ಹೇಗೆ ಮಾತನಾಡಬೇಕು? ಅಣ್ಣಾವ್ರು ಹೇಳಿಕೊಟ್ಟ ಪಾಠ ನೆನಪಿಸಿಕೊಂಡ ನಟಿ ಅಂಬಿಕಾ – Kannada News | Actress Ambika talks about Dr Rajkumar’s advice about language to her
ಹಿರಿಯ ನಟಿ ಅಂಬಿಕಾ (Ambika) ಮೂಲತಃ ಕೇರಳದವರು ಆದರೆ ಕನ್ನಡದಲ್ಲಿ ಹಲವಾರು ನೆನಪುಳಿಯುವ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವಿಶೇಷವಾಗಿ ಡಾ ರಾಜ್ಕುಮಾರ್ ಜೊತೆಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹಲ್ಲಾದ’, ‘ಅಪೂರ್ವ ಸಂಗಮ’ ಇನ್ನೂ ಕೆಲವು. ಅಂಬರೀಶ್, ವಿಷ್ಣುವರ್ಧನ್ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಂಬಿಕ. ಈಗಲೂ ಸಹ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದುಂಟು. ಅಂಬಿಕ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕನ್ನಡದ ಮೇರು ನಟ ಡಾ ರಾಜ್ಕುಮಾರ್…