಾ ನಗರದ ಅವರ ಮನೆಯ ಬಾಗಿಲು ಒಡೆದು ನೋಡಿದ ನಂತರ ಅವರ 55 ವರ್ಷದ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ (Delhi Crime News) ಯತ್ನಿಸುವ ಮೊದಲು ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿರಬಹುದು ಎಂಬುದು ಪೊಲೀಸರ ಅನುಮಾನ. ಆದರೆ ಆ ಮಹಿಳೆಗೆ ಪ್ರಜ್ಞೆ ಬಂದ…

Read More

ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಟಾರ್ಗೆಟ್​​: ಸರ್ಕಾರದ ಹೊಸ ನೀತಿಗೆ ವ್ಯಾಪಾರಿಗಳ ವಿರೋಧ

ಬೆಂಗಳೂರು, ಮಾರ್ಚ್​​ 06: ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 17ನೇ ಬಜೆಟ್ (Budget) ಮಂಡಿಸಿದ್ದಾರೆ. 3 ಗಂಟೆ 30 ನಿಮಿಷಗಳ ಕಾಲ ಭಾಷಣ ಮಾಡಿದ ಸಿಎಂ, ಮಕ್ಕಳಿಂದ ವೃದ್ಧರವರೆಗೂ ಎಲ್ಲರಿಗೂ ಒಂದೊಂದು ಕೊಡುಗೆ ನೀಡಿದ್ದಾರೆ. ಆದರೆ ಮದ್ಯಪ್ರಿಯರಿಗೆ ಶಾಕ್ ನೀಡಲಾಗಿದೆ. ಮದ್ಯದ ಅಂಶ ಆಧರಿಸಿ ತೆರಿಗೆ ವಿಧಿಸಲು ನಿರ್ಧಾರ ಮಾಡಿರೋದು ದರ ಹೆಚ್ಚಳದ ಸುಳಿವು ಕೊಟ್ಟಿದೆ. ಅಬಕಾರಿ ಇಲಾಖೆಯಿಂದ 45 ಸಾವಿರ ಕೋಟಿ ಸಂಗ್ರಹದ ಗುರಿ ನೀಡಿದೆ. ಸದ್ಯ ಸರ್ಕಾರ ನೀಡಿರುವ ಟಾರ್ಗೆಟ್​ ಬಗ್ಗೆ ಮದ್ಯ…

Read More

ತಿರುಪತಿಯಲ್ಲಿ ಜಾನ್ವಿ ಕಪೂರ್ ಹುಟ್ಟುಹಬ್ಬ: ಬರಿಗಾಲಲ್ಲಿ 3,550 ಮೆಟ್ಟಿಲು ಹತ್ತಿದ ನಟಿ

ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಇಂದು (ಮಾರ್ಚ್ 6) 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಜಾನ್ವಿ ಆಗಮಿಸಿದ್ದರು. ಆದರೆ ಈ ಬಾರಿ ಅವರು ಕೇವಲ ದರ್ಶನ ಪಡೆಯುವುದಲ್ಲದೆ, ಬರೋಬ್ಬರಿ 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ತಿರುಪತಿ ಬೆಟ್ಟ ಹತ್ತುವಾಗ ಜಾನ್ವಿ ಅವರು ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿದ್ದರು….

Read More

CM Siddaramaiah Press Meet Live: ಬಜೆಟ್ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿಯ ನೇರ ಪ್ರಸಾರ

ಬೆಂಗಳೂರು, (ಮಾರ್ಚ್ 06): ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು (ಮಾರ್ಚ್ 06)ಕರ್ನಾಟಕದ 2026ನೇ ಸಾಲಿನ ಬಜೆಟ್  (Karnataka Budget 2026)  ಮಂಡನೆ ಮಾಡಿದ್ದಾರೆ. ಒಟ್ಟು 4.48 ಲಕ್ಷ ಕೋಟಿ ರೂಪಾಯಿಯ ತಮ್ಮ 17ನೇ ಬಜೆಟ್ ಮಂಡನೆ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದು ಜನಪರವಾದ ಬಜೆಟ್ ಎಂದು ಆಡಳಿತ ಪಕ್ಷ ಮೆಚ್ಚುಗೆ ಸೂಚಿಸದರೆ, ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲದ…

Read More

Samudrika Shastra: ಅಂಗೈಯ ಈ ಭಾಗದಲ್ಲಿ ಮಚ್ಚೆ ಇದ್ದರೆ, ನಿಮಗೆ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ!

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈ ಮತ್ತು ಮುಖದ ಮೇಲಿನ ಮಚ್ಚೆಗಳು ವ್ಯಕ್ತಿಯ ಅದೃಷ್ಟ, ಸಂಪತ್ತು ಮತ್ತು ಜೀವನದ ಯಶಸ್ಸಿನ ಪಥವನ್ನು ಸೂಚಿಸುತ್ತವೆ. ವಿಶೇಷವಾಗಿ ಅಂಗೈಯಲ್ಲಿರುವ ಮಚ್ಚೆಗಳು ಅಪಾರ ಐಶ್ವರ್ಯದ ಸಂಕೇತವೆಂದು ನಂಬಲಾಗಿದೆ. ಹಾಗಾದರೆ, ಈ ಮಚ್ಚೆಗಳು ವ್ಯಕ್ತಿಯ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಅಂಗೈಯ ಮಧ್ಯಭಾಗದ ಮಚ್ಚೆ: ಅದೃಷ್ಟದ ಲಕ್ಷಣ: ಅಂಗೈಯ ಮಧ್ಯಭಾಗದಲ್ಲಿ ಮಚ್ಚೆ ಇರುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಬಹಳ ಬೇಗನೆ ಆರ್ಥಿಕ ಸ್ಥಿರತೆಯನ್ನು ಮತ್ತು…

Read More

ಬಿಹಾರದಲ್ಲಿ ಶೀಘ್ರದಲ್ಲೇ ಬಿಜೆಪಿಗೆ ಸಿಎಂ ಸ್ಥಾನ; ಏಪ್ರಿಲ್ 10ರ ಬಳಿಕ ಅಂತಿಮ ನಿರ್ಧಾರ ಸಾಧ್ಯತೆ

ಪಾಟ್ನಾ, ಮಾರ್ಚ್ 6: ಬಿಹಾರದಲ್ಲಿ ಹೊಸ ರಾಜ್ಯ ಸರ್ಕಾರ ರಚನೆ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಸಜ್ಜಾಗಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ತಕ್ಷಣ ರಾಜೀನಾಮೆ ನೀಡುವ ಸಾಧ್ಯತೆಯಿಲ್ಲ. ಏಪ್ರಿಲ್ 10ರವರೆಗೆ ಅವರು ಅಧಿಕಾರದಲ್ಲಿ ಮುಂದುವರಿಯಬಹುದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನಿತೀಶ್ ಕುಮಾರ್ ನಡುವೆ ರಾಜಕೀಯ ಪರಿವರ್ತನೆಯ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾದ ನಂತರವೇ ಸಿಎಂ ಸ್ಥಾನದ ಬದಲಾವಣೆಯಾಗುವ…

Read More

ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ಸರ್ಕಾರದ ನಡೆಗೆ ಬಿಜೆಪಿ ರಾಜ್ಯಸಭೆ ಸದಸ್ಯ ಮೆಚ್ಚುಗೆ

ಬೆಂಗಳೂರು, ಮಾರ್ಚ್​​ 06: ಕರ್ನಾಟಕದ ಇತಿಹಾಸದಲ್ಲೇ ಐತಿಹಾಸಿಕ 17ನೇ ಬಜೆಟ್ ಮಂಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ದಾಖಲೆ ನಿರ್ಮಿಸಿದ್ದಾರೆ. ರೈತರು, ಮಹಿಳೆಯರು ಸೇರಿದಂತೆ ಮಕ್ಕಳಿಗೂ ಆದ್ಯತೆ ನೀಡಲಾಗಿದೆ. ಅದರಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್​ (Social Media Ban) ಮಾಡಲಾಗಿದೆ. ಆ ಮೂಲಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ (Lahar Singh Siroya) ಸ್ವಾಗತಿಸಿದ್ದಾರೆ. ಸರ್ಕಾರದ ನಡೆಗೆ ಲಹರ್ ಸಿಂಗ್ ಸಿರೋಯಾ…

Read More

ಹಣದಾಸೆಗೆ ಗೆಳೆಯನ ಕೊಲೆ: ಸ್ನೇಹಿತನ ದುಡ್ಡಲ್ಲೇ 2ನೇ ಪತ್ನಿಗೆ ಟಿವಿ ಗಿಫ್ಟ್ ನೀಡಿದ್ದ ಆಸಾಮಿ ಅರೆಸ್ಟ್

ತುಮಕೂರು, ಮಾರ್ಚ್​​ 06: ಜಿಲ್ಲೆಯ ತಿಪಟೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಪ್ರಕರಣಕ್ಕೆ ಇದೀಗ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಮೂರು ಲಕ್ಷ ರೂ ಹಣದಾಸೆಗೆ 7 ವರ್ಷದ ಸ್ನೇಹಕ್ಕೆ ಗೆಳೆಯ ಕೊಳ್ಳಿ ಇಟ್ಟಿದ್ದಾನೆ. ಕೊಲೆ (murder) ಬಳಿಕ ಗೆಳೆಯನ ಹಣದಲ್ಲೇ ಎರಡನೇ ಪತ್ನಿಗೆ ಹೊಸ ಟಿವಿ ಖರೀದಿಸಿ ಗಿಫ್ಟ್ ನೀಡಿದ್ದ. ಅಷ್ಟೇ ಅಲ್ಲದೆ ಪತ್ನಿಯೊಂದು ಲಾಡ್ಜ್​ನಲ್ಲಿ ಮಸ್ತಿ ಮಾಡಿ ಪರಾರಿಯಾಗಿದ್ದ ಭೂಪನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹೊನ್ನವಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನಡೆದಿದ್ದೇನು?…

Read More

2026 T20 WC Final Prize Money: ಗೆದ್ದ ತಂಡದ ಮೇಲೆ ಹಣದ ಮಳೆ; ಸೋತ ತಂಡಕ್ಕೂ ಸಿಗಲಿದೆ ಕೋಟಿ

ಫೆಬ್ರವರಿ 7 ರಿಂದ ಆರಂಭವಾಗಿದ್ದ 2026 ರ ಟಿ20 ವಿಶ್ವಕಪ್ ಈಗ ಅಂತಿಮ ಹಂತವನ್ನು ತಲುಪಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದೆಡೆ ಭಾರತ ಸತತ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ನ್ಯೂಜಿಲೆಂಡ್ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗಾಗಿ ಎದುರು ನೋಡುತ್ತಿದೆ. ಇದರ ಜೊತೆಗೆ ಚಾಂಪಿಯನ್ ತಂಡದ ಮೇಲೆ ಕೋಟಿಗಳ ಮಳೆ ಸುರಿಸಲು ಐಸಿಸಿ ತಯಾರಿ ಮಾಡಿಕೊಂಡಿದೆ. ಹಿಂದಿನ ಒಂಬತ್ತು ಟಿ20 ವಿಶ್ವಕಪ್…

Read More

UPSC Result 2025: UPSC ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ; ಅನುಜ್ ಅಗ್ನಿಹೋತ್ರಿ ದೇಶಕ್ಕೇ ಪ್ರಥಮ

ಕೇಂದ್ರ ಲೋಕಸೇವಾ ಆಯೋಗವು (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ದೇಶದಾದ್ಯಂತ ಕುತೂಹಲಕ್ಕೆ ತೆರೆ ಎಳೆದಿದೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿ ಅವರು ಮೊದಲ ಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ಅವರ ಬೆನ್ನಲ್ಲೇ ರಾಜೇಶ್ವರಿ ಸುವೆ ಎಂ ಮತ್ತು ಆಕಾಶ್ ಧುಲ್ ಕ್ರಮವಾಗಿ ಎರಡು ಮತ್ತು ಮೂರನೇ ರ್ಯಾಂಕ್ ಗಳಿಸಿದ್ದಾರೆ. ಕಳೆದ ವರ್ಷದ ಮೇ 25 ರಂದು ಪೂರ್ವಭಾವಿ ಪರೀಕ್ಷೆ ಆರಂಭವಾಗಿತ್ತು. ನಂತರ ಆಗಸ್ಟ್ 22 ರಿಂದ…

Read More