All posts by nagaraj11081993

ಅಸ್ಸಾಂನಲ್ಲಿ ಸುಖೋಯ್ Su-30 MKI ಯುದ್ಧ ವಿಮಾನ ನಾಪತ್ತೆ; ಐಎಎಫ್​​ನಿಂದ ಶೋಧ ಕಾರ್ಯಾಚರಣೆ ಆರಂಭ – Kannada News | Sukhoi Su 30 MKI Fighter Jet goes missing in Assam IAF Launches Search Operation

ನವದೆಹಲಿ, ಮಾರ್ಚ್ 5: ಭಾರತೀಯ ವಾಯುಪಡೆಯ (ಐಎಎಫ್) ಸುಖೋಯ್ Su-30 MKI ಫೈಟರ್ ಜೆಟ್ ರಾಡಾರ್‌ನಿಂದ ಕಣ್ಮರೆಯಾಗಿದೆ. ಅದರ ಸ್ಥಳವನ್ನು ಕಂಡುಹಿಡಿಯಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಭಾರತೀಯ ಯುದ್ಧ ವಿಮಾನವಾದ Su-30 MKI ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ಹಾರಾಟ ನಡೆಸುತ್ತಿದ್ದಾಗ ಇಂದು ಸಂಜೆ 7 ಗಂಟೆ ಸುಮಾರಿಗೆ ನಾಪತ್ತೆಯಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಕೆಲವು ವರದಿಗಳು ವಿಮಾನ ಅಪಘಾತಕ್ಕೀಡಾಗಿದೆ ಮತ್ತು ಸ್ಥಳೀಯರು ದೊಡ್ಡ ಸ್ಫೋಟವನ್ನು ಸಹ ಕೇಳಿದ್ದಾರೆ ಎಂದು ಕೂಡ ತಿಳಿಸಿವೆ.

ಭಾರತೀಯ ವಾಯುಪಡೆ ಅಥವಾ ರಕ್ಷಣಾ ಸಚಿವಾಲಯ ಇದನ್ನು ಇನ್ನೂ ದೃಢಪಡಿಸಿಲ್ಲ. ಪೈಲಟ್ ಕೂಡ ನಾಪತ್ತೆಯಾಗಿದ್ದು, ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಳಪತಿ ವಿಜಯ್ ವಿಚ್ಛೇದನಕ್ಕೆ ದೊಡ್ಡ ಟ್ವಿಸ್ಟ್: ತ್ರಿಷಾ ಜತೆ ಮದುವೆಗೆ ಹಾಜರಿ – Kannada News | Thalapthy Vijay Trisha seen together at wedding amidst divorce proceedings with Sangeetha

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (Thalapthy Vijay) ಮತ್ತು ಅವರ ಪತ್ನಿ ಸಂಗೀತಾ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಸಂಗೀತಾ ಅವರು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ವಿಜಯ್ ಅವರು ಖ್ಯಾತ ನಟಿ ತ್ರಿಷಾ ಕೃಷ್ಣನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ಇಂದು (ಮಾರ್ಚ್ 5) ಸಂಜೆ ನಡೆದ ಎಸ್‌. ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ವಿಜಯ್ ಹಾಗೂ ತ್ರಿಷಾ (Trisha) ಒಟ್ಟಾಗಿ ಭಾಗವಹಿಸಿದ್ದರು.

ವಿಚ್ಛೇದನದ ವದಂತಿಗಳು ಮತ್ತು ಟೀಕೆಗಳು ಜೋರಾಗಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ವಿಜಯ್ ಅವರ ಪತ್ನಿ ಸಂಗೀತಾ ಸಲ್ಲಿಸಿದ್ದಾರೆ ಎನ್ನಲಾದ ವಿಚ್ಛೇದನ ಅರ್ಜಿಯಲ್ಲಿ, ವಿಜಯ್ ಅವರಿಗೆ ಓರ್ವ ನಟಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಲಾಗಿತ್ತು. ಈ ನಟಿ ಬೇರೆ ಯಾರೂ ಅಲ್ಲ, ಅದು ತ್ರಿಷಾ ಕೃಷ್ಣನ್ ಎಂದೇ ನೆಟ್ಟಿಗರು ಊಹಿಸುತ್ತಿದ್ದಾರೆ. ಇವರಿಬ್ಬರೂ ದೀರ್ಘಕಾಲದಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಳಿಸುದ್ದಿಗಳು ಈ ಹಿಂದೆಯೇ ಹರಿದಾಡುತ್ತಿದ್ದವು. ಇಂದಿನ ಘಟನೆಯು ಆ ವದಂತಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ತ್ರಿಷಾ ಕೃಷ್ಣನ್,  ದಳಪತಿ ವಿಜಯ್ ವೈರಲ್ ವಿಡಿಯೋ:

ಈ ವಿವಾದದ ಬಗ್ಗೆ ತಮಿಳುನಾಡಿನ ಜನತೆ ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ. ಟೀಕೆ ಮಾಡುವವರು ವಿಜಯ್ ಅವರ ನೈತಿಕತೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದು, ಸಂಗೀತಾಗೆ ಆದ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಬೆಂಬಲಿಗರು ಮತ್ತು ವಿಜಯ್ ಅವರ ಅಭಿಮಾನಿಗಳು ಇದೊಂದು ರಾಜಕೀಯ ಪಿತೂರಿ ಎನ್ನುತ್ತಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ವಿಜಯ್ ಅವರ ರಾಜಕೀಯ ಜೀವನಕ್ಕೆ ಅಡ್ಡಿಪಡಿಸಲು ವಿರೋಧ ಪಕ್ಷಗಳು ಈ ವಿಚ್ಛೇದನದ ವಿಚಾರವನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ ಎಂಬುದು ಫ್ಯಾನ್ಸ್ ವಾದ.

ಇದನ್ನೂ ಓದಿ: ವಿಚ್ಛೇದನಕ್ಕೆ ಅರ್ಜಿ: ದಳಪತಿ ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ?

ಸಾಮಾನ್ಯವಾಗಿ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್ ಕೇಳಿಬಂದಾಗ ಅದನ್ನು ತಳ್ಳಿಹಾಕಲು ಸೆಲೆಬ್ರಿಟಿಗಳು ಬಯಸುತ್ತಾರೆ. ಆದರೆ ತ್ರಿಷಾ ಮತ್ತು ವಿಜಯ್ ಅವರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಧೈರ್ಯವಾಗಿಯೇ ಅವರು ಮದುವೆ ಸಮಾರಂಭಕ್ಕೆ ಜೊತೆಯಾಗಿ ಬಂದಿದ್ದಾರೆ. ಹಾಗಾದರೆ ಅವರು ಸದ್ಯದಲ್ಲೇ ಏನಾದರೂ ಅಧಿಕೃತ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆ ಕೂಡ ಜನರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫೋಕ್ಸೋ ಕೇಸ್: ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು – Kannada News | Pocso Case: shorapur Police sized Mallikarjun mutya four Mobile Phones

ಯಾದಗಿರಿ, (ಮಾರ್ಚ್ 05): ಫೋಕ್ಸೋ ಪ್ರಕರಣ ಸಂಬಂಧ ನಾಪತ್ತೆಯಾಗಿದ್ದ ಯಾದಗಿರಿಯ (Yadagir) ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ (Mallikarjun mutya) ಪ್ರತ್ರಕ್ಷರಾಗಿದ್ದು, ಇಂದು (ಮಾರ್ಚ್ 25) ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಸಂಜೆ ಆರು ಗಂಟೆಯಿಂದ ಮುತ್ಯಾನನ್ನು ಶಹಾಪುರ ಸರ್ಕಲ್ ಇನ್ಸ್ಪೆಕ್ಟರ್ ಶರಣಗೌಡ ನ್ಯಾಮಣ್ಣ ಅವರು ವಿಚಾರಣೆ ನಡೆಸಿದ್ದಾರೆ. ಬಳಿಕ ಮುತ್ಯಾನ ನಾಲ್ಕು ಮೊಬೈಲ್​​ಗಳನ್ನು ವಶಕ್ಕೆ ಪಡೆದುಕೊಂಡು ಕಳುಹಿಸಿದ್ದಾರೆ.

ಇನ್ನು ವಿಚಾರಣೆ ಬಳಿಕ ಪೊಲೀಸ್ ಠಾಣೆಯಿಂದ ಹೊರ ಬಂದ ಮಲ್ಲಿಕಾರ್ಜುನ ಮುತ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನನಗೆ ನೋಟೀಸ್ ಕೊಟ್ಟಿದ್ದರಿಂದ ವಿಚಾರಣೆಗೆ ಬಂದಿದ್ದೆನೆ. ಪೊಲೀಸರು ಕರೆದ್ರೆ ವಿಚಾರಣೆಗೆ ಬರುತ್ತೆನೆ ಅಂತ ನಾನು ಮೊದಲೇ ವಿಡಿಯೋ ಹೇಳಿಕೆ‌ ನೀಡಿದ್ದೆ. ಆದ್ರೆ, ನೋಟೀಸ್ ಕೊಟ್ಟ ಬಳಿಕ ನನಗೆ ಹುಷಾರಿರಲಿಲ್ಲ. ಅದಕ್ಕೆ ಮೂರು ದಿನ ತಡವಾಗಿ ವಿಚಾರಣೆಗೆ ಹಾಜರಾಗಿದ್ದೆ‌ನೆ. ಪೊಲೀಸರ ವಿಚಾರಣೆಗೆ ಸಹಕಾರ ನೀಡಿದ್ದು, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆನೆ. ಮತ್ತೆ ಕರೆದ್ರೆ ವಿಚಾರಣೆಗೆ ಹಾಜರಾಗುತ್ತೆನೆ ಎಂದು ಸ್ಪಷ್ಟಪಡಿಸಿದರು.

ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಾಗತಿಕವಾಗಿ ಭಾರತ ನಿರ್ಣಾಯಕ ಪಾತ್ರ ವಹಿಸುತ್ತಿದೆ; ಫಿನ್ಲೆಂಡ್ ಅಧ್ಯಕ್ಷ ಮೆಚ್ಚುಗೆ – Kannada News | India and Finland sign 11 major outcomes during Finnish President visit Raisina Dialogue

ನವದೆಹಲಿ, ಮಾರ್ಚ್ 5: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ನವದೆಹಲಿಯಲ್ಲಿ ರೈಸಿನಾ ಸಂವಾದದ 11ನೇ ಆವೃತ್ತಿಯನ್ನು ಉದ್ಘಾಟಿಸಿದರು. ಮುಖ್ಯ ಭಾಷಣ ಮಾಡಿದ ಫಿನ್ಲೆಂಡ್ ಅಧ್ಯಕ್ಷ ಡಾ. ಅಲೆಕ್ಸಾಂಡರ್ ಸ್ಟಬ್ ಜಾಗತಿಕ ದಕ್ಷಿಣವು ಮುಂದಿನ ವಿಶ್ವ ಕ್ರಮವನ್ನು ನಿರ್ಧರಿಸುತ್ತದೆ. ಭಾರತವು ಅದರಲ್ಲಿ ನಿರ್ಣಾಯಕ ಅಂಶವನ್ನು ವಹಿಸುತ್ತದೆ ಎಂದು ಹೇಳಿದರು. ಜಾಗತಿಕ ಶಕ್ತಿ ಸಮತೋಲನವು ಬದಲಾಗಿದೆ. ಪಾಶ್ಚಿಮಾತ್ಯ ಪ್ರಾಬಲ್ಯದ ಪ್ರಪಂಚದ ಯುಗ ಮುಗಿದಿದೆ, ಇಂದು ವಿಶ್ವ ರಾಜಕೀಯದಲ್ಲಿ ಪ್ರಮುಖ ಸವಾಲುಗಳಿವೆ ಎಂದು ಅವರು ಒಪ್ಪಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಇಂದು ಹೈದರಾಬಾದ್ ಹೌಸ್‌ನಲ್ಲಿ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಡಿಜಿಟಲೀಕರಣ, ಸುಸ್ಥಿರತೆ, ಶುದ್ಧ ಇಂಧನ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು, ರಕ್ಷಣೆ ಮತ್ತು ಬಾಹ್ಯಾಕಾಶದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಪತ್ರಿಕಾ ಹೇಳಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಫಿನ್ಲೆಂಡ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಡಿಜಿಟಲೀಕರಣ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ ಕಾರ್ಯತಂತ್ರದ ಪಾಲುದಾರಿಕೆಯಾಗಿ ರೂಪಿಸಲು ನಿರ್ಧರಿಸಿವೆ. ಇದು ಹೈ-ಟೆಕ್ ವಲಯಗಳಲ್ಲಿ ಸಹಯೋಗವನ್ನು ವೇಗಗೊಳಿಸುತ್ತದೆ ಎಂದು ಹೇಳಿದರು. “ಈ ಪಾಲುದಾರಿಕೆಯು AIನಿಂದ 6G ಟೆಲಿಕಾಂ, ಶುದ್ಧ ಇಂಧನದಿಂದ ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ಅನೇಕ ಹೈಟೆಕ್ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ವೇಗಗೊಳಿಸುತ್ತದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: Video: 25 ವರ್ಷಗಳಿಂದ ಒಂದು ದಿನವೂ ರಜೆ ತೆಗೆದುಕೊಳ್ಳದ ಪ್ರಧಾನಿ ಮೋದಿಯನ್ನು ಹೊಗಳಿದ ಕೆನಡಾ ಪ್ರಧಾನಿ ಮಾರ್ಕ್​

ಭಾರತ ಮತ್ತು ಫಿನ್ಲೆಂಡ್ ಇಂದು ಎರಡೂ ದೇಶಗಳ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸಲು ಸಮಗ್ರ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಿದವು. ಇದಾದ ಬಳಿಕ ಪ್ರಧಾನಿ ಮೋದಿ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಫಿನ್ಲೆಂಡ್ ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರತಿಭೆಗಳಿಗೆ ಆದ್ಯತೆಯ ತಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಪಾಲುದಾರಿಕೆಯು ಉದ್ಯಮಶೀಲತಾ ಕ್ಷೇತ್ರಕ್ಕೂ ವಿಸ್ತರಿಸಲಿದೆ ಎಂದು ಅವರು ಒತ್ತಿ ಹೇಳಿದರು.

ಶೈಕ್ಷಣಿಕ ವಲಯದಲ್ಲಿ ಫಿನ್ಲೆಂಡ್​​ನ ಜಾಗತಿಕ ಸ್ಥಾನವನ್ನು ಒಪ್ಪಿಕೊಂಡ ಪ್ರಧಾನಿ ಮೋದಿ, “ಇಂದು, ಶಿಕ್ಷಕರ ತರಬೇತಿ, ಶಾಲೆಯಿಂದ ಶಾಲೆಗೆ ಪಾಲುದಾರಿಕೆ ಮತ್ತು ಶಿಕ್ಷಣದ ಭವಿಷ್ಯದಲ್ಲಿ ಸಂಶೋಧನಾ ಸಹಕಾರವನ್ನು ವಿಸ್ತರಿಸಲು ನಾವು ಒಪ್ಪಿಕೊಂಡಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ: ಮಿಲಿಟರಿ ಸಂಘರ್ಷ ಯಾವುದೇ ಸಮಸ್ಯೆಗೆ ಪರಿಹಾರ ಅಸಾಧ್ಯ; ಅಮೆರಿಕ-ಇರಾನ್ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ

ಭಾರತ ಮತ್ತು ಫಿನ್ಲೆಂಡ್ ನಡುವಿನ ಐತಿಹಾಸಿಕ ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವು ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. “ಇಂದು ಜಗತ್ತು ಅಸ್ಥಿರತೆ ಮತ್ತು ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ. ಉಕ್ರೇನ್‌ನಿಂದ ಪಶ್ಚಿಮ ಏಷ್ಯಾದವರೆಗೆ ಪ್ರಪಂಚದ ಅನೇಕ ಭಾಗಗಳಲ್ಲಿ ಸಂಘರ್ಷ ಮುಂದುವರೆದಿದೆ. 2026ರ ಆರಂಭದಲ್ಲಿ ಐತಿಹಾಸಿಕ ಭಾರತ-ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ಭಾರತ ಮತ್ತು ಫಿನ್ಲೆಂಡ್ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ. ಡಿಜಿಟಲ್ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳಲ್ಲಿ ಭಾರತ ಮತ್ತು ಫಿನ್ಲೆಂಡ್ ಪ್ರಮುಖ ಪಾಲುದಾರರು” ಎಂದು ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ರೋಹಿತ್ ದಾಖಲೆಯ ಜೊತೆಗೆ 19 ವರ್ಷಗಳ ಹಳೆಯ ದಾಖಲೆ ಮುರಿದ ಕಿಶನ್ – Kannada News | Ishan Kishan T20 World Cup: Record Breaking Performance & Partnership with Sanju Samson

ಈ 263 ರನ್‌ಗಳೊಂದಿಗೆ, ಇಶಾನ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. ಕಳೆದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ 257 ರನ್‌ ಬಾರಿಸಿದ್ದರು. ಇದೀಗ ರೋಹಿತ್ ದಾಖಲೆ ಮುರಿದಿರುವ ಕಿಶನ್, ಒಂದು ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ (3 ಆವೃತ್ತಿಗಳಲ್ಲಿ 319, 296, 273 ರನ್) ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ

Source link

ಮುಂಬೈನಲ್ಲಿ ‘ರಾಮಾಯಣ 2’ ಶೂಟಿಂಗ್ ಶುರು ಮಾಡಿದ ನಟ ರಣಬೀರ್ ಕಪೂರ್ – Kannada News | Ranbir Kapoor starts Ramayana 2 shoot Sunny Deol joins as hanuman soon

ನಟ ರಣಬೀರ್ ಕಪೂರ್ ಅವರು ಈಗಾಗಲೇ ‘ರಾಮಾಯಣ’ ಸಿನಿಮಾದ ಮೊದಲ ಪಾರ್ಟ್ ಚಿತ್ರೀಕರಣ ಮುಗಿಸಿದ್ದಾರೆ. ಈಗ ಅವರು ‘ರಾಮಾಯಣ 2’ (Ramayana 2) ಚಿತ್ರೀಕರಣ ಶುರು ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಎರಡು ಪಾರ್ಟ್​​ಗಳಲ್ಲಿ ರಿಲೀಸ್ ಆಗಲಿದೆ. ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ (Ranbir Kapoor) ಈಗಾಗಲೇ ‘ರಾಮಾಯಣ 2’ ಸೆಟ್‌ಗೆ ಬಂದಿದ್ದು, ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಶೀಘ್ರದಲ್ಲೇ ಸನ್ನಿ ಡಿಯೋಲ್ ಕೂಡ ಶೂಟಿಂಗ್ ಸೆಟ್ ಸೇರಿಕೊಳ್ಳಲಿದ್ದಾರೆ.

ರಣಬೀರ್ ಕಪೂರ್ ಮಾರ್ಚ್ ತಿಂಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಬೇಕಿತ್ತು. ಆದರೆ, ಬನ್ಸಾಲಿ ಅವರ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಆ ಚಿತ್ರದ ಚಿತ್ರೀಕರಣವು ಮೇ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಈ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿರುವ ರಣಬೀರ್, ತಮ್ಮ ಸಂಪೂರ್ಣ ಗಮನವನ್ನು ಈಗ ‘ರಾಮಾಯಣ 2’ ಕಡೆಗೆ ಹರಿಸಿದ್ದಾರೆ.

‘ರಾಮಾಯಣ’ ಚಿತ್ರದ ಎರಡನೇ ಭಾಗದಲ್ಲಿ ಶ್ರೀರಾಮ ಮತ್ತು ಹನುಮಂತನ ಭೇಟಿಯ ದೃಶ್ಯಗಳು ಅತ್ಯಂತ ಪ್ರಮುಖವಾಗಿವೆ. ಹನುಮಂತನ ಪಾತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದು, ಅವರು ಮಾರ್ಚ್ 20ರ ಸುಮಾರಿಗೆ ಚಿತ್ರೀಕರಣಕ್ಕೆ ಬರಲಿದ್ದಾರೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ರಣಬೀರ್ ಮತ್ತು ಸನ್ನಿ ಡಿಯೋಲ್ ಅವರ ಕಾಂಬಿನೇಶನ್ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅವರು ನಟಿಸುತ್ತಿದ್ದು, ಸೀತೆಯ ಪಾತ್ರ ಮಾಡುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರು ಈ ಬೃಹತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಮೊದಲ ಭಾಗ ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ನಾನ್ ವೆಜ್ ತಿನ್ನಲ್ಲ ಎಂದು ಸುಳ್ಳು ಹೇಳಿದ್ರಾ ರಣಬೀರ್? ಫೋಟೋ ವೈರಲ್

ಘಟಾನುಘಟಿ ಕಲಾವಿದರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ಯಶ್ ಅವರು ರಾವಣನ ಪಾತ್ರ ಮಾಡುತ್ತಿರುವುದು ವಿಶೇಷ. ಈ ಸಿನಿಮಾದಲ್ಲಿ ಗ್ರಾಫಿಕ್ಸ್ ದೃಶ್ಯಗಳು ಹೇರಳವಾಗಿರಲಿವೆ. ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ಈ ಸಿನಿಮಾದ ಫೈನಲ್ ಕಟ್ ನೋಡಿ ಸಲಹೆ ನೀಡಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರತಿದಿನ ನೀವೂ ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕಿವಿ ಕೇಳಿಸದಿರಬಹುದು ಎಚ್ಚರ! – Kannada News | Protect Your Hearing: Avoid These Habits

ದೇಹದ ಇತರ ಅಂಗಗಳಂತೆ ಕಿವಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಕೂಡ ಬಹಳ ಮುಖ್ಯ. ಆದರೆ ಪ್ರತಿದಿನ ನಮಗರಿವಿಲ್ಲದಂತೆ ಮಾಡುವ ಕೆಲವು ತಪ್ಪುಗಳು ಕಿವಿಯ ಆರೋಗ್ಯಕ್ಕೆ ಹಾನಿ ಉಂಟುಮಾಡಿ, ಕೇಳುವ ಸಾಮರ್ಥ್ಯ ಅಥವಾ ಶ್ರವಣ ನಷ್ಟಕ್ಕೆ (Hearing Loss) ಕಾರಣವಾಗಬಹುದು. ಹೌದು, ಇದು ಆಶ್ಚರ್ಯ ಉಂಟು ಮಾಡಿದರೂ ಕೂಡ ಸತ್ಯ. ಬಹುತೇಕರು ಕಿವಿಯಲ್ಲಿ ಕಾಣಿಸಿಕೊಳ್ಳುವ ಸಣ್ಣ ಸಮಸ್ಯೆಗಳನ್ನೂ ದೀರ್ಘಕಾಲ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದರಿಂದ ಕಿವಿಗೆ ಗಂಭೀರ ಹಾನಿಯಾಗಬಹುದು. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಅಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಜೊತೆಗೆ ತಜ್ಞರು ನೀಡಿರುವ ಕೆಲವು ಪ್ರಮುಖ ಸಲಹೆಗಳನ್ನು ಅನುಸರಿಸಿ. ಈ ಕುರಿತ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಕಾಟನ್ ಬಡ್ ಅನ್ನು ಕಿವಿಯ ಒಳಗೆ ಹಾಕಬೇಡಿ:

ಕಿವಿಯಲ್ಲಿ ತುರಿಕೆ ಉಂಟಾದಾಗ ಹಲವರು ಕಾಟನ್ ಬಡ್ ಬಳಸಿ ಕಿವಿ ಸ್ವಚ್ಛಗೊಳಿಸುತ್ತಾರೆ. ಆದರೆ ಕಾಟನ್ ಬಡ್ ಅನ್ನು ಕಿವಿಯ ಒಳಗೆ ಹಾಕುವುದು ತಪ್ಪು. ಇದರಿಂದ ಕಿವಿಯೊಳಗಿನ ವ್ಯಾಕ್ಸ್ (ear wax) ಹೊರಬರುವ ಬದಲು ಒಳಗೆ ತಳ್ಳಲ್ಪಟ್ಟು, ಕಿವಿಯಲ್ಲಿ ಬ್ಲಾಕೇಜ್ ಅಥವಾ ಸೋಂಕು ಉಂಟಾಗುವ ಸಾಧ್ಯತೆ ಇದೆ. ಅದೇ ರೀತಿ ಕಡ್ಡಿ, ಹೇರ್ ಪಿನ್ ಮುಂತಾದ ವಸ್ತುಗಳನ್ನು ಕಿವಿಯೊಳಗೆ ಹಾಕುವುದೂ ಕೂಡ ಅಪಾಯಕಾರಿ. ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ಹಿರಿಯ ಸಲಹೆಗಾರರಾದ ಡಾ. ಸುವೇನ್ ಕಲ್ರಾ ಅವರ ಪ್ರಕಾರ, ಕಾಟನ್ ಬಡ್ ಅನ್ನು ಕೇವಲ ಕಿವಿಯ ಹೊರಭಾಗ ಸ್ವಚ್ಛಗೊಳಿಸಲು ಮಾತ್ರ ಬಳಸಬೇಕು. ಕಿವಿಯಲ್ಲಿ ವ್ಯಾಕ್ಸ್ ಹೆಚ್ಚು ಬರುತ್ತಿದ್ದರೆ ಇಎನ್‌ಟಿ ತಜ್ಞರಿಂದಲೇ ಸ್ವಚ್ಛಗೊಳಿಸಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮಗು ಹುಟ್ಟುವ ಮುನ್ನವೇ ಶ್ರವಣ ಸಾಮರ್ಥ್ಯ ಪತ್ತೆಹಚ್ಚಲು ಏಮ್ಸ್‌ನ ಹೊಸ ಪ್ರಯತ್ನ!

ವೈದ್ಯರ ಸಲಹೆ ಇಲ್ಲದೆ ಕಿವಿಗೆ ಎಣ್ಣೆ ಹಾಕಬೇಡಿ:

ಕೆಲವರು ಕಿವಿಯಲ್ಲಿ ಎಣ್ಣೆ ಹಾಕುವುದು ಆರೋಗ್ಯಕರ ಅಭ್ಯಾಸ ಎಂದು ನಂಬುತ್ತಾರೆ. ಆದರೆ ವೈದ್ಯರ ಪ್ರಕಾರ ಇದು ತಪ್ಪು. ಕಿವಿಯಲ್ಲಿ ಎಣ್ಣೆ ಹಾಕುವುದರಿಂದ ಫಂಗಲ್ ಅಥವಾ ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು. ಕೆಲ ಪ್ರಕರಣಗಳಲ್ಲಿ ಎಣ್ಣೆ ಹಾಕಿದ ಕಾರಣದಿಂದಲೇ ಕಿವಿಯಲ್ಲಿ ಇನ್ಫೆಕ್ಷನ್ ಕಂಡುಬಂದಿದೆ. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಯಾವುದೇ ದ್ರವವನ್ನು ಹಾಕಬಾರದು.

ಹೆಚ್ಚು ಸಮಯ ಜೋರಾದ ಶಬ್ದ ಕೇಳಬೇಡಿ

ಮದುವೆ, ಸಮಾರಂಭಗಳಲ್ಲಿ ಡಿಜೆ ಸಂಗೀತ ಅಥವಾ ಹೆಡ್‌ಫೋನ್, ಇಯರ್‌ಫೋನ್ ಮೂಲಕ ಜೋರಾಗಿ ಸಂಗೀತ ಕೇಳುವುದು ಕಿವಿಗೆ ಹಾನಿ ಮಾಡಬಹುದು. ಇಯರ್‌ಫೋನ್ ಅಥವಾ ಇಯರ್‌ಬಡ್ ಬಳಸುವಾಗ 60 ನಿಮಿಷಕ್ಕೊಮ್ಮೆ ವಿರಾಮ ತೆಗೆದುಕೊಳ್ಳಬೇಕು ಮತ್ತು ಶಬ್ದದ ಮಟ್ಟವನ್ನು 60 ಡೆಸಿಬೆಲ್‌ಗಿಂತ ಹೆಚ್ಚು ಇರಿಸಬಾರದು.

ಸ್ವಯಂ ಔಷಧಿ ಮಾಡಬೇಡಿ

ಕಿವಿಯಲ್ಲಿ ನೋವು, ಸೋಂಕು ಅಥವಾ ಕಿವಿಯಿಂದ ದ್ರವ ಹೊರಬರುವ ಸಮಸ್ಯೆ ಇದ್ದರೆ ಸ್ವಯಂ ಔಷಧಿಗಳನ್ನು ತೆಗೆದುಕೊಳ್ಳಬಾರದು. ಯಾವುದೇ ಪೇನ್ ಕಿಲ್ಲರ್ ಅಥವಾ ಔಷಧಿ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಒಮ್ಮೆಲೇ ಕೇಳುವ ಸಾಮರ್ಥ್ಯ ಕಡಿಮೆಯಾಗುವುದು ಅಥವಾ ತಲೆ ಸುತ್ತುವುದು (ವೆರ್ಟಿಗೋ) ಕಿವಿಯ ಒಳಭಾಗದಲ್ಲಿ ಸಮಸ್ಯೆಯ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ – Kannada News | Guests who attend Rashmika Mandanna and Vijay Deverakonda wedding reception

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಂಡಿದ್ದಾರೆ. ಈ ವಿವಾಹ ಕಾರ್ಯಕ್ರಮಕ್ಕೆ ಕುಟುಂಬ ವರ್ಗದವರು ಅತ್ಯಾಪ್ತ ಗೆಳೆಯರು ಮಾತ್ರವೇ ಭಾಗಿ ಆಗಿದ್ದರು. ನಿನ್ನೆ ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ಆರತಕ್ಷತೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಬಾಲಿವುಡ್​ನ ಹಲವಾರು ಗಣ್ಯರು ಭಾಗಿ ಆಗಿದ್ದರು. ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿವೃತ್ತ ಐಐಎಸ್​ಸಿ ಪ್ರೊಫೆಸರ್ ಕುಟುಂಬದ ತ್ರಿವಳಿ ಕೊಲೆ: ವಲಸೆ ಕಾರ್ಮಿಕ ದಂಪತಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ – Kannada News | Bangaluru: IISC Professor Family Murder: High Court Sentences 4 to Life Imprisonment

ಬೆಂಗಳೂರು, ಮಾರ್ಚ್​ 05: 17 ವರ್ಷದ ಹಿಂದೆ ನಿವೃತ್ತ ಐಐಎಸ್​ಸಿ ಪ್ರೊ. ಪುರುಷೋತ್ತಮ್ ಲಾಲ್ ಸಚ್​ದೇವ್, ಪತ್ನಿ ರೀಟಾ, ಪುತ್ರ ಮುನ್ನಾ ತ್ರಿವಳಿ ಕೊಲೆ ಪ್ರಕರಣಕ್ಕೆ (triple murder case) ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ನಾಲ್ವರು ವಲಸೆ ಕಾರ್ಮಿಕ ಅಪರಾಧಿಗಳಿಗೆ ಹೈಕೋರ್ಟ್ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪಶ್ಚಿಮ ಬಂಗಾಳದ ದೀಪಕ್ ಹಲ್ದಾರ್, ಆತನ ಪತ್ನಿ ಸುಚಿತ್ರಾ ಹಲ್ದಾರ್, ಮುಜಫರ್ ನಗರ ಮೂಲದ ಮೊಹಮ್ಮದ್ ಸರ್ಬಲ್ ಮತ್ತು ಬಿದನ್ ಶಿಕಾರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಬೆಂಗಳೂರಿನ 65ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾ.ಹೆಚ್.ಪಿ.ಸಂದೇಶ್ ಮತ್ತು ನ್ಯಾ.ಟಿ.ವೆಂಕಟೇಶ ನಾಯ್ಕ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಕೇಸ್​: ಡಿಕೆಶಿಗೆ ಕೋರ್ಟ್ ಬಿಗ್ ರಿಲೀಫ್

ಆರೋಪಿಗಳು ಹಣ, ಚಿನ್ನಾಭರಣಕ್ಕಾಗಿ ನಿವೃತ್ತ ಪ್ರೊಫೆಸರ್ ಸೇರಿ ಮೂವರನ್ನು ಕತ್ತು ಹಿಸುಕಿ ಕೊಂದಿದ್ದರು. ಆರೋಪಿಗಳಾದ ದೀಪಕ್ ಹಲ್ದಾರ್ ಹಾಗೂ ಸುಚಿತ್ರಾ ಹಲ್ದಾರ್​ ಕೊಲೆ ನಡೆದ ಮನೆಯಲ್ಲೇ ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದರು. ಹಣ ಮತ್ತು ಆಭರಣದ ಆಸೆಗಾಗಿ ಅಮಾಯಕರನ್ನು ಹತ್ಯೆ ಮಾಡಿರುವುದು ಅತ್ಯಂತ ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳು ಸಮಾಜದ ಶಾಂತಿ ಹಾಗೂ ಸಹಬಾಳ್ವೆಗೆ ಧಕ್ಕೆಯಾಗಿದೆ ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿದೆ.

ಪೊಲೀಸ್ ವೆರಿಫಿಕೇಷನ್ ಅಗತ್ಯ

ಇನ್ನು ಮನೆಯೊಳಗೆ ಕೆಲಸಕ್ಕೆ ನೇಮಿಸಿಕೊಳ್ಳುವ ಕಾರ್ಮಿಕರ ಕುರಿತು ಪೊಲೀಸ್ ವೆರಿಫಿಕೇಷನ್​ ನಡೆಸುವುದು ಅಗತ್ಯ. ಮನೆಗೆಲಸದವರು ಸೇರಿದಂತೆ ವಲಸೆ ಕಾರ್ಮಿಕರನ್ನು ನೇಮಿಸುವ ಸಂದರ್ಭದಲ್ಲಿ ಅವರ ಹಿನ್ನೆಲೆಯ ಬಗ್ಗೆ ಸಮಗ್ರ ಮಾಹಿತಿ ಪರಿಶೀಲಿಸುವ ವ್ಯವಸ್ಥೆ ಅಗತ್ಯ.

ಇದಕ್ಕಾಗಿ ವಲಸೆ ಕಾರ್ಮಿಕರ ವಿವರಗಳನ್ನು ಪರಿಶೀಲಿಸಲು ಸುಲಭವಾದ ಆನ್‌ಲೈನ್ ವ್ಯವಸ್ಥೆಯನ್ನು ಸರ್ಕಾರ ರೂಪಿಸುವ ಅಗತ್ಯವಿದೆ ಎಂದು ಪೀಠ ಹೇಳಿದೆ. ಈ ಪರಿಶೀಲನಾ ಪ್ರಕ್ರಿಯೆಯ ವೇಳೆ ಕಾರ್ಮಿಕರಿಗೆ ಯಾವುದೇ ರೀತಿಯ ಕಿರುಕುಳವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಕೂಡ ಪೀಠ ಸ್ಪಷ್ಟಪಡಿಸಿದೆ. ಈ ತೀರ್ಪಿನ ಪ್ರತಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲು ನ್ಯಾಯಾಲಯ ಆದೇಶಿಸಿದೆ.

ಘಟನೆ ಹಿನ್ನೆಲೆ 

ಬೆಂಗಳೂರಿನ ಆರ್.ಟಿ.ನಗರದಲ್ಲಿ 2009ರ ಫೆಬ್ರುವರಿ 16ರಂದು ಭೀಕರ ತ್ರಿವಳಿ ಹತ್ಯೆ ಸಂಭವಿಸಿತ್ತು.  ನಿವೃತ್ತ ಐಐಎಸ್​ಸಿ ಪ್ರೊ.ಪುರುಷೋತ್ತಮ ಲಾಲ್ ಸಚ್‌ದೇವ್ (71), ಅವರ ಪತ್ನಿ ರೀಟಾ ಸಚ್‌ದೇವ್ (62) ಹಾಗೂ ಪುತ್ರ ಮುನ್ನಾ (35) ಆರ್.ಟಿ.ನಗರದ 80 ಅಡಿ ರಸ್ತೆಯಲ್ಲಿರುವ ನಿವಾಸದಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಹೃದಯಾಘಾತ ಪ್ರಕರಣಕ್ಕೆ ಟ್ವಿಸ್ಟ್: ತಿಂಗಳ ಬಳಿಕ ಕೊಲೆ ರಹಸ್ಯ ಬಯಲು, ಪತ್ನಿಯೇ ಪತಿಗೆ ಚಟ್ಟ ಕಟ್ಟಿದ್ದು

ಮನೆಗೆಲಸದ ವಲಸೆ ಕಾರ್ಮಿಕ ದಂಪತಿ ಸೇರಿದಂತೆ ನಾಲ್ವರು ಮನೆಗೆ ನುಗ್ಗಿ ಮೂವರನ್ನೂ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಜೀ ಕನ್ನಡ’ದಲ್ಲಿ ಮಾರ್ಚ್ 9ರಿಂದ ‘ಕೃಷ್ಣ ರುಕ್ಕು’; ಇದು ಪ್ರೀತಿ-ದ್ವೇಷದ ಕಥೆ – Kannada News | Zee Kannada’s New Serial ‘Krishna Rukku’: Premiere, Plot and Cast Details

ಜೀ ಕನ್ನಡ ವಾಹಿನಿ ಹೊಸ ಹೊಸ ಕಥೆಗಳ ಜೊತೆ ಪ್ರೇಕ್ಷಕರ ಎದುರು ಬರುತ್ತಿದೆ. ಈಗ ಹೊಸ ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರಲು ಜೀ ವಾಹಿನಿ ರೆಡಿ ಆಗಿದೆ. ಅದುವೇ ‘ಕೃಷ್ಣ ರುಕ್ಕು’. ಮಾರ್ಚ್ 9ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಮೊದಲು ಈ ಸ್ಲಾಟ್​​ನಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಈ ಸೀರಿಯಲ್ ಮಾರ್ಚ್ 6ರಂದು ಕೊನೆ ಆಗುತ್ತಿದೆ. ಆ ಜಾಗಕ್ಕೆ ‘ಕೃಷ್ಣ ರುಕ್ಕು’ ಧಾರಾವಾಹಿ ಬಂದಿದೆ.

ಜೀ ಕನ್ನಡದಲ್ಲಿ ಪ್ರಸಾರ ಆಗುವ ಪ್ರತಿ ಧಾರಾವಾಹಿಯಲ್ಲೂ ಸಂಬಂಧಗಳ ಬಗ್ಗೆ, ಕುಟುಂಬದ ಬಗ್ಗೆ ಹೇಳಲಾಗುತ್ತದೆ. ಈ ಧಾರಾವಾಹಿ ಕೂಡ ಪ್ರೀತಿ, ದ್ವೇಷ ಹಾಗೂ ವಿಧಿಯಾಟದ ನಡುವೆ ಸಾಗುತ್ತದೆ. ಆಟೋ ಓಡಿಸೋ ಅಣ್ಣನ ಅಕಾಲಿಕ ನಿಧನದಿಂದ ಇಡೀ ಕುಟುಂಬದ ಜವಾಬ್ದಾರಿ ರುಕ್ಕು ಮೇಲೆ ಬೀಳುತ್ತದೆ. ಆಗ ಎದುರಾಗುವ ಸವಾಲುಗಳನ್ನು ಅವಳು ಹೇಗೆ ಎದುರಿಸುತ್ತಾಳೆ ಎಂಬುದು ಧಾರಾವಾಹಿಯ ಕಥೆ. ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ಮಾಡುತ್ತಿದ್ದಾರೆ.

ಎಸ್ ನಾರಾಯಣ್ ಅವರು ಸಿನಿಮಾ ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದರು. ಅವರಿಗೆ ಕಿರುತೆರೆ ಜೊತೆಯೂ ನಂಟಿದೆ. ಅವರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅವರ ಇರುವಿಕೆ ತಂಡಕ್ಕೆ ದೊಡ್ಡ ಬಲ ತುಂಬಿದಂತೆ ಆಗಿದೆ. ಖ್ಯಾತ ನಟಿ ಸುಚಿತ್ರ, ಗಾಯಕ ನವೀನ ಸಜ್ಜು ಮೊದಲಾದವರು ಧಾರಾವಾಹಿಯ ಭಾಗ ಆಗಿದ್ದಾರೆ. ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ‘ಕೃಷ್ಣ ರುಕ್ಕು’ ಸೀರಿಯಲ್​ನ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ

ಜೀ ಕನ್ನಡದ ಧಾರಾವಾಹಿಗಳು ಮೇಕಿಂಗ್ ವಿಷಯದಲ್ಲಿ ಸಾಕಷ್ಟು ಕಲರ್​ಫುಲ್ ಆಗಿರುತ್ತವೆ ಎಂಬ ಅಭಿಪ್ರಾಯ ವೀಕ್ಷಕರದ್ದು. ‘ಕೃಷ್ಣ ರುಕ್ಕು’ ಧಾರಾವಾಹಿ ಕೂಡ ಅದೇ ಮಾದರಿಯಲ್ಲಿ ಇದೆ ಎಂಬುದು ಪ್ರೋಮೋ ಮೂಲಕ ಗೊತ್ತಾಗಿದೆ. ಅಣ್ಣನ ಸಾವಿಗೆ ಕಾರಣ ಆದ ಕುಟುಂಬಕ್ಕೆ ಬರೋ ನಾಯಕಿ ಯಾವ ರೀತಿಯಲ್ಲಿ ದ್ವೇಷ ತೀರಿಸಿಕೊಳ್ಳುತ್ತಾಳೆ? ದ್ವೇಷ ಪ್ರೀತಿ ಆಗೋದು ಹೇಗೆ ಎಂಬ ಕುತೂಹಲದೊಂದಿಗೆ ಧಾರಾವಾಹಿ ಮೂಡಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:07 pm, Thu, 5 March 26

Source link